Friday, 10 March 2017

10-303-2017 ಚಾಮರಾಜನಗರ ಸುದ್ದಿಗಳು (ಗಾಂಜಾ ಬೆಳೆದ ವ್ಯಕ್ತಿಗೆ ಸಜೆ,ಭೂ ಖರೀದಿ: ಆಕ್ಷೇಪಣೆ ಸಲ್ಲಿಕೆಗೆ ಅವಕಾಶ , ಸಂತೇಮರಹಳ್ಳಿಯಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟ )

ಗಾಂಜಾ ಬೆಳೆದ ವ್ಯಕ್ತಿಗೆ ಸಜೆ ಚಾಮರಾಜನಗರ, ಮಾ. 10 ;- ಬದನೆ ಗಿಡಗಳ ಮಧ್ಯೆ ಅಕ್ರಮವಾಗಿ ಗಾಂಜಾ ಗಿಡ ಬೆಳೆದಿದ್ದ ವ್ಯಕ್ತಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಲಯ ಎರಡು ವರ್ಷ ಸಜೆ ಹಾಗೂ ಎರಡು ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದೆ. ಕೊಳ್ಳೇಗಾಲ ತಾಲ್ಲೂಕು ರಾಮಪುರ ವ್ಯಾಪ್ತಿಯ ಕುರಟ್ಟಿಹೊಸೂರು ಗ್ರಾಮದ ಪುಟ್ಟರಾಜು ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ ಜಮೀನಿನಲ್ಲಿ ಬದನೆ ಗಿಡಗಳ ಮಧ್ಯೆ 42 ಗಾಂಜಾ ಗಿಡಗಳನ್ನು ಬೆಳೆದಿದ್ದು ಪ್ರಕರಣ ದಾಖಲಾಗಿತ್ತು. ಆರೋಪ ರುಜುವಾತದ ಹಿನ್ನಲೆಯಲ್ಲಿ ಪುಟ್ಟರಾಜುವಿಗೆ ಎರಡು ವರ್ಷ ಸಜೆ ಹಾಗೂ ಎರಡು ಸಾವಿರ ರೂ ದಂಡ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷಣ ಎಫ್. ಮಳ್ಳವಳ್ಳಿ ಅವರು ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಟಿ.ಹೆಚ್. ಲೋಲಾಕ್ಷಿ ವಾದ ಮಂಡಿಸಿದ್ದರು. ******************************************************* ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರ ಉಪ ಚುನಾವಣೆ : ದೂರು ನಿರ್ವಹಣಾ ಕೇಂದ್ರ ಸ್ಥಾಪನೆ ಚಾಮರಾಜನಗರ ಮಾ.10 : ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರÀ ಉಪ ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಬರುವ ದೂರು ಸ್ವೀಕರಿಸಲು ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಕೊಠಡಿ ಸಂಖ್ಯೆ 104 ರಲ್ಲಿ ಜಿಲ್ಲಾ ಮಟ್ಟದ ದೂರು ನಿರ್ವಹಣಾ ಕೇಂದ್ರವನ್ನು ತೆರೆಯಲಾಗಿದೆ. ದೂರು ನಿರ್ವಹಣಾ ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ 08226-223160 ಆಗಿರುತ್ತದೆ. ಈ ದೂರವಾಣಿ ಸಂಖ್ಯೆಗೆ ಸಾರ್ವಜನಿಕರು ಚುನಾವಣೆಗೆ ಸಂಬಂಧಿಸಿದ ಅಹವಾಲು ಮತ್ತು ದೂರುಗಳನ್ನು 24x7 ಅವಧಿಯಲ್ಲಿ ಸಲ್ಲಿಸಬಹುದು. ದೂರು ನಿರ್ವಹಣಾ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸಲು ನೌಕರರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಯವರ್ಲು ತಿಳಿಸಿದ್ದಾರೆ. **************************************************************************************** 2 ವರ್ಷಗಳ ಕಾಲ ಸಾದಾ ಸಜೆ ಹಾಗೂ 2000 ರೂ.ಗಳನ್ನು ದಂಡ ವಿದಿಸಿ ಶಿಕ್ಷೆ ಪತ್ರಿಕಾ ಪ್ರಕಟಣೆ. ದಿನಾಂಕ:12-06-2012 ರಂದು ಲೋಕೇಶ ಬಿನ್ ದೊಡ್ಡನಿಂಗಯ್ಯ ಸಿದ್ದೇಶ್ವರ, ಪೇಟೆ ಬೀದಿ, ಮಾಂಬಳ್ಳಿ ಗ್ರಾಮ ರವರು ಅಂಗರ ಮಾಂಬಳ್ಳಿ ಪೊಲೀಸ್ ಠಾಣೆಗೆ ಹಾಜರಾಗಿ ತನ್ನ ತಂಗಿಯಾದ ಪುಷ್ಪಲತಾಳನ್ನು ಕೃಷ್ಣಮೂರ್ತಿ @ ಜಾಕಿ ಬಿನ್ ಲೇಟ್. ಚಿಕ್ಕಣ್ಣ ಎಂಬುವರು ಪ್ರೀತಿಸಿ ದೇವಸ್ಥಾನದಲ್ಲಿ ಮದುವೆಯಾಗಿದ್ದು, ಸುಮಾರು ವರ್ಷಗಳವರೆಗೆ ಮಕ್ಕಳಾಗದ ಕಾರಣದಿಂದ ತನ್ನ ಹೆಂಡತಿ ಪುಷ್ಪಲತಾಳ ಜೊತೆ ಜಗಳ ತೆಗೆದು ಹೊಡಯುತ್ತಿದ್ದು, ನಂತರ ದಿನಗಳಲ್ಲಿ ಆರೋಪಿತನ ಅಣ್ಣ ಮತ್ತು ತಾಯಿಯ ಕುಮ್ಮಕ್ಕಿನಿಂದ ಕಿರುಕುಳ ನೀಡಿ, ನಂತರ ಬೇರೆ ಮನೆ ಮಾಡಿಕೊಂಡು ವಾಸವಾಗಿದ್ದು, ದಿನಾಂಕ:12-06-2012 ರಂದು ಬೆಳಿಗ್ಗೆ ಪುಷ್ಪಲತಾಳು ತನ್ನ ಗಂಡನ ಕಿರುಕುಳವನ್ನು ತಾಳಲಾರದೆ ಮನೆಯಲ್ಲಿಯೆ ನೇಣು ಬೀಗಿದುಕೊಂಡು ಮೃತಪಟ್ಟಿರುತ್ತಾಳೆಂದು ನೀಡಿದ ದೂರಿನ ಮೇರೆಗೆ ಅಗರ ಮಾಂಬಳ್ಳಿ ಪೊಲೀಸ್ ಠಾಣೆ ಮೊನಂ: ಮೊ.ನಂ.16/2012 ಕಲಂ, 498(ಎ),306, 114 ರೆ/ವಿ 34 ಐಪಿಸಿ. ರೀತ್ಯ ಕೇಸು ದಾಖಲಾಗಿತ್ತು. ಅಂದಿನ ಪಿಎಸ್‍ಐ ರವರಾದ ಶ್ರೀ. ಸಿ.