Thursday, 9 March 2017
ಗುಂಡ್ಲುಪೇಟೆ ಬೈ ಎಲೆಕ್ಷನ್ ಯಾವಾಗ,ಎಷ್ಟು ಮತದಾರರು, ಆಯೋಗ ಜಾರಿ ತಂದ ನೀತಿ ನಿಯಮಗಳ ಬಗ್ಗೆ ತಿಳಿಯಲು ಓದಿ
224- ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸಂಬಂಧ ದಿನಾಂಕ 09.03.2017 ರಂದು ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಯುವ ಪತ್ರಿಕಾ ಗೋಷ್ಟಿ
ಚುನಾವಣೆ ಅಧಿಸೂಚನೆ ಹೊರಡಿಸುವ ದಿನಾಂಕ : 14.03.2017 ( ಮಂಗಳವಾರ )
ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ : 21.03.2017 ( ಮಂಗಳವಾರ )
ನಾಮಪತ್ರಗಳ ಪರಶೀಲನೆ ದಿನಾಂಕ : 22.03.2017 ( ಬುಧವಾರ )
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನಾಂಕ : 24.03.2017 ( ಶುಕ್ರವಾರ )
ಮತದಾನದ ದಿನಾಂಕ : 09.04.2017 ( ಭಾನುವಾರ )
ಮತ ಎಣಿಕೆ ದಿನಾಂಕ : 13.04.2017 ( ಗುರುವಾರ )
ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗುವ ದಿನಾಂಕ : 15.04.2017 ( ಶನಿವಾರ )
ಚುನಾವಣೆ ನಡೆಸಲು ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕ ಮಾಡುವ ಬಗ್ಗೆ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ನೇಮಕಾತಿ ಬಗ್ಗೆ ಆಯೋಗದ ಅಧಿಸೂಚನೆಯನ್ನು ನಿರೀಕ್ಷಿಸಲಾಗಿದೆ.
ಚುನಾವಣಾ ನೀತಿ ಸಂಹಿತೆ ದಿನಾಂಕ 09.03.2017 ರಿಂದಲೇ ಜಿಲ್ಲೆಯಾದ್ಯಂತ ಹಾಗೂ ಭಾರತ ಚುನಾವಣಾ ಆಯೋಗದ ಪತ್ರದ ಸಂಖ್ಯೆ 437/ಐಎನ್‍ಎಸ್‍ಟಿ 2012 ಸಿಸಿ & ಬಿಇ ದಿನಾಂಕ 26.04.2012 ರ ನಿರ್ದೇಶನದಂತೆ ಅನ್ವಯವಾಗಲಿದೆ.
ಚುನಾವಣಾ ನೀತಿ ಸಂಹಿತೆಯು ಎಲ್ಲಾ ಅಭ್ಯರ್ಥಿಗಳಿಗೆ ಹಾಗೂ ಎಲ್ಲಾ ರಾಜಕೀಯ ಪಕ್ಷಗಳಿಗೆ ಅನ್ವಯವಾಗಲಿದೆ.
ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಒಟ್ಟು ಮತಗಟ್ಟೆಗಳು : 250 ಮತಗಟ್ಟೆಗಳು
ದಿನಾಂಕ 01.01.2017 ಕ್ಕೆ ಅನ್ವಯಿಸುವಂತೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ
ಮತದಾರರ ವಿವರ
ಒಟ್ಟು ಮತದಾರರು ಪುರುಷ ಮತದಾರರು ಮಹಿಳಾ ಮತದಾರರು ಇತರೆ
1,98,879 99,155 99,707, 17
ಚುನಾವಣೆಗೆ ಅಗತ್ಯವಾಗಿರುವ 351 ಬ್ಯಾಲೆಟ್ ಯೂನಿಟ್ ಮತ್ತು 288 ಕಂಟ್ರೋಲ್ ಯೂನಿಟ್ ಮತಯಂತ್ರಗಳ ಪ್ರಥಮ ಹಂತದ ಪರಿಶೀಲನೆಯನ್ನು ಬಿ.ಇ.ಎಲ್ ತಂತ್ರಜ್ಞರಿಂದ ನಡೆಸಲಾಗಿರುತ್ತದೆ.
ಚುನಾವಣಾ ಆಯೋಗದ ಪತ್ರಿಕಾ ಪ್ರಕಟಣಾ ದಿನಾಂಕ 09.03.2017 ರಂತೆ ಜಿಲ್ಲೆಯಾದ್ಯಂತ ಚುನಾವಣಾ ನೀತಿ ಸಂಹಿತೆ ಈ ತಕ್ಷಣದಿಂದಲೇ ಜಾರಿಯಲ್ಲಿರುತ್ತದೆ. ಮಾದರಿ ನೀತಿ ಸಂಹಿತೆ ಬಗ್ಗೆ ಭಾರತ ಚುನಾವಣಾ ಆಯೋಗದ ಪತ್ರದ ಸಂಖ್ಯೆ 437/ಐಎನ್‍ಎಸ್‍ಟಿ 2012 ಸಿಸಿ & ಬಿಇ ದಿನಾಂಕ 26.04.2012 ರ ಪತ್ರದಲ್ಲಿ ಸ್ಪಷ್ಟೀಕರಣ ನೀಡಿದ್ದು, ಸ್ಪಷ್ಟೀಕರಣದಂತೆ ನರೇಗಾ ಕಾಮಗಾರಿಗಳು, ಪ್ರಕೃತಿ ವಿಕೋಪ, ಬರ, ಪ್ರವಾಹ, ಕುಡಿಯುವ ನೀರು, ಕೊಳವೆ ಬಾವಿ ಕೊರೆಯುವ, ಮೇವು, ರೈತರಿಗೆ ನೀಡುವ ಇನ್‍ಫುಟ್ ಸಬ್ಸಿಡಿ, ಅಭಿವೃದ್ದಿ ಕಾರ್ಯಗಳಾದ ಎಂಪಿಲ್ಯಾಡ್, ಎಂಎಲ್‍ಎ ಮತ್ತು ಎಂಎಲ್‍ಸಿ, ಯೋಜನೆಗಳ ಕಾಮಗಾರಿಗಳು, ಹೊಸ ಯೋಜನೆ ಘೋಷಣೆ, ಹಣಕಾಸು ಮಂಜೂರಾತಿ, ಇವುಗಳಿಗೆ ಸಂಬಂಧಿಸಿದಂತೆ ಮಾದರಿ
ನೀತಿ ಸಂಹಿತೆಯು ಉಪ ಚುನಾವಣೆ ನಡೆಯುವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಮಾತ್ರ
ಅನ್ವಯವಾಗುತ್ತದೆ.
ಆದರೆ ಮಂತ್ರಿಗಳ ಪ್ರವಾಸ, ಸರ್ಕಾರಿ ವಾಹನಗಳ ಬಳಕೆ, ಪ್ರಚಾರ ಸಭೆ ಸಮಾರಂಭ ಮತ್ತು ಸರ್ಕಾರಕ್ಕೆ ಸೇರಿದ ಪ್ರವಾಸಿ ಮಂದಿರಗಳ ಬಳಕೆಗೆ ಸಂಬಂದಿಸಿದಂತೆ, ಮಾದರಿ ನೀತಿ ಸಂಹಿತೆಯು ಇಡೀ ಜಿಲ್ಲೆಯಾದ್ಯಂತ ಅನ್ವಯವಾಗುತ್ತದೆ.
ಜಿಲ್ಲೆಯಾದ್ಯಂತ ಸರ್ಕಾರಿ ವಸತಿ ಗೃಹವನ್ನು ಅಧಿಗ್ರಹಿಸಿಕೊಳ್ಳಲು ತಾಲ್ಲೂಕು ತಹಶೀಲ್ದಾರರುಗಳಿಗೆ ಸೂಚನೆ ನೀಡಲಾಗಿದೆ.
ಜಿಲ್ಲೆಯಾದ್ಯಂತ ನಿರ್ಮಿಸಲಾಗಿರುವ ರಾಜಕೀಯ ವ್ಯಕ್ತಿಗಳ ಕಟೌಟ್ ಮತ್ತು ಬ್ಯಾನರ್ಸ್ ಗಳನ್ನು ತೆರವುಗೊಳಿಸಲು ತಹಶೀಲ್ದಾರರಿಗೆ ನಿರ್ದೇಶನ ನೀಡಲಾಗಿದೆ.
ರಾಜಕೀಯ ಪಕ್ಷಗಳು / ಚುನಾವಣೆಯಲ್ಲಿ ಸ್ಪರ್ಧಿಸುವ ಆಭ್ಯರ್ಥಿಗಳು ಸಭೆ ಸಮಾರಂಭ ನಡೆಸಲು ಮತ್ತು ಚುನಾವಣಾ ಪ್ರಚಾರಕ್ಕೆ ವಾಹನವನ್ನು ಬಳಸಲು ಸಂಬಂಧಿಸಿದ ಚುನಾವಣಾಧಿಕಾರಿಗಳಿಂದ/ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯುವುದು.
ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಜಿಲ್ಲಾ ಮಟ್ಟದಲ್ಲಿ ಮಾದರಿ ನೀತಿ ಸಂಹಿತೆ ಪಾಲನೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಚುನಾವಣಾ ಒeಜiಚಿ ಅeಡಿಣiಜಿiಛಿಚಿಣioಟಿ ಚಿಟಿಜ ಒoಟಿiಣoಡಿiಟಿg ಅommiಣಣee( ಒ.ಅ.ಒ.ಅ ಖಿeಚಿm ) ತಂಡ ರಚನೆ
ಚುನಾವಣಾ ನೀತಿ ಸಂಹಿತೆ ಪಾಲನೆಗೆ ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಮಟ್ಟದ ತಂಡ ರಚನೆ
ಚುನಾವಣಾ ನೀತಿ ಸಂಹಿತೆ ಪಾಲನೆಗೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ 10 ರಿಂದ 12 ಮತಗಟ್ಟೆಗಳಿಗೆ ಒಬ್ಬರಂತೆ ಸೆಕ್ಟರ್ ಆಫೀಸರ್ ನೇಮಕ
ಚುನಾವಣಾ ನೀತಿ ಸಂಹಿತೆ ಪಾಲನೆಗೆ ಪ್ಲೈಯಿಂಗ್ ಸ್ಕ್ವಾಡ್, ಸ್ಟ್ಯಾಟಿಕ್ ಸರ್ವೇಲೇನ್ಸ್ ತಂಡ, ಚೆಕ್‍ಪೋಸ್ಟ್‍ಗಳಿಗೆ ಅಧಿಕಾರಿಗಳ ತಂಡ ನೇಮಕ
ವೀಡಿಯೋ ವೀವಿಂಗ್ ತಂಡ ಮತ್ತು ವೀಡಿಯೋ ಸರ್ವೇಲೆನ್ಸ್ ತಂಡ ರಚನೆ.
ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಚುನಾವಣಾ ವೆಚ್ಚ ಪರಿಶೀಲನೆಗೆ ಅಧಿಕಾರಿಗಳ ನೇಮಕ
ಪೊಲೀಸ್ ಇಲಾಖೆಯ ವರದಿಯ ಮೇರೆಗೆ ಸೂಕ್ಷ್ಮ, ಅತೀಸೂಕ್ಷ್ಮ ಮತಗಟ್ಟೆಗಳನ್ನು ವಿಂಗಡಿಸಲಾಗುವುದು.
ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಚುನಾವಣಾ ವೆಚ್ಚ ಮಿತಿಯು ಆಯೋಗದ ನಿರ್ದೇಶನಕ್ಕೊಳಪಟ್ಟಿರುತ್ತದೆ.
**********************************************************
ಸ್ಥಾಯಿ ಸಮಿತಿ ಸಭೆ ಮುಂದೂಡಿಕೆ
ಚಾಮರಾಜನಗರ, ಮಾ.09 ;- ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಮಾ. 10ರಂದು ನಡೆಯಬೇಕಾಗಿದ್ದ ಚಾಮರಾಜನಗರ ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಸ್ಥಾಯಿ ಸಮಿತಿ ಹಾಗೂ ಹಣಕಾಸು ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿಯ ಸಭೆಗಳನ್ನು ಮುಂದೂಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯಯೋಜನಾಧಿಕಾರಿ ಎಂ.ಮಾದೇಶು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*******************************************************
ತಾಲ್ಲೂಕು ಮಟ್ಟದ ವಸ್ತುಪ್ರದರ್ಶನ ಮಾರಾಟ ಮೇಳ
ಚಾಮರಾಜನಗರ, ಮಾ.09 - ಮಾರುಕಟ್ಟೆ ಯೋಜನೆ ನೆರವು ಯೋಜನೆಯಡಿ ಮಹಿಳಾ ಅಭಿವೃದ್ಧಿ ನಿಗಮದ ವತಿಯಿಂದ ತಾಲ್ಲೂಕು ಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಚಾಮರಾಜನಗರದ ದೊಡ್ಡ ಅಂಗಡಿ ಬೀದಿಯ ವಾಸವಿ ಮಹಲಿನಲ್ಲಿ ಮಾ.10ರಿಂದ 12ರವರಗೆ ಆಯೋಜಿಸಲಾಗಿದೆ.
ಅಲ್ಲದೆ ಕೊಳ್ಳೇಗಾಲ ಪಟ್ಟಣದ ಡಾ.ರಾಜ್‍ಕುಮಾರ್ ರಸ್ತೆಯ ಕಲಾಮಂಟಪದಲ್ಲಿ ಮಾ.13ರಿಂದ 15ರವರೆಗೆ ಆಯೋಜಿಸಲಾಗಿದೆ ಎಂದು ಮಹಿಳಾ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*********************************************************
ಗಾಂಜಾ ಬೆಳೆದ ವ್ಯಕ್ತಿಗೆ ಶಿಕ್ಷೆ
ಚಾಮರಾಜನಗರ, ಮಾ. 09 :- ಅಕ್ರಮವಾಗಿ ಗಾಂಜಾ ಬೆಳೆದ ವ್ಯಕ್ತಿಯೊಬ್ಬರಿಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 2 ವರ್ಷಗಳ ಸಜೆ ಮತ್ತು 2 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಕೊಳ್ಳೇಗಾಲ ತಾಲೂಕಿನ ರಾಮಾಪುರದ ದೊಮ್ಮನಗದ್ದೆ ಗ್ರಾಮದ ರಾಜೂನಾಯ್ಕ ತನ್ನ ತಾಯಿಯ ಹೆಸರಿನಲ್ಲಿದ್ದ ಜಮೀನಿನಲ್ಲಿ ಮೆಣಸಿನ ಫಸಲಿನ ಜತೆ ಅಕ್ರಮವಾಗಿ 22 ಗಾಂಜಾಗಿಡಗಳನ್ನು ಬೆಳೆದಿದ್ದರು. ಈ ಆರೋಪ ರುಜುವಾತಾದ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ಅವರು ಅಪರಾಧಿಗೆ 2 ವರ್ಷಗಳ ಸಜೆ ಹಾಗೂ 2 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರದ ಅಭಿಯೋಜಕರಾದ ಟಿ.ಎಚ್. ಲೋಲಾಕ್ಷಿ ವಾದ ಮಂಡಿಸಿದ್ದರು.
*************************************************************
ಹೆಚ್1 ಎನ್1 : ಅರಿವು ಮೂಡಿಸಲು ಆರೋಗ್ಯ ಇಲಾಖೆಯಿಂದ ಸಲಹೆ
ಚಾಮರಾಜನಗರ, ಮಾ. 09 :- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹೆಚ್1ಎನ್1 ರೋಗದ ಕುರಿತು ಸಾರ್ವಜನಿಕರ ಅರಿವಿಗಾಗಿ ಕೆಲವು ಸಲಹೆಗಳನ್ನು ಮಾಡಿದೆ.
ಹೆಚ್1ಎನ್1 ರೋಗವು ಇನ್‍ಫ್ಲೂಯೆಂಜಾ ಎ ಎಂಬ ವೈರಸ್ ಸೋಂಕಿನಿಂದ ಉಂಟಾಗುವ ಕಾಯಿಲೆಯಾಗಿದೆ.
ಶೀತ, ತಲೆನೋವು, ಕೆಮ್ಮು ಮತ್ತು ಜ್ವರ ಕಾಣಿಸಿಕೊಂಡು ಚಳಿಯ ಜತೆ ದೇಹ ಬಳಲುತ್ತದೆ. ಕೆಲವೊಮ್ಮೆ ವಾಂತಿ ಬೇಧಿ ಸಹ ಆಗುವುದು. ಉಸಿರಾಟದಲ್ಲಿ ತೊಂದರೆ ಕಾಣಿಸುವುದು ಇದರ ಲಕ್ಷಣಗಳಾಗಿದ್ದು ವ್ಯಕ್ತಿಗಳು ಕೆಮ್ಮಿದಾಗ, ಸೀನಿದಾಗ ಇತರರಿಗೆ ಈ ವೈರಸ್ ಹರಡುತ್ತದೆ.
