Saturday, 22 April 2017

224-ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆ:ಸಿಬ್ಬಂದಿಯವರಿಗೆ ಜಿಲ್ಲಾ ವರಿಷ್ಠಾಧಿಕಾರಿಗಳು ಸದರಿಯವರ ಸೇವೆಯನ್ನು ಗುರುತಿಸಿ ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರ

224-ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆ:ಸಿಬ್ಬಂದಿಯವರಿಗೆ ಜಿಲ್ಲಾ ವರಿಷ್ಠಾಧಿಕಾರಿಗಳು ಸದರಿಯವರ ಸೇವೆಯನ್ನು ಗುರುತಿಸಿ ನಗದು ಬಹುಮಾನ ಮತ್ತು  ಪ್ರಶಂಸನಾ ಪತ್ರ


ಗುಂಡ್ಲುಪೇಟೆ: ದಿನಾಂಕ: 09.04.2017 ರಂದು ನಡೆದ 224-ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಯನ್ನು ಯಶಸ್ವಿಯಾಗಿ ನಡೆಸಬೇಕಾಗಿದ್ದ ಕಾರ್ಯವು ಪೊಲೀಸ್ ಇಲಾಖೆಗೆ ಸವಾಲಾಗಿದ್ದು, ಉಪ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ನಡುವಿನ ಸ್ಪರ್ಧೆಯು ಬಹಳ ಗಂಭೀರತೆಯಿಂದ ಕೂಡಿದ್ದಲ್ಲದೆ, ಎರಡು ರಾಜಕೀಯ ಪಕ್ಷಗಳ ನಡುವಿನ ವೈಷಮ್ಯದಿಂದಾಗಿ ಅಲ್ಲಲ್ಲಿ ಗಲಾಟೆ ಘರ್ಷಣೆಗಳು ನಡೆಯುವ ಸಾಧ್ಯತೆಗಳು ಹೆಚ್ಚಾಗಿ ಸದರಿ ಕ್ಷೇತ್ರದಲ್ಲಿ ಬಿಗುವಿನ ವಾತಾವರಣವಿದ್ದ ಹಿನ್ನಲೆಯಲ್ಲಿ ಹಾಗೂ ಚುನಾವಣಾ ಪ್ರಚಾರದ ನಿಮಿತ್ತ ವಿವಿಧ ರಾಜಕೀಯ ಮುಖಂಡರುಗಳು ಹೆಚ್ಚು ಹೆಚ್ಚು ಬಾರಿ ಸರಣಿಯಂತೆ ಕ್ಷೇತ್ರಕ್ಕೆ ಮತಯಾಚಿಸುವ ಸಲುವಾಗಿ ಭೇಟಿ ನೀಡಿದ್ದಂತಹ ಸಂದರ್ಭಗಳಲ್ಲಿ ಸೂಕ್ತ ಬಿಗಿ ಪೊಲೀಸ್ ಬಂದೋಬಸ್ತು ವ್ಯವಸ್ಥೆಯನ್ನು ಏರ್ಪಡಿಸಿ, ಶಾಂತ ರೀತಿಯ ಚುನಾವಣೆ ನಡೆಸಬೇಕಾಗಿರುವುದು ಪೊಲೀಸ್ ಇಲಾಖೆಗೆ ಸವಾಲಾಗಿದ್ದು ಸದರಿ ಉಪಚುನಾವಣಾ ಕರ್ತವ್ಯದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಗಳು ಸಮಯ ಪ್ರಜ್ಞೆ, ಕರ್ತವ್ಯ ನಿಷ್ಠೆ, ವೈಯುಕ್ತಿಕ ಆಸಕ್ತಿ ಹಾಗೂ ಸತತ ಪ್ರಯತ್ನದ ಫಲವಾಗಿ ಚುನಾವಣೆಯು ಶಾಂತಿಯುತವಾಗಿ ಮುಕ್ತಾಯಗೊಂಡಿರುತ್ತದೆ. ಸದರಿ ಉಪ-ಚುನಾವಣೆಯು ಯಶಸ್ವಿಯಾಗಲು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ಕುಲ್‍ದೀಪ್ ಕುಮಾರ್ ಆರ್ ಜೈನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಎಂ.ಎಸ್ ಗೀತ , ಚಾ.ನಗರ ಉಪವಿಭಾಗದ ಡಿವೈಎಸ್‍ಪಿ ಶ್ರೀ ಎಸ್.ಇ. ಗಂಗಾಧರಸ್ವಾಮಿ ಹಾಗೂ ಅಧಿಕಾರಿ ಸಿಬ್ಬಂದಿಗಳು ಕಾರಣರಾಗಿರುತ್ತಾರೆ. ಆದ್ದರಿಂದ 04-ಸಿಪಿಐ, 02-ಆರ್‍ಪಿಐ, 01-ಪಿಐ (ನಿಸ್ತಂತು), 03-ಪಿಎಸ್‍ಐ 08-ಎಎಸ್‍ಐ, 10-ಸಿಹೆಚ್‍ಸಿ/ಎಹೆಚ್‍ಸಿ, 14-ಸಿಪಿಸಿ/ಎಪಿಸಿ ಒಟ್ಟು 45 ಜನ ಅಧಿಕಾರಿ ಸಿಬ್ಬಂದಿಯವರಿಗೆ ಜಿಲ್ಲಾ ವರಿಷ್ಠಾಧಿಕಾರಿಗಳು ಸದರಿಯವರ ಸೇವೆಯನ್ನು ಗುರುತಿಸಿ ನಗದು ಬಹುಮಾನ ಮತ್ತು  ಪ್ರಶಂಸನಾ ಪತ್ರವನ್ನು ನೀಡಿರುತ್ತಾರೆ.  

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು