ನವ ದಂಪತಿಗಳಿಗೆ ನಿರಾಸೆ............................... ಚಾಮರಾಜೇಶ್ವರ ರಥೋತ್ಸವ, ನಡೆಯುತ್ತಾ.!
ಚಾಮರಾಜನಗರ, ಮೇ : ಆಷಾಢದಲ್ಲಿ ನಡೆಯುವ ಏಕೈಕ ರಥೋತ್ಸವ ಎಂಬ ಖ್ಯಾತಿಗೆ ಪಾತ್ರರಾಗಿರುವ ಚಾಮರಾಜೇಶ್ವರ ರಥೋತ್ಸವ ಈ ಬಾರಿ ನಡೆಸದಿರಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
1) ಇಲ್ಲಿನ ಐತಿಹಾಸಿಕ ರಥಕ್ಕೆ ಬೆಂಕಿ ಬಿದ್ದು ಹಾನಿ
.2) ಪುನರ್ ನಿರ್ಮಾಣ ಕಾರ್ಯಕ್ಕೆ ಇನ್ನೂ ಚಾಲನೆ ನೀಡಲಾಗಿಲ್ಲ.
3)ಐತಿಹಾಸಿಕ ಚಾಮರಾಜೇಶ್ವರ ದೇವಾಲಯದ ಜೀರ್ಣೋದ್ಧಾರ ಕಾರ್ಯವೂ ಭರದಿಂದ ಸಾಗಿದೆ.
ರಾಜ್ಯ ಸರ್ಕಾರ 2.10 ಕೋಟಿ ರು. ವೆಚ್ಚದಲ್ಲಿ ದೇವಾಲಯ ಜೀರ್ಣೋದ್ಧಾರಕ್ಕೆ ಮುಂದಾಗಿದ್ದು, ಪ್ರಾಚ್ಯ ವಸ್ತು ಇಲಾಖೆಯ ಮೇಲುಸ್ತುವಾರಿಯಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಈಗಾಗಲೇ ಶೇ. 40 ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಕಾಮಗಾರಿ ಸಂಪೂರ್ಣವಾಗಬೇಕಾದರೆ ವರ್ಷಗಳೆ ಕಾಯಬೇಕಾಗಿದೆ.
ರಥೋತ್ಸವದ ಮಹತ್ವ: ಚಾಮರಾಜನಗರ ಜನಮನ ಸೆಳೆಯುವುದೇ ಆಷಾಢದ ಚಾಮರಾಜೇಶ್ವರ ರಥೋತ್ಸವದಿಂದ. ಈ ರಥೋತ್ಸವದಲ್ಲಿ ನೂತನವಾಗಿ ವಿವಾಹವಾದ ನವದಂಪತಿಗಳು ಹಣ್ಣು ಜವನ ಎಸೆದು ದಾಂಪತ್ಯ ಸುಖಮಯವಾಗಿರುವಂತೆ ಬೇಡಿಕೊಳ್ಳುತ್ತಾರೆ. ರಾಜ್ಯದ ಏಕೈಕ ಆಷಾಢ ರಥೋತ್ಸವ ಎಂಬ ಹೆಗ್ಗಳಿಕೆ ಪಡೆದ ರಥಕ್ಕೆ ಕಳೆದ ಆರು ತಿಂಗಳ ಹಿಂದೆ ಬೆಂಕಿಬಿದ್ದು ಹಾನಿಯಾಗಿದ್ದು, ರಥವನ್ನು ದುರಸ್ತಿ ಮಾಡಲಾಗದಷ್ಟು ಹಾಳಾಗಿರುವುದರಿಂದ ನೂತನ ರಥವನ್ನೇ ನಿರ್ಮಾಣ ಮಾಡುವುದು ಅನಿವಾರ್ಯವಾಗಿದೆ. ಆದರೆ ಇನ್ನು ಚಾಮರಾಜೇಶ್ವರನ ರಥೋತ್ಸವಕ್ಕೆ ತಿಂಗಳಷ್ಟೆ ಬಾಕಿಯಿರುವುದರಿಂದ ನೂತನ ರಥ ನಿರ್ಮಾಣವೂ ಸಾಧ್ಯವಿಲ್ಲ. ಹೀಗಾಗಿ ಈ ಬಾರಿ ರಥೋತ್ಸವ ನಡೆಯುತ್ತಿಲ್ಲ. ಇದು ಭಕ್ತರಿಗೆ ನಿರಾಸೆ ತಂದಿದೆ.
ರಥಕ್ಕೆ ಬೆಂಕಿ ಯಾಕೆ, ಯಾರು ಹಾಕಿದರು.? ಆರೋಪಿಯನ್ನು ಬಂದಿಸುವಲ್ಲಿ ಪೊಲೀಸರ ಪಾತ್ರ
ಚಾಮರಾಜನಗರ: ಸಮಾಜದಲ್ಲಿ ಯಾರಾದರೂ ಏನಾದರೂ ಕೆಟ್ಟದ್ದು ಮಾಡುತ್ತಾರೆ ಎಂದರೆ ಅದರ ಹಿಂದೆ ಏನಾದರೂ ಹಿನ್ನಲೆ ಇದ್ದೇ ಇರುತ್ತದೆ ಎಂದು ಭಾವಿಸಬೇಕು ಹಾಗಿಯೇಚಾಮರಾಜನಗರದ ಬ್ರಹ್ಮರಥಕ್ಕೆ ಬೆಂಕಿ ಹಾಕಿದ್ದಕ್ಕೆ ಕಾರಣ ಹುಡುಕಿದರೆ ನಿಜಕ್ಕೂ ಆಶ್ಚರ್ಯವೇ ಸರಿ ಆದರೆ ಸತ್ಯ. ಚಾಮರಾಜನಗರದ ಬ್ರಹ್ಮರಥಕ್ಕೆ ಬೆಂಕಿ ಹಾಕಿದ್ದರ ಬಗ್ಗೆ ವಿವರಣೆ ಕೊಡಲು ಪೋಲೀಸ್ ವರೀಷ್ಠಾದಿಕಾರಿ ಕುಲದೀಪ್ ಕುಮಾರ್ ಜೈನ್ ಹಾಗೂ ಡಿವೈಸ್ಪಿ ಗಂಗಾದರಸ್ವಾಮಿ ಅವರು ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಈ ಸತ್ಯ ತಿಳಿದುಬಂದಿತು. ಪರ್ತಕರ್ತರು ವರೀಷ್ಠಾದಿಕಾರಿ ಕುಲದೀಪ್ ಕುಮಾರ್ ಜೈನ್ ಅವರನ್ನು ಬ್ರಹ್ಮರಥಕ್ಕೆ ಬೆಂಕಿ ಹಾಕಲು ಕಾರಣ ಏನಿರಬಹುದು ಎಂದಾಗ ಆರೋಪಿ ಹೇಳಿಕೆಯಂತೆ ಚಾಮರಾಜೇಶ್ವರ ದೇವಾಲಯ ಹಳೆಯದಾಗಿದ್ದು ಜೀರ್ಣೋದ್ದಾರ ನಡೆಯುತ್ತಿದೆ ಹಾಗಿಯೇ ಸುಮಾರು ವರ್ಷಗಳ ಹಳೆಯದಾದ ಈ ರಥ ಪ್ರತಿ ವರ್ಷವೂ ದುರಸ್ಥಿ ಮಾಢುತ್ತಿರುತ್ತಾರೆ ನೂತನ ರಥವಾಗಲೀ ಎಂಬ ಆóಶಯದಿಂದ ಬೆಂಕಿ ಹಾಕಿದ್ದಾಗಿ ಒಪ್ಪಿಕೊಂಢಿದ್ದಾರೆ ಎಂದರು. ಇದೇ 19 ರಂದು 1.10 ರ ಸಮಯದಲ್ಲಿ ಬೆಂಕಿ ಹಾಕಿ ಪರಾರಿಯಾಗಿದ್ದ ಕಿಡಿಗೇಡಿ ಬಂಧಿಸಬೇಕು ಎಂದು ಆಗ್ರಹಿಸಿ 20 ರಂದು ಬಂದ್ ಗೆ ಕರೆ ನೀಡಿ ಯಶಸ್ವಿಯಾಗಿತ್ತು. ಮೂರು ತಂಡ ರಚಿಸಿದ ಎಸ್ಪಿ ಅವರು ಆರೋಪಿಗಾಗಿ ಶೋಧ ನಡೆಸಿ ಕೊನೆಗೆ ಸಫಲರಾಗಿದ್ದಾರೆ. ******************************************************------------------------------------------ ಚಾಮರಾಜನಗರ: ಚಾಮರಾಜೇಶ್ವರ ರಥಕ್ಕೆ ಬೆಂಕಿ ಇಟ್ಟ ಪ್ರಕರಣ,ಆರೋಪಿ ಬಂದನ, ವರದಿ-ಚಾಮರಾಜನಗರ ಪ್ರತಿನಿಧಿ:ರಾಮಸಮುದ್ರ, ಎಸ್.ವೀರಭದ್ರಸ್ವಾಮಿ ಚಾಮರಾಜನಗರ, ಫೆಬ್ರವರಿ 23: ಭಾನುವಾರ ಮುಂಜಾನೆ ಚಾಮರಾಜನಗರದ ಚಾಮರಾಜೇಶ್ವರ ಬ್ರಹ್ಮರಥಕ್ಕೆ ಬೆಂಕಿ ಹಾಕಿ ಇಡೀ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಚಾಮರಾಜನಗರ ಪಟ್ಟಣದ ಉಪ್ಪಾರ ಬಡಾವಣೆಯ ಮೋಹನ್ ಕುಮಾರ್ (35 ) ಬಂಧಿತ ಆರೋಪಿ. ಪ್ರಕರಣದಲ್ಲಿ ಈತ ಮಾತ್ರವಲ್ಲದೆ ಇನ್ನಿತರರು ಭಾಗಿಯಾಗಿರುವ ಸಂಶಯವಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಭಾನುವಾರ ಬೆಳಗಿನ ಜಾವ ದೇವಾಲಯ ಆವರಣದಲ್ಲಿ ನಿಲ್ಲಿಸಿದ್ದ ಚಾಮರಾಜೇಶ್ವರ ಬ್ರಹ್ಮರಥ ಬೆಂಕಿ ಹೊತ್ತಿ ಉರಿಯತೊಡಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸಿದ್ದರು. ಆದರೂ ರಥ ಭಾಗಶಃ ಸುಟ್ಟು ಹೋಗಿತ್ತು. ಈ ಘಟನೆಯಿಂದ ಚಾಮರಾಜನಗರದಲ್ಲಿ ಉದ್ವಿಗ್ನ ಪರಿಸ್ಥಿತಿಯುಂಟಾಗಿ ಬಂದ್ ಹಾಗೂ ಪ್ರತಿಭಟನೆಗಳು ನಡೆದಿದ್ದವು. ಹಿಂದೂಪರ ಸಂಘಟನೆಗಳು ಆರೋಪಿಗಳನ್ನು ಪತ್ತೆ ಹಚ್ಚುವಂತೆ ಪೊಲೀಸರ ಮೇಲೆ ಒತ್ತಡ ತಂದಿದ್ದವು. ಘಟನೆ ನಡೆದ ಕ್ಷಣದಿಂದಲೇ ಚಾಮರಾಜನಗರ ಪೊಲೀಸರು ಆರೋಪಿಗಳ ಬಂಧನಕ್ಕೆ ತನಿಖೆ ಕೈಗೊಂಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್.ಜೈನ್ ಮಾರ್ಗದರ್ಶನದಲ್ಲಿ ತನಿಖಾ ತಂಡ ರಚನೆಯಾಗಿ, ತನಿಖೆ ಚುರುಕುಗೊಂಡಿತ್ತು. ಈ ಮಧ್ಯೆ ಪ್ರಕರಣದ ಬಗ್ಗೆ ವಿಶೇಷ ತನಿಖೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಜಿಲ್ಲಾಡಳಿತಕ್ಕೆ ಆದೇಶ ನೀಡಿದ್ದರು. ಸಚಿವರ ಆದೇಶದಂತೆ ತನಿಖೆ ನಡೆಸಿದ ಪೊಲೀಸರು ಇದೀಗ ಆರೋಪಿ ಮೋಹನ್ ಕುಮಾರ್ ಎಂಬಾತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಮೋಹನ್ ಕುಮಾರ್ ನಗರಸಭೆಯ ಮಾಜಿ ಅಧ್ಯಕ್ಷೆ ಭಾಗ್ಯಮ್ಮ ಅವರ ಸಂಬಂಧಿ ಎಂದು ಹೇಳಲಾಗುತ್ತಿದೆ. ತಮ್ಮದೇ ಸಮುದಾಯದ ವ್ಯಕ್ತಿ ಕೃತ್ಯ ಎಸಗಿದ್ದು, ಕ್ಷೇತ್ರದ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಇರಿಸು ಮುರಿಸು ತಂದೊಡ್ಡಿದೆ. ಆರೋಪಿ ರಥಕ್ಕೆ ಬೆಂಕಿ ಹಚ್ಚಲು ಕಾರಣವೇನು, ಆತನೊಂದಿಗೆ ಇನ್ನೆಷ್ಟು ಮಂದಿ ಭಾಗಿಯಾಗಿದ್ದಾರೆ ಎಂಬಿತ್ಯಾದಿ ಮಾಹಿತಿಗಳು ಪೊಲೀಸರ ತನಿಖೆಯಿಂದ ಹೊರಬರಬೇಕಿದೆ
No comments:
Post a Comment