ವರ್ಷದಲ್ಲಿ ಮೂರು ಬಾರಿ ವರ್ಗಾವಣೆ ಕಸರತ್ತು ನಡೆಸಿದ ಸರ್ಕಾರ, ರಜೆಯನ್ನೆ ಹಾಕದೇ ವರ್ಷ ಪೂರೈಸಿದ ಎಸ್ಪಿ ಕುಲದೀಪ್ ಕುಮಾರ್ ಜೈನ್
ವರದಿ ರಾಮಸಮುದ್ರ ಎಸ್.ವೀರಭದ್ರಸ್ವಾಮಿಚಾಮರಾಜನಗರ: ದಕ್ಷ ಅದಿಕಾರಿಗಳನ್ನು ಕಂಡರೆ ಸಾಕು ವರ್ಗಾವಣೆ ಮಾಡಿ ಸುಮ್ಮನೆ ಆಗಿ ಬಇಡುವುದರಲ್ಲಿ ಎತ್ತಿದ ಕೈ ಆದರೆ ಚಾಮರಾಜನಗರಕ್ಕೆ ಆಗಮಿಸಿ ಕಾರ್ಯನಿರ್ವಹಿಸುತ್ತಿರುವ ಹಾಲಿ ಪೊಲೀಸ್ ವರೀಷ್ಟಾಧಿಕಾರಿ ಕುಲದೀಪ್ ಕುಮಾರ್ ಆರ್ ಜೈನ್ ಅವರನ್ನು ಮೂರು ಬಾರಿ ವರ್ಗಾವಣೆ ಮಾಡಲು ಯತ್ನ ನಡೆಸಿರುವ ಅಂಶ ತಿಳಿದುಬಂದಿದೆ
.
ಚಾಮರಾಜನಗರಕ್ಕೆ ಬಂದು ಅದಿಕಾರ ಸ್ವೀಕಾರ ಮಾಡಿದಾಗಿನಿಂದ ಇಂದಿನ ತನಕ ಪೊಲೀಸ್ ವರೀಷ್ಟಾಧಿಕಾರಿಗಳಿಗೆ ಅಕ್ಟೋಬರ್, ಡಿಸೆಂಬರ್ ಹಾಗೂ ಮಾರ್ಚ್ ಮಾಹೆ ಸೇರಿದಂತೆ ಮೂರು ಬಾರಿ ವರ್ಗಾವಣೆ ಮಾಡುವ ಮೂಲಕ ಕಸರತ್ತು ಮಾಡಿದ್ದ ಅಂಶ ತಿಳಿದುಬಂದಿದೆ.
ಸರ್ಕಾರದ ವರ್ಗಾವಣೆಯನ್ನು ಲೆಕ್ಕಕ್ಕೆ ಪರಿಗಣಿಸದೇ ಚಾಮರಾಜನಗರಕ್ಕೆ ಬಂದು ವರ್ಷವೇ ಆಗದೇ ಇದ್ದುದ್ದರಿಂದ ಸಿ.ಎ.ಟಿ ( ಸೆಂಟ್ರಲ್ ಅಡ್ಮಿನಿಷ್ಟ್ರೇಷನ್ ಟ್ರಿಬ್ಯುನಲ್) ಗೆ ಹೋಗಿ ತಡೆ ತಂದು ಕರ್ತವ್ಯ ನಿರ್ವಹಿಸಿದ್ದಾರೆ ಎಂಬ ಅಂಶ ಬೆಳಕಿಗೂ ಬಂದಿದೆ.
ಪೊಲೀಸ್ ವರೀಷ್ಟಾಧಿಕಾರಿ ಕುಲದೀಪ್ ಕುಮಾರ್ ಆರ್ ಜೈನ್ ವಾರದಲ್ಲಿ ಒಂದು ದಿನ ಕಡ್ಡಾಯ ರಜೆ ಬೇಕೆ ಬೇಕು ಎಂಬುದು ಸೇರಿದಂತೆ ವಿವಿದ ಬೇಡಿಕೆಗಳನ್ನು ಇಟ್ಟುಕೊಂಡು ನಡೆಸುತ್ತಿದ್ದ ಪೊಲೀಸರಿಗೆ ಚಾಮರಾಜನಗರ ಪೊಲೀಸ್ ವರೀಷ್ಟಾಧಿಕಾರಿ ಕುಲದೀಪ್ ಕುಮಾರ್ ಆರ್ ಜೈನ್ ಅವರು ವರ್ಷದಲ್ಲಿ ಒಂದು ರಜೆಯನ್ನೂ ಹಾಕದೇ ಕರ್ತವ್ಯ ನಿರ್ವಹಿಸಿದ್ದಾರೆ
ರಾಜಸ್ಥಾನದ ಮೂಲ ನಿವಾಸಿಗಳಾಗಿರುವ ರಮೇಶ್ ಕುಮಾರ್ ಜೈನ್ ಅವರ ಸುಪುತ್ರರಾಗಿ ಚಾಮರಾಜನಗರದದ ಹಾಲಿ ಪೊಲೀಸ್ ವರೀಷ್ಟಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕುಲದೀಪ್ ಕುಮಾರ್ ಜೈನ್ ಅವರೇ ಪಬ್ಲಿಕ್ ರಿಯಲ್ ಹೀರೋ ಆಗಿದ್ದಾರೆ .
ವ್ಯಕ್ತಿತ್ವ ಪರಿಚಯ:
ಕುಲದೀಪ್ ಕುಮಾರ್ ಆರ್ ಜೈನ್ ಅವರು ಇವರು 1984 ಜೂನ್ 29 ರಂದು ಚೆನ್ನೈ ಅಲ್ಲಿ ಜನಿಸಿ ಅಣ್ಣಾ ಇನ್ಸ್‍ಟ್ಯೂಟ್ ಅಲ್ಲಿ ಎಮ್.ಸಿ.ಎ ವ್ಯಾಸಂಗ ಮುಗಿಸಿದರು.2011 ಆಗಸ್ಟ್ 29 ರಂದು ತಮ್ಮ ಪೊಲೀಸ್ ಇಲಾಖಾ ವೃತ್ತಿಗೆ ಸೇರಿ ನಂತರ ಮಂಗಳೂರಿನಲ್ಲಿ ತಮ್ಮ ಪ್ರೋಬೆಷನರಿ ಮುಗಿಸಿದರು.
ರಾಮನಗರ ಜಿಲ್ಲೆಯಲ್ಲಿ ಚನ್ನಪಟ್ಟಣದಲ್ಲಿ ಹೆಚ್ಚುವರಿ ಪೊಲೀಸ್ ವರೀಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಕೆ,ಎಸ್.ಆರ್.ಪಿ ಫಸ್ಟ್ ಬೆಕ್ಟ್ ಕಮ್ಯಾಡೆಂಟ್ ಆಗಿ ಕಾರ್ಯನಿರ್ವಹಿಸಿ ನಂತರ 2015 ಜೂನ್ 15 ರಂದು ಬಹುಶಃ ಸುಮಾರು 10.42 ರ ಸಮಯದಲ್ಲಿ ನಿರ್ಗಮಿತ ವರೀಷ್ಠಾಧಿಕಾರಿ ರಂಗಸ್ವಾಮಿ ನಾಯಕ್ ಅವರಿಂದ ಅದಿಕಾರ ಸ್ವೀಕಾರ ಮಾಡಿದರು.
ಆಡಳಿತದಲ್ಲಿ ಸುದಾರಣೆ: ಪೊಲೀಸ್ ವರೀಷ್ಟಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕುಲದೀಪ್ ಕುಮಾರ್ ಆರ್ ಜೈನ್ ಅವರು ಮೊದಲು ಬಂದಿದ್ದೆ ಎಲ್ಲಾ ತಾಲ್ಲೂಕಿನಲ್ಲಿ ಹೆಚ್ಚು ವರ್ಷಗಳ ಕಾಲ ಕಾರ್ಯನಿರ್ವಹಿಸುತ್ತಿರುವ ಆರಕ್ಷಕ ಸಿಬ್ಬಂದಿಗಳನ್ನು ವರ್ಗಾವಣೆ ಮಾಡುವ ಮೂಲಕ ಸುದಾರಣೆ ತರಲಾರಂಬಿಸಿದರು.
ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುವ ಎಲಾ ಇನ್ಸ್‍ಪೆಕ್ಟರ್ , ಸಬ್ ಇನ್ಸ್‍ಪೆಕ್ಟರ್‍ಗಳು ಕಡ್ಡಾಯವಾಗಿ ವಾಟ್ಸಾಫ್ ಬಳಕೆ ಮಾಡಿ ಅಲ್ಲಿಗೆ ಬಂದ ದೂರುಗಳನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ಸೂಚಿಸಿದರು ಅಲ್ಲಿಂದ ಪ್ರಾರಂಭವಾಯಿತು ನೋಡಿ ಯಾವುದೆ ಸಾರ್ವಜನಿಕರು ಅಕ್ರಮವಾಗಿ ಮರಳು, ಗಣಿ ಸಾಗಾಣಿಕೆ ಮಾಡಿದರೆ ಅದರ ಛಾಯಚಿತ್ರ ಸಂಬಂದಿಸಿದ ಇನ್ಸ್‍ಪೆಕ್ಟರ್‍ಗಳಿಗೆ ಕಳುಹಿಸುವ ಮುನ್ನ ವರೀಷ್ಟಾಧಿಕಾರಿಗಳಿಗೆ ಕಳುಹಿಸಿ ಸುಮ್ಮನಾಗುತ್ತಿದ್ದರು ನಂತರ ಸಂಬಂದಿಸಿದ ಅದಿಕಾರಿಗಳು ಬೇಟೆ ಆಡಲಾರಂಬಿಸಿದರು.
ವರ್ಗಾವಣೆಗಷ್ಟೇ ಅಲ್ಲ ಹತ್ಯೆಗೂ ಸಂಚು: ಪೊಲೀಸ್ ವರೀಷ್ಟಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕುಲದೀಪ್ ಕುಮಾರ್ ಆರ್ ಜೈನ್ ಅವರನ್ನು ವರ್ಗಾವಣೆ ಮಾಡಲು ಸಣ್ಣ ಪುಟ್ಟ ಲೋಪದೋಷಗಳನ್ನು ಮುಂದಿಟ್ಟುಕೊಂಡು ಹಾಗೂ ಕೋರ್ಟ್ ಜಾರಿ ತಂದ ಮರಳು ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಮುಂದಾದ ಇವರನ್ನು ವರ್ಗಾವಣೆ ಮಾಡಲೇಬೇಕೆಂದು ಪ್ರತಿಭಟನೆ ನೆಪದಲ್ಲಿ ಹೋರಾಟ ಪ್ರಾರಂಬಿಸಿದರು.
ಮರೆಯಲಾಗದ ಆ ದಿನ : 2015 ನವೆಂಬರ್ 1 ಬಹುಶಃ ಕರಿಕಲ್ಲು ಮಾಫಿಯಾದವರಿಗೆ ಬಲಿಯಾಗಬೇಕಾಗಿದ್ದ ಪೊಲೀಸ್ ವರೀಷ್ಟಾಧಿಕಾರಿ ಕುಲದೀಪ್ ಕುಮಾರ್ ಆರ್ ಜೈನ್ ಅವರು ತಂದೆ ತಾಯಿ, ದೇವರ ಆಶೀರ್ವಾದದಿಂದ ಹೇಗೂ ಪಾರಾದರು, ಆದರೆ ಘಟನಾ ಸ್ಥಳಕ್ಕೆ ಬಂದ ಜಿಲ್ಲಾದಿಕಾರಿ ಎ.ಎಮ್.ಕುಂಜಪ್ಪ ಅವರಿಗೆ ಮಾತ್ರ ಕಲ್ಲಿನ ಹೊಡೆತದಿಂದ ಪಾರಾಗಲು ಸಾದ್ಯವಾಗಲೇ ಇಲ್ಲ.
ಅಂದು ಎಚ್ಚೆತ್ತ ಪೊಲೀಸ್ ವರೀಷ್ಟಾಧಿಕಾರಿ ಕುಲದೀಪ್ ಕುಮಾರ್ ಆರ್ ಜೈನ್ ಮತ್ತಷ್ಟು ಜಾಗೃತರಾಗಲು ಅವಕಾಶವಾಯಿತು. ಘಟನೆಗೆ ಸಂಬಂದಿಸಿದಂತೆ 50 ಕ್ಕೂ ಹೆಚ್ಚು ಜನರನ್ನು ಬಂದಿಸಿ ನ್ಯಾಯಾಂಗದ ವಶಕ್ಕೆ ಕೊಟ್ಟರು.
ಸದ್ದಿಲ್ಲದೆ ಕೋಮು ಘರ್ಷಣೆ, ಪೊಲೀಸ್ ಪ್ರತಿಭಟನೆಗೆ ತಡೆ: ಹೊಂಗನೂರು ಗ್ರಾಮದಲ್ಲಿ ಕಿಡಿಗೇಡಿಗಳು ಮಹಾನ್ ನಾಯಕರ ಪ್ಲೆಕ್ಸ್‍ಗೆ ಅಪಮಾನ ಮಾಡಿ ಎರಡು ಕೋಮುಗಳು ಘರ್ಷಣೆಯಿಂದ ಊರಿಗೆ ಊರೇ ಕತ್ತಿ ಉರಿಯಲಾರಂಬಿಸಿತು. ಅದನ್ನು ಕೇವಲ ಒಂದು ಗ್ರಾಮಕ್ಕಷ್ಟೇ ಮೀಸಲಿರಿಸಿ ಎಲ್ಲೂ ಪ್ರಚೋದನಕಾರಿಯಾಗಿ ನಡೆಯದಂತೆ ನೋಡಿಕೊಳ್ಳುವುದರಲ್ಲಿ ತಪ್ಪಿತಸ್ಥರನ್ನು ಹುಡುಕಿ ನ್ಯಾಯಾಂಗದ ಬಂದನಕ್ಕೆ ಕೊಟ್ಟರು.
ಬಹುಶಃ ಇಲ್ಲಿ ಇವರ ಸ್ಥಳದಲ್ಲಿ ಬೇರೆ ಯಾವುದೇ ಜಾತಿಯ ವರೀಷ್ಠಾಧಿಕಾರಿಗಳಿದ್ದರೆ ನೆನಪಿಸಕೊಳ್ಳಲು ಅಸಾದ್ಯ ( ಉದಾ- ವರೀಷ್ಟಾದಿಕಾರಿಗಳು ಸೂಚಿತ ವರ್ಗಕ್ಕೆ ಸೇರಿದವರಾಗಿದ್ದರೆ ಅವರ ಪರ ತೀರ್ಪು, ಅನುಸೂಚಿತ ವರ್ಗಕ್ಕೆ ಸೇರಿದವರಾಗಿದ್ದರೆ ಅನುಸೂಚಿತ ವರ್ಗದವÀರ ಪರ ತೀರ್ಪು ಎಂದೆ ಜನರು ಭಾವಿಸುತ್ತಿದ್ದರೇನೋ ) ನೀವೇ ಊಹಿಸಿಕೊಳ್ಳಿ.
ಪೊಲೀಸ್ ಪ್ರತಿಭಟನೆಗೆ ತಡೆ: ಇವರ ರಾಜ್ಯಾದಾದ್ಯಂತ ಜೂನ್ 4 ರಂದು ಪೊಲೀಸ್ ಪ್ರತಿಭಟನೆಗೆ ಕರೆ ನೀಡಿದ್ದರೂ ಕೆಲವೆಡೆ ಮುನ್ಸೂಚನೆ ಕಂಡರೂ ಚಾಮರಾಜನಗರದಲ್ಲಿ ಮಾತ್ರ ಕೆಲವರು ಸಾಮೂಹಿಕ ರಜೆ ನೀಡಿದ್ದರು. ಆದರೆ ಅವರನ್ನು ಮನವೊಲಿಸಿ ವಾಪಸ್ ಪಡೆಯುವಂತೆ ಕೇಳಿಕೊಂಡಿದ್ದರು. ಅಷ್ಟೇ ಅಲ್ಲ ಕೆಲವು ಬೇಡಿಕೆಗಳು ರಾಜ್ಯಮಟ್ಟದ್ದಾಗಿದ್ದು ಸರ್ಕಾರ ನಿಮ್ಮ ಭರವಸೆಗಳನ್ನು ಈಡೇರಿಸುತ್ತದೆ ನಮ್ಮ ಜಿಲ್ಲೆಯ ಸಮಸ್ಯೆಗಳನ್ನು ನಾನೇ ಖುದ್ದು ಈಡೇರಿಸುತ್ತೇನೆ ಎಂಬ ಆಶ್ವಾಸನೆ ನೀಡಿದ ಮೇರೆಗೆ ಇವರ ದಕ್ಷತೆ ಹಾಗೂ ಗೌರವಕ್ಕೆ ಮನವೊಲಿದು ಪ್ರತಿಭಟನೆ ಕೈಬಿಡಿಸಿದರು.
ವರ್ಷದ ಅವದಿಯಲ್ಲಿ ನಾವು ( ಚಾಮರಾಜನಗರ ಟುಡೇ ಹಾಗೂ ಜಿನ್ಯೂಸ್ 5. ಮುಖ್ಯಸ್ಥ ರಾಮಸಮುದ್ರ ಎಸ್.ವೀರಭದ್ರಸ್ವಾಮಿ) ಕೇಳಿದ ಪ್ರಶ್ನೆಗೆ ಪೊಲೀಸ್ ವರೀಷ್ಟಾಧಿಕಾರಿ ಕುಲದೀಪ್ ಕುಮಾರ್ ಆರ್ ಜೈನ್ ಅವರು ನೀಡಿದ ಉತ್ತರ
ಪ್ರ: ಅಕ್ರಮ ಕರಿಕಲ್ಲು ತಡೆಯುವಲ್ಲಿ ಇಲಾಖೆ ಯಶಸ್ವಿಯಾಗಿದಿಯೇ.?ಉ: ಬಹುಶಃ ನೂರಕ್ಕೆ ನೂರಷ್ಟು ಇಲ್ಲದಿದ್ದರೂ ತೃಪ್ತಿದಾಯಕವಾಗಿಲ್ಲ.
ಪ್ರ: ಕಾನೂನು ಸುವ್ಯವಸ್ಥೆ ಬಗ್ಗೆ ನಿಮ್ಮ ಅನಿಸಿಕೆ.?
ಉ: ಜಿಲ್ಲೆಯಲ್ಲಿ ಜನರು ಬಹುತೇಕರು ಮುಗ್ದರು, ಸ್ವಲ್ಪ ಕಾನೂನು ನಿಯಮಗಳು ಮೊದಲಿಗಿಂತ ಅಭಿವೃದ್ದಿಯಾಗುತ್ತಿದೆ.
ಪ್ರ: ಹೊಂಗನೂರು ಗಲಾಟೆ, ಜಿಲ್ಲಾದಿಕಾರಿ ಮೇಲಿನ ಹಲ್ಲೆ ಪ್ರಕರಣದ ವಾಸ್ಥವತೆ ಬಗ್ಗೆ ನಿಮ್ಮ ಅನಿಸಿಕೆ?
ಉ: ಹೊಂಗನೂರು ಗ್ರಾಮದಲ್ಲಿ ಕಿಡಿಗೇಡಿಗಳು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿದ್ದಾರೆ. ಘಟನೆ ಆಗಬಾರದಾಗಿತ್ತು. ಪ್ರಕರಣದಲ್ಲಿ ಆರೋಪಿಗಳನ್ನು ನ್ಯಾಯಾಂಗ ಬಂದನಕ್ಕೆ ಕೊಡಲಾಗಿದೆ. ಜಿಲ್ಲಾದಿಕಾರಿ ಗಲಾಟೆ ಪ್ರಕರಣದಲ್ಲೂ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ, ಕರ್ತವ್ಯಕ್ಕೆ ಅಡ್ಡಿ ಉಂಡು ಮಾಡಿರುವ ಸಂಬಂದ ಐದಾರು ಪ್ರಕರಣದಲ್ಲಿ 60 ಕ್ಕೂ ಹೆಚಗಚು ಜನರು ನ್ಯಾಯಾಂಗ ಬಂದನಕ್ಕೆ ನೀಡಲಾಗಿದೆ.
ಪ್ರ: ವಿದ್ಯಾವಂತರಿಗೆ ಪೊಲೀಸ್ ಸ್ನೇಹಿಗಿಂತ ಜನಸ್ನೇಹಿ ಆದರೆ ಹೊರತು ಬೇರೆಯವರಿಗಲ್ಲ ಎಂಬುದರ ಬಗ್ಗೆ ನಿಮ್ಮ ಅನಿಸಿಕೆ?
ಉ: ವಿದ್ಯಾವಂತರು ಕೆಲವೆಡೆ ವಾಟ್ಸಾಪ್ ಮೂಲಕ ದೂರು ದಾಖಲಸಿದ್ದಾರೆ ಅದರ ನಗ್ಗೆ ಕ್ರಮವನ್ನು ತೆಗೆದುಕೊಂಡಿದ್ದೇವೆ ಹಾಗಂತ ಕೇವಲ ಅವಿದ್ಯಾವಂತಿಗೆ ನ್ಯಾಯ ಸಿಕ್ಕಿಲ್ಲ ಎನ್ನುವುದು ಸರಿಯಲ್ಲ. ನಮ್ಮ ಕಚೇರಿ ಯಾವಾಗಲೂ ತೆರೆದೇ ಇರುತ್ತದೆ ಮೊದಲು ಠಾಣೆಗಳಿಗೆ ಹೋಗುವ ಬದಲು ನನ್ನ ಬಳಿ ಬರುತ್ತಿದ್ದಾರೆ ಅವರು ನನ್ನ ಮೇಲಿಟ್ಟಿರುವ ನಂಬಿಕೆ ಇದಕ್ಕೆ ಸಾಕ್ಷಿ .
ಪ್ರ: ತಮ್ಮ ಅವದಿಯಲ್ಲಿ ಅಪರಾದ ಸಂಖ್ಯೆ ಹೆಚ್ಚಳವಾಗಿದಿಯೇ ಇಳಿಮುಖವಾಗಿದಿಯೇ, ಕೆಲವು ಪೊಲೀಸ್ ಅದಿಕಾರಿಗಳ ಮೇಲೆ ಕ್ರಮಜರುಗಿಸಿದರು ಬಗ್ಗೆ ನಿಮ್ಮ ಅನಿಸಿಕೆ?
ಉ: ಅಪರಾದಗಳು ಹೇಳಿ ಕೇಳಿ ಬರುವಂತಹದ್ದಲ್ಲ, ಕೆಲವೆಡೆ ಸುಳ್ಳು ಪ್ರಕರಣಗಳು ದಾಖಲಾಗುತ್ತದೆ ಪರಿಶೀಲಸಿ ಕ್ರಮ ಕೈಗೊಳ್ಳಬೇಕು ಎಂದರು. ಕಾನೂನು ಎಲ್ಲರಿಗೂ ಒಂದೆ ನಮ್ಮ ಇಲಾಖೆಯಲ್ಲಿ ತಪ್ಪು ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಬಾರದು ಎಂದೆನಿಲ್ಲವಲ್ಲ ಎಂದರು.
ಒಟ್ಟಾರೆ ಒಂದು ವರ್ಷದ ಅವದಿಯಲ್ಲಿ ರಜೆಯನ್ನೆ ಹಾಕದೇ ತೂಗುಕತ್ತಿಯ ಮೇಲೆ ನಡೆದು ಅವರದ್ದೇ ಇಲಾಖೆಯಲ್ಲಿರುವ ಓರ್ವ ಸಬ್ ಇನ್ಸ್‍ಪೆಕ್ಟರ್ , ಐದಾರು ಪೇದೆಗಳನ್ನು ಅಮಾನತು, ಹಾಗೂ ಓರ್ವ ಪೇದೆಯನ್ನು ಸಂಪೂರ್ಣ ವಜಾ ಮಾಡುವ ಮೂಲಕ ಕಾರ್ಯ ದಕ್ಷತೆ ತೋರಿದ್ದಾರೆ
***************************************************************************
hats up to for real hero
ReplyDelete