ಈ ರೋಗಕ್ಕೆ ಪರಿಣಾಮಕಾರಿಯಾದ ಔಷಧಿ ಲಭ್ಯವಿದ್ದು ಒಸೆಲ್ಟಮಿವರ್ (ಟ್ಯಾಮಿಫ್ಲೂ) ಔಷಧಿಯನ್ನು ವೈದ್ಯರ ಸಲಹೆ ಮೇರೆಗೆ ಪಡೆಯಬಹುದು.
ಹೆಚ್1ಎನ್1 ರೋಗಕ್ಕೆ ಒಳಗಾದವರು ಕೆಮ್ಮುವಾಗ, ಸೀನುವಾಗ ಕರವಸ್ತ್ರ ಅಥವ ಟಿಶ್ಯೂ ಪೇಪರ್‍ನಿಂದ ಮೂಗನ್ನು ಮುಚ್ಚಿಕೊಳ್ಳಬೇಕು. ಕೈಗಳನ್ನು ಆಗಿಂದಾಗ್ಗೆ ಸಾಬೂನಿನಿಂದ ತೊಳೆಯಬೇಕು. ಸ್ನಾನ ಮಾಡಿ ಶುಭ್ರವಾದ ಬಟ್ಟೆ ಧರಿಸಬೇಕು. ಸೋಂಕು ಇದ್ದಲ್ಲಿ ಮಾಸ್ಕ್ ಧರಿಸಿ ಮನೆಯಲ್ಲಿಯೇ ಇರುವುದು ಉತ್ತಮ. ಸೂಕ್ಷ್ಮ ಹಾಗೂ ಚಿಕ್ಕಮಕ್ಕಳಿಂದ ದೂರವಿರಬೇಕು. ವಿಶ್ರಾಂತಿ ಪಡೆಯಬೇಕು. ಪೌಷ್ಠಿಕ ಆಹಾರ ಸೇವಿಸಬೇಕು. ಉಸಿರಾಟದ ತೊಂದರೆ ಕಂಡುಬಂದಲ್ಲಿ ತಕ್ಷಣ ವೈದ್ಯರ ಸಲಹೆ ಪಡೆಯಬೇಕು.
ಹೆಚ್1ಎನ್1 ಸೋಂಕಿತರ ಬಳಿ ಅತೀ ಸಮೀಪ ಹೋಗಬಾರದು. ಹಸ್ತಲಾಘವ, ತಬ್ಬಿಕೊಳ್ಳುವುದು, ಚುಂಬಿಸುವುದನ್ನು ಮಾಡಬಾರದು. ವೈದ್ಯರ ಸಲಹೆ ಪಡೆಯದೆ ಔಷಧಿ ಸೇವನೆ ಮಾಡಬಾರದು. ಜನನಿಬಿಡ ಪ್ರದೇಶದಲ್ಲಿ ಕರವಸ್ತ್ರದಿಂದ ಮುಚ್ಚಿಕೊಳ್ಳದೇ ಕೆಮ್ಮುವುದು ಹಾಗೂ ಸೀನುವುದು ಮಾಡಬಾರದು. ಕಣ್ಣು, ಮೂಗು, ಬಾಯಿಯನ್ನು ಆಗಿಂದಾಗ್ಗೆ ಮುಟ್ಟಬಾರದು ಹಾಗೂ ಎಲ್ಲೆಂದರಲ್ಲಿ ಉಗುಳದಂತೆ ಸಲಹೆ ನೀಡಲಾಗಿದೆ.
ಮಕ್ಕಳಲ್ಲಿ ತೀವ್ರ ಉಸಿರಾಟ, ಮೈ ನೀಲಿಯಾಗುವುದು, ಸಾಕಷ್ಟು ದ್ರವ ಪದಾರ್ಥ ಸÉೀವನೆಗೆ ತೊಂದರೆ, ಎಚ್ಚರ ತಪ್ಪುವಿಕೆ, ಅತಿಯಾದ ಕಿರಿಕಿರಿ, ತೀವ್ರತರ ಜ್ವರ ಮತ್ತು ಕೆಮ್ಮು, ಜ್ವರದ ಜತೆ ಮೇಮೇಲೆ ಗಂಧೆಗಳು ಏಳುವುದು ಅಪಾಯದ ಚಿಹ್ನೆಗಳಾಗಿವೆ.
ದೊಡ್ಡವರಲ್ಲಿ ಉಸಿರಾಟದ ತೊಂದರೆ, ಎದೆ ಹಾಗೂ ಹೊಟ್ಟೆಯಲ್ಲಿ ನೋವು ಅಥವಾ ಒತ್ತಡ, ಇದ್ದಕ್ಕಿದ್ದಂತೆ ತಲೆ ಸುತ್ತುವಿಕೆ ಹಾಗೂ ತೀವ್ರ ಅಥವಾ ನಿರಂತರ ವಾಂತಿಯಾಗುವುದು ಸೋಂಕಿತರಲ್ಲಿನ ಅಪಾಯದ ಚಿಹ್ನೆಗಳಾಗಿವೆ.
ಈ ಬಗೆಯ ರೋಗಲಕ್ಷಣಗಳು ಕಂಡುಬಂದರೆ ತಕ್ಷವೇ ವೈದ್ಯರನ್ನು ಸಂಪರ್ಕಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಣ್ಗಾವಲು ಘಟಕ ಅಥವಾ ದೂರವಾಣಿ ಸಂಖ್ಯೆ 08226-226561ನ್ನು ಸಂಪಕಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಜಿಲ್ಲಾ ಸರ್ವಲೆನ್ಸ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
******************************************************************
ಪ್ರವಾಸಿ ಟ್ಯಾಕ್ಸಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಮಾ. 09- ಪ್ರವಾಸೋದ್ಯಮ ಇಲಾಖೆ ವತಿಯಿಂದ ಹಿಂದುಳಿದ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಸ್ವಯಂ ಉದ್ಯೋಗ ಕಲ್ಪಿಸಿಕೊಳ್ಳುವ ಸಲುವಾಗಿ 2 ಲಕ್ಷ ರೂ. ಸಹಾಯಧನದೊಂದಿಗೆ ಪ್ರವಾಸಿ ಟ್ಯಾಕ್ಸಿ ಒದಗಿಸುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿದಾರರು ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರಾಗಿರಬೇಕು. 20 ರಿಂದ 40ರ ವಯೋಮಿತಿಯೊಳಗಿರಬೇಕು. ಕನಿಷ್ಟ 10ನೇ ತರಗತಿ ಉತ್ತೀರ್ಣರಾಗಿರಬೇಕು. ಲಘುವಾಹನ ಚಾಲನಾ (ಎಲ್‍ಎಂವಿ) ಪರವಾನಗಿ ಪಡೆದು ಕನಿಷ್ಟ ಒಂದು ವರ್ಷವಾಗಿರಬೇಕು. ಬ್ಯಾಡ್ಜ್ ಹೊಂದಿರುವುದು ಕಡ್ಡಾಯವಾಗಿದೆ. ಅರ್ಜಿದಾರರು ಹಾಗೂ ಅವರ ಕುಟುಂದವರು ಯಾವುದೇ ಸರ್ಕಾರಿ ಇಲಾಖೆ ಅಥವಾ ನಿಗಮ ಮಂಡಳಿಗಳಲ್ಲಿ ನೌಕರಿಯಲ್ಲಿರಬಾರದು. ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಅರ್ಜಿ ಸಲ್ಲಿಸುವ ಅವಕಾಶವಿದೆ.
ಅರ್ಜಿಯನ್ನು ನಗರದ ಜಿಲ್ಲಾಡಳಿತ ಭವನದ 2ನೇ ಮಹಡಿಯಲ್ಲಿರುವ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯಿಂದ ಮಾರ್ಚ್ 25ರವರೆಗೆ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಮಾರ್ಚ್ 15 ರಿಂದ ಏಪ್ರಿಲ್ 4ರೊಳಗೆ ಸಲ್ಲಿಸಬೇಕು. ಸಂಪೂರ್ಣ ವಿವರಗಳಿಗೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
ಪರಿಷ್ಕøತ ಕರಡು ಮಾರ್ಗಸೂಚಿ ದರಪಟ್ಟಿ : ಆಕ್ಷೇಪಣೆ ಸಲ್ಲಿಕೆಗೆ ಅವಕಾಶ
ಚಾಮರಾಜನಗರ, ಮಾ. 09 - ಜಿಲ್ಲೆಯ ಎಲ್ಲಾ ಉಪನೋಂದಣಿ ಕಚೇರಿಗಳ 2017-18ನೇ ಸಾಲಿನ ಪರಿಷ್ಕøತ ಕರಡು ಮಾರ್ಗಸೂಚಿ ದರಪಟ್ಟಿ ಪ್ರಕಟಿಸಿದ್ದು ಈ ಸಂಬಂಧ ಆಕ್ಷೇಪಣೆಗಳಿದ್ದಲ್ಲಿ ಮಾರ್ಚ್ 12ರೊಳಗೆ ಲಿಖಿತವಾಗಿ ಸಲ್ಲಿಸಬಹುದಾಗಿದೆ.
ಆಯಾ ತಾಲೂಕು ಮಾರುಕಟ್ಟೆ ಮೌಲ್ಯಮಾಪನ ಉಪಸಮಿತಿಯ ತೀರ್ಮಾನದಂತೆ ಪರಿಷ್ಕøತ ಕರಡು ಮಾರ್ಗಸೂಚಿ ದರಪಟ್ಟಿ ಸಿದ್ಧಗೊಂಡಿದೆ. ಈ ಪಟ್ಟಿಯನ್ನು ಆಯಾ ಉಪನೋಂದಣಿ ಕಚೇರಿಯೂ ಸೇರಿದಂತೆ ತಾಲೂಕಿನ ಪ್ರಮುಖ ಕಚೇರಿ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.
ಆಕ್ಷೇಪಣೆಗಳಿದ್ದಲ್ಲಿ ಸಾರ್ವಜನಿಕರು ಆಯಾ ತಾಲೂಕಿನ ಉಪನೋಂದಣಾಧಿಕಾರಿ ಹಾಗೂ ಸದಸ್ಯ ಕಾರ್ಯದರ್ಶಿ, ಮಾರುಕಟ್ಟೆ ಮೌಲ್ಯಮಾಪನ ಉಪಸಮಿತಿ ಉಪನೋಂದಣಿ ಕಚೇರಿಗೆ ಸಲ್ಲಿಸಬಹುದೆಂದು ಜಿಲ್ಲಾ ನೋಂದಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
***********************************
ತಪಾಸಣೆ : ಗ್ರಂಥಾಲಯ ಸೇವೆ ತಾತ್ಕಾಲಿಕ ಸ್ಥಗಿತ
ಚಾಮರಾಜನಗರ, ಮಾ. 09 - ಜಿಲ್ಲಾ ಕೇಂದ್ರ ಗ್ರಂಥಾಲಯ ಹಾಗೂ ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಯಳಂದೂರು ಗ್ರಂಥಾಲಯಗಳಲ್ಲಿ ಪುಸ್ತಕ ಹಾಗೂ ಪೀಠೋಪಕರಣಗಳ ದಾಸ್ತಾನು ತಪಾಸಣೆ ಕಾರ್ಯ ಮಾರ್ಚ್ 13ರವರೆಗೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಅವಧಿಯಲ್ಲಿ ಗ್ರಂಥಾಲಯ ಸೇವೆ ಸ್ಥಗಿತವಾಗಿದೆ.
ಓದುಗರು ಸದರಿ ಅವಧಿಯಲ್ಲಿ ಎರವಲು ಪುಸ್ತಕಗಳನ್ನು ಹಿಂತಿರುಗಿಸಬಹುದೆಂದು ಜಿಲ್ಲಾ ಕೇಂದ್ರ ಗ್ರಂಥಾಲಯ ಅಧಿಕಾರಿ ನಾಗವೇಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ೋ
Subscribe to:
Post Comments (Atom)
01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ
ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ* ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...
ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು
-
ಹ್ಯಾಟ್ಸ್ ಆಫ್.. ಟು.. ಎಮ್.ಎಲ್.ಎ. ಪುಟ್ಟರಂಗಶೆಟ್ಟಿ ಸಾಹೇಬ್ರೇ..! . … ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ದಯಮಾಡಿ ಕ್ಷಮಿಸಿ ಯಾರ ಹಂಗಿಗೂ ಒಳಗಾ...
-
ವರ್ಷದಲ್ಲಿ ಮೂರು ಬಾರಿ ವರ್ಗಾವಣೆ ಕಸರತ್ತು ನಡೆಸಿದ ಸರ್ಕಾರ, ರಜೆಯನ್ನೆ ಹಾಕದೇ ವರ್ಷ ಪೂರೈಸಿದ ಎಸ್ಪಿ ಕುಲದೀಪ್ ಕುಮಾರ್ ಜೈನ್ ವರದಿ ರಾಮಸಮುದ್ರ ಎಸ್.ವೀ...
-
ಮಿಸ್ ಯೂ ಟು ಆಲ್, ಥ್ಯಾಂಕ್ಯು ಟು ಆಲ್ ಎಂದು ಭಾವುಕದಿಂದ ಕಣ್ಣೀರಿಟ್ಟ ಎಸ್ಪಿ ಜೈನ್ ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ...
-
ನವ ದಂಪತಿಗಳಿಗೆ ನಿರಾಸೆ............................... ಚಾಮರಾಜೇಶ್ವರ ರಥೋತ್ಸವ, ನಡೆಯುತ್ತಾ.! ಚಾಮರಾಜನಗರ, ಮೇ : ಆಷಾಢದಲ್ಲಿ ನಡೆಯುವ ಏಕೈಕ ರಥೋತ್ಸವ ಎಂಬ ಖ...
-
ಇಂಜಿನಿಯರಿಂಗ್ ವಿದ್ಯಾರ್ಥಿನಿ: ಆತ್ಮಹತ್ಯೆಗೆ ಯತ್ನ ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ ಮೇ 18: ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಪ್...
-
******************************************************* ಎಸ್ಪಿ ಕುಲದೀಪ್ ಕುಮಾರ್ ಜೈನ್ ಪ್ರಾಣಾಪಾಯದಿಂದ ಪಾರು REPORTED BY S.VEERABHADRA SWAMY. R...
-
ಅಂಗಡಿ ಮುಗ್ಗಟ್ಟು ನೆಲಸಮ: ಅದ್ಬುತವಾಗಿ ಕಾಣಲಿದಿಯೇ ಚಾಮರಾಜೇಶ್ವರ ದೇವಾಲಯ.. VSS ಅಂಗಡಿ ಮುಗ್ಗಟ್ಟು ನೆಲಸಮ: ಅದ್ಬುತವಾಗಿ ಕಾಣಲಿದಿಯೇ ಚಾಮರಾಜೇಶ...
-
ಅಕ್ರಂ ದಂದೆಗಳನ್ನ ಮಟ್ಟ ಹಾಕಿದ ಚಾಮರಾಜನಗರದ ಐ. ಪಿ.ಎಸ್ ಆದಿಕಾರಿ ಎಸ್ಪಿ ಕುಲದೀಪ್ ಕುಮಾರ್ ಆರ್ ಜೈನ್ ವರ್ಗಾವಣೆ, ಶ್ರೀ ಧರ್ಮೇಂದ್ರ ಕುಮಾರ್ ಮೀನಾ, (ಐಪಿಎಸ್.) ...
-
ನ್ಯೂ ಬೀಟ್ ಸಿಸ್ಟಂ…ಹಾಗಂದ್ರೇನು..? ಪ್ರತಿಯೊಬ್ಬಸಾರ್ವಜನಿಕ ಗಮನಕ್ಕೆ ಸುದ್ದಿ ಓದಿದ ಮೇಲೆ ಶೇರ್ ಮಾಡುವುದನ್ನು ಮರೆಯಬೇಡಿ..ನಿಮ್ಮ ಬೀದಿಗೆ ಬಂದಾಗ ಪೋಲೀಸರೊಂದ...
-
ಕೇಸರಿ ದ್ವಜ ಮತ್ತು ಸ್ಕೂಟರ್ ಬೆಂಕಿಹಾಕಿದ ದುಷ್ಕರ್ಮಿಗಳು ವರದಿ: ರಾಮಸಮುದ್ರ ಎಸ್ ವೀರಭದ್ರಸ್ವಾಮಿ (ವಾಹನದ ನಂಬರ್ ಅನ್ನು ನಾವೇ ಅಳಸಿಲಾಗಿದೆ. ಕ್ಷಮ...
No comments:
Post a Comment