Sunday, 2 April 2017

02-04-2017 ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆ : ಅನುಮತಿ ಪಡೆಯದ ವಾಹನಗಳ ವಶ- ಎಂ.ಎಸ್.ಐ.ಎಲ್. ಅಂಗಡಿ ಪರಿಶೀಲನೆ, ಪಲ್ಸ್ ಪೋಲಿಯೋ ಲಸಿಕಾ ಆಭಿಯಾನಕ್ಕೆ ಡಿ.ಹೆಚ್.ಓ ಡಾ|| ಪ್ರಸಾದ್ ರವರಿಂದ ಚಾಲನೆ


ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆ : ಅನುಮತಿ ಪಡೆಯದ ವಾಹನಗಳ ವಶ- ಎಂ.ಎಸ್.ಐ.ಎಲ್. ಅಂಗಡಿ ಪರಿಶೀಲನೆ, 

     ಚಾಮರಾಜನಗರ, ಎಪ್ರಿಲ್. 2 - ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಏಪ್ರಿಲ್ 1 ರಂದು ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಅವರು ಚುನಾವಣಾ ಪ್ರಚಾರದ ರೋಡ್ ಶೋ ನಡೆಸುವ ವೇಳೆ ಅನುಮತಿ ಪಡೆಯದ ವಿವಿಧ ವಾಹನಗಳನ್ನು ಅಮಾನತು ಮಾಡಿಕೊಂಡು ದೂರು ದಾಖಲಿಸಲಾಗಿದೆ. 

      ಹೊಂಗಳ್ಳಿ ಗ್ರಾಮದಲ್ಲಿ ರೋಡ್ ಶೋ ನಡೆಸುವ ಸಂದರ್ಭದಲ್ಲಿ ಪ್ರಚಾರಕ್ಕೆ ಅನುಮತಿ ಪಡೆಯದ ಒಂದು ಮಾರುತಿ, ಒಂದು ಸ್ವಿಪ್ಟ್ ಕಾರು, ನಾಲ್ಕು ಇನೋವಾ ಕಾರು, ಒಂದು ಟಾಟಾ ಡೇಸ್ಟ್ ಕಾರು, ಒಂದು ಹೀರೊ ಹೊಂಡಾ ಬೈಕ್, ಅಮಾನತು ಮಾಡಿಕೊಳ್ಳಲಾಗಿದೆ. 

ಹೊನ್ನಶೆಟ್ಟರಹುಂಡಿ ಗ್ರಾಮದಲ್ಲಿ ರೋಡ್ ಶೋ ನಡೆಸುವ ಸಂದರ್ಭದಲ್ಲಿ ಪ್ರಚಾರಕ್ಕಾಗಿ ಅನುಮತಿ ಪಡೆಯದ ಒಂದು ಇನೋವಾ ಕಾರು, ಬರಗಿ ಗ್ರಾಮದಲ್ಲಿ ಒಂದು ಮಾರುತಿ ಸ್ವಿಪ್ಟ್ ಕಾರು, ಟಾಟಾ ಇಂಡಿಕಾ, ಮಹೇಂದ್ರ ಟಿಯುವಿ, ಇನೋವಾ, ಹೋಂಡಾ ಸಿಟಿ, ಫಾರ್ಚುನಾರ್ ಹಾಗೂ ಒಂದು ಡಿಸ್ಕವರ್ ಮೋಟರ್ ಬೈಕ್ ಅಮಾನತು ಮಾಡಿಕೊಳ್ಳಲಾಗಿದೆ. ವಾಹನಗಳಿಗೆ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ದೂರು ದಾಖಲಿಸಲಾಗಿದೆ.

ಏಪ್ರಿಲ್ 1 ರಂದು ಬೆಳಿಗ್ಗೆ 10.30 ಗಂಟೆ ಸಮಯದಲ್ಲಿ ಗುಂಡ್ಲುಪೇಟೆ ಪಟ್ಟಣದ ಕಾಂಗ್ರೆಸ್ ಕಚೇರಿ ಬಳಿ ನೀತಿ ಸಂಹಿತೆ ಉಲ್ಲಂಘಿಸಿ ಉಪ ಚುನಾವಣಾ ಮತ ಪ್ರಚಾರಕ್ಕೆ ಮೂರು ಕಾರನ್ನು ಬಳಸಲಾಗಿದೆ ಎಂದು ಫೈಯಿಂಗ್ ಸ್ವಾಡ್ ತಂಡ ಅಧಿಕಾರಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರು ಮಾಲಿಕರ ವಿರುದ್ಧ ನೀತಿ ಸಂಹಿತೆ ಉಲ್ಲಘನೆ ದೂರು ದಾಖಲಿಸಲಾಗಿದೆ. ಎಂದು ಚುನಾವಣಾ ಅಧಿಕಾರಿ ನಲಿನ್ ಅತುಲ್ ಅವರು ತಿಳಿಸಿದ್ದಾರೆ. 

ಅಬಕಾರಿ ಅಧಿಕಾರಿಗಳು ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಸಂಗ್ರಹಣೆ ವಿರುದ್ಧ ದಾಳಿ ಮುಂದುವರೆಸಿದ್ದಾರೆ. ಗುಂಡ್ಲುಪೇಟೆ ನೇನೆಕಟ್ಟೆ ಗ್ರಾಮದ ಮಲ್ಲಿಕಾರ್ಜುನ ಎಂಬುವರಿಂದ 1.080 ಮಿ.ಲೀ, ಕೊಳ್ಳೇಗಾಲ ತಾಲ್ಲೂಕು ಮುಳ್ಳೂರು ಗ್ರಾಮದ ಮಾದಯ್ಯ ಎಂಬುವರಿಂದ 0.180 ಲೀ, ಚಾಮರಾಜನಗರ ತಾಲ್ಲೂಕು ಗಂಗವಾಡಿ ಗ್ರಾಮದ ಮಹದೇವ ಆಲಿಯಸ್ ಕರಿ ಮಹದೇವ ಎಂಬುವರಿಂದ 0.450 ಮಿ.ಲೀ, ಗೋಪಾಲ ಅವರಿಂದ 0.540 ಮಿ.ಲೀ, ಮದ್ಯ ವಶಪಡಿಸಿಕೊಳ್ಳಲಾಗಿದೆ. 

ಚಾಮರಾಜನಗರ ತಾಲ್ಲೂಕು ಹೆಗ್ಗವಾಡಿ ಗ್ರಾಮದಲ್ಲಿ ಎಂ.ಎಸ್.ಐ.ಎಲ್.ಅಂಗಡಿಯಲ್ಲಿ ತಪಾಸಣೆ ನಡೆಸಿ ಲೆಕ್ಕದ ಪುಸ್ತಕ ಪರಿಶೀಲಿಸಿದಾಗ ದಾಸ್ತಾನು ತಾಳೆಯಾಗದಿರುವುದು ಕಂಡುಬಂದಿದೆ. ಮಾರಾಟವಾದ ಮದ್ಯಕ್ಕೆ ನಗದು ರಶೀದಿ ಇಡದಿರುವುದು, ದರಪಟ್ಟಿ ಪ್ರದರ್ಶಿಸದೆ ಇರುವುದು ಕಂಡುಬಂದಿದ್ದು, ಎಫ್.ಐ.ಆರ್. ದಾಖಲಿಸಲಾಗಿದೆ. ಎಂದು ಚುನಾವಣಾ ಅಧಿಕಾರಿ ನಲಿನ್ ಅತುಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  


          ಮತದಾನದ ವೇಳೆ ಹಾಜರುಪಡಿಸಬೇಕಾದ ದಾಖಲೆಗಳು  

     ಚಾಮರಾಜನಗರ, ಎಪ್ರಿಲ್. 2:- ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಏಪ್ರಿಲ್ 9 ರಂದು ಮತದಾನ ನಡೆಯಲಿದೆ ಮತದಾನ ವೇಳೆಯಲ್ಲಿ ಮತದಾರರ ಗುರುತಿನ ಚೀಟಿ (ಎಪಿಕ್) ಹಾಜರುಪಡಿಸಬೇಕು. ಇಲ್ಲವಾದಲ್ಲಿ ಪಾಸ್‍ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಕೇಂದ್ರ ರಾಜ್ಯ ಸರ್ಕಾರ, ಪಿ.ಎಸ್,ಯು, ಪಬ್ಲಿಕ್ ಲಿಮಿಟೆಡ್ ಕಂಪನಿ ನೀಡಿರುವ ಸೇವಾ ಗುರುತಿನ ಚೀಟಿ, ಭಾವಚಿತ್ರವುಳ್ಳ ಬ್ಯಾಂಕ್ ಅಂಚೆ ಕಚೇರಿ ಪಾಸ್‍ಬುಕ್, ಪಾನ್‍ಕಾರ್ಡ್, ಎನ್.ಪಿ.ಆರ್. ಅಡಿ ಆರ್.ಜಿ.ಐ. ನೀಡಿರುವ ಸ್ಮಾರ್ಟ್‍ಕಾರ್ಡ್, ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ನರೇಗಾ) ಜಾಬ್ ಕಾರ್ಡ್, ಕಾರ್ಮಿಕ ಸಚಿವಾಲಯದ ಯೋಜನೆಯಡಿ ವಿತರಿಸಿರುವ ಆರೋಗ್ಯ ವಿಮೆ ಕಾರ್ಡ್, ಭಾವಚಿತ್ರವುಳ್ಳ ಪಿಂಚಣಿ ದಾಖಲೆ, ಚುನಾವಣಾ ಆಯೋಗ ನೀಡಿರುವ ಅಧಿಕೃತ ಪೋಟೋ ವೋಟರ್ ಸ್ಲಿಪ್, ಎಂ.ಪಿ, ಎಂ.ಎಲ್.ಎ, ಎಂ.ಎಲ್.ಸಿ ಅವರಿಗೆ ನೀಡಿರುವ ಅಧಿಕೃತ ಗುರುತಿನ ಪತ್ರ, ಆಧಾರ್ ಕಾರ್ಡ್ ಪೈಕಿ ಒಂದನ್ನು ಹಾಜರುಪಡಿಸಿ ಮತದಾನ ಮಾಡಬಹುದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಬಿ.ರಾಮು ಅವರು  ತಿಳಿಸಿದ್ದಾರೆ.

ಏಪ್ರಿಲ್ 5 ರಂದು ನಗರದಲ್ಲಿ ಡಾ.ಬಾಬು ಜಗಜೀವನರಾಮ್ ಜನ್ಮ ದಿನಾಚರಣೆ ಕಾರ್ಯಕ್ರಮ.

     ಚಾಮರಾಜನಗರ, ಎಪ್ರಿಲ್. 2 - ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಹಸಿರು ಕ್ರಾಂತಿಯ ಹರಿಕಾರ ರಾಷ್ಟ್ರ ನಾಯಕ ಹಾಗೂ ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರ 110 ನೇ ಜನ್ಮದಿನಾಚಣೆ ಕಾರ್ಯಕ್ರಮವನ್ನು ಏಪ್ರಿಲ್ 5 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಜಿಲ್ಲಾಧಿಕಾರಿ ಬಿ.ರಾಮು ಅವರು ಸಮಾರಂಭ ಉದ್ಘಾಟಿಸುವರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್‍ಕುಮಾರ್ ಆರ್. ಜೈನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಮೈಸೂರು ವಿ.ವಿ.ಯ ಡಾ.ಬಾಬು ಜಗಜೀವನರಾಮ್ ಅಧ್ಯಯನ ಕೇಂದ್ರದ ನಿವೃತ್ತ ನಿರ್ದೇಶಕರಾದ ಡಾ.ರೇವಣ್ಣ ಮೈಲಹಳ್ಳಿ ಮುಖ್ಯ ಭಾಷಣ ಮಾಡುವರು ಎಂದು ಪ್ರಕಟಣೆ ತಿಳಿಸಿದೆ. 

                              ಪಲ್ಸ್ ಪೋಲಿಯೋಗೆ ಚಾಲನೆ 

     ಚಾಮರಾಜನಗರ, ಎಪ್ರಿಲ್. 2 - ಮಕ್ಕಳಲ್ಲಿ ಶಾಶ್ವತ ಅಂಗವಿಕಲತೆಗೆ ಕಾರಣವಾಗುವ ಪೋಲಿಯೊ ರೋಗ ಮುಕ್ತಗೊಳಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಪಲ್ಸ್ ಪೋಲಿಯೊ ಅಭಿಯಾನಕ್ಕೆ ಇಂದು ಚಾಲನೆ ನೀಡಲಾಯಿತು. 

ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಆಯೋಜಿಸಲಾಗಿದ ಸರಳ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್.ಪ್ರಸಾದ್ ಅವರು ಮಗುವಿಗೆ ಪೋಲಿಯೋ ಹನಿ ಹಾಕುವ ಮೂಲಕ ಜಿಲ್ಲಾ ಮಟ್ಟದ ಪಲ್ಸ್ ಪೋಲಿಯೋ ಅಭಿಯಾನಕ್ಕೆ ವಿಧ್ಯುಕ್ತ ಚಾಲನೆ ನೀಡಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಡಾ.ಕೆ.ಎಚ್.ಪ್ರಸಾದ್ ಅವರು ಜಿಲ್ಲೆಯಲ್ಲಿ ಇಂದು ಮೊದಲ ಸುತ್ತಿನ ಪಲ್ಸ್ ಪೋಲಿಯೊ ಕಾರ್ಯಕ್ರಮ ಆರಂಭವಾಗಿದೆ. ಜಿಲ್ಲೆಯಲ್ಲಿ ಅಂದಾಜು ಒಟ್ಟು 80629 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಆಗ ತಾನೇ ಹುಟ್ಟಿದ ಮಗುವಿನಿಂದ 5 ವರ್ಷದ ವರೆಗಿನ ಮಕ್ಕಳಿಗೆ ಪೋಲಿಯೊ ಹನಿ ನೀಡಲು ವೈದ್ಯರು ಇತರೆ ಸಿಬ್ಬಂದಿ ನಿರತರಾಗಿದ್ದಾರೆ ಎಂದರು. 

ಚಾಮರಾಜನಗರ ತಾಲೂಕಿನಲ್ಲಿ 26648, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 17629, ಕೊಳ್ಳೇಗಾಲ ತಾಲೂಕಿನಲ್ಲಿ 30293 ಹಾಗೂ ಯಳಂದೂರು ತಾಲೂಕಿನಲ್ಲಿ 6059 ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 621 ಬೂತ್‍ಗಳನ್ನು ಲಸಿಕೆ ನೀಡಲು ತೆರೆಯಲಾಗಿದೆ. 

ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ತೆರೆಯಲಾಗುವ ಲಸಿಕಾ ಕೇಂದ್ರಗಳಲ್ಲಿ ಪೋಲಿಯೊ ಹನಿ ನೀಡಲಾಗುತ್ತಿದೆ ಬಳಿಕ  ಗ್ರಾಮಾಂತರ ಪ್ರದೇಶದಲ್ಲಿ 2ನೇ ಹಾಗೂ 3ನೇ ದಿನ ಮನೆ ಮನೆಗೆ ಭೇಟಿ ನೀಡಿ ಲಸಿಕೆ ನೀಡಲಾಗುತ್ತದೆ. ಪಟ್ಟಣ ಪ್ರದೇಶದಲ್ಲಿ 4 ದಿನಗಳ ಕಾಲ ಸಹ ಮನೆ ಮನೆಗೆ ಭೇಟಿ ನೀಡಿ ಲಸಿಕೆ ನೀಡಲಾಗುತ್ತದೆ. ಪಟ್ಟಣ ಪ್ರದೇಶದಲ್ಲಿ ಒಟ್ಟು 35942 ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 196413 ಮನೆಗಳು ಸೇರಿದಂತೆ ಒಟ್ಟು 232355 ಮನೆಗಳಿಗೆ ಭೇಟಿ ನೀಡಿ ಲಸಿಕೆ ನೀಡುವ ಗುರಿ ನಿಗದಿ ಮಾಡಿಕೊಳ್ಳಲಾಗಿದೆ ಎಂದು ಡಾ.ಪ್ರಸಾದ್ ತಿಳಿಸಿದರು.

ಯಾವ ಮಗುವು ಬಿಟ್ಟು ಹೋಗದಂತೆ ಪೋಲಿಯೋ ಹನಿ ನೀಡಲಾಗುತ್ತದೆ. ಮನೆ ಬಿಟ್ಟು ತೆರಳಿರುವ ಕುಟುಂಬದ ಮನೆಗೂ ಭೇಟಿ ನೀಡಿ ನಿರ್ದಿಷ್ಟವಾದ ಗುರುತು ಮಾಡಲಾಗುತ್ತದೆ. ಬೇರೆ ಕಡೆ ಪೋಲಿಯೋ ಹನಿಯನ್ನು ಮಕ್ಕಳಿಗೆ ಕೊಡಿಸಲಾಗಿದೆಯೆ ಎಂಬ ಬಗ್ಗೆ ಖಾತರಿ ಪಡಿಸಿಕೊಳ್ಳಲಾಗುತ್ತಿದೆ. ಒಟ್ಟಾರೆ ನಾಲ್ಕು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ಪೂರ್ಣ ಪ್ರಮಾಣದಲ್ಲಿ ಗುರಿ ಸಾಧನೆ ಮಾಡಲಾಗುತ್ತದೆ ಎಂದು ಡಾ.ಪ್ರಸಾದ್ ತಿಳಿಸಿದರು. 

ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ನರ್ಸಿಂಗ್ ಶಾಲೆಗಳು, ರೋಟರಿ ಲಯನ್ಸ್ ಸಂಸ್ಥೆ ಸೇರಿದಂತೆ ಹಲವು ಸ್ವಯಂ ಸೇವಾ ಸಂಸ್ಥೆಗಳು ಸಹಕರಿಸಿವೆ ಎಂದು ಡಾ.ಪ್ರಸಾದ್ ಹೇಳಿದರು. 

 ಜಿಲ್ಲಾ ಸರ್ಜನ್ ಡಾ.ರಘುರಾಮ್, ಆರ್.ಸಿ.ಎಚ್.ಅಧಿಕಾರಿ ಡಾ.ವಿಶ್ವೇಶರಯ್ಯ, ರೆಡ್ ಕ್ರಾಸ್ ಸೊಸೈಟಿಯ ಡಾ.ಮಹೇಶ್ ಡಾ.ಶ್ರೀನಿವಾಸ್, ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ದೊರೆಸ್ವಾಮಿ ಇತರೆ ವೈದ್ಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ಪಲ್ಸ್ ಪೋಲಿಯೋ ಲಸಿಕಾ ಆಭಿಯಾನಕ್ಕೆ ಡಿ.ಹೆಚ್.ಓ ಡಾ|| ಪ್ರಸಾದ್ ರವರಿಂದ ಚಾಲನೆ



No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು