Friday, 7 April 2017

07-04-2017 ಯಾರ್ದೋ ದುಡ್ಡು ಎಲ್ಲಮ್ಮನ ಜಾತ್ರೆ.! ವಿವಿದೆಡೆ ದಾಳಿ, ಹರಿದಾಡುತ್ತಿದ್ದ ಕಾಂಚಾಣಕ್ಕೆ ಕೊಕ್ಕೆ ಹಾಕಿದ ಅದಿಕಾರಿಗಳು, ಮತಗಟ್ಟೆ ಸುತ್ತಲ 100 ಮೀ ವ್ಯಾಪ್ತಿಯಲ್ಲಿ ಮತಯಾಚನೆ ನಿಷೇಧ

    ಗುಂಡ್ಲುಪೇಟೆಡ ರಂಗೇರಿದ ಚುನಾವಣೆ, ಯಾರ್ದೋ ದುಡ್ಡು ಎಲ್ಲಮ್ಮನ ಜಾತ್ರೆ.!                    ವರದಿ ; ರಾಮಸಮುದ್ರ ಎಸ್.ವೀರಭದ್ರಸ್ವಾಮಿ

ಗುಂಡ್ಲುಪೇಟೆ :( ಚಾಮರಾಜನಗರ)  ಖಾಸಗಿ ಹೊಟೇಲ್ ಬಳಿಯಲ್ಲಿ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ನಿರ್ದೇಶಕರೊಬ್ಬರ ಕಾರಿನಲ್ಲಿ ಲಕ್ಷಾಂತರ ರೂ.ನಗದು ಪತ್ತೆಯಾಗಿದ್ದು, ಇದು ಯಾವ ಪಕ್ಷಕ್ಕೆ ಸೇರಿದೆ ಎಂದು ವಿಚಾರಣೇ ಮಾಢಲಾಗುತ್ತಿದೆ. ಈ ಹಣ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ್ದಿರಬಹುದೆಂದು ಅನುಮಾನಿಸಲಾಗಿದೆ.. ಗುಂಡ್ಲುಪೇಟೆಯ ಖಾಸಗಿ ಹೊಟೇಲ್ ಮುಂದೆ ನಿಂತಿದ್ದ ಈ ಕಾರಿನಲ್ಲಿ ಎರಡುಸಾವಿರ ಮುಖಬೆಲೆಯ ಹತ್ತು ಕಂತೆ ಪತ್ತೆಯಾಗಿದೆ. ಇದರಲ್ಲಿ ಸುಮಾರು 20 ಲಕ್ಷರೂ ಹಣ ಇರಬಹುದೆಂದು ಅಂದಾಜಿಸಲಾಗಿದೆ. ಬಿಜೆಪಿ ಕಾರ್ಯಕರ್ತರು ಕಾರ್ಯಚಾರಣೆ ನಡೆಸಿ ಹಣ ಪತ್ತೆ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ. ಗುಂಡ್ಲುಪೇಟೆ ಪಟ್ಟಣ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಕಮಲದ ಕಾರ್ಯಕರ್ತರು 4.5 ಲಕ್ಷದಷ್ಟು ಹಣವನ್ನು ಠಾಣೆಗೆ  ತಂಧಿಟ್ಟರೆ  ಅವರು 12 ಸಾವಿರ ನೊಂದಣಿ ಮಾಡಿಕೊಂಡಿದ್ದರು ಎನ್ನಲಾಗಿದೆ ಇದನ್ನು ಪ್ರಶ್ನಿಸಿದವರ ಮೇಲೆ ಮಲ್ಲು ಮತ್ತು ವೆಂಕಟೇಶ್ ಎಂಬ ಪೇದೆಗಳು ಗಲಾಟೆ ಮಾಡಿ ಮೊಬೈಲ್ ಅಲ್ಲಿ ರೆಕಾರ್ಡ್ ಮಾಡಿದ್ದ ವಿಡಿಯೋ ತುಣುಕನ್ನು ಡಿಲಿಟ್ ಮಾಡಿದ್ದಾರೆ ಎಂದು ವಿದ್ಯುನ್ಮಾನ ಮಾದ್ಯಮಗಳು ವರದಿ ಮಾಡಿದೆ.  

  ಹಣದ ಆಮಿಷ : ಪ್ರಕರಣ ದಾಖಲು 

ಚಾಮರಾಜನಗರ ಏಪ್ರಿಲ್ 7, :- ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಏಪ್ರಿಲ್ 6 ರಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಘಟಕದ ಲಕ್ಷ್ಮಿ ಹೆಬ್ಬಾಳ್‍ಕರ್ ಅವರು ಅಣ್ಣೂರುಕೇರಿ ಗ್ರಾಮದಲ್ಲಿ ಹಣದ ಆಮಿಷ ಒಡ್ಡಿ ಕಾಂಗ್ರೆಸ್ ಪರ ಮತಯಾಚನೆ ಮಾಡುತ್ತಿರುವುದಾಗಿ ಬಿ.ಜೆ.ಪಿ. ಅಭ್ಯರ್ಥಿಯ ಏಜೆಂಟ್‍ರಾದ ವೈ.ಎಸ್. ಅಭೀಷೇಕ್ ಕುಮಾರ್, ಅವರು ಮಾಹಿತಿ ನೀಡಿದ ಮೇರೆಗೆ ಟಿ.ವಿ.ಮಾಧ್ಯಮದಲ್ಲಿ ಪ್ರಕಟವಾಗಿರುವ ವರದಿ ಆಧÀರಿಸಿ ಪ್ರಕರಣ ದಾಖಲಿಸಲಾಗಿದೆ. 
ಮಾರ್ಚ್ 6 ರಂದು ಅನುಮತಿ ಪಡೆಯದೆ ದ್ವಿಚಕ್ರ ವಾಹನದಲ್ಲಿ ಮತಯಾಚನೆ ಮಾಡುತ್ತಿದ್ದ ಬಗ್ಗೆ ದ್ವಿಚಕ್ರ ವಾಹನ ಸವಾರನ್ನು ಪ್ರಶ್ನಿಸಿದಾಗ ಬೈಕ್ ಬಿಟ್ಟು ಓಡಿ ಹೋಗಿದ್ದು ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬೈಕ್‍ನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳುವ ಕಾರ್ಯ ಅಬಕಾರಿ ಅಧಿಕಾರಿಗಳಿಂದ ಮುಂದುವರಿದಿದ್ದು
ಚಾಮರಾಜನಗರ ತಾಲ್ಲೂಕು ಮಂಗಲ ಗ್ರಾಮದಲ್ಲಿ ನಂಜುಂಡ ಎಂಬುವರಿದ 0.720 ಮಿ.ಲೀ, ಮರಿಯಾಲಹುಂಡಿ ಗ್ರಾಮದಲ್ಲಿ 0.630 ಮಿ.ಲೀ,ವಶಕ್ಕೆ ತೆಗೆದುಕೊಳ್ಳಲಾಗಿದೆ.
ಗುಂಡ್ಲುಪೇಟೆ ತಾಲ್ಲೂಕು ಹಂಗಲ ಗ್ರಾಮದಲ್ಲಿ ದ್ವಿಚಕ್ರ ವಾಹನದಲ್ಲಿ ಸಾಗಣೆ ಮಾಡಲಾಗುತ್ತಿದ್ದ 25.920 ಲೀ, ಮದ್ಯ ವಶಪಡಿಸಿಕೊಳ್ಳಲಾಗಿದೆ.
ದಾರಿಬೇಗೂರು ಗ್ರಾಮದಲ್ಲಿ ದ್ವಿಚಕ್ರ ವಾಹನದಲ್ಲಿ ತಪಾಸಣೆ ನಡೆಸಿದ ವೇಳೆ 4 ಬಾಕ್ಸ್‍ಗಳಲ್ಲಿ 48 ಪೌಚ್ ರಾಯಲ್ ಲೆನ್ಸರ್ ಇರುವುದು ಕಂಡುಬಂದಿದ್ದು ಪ್ರಕರಣ ದಾಖಲಿಸಲಾಗಿದೆ ಎಂದು ಚುನಾವಣಾಧಿಕಾರಿ ನಳಿನ್ ಅತುಲ್ ಅವರು  ತಿಳಿಸಿದ್ದಾರೆ.


                ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆ :
                   ಹದಿನೇಳು ಲಕ್ಷ ಅರವತ್ತು ನಾಲ್ಕು ಸಾವಿರ ವಶ

ಚಾಮರಾಜನಗರ ಏಪ್ರಿಲ್ 7, :- ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ತಪಾಸಣೆಯನ್ನು ತೀವ್ರಗೊಳಿಸಿರುವ ಅಧಿಕಾರಿಗಳು ಪಟ್ಟಣದ ಗೇಟ್ ವೇ ಆಫ್ ಕರ್ನಾಟಕ ಹೋಟೆಲ್ ಬಳಿ ವಾಹನಯೊಂದರಲ್ಲಿ ಇದ್ದ  17,64000 (ಹದಿನೇಳು ಲಕ್ಷ ಅರವತ್ತು ನಾಲ್ಕು ಸಾವಿರ ರೂ) ಗಳನ್ನು ವಶಪಡಿಸಿಕೊಂಡಿದ್ದಾರೆ.
ಸದರಿ ವಾಹನದಲ್ಲಿ ನಿರ್ದೇಶಕರು ಕರ್ನಾಟಕ ವಾಯುವ್ಯ ಸಾರಿಗೆ ಎಂಬ ನಾಮಫಲಕವಿದ್ದು ಮುಂದಿನ ಕ್ರಮ ತೆಗೆದುಕೊಳ್ಳಲಾಗಿದೆ.

