Thursday, 13 April 2017

13-04-2017 ಕಮಲಕ್ಕೆ ಅನುಕಂಪದ ನೆಲೆಯಿಲ್ಲ, ಕೊನೆಗೂ ಕೈ ಹಿಡಿದ ಮತದಾರ ,ಸಮರ್ಥ ನಾಯಕತ್ವ ಜಿಲ್ಲಾ ಮಟ್ಟದಲ್ಲಿ ಇಲ್ಲದಿರುವುದೇ ಬಿ.ಜೆ.ಪಿ ಪಕ್ಷದ ಸೋಲಿಗೆ ಕಾರಣ. ಆಯ್ತಾ!

ಉಪಚುನಾವಣೆ-"ಕಮಲ" ಕ್ಕೆ ಅನುಕಂಪದ ನೆಲೆಯಿಲ್ಲ, " ಕೈ" ಹಿಡಿದ ಮತದಾರ

 ಸಮರ್ಥ ನಾಯಕತ್ವ ಜಿಲ್ಲಾ ಮಟ್ಟದಲ್ಲಿ ಇಲ್ಲದಿರುವುದೇ  ಬಿ.ಜೆ.ಪಿ ಪಕ್ಷದ ಸೋಲಿಗೆ ಕಾರಣ. ಆಯ್ತಾ! ------- 

Reported By .VEERABHADRA SWAMY. RAMASAMUDRA

ಚಾಮರಾಜನಗರ: “ಕೈ” ಅನ್ನು ಮೇಲೆತ್ತಿಯೇ ಹೋಗುವುದು ಎಂದಿದ್ದ ಇಂಧನ ಖಾತೆ ಸಚಿವ ಡಿ.ಕೆ.ಶಿವಕುಮಾರ್ ತಮ್ಮ ವಾಗ್ದಾನದಂತೆ ಗುಂಡ್ಲುಪೇಟೆ ವಿದಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ವಿಜಯದ ಮಾಲೆಯನ್ನು ತಮ್ಮ ಪಕ್ಷಕ್ಕೆ ದೊರಕಿಸಿಕೊಡುವ ಮೂಲಕ ಭರವಸೆ ಈಡೇರಿಸಕೊಂಡಿದ್ದಾರೆ..
ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಅವರ ಪ್ರತಿಷ್ಟಾ ಕಣವಾದ ಗುಂಡ್ಲುಪೇಟೆ ವಿದಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅವರದೇ ಆದ ಅಭ್ಯರ್ಥಿಯನ್ನ ಗೆಲ್ಲಿಸಲೇಬೇಕೆಂದು ಪಣ ತೊಟ್ಟು ಕೊನೆಗೂ ಕೈ ಗೆಲ್ಲಿಸುವ ( ಗೀತಾ ಮಹದೇವ ಪ್ರಸಾದ್)  ಮೂಲಕ ಇಡೀ ಆಡಳಿತ ವ್ಯವಸ್ಥೆ ಸಫಲವಾಗಿದೆ.

ಕಾಂಂಗ್ರೇಸ್ ಅಭ್ಯರ್ಥಿ  ಮೋಹನ್ ಕುಮಾರಿ ಉ ಗೀತಾ ಮಹದೇವಪ್ರಸಾದ್ 90,258 ಮತ ಪಡೆದರೆ, ಬಾರತೀಯ ಜನತಾ ಪಕ್ಷದ ಅಭ್ಯರ್ಥಿ ನಿರಂಜನ್ ಕುಮಾರ್ 79.381 ಮತ ಪಡೆದ ಅವರನ್ನು 10.877 ಮತಗಳ ಅಂತರದಿಂದ ಸೋಲಿಸಿದ್ದಾರೆ. ಇದರ ಜೊತೆಗೆ 1596 ಮತಗಳು ನೋಟಾ ಮತಗಳು ಚಲಾವಣೆಯಾಗಿದೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಲೇ. ಮಹದೇವ ಪ್ರಸಾದ್ ಅವರು ಈ ಕ್ಷೇತ್ರಕ್ಕೆ ಮಾಡಿದ್ದ ಅಬಿವೃದ್ದಿ ಕಾರ್ಯಗಳು, ಅವರ ಸತ್ತ ನಂತರ ಅನುಕಂಪ ಗೀತಾ ಮಹದೇವ ಪ್ರಸಾದ್ ಅವರು ಗೆಲ್ಲಲು ಒಂದು ಕಡೆ ಕಾರಣವಾಗಿದೆ..
ಗುಂಡ್ಲುಪೇಟೆಯಲ್ಲಿ ಹಣದ ಹೊಳೆಯನ್ನೆ ಹರಿಸಿದ ಆಡಳಿತ ಪಕ್ಷಕ್ಕೆ ಕಮಲ ಕಿತ್ತು ಬಿಸಾಕಿದಂತಾಗಿದೆ. ಹಣದ ಹೊಳೆಯೇ ಹರಿಯಿತು ಎಂಬುದಕ್ಕೆ ಚುನಾವಣ ಆಯೋಗ ವಶಪಡಿಸಿಕೊಂಡ ಹಣವೇ ಸಾಕ್ಷಿಯಾಗಿತ್ತು.
ಯಡಿಯೂರಪ್ಪ ನಡೆಸಿದ ರೋಡ್ ಶೋ, ಪಾದಯಾತ್ರೆ  ಇವೆಲ್ಲವೂ ವ್ಯರ್ಥವಾಗಿ ಕೊನೆಗೂ ಹಣ ಬಲ ,ಸರ್ಕಾರ ಮತ್ತು ತಮ್ಮ ಪತಿ ಲೇ ಮಹದೇವ ಪ್ರಸಾದ್ ಅವರು ಕ್ಷೇತ್ರಕ್ಕೆ ಮಾಡಿದ್ದ ಅಬಿವೃದ್ದಿ ಕೆಲಸ ಗೆಲುವಿಗೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು.
ಗೀತಾ ಮಹದೇವ ಪ್ರಸಾದ್ ಅವರು ಮಾತನಾಡಿಸಿದಾಗ ಮಹಿಳೆಯರನ್ನು (ಪ್ರತಿಪಕ್ಷಗಳು ಆಡಿದ ಚುಚ್ಚು ಮಾತು ) ಹೀಯಾಳಿಸಿದರೆ  ಗತಿ ಏನಾಗುತ್ತದೆ ಎಂದು ದೇವರು ಮತದಾರ ಮೂಲಕ ತೋರಿಸಿದ್ದಾನೆ. ಜನರು ಇಟ್ಟ ನಂಬಿಕೆಗೆ ಕ್ಷೇತ್ರದ ಅಭಿವೃದ್ದಿಗೆ ಸದಾ ಸಿದ್ದನಾಗಿ ಕೆಲಸ ಮಾಢುತ್ತೇನೆ ಎಂದಿದ್ದಾರೆ.
ಕಮಲದ ಅಭ್ಯರ್ಥಿ ಸೋತು ಸೋತು ಸುಣ್ಣವಾದ ನಿರಂಜನ್ ಕುಮಾರ್ ಮೇಲೆ ಹಾಗೂ  ಸಚಿವ ಲೆ.ೀ ಮಹದೇವಪ್ರಸಾದ್ ಅವರ ಸಾವಿನ ನಂತರ  ಪತ್ನಿ ಗೀತಾ ಮಹದೇವಪ್ರಸಾದ್ ಸ್ಪರ್ಧಿಸಿದ್ದು ಇವರಿಬ್ಬರÀ ಮೇಲಿನ ಅನುಕಂಪ ಇದ್ದರೂ, ಎರಡು ಪಕ್ಷಗಳು ಹಣ ಹಂಚಿದರೂ ಬಿ.ಜೆ.ಪಿ. ಪಕ್ಷದಲ್ಲಿನ ಆಂತರಿಕ ಕಲಹ, ಭಿನ್ನಾಭಿಪ್ರಾಯವೂ, ಸಮರ್ಥ ನಾಯಕತ್ವ ಜಿಲ್ಲಾ ಮಟ್ಟದಲ್ಲಿ ಇಲ್ಲದಿರುವುದೇ  ಬಿ.ಜೆ.ಪಿ ಪಕ್ಷದ ಸೋಲಿಗೆ ಕಾರಣ ಎಂದು ತಿಳಿದುಬಂದಿದೆ.
***********************************************

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು