ಗುಂಡ್ಲುಪೇಟೆ ಉಪ ಚುನಾವಣೆ:
ಮತ ಖಾತರಿಪಡಿಸಿಕೊಳ್ಳುವ ವಿವಿಪಿಎಟಿ ಯಂತ್ರಗಳ ಬಳಕೆ ಬಗ್ಗೆ ಜಿಲ್ಲಾಧಿಕಾರಿ, ಚುನಾವಣಾಧಿಕಾರಿ, ಜಿ.ಪಂ. ಸಿ.ಇ.ಒ. ರವರಿಂದ ಪ್ರಾತ್ಯಕ್ಷಿಕೆ
ಚಾಮರಾಜನಗರ ಮಾರ್ಚ :- ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಮತದಾರ ತಾನು ಎಲೆಕ್ಟ್ರಾನಿಕ್ ಮತ ಯಂತ್ರದಲ್ಲಿ ಮತ ಹಾಕಿದ ಬಗ್ಗೆ ಖಾತರಿ ಪಡಿಸಿಕೊಳ್ಳಲು ಅವಕಾಶ ಕಲ್ಪಿಸಿರುವ ನೂತನ ವಿ.ವಿ.ಪಿ.ಎ.ಟಿ. (ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರೈಯಲ್) ವ್ಯವಸ್ಥೆ ಕುರಿತು ಇಂದು ಜಿಲ್ಲಾಧಿಕಾರಿ ಬಿ. ರಾಮು, ಕ್ಷೇತ್ರ ಚುನಾವಣಾಧಿಕಾರಿ ನಲಿನ್ ಅತುಲ್ ಹಾಗೂ ಜಿಲ್ಲಾ ಪಂಚಾಯತ್ ಸಿ.ಇ.ಒ. ಡಾ. ಕೆ.ಹರೀಶ್ ಕುಮಾರ್ ಅವರು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ಗುಂಡ್ಲುಪೇಟೆ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಇಂದು ವಿ.ವಿ.ಪಿ.ಎ.ಟಿ. ಕಾರ್ಯನಿರ್ವಹಣೆ ಹಾಗೂ ಉದ್ದೇಶಗಳ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಹಾಗೂ ಹಾಜರಿದ್ದ ನಾಗರಿಕರಿಗೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಬಿ. ರಾಮು ರವರು ಮಾತನಾಡಿ ಚುನಾವಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಸಲುವಾಗಿ ಪ್ರಪ್ರಥಮ ಬಾರಿಗೆ ಗುಂಡ್ಲುಪೇಟೆ ಹಾಗೂ ನಂಜನಗೂಡು ವಿಧಾನ ಸಭಾ ಉಪ ಚುನಾವಣೆಯಲ್ಲಿ ವಿ.ವಿ.ಪಿ.ಎ.ಟಿ. ವ್ಯವಸ್ಥೆಯನ್ನು ಬಳಕೆ ಮಾಡಲಾಗುತ್ತಿದೆ. ಉತ್ತರ ಪ್ರದೇಶದ ಚುನಾವಣೆಯಲ್ಲಿ ಆಯ್ದ ಮತಗಟ್ಟೆಗಳಲ್ಲಿ ಮಾತ್ರ ವಿ.ವಿ.ಪಿ.ಎ.ಟಿ. ವ್ಯವಸ್ಥೆಯನ್ನು ಬಳಕೆ ಮಾಡಲಾಗಿತ್ತು. ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಗುಂಡ್ಲುಪೇಟೆ ಹಾಗೂ ನಂಜನಗೂಡು ವಿಧಾನ ಸಭಾ ಉಪ ಚುನಾವಣೆಯಲ್ಲಿ ವಿ.ವಿ.ಪಿ.ಎ.ಟಿ. ಉಪಯೋಗಿಸಲಾಗುತ್ತಿದೆ ಎಂದರು.
ವಿ.ವಿ.ಪಿ.ಎ.ಟಿ. ಯಂತ್ರಗಳನ್ನು ಇ.ವಿ.ಎಂ. (ವಿದ್ಯುನ್ಮಾನ ಮತ ಯಂತ್ರ) ಗೆ ಜೋಡಣೆ ಮಾಡಲಾಗಿರುತ್ತದೆ. ಮತದಾರ ಅಭ್ಯರ್ಥಿಯ ಹೆಸರಿನ ಮುಂದೆ ಗುಂಡಿ ಒತ್ತಿದ ತಕ್ಷಣ ವಿ.ವಿ.ಪಿ.ಎ.ಟಿ.ಯಲ್ಲಿ ಮತದಾರ ತಾನು ಚಲಾಯಿಸಿದ ಮತ ಉದ್ದೇಶಿತ ಅಭ್ಯರ್ಥಿಗೆ ಹೋಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬಹುದಾಗಿದೆ. ಅಭ್ಯರ್ಥಿಯ ಕ್ರಮ ಸಂಖ್ಯೆ, ಚಿಹ್ನೆಯು ಮಾತ್ರ ಮತದಾರನಿಗೆ ವಿ.ವಿ.ಪಿ.ಎ.ಟಿ ಯಂತ್ರದಲ್ಲಿ 7 ಸೆಕೆಂಡುಗಳ ಕಾಲ ಗೋಚರವಾಗಲಿದೆ. ಇದರಿಂದ ಮತದಾರನಿಗೆ ಅವರು ಇಚ್ಚಿಸಿದ ಅಭ್ಯರ್ಥಿಗೆ ಮತ ಚಲಾವಣೆಯಾಗಿರುವ ಬಗ್ಗೆ ಖಾತರಿಯಾಗಲಿದೆ ಎಂದರು.
ಮತದಾರ ಉದ್ದೇಶಿತ ಅಭ್ಯರ್ಥಿಗೆ ಮತಚಲಾಯಿಸಿದ ಕುರಿತು ಖಾತರಿ ಪಡಿಸಲು ಚೀಟಿಯೊಂದು ವಿ.ವಿ.ಪಿ.ಎ.ಟಿ. ಯಂತ್ರದೊಳಗೆ ಗೋಚರವಾಗಿ ಬಳಿಕ ಪೆಟ್ಟಿಗೆ ಒಳಗೆ ಸೇರಲಿದೆ., ಇದನ್ನು ಎಣಿಕೆ ಮಾಡಲಾಗುವುದಿಲ್ಲ. ಈ ಚೀಟಿಗಳನ್ನು ಸೀಲ್ ಮಾಡಿ ಇಡಲಾಗುತ್ತದೆ. ಉಚ್ಛ ನ್ಯಾಯಾಲಯದಲ್ಲಿ ಚುನಾವಣೆ ರಿಟ್ ಪಿಟಿಷನ್ ಸಂದರ್ಭದ ವೇಳೆ ಆದೇಶವಾದಲ್ಲಿ ಮಾತ್ರ ಇದನ್ನು ತೆರಯಲಾಗುತ್ತದೆ ಎಂದರು.
ವಿ.ವಿ.ಪಿ.ಎ.ಟಿ. ಯಂತ್ರಗಳನ್ನು ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ 250 ಮತಗಟ್ಟೆಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಈ ಬಗ್ಗೆ ಮತದಾರರಿಗೆ ವ್ಯಾಪಕವಾಗಿ ಅರಿವು ಮೂಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಚುನಾವಣಾಧಿಕಾರಿ ನಲಿನ್ ಅತುಲ್ ಅವರು ಮಾತನಾಡಿ ವಿ.ವಿ.ಪಿ.ಎ.ಟಿ.ಯಲ್ಲಿ ಮತದಾರ ತಾನು ಚಲಾಯಿಸಿದ ಮತ ಉದ್ದೇಶಿತ ಅಭ್ಯರ್ಥಿಯ ಕ್ರಮ ಸಂಖ್ಯೆ ಚಿಹ್ನೆಯನ್ನು ಒಳಗೊಂಡು ಗೋಚರವಾಗಿ ಅದನ್ನು ನೋಡಿಯೂ ಸಹ ವಿ.ವಿ.ಪಿ.ಎ.ಟಿ ಯಂತ್ರದ ಬಗ್ಗೆ ಸಂಶಯ ವ್ಯಕ್ತಪಡಿಸಿದರೆ ಪರೀಕ್ಷೆ ಮಾಡಲು ಅವಕಾಶ ಕೊಡಲಾಗುತ್ತದೆ. ಆದರೆ ಪರೀಕ್ಷಿಸಲು ಅವಕಾಶ ಪಡೆಯುವ ಮೊದಲು ವಿ.ವಿ.ಪಿ.ಎ.ಟಿ. ಯಂತ್ರದ ಕಾರ್ಯಕ್ಷಮತೆ ಸಾಬೀತಾದಲ್ಲಿ 6 ತಿಂಗಳು ಶಿಕ್ಷೆಗೆ ಒಳಪಡುತ್ತೇನೆ ಎಂಬ ಘೋಷಣಾ ಪತ್ರಕ್ಕೆ ಸಹಿ ಹಾಕಬೇಕಾಗುತ್ತದೆ. ತದನಂತರವಷ್ಟೆ ಅವಕಾಶ ನೀಡಲಾಗುತ್ತದೆ ಎಂದರು.
ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆ :
ಹೆಚ್ಚುವರಿ ಫ್ಲೈಯಿಂಗ್ ಸ್ಕ್ವಾಡ್ ತಂಡ ನೇಮಕ
ಚಾಮರಾಜನಗರ, ಮಾ. 31 - ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂಬಂಧ ಚುನಾವಣಾ ಪ್ರಚಾರದ ಮೇಲೆ ನಿಗಾ ವಹಿಸಲು ಹೆಚ್ಚುವರಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ. ರಾಮು ಅವರು ಆದೇಶ ನೀಡಿದ್ದಾರೆ.ಬೇಗೂರು ಹೋಬಳಿ - ತಂಡ 1:- ಹೇಮಂತಕುಮಾರ್, ಜಿಲ್ಲಾ ವ್ಯವಸ್ಥಾಪಕರು, ಡಾ. ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಚಾಮರಾಜನಗರ (ಮೊ.9448595882), ಹೆಚ್.ಬಿ. ರವಿಕುಮಾರ್, ಸಹಾಯಕ ಎಂಜಿನಿಯರ್, ಪಿಡಬ್ಲ್ಯೂಡಿ, ಚಾಮರಾಜನಗರ (ಮೊ.9448390844)
ಗುಂಡ್ಲುಪೇಟೆ ಮುನ್ಸಿಪಲ್ ವ್ಯಾಪ್ತಿ - ತಂಡ 2:- ಅಣ್ಣಯ್ಯ, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಪಿ.ಆರ್.ಇ.ಡಿ. ಕೊಳ್ಳೇಗಾಲ ಉಪವಿಭಾಗ, ಕೊಳ್ಳೇಗಾಲ (ಮೊ.8277697709), ಎಸ್. ಶಬರೀಶ್, ಸಹಾಯಕ ಎಂಜಿನಿಯರ್, ಪಿಡಬ್ಲ್ಯೂಡಿ. ಉಪವಿಭಾಗ, ಚಾಮರಾಜನಗರ (ಮೊ.9986641417)
ಗುಂಡ್ಲುಪೇಟೆ ಕಸಬಾ - ತಂಡ 3:- ಕೆಂಪಯ್ಯ, ಜಿಲ್ಲಾ ವ್ಯವಸ್ಥಾಪಕರು, ವಾಲ್ಮೀಕಿ ಅಭಿವೃದ್ಧಿ ನಿಗಮ, ಚಾಮರಾಜನಗರ (ಮೊ.7338601884), ನಾಗಸುಂದರ್, ಸಹಾಯಕ ಎಂಜಿನಿಯರ್, ಪಿ.ಆರ್.ಇ.ಡಿ. ಚಾಮರಾಜನಗರ ಉಪವಿಭಾಗ, ಚಾಮರಾಜನಗರ (ಮೊ.9538501100),
ತೆರಕಣಾಂಬಿ ಹೋಬಳಿ - ತಂಡ 4:- ರವಿಕುಮಾರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗ, ಯಳಂದೂರು (ಮೊ. 944816335), ರೇವಣ್ಣ, ಕಿರಿಯ ಎಂಜಿನಿಯರ್, ಪಿ.ಡಬ್ಲ್ಯೂ.ಡಿ. ಉಪ ವಿಭಾಗ, ಕೊಳ್ಳೇಗಾಲ (ಮೊ. 9482274547)
ಹಂಗಳ ಹೋಬಳಿ - ತಂಡ 5:- ಎ.ಎಸ್. ರಮೇಶ್, ಉಪನಿರ್ದೇಶಕರು, ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ (ಕೈಗಾರಿಕೆ ಮತ್ತು ವಾಣಿಜ್ಯ), ಚಾಮರಾಜನಗರ (ಮೊ. 9448816563), ಶಿವಪ್ರಸಾದ್, ಸಹಾಯಕ ಎಂಜಿನಿಯರ್, ಪಿಡಬ್ಲ್ಯೂಡಿ. ಉಪವಿಭಾಗ, ಚಾಮರಾಜನಗರ (ಮೊ.9980779950)
ಹರವೆ ಹೋಬಳಿ (ಚಾಮರಾಜನಗರ ತಾಲೂಕು) - ತಂಡ 6:- ಲಕ್ಷ್ಮೀನರಸಿಂಹಯ್ಯ, ಉಪನಿರ್ದೇಶಕರು, ರೇಷ್ಮೆ ಇಲಾಖೆ, ಜಿಲ್ಲಾ ಪಂಚಾಯತ್, ಚಾಮರಾಜನಗರ (ಮೊ. 9480444601), ಬಿ. ರಮೇಶ್, ಸಹಾಯಕ ಇಂಜಿನಿಯರ್, ಪಿಡಬ್ಲ್ಯೂಡಿ ಉಪವಿಭಾಗ, ಕೊಳ್ಳೇಗಾಲ (ಮೊ.9448492886).
ಅಕ್ರಮ ಮದ್ಯ ವಶ
ಚಾಮರಾಜನಗರ, ಮಾ. 31 - ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನಲೆಯಲ್ಲಿ ದಾಳಿ ಮುಂದುವರೆಸಿರುವ ಅಬಕಾರಿ ಅಧಿಕಾರಿಗಳು ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.ಕೊಳ್ಳೇಗಾಲ ಪಟ್ಟಣದ ಲಕ್ಷ್ಮಿ ಎಂಬುವರಿಂದ 0.900 ಮಿಲಿ ಲೀಟರ್, ಕೊಳ್ಳೇಗಾಲ ತಾಲ್ಲೂಕು ಹೊಸ ಹಂಪಾಪುರ ಗ್ರಾಮದ ಶಂಕರ ಎಂಬುವರಿಂದ 0.450 ಮಿಲಿ ಲೀಟರ್ ಮದ್ಯ ವಶಪಡಿಸಿಕೊಂಡು ಎಫ್.ಐ.ಆರ್. ದಾಖಲಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿ ನಲಿನ್ ಅತುಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:
Post a Comment