Monday, 13 March 2017
13-03-2017 ಚಾಮರಾಜನಗರ( ನಿರ್ಭೀತಿಯಿಂದ ಚುನಾವಣಾ ಕರ್ತವ್ಯ ನಿರ್ವಹಿಸಿ : ಡಿ.ಸಿ ರಾಮು ಸೂಚನೆನಗರದಲ್ಲಿ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ಕಚೇರಿ ಉದ್ಘಾಟನೆ,)
ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ಕಚೇರಿ ಆರಂಭಕ್ಕೆ ಜಿಲ್ಲಾಧಿಕಾರಿ ಚಾಲನೆ
ಚಾಮರಾಜನಗರ ಮಾ.13 : ಪೊಲೀಸ್ ಅಧಿಕಾರಿಗಳ ದುರ್ನಡತೆ, ಅಧಿಕಾರ ದುರುಪಯೋಗ ಇನ್ನಿತರ ಪ್ರಕರಣಗಳ ಕುರಿತು ವಿಚಾರಣೆ ನಡೆಸಲು ಹಾಗೂ ದೂರು ಸಲ್ಲಿಸಲು ಅವಕಾಶ ಮಾಡಿಕೊಟ್ಟಿರುವ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ಕಚೇರಿಗೆ ಇಂದು ಜಿಲ್ಲಾಧಿಕಾರಿ ಬಿ.ರಾಮು ಇವರು ಚಾಲನೆ ನೀಡಿದರು.
ನಗರದ ಜಿಲ್ಲಾಡಳಿತ ಭವನದ ಮೊದಲನೇ ಮಹಡಿಯ ಕೊಠಡಿ ಸಂಖ್ಯೆ: 127 ರಲ್ಲಿ ಆರಂಭಿಸಲಾಗಿರುವ ದೂರು ಪ್ರಾದಿಕಾರ ಕಚೇರಿಯನ್ನು ಟೇಪು ಕತ್ತರಿಸುವ ಮೂಲಕ ಜಿಲ್ಲಾಧಿಕಾರಿಯವರು ಉದ್ಘಾಟಿಸಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿಯವರು ಪೊಲೀಸ್‍ರಿಂದ ಯಾವುದೇ ಹಕ್ಕು ಉಲ್ಲಂಘನೆಯಾದಲ್ಲಿ, ಅಧಿಕಾರ ದುರುಪಯೋಗವಾದಲ್ಲಿ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರಕ್ಕೆ ದೂರು ಸಲ್ಲಿಸಬಹುದು ಎಂದರು.
ದೂರು ಪ್ರಾಧಿಕಾರ ಇಂದಿನಿಂದ ಪ್ರತ್ಯೇಕ ಕಚೇರಿಯನ್ನು ಆರಂಭಿಸುವುದರಿಂದ ನೇರವಾಗಿ ಅಥವಾ ದೂರವಾಣಿ ಮುಖಾಂತರ ದೂರುಗಳನ್ನು ಸಲ್ಲಿಸಲು ಅವಕಾಶವಿದೆ. ಇನ್ನು ಮುಂದೆ ಮಾರ್ಗಸೂಚಿ ಪ್ರಕಾರ ದೂರು ಪ್ರಾಧಿಕಾರ ಸಭೆಗಳನ್ನು ನಡೆಸಲಾಗುತ್ತದೆ. ಸಲ್ಲಿಸಿಕೆಯಾದ ದೂರುಗಳ ಬಗ್ಗೆ ವಿಚಾರಣೆ ಕೈಗೊಳ್ಳಲಾಗುತ್ತದೆ ಎಂದರು.
ಪ್ರಾಧಿಕಾರದ ಸದಸ್ಯರಾದ ನಿವೃತ್ತ ಕೆ.ಎಸ್.ಪಿ.ಎಸ್ ಕಮಾಂಡೆಂಟ್ ರಾಮದಾಸ ಗೌಡ ಮಾತನಾಡಿ ಅತ್ಯಂತ ಪರಿಣಾಮಕಾರಿಯಾಗಿ ದೂರು ಪ್ರಾಧಿಕಾರವು ಕಾರ್ಯನಿರ್ವಹಿಸಲಿದೆ. ಪ್ರಾಧಿಕಾರವು ಸಮರ್ಪಕವಾಗಿ ಪ್ರಾಧಿಕಾರದ ಉದ್ದೇಶ ಹಾಗೂ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್.ಜೈನ್ ಮಾತನಾಡಿ ಸರ್ವೋಚ್ಚ ನ್ಯಾಯಾಲಯದ ಆದೇಶದ ಪ್ರಕಾರ ಜಿಲ್ಲಾ ಪೊಲೀಸ್ ದೂರು ಪ್ರಾಧಿಕಾರ ರಚನೆಯಾಗಿದೆ. ಸದ್ಯಕ್ಕೆ ಪ್ರಾಧಿಕಾರ ಕಚೇರಿಯಲ್ಲಿ ಲಭ್ಯವಿರುವ ಸಿಬ್ಬಂದಿಯನ್ನು ನಿಗಧಿತ ಸಮಯಗಳ ಕಾಲ ದೂರು ಸ್ವೀಕರಿಸಲು ನಿಯೋಜಿಸಲಾಗುತ್ತದೆ. ದೂರವಾಣಿ ಮೂಲಕವು ದೂರು ಸಲ್ಲಿಸಬಹುದು. ಇಂತಹ ದೂರುಗಳ ಬಗ್ಗೆ ಪ್ರಾಧಿಕಾರವು ವಿಚಾರಣೆ ನಡೆಸಲಿದೆ ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಸನ್ನ, ಡಿವೈಎಸ್ಪಿ ಗಂಗಾಧರ ಸ್ವಾಮಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
**********************************************************************************************************
ಉಪ ಚುನಾವಣೆ : ಬಂದೂಕು, ಆಯುಧ ಡಿಪಾಸಿಟ್ ಮಾಡಲು ಸೂಚನೆ
ಚಾಮರಾಜನಗರ ಮಾ.13 : ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರÀದ ಉಪ ಚುನಾವಣೆಗೆ ಸಂಬಂಧಿಸಿದಂತೆ ಗುಂಡ್ಲುಪೇಟೆ ತಾಲ್ಲೂಕು ವ್ಯಾಪ್ತಿ ಹಾಗೂ ಚಾಮರಾಜನಗರ ತಾಲ್ಲೂಕಿನ ಹರವೆ ಹೋಬಳಿ ವ್ಯಾಪ್ತಿಯಲ್ಲಿ ಪರವಾನಗಿ ಹೊಂದಿರುವ ಬಂದೂಕು, ಆಯುಧಗಳನ್ನು ಚುನಾವಣೆ ಮಾದರಿ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಯ ಸುಪರ್ದಿಯಲ್ಲಿ ಡಿಪಾಸಿಟ್ ಮಾಡಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಬಿ.ರಾಮು ಅವರು ಆದೇಶಿಸಿದ್ದಾರೆ.
ಸದರಿ ಆದೇಶವು ಮಾರ್ಚ್ 9 ರಿಂದ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವ ಏಪ್ರಿಲ್ 15 ರವರೆಗೂ ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
***********************************************************************************************
ಗುಂಡ್ಲುಪೇಟೆ ಉಪಚುನಾವಣೆ : ಮಾರ್ಚ್ 14 ರಿಂದ 21 ರವರೆಗೆ ನಾಮ ಪತ್ರ ಸ್ವೀಕಾರ
ಚಾಮರಾಜನಗರ, ಮಾ. 13 - ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ಮಾರ್ಚ್ 14 ರಿಂದ 21 ರವರೆಗೆ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯೊಳಗೆ ಗುಂಡ್ಲುಪೇಟೆ ಪಟ್ಟಣದ ತಾಲ್ಲೂಕು ಕಚೇರಿಯ ಮಿನಿ ವಿಧಾನ ಸೌಧ ಕಟ್ಟಡದ ನೆಲ ಮಹಡಿಯ ಸಭಾ ಭವನದಲ್ಲಿ ನಾಮ ಪತ್ರವನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಬಿ.ರಾಮು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುಂಡ್ಲುಪೇಟೆ ಉಪಚುನಾವಣೆ : ಸೆಕ್ಟರ್ ಅಧಿಕಾರಿಗಳ ನೇಮಕ
ಚಾಮರಾಜನಗರ, ಮಾ. 13- ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಬಿ.ರಾಮು ಅವರು ಆದೇಶ ಹೊರಡಿಸಿದ್ದಾರೆ.
ತಂಡದ ಸಂಖ್ಯೆ 1 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ - ಬೇಗೂರು (ದೂ.ಸಂ. 08228-231100) ಆರಕ್ಷಕ ಉಪನಿರೀಕ್ಷಕರು – ಕಿರಣ್ ಕುಮಾರ್ (ಮೊ. 9902001023). ವ್ಯಾಪ್ತಿ ಪ್ರದೇಶಗಳು - ಹೊಸಮಠ, ಶ್ರೀಕಂಠಪುರ, ಚನ್ನವಡೆಯನಪುರ-1, ಯಡವನಹಳ್ಳಿ, ಹೊಣಕನಪುರ-5, ಹೊರೆಯಾಲ 1 ಮತ್ತು 2, ರಂಗೂಪುರ, ಬೆಳಚಲವಾಡಿ 1 ಮತ್ತು 2, ಕುರುಬರಹುಂಡಿ, ಬೆಟ್ಟದಮಾದಹಳ್ಳಿ. ಮತಗಟ್ಟೆ ಸಂಖ್ಯೆ 1 ರಿಂದ 8, 21,22,27 ಹಾಗೂ 33. ಸೆಕ್ಟರ್ ಅಧಿಕಾರಿ - ಸುಂದ್ರಮ್ಮ, ಸಹಾಯಕ ಕೃಷಿ ನಿರ್ದೇಶಕರು, ಚಾಮರಾಜನಗರ (ಮೊ. 9945292355), ಎಂ.ಕೆ. ರವಿಕುಮಾರ್, ಸಹಾಯಕ ಆಡಳಿತಾಧಿಕಾರಿ, ತಾಲೂಕು ಜನರಲ್ ಆಸ್ಪತ್ರೆ, ಗುಂಡ್ಲುಪೇಟೆ (ಮೊ. 7795115857).
ತಂಡದ ಸಂಖ್ಯೆ 2 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ - ಬೇಗೂರು (ದೂ.ಸಂ. 08228-231100) ಆರಕ್ಷಕ ಉಪನಿರೀಕ್ಷಕರು – ಕಿರಣ್ ಕುಮಾರ್ (ಮೊ. 9902001023). ವ್ಯಾಪ್ತಿ ಪ್ರದೇಶಗಳು - ಹಿರೇಕಾಠಿ, ದೊಡ್ಡಹುಂಡಿ, ಅರೇಪುರ, ಬೇಗೂರು-1,2,3, ಕಾಳನಹುಂಡಿ, ಕೋಟೆಕೆರೆ - 1 ಮತ್ತು 2, ಬೋಹಯ್ಯನಹುಂಡಿ, ತಗ್ಗಲೂರು, ರಾಘವಾಪುರ 1 ಮತ್ತು 2. ಮತಗಟ್ಟೆ ಸಂಖ್ಯೆ 9, 10, 15, 18 ರಿಂದ 20, 23 ರಿಂದ 26, 34 ರಿಂದ 36. ಸೆಕ್ಟರ್ ಅಧಿಕಾರಿ – ಮೋಹನ್ ದಾಸ್ ಕೆ.ಎಸ್, ಸಹಾಯಕ ಕೃಷಿ ನಿರ್ದೇಶಕರು (ಜಾರಿ ದಳ), ಜಂಟಿ ಕೃಷಿ ನಿರ್ದೇಶಕರ ಕಚೇರಿ, ಚಾಮರಾಜನಗರ (ಮೊ. 8277930762), ಸಿದ್ದೇಗೌಡ, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ಗುಂಡ್ಲುಪೇಟೆ (ಮೊ. 8277930774).
ತಂಡದ ಸಂಖ್ಯೆ 3 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ - ಬೇಗೂರು (ದೂ.ಸಂ. 08228-231100) ಆರಕ್ಷಕ ಉಪನಿರೀಕ್ಷಕರು – ಕಿರಣ್ ಕುಮಾರ್ (ಮೊ. 9902001023). ವ್ಯಾಪ್ತಿ ಪ್ರದೇಶಗಳು – ಚಿಕ್ಕಾಟಿ 1 ಮತ್ತು 2, ತೊಂಡವಾಡಿ-1 ಮತ್ತು 2, ಹಾಲಹಳ್ಳಿ, ಕಮರಹಳ್ಳಿ, ಸೋಮಹಳ್ಳಿ- 1, 2 ಮತ್ತು 3, ಕೊಡಗಾಪುರ, ಶೀಗೇವಾಡಿ, ಮರಳಾಪುರ. ಮತಗಟ್ಟೆ ಸಂಖ್ಯೆ 11 ರಿಂದ 14, 16,17 ಹಾಗೂ 50 ರಿಂದ 55. ಸೆಕ್ಟರ್ ಅಧಿಕಾರಿ - ಚಿಕ್ಕಣ್ಣ, ಕಾರ್ಯದರ್ಶಿ, ಎಪಿಎಂಸಿ, ಚಾಮರಾಜನಗರ (ಮೊ. 7259552915), ವರಲಕ್ಷ್ಮಿ, ಸಹಾಯಕ ನಿರ್ದೇಶಕರು, ಉಪ ಖಜಾನಾಧಿಕಾರಿ ಕಚೇರಿ, ಗುಂಡ್ಲುಪೇಟೆ.
ತಂಡದ ಸಂಖ್ಯೆ 4 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ - ಬೇಗೂರು (ದೂ.ಸಂ. 08228-231100) ಆರಕ್ಷಕ ಉಪನಿರೀಕ್ಷಕರು – ಕಿರಣ್ ಕುಮಾರ್ (ಮೊ. 9902001023). ವ್ಯಾಪ್ತಿ ಪ್ರದೇಶಗಳು - ನಿಟ್ರೆ-1 ಮತ್ತು 2, ರಂಗನಾಥÀಪುರ, ತೋರವಳ್ಳಿ, ಕೆಬ್ಬೇಪುರ, ಅರಳೀಕಟ್ಟೆ, ಚಿಕ್ಕಬೇಗೂರು, ಹಿರಿಬೇಗೂರು, ಕಿಳಲಿಪುರ, ಕುಲಗಾಣ 1 ಮತ್ತು 2. ಮತಗಟ್ಟೆ ಸಂಖ್ಯೆ 56 ರಿಂದ 64, 71 ಹಾಗೂ 72. ಸೆಕ್ಟರ್ ಅಧಿಕಾರಿ - ಪುಟ್ಟಮಲ್ಲು, ಉಪ ನಿರ್ದೇಶಕರು, ರೇಷ್ಮೆ ತರಬೇತಿ ಸಂಸ್ಥೆ, ಕುದೇರು, ಚಾಮರಾಜನಗರ (ಮೊ. 9481593164), ಬಾಲಸುಬ್ರಹ್ಮಣ್ಯ, ಪತ್ರಾಂಕಿತ ವ್ಯವಸ್ಥಾಪಕರು, ಬಿಇಓ ಕಚೇರಿ, ಗುಂಡ್ಲುಪೇಟೆ (ಮೊ. 9845436088).
ತಂಡದ ಸಂಖ್ಯೆ 5 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ - ಬೇಗೂರು (ದೂ.ಸಂ. 08228-231100) ಆರಕ್ಷಕ ಉಪನಿರೀಕ್ಷಕರು – ಕಿರಣ್ ಕುಮಾರ್ (ಮೊ. 9902001023). ವ್ಯಾಪ್ತಿ ಪ್ರದೇಶಗಳು – ಮಂಚಹಳ್ಳಿ, ಸಾವುಕನಹಳ್ಳಿ, ಶೆಟ್ಟಹಳ್ಳಿ, ಹಸಗೂಲಿ - 1 ಮತ್ತು 2, ಗರಗನಹಳ್ಳಿ, ಮಳವಳ್ಳಿ, ನೇನೇಕಟ್ಟೆ - 1 ಮತ್ತು 2, ದೇಶಿಪುರ, ಆಲತ್ತೂರು 1 ಮತ್ತು 2. ಮತಗಟ್ಟೆ ಸಂಖ್ಯೆ 28 ರಿಂದ 32, 37, 245 ರಿಂದ 250. ಸೆಕ್ಟರ್ ಅಧಿಕಾರಿ - ಭಾಸ್ಕರ್ ಹೆಚ್, ಸಹಾಯಕ ತೋಟಗಾರಿಕೆ ನಿರ್ದೇಶಕರು, ಯಳಂದೂರು (ಮೊ. 8139973339), ರಫು, ಕಾರ್ಯದರ್ಶಿ, ಎಪಿಎಂಸಿ, ಗುಂಡ್ಲುಪೇಟೆ (ಮೊ. 9980795163).
ತಂಡದ ಸಂಖ್ಯೆ 6 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ - ಬೇಗೂರು (ದೂ.ಸಂ. 08228-231100), ಗುಂಡ್ಲುಪೇಟೆ (08229-222228) ಆರಕ್ಷಕ ಉಪನಿರೀಕ್ಷಕರು – ಕಿರಣ್ ಕುಮಾರ್ (ಮೊ. 9902001023), ಸಂದೀಪ್ ಕುಮಾರ್ (ಮೊ. 6480804651). ವ್ಯಾಪ್ತಿ ಪ್ರದೇಶಗಳು – ಅಗತಗೌಡನಹಳ್ಳಿ, ಹೆಗ್ಗಡಹಳ್ಳಿ, ಹಳ್ಳದಮಾದಹಳ್ಳಿ, ಮಾದಪಟ್ಟಣ, ಹÀುಣಸಿನಮರ, ದಡದಹÀಳ್ಳಿ, ಹಕ್ಕಲಪುರ, ಮಾಡ್ರಹಳ್ಳಿ, ಬೆಂಡಗಳ್ಳಿ, ಗುಂಡ್ಲುಪೇಟೆ 15, 15, 16, 17. ಮತಗಟ್ಟೆ ಸಂಖ್ಯೆ 38 ರಿಂದ 43, 45, 243, 244, 206 ರಿಂದ 209. ಸೆಕ್ಟರ್ ಅಧಿಕಾರಿ - ಚಲುವಯ್ಯ, ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾಧಿಕಾರಿ, ಚಾಮರಾಜನಗರ (ಮೊ. 9611172984), ಬಿಂದ್ಯ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ, ಗುಂಡ್ಲುಪೇಟೆ (ಮೊ. 9663382658).
ತಂಡದ ಸಂಖ್ಯೆ 7 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ಗುಂಡ್ಲುಪೇಟೆ (ದೂ.ಸಂ. 08229-222228). ಸಂದೀಪ್ ಕುಮಾರ್ (ಮೊ. 6480804651). ವ್ಯಾಪ್ತಿ ಪ್ರದೇಶಗಳು – ಕಲ್ಲಹಳ್ಳಿ, ಸಂಪಿಗೆಮರ, ಕಬ್ಬಹಳ್ಳಿ – 1,2,3, ಬೆಟ್ಟದಪುರ, ಪಂಜನಹಳ್ಳಿ, ಇಂಗಲವಾಡಿ, ಬನ್ನಿತಾಳಪುರ, ವೀರನಪುರ. ಮತಗಟ್ಟೆ ಸಂಖ್ಯೆ 44, 46 ರಿಂದ 49, 88, 235 ರಿಂದ 240. ಸೆಕ್ಟರ್ ಅಧಿಕಾರಿ – ಎಲ್.ಜೆ. ಹಂಸವೇಣಿ, ಜಿಲ್ಲಾ ನೋಂದಣಾಧಿಕಾರಿ, ಚಾಮರಾಜನಗರ (ಮೊ. 9448810572), ಶಿವಲಿಂಗಪ್ಪ, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಗುಂಡ್ಲುಪೇಟೆ (ಮೊ. 9945764867).
ತಂಡದ ಸಂಖ್ಯೆ 8 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ಚಾಮರಾಜನಗರ ರೂರಲ್ (ದೂ.ಸಂ. 08226-222092), ಲೋಹಿತ್ ಕುಮಾರ್ (ಮೊ. 9480804646). ವ್ಯಾಪ್ತಿ ಪ್ರದೇಶಗಳು – ಹೆಗ್ಗವಾಡಿ, ಭುಜಗನಪುರ, ಕೆರೆಹÀಳ್ಳಿ, ಮುಕ್ಕಡಹಳ್ಳಿ - 1 ಮತ್ತು 2, ಹೆಗ್ಗವಾಡಿ, ಮಲೆಯೂರು, ಮೂಡ್ನಾಕೂಡು 1 ಮತ್ತು 2, ಸಾಗಡೆ – 1,2,3. ಮತಗಟ್ಟೆ ಸಂಖ್ಯೆ 65 ರಿಂದ 70, 73, 74 ಹಾಗೂ 83 ರಿಂದ 87. ಸೆಕ್ಟರ್ ಅಧಿಕಾರಿ – ರಾಮಕೃಷ್ಣಯ್ಯ, ಸಿಡಿಪಿಓ, ಗುಂಡ್ಲುಪೇಟೆ (ಮೊ. 9845565133), ಮಹೇಶ್, ಮಕ್ಕಳ ಕಾರ್ಮಿಕ ಯೋಜನಾ ವ್ಯವಸ್ಥಾಪಕರು, ಚಾಮರಾಜನಗರ (ಮೊ.9886164951).
ತಂಡದ ಸಂಖ್ಯೆ 9 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ಚಾಮರಾಜನಗರ ರೂರಲ್ (ದೂ.ಸಂ. 08226-222092), ಲೋಹಿತ್ ಕುಮಾರ್ (ಮೊ. 9480804646). ವ್ಯಾಪ್ತಿ ಪ್ರದೇಶಗಳು – ಕಲ್ಪುರ, ದೇಶೀಗೌಡನಪುರ, ಹಳೇಪುರ, ಹರವೆ – 1,2,3,4, ಕೇತಹÀಳ್ಳಿ, ಕೆಂಗಾಕಿ, ಕುಟ್ಟೇಗೌಡನಹುಂಡಿ, ಕುಮಚಹಳ್ಳಿ, ಹೂರದಹಳ್ಳಿ. ಮತಗಟ್ಟೆ ಸಂಖ್ಯೆ 75 ರಿಂದ 82, 89 ರಿಂದ 92. ಸೆಕ್ಟರ್ ಅಧಿಕಾರಿ – ಲಿಂಗೇಗೌಡ, ಸಹಾಯಕ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಚಾಮರಾಜನಗರ (ಮೊ.9880986261), ವಿಜಯಸಾರಥಿ, ಎಇಇ, ಪಿಡಬ್ಲ್ಯೂಡಿ, ಗುಂಡ್ಲುಪೇಟೆ (ಮೊ. 9845974671).
ತಂಡದ ಸಂಖ್ಯೆ 10 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ತೆರಕಣಾಂಬಿ (ದೂ.ಸಂ. 08229-232235), ಸಾಗರ್ (ಮೊ. 9480804652). ವ್ಯಾಪ್ತಿ ಪ್ರದೇಶಗಳು – ಪರಮಾಪುರ, ಪಡಗೂರು, ಯಡಹುಂಡಿ, ಕೆಲಸೂರು - 1 ಮತ್ತು 2, ಮಲ್ಲಮ್ಮನಹುಂಡಿ, ಮೂಡಗೂರು, ಶ್ಯಾನಾಡ್ರಹಳ್ಳಿ. ಬಲಚವಾಡಿ, ಕೆಲಸೂರುಪುರ, ಚಿಕ್ಕತುಪ್ಪೂರು - 1 ಮತ್ತು 2, ಕಿಲಗೆರೆ, ಚನ್ನಂಜಯ್ಯನಹುಂಡಿ. ಮತಗಟ್ಟೆ ಸಂಖ್ಯೆ 93 ರಿಂದ 102, 230 ರಿಂದ 234. ಸೆಕ್ಟರ್ ಅಧಿಕಾರಿ – ಗುರುಲಿಂಗಯ್ಯ ಎಲ್, ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ, ಚಾಮರಾಜನಗರ (ಮೊ. 9448999390), ಸೋಮಣ್ಣ, ಸಹಾಯಕ ನಿರ್ದೇಶಕರು, ಗುಂಡ್ಲುಪೇಟೆ (ಮೊ.8884881672).
ತಂಡದ ಸಂಖ್ಯೆ 11 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ತೆರಕಣಾಂಬಿ (ದೂ.ಸಂ. 08229-232235), ಸಾಗರ್ (ಮೊ. 9480804652). ವ್ಯಾಪ್ತಿ ಪ್ರದೇಶಗಳು – ಲಕ್ಕೂರು, ಗುರುವಿನಪುರ, ತೆರಕಣಾಂಬಿಹುಂಡಿ - 1 ಮತ್ತು 2, ತೆರಕಣಾಂಬಿ - 1 ರಿಂದ 5, ಬೆರಟಹಳ್ಳಿ, ಕಗ್ಗಳ – 1,2, ಕಗ್ಗಳದಹುಂಡಿ, ತ್ರಿಯಂಬಕಪುರ. ಮತಗಟ್ಟೆ ಸಂಖ್ಯೆ 103 ರಿಂದ 116. ಸೆಕ್ಟರ್ ಅಧಿಕಾರಿ – ಹೆಚ್.ಎಸ್. ಗೀತಾಂಬ, ಪ್ರಾಂಶುಪಾಲರು, ಡಯಟ್, ಚಾಮರಾಜನಗರ (ಮೊ. 9448999363), ಸೋಮಶೇಖರ್, ಸಹಾಯಕ ಯೋಜನಾ ಸಮನ್ವಯಾಧಿಕಾರಿ, ಸರ್ವಶಿಕ್ಷಣ ಅಭಿಯಾನ, ಡಿಡಿಪಿಐ ಕಚೇರಿ, ಚಾಮರಾಜನಗರ (ಮೊ.9449001630).
ತಂಡದ ಸಂಖ್ಯೆ 12 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ತೆರಕಣಾಂಬಿ (ದೂ.ಸಂ. 08229-232235), ಸಾಗರ್ (ಮೊ. 9480804652). ವ್ಯಾಪ್ತಿ ಪ್ರದೇಶಗಳು – ಕರಕಲಮಾದಹಳ್ಳಿ, ಬೊಮ್ಮನಹಳ್ಳಿ, ಕುರುಬರಹುಂಡಿ, ರಾಮಯ್ಯನಪುರ, ಚಿರಕನಹಳ್ಳಿ, ವಡ್ಡಗೆರೆ, ಕುಂದಕೆರೆ - 1 ಮತ್ತು 2, ಹೆಗ್ಗವಾಡಿ, ಉಪಕಾರ ಕಾಲೋನಿ (ಬಿ), ಯರಿಯೂರು. ಮತಗಟ್ಟೆ ಸಂಖ್ಯೆ - 124 ರಿಂದ 134. ಸೆಕ್ಟರ್ ಅಧಿಕಾರಿ – ಕೆ.ಆರ್. ಕುಲಕರ್ಣಿ, ಉಪನಿರ್ದೇಶಕರು, ಗಣಿ ಮತ್ತು ಭೂವಿಜ್ಞಾನ ಇಲಾಖೆ, ಚಾಮರಾಜನಗರ (ಮೊ. 8762376353), ನಾಗವೇಣಿ ಡಿ, ಪ್ರಭಾರ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಚಾಮರಾಜನಗರ (ಮೊ. 948112479).
ತಂಡದ ಸಂಖ್ಯೆ 13 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ತೆರಕಣಾಂಬಿ (ದೂ.ಸಂ. 08229-232235), ಸಾಗರ್ (ಮೊ. 9480804652). ವ್ಯಾಪ್ತಿ ಪ್ರದೇಶಗಳು – ದೇವಾಪುರ, ಶೀಲವಂತಪುರ, ಸೋಮನಪುರ, ಕೊಡಸೋಗೆ - 1,2,3, ಕಡತಾಳಕಟ್ಟೆಹುಂಡಿ, ಕಂದೇಗಾಲ, ಬೆಟ್ಟಹಳ್ಳಿ, ಶಿಂಡನಪುರ, ದೊಡ್ಡತುಪ್ಪೂರು. ಮತಗಟ್ಟೆ ಸಂಖ್ಯೆ 117 ರಿಂದ 123, 226 ರಿಂದ 229. ಸೆಕ್ಟರ್ ಅಧಿಕಾರಿ – ಬಿ.ಎಸ್. ಮೋಹನ್, ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ, ಚಾಮರಾಜನಗರ (ಮೊ. 9740800544), ಎಲ್. ಶಿವಲಿಂಗಮೂರ್ತಿ, ಜಿಲ್ಲಾ ವ್ಯವಸ್ಥಾಪÀಕರು, ಕೆಎಸ್‍ಸಿಎಫ್‍ಸಿ, ಚಾಮರಾಜನಗರ (ಮೊ. 9448496017).
ತಂಡದ ಸಂಖ್ಯೆ 14 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ತೆರಕಣಾಂಬಿ (ದೂ.ಸಂ. 08229-232235), ಗುಂಡ್ಲುಪೇಟೆ (ದೂ. ಸಂ.08229-222228) ಸಾಗರ್ (ಮೊ. 9480804652), ಸಂದೀಪ್ ಕುಮಾರ್ (ಮೊ. 6480804651). ವ್ಯಾಪ್ತಿ ಪ್ರದೇಶಗಳು – ಅಂಕನಹಳ್ಳಿ – 1,2, ಬೊಮ್ಮಲಾಪುರ-1,2,3, ಹುಲ್ಲೇಪುರ, ಶಿವಪುರ - 1 ಮತ್ತು 2, ಅಣ್ಣೂರು, ಅಣ್ಣೂರುಕೇರಿ – 1,2,3, ಕೋಡಹಳ್ಳಿ – 1,2. ಮತಗಟ್ಟೆ ಸಂಖ್ಯೆ 148 ರಿಂದ 152, 155 ರಿಂದ 157, 220 ರಿಂದ 225. ಸೆಕ್ಟರ್ ಅಧಿಕಾರಿ – ಶೋಭಾ, ಜಿಲ್ಲಾ ವ್ಯವಸ್ಥಾಪಕರು, ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಚಾಮರಾಜನಗರ (ಮೊ. 9449169859), ಮಹದೇವಯ್ಯ, ಜಿಲ್ಲಾ ವ್ಯವಸ್ಥಾಪಕರು, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಚಾಮರಾಜನಗರ (ಮೊ.9580379284).
ತಂಡದ ಸಂಖ್ಯೆ 15 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ಗುಂಡ್ಲುಪೇಟೆ (ದೂ. ಸಂ.08229-222228). ಸಂದೀಪ್ ಕುಮಾರ್ (ಮೊ. 6480804651). ವ್ಯಾಪ್ತಿ ಪ್ರದೇಶಗಳು – ಬಾಚಹಳ್ಳಿ – 1,2, ಹುಂಡೀಪುರ, ಕೆಬ್ಬೇಪುರ, ಶೆಟ್ಟಹಳ್ಳಿ, ಬೆಳವಾಡಿ, ಚೌಡಹಳ್ಳಿ, ಹಂಗಳಪುರ, ಬಸವನಪುರ, ಬೆಂಡರವಾಡಿ, ವಡ್ಡನಹೊಸಹಳ್ಳಿ, ಪುತ್ತನಪುರ. ಮತಗಟ್ಟೆ ಸಂಖ್ಯೆ 135, 136, 145 ರಿಂದ 147, 153, 154, 160 ರಿಂದ 164. ಸೆಕ್ಟರ್ ಅಧಿಕಾರಿ – ಜಯಶೀಲಾ, ಸಿಡಿಪಿಓ, ಯಳಂದೂರು ಮತ್ತು ಸಂತೇಮರಹಳ್ಳಿ (ಮೊ. 9741843218), ರಾಜೇಂದ್ರ ಪ್ರಸಾದ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ನೀರಾವರಿ ಇಲಾಖೆ, ಸುವರ್ಣಾವತಿ, ಚಾಮರಾಜನಗರ (ಮೊ.9886484747).
ತಂಡದ ಸಂಖ್ಯೆ 16 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ಗುಂಡ್ಲುಪೇಟೆ (ದೂ. ಸಂ.08229-222228) ಸಂದೀಪ್ ಕುಮಾರ್ (ಮೊ. 6480804651). ವ್ಯಾಪ್ತಿ ಪ್ರದೇಶಗಳು – ಚಿಕ್ಕಯಲಚಟ್ಟಿ, ಯಲಚಟ್ಟಿ, ಜಕ್ಕಹಳ್ಳಿ, ಕಣಿಯನಪುರ ಕಾಲೋನಿ, ಮಂಗಲ, ಬಂಡಿಪುರ, ಮಗುವಿನÀಹಳ್ಳಿ, ಮೇಲುಕಾಮನಹಳ್ಳಿ, ಕಲ್ಲೇಗೌಡನಹಳ್ಳಿ, ಪಸಯ್ಯನಪುರ, ಹಂಗಳ – 1 ರಿಂದ 5. ಮತಗಟ್ಟೆ ಸಂಖ್ಯೆ 137 ರಿಂದ 144, 158, 159, 165 ರಿಂದ 169. ಸೆಕ್ಟರ್ ಅಧಿಕಾರಿ – ಸಿದ್ದರಾಜು, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ನೀರಾವರಿ ಇಲಾಖೆ, ಚಾಮರಾಜನಗರ (ಮೊ. 9449191832), ನಿಜಲಿಂಗಸ್ವಾಮಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ, ಚಾಮರಾಜನಗರ (ಮೊ.9483308663).
ತಂಡದ ಸಂಖ್ಯೆ 17– ಆರಕ್ಷಕ ಠಾಣೆ ಮತ್ತು ವ್ಯಾಪ್ತಿ – ಗುಂಡ್ಲುಪೇಟೆ (ದೂ. ಸಂ.08229-222228). ಸಂದೀಪ್ ಕುಮಾರ್ (ಮೊ. 6480804651). ವ್ಯಾಪ್ತಿ ಪ್ರದೇಶಗಳು – ದೇವರಹಳ್ಳಿ, ಹಂಗಳದ ಹೊಸಹಳ್ಳಿ, ಕಳ್ಳೀಪುರ, ಗೋಪಾಲಪುರ, ಹೊನ್ನೇಗೌಡಹಳ್ಳಿ. ಗೋಪಾಲಪುರ, ಕಣ್ಣೇಗಾಲ, ಮದ್ದಯ್ಯನಹುಂಡಿ, ಭೀಮನಬೀಡು – 1,2,3, ಕೂತನೂರು – 1,2, ಮಲ್ಲಯ್ಯನಪುರ – 1,2. ಮತಗಟ್ಟೆ ಸಂಖ್ಯೆ 170 ರಿಂದ 177, 192 ರಿಂದ 198. ಸೆಕ್ಟರ್ ಅಧಿಕಾರಿ – ಶಂಕರೇಗೌಡ, ಕರ್ನಾಟಕ ವಿಮಾಧಿಕಾರಿ, ಕೆಜಿಐಡಿ, ಚಾಮರಾಜನಗರ (ಮೊ. 9880631436), ರಂಗನಾಥ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಕರ್ನಾಟಕ ಗೃಹ ಮಂಡಳಿ, ಚಾಮರಾಜನಗರ (ಮೊ.9449038966).
ತಂಡದ ಸಂಖ್ಯೆ 18 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ –ಗುಂಡ್ಲುಪೇಟೆ (ದೂ. ಸಂ.08229-222228) ಸಂದೀಪ್ ಕುಮಾರ್ (ಮೊ. 6480804651). ವ್ಯಾಪ್ತಿ ಪ್ರದೇಶಗಳು – ಬೇರಂಬಾಡಿ – 1,2, ಮದ್ದೂರು ಕಾಲೋನಿ, ಚನ್ನಮಲ್ಲಿಪುರ, ಹೊಂಗಹಳ್ಳಿ - 1 ಮತ್ತು 2, ಮುಕ್ತಿಕಾಲೋನಿ, ಬರಗಿ– 1,2, ಮುಂಟೀಪುರ, ಮೂಖಹಳ್ಳಿ, ತೆಂಕಲಹುಂಡಿ, ಹೊನ್ನಶೆಟ್ಟರಹುಂಡಿ, ಹುಲಸಗುಂದಿ, ಮಡಹಳ್ಳಿ, ಉತ್ತಂಗೆರೆಹುಂಡಿ. ಮತಗಟ್ಟೆ ಸಂಖ್ಯೆ 178 ರಿಂದ 191, 241, 242. ಸೆಕ್ಟರ್ ಅಧಿಕಾರಿ – ಮಹಾಂತೇಶ್, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಚಾಮರಾಜನಗರ (ಮೊ. 9449821666), ಮಹದೇವು, ತಾಲ್ಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳು, ಯಳಂದೂರು (ಮೊ.9448795791).
ತಂಡದ ಸಂಖ್ಯೆ 19 – ಆರಕ್ಷಕ ಠಾಣೆ ಮತ್ತು ವ್ಯಾಪ್ತಿ –ಗುಂಡ್ಲುಪೇಟೆ (ದೂ. ಸಂ.08229-222228) ಸಂದೀಪ್ ಕುಮಾರ್ (ಮೊ. 6480804651). ವ್ಯಾಪ್ತಿ ಪ್ರದೇಶಗಳು – ಗುಂಡ್ಲುಪೇಟೆ – 9,10, 10ಎ, 11 ರಿಂದ 14, 18, 1,2,5,7,3,4,6,7. ಮತಗಟ್ಟೆ ಸಂಖ್ಯೆ 199 ರಿಂದ 205, 210 ರಿಂದ 219. ಸೆಕ್ಟರ್ ಅಧಿಕಾರಿ – ನಿಸಾರ್ ಅಹಮದ್, ಆಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರ, ಚಾಮರಾಜನಗರ (ಮೊ. 9008219682), ರಾಜಕುಮಾರ್, ಜಿಲ್ಲಾ ಅಧಿಕಾರಿ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಚಾಮರಾಜನಗರ (ಮೊ.9480825621).
ನಿರ್ಭೀತಿಯಿಂದ ಚುನಾವಣಾ ಕರ್ತವ್ಯ ನಿರ್ವಹಿಸಿ : ಡಿ.ಸಿ ರಾಮು ಸೂಚನೆ
ಚಾಮರಾಜನಗರ ಮಾ.13 : ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರÀದ ಉಪ ಚುನಾವಣೆಗೆ ನಿಯೋಜಿತರಾಗಿರುವ ಅಧಿಕಾರಿ, ಸಿಬ್ಬಂದಿ ಪಾರದರ್ಶಕತೆ ಹಾಗೂ ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಬಿ.ರಾಮು ಅವರು ಸೂಚನೆ ನೀಡಿದರು.
ನಗರದ ಕೆ.ಡಿ.ಪಿ ಸಭಾಂಗಣದಲ್ಲಿ ಇಂದು ಗುಂಡ್ಲುಪೇಟೆ ವಿಧಾನ ಸಭೆ ಚುನಾವಣೆಗೆ ನೇಮಕವಾಗಿರುವ ಸೆಕ್ಟರ್ ಅಧಿಕಾರಿ, ವಿಡಿಯೋ ಕಣ್ಗಾವಲು ತಂಡ, ವಿಡಿಯೋ ವೀಕ್ಷಣಾ ತಂಡ ಹಾಗೂ ಫ್ಲೈಯಿಂಗ್ ಸ್ಕೌಡ್ ಅಧಿಕಾರಿ, ಸಿಬ್ಬಂದಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚುನಾವಣೆ ಕರ್ತವ್ಯವು ಅತ್ಯಂತ ಹೊಣೆಗಾರಿಕೆಯಾಗಿದೆ. ಚುನಾವಣಾ ಪ್ರಕ್ರಿಯೆ ಆರಂಭವಾಗಿದ್ದು, ನೀತಿ ಸಂಹಿತೆ ಈಗಾಗಲೇ ಜಾರಿಯಲ್ಲಿದೆ. ಈಗಾಗಿ ಅಧಿಕಾರಿಗಳು ತಮಗೆ ವಹಿಸಿರುವ ಕರ್ತವ್ಯವನ್ನು ಚುನಾವಣಾ ಆಯೋಗದ ನಿಯಮ ಮಾರ್ಗಸೂಚಿ ಅನ್ವಯ ನಿರ್ವಹಿಸಬೇಕು ಎಂದರು.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯೊಂದಿಗೆ ಚುನಾವಣಾ ಪ್ರಕ್ರಿಯೆಯು ಬಿರುಸುಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರಿಕೆ ವಹಿಸಬೇಕಿದೆ. ವ್ಯಾಪಕವಾಗಿ ಅವರವರ ಕಾರ್ಯ ಕ್ಷೇತ್ರದಲ್ಲಿ ನಿರತರಾಗಿ ನೀತಿ ಸಂಹಿತೆ ಪಾಲನೆಯಾಗುತ್ತಿದೆಯೇ ಎಂದು ಪರಿಶೀಲಿಸಬೇಕು. ಉಲ್ಲಂಘನೆಯಾಗಿದೆ ಎಂದು ಕಂಡುಬಂದಲ್ಲಿ ಕೂಡಲೇ ಪ್ರಕರಣ ದಾಖಲು ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಯಾವುದೇ ಚುನಾವಣಾ ಸಂಬಂಧ ಸಭೆ, ಸಮಾರಂಭ, ರ್ಯಾಲಿ ಮೆರವಣಿಗೆ ನಡೆಯುವ ವೇಳೆ ಚುನಾವಣೆಗೆ ನಿರತರಾಗಿರುವ ಅಧಿಕಾರಿಗಳು ಭೇಟಿ ನೀಡಿ ಅನುಮತಿ ಪಡೆಯಲಾಗಿದೇ ಎಂದು ಪರಿಶೀಲಿಸಬೇಕು. ಆ ಕುರಿತು ವರದಿ ಸಹ ಸಲ್ಲಿಸಬೇಕು. ಚುನಾವಣಾ ಸಂಬಂಧ ಮಾಡುತ್ತಿರುವ ವೆಚ್ಚಗಳ ಬಗ್ಗೆ ಮಾಹಿತಿ ಕಲೆಹಾಕಿ ವರದಿ ಸಿದ್ದಪಡಿಸಬೇಕು ಎಂದರು.
ಚುನಾವಣೆ ಕರ್ತವ್ಯಕ್ಕೆ ನಿಯೋಜಿತರಾಗಿರುವ ಅಧಿಕಾರಿಗಳ ತಂಡ ದಿನದ 24 ಗಂಟೆಯೂ ನಿರತವಾಗಿರಬೇಕು. ಒಂದು ತಂಡ ತಮ್ಮ ಪಾಳಿಯ ಕರ್ತವ್ಯದ ನಂತರ ವರದಿ ಮಾಡಿಕೊಳ್ಳುವ ಮತ್ತೊಂದು ತಂಡಕ್ಕೆ ನಿರ್ವಹಿಸಿದ ಕೆಲಸಗಳ ಬಗ್ಗೆ ಮಾಹಿತಿ ನೀಡಬೇಕು. ಸಮನ್ವಯ ಸಹಕಾರದಿಂದ ಕೆಲಸ ಮಾಡಬೇಕೆಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
ಯಾವುದೇ ಲೋಪವೆಸಗಿದರೇ ಆಯಾ ಅಧಿಕಾರಿಗಳೇ ಹೊಣೆಗಾರರಾಗಲಿದ್ದಾರೆ. ಈಗಾಗಿ ಚುನಾವಣಾ ಕರ್ತವ್ಯವನ್ನು ಗಂಭೀರವಾಗಿ ಪರಿಗಣಿಸಬೇಕು. ಯಾವುದೇ ಅನುಮಾನಗಳಿದ್ದರೆ ಪರಿಹರಿಸಿಕೊಳ್ಳಬೇಕು ಎಂದು ಬಿ.ರಾಮು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್.ಜೈನ್ ಮಾತನಾಡಿ ಚುನಾವಣಾ ಆಯೋಗದ ಅನುಸಾರ ಕರ್ತವ್ಯ ನಿರ್ವಹಿಸಬೇಕು. ವಾಹನ ತಪಾಸಣೆ ಸೇರಿದಂತೆ ಎಲ್ಲಾ ತಂಡಗಳಲ್ಲಿಯೂ ಪೊಲೀಸ್ ಅಧಿಕಾರಿ, ಸಿಬ್ಬಂದಿ ಇರಲಿದ್ದಾರೆ ಎಂದರು.
ಚುನಾವಣಾ ಅಧಿಕಾರಿ ನಳಿನ್ ಅತುಲ್ ಮಾತನಾಡಿ ಚುನಾವಣಾ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸಬೇಕು. ಯಾವುದೇ ನಿರ್ಲಕ್ಷ ವಹಿಸುವುದನ್ನು ಸಹಿಸುವುದಿಲ್ಲ. ಪ್ರತಿದಿನ ನಿರ್ವಹಿಸುವ ಕರ್ತವ್ಯಗಳ ವೇಳೆ ಕಂಡುಬರುವ ಎಲ್ಲಾ ಪ್ರಕರಣಗಳು ಇನ್ನಿತರ ಚುನಾವಣಾ ಸಂಬಂಧ ವಿಷಯಗಳನ್ನೊಳಗೊಂಡ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂದು ತಿಳಿಸಿದರು.
ಇದೇ ವೇಳೆ ಭೂ ದಾಖಲೆ ಇಲಾಖೆಯ ಉಪ ನಿರ್ದೇಶಕರು ಹಾಗೂ ಚುನಾವಣಾ ಸಂಬಂಧ ತರಬೇತಿ ನೋಡಲ್ ಅಧಿಕಾರಿ ಸೋಮಸುಂದರ್ ಪವರ್ ಪಾಯಿಂಟ್ ಮೂಲಕ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿರುವ ಅಧಿಕಾರಿ, ಸಿಬ್ಬಂದಿಗೆ ಮಾಹಿತಿ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ.ಗಾಯಿತ್ರಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಸನ್ನ, ಅಬಕಾರಿ ಉಪ ಆಯುಕ್ತರಾದ ನಾಗೇಶ್ ಸಭೆಯಲ್ಲಿ ಉಪಸ್ಥಿತರಿದ್ದರು.
*******************************************************************************************
ಗುಂಡ್ಲುಪೇಟೆ ಉಪಚುನಾವಣೆ : ಪ್ಲೈಯಿಂಗ್ ಸ್ಕ್ವಾಡ್ ತಂಡ ನೇಮಕ
ಚಾಮರಾಜನಗರ, ಮಾ. 12 ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆಯಲ್ಲಿ ನಡೆಯಬಹುದಾದ ಯಾವುದೇ ಚುನಾವಣಾ ಅಪರಾಧ ಮತ್ತು ಅಕ್ರಮಗಳನ್ನು ನಿಯಂತ್ರಿಸಲು ಮತ್ತು ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಂಬಂಧ ವಿವಿಧ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಪ್ಲೈಯಿಂಗ್ ಸ್ಕ್ವಾಡ್ ತಂಡಗಳನ್ನಾಗಿ ನೇಮಕ ಮಾಡಿ ಜಿಲ್ಲಾಧಿಕಾರಿ ಬಿ. ರಾಮು ಅವರು ಆದೇಶಿಸಿದ್ದಾರೆ.
ಬೇಗೂರು ಹೋಬಳಿಗೆ ಸಂಬಂಧಪಟ್ಟಂತೆ ಆಹಾರ ಇಲಾಖೆಯ ಉಪನಿರ್ದೆಶಕರಾದ ಆರ್.ರಾಚಪ್ಪ (ಮೊ.ಸಂ 9448424665), ರೇಷ್ಮೆ ಇಲಾಖೆಯ ಸಹಾಯಕÀ ನಿರ್ದೇಶಕರಾದ ರೇಣುಕೇಶ್ (ಮೊ.ಸಂ 8884881672) ಹೆಡ್‍ಕಾನ್ಸ್‍ಟೇಬಲ್ ರಾಜ್‍ಗೋಪಾಲ್(ಮೊ.ಸಂ. 9986288946) ನೇಮಕವಾಗಿದ್ದಾರೆ.
ಗುಂಡ್ಲುಪೇಟೆ ಮುನಿಸಿಪಲ್ ಪ್ರದೇಶಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಶೇಖರಪ್ಪ ಗಡತ್(ಮೊ.ಸಂ 9448221040),ಭೂವಿಜ್ಣಾನಿ ಸುಬ್ರಮಣಿ(ಮೊ.ಸಂ. 9980676120), ಅಬಕಾರಿ ಉಪನಿರೀಕ್ಷಕರಾದ ಎಂ.ವಾಣಿ, ಪೊಲೀಸ್ ಕಾನ್ಸ್‍ಟೇಬಲ್ ಹಮೀದ್(ಮೊ.ಸಂ 9480388314) ನೇಮಕವಾಗಿದ್ದಾರೆ.
ಗುಂಡ್ಲುಪೇಟೆ ಕಸಬಾ ಹೋಬಳಿಗೆ ಸಂಬಂಧಪಟ್ಟಂತೆ ಜಿಲ್ಲಾ ಸಹಕಾರ ಸಂಘಗಳ ರಿಜಿಸ್ಟಾರ್ ಪಿ.ಶಶಿಧರ್ (ಮೊ.ಸಂ 9448928132) ಟೌನ್ ಪ್ಲಾನಿಂಗ್ ಸಹಾಯಕ ನಿರ್ದೇಶಕರಾದ ಸಿ.ಎಲ್ ಲಕ್ಷ್ಮೀಕಾಂತ್ (ಮೊ.ಸಂ 9945940309) ಅಬಕಾರಿ ಉಪ ನಿರೀಕ್ಷಕರಾದ ರೇವಣ್ಣ, ಪೊಲೀಸ್ ಕಾನ್ಸ್‍ಟೇಬಲ್ ಸುರೇಶ್ (ಮೊ.ಸಂ 9886360747) ನೇಮಕವಾಗಿದ್ದಾರೆ.
ತೆರಕಣಾಂಬಿ ಹೋಬಳಿಗೆ ಸಂಬಂಧಿಸಿದಂತೆ ಜವಳಿ ಇಲಾಖೆಯ ಉಪನಿರ್ದೇಶಕರಾದ ಸಯದ್ ನಯೀಮ್ ಅಹಮದ್ (ಮೊ.ಸಂ 9448816563) ಹಿಂದುಳಿದ ವರ್ಗದ ಇಲಾಖೆಯ ವಿಸ್ತರಣಾಧಿಕಾರಿ ರಾಮಸ್ವಾಮಿ (ಮೊ.ಸಂ 9183831583) ಅಬಕಾರಿ ಉಪನಿರೀಕ್ಷಕರಾದ ತನ್ವೀರ್ , ಪೊಲೀಸ್ ಕಾನ್ಸ್‍ಟೇಬಲ್ ಚಂದ್ರಶೇಖರ (ಮೊ.ಸಂ 9620121970) ನೇಮಕವಾಗಿದ್ದಾರೆ.
ಹಂಗಳ ಹೋಬಳಿಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಕೆ.ಎಚ್. ಸತೀಶ್ (ಮೊ.ಸಂ 9964182077) ಸಣ್ಣ ಉಳಿತಾಯ ಇಲಾಖೆಯ ಸಹಾಯಕ ನಿರ್ದೇಶಕರಾದ ಚಂದ್ರೇಗೌಡ (ದೂ.ಸಂ 08226-226255) ಅಬಕಾರಿ ಉಪನಿರೀಕ್ಷಕರಾದ ಶಿವಮಲ್ಲಪ್ಪ, ಪೊಲೀಸ್ ಕಾನ್ಸ್‍ಟೇಬಲ್ ಮನು (ಮೊ.ಸಂ 8792225505) ನೇಮಕವಾಗಿದ್ದಾರೆ.
ಹರವೆ ಹೋಬಳಿಗೆ ಸಂಬಂಧಿಸಿದಂತೆ ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ನಾಗರಾಜು (ಮೊ.ಸಂ 9448999221) ತೋಟಗಾರಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಿ.ಎಸ್ ರಮೇಶ್ (ಮೊ.ಸಂ 9448421475) ಅಬಕಾರಿ ಉಪನಿರೀಕ್ಷಕರಾದ ಶಿವರಾಜಚಾರಿ
ಪೊಲೀಸ್ ಕಾನ್ಸ್‍ಟೇಬಲ್ ಕೆ.ಜಿ.ಮಹೇಶ್ (ಮೊ.ಸಂ 9008897160) ನೇಮಕವಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
************************************************************************************************
ಗುಂಡ್ಲುಪೇಟೆ ಉಪಚುನಾವಣೆ : ವೀಡಿಯೋ ಸರ್ವೇಯಲೆನ್ಸ್ ಅಧಿಕಾರಿಗಳ ನೇಮಕ
ಚಾಮರಾಜನಗರ, ಮಾ. 12;- ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆಯಲ್ಲಿ ನಡೆಯಬಹುದಾದ ಯಾವುದೇ ಚುನಾವಣಾ ಅಪರಾಧ ಮತ್ತು ಅಕ್ರಮಗಳನ್ನು ನಿಯಂತ್ರಿಸಲು ಮತ್ತು ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಂಬಂಧ ವಿವಿಧ ಅಧಿಕಾರಿ ಹಾಗೂ ನೌಕರರನ್ನು ವೀಡಿಯೋ ಸರ್ವೇಯಲೆನ್ಸ್ ಅಧಿಕಾರಿಗಳನ್ನಾಗಿ ನೇಮಕ ಮಾಡಿ ಜಿಲ್ಲಾಧಿಕಾರಿ ಬಿ. ರಾಮು ಅವರು ಆದೇಶ ಹೊರಡಿಸಿದ್ದಾರೆ.
ನೇಮಕವಾಗಿರುವ ಅಧಿಕಾರಿಗಳು ಚುನಾವಣೆಗೆ ಸಂಬಂಧಿಸಿದಂತೆ ನಡೆಯುವ ಸಭೆ ಸಮಾರಂಭಗಳನ್ನು ವೀಡಿಯೋಗ್ರಾಪರ್ ಮೂಲಕ ಚಿತ್ರಿಕರಿಸಿ ವೀಡಿಯೋ ಮತ್ತು ವರದಿಯನ್ನು ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಬೇಗೂರು ಹೋಬಳಿಗೆ ತೋಟಗಾರಿಕೆ ಸಹಾಯಕ ಅಧಿಕಾರಿ ನಂಜುಂಡಯ್ಯ (ಮೊ.ನಂ 94480141143) ಕಸಬಾ ಹೋಬಳಿಗೆ ಕೃಷಿ ಅಧಿಕಾರಿ ಸತೀಶ್(ಮೊ.ಸಂ 8277930775) ತೆರಕಾಂಬಿ ಹೋಬಳಿಗೆ ಸಹಾಯಕ ತೋಟಕಾರಿಕೆ ಅಧಿಕಾರಿ ರವಿ (ಮೊ.ಸಂ 8904063635) ಹಂಗಳ ಹೋಬಳಿಗೆ ಸಹಾಯಕ ಕೃಷಿ ಅಧಿಕಾರಿ ಎಂ.ಸಿ ಪ್ರಸಾದ್ (ಮೊ,ಸಂ 8277930767) ಹರವೆ ಹೋಬಳಿಗೆ ಸಹಾಯಕ ತೋಟಗಾರಿಕೆ ಅಧಿಕಾರಿ ಪ್ರಕಾಶ್ (ಮೊ.ಸಂ 7829572434) ನೇಮಕವಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
************************************************************************************************************
ಗುಂಡ್ಲುಪೇಟೆ ಉಪಚುನಾವಣೆ : ವೀಡಿಯೋ ವೀವಿಂಗ್ ಅಧಿಕಾರಿ ನಿಯೋಜನೆ
ಚಾಮರಾಜನಗರ, ಮಾ. ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆಯಲ್ಲಿ ನಡೆಯಬಹುದಾದ ಯಾವುದೇ ಚುನಾವಣಾ ಅಪರಾಧ ಮತ್ತು ಅಕ್ರಮಗಳನ್ನು ನಿಯಂತ್ರಿಸಲು ಮತ್ತು ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಂಬಂಧ ಚುನಾವಣೆಗೆ ಸಂಬಂಧಿಸಿದಂತೆ ಚಿತ್ರಿಕರಿಸಿದ ಸಭೆ ಸಮಾರಂಭಗಳ ವೀಡಿಯೋ ವೀಕ್ಷಿಸಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಯಾಗಿದೆಯೇ ? ಇಲ್ಲವೇ ?ಎಂಬ ಬಗ್ಗೆ ವರದಿಯನ್ನು ನೀಡಲು ವೀಡಿಯೋ ವೀವಿಂಗ್ ತಂಡವನ್ನು ನೇಮಕ ಮಾಡಿ ಜಿಲ್ಲಾಧಿಕಾರಿ ಬಿ. ರಾಮು ಅವರು ಆದೇಶ ಹೊರಡಿಸಿದ್ದಾರೆ.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರೂ.ಕೆ.ಚಾಮರಾಜ್ ಅವರು ತಂಡದ ಮುಖ್ಯಸ್ಥರಾಗಿ, ಕೃಷಿ ಇಲಾಖೆಯ ಅಧೀಕ್ಷಕರಾದ ಸುಧೀಂದ್ರ ಭಾರಧ್ವಾಜ್ (ಮೊ.ಸಂ 8892221166) ಅವರು ಸದಸ್ಯರಾಗಿ ನೇಮಕವಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Subscribe to:
Post Comments (Atom)
01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ
ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ* ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...
ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು
-
ಹ್ಯಾಟ್ಸ್ ಆಫ್.. ಟು.. ಎಮ್.ಎಲ್.ಎ. ಪುಟ್ಟರಂಗಶೆಟ್ಟಿ ಸಾಹೇಬ್ರೇ..! . … ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ: ದಯಮಾಡಿ ಕ್ಷಮಿಸಿ ಯಾರ ಹಂಗಿಗೂ ಒಳಗಾ...
-
ವರ್ಷದಲ್ಲಿ ಮೂರು ಬಾರಿ ವರ್ಗಾವಣೆ ಕಸರತ್ತು ನಡೆಸಿದ ಸರ್ಕಾರ, ರಜೆಯನ್ನೆ ಹಾಕದೇ ವರ್ಷ ಪೂರೈಸಿದ ಎಸ್ಪಿ ಕುಲದೀಪ್ ಕುಮಾರ್ ಜೈನ್ ವರದಿ ರಾಮಸಮುದ್ರ ಎಸ್.ವೀ...
-
ಮಿಸ್ ಯೂ ಟು ಆಲ್, ಥ್ಯಾಂಕ್ಯು ಟು ಆಲ್ ಎಂದು ಭಾವುಕದಿಂದ ಕಣ್ಣೀರಿಟ್ಟ ಎಸ್ಪಿ ಜೈನ್ ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ...
-
ನವ ದಂಪತಿಗಳಿಗೆ ನಿರಾಸೆ............................... ಚಾಮರಾಜೇಶ್ವರ ರಥೋತ್ಸವ, ನಡೆಯುತ್ತಾ.! ಚಾಮರಾಜನಗರ, ಮೇ : ಆಷಾಢದಲ್ಲಿ ನಡೆಯುವ ಏಕೈಕ ರಥೋತ್ಸವ ಎಂಬ ಖ...
-
ಇಂಜಿನಿಯರಿಂಗ್ ವಿದ್ಯಾರ್ಥಿನಿ: ಆತ್ಮಹತ್ಯೆಗೆ ಯತ್ನ ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ ಮೇ 18: ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಪ್...
-
******************************************************* ಎಸ್ಪಿ ಕುಲದೀಪ್ ಕುಮಾರ್ ಜೈನ್ ಪ್ರಾಣಾಪಾಯದಿಂದ ಪಾರು REPORTED BY S.VEERABHADRA SWAMY. R...
-
ಅಂಗಡಿ ಮುಗ್ಗಟ್ಟು ನೆಲಸಮ: ಅದ್ಬುತವಾಗಿ ಕಾಣಲಿದಿಯೇ ಚಾಮರಾಜೇಶ್ವರ ದೇವಾಲಯ.. VSS ಅಂಗಡಿ ಮುಗ್ಗಟ್ಟು ನೆಲಸಮ: ಅದ್ಬುತವಾಗಿ ಕಾಣಲಿದಿಯೇ ಚಾಮರಾಜೇಶ...
-
ಅಕ್ರಂ ದಂದೆಗಳನ್ನ ಮಟ್ಟ ಹಾಕಿದ ಚಾಮರಾಜನಗರದ ಐ. ಪಿ.ಎಸ್ ಆದಿಕಾರಿ ಎಸ್ಪಿ ಕುಲದೀಪ್ ಕುಮಾರ್ ಆರ್ ಜೈನ್ ವರ್ಗಾವಣೆ, ಶ್ರೀ ಧರ್ಮೇಂದ್ರ ಕುಮಾರ್ ಮೀನಾ, (ಐಪಿಎಸ್.) ...
-
ನ್ಯೂ ಬೀಟ್ ಸಿಸ್ಟಂ…ಹಾಗಂದ್ರೇನು..? ಪ್ರತಿಯೊಬ್ಬಸಾರ್ವಜನಿಕ ಗಮನಕ್ಕೆ ಸುದ್ದಿ ಓದಿದ ಮೇಲೆ ಶೇರ್ ಮಾಡುವುದನ್ನು ಮರೆಯಬೇಡಿ..ನಿಮ್ಮ ಬೀದಿಗೆ ಬಂದಾಗ ಪೋಲೀಸರೊಂದ...
-
ಕೇಸರಿ ದ್ವಜ ಮತ್ತು ಸ್ಕೂಟರ್ ಬೆಂಕಿಹಾಕಿದ ದುಷ್ಕರ್ಮಿಗಳು ವರದಿ: ರಾಮಸಮುದ್ರ ಎಸ್ ವೀರಭದ್ರಸ್ವಾಮಿ (ವಾಹನದ ನಂಬರ್ ಅನ್ನು ನಾವೇ ಅಳಸಿಲಾಗಿದೆ. ಕ್ಷಮ...
Prize money bill when sanc
ReplyDeletetioned sir