ಎನ್. ಮಹದೇವನಾಯಕರವರು ಕೇಸು ದಾಖಲಿಸಿ ತನಿಖೆಯನ್ನು ಪೂರೈಸಿ ಯಳಂದೂರಿನ ಸಿಜೆ ಮತ್ತು ಜೆಎಂಎಫ್‍ಸಿ ನ್ಯಾಯಾಲಯಕ್ಕೆ ಆರೋಪಿಗಳ ವಿರುದ್ದ ದೋಷರೋಪಣಾ ಪತ್ರವನ್ನು ಸಲ್ಲಿಸಿಕೊಂಡಿದ್ದು, ನಂತರ ಪ್ರಕರಣವು ಯಳಂದೂರು ನ್ಯಾಯಾಲಯದಿಂದ ಕಮಿಟಲ್ ಆಗಿ ಚಾಮರಾಜನಗರ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ವರ್ಗಾವಣೆಗೊಂಡು, ಚಾಮರಾಜನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಎಸ್.ಸಿ ನಂ. 84/2012 ರಲ್ಲಿ ದಿನಾಂಕ: 27-02-2017 ರಂದು ವಿಚಾರಣೆ ನಡೆದು ಪ್ರಕರಣದ ಆರೋಪಿ 1 ಕೃಷ್ಣಮೂರ್ತಿ @ ಜಾಕಿ ಬಿನ್ ಲೇಟ್ ಚಿಕ್ಕಣ್ಣ 35 ವರ್ಷ, ಪರಿಶಿಷ್ಟ ಜನಾಂಗ, ಮಾಸ್ತಿ ಬೀದಿ, ಮಾಂಬಳ್ಳಿ ಗ್ರಾಮ ಯಳಂದೂರು ತಾಲ್ಲೂಕು ಎಂಬಾತನ ವಿರುದ್ದ ಐಪಿಸಿ ಕಲಂ, 498(ಎ) ಆರೋಪವು ಸಾಭಿತಾದ ಹಿನ್ನಲೆಯಲ್ಲಿ ಘನ ನ್ಯಾಯಾಲಯವು ಕಲಂ, 235(1) ಸಿ.ಆರ್.ಪಿ.ಸಿ. ಅಡಿಯಲ್ಲಿ 2 ವರ್ಷಗಳ ಕಾಲ ಸಾದಾ ಸಜೆ ಹಾಗೂ 2000 ರೂ.ಗಳನ್ನು ದಂಡ ವಿದಿಸಿ ಶಿಕ್ಷೆಯನ್ನು ವಿದಿಸಿರುತ್ತದೆ. ಹಾಗೂ ದಂಡದ ಮೊತ್ತವನ್ನು ಕಟ್ಟದಿದ್ದರೆ ಮತ್ತೆ 3 ತಿಂಗಳುಗಳ ಕಾಲ ಸಾದಾ ಸಜೆಯನ್ನು ಅನುಭವಿಸುವಂತೆ ಶಿಕ್ಷೆ ಪ್ರಮಾಣ ವನ್ನು ವಿದಿಸಿ ಆಧೇಶ ನೀಡಿದ್ದು, ಹಾಗೂ ಆರೋಪಿ 2 ಪುಟ್ಟಸ್ವಾಮಿ ಬಿನ್ ಚಿಕ್ಕಣ್ಣ 41 ವರ್ಷ,ಪರಿಶಿಷ್ಟ ಜನಾಂಗ, ಮಾಸ್ತಿ ಬೀದಿ ಮಾಂಬಳ್ಳಿ ಗ್ರಾಮ ಮತ್ತು ಆರೋಪಿ 3 ಮರಿಸಿದ್ದಮ್ಮ @ ಪುಟ್ಟಸಿದ್ದಮ್ಮ ಕೋಂ,ಲೇಟ್ ಚಿಕ್ಕಣ್ಣ ಮಾಂಬಳ್ಳಿ ಗ್ರಾಮ ರವರನ್ನು ನಿರ್ದೋಷಿ ಎಂದು ತೀರ್ಪು ನೀಡಿರುತ್ತದೆ. ವಿಚಾರಣೆ ಕಾಲದಲ್ಲಿ ಸರ್ಕಾರಿ ಅಭಿಯೋಜಕರಾದ ಶ್ರೀಮತಿ ಉಷಾ ರವರು ಸರ್ಕಾರದ ಪರವಾಗಿ ವಾದ ಮಂಡನೆ ಮಾಡಿರುತ್ತಾರೆ. ಪೊಲೀಸ್ ಅಧೀಕ್ಷಕರವರ ಕಛೇರಿ ಚಾಮರಾಜನಗರ ಜಿಲ್ಲೆ, ಚಾ.ನಗರ. ದಿನಾಂಕ: 10-03-2017. ************************************************************************************* ಮಾ.15ರಂದು ಸಂತೇಮರಹಳ್ಳಿಯಲ್ಲಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಚಾಮರಾಜನಗರ, ಮಾ. 10 (;- ನೆಹರು ಯುವ ಕೇಂದ್ರವು ಸಂತೇಮರಹಳ್ಳಿಯ ಡಾ. ಬಿ.ಆರ್. ಅಂಬೇಡ್ಕರ್ ಮಾದಿಗ ಯುವಕರ ಸಂಘ ಹಾಗೂ ಕೆಂಪನಪುರದ ಶ್ರೀ ಮಹರ್ಷಿ ವಾಲ್ಮೀಕಿ ಯುವಕರ ಸಂಘದ ಸಹಯೋಗದೊಂದಿಗೆ ಜಿಲ್ಲಾ ಮಟ್ಟದ ಕ್ರೀಡಾ ಕೂಟವನ್ನು ಮಾರ್ಚ್ 15 ರಂದು ಬೆಳಿಗ್ಗೆ 10.30 ಗಂಟೆಗೆ ಸಂತೇಮರಹಳ್ಳಿಯ ಸರ್ಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ಆಟದ ಮೈದಾನದಲ್ಲಿ ಆಯೋಜಿಸಿದೆ. ಯುವತಿಯರಿಗೆ ಖೋಖೋ, 100 ಮೀಟರ್ ಓಟ, ಗುಂಡು ಎಸೆತ, ಥ್ರೋಬಾಲ್, ಯುವಕರಿಗೆ ವಾಲಿಬಾಲ್, ಕಬ್ಬಡಿ, ಗುಂಡು ಎಸೆತ, 200 ಮೀಟರ್ ಓಟ ಸ್ಪರ್ಧೆಗಳಿವೆ. ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಆಸಕ್ತರು ಕ್ರೀಡಾ ಕೂಟ ನಡೆಯುವ ಸ್ಥಳದಲ್ಲಿ ಮಾರ್ಚ್ 15 ರಂದು ಬೆಳಿಗ್ಗೆ 10 ಗಂಟೆಯೊಳಗೆ ಹೆಸರು ನೊಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗೆ ಶಿವಣ್ಣ ಮೊ.ಸಂ.9686889024, ರಾಜೇಂದ್ರ ಮೊ.ಸಂ.9164771377, ಪ್ರತಾಪ್ ಮೊ.ಸಂ.9972317989, ನಾಗೇಶ್ ಮೊ.ಸಂ.9964247822 ಅವರನ್ನು ಸಂಪರ್ಕಿಸಬಹುದು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವಸಮನ್ವಯ ಅಧಿಕಾರಿ ಎಸ್. ಸಿದ್ದರಾಮಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ********************************************************************** ಹೆಲ್ಮೆಟ್ ಧರಿಸದ ವಾಹನ ಸವಾರರಿಂದ 64,600 ರೂ ದಂಡ ವಸೂಲಿ ಚಾಮರಾಜನಗರ, ಮಾ. 1;- ಜಿಲ್ಲಾ ಪೊಲೀಸ್ ಇಲಾಖೆಯು ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುತ್ತಿದ್ದ 638 ಪ್ರಕರಣಗಳನ್ನು ಮಾರ್ಚ್ 9 ರಂದು ದಾಖಲಿಸಿ ವಾಹನ ಸವಾರರಿಂದ 64,600 ರೂ ದಂಡ ವಸೂಲಿ ಮಾಡಿದೆ. ಸಾರ್ವಜನಿಕರಲ್ಲಿ ಅಪಘಾತಗಳ ಬಗ್ಗೆ ಅರಿವು ಮಾಡಿಸುವುದು, ಮದ್ಯಪಾನ ಮಾಡಿ ವಾಹನ ಚಾಲನೆ ಮಾಡದಂತೆ ಮತ್ತು ಕಡ್ಡಾಯವಾಗಿ ಸವ್ರ್ರೊಚ್ಛ ನ್ಯಾಯಲಯದ ಆದೇಶದಂತೆ ದ್ವಿಚಕ್ರ ವಾಹನ ಸವಾರರು ಹಿಂಬದಿ ಸವಾರರು ಕಡ್ಡಾಯವಾಗಿ ಹೆಲ್ಮಟ್ ಧರಿಸಿ ವಾಹನ ಚಲಾಯಿಸುವಂತೆ ಸುರಕ್ಷತಾ ಸಪ್ತಾಹದ ವೇಳೆ ಅರಿವು ಮಾಡಿಸಲಾಗಿದೆ. ಆದರೂ ಅಪಘಾತ ಪ್ರಕರಣಗಳು ವರದಿಯಾಗುತ್ತಲೆ ಇದೆ. ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುವವರ ವಿರುದ್ಧ ದಂಡ ವಸೂಲಿ ಮಾಡಲಾಗುತ್ತದೆ. ದ್ವಿಚಕ್ರ ವಾಹನ ಸವಾರರು ಹಿಂಬದಿ ಸವಾರರು ಸಹ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಪೊಲೀಸ್ ಇಲಾಖೆ ತಿಳಿಸಿದೆ. ******************************************************************** ಭೂ ಖರೀದಿ: ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಚಾಮರಾಜನಗರ, ಮಾ. 10- ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮವು ಭೂ ಒಡೆತನ ಯೋಜನೆಯಡಿ ಫಲಾನುಭವಿಗಳಿಗೆ ಭೂಮಿ ಖರೀದಿಸಿ ಕೂಡುವ ಸಲುವಾಗಿ ಕೆಲ ಮಾಲಿಕರಿಂದ ಭೂಮಿ ಖರೀದಿ ಮಾಡಲು ಒಪ್ಪಿಗೆ ಪಡೆದಿದೆ. ಚಾಮರಾಜನಗರ ತಾಲ್ಲೂಕು ಮಸಣಾಪುರ ಗ್ರಾಮದ ಎಂ.ಎನ್ ಶಿವಣ್ಣ ಅವರಿಂದ ಮೆಲ್ಮಾಳ ಗ್ರಾಮದ ಸರ್ವೆ ನಂ 230/1 ರಲ್ಲಿ 0.39 ಗುಂಟೆ ತರಿ ಜಮೀನು, ರೇಚಂಬಳ್ಳಿ ಗ್ರಾಮದ ಆರ್.ಬಿ ಗಂಗಾಧರ ಅವರಿಂದ ಮೆಲ್ಮಾಳ ಗ್ರಾಮದ ಸರ್ವೆ ನಂ 127/1 ರಲ್ಲಿ 1.19 ಗುಂಟೆ ತರಿ ಜಮೀನು, ಆರ್.ಸಿ. ಸುಜಾತ ಅವರಿಂದ ಮೆಲ್ಮಾಳ ಗ್ರಾಮದ ಸರ್ವೆ ನಂ 128/3 ರಲ್ಲಿ 0.16 ಗುಂಟೆ ತರಿ ಜಮೀನು ಹಾಗೂ ಕೊಳ್ಳೇಗಾಲ ತಾಲ್ಲೂಕಿನ ಹನೂರು ಭಾಗದ ಆರ್.ಎಸ್. ದೊಡ್ಡಿ ಗ್ರಾಮದ ಅಂಕಶೆಟ್ಟಿ ಅವರಿಂದ ಹುಲ್ಲೇಪುರ ಗ್ರಾಮದ ಸರ್ವೆ ನಂ 695/2ಬಿ ರಲ್ಲಿ 1.78 ಸೆಂಟು ಖುಷ್ಕಿ ಜಮೀನು ಖರೀದಿಸಲಿದೆ. ಈ ಜಮೀನುಗಳ ಬಗ್ಗೆ ಜಮೀನು ಮಾಲೀಕರ ಸಂಬಂಧಿಕರು ಹಾಗೂ ಜಮೀನಿಗೆ ಸಂಬಂಧÀ ಪಟ್ಟ ಇತರರು ತಕರಾರು, ಆಕ್ಷೇಪಣೆಗಳು ಇದ್ದಲ್ಲಿ 7 ದಿನಗಳ ಒಳಗೆ ನಗರದ ಜಿಲ್ಲಾಡಳಿತ ಭವನದ ಮಲ್ಟಿ ಪರ್ಪಸ್ ಹಾಲ್‍ನಲ್ಲಿರುವ ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಿಗೆ ಸಲ್ಲಿಸಬಹುದೆಂದು ಪ್ರಕಟಣೆ ತಿಳಿಸಿದೆ. ****************************************************************************8

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು