Friday, 31 March 2017

30-03-2017 ಚಾಮರಾಜನಗರ ಚಾ.ನಗರಸಭೆ : ಏಪ್ರಿಲ್ ಒಳಗೆ ಆಸ್ತಿ ತೆರಿಗೆ ಪಾವತಿ ಮಾಡಿದವರಿಗೆ ಶೇ. 5ರಷ್ಟು ರಿಯಾಯಿತಿ


ಒಂದು ಕೋಟಿ ಹತ್ತು ಲಕ್ಷದ ಮೂರು ಸಾವಿರದ ನಾಲ್ಕು ನೂರ ಎಂಭತ್ತೇಳು  ರೂಪಾಯಿ ಒಡೆಯ ಈ ಮಾದಪ್ಪ.!

ಚಾಮರಾಜನಗರ ಜಿಲ್ಲೆ: ಕೊಳ್ಳೇಗಾಲ ತಾಲ್ಲೂಕು, ಮಹದೇಶ್ವರಬೆಟ್ಟ:- ದಿನಾಂಕ:30-03-2017ರ ಗುರುವಾರದಂದು ಬೆಳಿಗ್ಗೆ 7.00 ಗಂಟೆಗೆ ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ಹಾಗೂ ಚಾಮರಾಜನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಶ್ರೀಮತಿ ಕೆ.ಎಂ.ಗಾಯತ್ರಿ, ಕೆ.ಎ.ಎಸ್.(ಹಿರಿಯ ಶ್ರೇಣಿ) ರವರ ಅಧ್ಯಕ್ಷತೆಯಲ್ಲಿ ಹಾಗೂ ಶ್ರೀ ಸಾಲೂರು ಬೃಹನ್ಮಠದ ಶ್ರೀ ಶ್ರೀ ಪಟ್ಟದ ಗುರುಸ್ವಾಮಿಗಳವರ ಉಪಸ್ಥಿತಿಯಲ್ಲಿ ಹುಂಡಿಗಳನ್ನು ತೆರೆಯಲಾಗಿದ್ದು, ಸದರಿ ಹುಂಡಿಗಳ  ಪರ್ಕಾವಣೆಯಲ್ಲಿ ಶ್ರೀ ಮ.ಮ. ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ  ಪ್ರಭಾರ  ಉಪ ಕಾರ್ಯದರ್ಶಿಗಳಾದ ಶ್ರೀ ಎಂ.ಬಸವರಾಜು  ರವರು, ಸಹಾಯಕ ಅಭಿಯಂತರರಾದ ಶ್ರೀ ಆರ್.ಎಸ್.ಮನುವಾಚಾರ್ಯ, ಲೆಕ್ಕಾಧೀಕ್ಷಕರಾದ ಮಹದೇವಸ್ವಾಮಿ,  ಕಛೇರಿಯ ಅಧೀಕ್ಷಕರಾದ  ಶ್ರೀ ಬಿ.ಮಾದರಾಜು ಹಾಗೂ ದೇವಸ್ಥಾನದ ಎಲ್ಲಾ ನೌಕರರುಗಳು, ಚಾಮರಾಜನಗರ ಜಿಲ್ಲಾಧಿಕಾರಿಯವರ ಕಛೇರಿಯ  ಪ್ರಥಮ ದರ್ಜೆ ಸಹಾಯಕರಾದ ಶ್ರೀ ಮೋಹನ್ ಕುಮಾರ್ ಮತ್ತು ಶ್ರೀಮತಿ ಸ್ನೇಹ, ಆರಕ್ಷಕ ಉಪಾಧೀಕ್ಷಕರು, ಕೊಳ್ಳೇಗಾಲ ಉಪ ವಿಭಾಗ, ಮಹದೇಶ್ವರಬೆಟ್ಟ ಆರಕ್ಷಕ  ಸಿಬ್ಬಂದಿ ವರ್ಗ, ಎಸ್.ಬಿ.ಎಂ. ವ್ಯವಸ್ಥಾಪಕರಾದ ಸೆಂದಿಲ್ ನಾಥನ್  & ಸಿಬ್ಬಂದಿ ವರ್ಗದವರು ಹಾಜರಿದ್ದರು. ಇವರೆಲ್ಲರ ಸಹಕಾರದಿಂದ ಹುಂಡಿ ಪರ್ಕಾವಣೆ ಮತ್ತು ಎಣಿಕೆಯ ಕಾರ್ಯ ಸುಗಮವಾಗಿ ಜರುಗಿತು(ಒಂದು ತಿಂಗಳಿಗೆ) ಸದರಿ ದಿವಸದಂದು ಹುಂಡಿ ಪರ್ಕಾವಣೆಯಿಂದ ಒಟ್ಟು ರೂ.  1,10,03,487/- ( ಒಂದು ಕೋಟಿ ಹತ್ತು ಲಕ್ಷದ ಮೂರು ಸಾವಿರದ ನಾಲ್ಕು ನೂರ ಎಂಭತ್ತೇಳು ಮಾತ್ರ) ಬಂದಿರುತ್ತದೆ. ಇದಲ್ಲದೇ ಚಿನ್ನದ  ಪದಾರ್ಥಗಳು 0. 051 ( ಐವತ್ತೊಂದು ಗ್ರಾಂ) ಮತ್ತು ಬೆಳ್ಳಿ  ಪದಾರ್ಥಗಳು 0.900( ಒಂಭತ್ತುನೂರು   ಗ್ರಾಂ) ದೊರೆತಿರುತ್ತದೆ. 

ಚಾ.ನಗರಸಭೆ : ಏಪ್ರಿಲ್ ಒಳಗೆ ಆಸ್ತಿ ತೆರಿಗೆ ಪಾವತಿ ಮಾಡಿದವರಿಗೆ ಶೇ. 5ರಷ್ಟು ರಿಯಾಯಿತಿ

ಚಾಮರಾಜನಗರ, ಮಾ. 30 :- ಚಾಮರಾಜನಗರ ನಗರಸಭಾ ವ್ಯಾಪ್ತಿಗೆ ಒಳಪಡುವ ಕಟ್ಟಡ, ನಿವೇಶನಗಳ ಮಾಲೀಕರು ತಮಗೆ ಸಂಬಂಧಿಸಿದ ಆಸ್ತಿಗಳಿಗೆ ಪ್ರಸಕ್ತ 2017-18ನೇ ಸಾಲಿನ ಆಸ್ತಿ ತೆರಿಗೆಯನ್ನು ಏಪ್ರಿಲ್ 30ರೊಳಗೆ ಪಾವತಿಸಿದರೆ ಶೇ.5ರಷ್ಟು ರಿಯಾಯಿತಿ ನೀಡಲಾಗುತ್ತದೆ.
ಮೇ ಮತ್ತು ಜೂನ್ ತಿಂಗಳಿನಲ್ಲಿ ಆಸ್ತಿ ತೆರಿಗೆ ಪಾವತಿಸಿದರೆ ಯಾವುದೇ ದಂಡವಿರುವುದಿಲ್ಲ. ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆದಾರರು ಹಿಂದಿನ ವರ್ಷಗಳ ಕಂದಾಯಗಳಿಗೆ ದಂಡ ಸಮೇತ ಕಡ್ಡಾಯವಾಗಿ ಆಸ್ತಿ ತೆರಿಗೆಯನ್ನು ಪಾವತಿಸಿ, ಸ್ವಯಂ ಘೋಷಿತ ಆಸ್ತಿ ತೆರಿಗೆಯ ಘೋಷಣೆಯನ್ನು ಮಾಡಿಕೊಳ್ಳಬೇಕು. ನೀರಿನ ಕಂದಾಯ ಬಾಕಿ ಉಳಿಸಿಕೊಂಡಿರುವವರು ಕಡ್ಡಾಯವಾಗಿ ಪಾವತಿಸಬೇಕು. ತಪ್ಪಿದಲ್ಲಿ ಕರ್ನಾಟಕ ಪುರಸಭೆಗಳ ಅಧಿನಿಯಮ 1964 ನಿಯಮ 115ರ ರೀತ್ಯ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಆಸ್ತಿಯ ಮಾಲೀಕರು ಯಾವುದೇ ಕಾನೂನು ಕ್ರಮಕ್ಕೆ ಅವಕಾಶ ಕೊಡದೇ ಸ್ವಯಂಪ್ರೇರಿತರಾಗಿ ಕಂದಾಯವನ್ನು ಪಾವತಿಸಿ ನಗರದ ಅಭಿವೃದ್ಧಿಗೆ ಸಹಕರಿಸಬೇಕೆಂದು ನಗರಸಭೆ ಪೌರಾಯುಕ್ತರಾದ ರಾಜಣ್ಣ ತಿಳಿಸಿದ್ದಾರೆ.

                 ಏ. 1ರಂದು ಪಲ್ಸ್ ಪೋಲಿಯೋ ಜಾಥಾ

ಚಾಮರಾಜನಗರ, ಮಾ. 30 :- ಪಲ್ಸ್ ಪೋಲಿಯೋ ಹನಿ ನೀಡುವ ಕಾರ್ಯಕ್ರಮದ ಮಹತ್ವವನ್ನು ತಿಳಿಸಿಕೊಡುವ ಸಲುವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಏಪ್ರಿಲ್ 1ರಂದು ಜಾಗೃತಿ ಜಾಥಾ ಹಮ್ಮಿಕೊಂಡಿದೆ.
ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಏಪ್ರಿಲ್ 1ರಂದು ಬೆಳಿಗ್ಗೆ 10 ಗಂಟೆಗೆ ಜಾಥಾಗೆ ಚಾಲನೆ ನೀಡಲಾಗುತ್ತದೆ. ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಿ ಜಿಲ್ಲಾಡಳಿತ ಭವನದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪ್ರಸಾದ್  ತಿಳಿಸಿದ್ದಾರೆ.

ಪಿಯು ಕಾಲೇಜುಗಳಿಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ

ಚಾಮರಾಜನಗರ, ಮಾ. 30 :- 2017-18ನೇ ಶೈಕ್ಷಣಿಕ ಸಾಲಿನಿಂದ ಹೊಸ ವಿಷಯ, ಸಂಯೋಜನೆ ವಿಭಾಗಗಳನ್ನು ಪ್ರಾರಂಭಿಸಲು ಇಚ್ಚಿಸುವ ಖಾಸಗಿ ಪದವಿಪೂರ್ವ ಕಾಲೇಜಿನವರು ಪದವಿಪೂರ್ವ ಶಿಕ್ಷÀಣ ಇಲಾಖೆಯು ನಿಗದಿಪಡಿಸಿರುವ 18 ಪುಟಗಳ ಚೆಕ್‍ಲಿಸ್ಟ್‍ನಲ್ಲಿ ಮಾಹಿತಿಗಳನ್ನು ಭರ್ತಿ ಮಾಡಿ ಸದರಿ ಮಾಹಿತಿಗೆ ಪೂರಕವಾದ ದೃಢೀಕೃತ ದಾಖಲೆಗಳೊಂದಿಗೆ ಪ್ರಸ್ತಾವನೆಯನ್ನು ಏಪ್ರಿಲ್ 20ರೊಳಗೆ ಸಲ್ಲಿಸುವಂತೆ ತಿಳಿಸಲಾಗಿದೆ.
ಚೆಕ್‍ಲಿಸ್ಟ್‍ನ್ನು ಇಲಾಖಾ ವೆಬ್‍ಸೈಟ್‍ನಲ್ಲಿ ಅಥವಾ ನಗರದ ಜಿಲ್ಲಾಡಳಿತ ಭವನದಲ್ಲಿರುವ ಪದವಿಪೂರ್ವ ಶಿಕ್ಷÀಣ ಇಲಾಖೆಯ ಕಚೇರಿಯಲ್ಲಿ ಪಡೆಯಬಹುದಾಗಿರುತ್ತದೆ ಎಂದು ಪದವಿಪೂರ್ವ ಶಿಕ್ಷÀಣ ಇಲಾಖೆ ಉಪನಿರ್ದೇಶಕರಾದ ರೆಜಿನಾ ಮೆಲಾಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಲ್ಸ್ ಪೋಲಿಯೋ : ಚಾಮರಾಜನಗರ ತಾಲೂಕು ಮಟ್ಟದ ಕಾರ್ಯಕ್ರಮಕ್ಕೆ ಸಿದ್ಧತಾ ಸಭೆ

ಚಾಮರಾಜನಗರ, ಮಾ. 30:- ತಾಲೂಕು ಮಟ್ಟದ ಪಲ್ಸ್ ಪೋಲಿಯೋ ಸಮನ್ವಯ ಸಮಿತಿ ಸಭೆಯು (ತಾಲೂಕು ಟಾಸ್ಕ್ ಪೋರ್ಸ್ ಕಮಿಟಿ ಮೀಟಿಂಗ್) ನಗರದ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಪುರಂಧರ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ತಾಲೂಕು ಆರೋಗ್ಯಾಧಿಕಾರಿ ಶ್ರೀನಿವಾಸ ಅವರು ಮಾತನಾಡಿ ಏಪ್ರಿಲ್ 2ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪಲ್ಸ್ ಪೋಲಿಯೋ ಬೂತ್ ಚಟುವಟಿಕೆಗಳನ್ನು ತಾಲೂಕಿನಾದ್ಯಂತ ಹಮ್ಮಿಕೊಳ್ಳಲÁಗಿದೆ. ಈ ಕಾರ್ಯಕ್ರಮಕ್ಕಾಗಿ ತಾಲೂಕಿನಲ್ಲಿ ತಾಲೂಕು ತಹಸೀಲ್ದಾರ್ ಅವರ ನೈತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಚಾಮರಾಜನಗರ ತಾಲೂಕಿನ  ಆಗ ತಾನೆ ಹುಟ್ಟಿದ ಮಗುವಿನಿಂದ 5 ವರ್ಷದವರೆಗಿನ 26648 ಮಕ್ಕಳಿಗೆ ಲಸಿಕೆ ಹಾಕುವ ಅಂದಾಜು ಮಾಡಲಾಗಿದೆ. ಈ ಕಾಂiÀರ್iಕ್ರಮಕ್ಕಾಗಿ ಚಾಮರಾಜನಗರ ತಾಲೂಕಿನಲ್ಲಿ 193 ಬೂತ್‍ಗಳನ್ನು ಹಾಗೂ ಪಟ್ಟಣ ಪ್ರದೇಶದಲ್ಲಿ 45 ಬೂತುಗಳನ್ನು, 148 ಬೂತ್‍ಗಳು ಗ್ರಾಮಾಂತರ ಪ್ರದೇಶದಲ್ಲಿ ಬರುತ್ತದೆ. ಈ ಕಾರ್ಯಕ್ರಮದ ಮೇಲ್ವಿಚಾರಣೆಗಾಗಿ 41 ಮೇಲ್ವಿಚಾರಕರನ್ನು ಹಾಗೂ 806 ಲಸಿಕಾ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಒಟ್ಟು 7 ಟ್ರಾನ್ಸಿಟ್ ಬೂತ್‍ಗಳನ್ನು ಮತ್ತು 2 ಸಂಚಾರಿ ಬೂತ್‍ಗಳನ್ನು ಅಳವಡಿಸಲಾಗಿದೆ. ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ 66331 ಮನೆಗಳ ಭೇಟಿ ಮಾಡಬೇಕಾಗಿದ್ದು ಒಟ್ಟು ಮನೆಗಳ ಸಂಖ್ಯೆ 79082 ಆಗಿರುತ್ತದೆ ಎಂದು ಮಾಹಿತಿ ನೀಡಿದರು.
ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯವರು ಮಾನವ ಸಂಪನ್ಮೂಲ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಲಸಿಕೆ ನೀಡಲು ಅವಕಾಶ ಒದಗಿಸಿಕೊಡಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆಯವರು ಕಾರ್ಯಕ್ರಮದ ದಿನ ಭಾನುವಾರವಾದ್ದರಿಂದ ಅವಶ್ಯವಿರುವ ಕಡೆ ಶಾಲೆಗಳಲ್ಲಿ ಬೂತ್‍ಗಳನ್ನು ತೆರೆಯಲು ಅವಕಾಶ ಕಲ್ಪಿಸಿಕೊಡಬೇಕೆಂದು ಹಾಗೂ ಕಾರ್ಯಕ್ರಮದ ಹಿಂದಿನ ದಿನ ಶಾಲಾ ಪ್ರಾರ್ಥನಾ ಸಮಯದಲ್ಲಿ ಶಿಕ್ಷಕರು ಮಾಹಿತಿ ನೀಡುವಂತೆ ತಿಳಿಸಲು ಹಾಗೂ ಜÁಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೆಂದು ಕೋರಿದರು. ಅದಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳಿ ಸಹಕರಿಸುವುದಾಗಿ ತಿಳಿಸಿದರು.
ಈ ಕಾರ್ಯಕ್ರಮಕ್ಕೆ 41 ವಾಹನಗಳ ಅಗತ್ಯವಿದ್ದು ಇತರೆ ಇಲಾಖೆಗಳಿಂದ ವಾಹನಗಳನ್ನು ಒದಗಿಸಿಕೊಡುವ ಬಗ್ಗೆ ವ್ಯವಸ್ಥೆ ಮಾಡಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ತಿಳಿಸಿದರು.
ಪಲ್ಸ್ ಪೋಲಿಯೋ ಕಾರ್ಯಕ್ರಮ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದ್ದು ಕಾಡಂಚಿನ ಗ್ರಾಮಗಳು ಹಾಗೂ ದುರ್ಗಮ ಪ್ರದೇಶಗಳಲ್ಲಿ ವಾಹನಗಳ ಓಡಾಟಕ್ಕೆ ಅನುಮತಿಯನ್ನು ನೀಡಲು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಯಿತು.
ತಾಲೂಕು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸ್ವಯಂ ಸೇವಾ ಸಂಸ್ಥೆಗಳವರು ಪಲ್ಸ್ ಪೊಲೀಯೋ ಕಾರ್ಯಕ್ರಮಕ್ಕೆ ಪೂರ್ಣ ಸಹಕಾರವನ್ನು ನೀಡುವಂತೆ ಮನವಿ ಮಾಡಿದರು.
ತಹಸೀಲ್ದಾರ್ ಪುರಂಧರ ಅವರು ಮಾತನಾಡಿ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸುವಂತೆ ಕೋರಿದರು.
ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ, ತಾಲೂಕು ಆರೋಗ್ಯಾಧಿಕಾರಿ, ಚೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರರು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಪಟ್ಟಣ ಮತ್ತು ಗ್ರಾಮಾಂತರ ಆರಕ್ಷಕ ವೃತ್ತ ನಿರೀಕ್ಷಕರು, ತಾಲೂಕು ಆಯುಷ್ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಮನೋನಿಧಿ ನರ್ಸಿಂಗ್ ಶಾಲೆ ಪ್ರಾಂಶುಪಾಲರು ಹಾಜರಿದ್ದರು.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು