ಚಾಮರಾಜನಗರದಲ್ಲಿ ಒಣಗಿದ ಮರ ಬಿದ್ದ ಪರಿಣಾಮ
ವ್ಯಕ್ತಿ ಸಾವು
ವರದಿ; ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಒಣಗಿದ ಮರ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಗರದ (ದೊಡ್ಡ ಅರಸಿನ ಕೊಳ ) ಕೊಳದ ಬೀದಿ ಸಮೀಪ ನಡೆದಿದೆ.
ಮಾಹಿತಿ ಪ್ರಕಾರ ರಾಮಸಮುದ್ರದಲ್ಲಿ ಹಿಂದೆ ವಾಸಿಯಾಗಿದ್ದ ಹಾಲಿ ಕಡಕೊಳ ನಿವಾಸಿಯಾಗಿರುವ ವ್ಯಕ್ತಿ ಕಡಕೊಳದ ರಾಮಣ್ಣ(೩೮)ಎಂದು ತಿಳಿದು ಬಂದಿದೆ.
ಇವರ ಜೊತೆಯಲ್ಲಿದ್ದ ರವಿ ಮತ್ತು ಚಂದ್ರು ಎಂಬುವವರಿಗೆ ಗಾಯಗಳಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗೆಳೆಯರಾದ ಮೂವರು ಒಂದೇ ಬೈಕ್ ಅಲ್ಲಿ ಖಾಸಗಿ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದು ದೇವಸ್ಥಾನದದ ತಿರುವುನಲ್ಲಿರುವ ೊಣಗಿದ ಮರ ರಾಮಣ್ಣ ತಲೆಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದರೆ ಉಳಿದ ಇಬ್ಬರಿಗೂ ತೀವ್ರತರನಾದ ಗಾಯಗಳಾಗಿದೆ. ಸ್ನೇಹಿತರು ರಾಮಣ್ಣ ಅವವರನ್ನ ನಿಲ್ದಾಣಕ್ಕೆ ಬಿಟ್ಟು ಬರಲು ಹೋಗುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಪಟ್ಟಣ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
No comments:
Post a Comment