Friday, 31 March 2017

29-03-2017 ಚಾಮರಾಜನಗರ ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆ: ಹಣದ ಆಮಿಷ ದೂರು: ಪ್ರಥಮ ವರದಿ ದಾಖಲು

ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆ:
ಹಣದ ಆಮಿಷ ದೂರು:  ಪ್ರಥಮ ವರದಿ ದಾಖಲು


ಚಾಮರಾಜನಗರ ಮಾರ್ಚ್  29 : ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಸಚಿವರು
ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ವ್ಯಕ್ತಿಯೊಬ್ಬರಿಗೆ ಹಣದ ಆಮಿಷ ಒಡ್ಡಿದ್ದಾರೆ ಹಾಗೂ ಇವರ ಕಾರು ಚಾಲಕ ಸಹ ವ್ಯಕ್ತಿಯೊಬ್ಬರಿಗೆ ಹಣ ನೀಡಿದ್ದಾರೆ ಎಂಬ  ಆರೋಪದ ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಥಮ ವರದಿ ದಾಖಲಿಸಿಕೊಳ್ಳಲಾಗಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ಮಾರ್ಚ್ 27 ರಂದು ಗುಂಡ್ಲುಪೇಟೆ ಪಟ್ಟಣದ ಕಾಂಗ್ರೇಸ್ ಕಚೇರಿ ಬಳಿ ಮತಯಾಚನೆ ಸಮಯದಲ್ಲಿ ವ್ಯಕ್ತಿಯೊಬ್ಬರಿಗೆ ಹಣದ ಆಮಿಷ ಒಡ್ಡಿದ್ದಾರೆ ಹಾಗೂ ಇವರ ಕಾರು ಚಾಲಕರು ಸಹ ವ್ಯಕ್ತಿಯೊಬ್ಬರಿಗೆ ಹಣ ನೀಡುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗಿರುತ್ತದೆ ಎಂದು  ಗುಂಡ್ಲುಪೇಟೆ ಟೌನ್ ನಿವಾಸಿ ಎಲ್. ಸುರೇಶ್ ದೂರು ಅರ್ಜಿ ಸಲ್ಲಿಸಿದ್ದರು.  ಮತದಾರರಿಗೆ ಹಣದ ಆಮಿಷ ನೀಡಿ ಪ್ರಚೋದಿಸಿರುವುದರಿಂದ ಆರೋಪವು ಅಸಂಜ್ಞೆಯ ಅಪರಾಧವಾದ್ದರಿಂದ ಠಾಣಾ ಕ.ಜಿ.ಎಸ್.ಸಿ. ನಂಬರ್ 128/17 ರಂತೆ ಪ್ರಕರಣ ನೊಂದಾಯಿಸಿಕೊಂಡು ಪ್ರಥಮ ವರ್ತಮಾನ ವರದಿ ದಾಖಲಿಸಿ ತನಿಖೆ ನಡೆಸಲು ಘನ ನ್ಯಾಯಾಲಯದಿಂದ ಅನುಮತಿ ಪಡೆದು ಮಾರ್ಚ 28 ರಂದು ಬೆಳಿಗ್ಗೆ 11.30 ಗಂಟೆ ಸಮಯದಲ್ಲಿ ಠಾಣಾ ಮೊ.ನಂ. 145/17 ಕಲಂ 171 (ಬಿ)(ಸಿ)(ಇ) ಮತ್ತು (ಎಫ್) ಐ.ಪಿ.ಸಿ. ಅಡಿ ಪ್ರಥಮ ವರದಿ ದಾಖಲಿಸಿಕೊಳ್ಳಲಾಗಿರುತ್ತದೆ ಎಂದು ಉಪ ವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿ ನಲಿನ್ ಅತುಲ್  ತಿಳಿಸಿದ್ದಾರೆ.
     ವಿಧಾನ ಸಭಾ ಉಪ ಚುನಾವಣಾ ಹಿನ್ನಲೆಯಲ್ಲಿ ವಿವಿಧೆಡೆ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಮದ್ಯವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
      ಗುಂಡ್ಲುಪೇಟೆ ತಾಲ್ಲೂಕು ಕಗ್ಗಳ ಗ್ರಾಮದ ಸಿದ್ದರಾಜು ಎಂಬುವರಿಂದ 1.080 ಮಿಲಿ ಲೀಟರ್, ಹುಲ್ಲೆಪುರ ಗ್ರಾಮದ ವೆಂಕಟಶೆಟ್ಟಿ ಎಂಬುವರಿಂದ 0.810 ಮಿಲಿ ಲೀಟರ್, ಚಾಮರಾಜನಗರ ತಾಲ್ಲೂಕು ನಂಜದೇವನಪುರ  ಗ್ರಾಮದ ಮಾದನಾಯ್ಕ ಎಂಬುವರಿಂದ 0.810 ಮಿಲಿ ಲೀಟರ್ ಉಡಿಗಾಲ ಗ್ರಾಮದ ಮಲ್ಲೇಶ್ ಎಂಬುವರಿಂದ  0.720 ಮಿಲಿ ಲೀಟರ್, ಕೊಳ್ಳೇಗಾಲ ತಾಲ್ಲೂಕು ಸಿಂಗನಲ್ಲೂರು ಗ್ರಾಮದ ಕೆಂಚಶೆಟ್ಟಿ ಎಂಬುವರಿಂದ 0.900 ಮಿಲಿ ಲೀಟರ್ ಮದ್ಯ ವಶಪಡಿಸಿಕೊಂಡು ದೂರು ದಾಖಲಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿ ನಲಿನ್ ಅತುಲ್   ತಿಳಿಸಿದ್ದಾರೆ.
ಮಹದೇಶ್ವರ ದೇವಸ್ಥಾನ ಹುಂಡಿಯಲ್ಲಿ  1,10,03,487 ರೂ. ಸಂಗ್ರಹ

ಚಾಮರಾಜನಗರ ಮಾರ್ಚ್  29 : ಕೊಳ್ಳೇಗಾಲ ತಾಲ್ಲೂಕಿನ ಪ್ರಸಿದ್ದ ಯಾತ್ರಾ ಕ್ಷೇತ್ರ ಮಹದೇಶ್ವರ ಬೆಟ್ಟದಲ್ಲಿ ಇಂದು ದೇವಾಲಯದ ಹುಂಡಿ ಪರ್ಕಾವಣೆಯ ಕಾರ್ಯವು ಜರುಗಿದ್ದು, ಒಟ್ಟು 1,10,03,487 ರೂ.  ( ಒಂದು ಕೋಟಿ ಹತ್ತು ಲಕ್ಷದ ಮೂರು ಸಾವಿರದ ನಾಲ್ಕು ನೂರ ಎಂಬತ್ತೇಳು ) ಸಂಗ್ರಹವಾಗಿದೆ.
ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯಿತ್ರಿ, ಸಾಲೂರು ಬೃಹನ್ಮಠದ ಪಟ್ಟದ ಗುರುಸ್ವಾಮಿ ಅವರ ಸಮ್ಮುಖದಲ್ಲಿ ಇಂದು ಬೆಳಿಗ್ಗೆ ಹುಂಡಿಗಳನ್ನು ತೆರೆಯಲಾಯಿತು.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ವ್ಯವಸ್ಥಾಪಕರಾದ ಸೆಂದಿಲ್‍ನಾಥನ್ ಹಾಗೂ ಸಿಬ್ಬಂದಿ ಸಹಯೋಗದೊಂದಿಗೆ ಹುಂಡಿ ಎಣಿಕೆ ಕಾರ್ಯ ನಡೆಯಿತು.  ಹುಂಡಿಯಲ್ಲಿ ನಗದು ಹಣ ಮಾತ್ರವಲ್ಲದೆ 51 ಗ್ರಾಂ  ಚಿನ್ನ ಮತ್ತು 900 ಗ್ರಾಂ ಬೆಳ್ಳಿ ಪದಾರ್ಥಗಳು ಸಹ ಸಂಗ್ರಹವಾಗಿವೆ.
ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಪ್ರಭಾರ ಉಪ ಕಾರ್ಯದರ್ಶಿ ಎಂ. ಬಸವರಾಜು, ಸಹಾಯಕ ಅಭಿಯಂತರ ಆರ್.ಎಸ್. ಮನುವಾಚಾರ್ಯ, ಲೆಕ್ಕಾಧೀಕ್ಷಕ ಮಹದೇವಸ್ವಾಮಿ, ಇತರರು ಹುಂಡಿ ಪರ್ಕಾವಣೆ ವೇಳೆ ಹಾಜರಿದ್ದರು
ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆ
ಅಕ್ರಮ ಮದ್ಯ ವಶ
ಚಾಮರಾಜನಗರ, ಮಾ. 30:- ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ಮುಂದುವರಿಸಿದ್ದು ಗುಂಡ್ಲುಪೇಟೆ ತಾಲೂಕು ಅಣ್ಣೂರುಕೇರಿಯ ಮಹೇಶ ಎಂಬುವರಿಂದ 0.900 ಮಿಲಿ ಲೀಟರ್ ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆಂದು ಉಪವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿ ನಲಿನ್ ಅತುಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು