ಎಸ್.ಎಸ್.ಎಲ್.ಸಿ ಪರೀಕ್ಷೆ ಮೌಲ್ಯಮಾಪನಾ ಕಾರ್ಯ: ನಿಷೇಧಾಜ್ಞೆ
ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು(ಕನ್ನಡ), ಸರ್ಕಾರಿ ಬಾಲಕ ಪದವಿ ಪೂರ್ವ ಕಾಲೇಜು(ಇಂಗ್ಲೀಷ್), ಸಂತ ಪೌಲರ ಪ್ರೌಢಶಾಲೆ(ಹಿಂದಿ), ಸಿ.ಆರ್. ಬಾಲರ ಪಟ್ಟಣ ಪ್ರೌಢಶಾಲೆ(ಗಣಿತ), ಜೆ.ಎಸ್.ಎಸ್ ಬಾಲಕಿಯರ ಪ್ರೌಢಶಾಲೆ(ವಿಜ್ಞಾನ) ಮತ್ತು ಸಂತ ಜೋಸೆಫರ ಪ್ರೌಢÀಶಾಲೆ(ಸಮಾಜವಿಜ್ಞಾನ) ಗಳಲ್ಲಿ ಮೌಲ್ಯಮಾಪನ ಕಾರ್ಯ ನಡೆಯಲಿದೆ.
ಈ ನಿಷೇಧಾಜ್ಞೆಯು ಎಸ್.ಎಸ್.ಎಲ್.ಸಿ. ಮೌಲ್ಯಮಾಪನಾ ಕಾರ್ಯ/ಕೆಲಸಕ್ಕೆ ನಿಯೋಜಿತರಾದ ಶಿಕ್ಷಕರು ಹಾಗೂ ಸಿಬ್ದಂದಿಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಏ. 22ರಂದು ನೇರ ಫೋನ್-ಇನ್ ಕಾರ್ಯಕ್ರಮ
ಚಾಮರಾಜನಗರ, ಏ. 21 :- ಸಾರ್ವಜನಿಕ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ಏಪ್ರಿಲ್ 22ರಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನೇರ ಫೋನ್-ಇನ್ ಕಾರ್ಯಕ್ರಮ ಏರ್ಪಡಿಸಲಾಗಿದೆ.ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಇತರೆ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸಾರ್ವಜನಿಕರು ಅಂದು ಬೆಳಿಗ್ಗೆ 10 ರಿಂದ 11 ಗಂಟೆಯವರೆಗೆ ದೂರವಾಣಿ ಸಂಖ್ಯೆ: 08226-224888 ಕರೆ ಮಾಡಿ ತಮ್ಮ ಸಮಸ್ಯೆ, ಕುಂದುಕೊರತೆಗಳನ್ನು ತಿಳಿಸಿ ಪರಿಹಾರ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.
ಏಪ್ರಿಲ್ 24ರಿಂದ ಮೇ 15ರವರೆಗೆ ಬೇಸಿಗೆ ತರಬೇತಿ ಶಿಬಿರ
ಚಾಮರಾಜನಗರ, ಏ. 21 :- ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆವತಿಯಿಂದ 2016-17ನೇ ಸಾಲಿನ ಬೇಸಿಗೆ ತರಬೇತಿ ಶಿಬಿರವನ್ನು ಏಪ್ರಿಲ್ 24ರಿಂದ ಮೇ 15ರ ವರೆಗೆ ಸಂಜೆ 5 ಗಂಟೆಗೆ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಆಯೋಜಿಸಲಾಗಿದೆ.ಚಾಮರಾಜನಗರ ತಾಲೂಕಿನ ಬೇಸಿಗೆ ತರಬೇತಿ ಶಿಬಿರವು ಡಾ. ಬಿಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಕೊಳ್ಳೇಗಾಲ ತಾಲೂಕಿನಲ್ಲಿ ಮಹದೇಶ್ವರ ಪ್ರಥಮ ದರ್eೀ ಕಾಲೇಜಿನ ಪಕ್ಕದಲ್ಲಿರುವ ತಾಲೂಕು ಕ್ರೀಡಾಂಗಣ, ಗುಂಡ್ಲುಪೇಟೆ ತಾಲೂಕಿನಲ್ಲಿ ಡಿ. ದೇವರಾಜ ಅರಸು ತಾಲೂಕು ಕ್ರೀಡಾಂಗಣದಲ್ಲಿ ಮತ್ತು ಯಳಂದೂರು ತಾಲೂಕಿನ ಶಿಬಿರವು ಅಗರ ಗ್ರಾಮದ ಟಿ.ಎಸ್. ಸುಬ್ಬಣ್ಣ ಸಾರ್ವಜನಿಕ ಪ್ರೌಢಶಾಲೆಯಲ್ಲಿ ನಡೆಯಲಿದೆ.
ಚಾಮರಾಜನಗರ ತಾಲೂಕಿನ ಬೇಸಿಗೆ ತರಬೇತಿ ಶಿಬಿರಕ್ಕೆ ಪಿ. ಮಹದೇವಯ್ಯ ಮೊ: 7760841489, ಯಳಂದೂರು ತಾಲೂಕಿಗೆ ಕುಮಾರ್ ಮೊ: 9886526252, ಕೊಳ್ಳೇಗಾಲ ತಾಲೂಕಿಗೆ ಜಯರಾಜು ಮೊ: 9739826369 ಹಾಗೂ ರವಿಕುಮಾರ್ ಮೊ: 9844600492 ಮತ್ತು ಗುಂಡ್ಲುಪೇಟೆ ತಾಲೂಕಿಗೆ ಬಿ.ಕೆ. ಗೋಪಾಲ್ ಮೊ: 9945615695 ಹಾಗೂ ಸ್ವಾಮಿ ಮೊ: 9741821583 ಅವರನ್ನು ತರಬೇತುದಾರರಾಗಿ ನಿಯೊಜಿಸಲಾಗಿದೆ.
ಬೇಸಿಗೆ ತರಬೇತಿ ಶಿಬಿರದಲ್ಲಿ ವಾಲಿಬಾಲ್, ಫುಟ್‍ಬಾಲ್ ಹಾಗೂ ಥ್ರೋಬಾಲ್ ಸ್ಪರ್ಧೆಗಳು ನಡೆಯಲಿವೆ. ಆಯಾ ತಾಲೂಕಿನ ಯುವಕ, ಯುವತಿಯರು ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ. ಭಾಗವಹಿಸುವ ಸ್ಪರ್ಧಾಳುಗಳಿಗೆ ದಿನಭತ್ಯೆ ಹಾಗೂ ಪ್ರಯಾಣಭತ್ಯೆಯನ್ನು ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಚೇರಿ ದೂರವಾಣಿ ಸಂಖ್ಯೆ: 08226-224932 ನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಏ. 22ರಂದು ವಿಶ್ವ ಭೂ ದಿನಾಚರಣೆ ಕುರಿತ ಕಾನೂನು ಅರಿವು ಕಾರ್ಯಕ್ರಮ
ಚಾಮರಾಜನಗರ, ಏ. 21 :- ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದಲ್ಲಿ ಏಪ್ರಿಲ್ 22ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ವ್ಯಾಜ್ಯ ಪೂರ್ವ ಪರ್ಯಾಯ ಪರಿಹಾರ ಕೇಂದ್ರದಲ್ಲಿ ವಿಶ್ವ ಭೂ ದಿನಾಚರಣೆ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.ಕಾರ್ಯಕ್ರಮವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ಅವರು ಉದ್ಘಾಟಿಸಲಿದ್ದಾರೆ. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಅರ್. ವಿರೂಪಾಕ್ಷ ಅಧ್ಯಕ್ಷತೆ ವಹಿಸುವರು.
ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜೆ.ಎಂ.ಎಫ್.ಸಿ ಯವರಾದ ಎಲ್.ಜಿ. ಭವಾನಿ, ಪ್ರಧಾನ ಸಿವಿಲ್ ನ್ಯಾಯಾಧೀಶರು ಹಾಗೂ ಜೆ.ಎಂ.ಎಫ್.ಸಿ ಯವರಾದ ವಿ. ದೀಪಾ ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಜೆ.ಎಂ.ಎಫ್.ಸಿ ಯವರಾದ ಸಂದೇಶ್ ವಿ. ಭಂಡಾರಿ ಅವರುಗಳು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು
No comments:
Post a Comment