Wednesday, 5 April 2017

04-04-2017 ಬಿ.ಜೆ.ಪಿ ಪ್ರಚಾರ ವೇಳೆ 100 ಕ್ಕೂ ಹೆಚ್ಚು ಅನುಮತಿ ಪಡೆಯದ ವಾಹನಗಳು: ಪ್ರಕರಣ ದಾಖಲು,ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ವಶ

ಬಿ.ಜೆ.ಪಿ ಪ್ರಚಾರ ವೇಳೆ 100 ಕ್ಕೂ ಹೆಚ್ಚು ಅನುಮತಿ ಪಡೆಯದ ವಾಹನಗಳು: ಪ್ರಕರಣ ದಾಖಲು

ವರದಿ: ರಾಮಸಮುದ್ರ  ಎಸ್.ವೀರಭದ್ರಸ್ವಾಮಿ

ಚಾಮರಾಜನಗರ, ಏ. 04- ಗಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಏಪ್ರಿಲ್ 3 ರಂದು ನಡೆದ ಬಿ.ಜೆ.ಪಿ. ಪಕ್ಷದ ಪ್ರಚಾರ ಹಾಗೂ ಕಾರ್ಯಕ್ರಮದ ವೇಳೆ 100 ಕ್ಕೂ ಹೆಚ್ಚು ವಾಹನಗಳಿಗೆ ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಏಪ್ರಿಲ್ 3 ರಂದು ಗುಂಡ್ಲುಪೇಟೆ ಪಟ್ಟಣದ ಶಾಂತಿಪ್ರಸಾದ್ ಅವರ ಜಮೀನಿನಲ್ಲಿ ಬಿ.ಜೆ.ಪಿ. ಪಕ್ಷದ ಸಮಾರಂಭ ನಡೆಯುವ ಸಂದರ್ಭದಲ್ಲಿ ಅನುಮತಿ ಪಡೆಯದೆ ಇದ್ದ 4 ಇನೋವಾ ಕಾರು, ಒಂದು ಗೂಡ್ಸ್ ಆಟೋ, ಪ್ರಯಾಣಿಕರ ಆಟೋ ವಶಕ್ಕೆ ತೆಗೆದುಕೊಳ್ಳಲಾಗಿದೆ.
ಗುಂಡ್ಲುಪೇಟೆ ಪಟ್ಟಣದ ಅಂಬೇಡ್ಕರ್ ಸಮುದಾಯ ಭವನದ ಎದುರು ನಡೆದ ಬಿ.ಜೆ.ಪಿ. ಪ್ರಚಾರ ಸಭೆಯಲ್ಲಿ ಅನುಮತಿ ಪಡೆಯದ 2 ಟಿ.ವಿ.ಎಸ್. ದ್ವಿಚಕ್ರ ವಾಹನ 2 ಬಜಾಜ್ ಡಿಸ್ಕವರ್ ಹಾಗೂ ಒಂದು ಹೀರೋ ಹೋಂಡಾ ಸ್ಪೆಂಡರ್ ದ್ವಿಚಕ್ರ ವಾಹನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಅಲ್ಲದೆ 92 ವಾಹನಗಳಿಗೆ ಅನುಮತಿ ಪಡೆಯದೆ ಇರುವುದು ವೀಡಿಯೋ ಚಿತ್ರಿಕರಣದಲ್ಲಿ ದಾಖಲಾಗಿದೆ. ವಾಹನಗಳ ಪತ್ತೆಗೆ ಕ್ರಮ ತೆಗೆದುಕೊಳ್ಳಲಾಗಿದೆ. 12 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್‍ಕುಮಾರ್ ಆರ್. ಜೈನ್ ಅವರು ತಿಳಿಸಿದ್ದಾರೆ.

    ಏ. 5ರಂದು ನಗರದಲ್ಲಿ ಡಾ. ಬಾಬು ಜಗಜೀವನರಾಮ್ ಜನ್ಮದಿನಾಚರಣೆ

ಚಾಮರಾಜನಗರ, ಏ. 04- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಮ್ ಅವರ 110ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಏಪ್ರಿಲ್ 5ರಂದು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಿಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಜಿಲ್ಲಾಧಿಕಾರಿ
ಬಿ. ರಾಮು ಅವರು ಸಮಾರಂಭ ಉದ್ಘಾಟಿಸುವರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ
ಡಾ. ಕೆ. ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್ ಜೈನ್ ಮುಖ್ಯ ಅತಿಥಿಗಳಾಗಿ ಸಮಾರಂಭದಲ್ಲಿ ಪಾಲ್ಗೊಳ್ಳುವರು.
ಮೈಸೂರು ವಿಶ್ವವಿದ್ಯಾಲಯದ ಡಾ. ಬಾಬು ಜಗಜೀವನರಾಮ್ ಅಧ್ಯಯನ ಕೇಂದ್ರದ ನಿವೃತ್ತ ನಿರ್ದೇಶಕರಾದ
ಡಾ. ರೇವಣ್ಣ ಮೈಲಹಳ್ಳಿ ಮುಖ್ಯ ಭಾಷಣ ಮಾಡುವರು

ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ವಶ

ಚಾಮರಾಜನಗರ, ಏ. 04 :- ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ಒಂದು ಲಕ್ಷದ ಮೂವತ್ತಾರು ಸಾವಿರ ರೂ. ನಗದನ್ನು ಇಂದು ಗುಂಡ್ಲುಪೇಟೆ ತಾಲ್ಲೂಕಿನ ಹೆಗ್ಗಡಹಳ್ಳಿ-ಹಳ್ಳದಮಾದಳ್ಳಿ ರಸ್ತೆಯ ಹಕ್ಕಲಪುರ ಕ್ರಾಸ್ ಬಳಿ ಚುನಾವಣೆ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಸೆಕ್ಟರ್ ಅಧಿಕಾರಿ ವಶಪಡಿಸಿಕೊಂಡಿದ್ದಾರೆ.
ಇಂದು ಮಧ್ಯಾಹ್ನ ವಾಹನ ತಪಾಸಣೆ ಸಂದರ್ಭದಲ್ಲಿ ಕಾರ್ ಒಂದನ್ನು ತಪಾಸಣೆ ಮಾಡಿದಾಗ ದಾಖಲೆ ಇಲ್ಲದೆ ಇಟ್ಟುಕೊಳ್ಳಲಾಗಿದ್ದ ಕನಕಪುರದ ಪುಟ್ಟಸ್ವಾಮಿ ಅವರಿಂದ 2000 ರೂ. ಮುಖ ಬೆಲೆಯ 37 ನೋಟುಗಳು ಹಾಗೂ ಉಮೇಶ್ ಅವರಿಂದ 31 ನೋಟುಗಳು ಇದದ್ದು ಕಂಡುಬಂತು, ಹಣ ಇಟ್ಟುಕೊಂಡ ಸಂಬಂಧ ದಾಖಲಾತಿಗಳನ್ನು ಕೇಳಿದಾಗ ಯಾವುದೇ ದಾಖಲೆ ನೀಡದ ಹಿನ್ನೆಲೆಯಲ್ಲಿ ನಗದನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಚುನಾವಣಾ ಅಧಿಕಾರಿ ನಲಿನ್ ಅತುಲ್ ಅವರು ತಿಳಿಸಿದ್ದಾರೆ.

                                                 ಅಕ್ರಮ ಮದ್ಯ ವಶ

ಚಾಮರಾಜನಗರ, ಏ. 04:- ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ಮುಂದುವರಿಸಿದ್ದು ಅಕ್ರಮ ಮದ್ಯ ವಶಪಡಿಸಿಕೊಂಡಿದ್ದಾರೆ.
ಗುಂಡ್ಲುಪೇಟೆ ಪಟ್ಟಣದ ಶ್ರೀ ರಾಮ ವೈನ್ಸ್ ಅಂಗಡಿಯವರು ಅಬಕಾರಿ ಅಧಿಕಾರಿಗಳು ತಪಾಸಣೆ ನಡೆಸಿದ ವೇಳೆ ರಶೀದಿ ಪುಸ್ತಕ ಹಾಜರುಪಡಿಸಿಲ್ಲ, ದರಪಟ್ಟಿ ಪ್ರದರ್ಶಿಸಿಲ್ಲ. ಅಲ್ಲದೆ ಅಂಗಡಿ ಆವರಣದಲ್ಲಿ ಪಾನಿಕರಿಗೆ ಕುಡಿಯಲು ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೊಳ್ಳೇಗಾಲ ತಾಲ್ಲೂಕು ಸರಗೂರಿನ ಮಲ್ಲ ಎಂಬುವರಿಂದ 0.900 ಮಿ.ಲೀ, ಚಾಮರಾಜನಗರ ತಾಲ್ಲೂಕು ಗಂಗವಾಡಿ ಗ್ರಾಮದ ಬಸವಯ್ಯ ಎಂಬುವರಿಂದ 0.540 ಮಿ.ಲೀ, ಯಳಂದೂರು ತಾಲ್ಲೂಕು ದಾಸನಹುಂಡಿ ಗ್ರಾಮದ ಕೃಷ್ಣ ಎಂಬುವರಿಂದ 0.360 ಮಿ.ಲೀ, ಹಾಗೂ ಗುಂಡ್ಲುಪೇಟೆ ತಾಲ್ಲೂಕು ತೆಂಕಲಹುಂಡಿ ಗ್ರಾಮದ ಮಹೇಶ ಎಂಬುವರಿಂದ 0.810 ಮಿ.ಲೀ, ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಚುನಾವಣಾ ಅಧಿಕಾರಿ ನಲಿನ್ ಅತುಲ್ ತಿಳಿಸಿದ್ದಾರೆ.
 


ಮತಗಟ್ಟೆ ಸಮೀಕ್ಷೆ ನಿರ್ಬಂಧ
ಚಾಮರಾಜನಗರ, ಏ. 04 :-ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಮತಗಟ್ಟೆ, ಚುನಾವಣೋತ್ತರ ಸಮೀಕ್ಷೆ ನಡೆಸುವುದನ್ನು, ಹಾಗೂ ಫಲಿತಾಂಶ ಸೇರಿದಂತೆ ಈ ವಿಷಯಗಳಿಗೆ ಸಂಬಂಧಿಸಿದಂತೆ ಯಾವುದೇ ಬಗೆಯ ಪ್ರಕಟಣೆಯನ್ನು ಮಾಧ್ಯಮಗಳಲ್ಲಿ ಪ್ರಕಟಿಸುವುದನ್ನು ನಿಷೇಧಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಪ್ರಜಾ ಪ್ರತಿನಿಧಿ ಕಾಯ್ದೆ 1951 ರ ಪ್ರಕಾರ ಏಪ್ರಿಲ್ 9 ರ (ಭಾನುವಾರ) ಬೆಳಿಗ್ಗೆ 7 ಗಂಟೆಯಿಂದ ಏಪ್ರಿಲ್ 12 ರ (ಬುಧವಾರ) ಸಂಜೆ 6.30 ಗಂಟೆಯವರೆಗೆ ಯಾವುದೇ ಬಗೆಯ ಮತಗಟ್ಟೆ ಸಮೀಕ್ಷೆ ನಡೆಸುವುದು ಹಾಗೂ ಯಾವುದೇ ರೀತಿಯ ಮತಗಟ್ಟೆ ಫಲಿತಾಂಶ, ಈ ಕುರಿತ ಪ್ರಕಟಣೆಯನ್ನು ಯಾವುದೇ ರೂಪದಲ್ಲಿ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟಿಸುವುದು ಅಥವಾ ಪ್ರಚುರ ಪಡಿಸುವುದನ್ನು ನಿಷೇಧಿಸಲಾಗಿದೆ.
ಅಲ್ಲದೇ ಮತದಾನ ಪೂರ್ಣಗೊಳ್ಳುವ ಸಮಯಕ್ಕಿಂತ ಮುಂಚಿನ 48 ಗಂಟೆಗಳ ಅವಧಿಯಲ್ಲಿ ಯಾವುದೇ ಬಗೆಯ ಅಭಿಪ್ರಾಯ ಸರ್ವೇ (ಒಪಿನಿಯನ್ ಪೋಲ್) ಅಥವಾ ಇತರ ಯಾವುದೇ ಪೋಲ್ ಸರ್ವೇ ಸೇರಿದಂತೆ ಚುನಾವಣಾ ವಿಚಾರಗಳನ್ನು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರದರ್ಶಿಸುವುದನ್ನು ಸಹ ನಿಷೇಧಿಸಲಾಗಿದೆ.
ಸೂಚಿಸಲಾಗಿರುವ ನಿರ್ಬಂಧಿತ ಅವಧಿಯಲ್ಲಿ ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸದಂತೆ ಯಾವುದೇ ರಾಜಕೀಯ ವಿಶ್ಲೇಷಕರು, ಜ್ಯೋತಿಷಿಗಳು ಅಥವಾ ಯಾವುದೇ ವ್ಯಕ್ತಿಗಳು ಊಹಾತ್ಮಕವಾಗಿ ಹೇಳುವುದು, ಕ್ಷೇತ್ರದ ಮತದಾರರು ಮತದಾನಕ್ಕೆ ಹೋಗುವ ಮುನ್ನ ಯಾವುದೇ ಪ್ರಭಾವಕ್ಕೆ ಒಳಗಾಗುವುದನ್ನು ತಡೆಯುವ ಉದ್ದೇಶದಿಂದ ಮಾಡಲಾಗಿರುವ ಸೆಕ್ಷನ್ 126(ಎ) ಯ ಉಲ್ಲಂಘನೆಯಾಗಲಿದೆ.
ಒಟ್ಟಾರೆ ಮುಕ್ತ ನ್ಯಾಯ ಸಮ್ಮತ ಹಾಗೂ ಪಾರದರ್ಶಕವಾಗಿ ಚುನಾವಣೆ ನಡೆಸುವ ಉದ್ದೇಶದಿಂದ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಸೇರಿದಂತೆ ಎಲ್ಲಾ ಮಾಧ್ಯಮಗಳು 126 (ಎ) ಉದ್ದೇಶವನ್ನು ಪಾಲನೆ ಮಾಡಬೇಕು ಎಂದು ಚುನಾವಣಾ ಆಯೋಗ ತಿಳಿಸಿದೆ.
 



No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು