ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆ :
ಅನುಮತಿ ಪಡೆಯದ ವಾಹನಗಳ ವಶ-
ಅಕ್ರಮ ಮದ್ಯ ವಶ
ಚಾಮರಾಜನಗರ, ಎಪ್ರಿಲ್. 03- ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಏಪ್ರಿಲ್ 1 ರಂದು ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಅವರು ಭಾಗವಹಿಸಿದ್ದ ಚುನಾವಣಾ ಪ್ರಚಾರದ ವೇಳೆ ಅನುಮತಿ ಪಡೆಯದೆ ಇದ್ದ ವಿವಿಧ ವಾಹನಗಳನ್ನು ಅಮಾನತು ಮಾಡಿಕೊಂಡು ದೂರು ದಾಖಲಿಸಲಾಗಿದೆ.ದೇಶಿಪುರ ಗ್ರಾಮದಲ್ಲಿ ಏಪ್ರಿಲ್ 1 ರಂದು 4 ಗಂಟೆ ಸಮಯದಲ್ಲಿ ಮತ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಅನುಮತಿ ಪಡೆಯದೆ ಇದ್ದ ಎರಡು ವಾಹನ ಹಾಗೂ ಸಂಜೆ 4 ಗಂಟೆ ವೇಳೆ ಆಲತ್ತೂರಿನಲ್ಲಿ 7 ವಾಹನವನ್ನು ಅಮಾನತು ಮಾಡಿಕೊಂಡು ದೂರು ದಾಖಲಿಸಲಾಗಿದೆ.
ಏಪ್ರಿಲ್ 2 ರಂದು ಮಧ್ಯಾಹ್ನ 2 ಗಂಟೆಗೆ ಆಲತ್ತೂರು ಗ್ರಾಮದಲ್ಲಿ ಅನುಮತಿ ಪಡೆಯದೆ ಚುನಾವಣಾ ಪ್ರಚಾರಕ್ಕೆ ಬಳಸುತ್ತಿದ್ದ ಇನೋವಾ ಕಾರನ್ನು ಅಮಾನತು ಮಾಡಿಕೊಂಡು ಬೇಗೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ಅಕ್ರಮ ಮದ್ಯ ವಶಪಡಿಸಿಕೊಳ್ಳುವ ಕಾರ್ಯವನ್ನು ಅಬಕಾರಿ ಅಧಿಕಾರಿಗಳು ಮುಂದುವರೆಸಿದ್ದಾರೆ. ಗುಂಡ್ಲುಪೇಟೆ ತಾಲ್ಲೂಕಿನ ಶಿಂಡನಪುರ ಗ್ರಾಮದ ಮಹದೇವ ಎಂಬುವರಿಂದ 1.080 ಮಿ.ಲೀ, ಮಲ್ಲಯ್ಯನಪುರ ಗ್ರಾಮದ ಜವರೇಗೌಡ ಎಂಬುವರಿಂದ 0.900 ಮಿ.ಲೀ, ತೆರಕಲಹುಂಡಿ ಗ್ರಾಮ ಮಹೇಶ ಎಂಬುವರಿಂದ 0.720 ಮಿ.ಲೀ, ಬೊಮ್ಮಲಾಪುರದ ಗೋವಿಂದನಾಯಕ ಎಂಬುವರಿಂದ 0.540 ಮಿ.ಲೀ, ಚಿನ್ನಸ್ವಾಮಿ ಎಂಬುವರಿಂದ 0.720 ಮಿ.ಲೀ, ಮದ್ಯ ವಶಪಡಿಸಿಕೊಂಡು ದೂರು ದಾಖಲಿಸಲಾಗಿದೆ ಎಂದು ಚುನಾವಣಾ ಅಧಿಕಾರಿ ನಲಿನ್ ಅತುಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೆಬ್ ಕ್ಯಾಸ್ಟಿಂಗ್ ಅಧಿಕಾರಿಗಳ ನೇಮಕ
ಚಾಮರಾಜನಗರ, ಎಪ್ರಿಲ್. :- ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ
ಮತದಾನದಂದು ವೆಬ್ ಕ್ಯಾಸ್ಟಿಂಗ್ ಚಿತ್ರಿಕರಣ ಮಾಡಲು ಅಗತ್ಯವಿರು ಸಿಬ್ಬಂದಿಗೆ ತರಬೇತಿ ಮತ್ತು ಮೇಲುಸ್ತುವಾರಿ ವಹಿಸಲು ಅಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಜಿಲ್ಲಾ ನಗರಾಭಿವೃದ್ಧಿ ಕೋಶದ ನೋಡಲ್ ಅಧಿಕಾರಿಯಾದ ಚೇತನ್ ಅವರನ್ನು ವೆಬ್ ಕ್ಯಾಸ್ಟಿಂಗ್ ನೋಡಲ್ ಅಧಿಕಾರಿಯನ್ನಾಗಿ ನೇಮಿಸಲಾಗಿದೆ. ಆಧಾರ್ ಜಿಲ್ಲಾ ಸಮಾಲೋಚಕರಾದ ರಾಮ್‍ಪ್ರಸಾದ್, ಜಿಲ್ಲಾ ಸಕಾಲ ಸಮಾಲೋಚಕರಾದ ನಾಗಸುಂದರ್, ಆಟಲ್ ಜೀ ಜಿಲ್ಲಾ ಸಮಾಲೋಚಕರಾದ ವಿದ್ಯಾ, ಭೂಮಿ ಸಮಾಲೋಚಕರಾದ ಗುರುರಾಜ್, ಅವರನ್ನು ಸಹಾಯಕ ಅಧಿಕಾರಿಯನ್ನಾಗಿ ನೇಮಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಅರ್ ಟಿ ಇ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ
ಚಾಮರಾಜನಗರ, ಏ 03. :- 2017-18ನೇ ಸಾಲಿನ ಶಿಕ್ಷಣ ಹಕ್ಕು ಕಾಯಿದೆಯಡಿ ಅಲ್ಪಸಂಖ್ಯಾತವಲ್ಲದ ಅನುದಾನ ರಹಿತ ಶಾಲೆಗಳಲ್ಲಿ ಪ್ರವೇಶ ಕೋರಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಏಪ್ರಿಲ್ 10ರವರೆಗೆ ವಿಸ್ತರಿಸಲಾಗಿದೆ.
ಈ ಹಿಂದೆ ಮಾರ್ಚ್ 31 ಕಡೆಯ ದಿನವೆಂದು ತಿಳಿಸಲಾಗಿತ್ತು. ಸಾರ್ವಜನಿಕ ಹಿತದೃಷ್ಠಿಯಿಂದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲು ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಿಸಲಾಗಿದೆ. ಇದರ ಸದುಪಯೋಗ ಮಾಡಿಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತೋಟಗಾರಿಕೆ ತರಬೇತಿಗೆ ರೈತರ ಮಕ್ಕಳಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಏ. - ರೈತರ ಮಕ್ಕಳಿಗೆ 10 ತಿಂಗಳ ಅವಧಿಯ ತೋಟಗಾರಿಕೆ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಹಾಸನದ ಸೋಮನಹಳ್ಳಿ ಕಾವಲ್ ಹಾಗೂ ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕಿನ ರಂಗಸಮುದ್ರಲ್ಲಿ ದಿನಾಂಕ 2017 ರ ಮೇ ಯಿಂದ 2018 ಫೆಬ್ರವರಿ 28 ರವರೆಗೆ ಅಂದರೆ 10 ತಿಂಗಳ ತೋಟಗಾರಿಕೆ ತರಬೇತಿಯನ್ನು ರೈತರ ಮಕ್ಕಳಿಗೆ ನೀಡಲಾಗುವುದು.
ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಚಾಮರಾಜನಗರದ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ, (ರಾಜ್ಯ ವಲಯ) É ಏಪ್ರಿಲ್ 24ರ ಒಳಗೆ ಸಲ್ಲಿಸಬೇಕು.
ಹೆಚ್ಚಿನ ವಿವರಗಳಿಗೆ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾವ) ಅಥವಾ ತೋಟಗಾರಿಕೆ ಉ¥ನಿರ್ದೇಶಕರು, ಜಿಲ್ಲಾ ಪಂಚಾಯತ್, ಚಾಮರಾಜನಗರ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ನಾಲ್ಕೂ ತಾಲೂಕುಗಳಿಗೆ ಭ್ರಷ್ಠಾಚಾರ ನಿಗ್ರಹ ದಳ ಭೇಟಿ
ಚಾಮರಾಜನಗರ, ಏ 03. - ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಏಪ್ರಿಲ್ 5 ರಿಂದ 28ರವರೆಗೆ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಭ್ರಷ್ಠಾಚಾರ ನಿಗ್ರಹ ದಳದ ಅಧಿಕಾರಿಗಳು ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸುವರು.ಏಪ್ರಿಲ್ 5ರಂದು ಗುಂಡ್ಲುಪೇಟೆಯ ಸರ್ಕಾರಿ ಅತಿಥಿ ಗೃಹದಲ್ಲಿ, 11ರಂದು ಚಾಮರಾಜನಗರದ ಎಸಿಬಿ ಪೊಲೀಸ್ ಠಾಣೆಯಲ್ಲಿ, 19ರಂದು ಯಳಂದೂರು, 24ರಂದು ಕೊಳ್ಳೇಗಾಲ ಹಾಗೂ 28ರಂದು ಹನೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಸಭೆ ನಡೆಸುವರು.
ಸರ್ಕಾರಿ ಕಚೇರಿಗಳಲ್ಲಿ ಅಧಿಕೃತ ವಿಳಂಬ, ಲಂಚದ ಹಣಕ್ಕೆ ಒತ್ತಾಯ ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಅಧಿಕಾರಿ ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನೀಡಬಹುದಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಮಾಡಿಕೊಳ್ಳುವಂತೆ ಭ್ರಷ್ಠಾಚಾರ ನಿಗ್ರಹ ದಳದ ಪೊಲೀಸ್ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 5 ರಂದು ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ
ಚಾಮರಾಜನಗರ, ಏ.03 :- ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ನೇಮಕವಾಗಿರುವ ಪಿ.ಆರ್.ಓ, ಎ.ಪಿ.ಆರ್.ಓ, ಹಾಗೂ ನಾಲ್ಕನೇ ಮತಗಟ್ಟೆ ಅಧಿಕಾರಿಗಳಿಗೆ ಏಪ್ರಿಲ್ 5 ರಂದು ತರಬೇತಿ ಕಾರ್ಯಕ್ರಮ ನಡೆಯಲಿದೆ
ಏಪ್ರಿಲ್ 5 ರಂದು ಬೆಳಿಗ್ಗೆ 10 ಗಂಟೆಗೆ ಗುಂಡ್ಲುಪೇಟೆ ಪಟ್ಟಣದ ಸೆಂಟ್ ಜಾನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಿ.ಆರ್.ಓ, ಎ.ಪಿ.ಆರ್.ಓ, ಗಳಿಗೆ ತರಬೇತಿ ನಿಗದಿ ಮಾಡಲಾಗಿದೆ. ಏಪ್ರಿಲ್ 5 ರಂದು ಬೆಳಿಗ್ಗೆ 10 ಗಂಟೆಗೆ ಗುಂಡ್ಲುಪೇಟೆ ಪಟ್ಟಣದ ಶಿಕ್ಷಕರ ಭವನದಲ್ಲಿ 4 ನೇ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನಡೆಯಲಿದೆ. ನೇಮಕವಾಗಿರುವ ಪಿ.ಆರ್.ಓ, ಎ.ಪಿ.ಆರ್.ಓ, ಹಾಗೂ ನಾಲ್ಕನೇ ಮತಗಟ್ಟೆ ಅಧಿಕಾರಿಗಳು ಕಡ್ಡಾಯವಾಗಿ ತರಬೇತಿಗೆ ಹಾಜರಾಗಬೇಕೆಂದು ಚುನಾವಣಾ ಅಧಿಕಾರಿ ನಲಿನ್ ಅತುಲ್ ತಿಳಿಸಿದ್ದಾರೆ.
No comments:
Post a Comment