ಗುಂಡ್ಲುಪೇಟೆ ವಿಧಾನಸಭಾ ಚುನಾವಣೆ :
ವಿವಿಧ ಪ್ರಕರಣ ದಾಖಲು
ಚಾಮರಾಜನಗರ ಏಪ್ರಿಲ್ 9, :- ಗುಂಡ್ಲುಪೇಟೆ ವಿಧಾನಸಭಾ ಉಪ ಚುನಾವಣೆ ಸಂಬಂಧಿಸಿದಂತೆ ಸೆಕ್ಟರ್ ಹಾಗೂ ಪ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ನೀಡಿದ ದೂರಿನ ಆಧಾರ ಮೇಲೆ ವಿವಿಧ ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಏಪ್ರಿಲ್ 7 ರಂದು ದಡದಹಳ್ಳಿ ಗ್ರಾಮದಲ್ಲಿ ಚಿಕ್ಕಸಿದ್ದಶೆಟ್ಟಿ ಅವರ ಮನೆ ಪಕ್ಕದಲ್ಲಿ ಜನರು ಜಮಾಯಿಸಿದ್ದಾರೆ. ಎಂಬ ಮಾಹಿತಿ ಮೇರೆಗೆ ಮನೆ ಪರಿಶೀಲಿಸಿದಾಗ 2000 ರೂಪಾಯಿಯ 15 ನೋಟುಗಳು ಮನೆಯೊಳಗೆ ಬಿದ್ದಿರುವುದು ಕಂಡುಬಂದಿದ್ದು ಪ್ರಕರಣ ದಾಖಲಿಸಲಾಗಿದೆ.
ಏಪ್ರಿಲ್ 7 ರಂದು ಅನುಮತಿ ಪಡೆಯದೆ ಸುಮಾರು 150 ಕಾಂಗ್ರೆಸ್ ಕಾರ್ಯಕರ್ತರು ಡಾ.ಬಿ.ಆರ್.ಅಂಬೇಡ್ಕರ್ ಸಾರ್ವಜನಿಕ ವಿದ್ಯಾರ್ಥಿನಿಲಯದಲ್ಲಿ ಸಭೆ ನಡೆಸಿರುವ ಬಗ್ಗೆ ಪ್ಲೈಯಿಂಗ್ ಸ್ಕ್ವಾಡ್ ನೀಡಿರುವ ದೂರಿನ ಮೇರೆಗೆ ಹಾಸ್ಟೆಲ್ ವಾರ್ಡನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಕುರುಬರಹುಂಡಿ ಚೆಕ್ ಪೋಸ್ಟ್ ಬಳಿ ಏಪ್ರಿಲ್ 7 ರಂದು ಅನುಮತಿ ಪಡೆಯದೆ ಇದ್ದ ಕಾಂಗ್ರೆಸ್ ಚಿಹ್ನೆ ಇರುವ 2 ಛತ್ರಿಯನ್ನು ಕಾರಿನಿಂದ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
ಅನುಮತಿ ಪಡೆಯದೆ ಚಿಕ್ಕಾಟಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಸ್ಕಾರ್ಪಿಯೋ ವಾಹನದಲ್ಲಿ ಪ್ರಚಾರ ಮಾಡತ್ತಿದ್ದ ಮೂವರನ್ನು ವಿಚಾರಣೆಗೆ ಒಳಪಡಿಸಿ ವಾಹನ ಪರಿಶೀಲಿಸಿದಾಗ ಅದರಲ್ಲಿ 3,14,630 ರೂ. ಇರುವುದು ಕಂಡುಬಂದಿದ್ದು ನಗದು, ಕಾರ್ ವಶಪಡಿಸಿಕೊಂಡು ಮೂವರನ್ನು ದಸ್ತಗಿರಿ ಮಾಡಿ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಚುನಾವಣಾಧಿಕಾರಿ ನಳಿನ್ ಅತುಲ್ ಅವರು ತಿಳಿಸಿದ್ದಾರೆ.
No comments:
Post a Comment