ಕೃಷಿ ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಮ್:ಜಿಲ್ಲಾಧಿಕಾರಿ ಬಿ.ರಾಮು
ಚಾಮರಾಜನಗರ, ಏ. 05 :- ದೇಶದ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಕೃಷಿ ಕ್ಷೇತ್ರದಲ್ಲಿ ನೂತನ ಸಂಶೋಧನೆಗಳಿಗೆ ಅವಕಾಶ ಮಾಡಿಕೊಟ್ಟ ಡಾ.ಬಾಬು ಜಗಜೀವನರಾಮ್ ಅವರು ಹಸಿರು ಕ್ರಾಂತಿಯ ಹರಿಕಾರರೆಂದೆ ಹೆಸರಾದರು ಎಂದು ಜಿಲ್ಲಾಧಿಕಾರಿ ಬಿ.ರಾಮು ಅವರು ತಿಳಿಸಿದರು.
ನಗರದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಾ.ಬಾಬು ಜಗಜೀವನರಾಮ್ ಅವರ 110 ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಾಬು ಜಗಜೀವನರಾಮ್ ಅವರು ಕೃಷಿ ಸಚಿವರಾಗಿದ್ದ ವೇಳೆ ಆಹಾರ ಸಮಸ್ಯೆ ತೀವ್ರವಾಗಿ ತಲೆದೋರಿತ್ತು. ಇದರಿಂದ ದೇಶದಲ್ಲೆ ಆಹಾರ ಉತ್ಪಾದನೆಯನ್ನು ಹೆಚ್ಚಳ ಮಾಡಿ ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಕೃಷಿ ರಂಗದಲ್ಲಿ ಹಲವಾರು ಕ್ರಾಂತಿಕಾರಕ ಕ್ರಮಗಳನ್ನು ತೆಗೆದುಕೊಂಡರು. ನೂತನ ಸಂಶೋಧನೆಗೆ ಅನುವು ಮಾಡಿಕೊಟ್ಟು ಆಹಾರ ಉತ್ಪಾದನೆಯಲ್ಲಿ ಗಣನೀಯ ಸಾಧನೆ ಮಾಡಿದ ಫಲವಾಗಿ ಬಾಬೂ ಜೀಯವರು ಹಸಿರು ಕ್ರಾಂತಿಯ ಹರಿಕಾರರೆಂದೆ ಹೆಗ್ಗಳಿಕೆ ಪಡೆದುಕೊಂಡರು. ಬಾಬು ಜಗಜೀವನ ರಾಮ್ ಅವರು ಸ್ವಾತಂತ್ರ್ಯ ಹೋರಾಟಗಾರರು ಆಗಿದ್ದರು. ಸ್ವಸಾಮಥ್ರ್ಯ ಹಾಗೂ ಅರ್ಹತೆ ಆಧಾರ ಮೇಲೆ ಅಗ್ರಗಣ್ಯ ನಾಯಕರಾಗಿ ಹೊರ ಹೊಮ್ಮಿದರು. ಹಲವಾರು ಖಾತೆಗಳನ್ನು ನಿಭಾಯಿಸಿ ಅನೇಕ ನೂತನ ಕಾರ್ಯಕ್ರಮಗಳನ್ನು ಜಾರಿಗೆ ತಂದರು ಎಂದು ಜಿಲ್ಲಾಧಿಕಾರಿ ಬಿ.ರಾಮು ಅವರು ಸ್ಮರಿಸಿದರು.
ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ಬಾಬು ಜಗಜೀವನರಾಮ್ ಅವರ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಗುತ್ತಿದೆ. ಈ ಬಗ್ಗೆ ಅನ್ಯಥಾ ಭಾವಿಸಬಾರದೆಂದು ಜಿಲ್ಲಾಧಿಕಾರಿ ರಾಮು ಅವರು ಆರಂಭದಲ್ಲೇ ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಹರೀಶ್‍ಕುಮಾರ್ ಅವರು ಮಾತನಾಡಿ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಬಾಬು ಜಗಜೀವನರಾಮ್ ಅವರು ಕೇಂದ್ರದಲ್ಲಿ ವಿವಿಧ ಖಾತೆಗಳ ಸಚಿವರಾಗಿ ಪರಿಣಾಮಕಾರಿಯಾದ ಯೋಜನೆಗಳನ್ನು ಜಾರಿಗೆ ತಂದರು. ಶೋಷಿತರ, ಕಾರ್ಮಿಕರ, ಕೃಷಿಕರ, ಅಭ್ಯುದಯಕ್ಕೆ ಶ್ರಮ ವಹಿಸಿದರು ಎಂದರು
ಬಾಬು ಜಗಜೀವನರಾಮ್ ಅವರ ಜಯಂತಿ ಆಚರಣೆಯು ಮತ್ತಷ್ಟು ಉತ್ತಮ ಕಾರ್ಯವನ್ನು ಮಾಡಲು ಎಲ್ಲರಿಗೆ ಸ್ಪೂರ್ತಿದಾಯಕವಾಗಬೇಕು, ಅವಕಾಶ ವಂಚಿತರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಆಶಯ ಉದ್ದೇಶ ನೇರವೆರಿಸಲು ಮುಂದಾಗಬೇಕು. ಆಗ ಮಾತ್ರ ಆಚರಣೆಯ ಉದ್ದೇಶವು ಅರ್ಥ ಪೂರ್ಣವಾಗಲು ಸಾಧ್ಯವಾಗಲಿದೆ. ಇದÀಕ್ಕಾಗಿ ನಾವೆಲ್ಲರು ಮುಂದಾಗಬೇಕಿದೆ ಎಂದು ಹರೀಶ್‍ಕುಮಾರ್ ಅಭಿಪ್ರಾಯಪಟ್ಟರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ ಮೈಸೂರು ವಿಶ್ವವಿದ್ಯಾಲಯದ ಡಾ. ಬಾಬು ಜಗಜೀವನರಾಮ್ ಅಧ್ಯಯನ ಕೇಂದ್ರದ ನಿವೃತ್ತ ನಿರ್ದೇಶಕರಾದ ಡಾ. ರೇವಣ್ಣ ಮೈಲಹಳ್ಳಿ ಮಾತನಾಡಿ ಬಾಬು ಜಗಜೀವನರಾಮ್ ಅವರು ಕಾರ್ಮಿಕ ಸಚಿವರಾಗಿದ್ದ ವೇಳೆ ಕಾರ್ಮಿಕರ ಕಲ್ಯಾಣಕ್ಕಾಗಿ ಹಲವಾರು ಉಪಯೋಗಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು. ಕನಿಷ್ಠವೇತನ, ಆರೋಗ್ಯ ಸೌಲಭ್ಯ, ಭವಿಷ್ಯ ನಿಧಿಯಂತಹ ಸೌಲಭ್ಯಗಳನ್ನು ಕಾರ್ಮಿಕರಿಗೆ ಕಲ್ಪಿಸಿದರು. ಕಾರ್ಮಿಕರ ಮಕ್ಕಳು ಶಿಕ್ಷಣ ಪಡೆಯಲು ಬ್ಯಾಂಕ್‍ಗಳಿಂದ ಸಾಲ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಿದರು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯತ್ರಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಕೆ.ಎಸ್.ಸತೀಶ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಏಪ್ರಿಲ್ 6, 7 ರಂದು ವಿವಿಧ ಗ್ರಾಮಗಳಲ್ಲಿ ವಿವಿ ಪ್ಯಾಟ್ ಬಳಕೆ ಜಾಗೃತಿ ಕಾರ್ಯಕ್ರಮ
ಚಾಮರಾಜನಗರ, ಏ. 05 - ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆಯಲ್ಲಿ ನೂತನವಾಗಿ ತರಲಾಗುತ್ತಿರುವ ವಿವಿ ಪ್ಯಾಟ್ ಯಂತ್ರಗಳ ಬಗ್ಗೆ ಮತದಾರರಿಗೆ, ನಾಗರಿಕರಿಗೆ ಜಾಗೃತಿ ಮೂಡಿಸಲು ತಾಲ್ಲೂಕಿನ 34 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಏಪ್ರಿಲ್ 6 ಮತ್ತು 7 ರಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಏಪ್ರಿಲ್ 6 ರಂದು, ಅಗತಗೌಡನಹಳ್ಳಿ, ಆಲತ್ತೂರು, ಅಣ್ಣೂರು, ಬಾಚಹಳ್ಳಿ, ಬಲಚವಾಡಿ, ಬರಗಿ, ಬೇಗೂರು, ಬೇರಂಬಾಡಿ, ಭೀಮನಬೀಡು, ಹಂಗಳ, ಕಣ್ಣೇಗಾಲ, ಹೊರೆಯಾಲ, ವಡ್ಡಗೆರೆ, ಪಡಗೂರು, ಕೋಟೆಕೆರೆ, ರಾಘವಾಪುರ, ಕೋಡಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ವಿವಿ ಪ್ಯಾಟ್ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ನಡೆಯಲಿದೆ.
ಏಪ್ರಿಲ್ 7 ರಂದು ಬನ್ನಿತಾಳಪುರ, ನೇನೆಕಟ್ಟೆ, ಕೆಲಸೂರು, ಹುಂಡಿಪುರ, ತೆರಕಣಾಂಬಿ, ಶಿಂಡನಪುರ, ಚಿಕ್ಕಾಟಿ, ಶಿವಪುರ, ಬೊಮ್ಮನಹಳ್ಳಿ, ಪುತ್ತನಪುರ, ಕೂತನೂರು, ಸೋಮಹಳ್ಳಿ, ಮಂಗಲ, ಮೂಖಹಳ್ಳಿ, ನಿಟ್ರೆ, ಕಬ್ಬಹಳ್ಳಿ, ಬೊಮ್ಮಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ವಿವಿ ಪ್ಯಾಟ್ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಲಿದೆ
******************************
ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆ
ದಾಖಲೆ ಇಲ್ಲದ ಹಣ ವಶ: ಅನುಮತಿ ಪಡೆಯದ ವಾಹನ ವಶ
ವರದಿ : ರಾಮಸಮುದ್ರ ಎಸ್,ವೀರಭದ್ರಸ್ವಾಮಿ
ಚಾಮರಾಜನಗರ, ಏ. 05 :- ಗಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ
ಏಪ್ರಿಲ್ 4 ರಂದು ವಿವಿಧೆಡೆ ದಾಖಲಾತಿ ಇಲ್ಲದೆ ಇಟ್ಟುಕೊಂಡಿದ್ದ ಹಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಚಾಮರಾಜನಗರ ತಾಲ್ಲೂಕು ಕೆಬ್ಬೇಪುರದ ಗುರುಮೂರ್ತಿ ಹಾಗೂ ಮಂಜುನಾಥ್ ಎಂಬುವರಿಂದ ದಾಖಲಾತಿ ಇಲ್ಲದ ಒಂದು ಲಕ್ಷದ ಎರಡು ಸಾವಿರ ರೂ.ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಏಪ್ರಿಲ್ 4 ರಂದು ರಾತ್ರಿ 8.15 ರ ಸಮಯದಲ್ಲಿ ಚನ್ನಪ್ಪ ಅವರಿಂದ ಸೆಕ್ಟರ್ ಅಧಿಕಾರಿಗಳು ದಾಖಲಾತಿ ಇಲ್ಲದ ಒಂದು ಲಕ್ಷದ ಇಪ್ಪತ್ತೆಂಟು ಸಾವಿರದ ಆರು ನೂರು ಅರವತ್ತು ರೂ.ಗಳನ್ನು (1,28,600 ರೂ) ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಎಡಹಳ್ಳಿ ಗ್ರಾಮದಲ್ಲಿ ಅನುಮತಿ ಪಡೆಯದೆ ಪ್ರಕಾಶ್ ಡಾಂಗೆ ಎಂಬುವರು ಮತ್ತು ಸಂಗಡಿಗರು ಇನೋವಾ ಕಾರಿನಲ್ಲಿ ಚುನಾವಣೆ ಪ್ರಚಾರ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ವಾಹನವನ್ನು ಜಪ್ತಿ ಮಾಡಿಕೊಳ್ಳಲಾಗಿದೆ. ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಅಬಕಾರಿ ಅಧಿಕಾರಿಗಳು ಅಕ್ರಮ ಮದ್ಯ ವಶಪಡಿಸಿಕೊಳ್ಳುವ ಕಾರ್ಯ ಮುಂದುವರಿಸಿದ್ದಾರೆ. ಚಾಮರಾಜನಗರ ತಾಲ್ಲೂಕಿನ ಹರದನಹಳ್ಳಿ ಗ್ರಾಮದ ಮಹೇಶ ಎಂಬುವರಿಂದ 0.630 ಮಿ.ಲೀ ಅಮಚವಾಡಿ ಗ್ರಾಮದ ಮಲ್ಲರಾಜು ಎಂಬುವರಿಂದ 0.540 ಮಿ.ಲೀ, ಗುಂಡ್ಲುಪೇಟೆ ತಾಲ್ಲೂಕು ಹುಲಸಗುಂದಿ ಗ್ರಾಮದ ಮಹೇಶ ಎಂಬುವರಿಂದ 8.640 ಲೀ, ಹಳೇಪುರದ ಪಳನಿಸ್ವಾಮಿ ಅವರಿಂದ 4.320 ಲೀ, ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.

ಮಸ್ಟರಿಂಗ್ ಕೇಂದ್ರ ತಲುಪಲು ಬಸ್ ವ್ಯವಸ್ಥೆ
ಚಾಮರಾಜನಗರ, ಏ. 05 :- ಗಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆಗೆ ಸಂಬಂದಿಸಿದಂತೆ ನೇಮಕವಾಗಿರುವ ಮತಗಟ್ಟೆ ಅಧಿಕಾರಿ ಸಿಬ್ಬಂದಿಗೆ ಏಪ್ರಿಲ್ 8 ರಂದು ಬೆಳಿಗ್ಗೆ 8 ಗಂಟೆಗೆ ಗುಂಡ್ಲುಪೇಟೆ ಪಟ್ಟಣದ ಮಸ್ಟರಿಂಗ್ ಕೇಂದ್ರವಾದ ಸೆಂಟ್ ಜಾನ್ಸ್ ಇಂಗ್ಲೀಷ್ ಮೀಡಿಯಮ್ ಶಾಲೆ ತಲುಪಲು ವಿವಿಧ ಭಾಗಗಳಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಮಾರ್ಟಳ್ಳಿ ಖಾಸಗಿ ಬಸ್ ನಿಲ್ದಾಣದಿಂದ ಬೆಳಿಗ್ಗೆ 5 ಗಂಟೆಗೆ, ರಾಮಾಪುರ ಖಾಸಗಿ ಬಸ್ ನಿಲ್ದಾಣದಿಂದ ಬೆಳಿಗ್ಗೆ 5.30 ಗಂಟೆಗೆ, ಹನೂರು ಖಾಸಗಿ ಬಸ್ ನಿಲ್ದಾಣದಿಂದ ಬೆಳಿಗ್ಗೆ 6 ಗಂಟೆಗೆ, ಕೊಳ್ಳೇಗಾಲ ಎಂ.ಜಿ.ಎಸ್.ವಿ ಕಾಲೇಜಿನಿಂದ ಬೆಳಿಗ್ಗೆ 6 ಗಂಟೆಗೆ, ಯಳಂದೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ಬೆಳಿಗ್ಗೆ 6.30 ಗಂಟೆಗೆ ಹಾಗೂ ಚಾಮರಾಜನಗರದ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದಿಂದ ಬೆಳಿಗ್ಗೆ 7 ಗಂಟೆಗೆ ಬಸ್ ಹೊರಡಲಿದೆ.
ಮಾರ್ಟಳ್ಳಿಗೆ ಸಂಬಂಧಿಸಿದಂತೆ ಪುನಿತ್ (ಮೊ.9886442814), ರಾಮಾಪುರಕ್ಕೆ ಹೊಂಬೆಗೌಡ (ಮೊ.8494817278), ಹನೂರಿಗೆ ಉಪ ತಹಶೀಲ್ದಾರ್ (ಮೊ.9886388901), ಕೊಳ್ಳೇಗಾಲಕ್ಕೆ ತಹಶೀಲ್ದಾರ್ (ಮೊ.9986083441), ಯಳಂದೂರಿಗೆ ತಹಶೀಲ್ದಾರ್ (ಮೊ.9448625194) ಹಾಗೂ ಚಾಮರಾಜನಗರಕ್ಕೆ ತಹಶೀಲ್ದಾರ್ (ಮೊ.9742444578) ಅವರನ್ನು ಬಸ್ ವ್ಯವಸ್ಥೆ ನಿರ್ವಹಣೆಗೆ ನೇಮಕ ಮಾಡಲಾಗಿದೆ

ಮತದಾನದ ಮುಕ್ತಾಯ ಅವಧಿಯ ಹಿಂದಿನ 48 ಗಂಟೆಗಳ ಅವಧಿಯಲ್ಲಿ ಸಭೆ ಸಮಾರಂಭ ಪ್ರಚಾರ ನಿಷೇಧ:ಮೊಬೈಲ್, ವಾಟ್ಸ್‍ಆಪ್, ವಾಯ್ಸ್‍ಮೇಲ್, ಎಸ್.ಎಂ.ಎಸ್. ಮೂಲಕವು ಪ್ರಚಾರ ಮಾಡುವಂತಿಲ್ಲ.
ವರದಿ: ರಾಮಸಮುದ್ರ ಎಸ್.ವಿರಭದ್ರಸ್ವಾಮಿ
ಚಾಮರಾಜನಗರ, ಏ. 05 :- ಗಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆಮತದಾನದ ಮುಕ್ತಾಯ ಅವಧಿಯ ಹಿಂದಿನ 48 ಗಂಟೆಗಳ ಅವಧಿಯಲ್ಲಿ ಚುನಾವಣಾ ಸಂಬಂಧ ಯಾವುದೇ ಸಭೆ ಸಮಾರಂಭ ಮೆರವಣಿಗೆ ನಡೆಸುವುದು ಹಾಗೂ ಎಲ್ಲಾ ಮಾಧ್ಯಮ, ಹಾಗೂ ಇನ್ನಿತರ ಪ್ರಕಾರಗಳ ಮೂಲಕ ಪ್ರಚಾರ ಮಾಡುವುದನ್ನು ನಿಷೇದಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಬಿ.ರಾಮು ಅವರು ಆದೇಶ ಹೊರಡಿಸಿದ್ದಾರೆ.
ಉಪ ಚುನಾವಣೆಗೆ ಸಂಬಂಧಿಸಿದಂತೆ ಮತದಾನವು ಏಪ್ರಿಲ್ 9 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದೆ. ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪ್ರದೇಶಗಳಲ್ಲಿ ಪ್ರಜಾ ಪ್ರತಿನಿಧಿ ಕಾಯ್ದೆ 1951 ರ ಕಲಂ 126 ರ ಪ್ರಕಾರ ಮತದಾನ ಮುಕ್ತಾಯದ ಅವಧಿಯ ಹಿಂದಿನ 48 ಗಂಟೆಗಳ ಅವಧಿಯಲ್ಲಿ ಯಾವುದೇ ವ್ಯಕ್ತಿ, ರಾಜಕೀಯ ಪಕ್ಷ, ಉಮೇದುವಾರರು ಚುನಾವಣಾ ಸಂಬಂಧ ಯಾವುದೇ ಸಭೆ ಸಮಾರಂಭ ನಡೆಸುವಂತಿಲ್ಲ. ಮೆರವಣಿಗೆ ಮಾಡುವಂತಿಲ್ಲ. ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡುವಂತಿಲ್ಲ.
ಸಾರ್ವಜನಿಕರಿಗೆ ಮತದಾರರಿಗೆ ಸುದ್ದಿ ಮಾಧ್ಯಮಗಳಾದ ಎಫ್.ಎಂ, ರೇಡಿಯೋ, ದೂರದರ್ಶನ, ಸಿನಿಮಾ, ಇತ್ಯಾದಿಗಳ ಮೂಲಕ ಪ್ರಚಾರ ಮಾಡುವಂತಿಲ್ಲ. ಅಲ್ಲದೆ ಮೊಬೈಲ್, ಫೇಸ್‍ಬುಕ್, ಟೆಲಿಗ್ರಾಂ, ವಾಟ್ಸ್‍ಆಪ್, ವಾಯ್ಸ್‍ಮೇಲ್, ಎಸ್.ಎಂ.ಎಸ್. ಮೂಲಕವು ಕಳುಹಿಸಿ ಪ್ರಚಾರ ಮಾಡುವಂತಿಲ್ಲ.
ಮತದಾರರಿಗೆ ವೀಡಿಯೋ ಕ್ಲಿಪ್ಪಿಂಗ್ ಪ್ರದರ್ಶಿಸತಕ್ಕದ್ದಲ್ಲ. ಯಾವುದೇ ಮತಗಟ್ಟೆಯ ಮುಂದೆ ಜನರನ್ನು ಆಕರ್ಷಿಸಲು ಸಂಗೀತ, ನಾಟಕ, ರಂಗ ಕಲಾಪಗಳನ್ನು ನಡೆಸುವಂತಿಲ್ಲ. ದಿನ ಪತ್ರಿಕೆಗಳಲ್ಲಿ ಜಾಹಿರಾತು ಹೊರಡಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ರಾಮು ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಕ್ಷೇತ್ರ ಮತದಾರರಲ್ಲದವರು ಕ್ಷೇತ್ರ ವ್ಯಾಪ್ತಿ ಬಿಡಲು ಆದೇಶ
ಚಾಮರಾಜನಗರ, ಏ. 05 :- ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದ ಉಪ ಚನಾವಣೆಗೆ ಸಂಬಂಧಿಸಿದಂತೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭ್ಯರ್ಥಿಗಳ ಪರ ಮತ ಯಾಚಿಸುವ ಕ್ಷೇತ್ರದ ಮತದಾರರಲ್ಲದ ಏಜೆಂಟರು, ರಾಜಕೀಯ ಪಕ್ಷಗಳ ಮುಖಂಡರು, ತಾರಾ ಪ್ರಚಾರಕರು ಹಾಗೂ ಕ್ಷೇತ್ರದ ಮತದಾರರಲ್ಲದವರು ಏಪ್ರಿಲ್ 7 ರ ಸಂಜೆ 5 ಗಂಟೆಯೊಳಗೆ ಕ್ಷೇತ್ರ ವ್ಯಾಪ್ತಿಯನ್ನು ಬಿಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ.ರಾಮು ಅವರು ಆದೇಶ ಹೊರಡಿಸಿದ್ದಾರೆ.ಮತಗಟ್ಟೆ ಸಮೀಕ್ಷೆ ನಿರ್ಬಂಧ
ಚಾಮರಾಜನಗರ, ಏ. 05 -ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಮತಗಟ್ಟೆ, ಚುನಾವಣೋತ್ತರ ಸಮೀಕ್ಷೆ ನಡೆಸುವುದನ್ನು, ಹಾಗೂ ಫಲಿತಾಂಶ ಸೇರಿದಂತೆ ಈ ವಿಷಯಗಳಿಗೆ ಸಂಬಂಧಿಸಿದಂತೆ ಯಾವುದೇ ಬಗೆಯ ಪ್ರಕಟಣೆಯನ್ನು ಮಾಧ್ಯಮಗಳಲ್ಲಿ ಪ್ರಕಟಿಸುವುದನ್ನು ನಿಷೇಧಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಪ್ರಜಾ ಪ್ರತಿನಿಧಿ ಕಾಯ್ದೆ 1951 ರ ಪ್ರಕಾರ ಏಪ್ರಿಲ್ 9 ರ (ಭಾನುವಾರ) ಬೆಳಿಗ್ಗೆ 7 ಗಂಟೆಯಿಂದ ಏಪ್ರಿಲ್ 12 ರ (ಬುಧವಾರ) ಸಂಜೆ 6.30 ಗಂಟೆಯವರೆಗೆ ಯಾವುದೇ ಬಗೆಯ ಮತಗಟ್ಟೆ ಸಮೀಕ್ಷೆ ನಡೆಸುವುದು ಹಾಗೂ ಯಾವುದೇ ರೀತಿಯ ಮತಗಟ್ಟೆ ಫಲಿತಾಂಶ, ಈ ಕುರಿತ ಪ್ರಕಟಣೆಯನ್ನು ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಸೇರಿದಂತೆ ಇನ್ನಿತರ ಯಾವುದೇ ಮಾಧ್ಯಮದಲ್ಲಿ ಯಾವುದೇ ರೂಪದಲ್ಲಿ ಪ್ರಕಟಿಸುವುದು ಅಥವಾ ಪ್ರಚುರ ಪಡಿಸುವುದನ್ನು ನಿಷೇಧಿಸಲಾಗಿದೆ.
ಅಲ್ಲದೇ ಮತದಾನ ಪೂರ್ಣಗೊಳ್ಳುವ ಸಮಯಕ್ಕಿಂತ ಮುಂಚಿನ 48 ಗಂಟೆಗಳ ಅವಧಿಯಲ್ಲಿ ಯಾವುದೇ ಬಗೆಯ ಅಭಿಪ್ರಾಯ ಸರ್ವೇ (ಒಪಿನಿಯನ್ ಪೋಲ್) ಅಥವಾ ಇತರ ಯಾವುದೇ ಪೋಲ್ ಸರ್ವೇ ಸೇರಿದಂತೆ ಚುನಾವಣಾ ವಿಚಾರಗಳನ್ನು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರದರ್ಶಿಸುವುದನ್ನು ಸಹ ನಿಷೇಧಿಸಲಾಗಿದೆ.
ಸೂಚಿಸಲಾಗಿರುವ ನಿರ್ಬಂಧಿತ ಅವಧಿಯಲ್ಲಿ ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸದಂತೆ ಯಾವುದೇ ರಾಜಕೀಯ ವಿಶ್ಲೇಷಕರು, ಜ್ಯೋತಿಷಿಗಳು ಅಥವಾ ಯಾವುದೇ ವ್ಯಕ್ತಿಗಳು ಊಹಾತ್ಮಕವಾಗಿ ಹೇಳುವುದು, ಕ್ಷೇತ್ರದ ಮತದಾರರು ಮತದಾನಕ್ಕೆ ಹೋಗುವ ಮುನ್ನ ಯಾವುದೇ ಪ್ರಭಾವಕ್ಕೆ ಒಳಗಾಗುವುದನ್ನು ತಡೆಯುವ ಉದ್ದೇಶದಿಂದ ಮಾಡಲಾಗಿರುವ ಸೆಕ್ಷನ್ 126(ಎ) ಯ ಉಲ್ಲಂಘನೆಯಾಗಲಿದೆ.
ಒಟ್ಟಾರೆ ಮುಕ್ತ ನ್ಯಾಯ ಸಮ್ಮತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸುವ ಉದ್ದೇಶದಿಂದ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಸೇರಿದಂತೆ ಎಲ್ಲಾ ಮಾಧ್ಯಮಗಳು 126 (ಎ) ಉದ್ದೇಶವನ್ನು ಪಾಲನೆ ಮಾಡಬೇಕು ಎಂದು ಚುನಾವಣಾ ಆಯೋಗ ತಿಳಿಸಿದೆ.
No comments:
Post a Comment