ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆ :
ಮತಗಟ್ಟೆ, ಚುನಾವಣೋತ್ತರ ಸಮೀಕ್ಷೆ ನಿಷೇಧ
ಚಾಮರಾಜನಗರ, ಎಪ್ರಿಲ್. 1 :- ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆಗೆ ಸಂಬಂಧಸಿದಂತೆ ಯಾವುದೇ ಮತಗಟ್ಟೆ ಸಮೀಕ್ಷೆ, ಚುನಾವಣೋತ್ತರ ಸಮೀಕ್ಷೆ ನಡೆಸುವುದನ್ನು ಹಾಗೂ ಈ ಸಂಬಂಧ ಯಾವುದೇ ಪ್ರಕಟಣೆಯನ್ನು ಮಾಧ್ಯಮಗಳಲ್ಲಿ ಪ್ರಕಟಿಸುವುದನ್ನು ನಿಷೇಧಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.ಪ್ರಜಾಪ್ರತಿನಿಧಿ ಕಾಯ್ದೆ 1951ರ ಪ್ರಕಾರ ಮಾರ್ಚ್ 9ರ (ಭಾನುವಾರ)ಬೆಳಿಗ್ಗೆ 7 ಗಂಟೆಯಿಂದ ಮಾರ್ಚ್ 12ರ (ಬುಧವಾರ) ಸಂಜೆ 6.30ಗಂಟೆಯ ಅವಧಿಯೊಳಗೆ ಯಾವುದೇ ಮತಗಟ್ಟೆ, ಚುನಾವಣೋತ್ತರ ಸಮೀಕ್ಷೆ ನಡೆಸುವಂತಿಲ್ಲ. ಸೂಚಿಸಿರುವ ಅವಧಿಯಲ್ಲಿ ಉಪ ಚುನಾವಣೆ ಸಂಬಂಧ ಚುನಾವಣೋತ್ತರ, ಮತಗಟ್ಟೆ ಫಲಿತಾಂಶ ಕುರಿತು ಮುದ್ರಣ, ವಿದ್ಯುನ್ಮಾನ ಮಾಧ್ಯಮ ಸೇರಿದಂತೆ ಇತರೆ ಯಾವುದೇ ಬಗೆಯ ಯಾವುದೇ ರೂಪದಲ್ಲಿ ಪ್ರಕಟಿಸುವುದನ್ನು ನಿಷೇಧಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಮತ ಎಣಿಕೆ ಸಮಯ ನಿಗದಿಗೊಳಿಸಿದ 48 ಗಂಟೆಗಳ ಮುಂಚಿನ ಅವಧಿಯಲ್ಲಿ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ಯಾವುದೇ ಅಭಿಪ್ರಾಯ ಸಮೀಕ್ಷೆ (ಒಪಿನಿಯನ್ ಪೋಲ್) ಅಥವಾ ಇನ್ನಿತರೆ ಯಾವುದೇ ಮಾದರಿಯ ಚನಾವಣಾ, ಮತಗಟ್ಟೆ ಸಮೀಕ್ಷೆ (ಪೋಲ್ ಸರ್ವೆ)ಒಳಗೊಂಡಂತೆ ಚುನಾವಣಾ ವಿಚಾರಗಳನ್ನು ಯಾವುದೇ ವಿದ್ಯುನ್ಮಾನ ಮಾಧ್ಯಮದಲ್ಲಿ ಪ್ರದರ್ಶಿಸುವುದನ್ನು ಪ್ರಜಾಪ್ರತಿನಿಧಿ ಕಾಯ್ದೆ 1951 126 (1) (ಬಿ) ಪ್ರಕಾರ ನಿಷೇಧಿಸಲಾಗಿದೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.
No comments:
Post a Comment