ಬಿಳಿಗಿರಿರಂಗನ ಬೆಟ್ಟಕ್ಕೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಭೇಟಿ.
ಯಳಂದೂರು ಏ 07 : ತಾಲೂಕಿನ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇವಾಲಯಕ್ಕೆ ಮುಜರಾಯಿ ಮತ್ತು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ ಷಡಕ್ಷರಸ್ವಾಮಿ ಭೇಟಿ ನೀಡಿ ಪರಿಶೀಲಿಸಿದರು.ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನಕ್ಕೆ ಗುರುವಾರ ಮಧ್ಯಾಹ್ನ ಭೇಟಿ ನೀಡಿ ದೇವಾಲಯದ ಜೀರ್ಣೋದ್ದಾರದ ಸಿದ್ದತೆಯ ಕುರಿತು ಪರಿಶೀಲಿಸಿದರು.
500 ವರ್ಷಗಳಿಗೂ ಹಳೆಯದಾದ ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನವನ್ನು ಜೀರ್ಣೋದ್ದಾರ ಮಾಡುವ ನಿಟ್ಟಿನಲ್ಲಿ ಈಗಾಗಲೇ ವಿವಿದ ಪೂಜೆಗಳು ನಡೆದು ದೇವಸ್ಥಾನವನ್ನು ಬಂದ್ ಮಾಡಲಾಗಿದೆ. ಮುಂದಿನ ಮಾ.09 ರಂದು ಜೀರ್ಣೋದ್ದಾರ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು. ಆ ನಿಟ್ಟಿನಲ್ಲಿ ಈಗಿರುವಂತೆ ದೇವಸ್ಥಾನವನ್ನು ಯಾವುದೇ ತೊಂದರೆಯಾಗದಂತೆ ಆದಷ್ಟು ಬೇಗ ಕಾಮಗಾರಿಯನ್ನು ಮುಗಿಸಬೇಕು. ಅಲ್ಲದೇ ಯಾವುದೇ ವಿಗ್ರಹಗಳಿಗೆ ತೊಂದರೆಯಾಗದಂತೆ ಕೆಲಸ ಮಾಡಬೇಕು. ಜೊತೆಗೆ ದೇವಸ್ಥಾನದ ಅಭಿವೃದ್ದಿಪಡಿಸುವ ನಿಟ್ಟಿನಲ್ಲಿ ಆಗಬೇಕಾಗಿರುವ ಕೆಲಸ ಕಾರ್ಯಗಳು, ದೇವಸ್ಥಾನದಿಂದ ಕೆಳಗಿನ ತನಕ ಇಳಿಯುವ ಮೆಟ್ಟಿಲುಗಳ ಅಭಿವೃದ್ದಿಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆಗಳನ್ನು ರೂಪಿಸಿ ಇಲಾಖೆಗೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆ ಎಇಇ ಶ್ರೀನಿವಾಸಮೂರ್ತಿ, ಪುರಾತತ್ವ ಇಲಾಖೆ ಇಂಜಿನಿಯರ್ ದೇವರಾಜು, ತಹಶೀಲ್ದಾರ್ ಚಂದ್ರಮೌಳಿ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ ಪ್ರಸಾದ್, ಸಿಬ್ಬಂದಿಗಳಾದ ರಾಜು, ಶೇಷಾದ್ರಿ ಸೇರಿದಂತೆ ಇತರರು ಇದ್ದರು.
ಪೋಟೋ ಶಿರ್ಷಿಕೆ ಎ :- ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನಕ್ಕೆ ಮುಜರಾಯಿ ಆಯುಕ್ತ ಷಡಕ್ಷರಿಸ್ವಾಮಿ ಭೇಟಿ ನೀಡಿ ಜೀರ್ಣೋದ್ದಾರ ಕಾಮಗಾರಿಯ ಸಿದ್ದತೆಗಳನ್ನು ಪರಿಶೀಲಿಸಿದರು.
*****************************
ಸಂಭ್ರಮದಿಂದ ಜರುಗಿದ ವೀರಭದ್ರೇಶ್ವರ, ಭದ್ರಕಾಳಮ್ಮ ರಥೋತ್ಸವ
ಯುಗಾದಿ ಹಬ್ಬದ ನಂತರ ಇಲ್ಲಿ ರಥೋತ್ಸವ, ಕೊಂಡೋತ್ಸವ ಸೇರಿದಂತೆ ಮೂರು ದಿನಗಳ ಕಾಲ ಹಬ್ಬವನ್ನು ಆಚರಿಸುವ ವಾಡಿಕೆ ಇದೆ.
ಹಳೆಯ ತೇರು ಶಿಥಿಲವಾಗಿದ್ದರಿಂದ, ಭಕ್ತರ ನೆರವಿನೊಂದಿಗೆ ಅಂದಾಜು ರೂ 10 ಲಕ್ಷ ವೆಚ್ಚದಲ್ಲಿ ನೂತನ ರಥದ ನಿರ್ಮಾಣ ಮಾಡಲಾಗಿದೆ. ರಥಕ್ಕಾಗಿ ತೇರನ್ನು ಎಳೆನೀರು, ಬಾಳೆ ಗೊನೆಗಳು, ವಿಶೇಷ ಹೂವುಗಳಿಂದ ಅಲಂಕರಿಸಲಾಗಿತ್ತು. ಬೆಳಿಗ್ಗೆಯಿಂದಲೇ ದೇಗುಲದಲ್ಲಿ ಅಭಿಷೇಕ ಸೇರಿದಂತೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಮಧ್ಯಾಹ್ನ ನೆರೆದಿದ್ದ ಸಾವಿರಾರು ಭಕ್ತರಿಗೆ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ಪಿ.ವಿ. ಬಸವರಾಜಪ್ಪ, ಪಿ.ವಿ. ನಂಜುಂಡಸ್ವಾಮಿ, ಎಂ.ಎಸ್. ಶಿವಾನಂದ ರವರ ಕುಟುಂಬ ವರ್ಗದವರು ಪ್ರತಿ ವರ್ಷದಂತೆ ಈ ವರ್ಷವೂ ಭೋಜನದ ವ್ಯವಸ್ಥೆ ಮಾಡಿದ್ದರು. ದೇಗುಲದ ಎದುರಿಗಿರುವ ಬಸವೇಶ್ವರ ದೇಗುಲವನ್ನು ಅಲಂಕರಿಸಲಾಗಿತ್ತು.
ಚಿತ್ರ ಶೀರ್ಷಿಕೆ ಬಿ
ಯಳಂದೂರು ಸಮೀಪದ ಗಂಗವಾಡಿ ಗ್ರಾಮದಲ್ಲಿ ಶುಕ್ರವಾರ ನಡೆದ ವೀರಭದ್ರೇಶ್ವರ ಭದ್ರಕಾಳಮ್ಮ ರಥೋತ್ಸವದಲ್ಲಿ ಪಾಲ್ಗೂಂಡಿದ್ದ ಸಾರ್ವಜನಿಕರು
No comments:
Post a Comment