ಪರೀಕ್ಷಾ ಕೇಂದ್ರ, ಕೊಠಡಿ ಸಮೀಪದಲ್ಲೇ ಬ್ಯಾಗ್, ಪರೀಕ್ಷಾ ನೀತಿ ನಿಯಮಗಳೇ ಗೊತ್ತಿಲ್ಲದ ಶಿಕ್ಷಕರಿಗೆ ಇದೇಲ್ಲಾ ಕಾಣಲ್ವ.!
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿಚಾಮರಾಜನಗರ: ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರವೊಂದರಲ್ಲಿ ಸಾಮೂಹಿಕವಾಗಿ ನಡೆದಿದೆ ಎನ್ನಲಾದ ನಕಲನ್ನು ತಳ್ಳಿ ಹಾಕಿದ ಇಲಾಖೆ ಏನೇಲ್ಲಾ ನೀತಿ ನಿಯಮಗಳನ್ನು ಪಾಲಿಸಬೇಕೆಂಬ ಅರಿವನ್ನು ನಿಯೋಜನೆಗೊಳ್ಳುವ ಶಿಕ್ಷಕರಿಗೆ ಸಮರ್ಪಕವಾಗಿ ನೀಡಿಲ್ಲ ಎಂಬುದಕ್ಕೆ ಚಾಮರಾಜನಗರ ಸ್ಷಷ್ಟವಾಗಿ ಮತ್ತೆ ಮತ್ತೆ ಉದಾಹರಣೆಯಾಗಿದೆ.
ಕೇಂದ್ರದ ಕೊಠಡಿ ಸಮೀಪ ಬ್ಯಾಗಳನ್ನಾಗಲೀ, ಮೊಬೈಲ್ ಬಳಕೆಯನ್ನಾಗಲೀ ಮಾಡಬಾರದೆಂಬ ಪರೀಕ್ಷಾ ನಿಯಮವಿದ್ದರೂ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರದಲ್ಲಿ ನಿಯೋಜನೆಗೊಂಡ ಪರೀಕ್ಷೆ ಸಿಬ್ಬಂದಿಗಳು ಈ ಎಲ್ಲಾ ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ ಎಂಬುದನ್ನು ಎಚ್ಚರಿಸುತ್ತಾ ಬಂದಿದ್ದರೂ ಇನ್ನ ಜಾಗೃತವಾಗಿಲ್ಲ ಎಂದರೆ ತಪ್ಪಾಗಲಾರದು.
ಇತ್ತೀಚೆಗೆ ಪಿ.ಯು.ಸಿ ಪರೀಕ್ಷೆ ಮುಗಿಯಿತು ಅಲ್ಲಿ ಈ ಎಲ್ಲಾ ನಿಯಮಗಳನ್ನು ಉಲ್ಲಂಘಿಸುತ್ತಿರುವ ಬಗ್ಗೆ ಎಚ್ಚೆತ್ತಿಸಿದ ಕೂಡಲೇ ಪಿ.ಯು.ಉಪನಿರ್ದೇಶಕಿ ಶಿಖಾ ಅವರು ಅದಿಕೃತ ನೋಟಿಸ್ ಜಾರಿ ಮಾಡುವ ಮೂಲಕ ಕೇಂದ್ರದಲ್ಲಿ ನಿಯೋಜನೆಗೊಂಡವರಿಗೆ ಎಚ್ಚರಿಸಿದ್ದರು. ಅದರಂತೆ ಕಳೆದ ಎರಡು ಮೂರು ದಿನಗಳ ಹಿಂದೆ ನಡೆಯುತ್ತಿರುವ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರದ ಸುತ್ತ ಇಂತಹ ದೂರುಗಳು, ಚಿತ್ರಣಗಳು ಅದಿಕಾರಿಗಳ ಕಣ್ಣೆದುರೇ ನಡೆಯುತ್ತಿದ್ದರೂ ಸುಮ್ಮನಿದ್ದಾರೆ.
ಗಣಿತ ವಿಷಯವಾದ ಇಂದು ಸಂತ ಜೋಸೆಫ್ ಶಾಲಾ ಕೇಂದ್ರದಲ್ಲಿ ಕೊಠಡಿ ಸಮೀಪವೇ ಪುಸ್ತಕದ ಬ್ಯಾಗ್‍ಗಳಿದ್ದು ಕಂಡುಬಂದವು. ಅದರ ಛಾಯಚಿತ್ರ ತೆಗೆಯಬಾರದು ಎಂದು ಅಲ್ಲಿ ನಿಯೋಜನೆಗೊಂಡಿದ್ದ ಕಸ್ಟೋಡಿಯನ್ನ ಅರ್ಕಪ ಎಂಬುವವರು , ಅದನ್ನು ತೆಗೆಯಬಾರದು, ಅದನ್ನು ತೆಗೆಯಲು ಜಿಲ್ಲಾದಿಕಾರಿ ಅನುಮತಿ ಪಡೆಯಬೇಕೆಂದು ಉದ್ದಟತನ ಉತ್ತರ ನೀಡುವ ಮೂಲಕ ತಮ್ಮ ಕೇಂದ್ರದ ಕಾರ್ಯವೈಖರಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಉಪನಿರ್ದೇಶಕಿ ಮಂಜುಳ ಅವರನ್ನು ಸಂಪರ್ಕಿಸಲಾಗಿ ಕಾರಿಡರ್ ಇಂದ ತೆಗೆಯಬಹುದು ಸೌಜನ್ಯಯುತವಾಗಿ ಹೇಳಿದರೂ ಕೇಂದ್ರ ಪರೀಕ್ಷಾ ಮುಖ್ಯಸ್ಥ ಸಿದ್ದರಾಜು ಎಂಬುವವರು ಮಾತ್ರ ಕ್ಯಾಂಪಸ್ ಇಂದ ತೆಗೆದುಕೊಳ್ಳಿ ಎನ್ನುವ ಇವರಿಗೆ ಕೆಂದ್ರದಲ್ಲಿ ಬರೆಯುತ್ತಿರುವ ವಿದ್ಯಾರ್ಥಿಗಳು, ಕ್ಯಾಂಪಸ್ ನಡುವಿನ ಅಂತರ ಇವರಿಗೆ ಗೊತ್ತಿಲವೇ.? ಎಂಬುದನ್ನು ಅಲ್ಲಿ ಹಾಕಲಾಗಿರುವ ಸಿ.ಸಿ.ಕ್ಯಾಮೆರಾಗಳೆ ಉತ್ತರ ನೀಡಬೇಕಾಗಿದೆ.
ಒಟ್ಟಿನಲ್ಲಿ ಪರೀಕ್ಷಾ ಕೇಂದ್ರದ ನಿಯಮಗಳು ಏನು, ಹೇಗಿರಬೇಕು ಎಂಬ ನಿಯಮಗಳು ಜಿ.ಪಂ.ಸಿ.ಇ.ಒ. ಉಪನಿರ್ದೇಶಕರು, ಜಿಲ್ಲಾದಿಕಾರಿ, ಪೊಲೀಸ್ ವರೀಷ್ಟಾಧಿಕಾರಿಗಳಿಗೆ ಬಿಟ್ಟರೆ ಅಲ್ಲಿ ನಿಯೋಜನೆಗೊಂಡ ಶಿಕ್ಷಕರೆನಿಸಿಕೊಂಡವಿರಿಗೆ ಗೊತ್ತಿಲ್ಲದಿರುವುದು ಮಾತ್ರ ವಿಪರ್ಯಾಸ.
No comments:
Post a Comment