Monday, 13 March 2017

ಚಾಮರಾಜನಗರದಲ್ಲಿ ಎಷ್ಟು.ಸಿ.ಸಿ ಕ್ಯಾಮೆರಾ ಇದೆ ಗೊತ್ತಾ.? ಪರೀಕ್ಷಾ ಕೇಂದ್ರಗಳಲ್ಲಿರದ ಸಿ.ಸಿ.ಕ್ಯಾಮೆರಾ ಜಿಲ್ಲಾಡಳಿತಭವನ, ಖಜಾನೆಯ ಸುತ್ತಮುತ್ತ 15 ಕ್ಕೂ ಹೆಚ್ಚು ಸಿ.ಸಿ ಕ್ಯಾಮೆರಾ.!

ಪರೀಕ್ಷಾ ಕೇಂದ್ರಗಳಲ್ಲಿರದ ಸಿ.ಸಿ.ಕ್ಯಾಮೆರಾ ಜಿಲ್ಲಾಡಳಿತಭವನ, ಖಜಾನೆಯ ಸುತ್ತಮುತ್ತ 15 ಕ್ಕೂ ಹೆಚ್ಚು ಸಿ.ಸಿ ಕ್ಯಾಮೆರಾ.! ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ನಗರ ಜಿಲ್ಲಾ ಕೇಂದ್ರದಲ್ಲಿ ಕೊಳ್ಳೇಗಾಲ, ಚಾಮರಾಜನಗರ, ಹನೂರು, ಗುಂಡ್ಲುಪೇಟೆ,ಯಳಂದೂರು, ರಾಮಾಪುರದಲ್ಲಿನ ಪರೀೀಕ್ಷಾ ಕೇಂದ್ರಗಳ ಸಂಖ್ಯೆ ಎಣಿಸಿದರೆ 16 ಕೇಂದ್ರಗಳಿದೆ. ಆದರೆ ಆ ಕೇಂದ್ರದಲ್ಲಿ ಶೇ.98 ರಷ್ಟು ಸಿ.ಸಿ ಕ್ಯಾಮೆರಾಗಳು ಇಲ್ಲವೇ ಇಲ್ಲ, ಒಂದು ವೇಳೇ ಶೇ 2% ಇದ್ದರೆ ಅದು ಕೆಲಸ ನಿರ್ವಹಿಸುತ್ತಿದಿಯೋ ಇಲ್ಲವೋ ಎಂಬುದು ಮಾತ್ರ ಪರೀಕ್ಷಾ ಕೇಂದ್ರ ಮುಖ್ಯಸ್ಥರಿಗೆ ಮಾತ್ರ ಗೊತ್ತಾಗಬೇಕಾಗಿದೆ. ದ್ವಿತೀಯ ಪಿ.ಯು,ಪರೀಕ್ಷಾ ಪತ್ರಿಕೆಗಳನ್ನು ಜಿಲ್ಲಾಡಳಿತಭವನದದ ಖಜಾನೆಯಲ್ಲಿ ಇರಿಸಲಾಗಿದ್ದು ಅಲ್ಲಿ ಪ್ರವೇಶ ದ್ವಾರದಿಂದ ಹಿಡಿದು ಖಜಾನೆವರೆಗೆ 9 ಕ್ಯಾಮೆರಾಗಳು,ಖಜಾನೆ ಪ್ರವೇವಾಗಿನಿಂದ ಒಳಗಡೆ 7 ಕ್ಕೂ ಹೆಚ್ಚು ಕ್ಯಾಮೆರಾಗಳು ಇದೆ ಎಂದು ತಿಳಿದುಬಂದಿದೆ. ಕಳೆದ ಎರಡು ದಿನದ ಹಿಂದೆ ಬೀದರ್ ಕಾಲೇಜಿನಲ್ಲಿ ಪ್ರಾಂಶುಪಾಲರು, ಉಪನ್ಯಾಸಕರು ಪರೀಕ್ಷಾಕೇಂದ್ರದಲ್ಲಿ ನಕಲು ಚೀಟಿ ಕೊಡುತ್ತಿದ್ದ ದೃಶ್ಯವನ್ನು ಖಾಸಗೀ ವಾಹಿನಿ ಪ್ರಸಾರ ಮಾಡಿತ್ತು. ಅದರಂತೆ ಅದರ ಬಗ್ಗೆ ತಿಳಿದುಕೊಳ್ಳುವ ಹಿತಾದೃಷ್ಟಿಯಿಂದ ಉಪನಿರ್ದೇಶಕರನ್ನು ಮಾಹಿತಿ ಕೆಳಿದರೆ ಗಂಟೆಗೊಂದು, ಘಳಿಗೆಗೊಂದು ಉತ್ತರ ನೀಡುತಿದ್ದ ಹಿನ್ನಲೆಯಲ್ಲಿ ಮೂರು ದಿನದ ಹಿಂದೆಯೇ ಕಾರ್ಯಕರ್ತ ಎಸ್.ವೀರಭದ್ರಸ್ವಾಮಿಅ ವರು ಮಾಹಿತಿ ಹಕ್ಕು ಸಲ್ಲಿಸಿದ್ದು ತ್ವರಿತವಾಗಿ ಉತ್ತರ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ. ಮಾಹಿತಿ ಹಕ್ಕಿನಲ್ಲಿ ಕೊಡಬೇಕಾದ ಉತ್ತರ ಅಂಶಗಳು 2 ನಿಮಿಷದಲ್ಲಿ ನೀಡಬಹುದಾದರೂ 30 ದಿನಗಳ ಅವಕಾಶವಿದೆ ಎಂದು ಇಲಾಖಾ ಆಡಳಿತ ಮಂಡಳಿತ ಬೇಜವ್ದಾರಿ ಉತ್ತರ ನೀಡಿದ್ದು ನಾವು ಪೋನಿನಲ್ಲೇ ಉತ್ರರ ಹೇಳುತ್ತಿದ್ದೇವು, ಅದಕ್ಕೆ ಏಕೆ ಈ ಅರ್ಜಿ ಎಂದು ಉಡಾಫೆ ಉತ್ತರ ನೀಡಿದ್ದಾರೆ. ಅದರೆ .ಸಿ.ಸಿ.ಕ್ಯಾಮೆರಾ ಇರುವಿಕೆ ಬಗ್ಗೆ ಖಚಿತಪಡಿಸಿಕೊಂಡಿದ್ದೀರಾ? ಹಾಗೂ ಅದು ಸುಸ್ಥಿತಿಯಲ್ಲಿದೀಯಾ ಎಂಬ ಪ್ರಶ್ನೆಗೆ ಮಾತ್ರ ಉಪನಿರ್ದೇಶಕರು ತಬ್ಬಿಬ್ಬರಾಗಿದ್ದಾರೆ ಆದರೂ ಈ ಪ್ರಶ್ನೆಗೆ ಅವರೇ ಉತ್ತರ ನೀಡಬೇಕಾಗಿದೆ. **************************************************************************

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು