ಭಾರತೀಯರಿಗೆ ಸಂವಿಧಾನ ಶ್ರೇಷ್ಠ ಗ್ರಂಥ: ಯು.ಟಿ.ಖಾದರ್
ಚಾಮರಾಜನಗರ, ಏ. 14:- ವಿವಿಧೆಯಲ್ಲಿ ಏಕತೆ ಇರುವ ಭಾರತಕ್ಕೆ ಶ್ರೇಷ್ಠ ಸಂವಿಧಾನ ರಚಿಸಿಕೊಟ್ಟ ಮಹಾಮೇಧಾವಿ ಡಾ|| ಬಿ.ಆರ್ ಅಂಬೇಡ್ಕರ್ ಎಂದು ಆಹಾರ ನಾಗರೀಕ ಸರಬರಾಜು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಅವರು ತಿಳಿಸಿದರು.ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನಗರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತರತ್ನ ಸಂವಿಧಾನಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 126ನೇ ಜನ್ಮದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವೈವಿದ್ಯಮಯ ಸಂಸ್ಕøತಿ, ಪರಂಪರೆ, ಜನಸಮುದಾಯ ಹೊಂದಿರುವ ಭಾರತ ದೇಶಕ್ಕೆ ಅತ್ಯುತ್ತಮ ಸಂವಿಧಾನ ರಚಿಸಿದ ಕೀರ್ತಿಗೆ ಅಂಬೇಡ್ಕರ್ ರವರು ಪಾತ್ರವಾಗಿದ್ದಾರೆ. ಇಡೀ ಭಾರತೀಯರಿಗೆ ಸಂವಿಧಾನದ ಶ್ರೇಷ್ಠ ಗ್ರಂಥವಾಗಿದೆ. ಸಂವಿಧಾನದ ಆಶಯಗಳನ್ನು ಈಡೇರಿಸುವ ಹೊಣೆಗಾರಿಕೆ ಪ್ರತಿಯೋಬ್ಬರ ಮೇಲೂ ಇದೆ ಎಂದು ಉಸ್ತುವಾರಿ ಸಚಿವರು ತಿಳಿಸಿದರು.
ಅಂಬೇಡ್ಕರ್ ರವರು ಬಾಲ್ಯದಿಂದಲೇ ಅತ್ಯಂತ ಕಷ್ಟಕರ ಜೀವನ ನಡೆಸಿದರು. ಬಡತನವಿದ್ದರು ಉನ್ನತ ಶಿಕ್ಷಣ ಪಡೆದು ಮೇರು ವ್ಯಕ್ತಿತ್ವ ಉಳ್ಳವರಾದರು. ಸಹನೆ, ತಾಳ್ಮೆಯಿಂದ ಯಶಸ್ಸು ಪಡೆದುಕೊಂಡರು. ಅಂಬೇಡ್ಕರ್ ರವರ ಈ ಎಲ್ಲ ಬದುಕಿನ ಮೌಲ್ಯಗಳನ್ನು ಇಂದಿನ ಯುವ ಜನಾಂಗ ಅರಿಯಬೇಕಿದೆ. ಅವರ ಹಾದಿಯಲ್ಲಿ ಮುನ್ನಡೆಯಬೇಕಿದೆ ಎಂದು ಸಚಿವರು ಸಲಹೆ ಮಾಡಿದರು.
ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಮೊದಲು ಅಂಬೇಡ್ಕರ್ ರವರ ಜಯಂತಿಯನ್ನು ಸರಳವಾಗಿ ಆಚರಿಸಲು ಜಿಲ್ಲಾಡಳಿತ ತೀರ್ಮಾನಿಸಿತ್ತು, ಅದರಂತೆ ಸಿದ್ದತೆ ಮಾಡಿಕೊಂಡಿತ್ತು. ಆದರೆ ಇತ್ತೀಚೆಗಷ್ಟೆ ಚುನಾವಣಾ ಆಯೋಗವು ಎಂದಿನಂತೆ ಕಾರ್ಯಕ್ರಮ ಆಯೋಜಿಸಬಹುದೆಂಬ ನಿರ್ದೇಶನ ನೀಡಿದ ಹಿನ್ನಲೆಯಲ್ಲಿ ತರಾತುರಿಯಾಗಿ ಕಾರ್ಯಕ್ರಮ ನಡೆಸಲಾಗಿದೆ. ಹೀಗಾಗಿ ಮತ್ತೊಮ್ಮೆ ಅದ್ದೂರಿಯಾಗಿ ಡಾ|| ಬಿ.ಆರ್ ಅಂಬೇಡ್ಕರ್ ರವರ ಜಯಂತಿ ಕಾರ್ಯಕ್ರಮವನ್ನು ಎಲ್ಲರ ಸಹಕಾರ ಅಭಿಪ್ರಾಯ ಪಡೆದು ಹಮ್ಮಿಕೊಳ್ಳಲಾಗುತ್ತದೆ ಎಂದು ಸಚಿವರಾದ ಖಾದರ್ ತಿಳಿಸಿದರು.
ಡಾ|| ಬಿ.ಆರ್ ಅಂಬೇಡ್ಕರ್ ರವರ ಭಾವಚಿತ್ರ ಅನಾವರಣ ಮಾಡಿ ಮಾತನಾಡಿದ ಲೋಕಸಭಾ ಸದಸ್ಯರಾದ ಆರ್.ದ್ರುವ ನಾರಾಯಣ ಅವರು ನಾನಾ ಭಾಷೆ, ಜಾತಿ, ಧರ್ಮವುಳ್ಲ ಭಾರತದಲ್ಲಿ ನಾವೆಲ್ಲ ಒಂದೇ ಎಂಬ ಉದಾತ್ತ ಭಾವನೆಯು ಡಾ|| ಬಿ.ಆರ್ ಅಂಬೇಡ್ಕರ್ ಅವರು ಬರೆದ ಸಂವಿಧಾನದಿಂದ ಸಾಧ್ಯವಾಗಿದೆ. ಅಂಬೇಡ್ಕರ್ ದೇಶದ ಅತ್ಯಮೂಲ್ಯ ಆಸ್ತಿ ಎಂದರು.
ಅಂಬೇಡ್ಕರ್‍ರವರು ದಲಿತರು ಸೇರಿದಂತೆ ಇಡೀ ದೇಶದ ಎಲ್ಲಾ ವರ್ಗದ ಏಳಿಗೆಗಾಗಿ ಶ್ರಮಿಸಿದರು. ವಿಶೇಷವಾಗಿ ಮಹಿಳೆಯರಯರ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದರು. ಮಹಿಳೆಯರಿಗೆ ಪ್ರಾತಿನಿಧ್ಯ ಸಿಗಬೇಕೆಂಬ ಉದ್ದೇಶದಿಂದ ಹಿಂದು ಕೋಡ್ ಬಿಲ್ ಮಂಡಿಸಿದರು ಎಂದು ಆರ್. ದ್ರುವ ನಾರಾಯಣ ತಿಳಿಸಿದರು.ಡಾ|| ಬಿ.ಆರ್. ಅಂಬೇಡ್ಕರ್ ರವರ ಜಯಂತಿ ಕಾರ್ಯಕ್ರಮವನ್ನು ಮತ್ತೊಂದು ದಿನ ಅದ್ದೂರಿಯಾಗಿ ಹಮ್ಮಿಕೊಳ್ಳಲಾಗುತ್ತದೆ. ಎಂದು ದ್ರುವ ನಾರಾಯಣ ಇದೇ ವೇಳೆ ತಿಳಿಸಿದರು
ಶಾಸಕರಾದ ಸಿ.ಪುಟ್ಟರಂಗಶೆಟ್ಟಿ ಅವರು ಸಹ ಮಾತನಾಡಿ ಅಂಬೇಡ್ಕರ್ ರವರ ಜಯಂತಿಯನ್ನು ವಿಜೃಂಭಣೆಯಿಂದ ಏಪ್ರಿಲ್ 23 ರಂದು ಆಯೋಜಿಸಲು ಏಪ್ರಿಲ್ 17 ರಂದು ಪೂರ್ವಬಾವಿ ಸಭೆ ಕರೆದು ಅಭಿಪ್ರಾಯ ಸಲಹೆ ಪಡೆಯಲಾಗುವುದು ಎಂದರು.
ಮೈಸೂರು ವಿವಿ ಪ್ರಸಾರಾಂಗದ ವಿಶ್ರಾಂತ ಪ್ರಾಧ್ಯಾಪಕರು ಹಾಗೂ ನಿರ್ದೇಶಕರಾದ ಪ್ರೊ. ಲಕ್ಷ್ಮೀನಾರಾಯಣ ಅರೋರಾ ಅವರು ಮುಖ್ಯ ಭಾಷಣ ಮಾಡಿದರು
ಕೊಳ್ಳೇಗಾಲ ಚೇತನವನದ ಬೌದ್ಧ ಭಿಕ್ಕುಗಳಾದ ಪರಮಪೂಜ್ಯ ಮನೋರಖ್ಖಿತ ಬಂತೇಜಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.
ಇದಕ್ಕು ಮೊದಲು ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿದರು. ತದ ನಂತರ ಪ್ರವಾಸಿ ಮಂದಿರದ ಆವರಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎಂ. ರಾಮಚಂದ್ರ ಶಾಸಕರಾದ ಎಂ.ಸಿ.ಮೋಹನ ಕುಮಾರಿ ಉರುಫ್ ಗೀತಾ, ಕರ್ನಾಟಕ ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಎಂ. ಚಿನ್ನಸ್ವಾಮಿ, ಮೈಸೂರು ಕಾಡಾ ಅಧ್ಯಕ್ಷರಾದ ಹೆಚ್.ಎಸ್. ನಂಜಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಸುಹೇಲ್ ಆಲಿಖಾನ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಬಸವರಾಜು, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಬಿ.ಕೆ. ಬೊಮ್ಮಯ್ಯ, ತಾಲೂಕು ಪಂಚಾಯತ್ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ.ಪಿ.ಸದಾಶಿವಮೂರ್ತಿ, ಶಶಿಕಲಾ ಸೋಮಲಿಂಗಪ್ಪ ನಗರಸಭೆ ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪÀ, ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ|| ಕೆ. ಹರೀಶ್ ಕುಮಾರ್, ಜಿಲ್ಲಾ ಪೊಲೀಸ್ ಅಧಿಕಾರಿ ಕುಲದೀಪ್ ಕುಮಾರ್ .ಆರ್. ಜೈನ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ, ಸಮಾಜ ಕಲ್ಯಾಣ ಇಲಾಕೆ ಉಪನಿರ್ದೇಶಕರಾದ ಕೆ.ಹೆಚ್. ಸತೀಶ್ ಇತರರು ಉಪಸ್ಥಿತ ರಿದ್ದರು
ನಗದು ರಹಿತ ವ್ಯಾಪಾರ ಯೋಜನೆ ಕಾರ್ಯಗಾರ
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನಗದು ರಹಿತ ವ್ಯಾಪಾರ ವಹಿವಾಟುವಿನಿಂದ ಆಗುವ ಪ್ರಯೋಜನದ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಉಪನ್ಯಾಸ ನೀಡಿದರು.
ಲೀಡ್‍ಬ್ಯಾಂಕ್ ವ್ಯವಸ್ಥಾಪಕರಾದ ಸಿದ್ದರಾಜು ಅವರ ಮಾತನಾಡಿ ಕಳೆದ ಹತ್ತು ವರ್ಷಗಳಿಂದ ಬ್ಯಾಂಕುಗಳಲ್ಲಿ ಕಾಗದ ರಹಿತವಾಗಿ ಕಾರ್ಯನಿರ್ವಹಿಸಲಾಗುತ್ತಿದೆ. ತಂತ್ರಜ್ಞಾನ ಬಳಕೆಯನ್ನು ಎಲ್ಲಾ ಬ್ಯಾಂಕುಗಳು ಮಾಡುತ್ತಿವೆ. ಪ್ರಸ್ತುತ ದಿನಗಳಲ್ಲಿ ನಗದು ರಹಿತ ವ್ಯವಹಾರಕ್ಕೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ. ಎಂದರು
ಜಿಲ್ಲೆಯಲ್ಲಿ ಎರಡು ಲಕ್ಷದ ಮೂವತ್ತು ಮೂರು ಸಾವಿರ ಜನ್ ಧನ್ ಖಾತೆ ತೆರೆಯಲಾಗಿದೆ ಈ ಪೈಕಿ 60 ಸಾವಿರ ಖಾತೆದಾರರು ವಹಿವಾಟು ನಡೆಸುತ್ತಿಲ್ಲ ಪ್ರಧಾನ ಮಂತ್ರಿ ವಿಮೆ ಸುರಕ್ಷೆ ಯೋಜನೆ ಪ್ರಯೋಜನೆ ಪಡೆಯಲು ಖಾತೆದಾರರಿಗೂ ಅವಕಾಶವಿದೆ ಎಂದರು.
ರೈತ ಮುಖಂಡರಾದ ಹೊನ್ನೂರು ಪ್ರಕಾಶ್ ಮಾತನಾಡಿ ನಗದು ರಹಿತ ವ್ಯವಸ್ಥೆಯಿಂದ ಸಮಯ ಉಳಿತಾಯವಾಗಲಿದೆ. ಭ್ರಷ್ಟಾಚಾರಕ್ಕು ಕಡಿವಾಣ ಬೀಳಲಿದೆ, ರೈತರ ಖಾತೆಗಳಿಗೆ ನೇರವಾಗಿ ಬೆಳೆ ವಿಮೆ, ಬೆಳೆ ಪರಿಹಾರ ದಂತಹ ಹಣ ಸಂದಾಯ ವಾಗಲಿದೆ. ಇದರಿಂದ ರೈತರು ಬ್ಯಾಂಕುಗಳಿಗೆ ಅಲೆದಾಡುವುದು ತಪ್ಪಿದೆ ಎಂದರು.
ಇದೇ ವೇಳೆ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹ ಅಧಿಕಾರಿ ಡಾ|| ಕೆ.ಹರೀಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕುಲದೀಪ್ ಕುಮಾರ್ ಆರ್ ಜೈನ್ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಇತರರು ಕಾರ್ಯಕ್ರಮಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.
ಕಾರ್ಯಕ್ರಮದ ವೇಳೆ ಪ್ರಧಾನ ಮಂತ್ರಿಯವರು ನಾಗಪುರದಲ್ಲಿ ಅನಕ್ಷರಸ್ಥರು ಬಳಸಬಹುದಾದ ಭೀಮ್ ಆಧಾರ್ ಆ್ಯಪ್ ಸೇವೆ ಬಿಡುಗಡೆ ಮಾಡಿ ಜನರನ್ನು ಉದ್ದೇಶಿಸಿ ಮಾತನಾಡಿದ ಕಾರ್ಯಕ್ರಮವನ್ನು ದೂರದರ್ಶನದ ಮೂಲಕ ನೇರ ಪ್ರಸಾರದ ವೀಕ್ಷಣೆಗೆ ಅವಕಾಶ ಮಾಡಲಾಗಿತ್ತು.
ಆಧಾರ್ ಜಿಲ್ಲಾ ಸಮಾಲೋಚಕರಾದ ರಾಮ್‍ಪ್ರಸಾದ್, ತಹಸಿಲ್ದಾರ್ ಕೆ.ಪುರಂದರ, ಎನ್.ಐ.ಸಿ ಅಧಿಕಾರಿ ಯತಿರಾಜು, ಚಲುವರಾಜು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
No comments:
Post a Comment