Wednesday, 8 March 2017

ಪಿ.ಯು ಪರೀಕ್ಷೆ..ಕೊಠಡಿ ಪಕ್ಕದಲ್ಲೆ ಪುಸ್ತಕ... .. ನೋಡಿ...

ಪಿ.ಯು.ಪರೀಕ್ಷೆ, ಕೊಠಡಿ ಪಕ್ಕದಲ್ಲೆ ಪುಸ್ತಕವಿರುವ ಬ್ಯಾಗ್, ಕರೆ ಬಂದರೆ ಮೊಬೈಲ್ ಅಲ್ಲಿ ಸಾಂಗ್.! ಇಲ್ಲಿ 100 ಮೀಟರ್ ಅಂತರಕ್ಕೆ ಬೆಲೆಯೇ ಇಲ್ಲ ವರದಿ: ರಾಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ಇಂದಿನಂದ ಪ್ರಾರಂಭವಾದ ದ್ವಿ.ಪಿ.ಯು ಪರೀಕ್ಷೇ ಯಾವುದೇ ಸಮಸ್ಯೆಯಾಗದೇ ನಿರ್ವಿಘ್ನವಾಗಿ ನಡೆಯುತ್ತಿದ್ದರೆ ಕೆಲವೊಂದು ಕೇಂದ್ರದಲ್ಲಿ ಪಕ್ಕದಲ್ಲಿಯೇ ಪುಸ್ತಕಗಳನ್ನು ಇಟ್ಟ ಬ್ಯಾಗ್‍ನ್ನು ದೂರವಿಡದೇ ಜಾಗೃತ ದಳದವರ ಪಕ್ಕದಲ್ಲಿಯೇ ಇಟ್ಟಿರುವುದು ವಿಪರ್ಯಾಸವಾಗಿದೆ. ರಾಜ್ಯಾದಾದಂತ್ಯ ಕಳೆದ ಭಾರೀ ಸೋರಿಕೆ ಆತಂಕ ಸೃಷ್ಟಿ ಮಾಡಿದ್ದರ ಹಿಂದೆ ಈ ಭಾರಿ ಕಟ್ಟು ನಿಟ್ಟಾಗಿ ರಾಜ್ಯ ಪದವಿ ಪೂರ್ವ ಕಾಲೇಜು ಉಪನಿರ್ದೇಶಕಿ ಶಿಖಾ ಅವರು ನಿಯಮಗಳನ್ನು ತರುವ ಮೂಲಕ ಕಾರ್ಯನಿರ್ವಹಿಸುತ್ತಿದ್ದಾರೆ. ಚಾಮರಾಜನಗರ ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಕೊಠಡಿ ಮೇಲ್ವಿಚಾರಕರ ಮೊಬೈಲ್ ರಿಂಗಣಿಸುವುದರ ಬಗ್ಗೆ ದೂರು ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಆ ಸ್ಥಳದಲ್ಲಿ ಕೊಠಡಿ ಮೇಲ್ವಿಚಾರಕರನ್ನು ಪ್ರಶ್ನಿಸಿದರೆ ಮಾತಿಗೆ ಮಾತು ಬೆಳೆದು ವಿದ್ಯಾರ್ಥಿಗಳಿಗೆ ತೊಂದರೆಯಾಗಬಹುದೆಂದು ಉದ್ದೇಶದಿಂದ ಮಾತನಾಡದೇ ಮೇಲಾದಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಮೊಬೇಲ್ ಅನ್ನು ನಮಗೆ ತಿಳಿದ ಪ್ರಕಾರ ಜಾಗೃತದಳದ ಸಿಬ್ಬಂದಿ, ಜಿಲ್ಲಾ ಮಟ್ಟದ ಅಧಿಕಾರಿ, ನೂಡಲ್ ಅದಿಕಾರಿ,ಉಪನಿರ್ದೇಶಕರು ಸೇರಿದಂತೆ ಇಡಬಹುದೇ ಹೊರತು ಕೊಠಡಿ ಮೇಲ್ವಿಚಾರಕರು, ವಿದ್ಯಾರ್ಥಿಗಳು ಕೊಂಡ್ಯೋಯ್ಯುವಂತಿಲ್ಲ ಎಂಬುದು ನಮಗೆ ತಿಳಿದಿದ್ದಾಗಿದೆ. ಪರೀಕ್ಷಾ ಜವಬ್ದಾರಿ ಹೋತ್ತ ಕೊಠಡಿ ಮೇಲ್ವಿಚಾರಕರೆಲ್ಲರೂ ತಮ್ಮ ತಮ್ಮ ಮೊಬೈಲ್ ಅನ್ನು ಮುಖ್ಯ ಮೇಲ್ವಿಚಾರಕರ ಬಳಿ ಇಟ್ಟು ಹೋಗಬೇಕು ಆದರೆ ಕೆಲವುಕೇಂದ್ರಗಳಲ್ಲಿ ಈ ಯಾವ ಪ್ರಕ್ರಿಯೆಯೂನಡೆಯುತ್ತಿಲ್ಲ ಎಂಬುದು ಗಂಬೀರ ಆರೋಪವಾಗಿದೆ. ಒಂದು ಕಡೆ ಪರೀಕ್ಷೇ ಪ್ರಾರಂಬವಾದ ಮುಂಜಾನೆಯಿಂದಲೇ ಚಾಮರಾಜನಗರದಲ್ಲಿ ಜಿಲ್ಲಾಡಳಿತಭವನದಲ್ಲಿರುವ ಖಜಾನೆಯಿಂದ ಪ್ರಶ್ನೆಪತಿಕೆಗಳನ್ನು ಹೊತ್ತ 8 ಕ್ಕೂ ಹೆಚ್ಚು ವಾಹನಗಳು ಯಶಶ್ವಿಯಾಗಿ ತಲುಪಿಸಿ ತಮ್ಮ ಕಾರ್ಯವೈಖರಿಯನ್ನು ಅಪರ ಜಿಲ್ಲಾದಿಕಾರಿ ಗಾಯತ್ರಿ, ಉಪನಿರ್ದೇಶಕಿ ರಜನಿ ಎಸ್ ಮಲಕಿ ಅವರು ಮಾಡಿ ಮುಗಿಸಿದ್ದಾರೆ. ಅದರಂತೆ ಕೇಂದ್ರದ ಕೊಠಡಿ, ಮೇಲ್ವಿಚಾರಕರ ಮೊಬೈಲ್‍ಗಳಿಗೆ ಸಾದ್ಯವಾದಷ್ಟು ಕಡಿವಾಣವಾಗಬೇಕಾಗಿದೆ.ಎಂದು ವರದಿ ಮಾಡಿತ್ತು ತದ ನಂತರ ರಾಯಚೂರಿನ ಕೇಂದ್ರದಲ್ಲಿ ಗೊಂದಲ ಸೃಷ್ಟಿಯಾದ ಹಿನ್ನಲೆಯಲ್ಲಿ ಮತ್ತಷ್ಟು ಕಟ್ಟು ನಿಟ್ಟಿನ ಕ್ರಮ ಜರುಗಿಸಿ ಸುತ್ತೋಲೆಯನ್ನೆ ಹೊರಡಿಸಿದ್ದಾರೆ *********************************************************************

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು