ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆ :
ಕೆ.ಎಸ್. ಈಶ್ವರಪ್ಪ ಅವರ ವಿರುದ್ಧ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲು
ಚಾಮರಾಜನಗರ, ಎಪ್ರಿಲ್. 1 :- ಗುಂಡ್ಲುಪೇಟೆ ತಾಲ್ಲೂಕು ಚಿಕ್ಕಾಟಿ ಗ್ರಾಮದಲ್ಲಿ ಮಾರ್ಚ 30 ರಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಕೆ.ಎಸ್. ಈಶ್ವರಪ್ಪ ಅವರು ಮಾಡಿದ ಪ್ರಚಾರ ಭಾಷಣದ ಅಂಶದಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂಬ ದೂರಿನ ಹಿನ್ನಲೆಯಲ್ಲಿ ಕೆ.ಎಸ್. ಈಶ್ವರಪ್ಪ ವಿರುದ್ಧ ಎಫ್.ಐ.ಆರ್.ನಂ.104/2017 ರಂತೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಿಸಲಾಗಿದೆ ಎಂದು ಚುನಾವಣಾ ಅಧಿಕಾರಿ ನಲಿನ್ ಅತುಲ್ ತಿಳಿಸಿದ್ದಾರೆ.ಮಾರ್ಚ 30 ರಂದು ಬೆಳಿಗ್ಗೆ 11 ಗಂಟೆಗೆ ಗುಂಡ್ಲುಪೇಟೆ ತಾಲ್ಲೂಕು ಚಿಕ್ಕಾಟಿ ಗ್ರಾಮದಲ್ಲಿ ಚುನಾವಣಾ ಪ್ರಚಾರ ಭಾಷಣದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಸೆಕ್ಟರ್ ಅಧಿಕಾರಿ ಅವರು ಈಶ್ವರಪ್ಪ ಅವರ ಭಾಷಣದ ವೀಡಿಯೋ ಸಿ.ಡಿ ನೀಡಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಈ ಬಗ್ಗೆ ಎಫ್.ಐ.ಆರ್. ನಂ.104/2017 ರಂತೆ ಚುನಾಣಾ ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಾಗಿದೆ ಎಂದು ಚುನಾವಣಾಧಿಕಾರಿ ನಲಿನ್ ಅತುಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚುನಾವಣೆ ಹಿನ್ನಲೆಯಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ಮುಂದುವರೆಸಿದ್ದು, ಗುಂಡ್ಲುಪೇಟೆ ತಾಲ್ಲೂಕು ಅಣ್ಣೂರು ಕೇರಿ ಗ್ರಾಮದ ಮಾದಶೆಟ್ಟಿ ಅವರಿಂದ 0.900 ಮಿಲಿ ಲೀಟರ್, ಕೋಟೆಕೆರೆ ಗ್ರಾಮದ ರಾಮಸ್ವಾಮಿ ರವರಿಂದ 8.100 ಲೀಟರ್, ಹೊರೆಯಾಲ ಗ್ರಾಮದ ಪಿಣ್ಣಯ್ಯ ಅವರಿಂದ 0.900 ಲೀಟರ್, ಮೇಲುಕಾಮನಹಳ್ಳಿ ಗ್ರಾಮದ ಮಂಜುನಾಥ ಅವರಿಂದ 1.350 ಲೀಟರ್, ಕೊಳ್ಳೇಗಾಲ ತಾಲ್ಲೂಕು ಸತ್ತೇಗಾಲ ಹ್ಯಾಂಡ್ ಪೋಸ್ಟ್ ಗ್ರಾಮದ ಶಾಂತರಾಜು ಅವರಿಂದ 1.080 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಗುಂಡ್ಲುಪೇಟೆ ತಾಲ್ಲೂಕು ಹಂಗಳ ಗ್ರಾಮದ ವೆಂಕಟೇಶ್ವರ ವೈನ್ಸ್ ರವರು ನಿಷೇಧಿತ ಪ್ರದೇಶದಲ್ಲಿ ಮದ್ಯ ಸೇವಿಸಲು ಅವಕಾಶ ನೀಡಿರುವ ಬಗ್ಗೆ ದೂರು ದಾಖಲಾಗಿದೆ ಎಂದು ಚುನಾವಣಾಧಿಕಾರಿ ನಲಿನ್ ಅತುಲ್ ಅವರು ತಿಳಿಸಿದ್ದಾರೆ.
-----------------------------------------------------------------------------------------------------------------------
No comments:
Post a Comment