Friday, 10 March 2017

ಪಿ.ಯು ಪರೀಕ್ಷೆ: ಕೊಠಡಿ ಮೇಲ್ವಿಚಾರಕರಿಂದಲೇ ಮೊಬೈಲ್ ಬಳಕೆ ಸರಿನಾ..!

ಪಿ.ಯು.ಪರೀಕ್ಷೆ, ನಿರ್ದೇಶಕರಿಂದ ಉಪನಿರ್ದೇಶಕರಿಗೆ ಎಚ್ಚರಿಕೆ ಗಂಟೆ, ಕ್ಷಣಾರ್ಧದಲ್ಲೆ ಬ್ಯಾಗ್ ಮಾಯ.! ವರದಿ: ರಾಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: 09 ರಿಂದ ಪ್ರಾರಂಭವಾದ ದ್ವಿ.ಪಿ.ಯು ಪರೀಕ್ಷೇ ಯಾವುದೇ ಸಮಸ್ಯೆಯಾಗದೇ ನಿರ್ವಿಘ್ನವಾಗಿ ನಡೆಯುತ್ತಿದ್ದರೆ ಕೆಲವೊಂದು ಕೇಂದ್ರದಲ್ಲಿ ಪಕ್ಕದಲ್ಲಿಯೇ ಪುಸ್ತಕಗಳನ್ನು ಇಟ್ಟ ಬ್ಯಾಗ್ನ್ನು ದೂರವಿಡದೇ ಜಾಗೃತ ದಳದವರ ಪಕ್ಕದಲ್ಲಿಯೇ ಇಟ್ಟಿರುವುದನ್ನು ಕನ್ನಡನ್ಯೂಸ್ ನೌ, ನಿರಂತರ ನ್ಯೂಸ್ ಹಾಗೂ ನ್ಯೂಸ್ ಇನ್ ವರದಿ ಮಾಡಲಾಗಿತ್ತು. ಚಾಮರಾಜನಗರ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಕೊಠಡಿ ಮೇಲ್ವಿಚಾರಕರ ಮೊಬೈಲ್ ಬಳಕೆ , ಕೊಠಡಿ ಸಮೀಪ ಪುಸ್ತಕ ತುಂಬಿದ ಬ್ಯಾಗ್ ಇರುವುದು, ಕೆಲವು ನೀತಿ ನಿಯಮ ಉಲ್ಲಂಘಿಸುತ್ತಿರುವ ಬಗ್ಗೆ ಮೇಲಾದಿಕಾರಿಯಾದ ಪ.ಪೂ.ಶಿ.ಇಲಾಖೆ ನಿರ್ದೇಶಕಿ ಶಿಖಾ ಅವರಿಗೆ ದೂರು ಸಲ್ಲಿಸಲಾಗಿತ್ತು. ತಕ್ಷಣ ಎಚ್ಚೆತ್ತ ಪ.ಪೂ.ಶಿ.ಇಲಾಖೆ ನಿರ್ದೇಶಕಿ ಶಿಖಾ ಅವರು ಚಾಮರಾಜನಗರ ಉಪನಿರ್ದೇಶಕಿ ರಜನಿ ಅವರಿಗೆ ಪರೀಕ್ಷಾ ಜವಬ್ದಾರಿ ಹೊತ್ತ ಮುಖ್ಯಸ್ಥರಿಗೆ ಕಟ್ಟುನಿಟ್ಟಿನ ಸೂಚನೆ ಆದೇಶ ಪಾಲಿಸುವಂತೆ ಮಾರ್ಗದರ್ಶನ ನೀಡಿದ್ದಾರೆ ಎಂದು ತಿಳಿದುಬಂದಿದೆ. ಅದರಂತೆ ಇಲ್ಲಿನ ಅದಿಕಾರಿಗಳು ಪರೀಕ್ಷಾ ಕೇಂದ್ರಗಳಿಗೆ ಅಗತ್ಯ ಸೂಚನೆಗಳನ್ನು ನೀಡಿದ್ದು ಪರೀಕ್ಷಾ ಕೇಂದ್ರದ ಕೊಠಡಿ ಸಮೀಪವಿದ್ದ ಪುಸ್ತಕದ ಬ್ಯಾಗ್ ತೆರೆದು ಬೇರೆಡೆಗೆ ಇರಿಸಿದ್ದು ಕೊಠಡಿ ಮೇಲ್ವಿಚಾರಕರು ಮೊಬೈಲ್ ಬಳಸದಂತೆ, ಬಳಸಿದರೆ ಅವರ ಮೇಲೆ ಅಗತ್ಯ ಕ್ರಮವಹಿಸುವ ಬಗ್ಗೆ ಮಾಹಿತಿ ಬಂದಿದೆ ಎಂದು ತಿಳಿದುಬಂದಿದೆ. *********************************************************************

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು