Friday, 7 April 2017

06-04-2017 ಮತ ಖಾತರಿ ಪಡಿಸುವ ವಿ.ವಿ.ಪಿ.ಎ.ಟಿ.ಬಗ್ಗೆ ಜಾಗೃತಿಗೆ ಸಹಕರಿಸಿ: ಜಿಲ್ಲಾಧಿಕಾರಿ ಬಿ.ರಾಮು



ಮತ ಖಾತರಿ ಪಡಿಸುವ ವಿ.ವಿ.ಪಿ.ಎ.ಟಿ.ಬಗ್ಗೆ ಜಾಗೃತಿಗೆ ಸಹಕರಿಸಿ: ಜಿಲ್ಲಾಧಿಕಾರಿ ಬಿ.ರಾಮು 


     ಚಾಮರಾಜನಗರ ಏಪ್ರಿಲ್ 6:- ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಮತದಾರರು ಎಲೆಕ್ಟ್ರಾನಿಕ್ ಮತ ಯಂತ್ರದಲ್ಲಿ ಮತ ಹಾಕಿದ ಬಗ್ಗೆ ಖಾತರಿ ಪಡಿಸಿಕೊಳ್ಳಲು  ಅವಕಾಶ ಕಲ್ಪಿಸಿರುವ ನೂತನ ವಿ.ವಿ.ಪಿ.ಎ.ಟಿ. (ವೋಟರ್ ವೆರಿಫೈಡ್ ಪೇಪರ್ ಆಡಿಟ್ ಟ್ರೈಯಲ್) ವ್ಯವಸ್ಥೆ ಬಗ್ಗೆ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಸಹ ಮತದಾರರಿಗೆ ಜಾಗೃತಿ ಮೂಡಿಸಲು ಸಹಕರಿಸಬೇಕೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ.ರಾಮು ಅವರು ಮನವಿ ಮಾಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ರಾಜಕೀಯ ಪಕ್ಷಗಳು ಹಾಗೂ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಅವರ ಪ್ರತಿನಿಧಿಗಳಿಗಾಗಿ ವಿ.ವಿ.ಪಿ.ಎ.ಟಿ. ಇ.ವಿ.ಎಂ. ಹಾಗೂ ಮತದಾನಕ್ಕಾಗಿ ಕೈಗೊಳ್ಳಲಾಗಿರುವ ಸಿದ್ದತೆ ಕುರಿತು ವಿವರಿಸುವ ಸಲುವಾಗಿ ಕರೆಯಲಾಗಿದ್ದ ಸಭೆಯಲ್ಲಿ ಅವರು ಮತನಾಡಿದರು.
ಇ.ವಿ.ಎಂ. ಗಳ ಬಗ್ಗೆ ಮತದಾರರಲ್ಲಿ ಸಂಶಯ ನಿವಾರಿಸಿ ಪಾರದರ್ಶಕತೆ ಕಾಯ್ದುಕೊಳ್ಳುವ ಸಲುವಾಗಿ ಪ್ರಪ್ರಥಮ ಬಾರಿಗೆ ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆಯಲ್ಲಿ  ವಿ.ವಿ.ಪಿ.ಎ.ಟಿ. ವ್ಯವಸ್ಥೆಯನ್ನು ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಲಾಗುತ್ತಿದೆ. ವಿ.ವಿ.ಪಿ.ಎ.ಟಿ. ಯಂತ್ರಗಳನ್ನು ಇ.ವಿ.ಎಂ. (ವಿದ್ಯುನ್ಮಾನ ಮತ ಯಂತ್ರ) ಗೆ ಜೋಡಣೆ ಮಾಡಲಾಗಿರುತ್ತದೆ. ಮತದಾರರು ಅಭ್ಯರ್ಥಿಯ ಹೆಸರಿನ ಮುಂದೆ ಗುಂಡಿ ಒತ್ತಿದ ತಕ್ಷಣ ವಿ.ವಿ.ಪಿ.ಎ.ಟಿ.ಯಲ್ಲಿ ಮತದಾರ ಚಲಾಯಿಸಿದ ಮತ ಉದ್ದೇಶಿತ ಅಭ್ಯರ್ಥಿಗೆ ಹೋಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬಹುದಾಗಿದೆ. ಅಭ್ಯರ್ಥಿಯ ಹೆಸರು ಕ್ರಮ ಸಂಖ್ಯೆ, ಚಿಹ್ನೆಯು ಮತದಾರನಿಗೆ  ವಿ.ವಿ.ಪಿ.ಎ.ಟಿ ಯಂತ್ರದಲ್ಲಿ 7 ಸೆಕೆಂಡುಗಳ ಕಾಲ ಗೋಚರವಾಗಲಿದೆ. ಇದರಿಂದ ಮತದಾರನಿಗೆ ಅವರು ಇಚ್ಚಿಸಿದ ಅಭ್ಯರ್ಥಿಗೆ ಮತ ಚಲಾವಣೆಯಾಗಿರುವ ಬಗ್ಗೆ ಖಾತರಿಯಾಗಲಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಮತಗಟ್ಟೆಗಳಲ್ಲಿ ವಿ.ವಿ.ಪಿ.ಎ.ಟಿ. ಯಂತವು ಬಳಕೆಯಾಗುತ್ತಿದೆ. ಇ.ವಿ.ಎಂ. ಹಾಗೂ ವಿ.ವಿ.ಪಿ.ಎ.ಟಿ. ಯಂತ್ರಗಳು ಸಾಕಷ್ಟು ಪ್ರಮಾಣದಲ್ಲಿ ಇವೆ ಈಗಾಗಲೇ ಪ್ರಥಮ ಹಂತದ ಪರಿಶೀಲನೆಯನ್ನು ಎರಡು ಬಾರಿ ಚುನಾವಣಾ ವಿಶೇಷ ವೀಕ್ಷಕರು  ಸಾಮಾನ್ಯ ವೀಕ್ಷಕರು ಹಾಗೂ ರಾಜಕೀಯ ಪಕ್ಷಗಳು ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಅವರ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆಸಲಾಗಿದೆ.
ಚುನಾವಣೆಗೆ ಅಗತ್ಯವಾಗಿರುವ ಬ್ಯಾಲೆಟ್ ಯೂನಿಟ್ ಕಂಟ್ರೋಲ್, ಯೂನಿಟ್ ಮತ್ತು ವಿ.ವಿ.ಪಿ.ಎ.ಟಿ ಯಂತ್ರಗಳು ಇದ್ದು ಇದರಲ್ಲಿ ಮತದಾನದ ವೇಳೆ ತಾಂತ್ರಿಕ ದೋಷ ಕಂಡುಬಂದಲ್ಲಿ ತಕ್ಷಣವೇ ಬದಲಾಯಿಸಲಾಗುತ್ತದೆ. ಶೇಕಡ 35 ರಷ್ಟು ಹೆಚ್ಚುವರಿ ಯಂತ್ರಗಳನ್ನು ಕಾಯ್ದಿರಿಸಿಕೊಳ್ಳಲಾಗಿದೆ. ಬಿ.ಇ.ಎಲ್. ನಿಂದ ಎಂಜಿನಿಯರ್‍ಗಳು, ತಾಂತ್ರಿಕ ಪರಿಣಿತರು ಸಹ ಇರಲ್ಲಿದ್ದು ಯಾವುದೇ ಗೊಂದಲಕ್ಕೆ ಅವಕಾಶವಾಗದಂತೆ ನೋಡಿಕೊಳ್ಳಲಿದ್ದೇವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮತ ಖಾತರಿ ಪಡಿಸಿಕೊಳ್ಳಲು ಮತದಾರನಿಗೆ ಅವಕಾಶ ಕಲ್ಪಿಸಲಾಗಿರುವ ನೂತನ ವಿ.ವಿ.ಪಿ.ಎ.ಟಿ. ಬಗ್ಗೆ ರಾಜಕೀಯ ಪಕ್ಷಗಳು ಅಭ್ಯರ್ಥಿಗಳು ಅವರ ಪ್ರತಿನಿಧಿಗಳು ಸಹ ಮತದಾರರಿಗೆ ಅರಿವು ಮೂಡಿಸಬೇಕು ಎಂದರು.
ಏಪ್ರಿಲ್ 9 ರಂದು ನಡೆಯಲಿರುವ ಮತದಾನಕ್ಕೆ ಅಗತ್ಯ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಪ್ರತಿ ಮತಗಟ್ಟೆಗೆ ಅಗತ್ಯವಿರುವ ಸಿಬ್ಬಂದಿ ನೇಮಕ ಮಾಡಲಾಗಿದೆ. ಹೆಚ್ಚಿನ ಪೊಲೀಸ್ ಬಂದೂಬಸ್ತ್ ಮಾಡಲಾಗಿದೆ. ಮತದಾನಕ್ಕೂ ಮುಂಚೆ ಮತಗಟ್ಟೆಗಳಲ್ಲಿ ಮಾಕ್ ಪೋಲ್‍ನಲ್ಲಿ ಮತದಾನ ಮಾಡಿ ಇ.ವಿ.ಎಂ.ಮತ್ತು ವಿ.ವಿ.ಪಿ.ಎ.ಟಿ. ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಅಭ್ಯರ್ಥಿಗಳು ಪೋಲಿಂಗ್ ಏಜೆಂಟ್‍ರು ಹಾಜರಿರಬೇಕೆಂದು ಜಿಲ್ಲಾಧಿಕಾರಿ ಬಿ.ರಾಮು ತಿಳಿಸಿದರು.
ಚುನಾವಣಾ ವೀಕ್ಷಕರಾದ ವಿದ್ಯಾಸಾಗರ ಪ್ರಸಾದ್ ಅವರು ಮಾತನಾಡಿ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಗೊಂದಲವಿದ್ದರೆ ಪರಿಹರಿಸಿಕೊಳ್ಳಬಹುದು. ವೋಟರ್ ಸ್ಲಿಪ್ ಅನ್ನು ಬಿ.ಎಲ್.ಓ.ಗಳು ವಿತರಿಸಲಿದ್ದಾರೆ. ಸಮರ್ಪಕವಾಗಿ ವೋಟರ್ ಸ್ಲಿಪ್ ತಲುಪಿಸಲು ಸೂಚನೆ ನೀಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಹಾಜರಿದ್ದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಇ.ವಿ.ಎಂ. ವಿ.ವಿ.ಪಿ.ಎ.ಟಿ ಇತರೆ ಚುನಾವಣೆ ಸಿದ್ದತೆಗಳ ಬಗ್ಗೆ ಅಭ್ಯರ್ಥಿಗಳು ವಿವರವಾಗಿ ಮಾಹಿತಿ ಪಡೆದುಕೊಂಡರು.
ಚುನಾವಣಾ ವೆಚ್ಚ ವೀಕ್ಷಕರಾದ ಸುಭೇಂದ್ರ, ಪೊಲೀಸ್ ವೀಕ್ಷಕರಾದ ಜಾಕೋಬ್ ಜಾಬ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್‍ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.



ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆ : 

ಏಪ್ರಿಲ್ 9 ರಂದು ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡಲು ಸೂಚನೆ


     ಚಾಮರಾಜನಗರ ಏಪ್ರಿಲ್ 6:- ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆ ಮತದಾನವು ಏಪ್ರಿಲ್ 9 ರಂದು ನಡೆಯಲಿದ್ದು ಅಂದು ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಮತದಾರರಾಗಿರುವ  ಕಾರ್ಮಿಕರಿಗೆ ವೇತನ ಸಹಿತ ರಜೆ ನೀಡುವಂತೆ ಕಾರ್ಮಿಕ ಇಲಾಖೆ ಸೂಚನೆ ನೀಡಿದೆ.
ಜಿಲ್ಲೆಯ ಎಲ್ಲಾ ಕಾರ್ಖಾನೆಗಳು ಕೈಗಾರಿಕಾ ಸಂಸ್ಥೆಗಳು ಅಂಗಡಿ ವಾಣಿಜ್ಯ ಹಾಗೂ ಇತರೆ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಮತದಾರರಾಗಿರುವ ಕಾರ್ಮಿಕರು ಮತದಾನ ಮಾಡಲು ಅನುಕೂಲವಾಗುವಂತೆ ಏಪ್ರಿಲ್ 9 ರಂದು ವೇತನ ಸಹಿತ ರಜೆ ನೀಡುವಂತೆ ಸಂಬಂಧಪಟ್ಟ ಮಾಲೀಕರು ಹಾಗೂ ನಿಯೋಜಕರಿಗೆ ಜಿಲ್ಲಾ ಕಾರ್ಮಿಕ ಅಧಿಕಾರಿ ಶೇಕರಪ್ಪ ಗಢದ್ ಆದೇಶಿಸಿದ್ದಾರೆ.



ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆ :
ಪ್ರಮಾಣ ಮಾಡಿಸಿದ ಪ್ರಕರಣ:ದೂರು ದಾಖಲು


     ಚಾಮರಾಜನಗರ ಏಪ್ರಿಲ್ 6:- ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಮಾರ್ಚ್ 23 ರಂದು ಭೀಮನಬೀಡು ಗ್ರಾಮದಲ್ಲಿ ನಡೆದ ಸಭೆಯಲ್ಲಿ ಬಿ.ಜೆ.ಪಿ.ರಾಜ್ಯಾಧ್ಯಕ್ಷರಾದ ಬಿ.ಎಸ್.ಯಡಿಯೂರಪ್ಪ ಅವರು ಅಭ್ಯರ್ಥಿ ನಿರಂಜನ್‍ಕುಮಾರ್ ಅವರ ಕಮಲದ ಗುರುತಿಗೆ ಮತ ನೀಡಿ ಅವರನ್ನು ಗೆಲ್ಲಿಸುತ್ತೇವೆಂದು ದೇವರ ಮೇಲೆ ಪ್ರಮಾಣ ಮಾಡಿ ಕೈ ಎತ್ತಿ ನೋಡೋಣ ಎಂಬ ನಡವಳಿಯು ನೀತಿ ಸಂಹಿತೆ ಉಲ್ಲಂಘನೆಯಾಗಿರುವುದ್ದು ಕಂಡುಬಂದಿದ್ದು ಏಪ್ರಿಲ್ 5 ರಂದು ಸೆಕ್ಟರ್ ಅಧಿಕಾರಿಯವರು ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಚುನಾವಣಾಧಿಕಾರಿ ನಳಿನ್ ಅತುಲ್ ಅವರು ತಿಳಿಸಿದ್ದಾರೆ.
ಏಪ್ರಿಲ್ 5 ರಂದು ಬೇಗೂರು ಗ್ರಾಮದ ಮಲ್ಲಿದಾಸಯ್ಯ ಎಂಬುವರು ಬೇಗೂರು ಗ್ರಾಮದ ಅಂಗನವಾಡಿ ಕೇಂದ್ರದ ಬಳಿ ಕಾಂಗ್ರೆಸ್ ಪಕ್ಷದವರು ಮಹಿಳಾ ಸಂಘದವರನ್ನು ಸೇರಿಸಿಕೊಂಡು ಒಂದು ಸಂಘಕ್ಕೆ 2000 ರೂ.ರಂತೆ 9 ಸಂಘಕ್ಕೆ 18000 ರೂ. ನೀಡಿದ್ದಾರೆ. ಪುಟ್ಟಮ್ಮ, ಮಲ್ಲಿಗಮ್ಮ ಎಂಬುವರ ಮೂಲಕ ಸಂಘದ ಪ್ರತಿನಿಧಿಗಳನ್ನು ಸೇರಿಸಿಕೊಂಡು ಹಣ ಹಂಚುತ್ತಿವುದಾಗಿ ದೂರು ಬಂದಿದ್ದು ಈ ಬಗ್ಗೆ ಪರಿಶೀಲಿಸಿದಾಗ ಸ್ಥಳದಲ್ಲಿ ದೊರೆತ್ತ 2000 ರೂ. ಮುಖ ಬೆಲೆಯ 9 ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಬಕಾರಿ ಇಲಾಖೆ ಅಧಿಕಾರಿಗಳು ಅಕ್ರಮ ಮದ್ಯ ತಪಾಸಣೆ ಕಾರ್ಯ ಮುಂದುವರಿಸಿದ್ದು ಚಾಮರಾಜನಗರ ತಾಲ್ಲೂಕು ಕುಲಗಾಣ ಗ್ರಾಮದ ಆಲಮೇಲಮ್ಮ ಅವರಿಂದ   0.450 ಮಿ.ಲೀ, ಮುಕ್ಕಡಹಳ್ಳಿ ಗ್ರಾಮದ ಶಿವಯ್ಯ ಅವರಿಂದ 0.720 ಮಿ.ಲೀ, ಗುಂಡ್ಲುಪೇಟೆ ತಾಲ್ಲೂಕು ಭೀಮನಬೀಡು ಗ್ರಾಮದ ಗೋಪಾಲಶೆಟ್ಟಿ ಅವರಿಂದ 0.900 ಮಿ.ಲೀ ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಚುನಾವಣಾಧಿಕಾರಿ ನಳಿನ್ ಅತುಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 ಏಪ್ರಿಲ್ 7 ರಿಂದ ಕಾಲುಬಾಯಿ ಜ್ವರ ಲಸಿಕೆ ಕಾರ್ಯಕ್ರಮ
ಚಾಮರಾಜನಗರ ಏಪ್ರಿಲ್ 6:- ಪಶುಪಾಲನೆ ಮತ್ತು ಪಶುವೈದ್ಯ ಇಲಾಖೆಯು ಜಿಲ್ಲಾದ್ಯಂತ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಲಸಿಕೆ ನೀಡುವ ಕಾರ್ಯಕ್ರಮವನ್ನು ಏಪ್ರಿಲ್ 7 ರಿಂದ 29 ರವರೆಗೆ ನಡೆಸಲಿದೆ.
ಬೆಳಿಗ್ಗೆ 7 ರಿಂದ 11 ಗಂಟೆಯವರೆಗೆ ಹಾಗೂ ಸಂಜೆ 4 ರಿಂದ 7 ಗಂಟೆಯವರೆಗೆ ಜಾನುವಾರುಗಳಿಗೆ ಲಸಿಕೆ ನೀಡಲಾಗುತ್ತದೆ. ಲಸಿಕೆ ನೀಡಲು 27 ತಂಡ ರಚಿಸಲಾಗಿದೆ. 144 ಲಸಿಕೆದಾರರು ಕಾರ್ಯನಿರ್ವಹಿಸಲಿದ್ದಾರೆ. ಜಾನುವಾರು ಮಾಲೀಕರು, ರೈತರು ತಮ್ಮ ಜಾನುವಾರುಗಳಿಗೆ ತಪ್ಪದೆ ಲಸಿಕೆ ಕೊಡಿಸುವಂತೆ ಪಶುಪಾಲನೆ ಇಲಾಖೆಯ ಉಪ ನಿರ್ದೇಶಕರಾದ ಬಾಲಸುಂದರ್ ಪ್ರಕಟಣೆಯಲ್ಲಿ ಕೋರಿದ್ದಾರೆ.


ಮದ್ಯ ಮಾರಾಟ ನಿಷೇಧ 

ಚಾಮರಾಜನಗರ, ಏ. 06:-ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆಯ ಮತದಾನದ  ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಠಿಯಿಂದ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನೋಡಿಕೊಳ್ಳುವ ಸಲುವಾಗಿ  ಜಿಲ್ಲೆಯಾದ್ಯಂತ ಏಪ್ರಿಲ್ 6ರ ಮಧ್ಯರಾತ್ರಿಯಿಂದ ಏಪ್ರಿಲ್ 9ರ ಮಧ್ಯ ರಾತ್ರಿವರೆಗೆ ಹಾಗೂ ಮತ ಎಣಿಕೆಯ ಹಿನ್ನೆಲೆಯಲ್ಲಿ ಏಪ್ರಿಲ್ 12ರ ಮಧ್ಯರಾತ್ರಿಯಿಂದ ಏಪ್ರಿಲ್ 13ರ ಮಧ್ಯರಾತ್ರಿಯವರೆಗೆ ಮದ್ಯ ಮಾರಾಟ, ಸಾಗಾಣಿಕೆ, ಶೇಖರಣೆ ನಿಷೇಧಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ ರಾಮುರವರು ಆದೇಶ ಹೊರಡಿಸಿದ್ದಾರೆ.    


ಚುನಾವಣಾ ಅಕ್ರಮಗಳ ಬಗ್ಗೆ ದೂರು ಸಲ್ಲಿಸಲು ಅವಕಾಶ


     ಚಾಮರಾಜನಗರ ಏಪ್ರಿಲ್ 6:- ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಅಕ್ರಮಗಳು ಕಂಡುಬಂದಲ್ಲಿ ಅಧಿಕಾರಿಗಳು ಹಾಗೂ ವೀಕ್ಷಕರ ದೂರವಾಣಿ ಮೂಲಕ ಅಥವಾ ಖುದ್ದಾಗಿ ಸಾರ್ವಜನಿಕರು ದೂರು ಸಲ್ಲಿಸಬಹುದಾಗಿದೆ. ದೂರವಾಣಿ ವಿವರ ಈ ರೀತಿ ಇದೆ
ಬಿ.ರಾಮು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮೊ.9480010123, ಕುಲದೀಪ್ ಕುಮಾರ್ ಆರ್.ಜೈನ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊ.9480804601, ನಳಿನ್ ಅತುಲ್ ಕ್ಷೇತ್ರ ಚುನಾವಣಾಧಿಕಾರಿ ಹಾಗೂ ಉಪ ವಿಭಾಗಧಿಕಾರಿ ಮೊ.9650991218, ಕೆ.ಸಿದ್ದು ತಹಶೀಲ್ದಾರ್ ಹಾಗೂ ಸಹಾಯಕ ಕ್ಷೇತ್ರ ಚುನಾವಣಾಧಿಕಾರಿ ಮೊ. 9448642666, ಎ.ಎಲ್.ನಾಗೇಶ್ ಅಬಕಾರಿ ಉಪ ಆಯುಕ್ತರು ಮೊ.9449597179, ಕಂಟ್ರೋಲ್ ರೂಂ 24x7 ಜಿಲ್ಲಾಧಿಕಾರಿಗಳ ಕಚೇರಿ ದೂ.ಸಂ.08226-223160
ಚುನಾವಣಾ ವೀಕ್ಷಕರ ದೂರವಾಣಿ ಸಂಖ್ಯೆಗಳು : ವಿದ್ಯಾಸಾಗರ್,ಸಾಮಾನ್ಯ ಚುನಾವಣಾ ವೀಕ್ಷಕರು ಮೊ.8277027322, ಕೆ.ಸುಭೇಂದ್ರ, ಚುನಾವಣಾ ವೆಚ್ಚ ವೀಕ್ಷಕರು ಮೊ.9405512345, ಎಸ್.ಕರುಣ ರಾಜು, ವಿಶೇಷ ಚುನಾವಣಾ ವೀಕ್ಷಕರು ಮೊ.9779943700. ಜಾಕೋಬ್ ಜಾಬ್, ಪೊಲೀಸ್ ಚುನಾವಣಾ ವೀಕ್ಷಕರು ಮೊ.9497996949.

******************

ಏಪ್ರಿಲ್9 ರಂದು ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿ ಸಂತೆ ಜಾತ್ರೆ ನಿಷೇಧ


     ಚಾಮರಾಜನಗರ ಏಪ್ರಿಲ್ 6:- ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಮತದಾನವು ಏಪ್ರಿಲ್ 9 ರಂದು ನಡೆಯಲಿರುವ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯೊಳಗೆ ಬರುವ ಎಲ್ಲಾ ಪ್ರದೇಶಗಳಲ್ಲಿ ಸಂತೆ ಮತ್ತು ಎಲ್ಲ ತರಹದ ಜಾತ್ರೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಬಿ.ರಾಮು ಅವರು ಆದೇಶ ಹೊರಡಿಸಿದ್ದಾರೆ.
ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕಾಪಾಡಲು ಹಾಗೂ ಸಾರ್ವಜನಿಕರು ಮತ ಹಾಕಲು ಅನುಕೂಲವಾಗುವ ಹಿತದೃಷ್ಠಿಯಿಂದ ಸಿ.ಆರ್.ಪಿ.ಸಿ. 1973ರ ಕಲಂ 144 ರ ಅಡಿ ಏಪ್ರಿಲ್ 9 ರಂದು ಬೆಳಿಗ್ಗೆ 5 ರಿಂದ ಸಂಜೆ 6 ಗಂಟೆಯವರೆಗೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಪ್ರದೇಶಗಳಲ್ಲಿ ಸಂತೆ ಮತ್ತು ಎಲ್ಲ ತರಹದ ಜಾತ್ರೆಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಯವರು ಪರಿಷ್ಕøತ ಆದೇಶ ಹೊರಡಿಸಿದ್ದಾರೆ.
 


No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು