ಜೆ.ಎಸ್.ಎಸ್.ಮಹಿಳಾ ಕಾಲೇಜಿನಲ್ಲೆ ನಾಮಕಾವಸ್ಥೆ ಸಿ.ಸಿ.ಕ್ಯಾಮೆರಾ.. ದುಸ್ಥಿತಿಯತ್ತ.!
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಮಹಿಳೆರು ಮತ್ತು ಮಕ್ಕಳ ಹಿತಾರಕ್ಷಣೆಗೆ ಸರ್ಕಾರ ಎಷ್ಟೆ ಕಂಕಣ ಬದ್ದರಾಗಿ ಎಷ್ಟೇ ಯೋಜನೆ ಜಾರಿ ತಂದರೂ ಕೆಲವು ಖಾಸಗೀ ಕಾಲೇಜುಗಳು ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿದೆ ಎಂದರೆ ತಪ್ಪಾಗಲಾರದು.
ಕಡ್ಡಾಯವಾಗಿ ಶಾಲಾ ಕಾಲೇಜುಗಳಲ್ಲಿ ಸಿ.ಸಿ.ಕ್ಯಾಮೆರಾ ಹಾಕಬೇಕೆಂದು ಹೇಳಿದರೂ ಯಾರ ಮಾತು ಕೇಳದೆ ಅಸಡ್ಡೆ ತೋರುತ್ತಿದೆ ಅಂತಹದರಲ್ಲಿ ಚಾಮರಾಜನಗರ ಬಹುತೇಕ ಕಾಲೇಜುಗಳಲ್ಲಿ ಅದರಲ್ಲೂ ದ್ವಿ.ಪಿ.ಯು ಪರೀಕ್ಷಾ ಅವದಿಯಲ್ಲಿ ಸಿ.ಸಿ.ಕ್ಯಾಮೆರಾ ಸುಸ್ಥಿತಿಯಲ್ಲಿ ಇರಲಿಲ್ಲ ಎಂಬುದು ಇಲಾಖೆ ಸ್ಷಷ್ಟಪಡಿಸಿದೆ.
ಚಾಮರಾಜನಗರದ ಜೆ.ಎಸ್.ಎಸ್.ಕಾಲೇಜಿನಲ್ಲಿ ಹಿಂದೆ ಉಪನ್ಯಾಸಕರ ಮೇಲೆ ಹಲ್ಲೆ ನಡೆದರೂ ಕ್ರಮ ಕೈಗೊಳ್ಳಲಿಲ್ಲ. ಉಗ್ರಪ್ಪ ಅವರಿಗೆ ದೂರು ನೀಡಿದಾಗ ಅಂದಿನ ಉಪನಿರ್ದೇಶಕ (ಇಂದು ಮೈಸೂರು) ಸರಿಯಾಗಿ ಎಂದು ಉಗ್ರಪ್ಪ ಅವರಿಗೆ ಕಣ್ಣಿಗೆ ಮಣ್ಣು ಎರಚಿದ್ದರು. ಈಗ ಸ್ಷಷ್ಟವಾಗಿ ಕೆಲವು ಪೋಷಕರು ಆರೋಪಿಸಿರುವಂತೆ ಪರೀಕ್ಷೆ ಕೆಂದ್ರಗಳಲ್ಲಿ ನಕಲು ನಡೆದಿರುವುದನ್ನು ಅಲ್ಲಗಳೆಯುವಂತಿಲ್ಲ ಎಂದರೆ ತಪ್ಪಾಗಲಾರದು.
*******************************************************************************
ದ್ವಿ..ಪಿ.ಯು. ಪರೀಕ್ಷೆ : ಕೇಳಿದ್ದು ಅಂದು , ಆದರೆ ಕೊಟ್ಟಿದ್ದು ಇಂದು.!
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಇತ್ತೀಚೆಗಷ್ಟೇ ದ್ವೀ.ಪಿ.ಯು ಪರೀಕ್ಷೆ ಸೋರಿಕೆ ಎಂಬ ಪದವನ್ನೆ ಕಾಣದೇ ಎಲ್ಲೆಡೆ ಯಶಸ್ವಿಯಾಗಿ ಪರೀಕ್ಷೆಗಳು ನಡೆದವು. ಆದರೆ ರಾಯುಚೂರಿನ ಕಾಲೇಜೊಂದರಲ್ಲಿ ಕೆಲವು ಉಪನ್ಯಾಸಕರ ಆಟೋಪಗಳಿ ಬಿಟ್ಟರೆ ಸದ್ದಿಲ್ಲದೇ ಯಶಶ್ವಿಯಾಗಿ ನಡೆದವು. ಚಾಮರಾಜನಗರ ಕೆಲವು ಕೇಂದ್ರದಲ್ಲಿ ಆಯಾ ವಿಷಯಗಳಿಗೆ ಸಂಬಂದಿಸಿದ ಉಪನ್ಯಾಸಕರು ಬರುವಂತಿಲ್ಲ ಎಂದ ಆದೇಶವಿದ್ದರೂ ಕೆಲವೆಡೆ ಬರುತ್ತಿದ್ದರು ಎಂಬ ಆರೋಪಗಳು ಕೆಳಿಬಂದಿದ್ದವು. ಇದರ ಮಾಹಿತಿ ಬೆನ್ನಟ್ಟಿದ್ದಾಗ ಗಂಟೆಗೊಂದು ಉತ್ತರ ನೀಡಿದ್ದರಿಂದ ಮಾಹಿತಿ ಹಕ್ಕು ಅರ್ಜಿದಾರ ಸಿ.ಸಿ.ಕ್ಯಾಮೆರಾ, ಉಪನ್ಯಾಸಕರ ಬಗ್ಗೆ ಪರೀಕ್ಷೆ ನಡೆಯುವಾಗ ಎಲ್ಲೆಲ್ಲಿ ಎಂದು ಮಾಹಿತಿ ಕೇಳಿದರು. ಆದರೆ ಇಲಾಖೆ ಪರೀಕ್ಷೆ ಮುಗಿದ ಮೇಲೆ ( ರೈಲು ಹೋದ ಮೇಲೆ ಟಿಕೇಟ್ ನೀಡಿದಂತೆ) ಏಪ್ರಿಲ್ 12 ರಂದು ಮಾಹಿತಿ ನೀಡಿದ್ದಾರೆ.
ಇದೇ ನೋಡಿ ಬಹುಶಃ ಅಧಿಕಾರಿಗಳ ನಿಲ್ರ್ಯಕ್ಷ್ಯತೆಯೋ, ಎಲ್ಲಿ ತಪ್ಪು ಒಪ್ಪು ಸಿಗುವುದೋ ಎಂದು ಅಂದು ಮಾಹಿತಿ ನೀಡಿದೆ ಇಂದು ನೀಡಿದ್ದಾರೆ.
****************************************************************
No comments:
Post a Comment