                  ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆ :
ಹಿರಿಕಾಟಿ ಚೆಕ್‍ಪೋಸ್ಟ್ ಬಳಿ ಮೂರು ಲಕ್ಷದ ಹದಿನಾಲ್ಕು ಸಾವಿರದ ರೂ.ವಶ


ಚಾಮರಾಜನಗರ ಏಪ್ರಿಲ್ 7, :- ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ತಪಾಸಣೆಯನ್ನು ತೀವ್ರಗೊಳಿಸಿರುವ ಅಧಿಕಾರಿಗಳು ಹಿರಿಕಾಟಿ ಚೆಕ್ ಪೋಸ್ಟ್ ಬಳಿ ಬಿ.ಜೆ.ಪಿ ಕಾರ್ಯಕರ್ತರಾದ ಬಸವರಾಜು ಎಂಬುವರಿಂದ  ಮೂರು ಲಕ್ಷದ ಹದಿನಾಲ್ಕು ಸಾವಿರದ ಆರನೂರು ಮೂವತ್ತು ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.
ಕೆ.ಎ.02- ಎಂ.ಟಿ. 22 ನೋಂದಣಿ ಸಂಖ್ಯೆ ಕೆಂಪು ಬಣ್ಣದ ಸ್ಕಾರ್ಪಿಯೋ ವಾಹನದಲ್ಲಿ ಇದ್ದ ಹಣವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
            *********************************

         ಮತಗಟ್ಟೆ ಸುತ್ತಲ 100 ಮೀ ವ್ಯಾಪ್ತಿಯಲ್ಲಿ ಮತಯಾಚನೆ ನಿಷೇಧ 

 ಚಾಮರಾಜನಗರ ಏಪ್ರಿಲ್ 7, - ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆ ಮತದಾನವು ಏಪ್ರಿಲ್ 9 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದ್ದು ಮತಗಟ್ಟೆಯ (ಮತದಾನ ಕೇಂದ್ರ, ಸಾರ್ವಜನಿಕ ಸ್ಥಳ/ಖಾಸಗಿ ಸ್ಥಳ) ಸುತ್ತಲ 100 ಮೀ ಅಂತರದಲ್ಲಿ (ಒಳಗಡೆ) ಮತದಾರರ ಬಳಿ ಮತಯಾಚನೆ ಹಾಗೂ ಚುನಾವಣಾ ಪ್ರಚಾರ ಮಾಡುವಂತಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ರಾಮು ತಿಳಿಸಿದ್ದಾರೆ.
ಪ್ರಜಾ ಪ್ರತಿನಿಧಿ ಕಾಯ್ದೆ 1951 ರ ಕಲಂ 130 ರ ಪ್ರಕಾರ ಮತದಾನದ ಅವಧಿಯಲ್ಲಿ ಯಾವುದೇ ವ್ಯಕ್ತಿ, ರಾಜಕೀಯ ಪಕ್ಷ, ಉಮೇದುವಾರರು ಚುನಾವಣೆ ಕಣದಲ್ಲಿರುವ ಯಾವುದೇ ಅಭ್ಯರ್ಥಿಗೆ ಮತ ಹಾಕುವಂತೆ ಮತದಾರರನ್ನು ಕೇಳುವುದು ಹಾಗೂ ವಿನಂತಿಸಿಕೊಳ್ಳುವಂತಿಲ್ಲ. ಚುನಾವಣಾ ಪ್ರಚಾರ, ಅಭ್ಯರ್ಥಿಗಳ ಪರ ಯಾವುದೇ ರೀತಿಯಲ್ಲಿ ಮತಯಾಚನೆ ಮಾಡುವಂತಿಲ್ಲ. ಮತದಾರರಿಗೆ ಸಾರ್ವಜನಿಕರಿಗೆ ಯಾವುದೇ ನಿರ್ದಿಷ್ಟ ಅಭ್ಯರ್ಥಿಗೆ ಮತ ಹಾಕದಂತೆ ಪ್ರೇರೇಪಿಸುವಂತಿಲ್ಲ. ಮತದಾರರಿಗೆ ಮತ ಹಾಕುವಂತೆ ಪ್ರೇರೇಪಿಸುವಂತಿಲ್ಲ ಅಥವಾ ಒತ್ತಡ ಹೇರುವಂತಿಲ್ಲ. ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ರಾಜಕೀಯ ಪಕ್ಷಗಳ ನೋಟಿಸ್ ಅಥವಾ ಚಿಹ್ನೆಗಳನ್ನು ಪ್ರದರ್ಶಿಸಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಬಾರದು.
ಈ ಎಲ್ಲಾ ಸೂಚನೆಗಳನ್ನು ಪಾಲಿಸದೇ ಕಾಯ್ದೆ ಕಲಂಗಳನ್ನು ಉಲ್ಲಂಘಿಸಿದಲ್ಲಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ರಾಮು ತಿಳಿಸಿದ್ದಾರೆ.

*****************************************************************


No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು