ನ್ಯೂ ಬೀಟ್ ಸಿಸ್ಟಂ…ಹಾಗಂದ್ರೇನು..? ಪ್ರತಿಯೊಬ್ಬಸಾರ್ವಜನಿಕ ಗಮನಕ್ಕೆ
ಸುದ್ದಿ ಓದಿದ ಮೇಲೆ ಶೇರ್ ಮಾಡುವುದನ್ನು ಮರೆಯಬೇಡಿ..ನಿಮ್ಮ ಬೀದಿಗೆ ಬಂದಾಗ ಪೋಲೀಸರೊಂದಿಗೆ ಸಹಕರಿಸಿ, ನಿಮ್ಮ ರಕ್ಷಣೆಯೇ ಅವರ ಹೊಣೆ:
ಸೂಚನೆ *ಇಲಾಖಾ ಸಿಬ್ಬಂದಿಗಳು ಸಹಕರಿಸದೇ ಇದ್ದರೆ, ಕಾನೂನು ಸುವ್ಯವಸ್ಥೇಗೆ ಸಂಬಂದಿಸಿದ ದೂರುಗಳಿದ್ದರೆ , ಎಸ್ಪಿ ಅವರ ವಾಟ್ಸಾಪ್ ದೂರು ಸಂಖ್ಯೆ (9480804600) ಕಳುಯಿಸಿ.. ಅನಗತ್ಯ ಮಾಯಿತಿಯನ್ನಲ್ಲ.*
ಚಾಮರಾಜನಗರ: ರಾಜ್ಯಾದಾದ್ಯಂತ ಪೊಲೀಸ್ ಇಲಾಖೆ 25-04-2017 ರಂದು ಎಡಿಜಿಪಿ (ಎಲ್&ಓ) ಜಾರಿಗೆ ತಂದಿರುವ ನ್ಯೂ ಬೀಟ್ ಸಿಸ್ಟಂ ಚಾಮರಾಜನಗರದಲ್ಲಿ ಈಗಾಗಲೇ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.
ಚಾಮರಾಜನಗರದ ಐದು ತಾಲ್ಲೂಕುಗಳು ಸೇರಿದಂತೆ ಸಂಚಾರ ಠಾಣೆ ಮತ್ತು ಮಹಿಳಾ ಠಾಣೆ ಸೇರಿದಂತೆ ವಿವಿದೆಡೆ ಠಾಣಾ ಸಿಬ್ಬಂದಿಗಳಿಗೆ ಅನುಗುಣವಾಗಿ ಪೋಲೀಸ್ ವರೀಷ್ಠಾಧಿಕಾರಿಗಳು 720 ಬೀಟ್ ವ್ಯವಸ್ಥೆ ಮಾಡಿದ್ದಾರೆ.
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರದ ಐದು ತಾಲ್ಲೂಕುಗಳು ಸೇರಿದಂತೆ ಸಂಚಾರ ಠಾಣೆ ಮತ್ತು ಮಹಿಳಾ ಠಾಣೆ ಸೇರಿದಂತೆ ವಿವಿದೆಡೆ ಠಾಣಾ ಸಿಬ್ಬಂದಿಗಳಿಗೆ ಅನುಗುಣವಾಗಿ ಪೋಲೀಸ್ ವರೀಷ್ಠಾಧಿಕಾರಿಗಳು 720 ಬೀಟ್ ವ್ಯವಸ್ಥೆ ಮಾಡಿದ್ದಾರೆ.
ಚಾಮರಾಜನಗರ ಪಟ್ಟಣ ಠಾಣೆಯಲ್ಲಿ 56 ಬೀಟ್, ಚಾಮರಾಜನಗರ ಗ್ರಾಮಾಂತರ ಠಾಣೆಯಲ್ಲಿ 48 ಬೀಟ್,ಚಾಮರಾಜನಗರ ಪೂರ್ವ ಠಾಣೆಯಲ್ಲಿ 50 ಬೀಟ್,ಗುಂಡ್ಲುಪೇಟೆ ಠಾಣೆಯಲ್ಲಿ 50 ಬೀಟ್,ಬೇಗೂರು ಠಾಣೆಯಲ್ಲಿ 26 ಬೀಟ್,ತೆರಕಣಾಂಬಿ ಠಾಣೆಯಲ್ಲಿ 32 ಬೀಟ್,ಕುದೇರು ಠಾಣೆಯಲ್ಲಿ 27 ಬೀಟ್,ಸಂತೇಮರಳ್ಳಿ ಠಾಣೆಯಲ್ಲಿ 27 ಬೀಟ್,ಯಳಂದೂರು ಠಾಣೆಯಲ್ಲಿ 38 ಬೀಟ್,ಅಗರ ಮಾಂಬಳ್ಳಿ ಠಾಣೆಯಲ್ಲಿ 32 ಬೀಟ್ ಮಾಡಲಾಗಿದೆ.ಕೊಳ್ಳೆಗಾಲ ಪಟ್ಟಣ ಠಾಣೆಯಲ್ಲಿ 55 ಬೀಟ್,ಕೊಳ್ಳೆಗಾಲ ಗ್ರಾಮಾಂತರ ಠಾಣೆಯಲ್ಲಿ 54 ಬೀಟ್,ಹನೂರು ಠಾಣೆಯಲ್ಲಿ 49 ಬೀಟ್,ರಾಮಾಪುರ ಠಾಣೆಯಲ್ಲಿ 49 ಬೀಟ್,ಮಹದೇಶ್ವರ ಬೆಟ್ಟ ಠಾಣೆಯಲ್ಲಿ 49 ಬೀಟ್,ಸಂಚಾರ ಠಾಣೆಯಲ್ಲಿ 38 ಬೀಟ್,ಮಹಿಳಾ ಠಾಣೆಯಲ್ಲಿ 40 ಬೀಟ್ ಮಾಡಲಾಗಿದ್ದು ಒಟ್ಟು 720 ಬೀಟ್ ಮಾಡಲಾಗಿದೆ.
ಬೀಟ್ ಬಗ್ಗೆ ಪ್ರತಿಕ್ರಿಯಿಸಿರುವ ಪೋಲೀಸ್ ವರೀಷ್ಠಾದಿಕಾರಿ ದರ್ಮೆಂದ್ರ ಕುಮಾರ್ ಮೀನಾ ಅವರ ಕೆಲವು ಸಂದರ್ಶನ ಮಾತುಗಳು ಇಲ್ಲಿದೆ.
ಪ್ರ: 1) ಬೀಟ್ ವ್ಯವಸ್ಥೆ ಮಾಡಿರುವ ಉದ್ದೇಶವೇನು.?
ಉ: ಬೀಟ್ ವ್ಯವಸ್ಥೆಯಿಂದ ನೇರ ಮನೆ ಬಾಗಿಲಿಗೆ ಸೇವೆ ವ್ಯವಸ್ಥೆ ಹಾಗೂ ಜನಸ್ನೇಹಿ ಉದ್ದೇಶ ಪ್ರಮುಖವಾಗಿದೆ.ಪಾಸ್ ಪೋರ್ಟ್ ಸೇವೆ, ವೆರಿಫಿಕೇಷನ್ ಸೇರಿದಂತೆ ಇನ್ನಿತರ 10, 15 ಸೇವೆಗಳು ನೇರ ಮನೆ ಬಾಗಿಲಿಗೆ ಸೇವೆಗಳು ಹೋಗಲಿದೆ.ಪ್ರ: 2) ಯಾವ ತರಹದಲ್ಲಿ ಈ ಬೀಟ್ ವ್ಯವಸ್ಥೆ ಕಾರ್ಯನಿರ್ವಹಿಸುತ್ತದೆ.
ಉ: ಪ್ರಮುಖವಾಗಿ ದೂರು ಸಲ್ಲಿಸಲು ದೂರುದಾರರು ಠಾಣೆಗೆ ಹೋಗಬೇಕಿತ್ತು. ಆದರೆ ದೂರು ಕೊಡುವವರ ಮನೆ ಬಾಗಿಲಿಗೆ ನಮ್ಮ ಸೇವೆ ಲಬ್ಯವಾಗಲಿದೆ ಎಂದರು. ಅಲ್ಲಿಗೆ ಓರ್ವ ಪೇದೆ ನೇಮಕವಾಗಿರುತ್ತಾರೆ ಅವರನ್ನು ಬೀಟ್ ಆಫೀಸರ್ ಎಂದು ಕರೆಯಲಾಗುತ್ತದೆ ಅವರ ಮೇಲಂತದಲ್ಲಿ ಓರ್ವ ಮುಖ್ಯ ಪೇದೆ ಇರುತ್ತಾರೆ ಅವರು ಇವರ ಉಸ್ತುವಾರಿ ವಹಿಸಿಕೊಳ್ಳುತ್ತಾರೆಪ್ರ: 3) ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಇಲ್ಲವೇ.?
ಉ: ಈಗಾಗಲೇ ಠಾಣೆಗಳಲ್ಲಿರುವ ಸಿಬ್ಬಂದಿಗೆ ಅನುಗುಣವಾಗಿಯೇ ಬೀಟ್ ವ್ಯವಸ್ಥೆ ಮಾಢಲಾಗಿದೆ. ಇಲ್ಲಿ ಸಿಬ್ಬಂದಿ ಕೊರತೆ ಎನ್ನುವ ಪ್ರಶ್ನೆ ಉದ್ಬವವಾಗುವುದಿಲ್ಲಪ್ರ: 4) ದೂರುಗಳು ನೇರವಾಗಿ ನಿಮ್ಮ ಜಿಲ್ಲಾ ಕಛೇರಿಗೆ ಬಂದರೆ ಅವರ ಮೇಲೆ ಕ್ರಮವೇನು?
ಉ: ಇನ್ನ ಮೇಲಾದಿಕಾರಿಗಳನ್ನೆ ನಂಬಿ ಬರುವುದು ಸಹಜ ಆದರೆ ಬೀಟ್ ವ್ಯವಸ್ಥೆಯಿಂದ ಮುಂದೆ ಅದೆಲ್ಲಾ ಕಡಿಮೆಯಾಗುತ್ತದೆ.ಬೀಟ್ ವ್ಯವಸ್ಥೆಯಲ್ಲಿ ಕೆಳಹಂತದಿಂದ ಮೇಲಿನ ಹಂತದ ವರೆಗೆ ವ್ಯವಸ್ಥೆಯಿದೆ. ಮೊದಲು ಬೀಟ್ ಆಫಿಸರ್, ನಂತರ ಉಸ್ತುವಾರಿ ಹೊತ್ತವರು ನಂತರ ಠಾಣಾ ಸಬ್ ಇನ್ಸ್‍ಪೆಕ್ಟರ್, ನಂತರ ಇನ್ಸ್‍ಪೆಕ್ಟರ್ ಹೀಗೆ ವ್ಯುವಸ್ಥೆ ಹೊಂದಿದೆ. ತಪ್ಪು ಯಾರು ಮಾಡಿದ್ದಾರೆ ಎಂಬುದು ಪ್ರಾಥಮಿಕ ಹಂತದಲ್ಲೇ ಗೊತ್ತಾಗುತ್ತದೆ. ಆವಾಗ ಅಲ್ಲಿಯೇ ಕ್ರಮ ಜರುಗಿಸಲು ಅನುಕೂಲವಾಗಲಿದೆ.
ಪ್ರ: 4) ಬೀಟ್ ವ್ಯವಸ್ಥೆಯಿಂದ ಅಪರಾಧ ಪ್ರಕರಣಗಳು ಕಡಿಮೆಯಾಗುವುದೇ.?
ಉ: ಬೀಟ್ ವ್ಯವಸ್ಥೆಯಿಂದ ಪ್ರಾಥಮಿಕ ಹಂತದಲ್ಲೇ ನಡೆಯುವ ಪ್ರಕರಣಗಳು ಆಯಾ ವಾರ್ಡಿನ ಜನರ ಸಹಕಾರದಿಂದ ಬೀಟ್ ಆಫಿಸರ್ ಪತ್ತೆ ಹಚ್ಚಿ ಮೇಲಾದಿಕಾರಿಗಳ ಗಮನಕ್ಕೆ ತರಲಿರುವುದರಿಂದ ಖಂಡಿತ ಕಡಿಮೆಯಾಗುತ್ತದೆ . ಇದಕ್ಕೆ ಜನರ ಹಾಗೂ ಮಾದ್ಯಮದವರ ಪಾತ್ರ ಅಪಾರ ಅವರೂ ಸಹಕರಿಸಬೇಕು .ಸಂತೇಮರಳ್ಳಿ ವಿಭಾಗ ದಲ್ಲಿ ಸಬ್ ಇನ್ಸ್ ಪೆಕ್ಟ ರ್ ಬಸವರಾಜು ಎಂಬುವವರು ಜನರಿಗೆ ಮಾಹಿತಿ ನೀಡುತ್ತಿರುವುದು. |
ಬಸವೇಶ್ವರ ನಗರಕ್ಕೆ ಸುರೇಶ್, ಸಿದ್ದಾರ್ಥ ನಗರಕ್ಕೆ ನಂದಿನಿ, ಕರಿನಂಜನಪುರ,ಬುದ್ದನಗರ ಸುತ್ತಮುತ್ತ ಶಿವಕುಮಾರ್, ಹೌಸಿಂಗ್ ಬೋರ್ಡ್ ಸುತ್ತಮುತ್ತ ಮಹದೇವಯ್ಯ, ವಿವೇಕನಗರ , ಟಿ.ವಿಎಸ್ ಹಿಂಬಾಗ, ಜಿ.ವಿ.ಸ್ ಹಿಂಬಾಗ ಮಹೇಶ್ ಎಂಬುವವರನ್ನು ನಿಯೋಜಿಸಲಾಗಿದ್ದು ಈ ಎಲ್ಲ ಜವಬ್ದಾರಿಯನ್ನು ಸಂಪೂರ್ಣವಾಗಿ ಶಾಂತರಾಜು ( ಸಂಪರ್ಕಿಸಲು -9449408332) ಎಂಬುವವರು ವಹಿಸಿಕೊಂಡಿರುತ್ತಾರೆ. ಹಾಗಿಯೇ ಉಳಿದಂತೆ ಸುಮಾರು ಎ.ಎಸ್.ಐ ಗಳು ಬೀಟ್ ಗೆ ನಿಯೋ ಜನೆಗೊಂಡಿದ್ದಾರೆ.
ರಾಮಸಮುದ್ರದ ಬೀಟ್ ಆಫಿಷರ್ ಪ್ರಕಾಶ್ ಮಾತನಾಡಿ ಈಗಾಗಲೇ ಹಿರಿಯ ಅದಿಕಾರಿಗಳು ವಹಿಸಿಕೊಟ್ಟ ಕೆಲಸವನ್ನು ಮಾಡುತ್ತಿದ್ದೇವೆ. ಜನರಿಗೆ ಕಾನೂನು ಅರಿವು, ಅಪರಾಧಗಳ ವಿವರ, ಸಾರ್ವಜನಿಕರೊಂದಿಗಿನ ಒಡನಾಟ, ಎಲ್ಲದರ ಬಗ್ಗೆ ಮಾಹಿತಿಯನ್ನು ಸಭೆ ಕರೆದು ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ.
______________________________________________________
REPORTED BY....................
ಹಿಂದಿನ ಎಸ್ಪಿ ಕುಲದೀಪ್ ಅವರೊಂದಿಗೆ ರಾಮಸಮುದ್ರ ಎಸ್.ವೀರಭದ್ರಸ್ವಾಮಿ
_________________ಇನ್ನ ಕೆಲವು ಬದಲಾವಣೆಗಳು ಆಗುವ ಸಾದ್ಯತೆ ಇರುತ್ತದೆ.... ಸಾದ್ಯವಾದರೆ ಪಟ್ಟಣದ ಎಲ್ಲಾ ಬೀಟ್ ಆಫೀಸರ್ ದೂರವಾಣಿ ಸಂಖ್ಯೆ ಸಿಕ್ಕರೆ ಪ್ರಕಟಿಸಲಾಗುವುದು.
No comments:
Post a Comment