Thursday, 2 March 2017

02-03-2017 ಚಾಮರಾಜನಗರ ಸುದ್ದಿಗಳು(ಗ್ರಾಹಕ ಹಕ್ಕು ಕಾಯಿದೆ ಅರಿವು ಅಗತ್ಯ , ಅನಿಲ ಪಡಿತರ ಚೀಟಿದಾರರಿಗೂ ಸೀಮೆಎಣ್ಣೆ)

ಗ್ರಾಹಕ ಹಕ್ಕು ಕಾಯಿದೆ ಅರಿವು ಅಗತ್ಯ ಚಾಮರಾಜನಗರ, ಮಾ. 02 :- ಗ್ರಾಹಕರು ಯಾವುದೇ ವಸ್ತು ಖರೀದಿ ಅಥವಾ ಸೇವೆಯಲ್ಲಿ ಲೋಪದೋಷಗಳು ಕಂಡುಬಂದಾಗ ಯಾವುದೇ ಹಿಂಜರಿಕೆ ಇಲ್ಲದೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ದೂರು ದಾಖಲಿಸಿ ಪರಿಹಾರ ಪಡೆಯಬೇಕೆಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ವೇದಿಕೆಯ ಸದಸ್ಯರಾದ ಗೌರಮ್ಮಣ್ಣಿ ಅವರು ತಿಳಿಸಿದರು. ನಗರದ ಪ್ರಥಮದರ್ಜೆ ಕಾಲೇಜಿನ ಆವರಣದಲ್ಲಿ ಇಂದು ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಹಾಗೂ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಶ್ರೀಗಂಧ ಮಹಿಳಾ ಅಭಿವೃದ್ಧಿ ಸಂಘ, ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಹಕ ಜಾಗೃತಿ ಕುರಿತು ಕಾರ್ಯಕ್ರಮದಲ್ಲಿ ಅವರು ಮತನಾಡಿದರು. ಗ್ರಾಹಕರ ಸಂರಕ್ಷಣೆಗಾಗಿ 1986ರಲ್ಲಿ ಕಾಯಿದೆ ಜಾರಿಗೆ ಬಂದಿದೆ. ಇದರ ಅನುಷ್ಠಾನಕ್ಕೆ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ಇದೆ. ಹಣ ಕೊಟ್ಟು ಖರೀದಿಸುವ ಯಾವುದೇ ವಸ್ತು ಅಥವಾ ಸೇವೆಯನ್ನು ಪಡೆಯುವವರು ಗ್ರಾಹಕರಾಗುತ್ತಾರೆ. ಕೊಂಡ ಸರಕು ಪಡೆದ ಸೇವೆಯಲ್ಲಿ ನ್ಯೂನತೆಗಳು ಇದ್ದರೆ ಪರಿಹಾರ ಪಡೆಯುವ ಹಕ್ಕು ಗ್ರಾಹಕರಿಗಿದೆ ಎಂದರು. ವಸ್ತು ಸೇವೆ ಪಡೆಯುವ ವೇಳೆ ಕಡ್ಡಾಯವಾಗಿ ರಸೀದಿ ಇನ್ನಿತರ ದಾಖಲೆಗಳನ್ನು ಪಡೆದುಕೊಳ್ಳಬೇಕು. ಅನ್ಯಾಯವಾದಾಗ ಪರಿಹಾರ ಪಡೆಯಲು ಅರ್ಜಿ ಸಲ್ಲಿಸುವ ವೇಳೆ ಅಂಗಡಿ ಉದ್ಯಮಿಗಳಿಂದ ಪಡೆದ ರಸೀತಿಯಂತಹ ದಾಖಲೆಗಳು ಪ್ರಮುಖವಾಗುತ್ತವೆ. ಹೀಗಾಗಿ ಯಾವುದೇ ಖರೀದಿ ಪ್ರಕ್ರಿಯೆ ಅಥವಾ ಸೇವೆ ಸೌಲಭ್ಯ ಪಡೆದುಕೊಂಡಾಗ ರಸೀದಿಯಂತಹ ದಾಖಲೆಗಳನ್ನು ಪಡೆದು ಇಟ್ಟುಕೊಳ್ಳಬೇಕು ಎಂದು ಗೌರಮ್ಮಣ್ಣಿ ಸಲಹೆ ಮಾಡಿದರು. ಜಾಗತೀಕರಣ ಯುಗದಲ್ಲಿ ಇಂದು ಆನ್ ಲೈನ್ ಮೂಲಕವೂ ವಸ್ತುಗಳನ್ನು ಖರೀದಿಸಲಾಗುತ್ತಿದೆ. ಜಾಹಿರಾತಿಗೆ ಮರುಳಾಗಿ ವಸ್ತು ಖರೀದಿಸುವ ಮೊದÀಲು ಚಿಂತನೆ ನಡೆಸಬೇಕು. ಪೈಪೋಟಿ ಯುಗದಲ್ಲಿ ಆಯ್ಕೆಯ ಹಕ್ಕು ಗ್ರಾಹಕರಿಗಿದೆ. ಬದಲಾದ ಪರಿಸ್ಥಿತಿಯಲ್ಲಿ ಗ್ರಾಹಕ ಹಾಗೂ ಮಾರಾಟಗಾರ ಇಬ್ಬರೂ ಸಹ ಎಚ್ಚರಿಕೆಯಿಂದ ಇರಬೇಕಿದೆ. ಯಾವುದೇ ನ್ಯೂನತೆ ಕಂಡುಬಂದಲ್ಲಿ ಪರಿಹಾರ ಪಡೆಯುವ ಎಲ್ಲಾ ಹಕ್ಕು ಗ್ರಾಹಕರಿಗಿದೆ ಎಂಬುದನ್ನು ಮರೆಯಬಾರದೆಂದು ಗೌರಮ್ಮಣ್ಣಿ ತಿಳಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಆಹಾರ ನಿರೀಕ್ಷಕರಾದ ವಿಶ್ವನಾಥ್ ಅವರು ಗ್ರಾಹಕರು ಮೋಸ ಹೋಗದಂತೆ ಜಾಗೃತಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮಗಳನ್ನು ಆಯೋಜಿಸಿ ಕಾಯಿದೆ ಬಗ್ಗೆ ತಿಳಿವಳಿಕೆ ನೀಡಲಾಗುತ್ತದೆ. ಗ್ರಾಹಕ ಸಂರಕ್ಷಣೆ ಬಗ್ಗೆ ಮಹಿಳೆಯರಿಗೆ ವಿದ್ಯಾರ್ಥಿನಿಯರಿಗೆ ಅರಿವು ಮೂಡಿಸಲು ಕಾಲೇಜು ಸ್ತ್ರೀಶಕ್ತಿ ಸಂಘಟನೆಗಳ ಸ್ಥಳದಲ್ಲಿ ಗ್ರಾಹಕ ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ಮಾಡಿದರು. ಸಿದ್ದಾರ್ಥ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಂಗಸ್ವಾಮಿ ಮಾತನಾಡಿ ಗ್ರಾಹಕರು ಪಡೆದ ವಸ್ತು ಸೇವೆಯಲ್ಲಿ ಗುಣಮಟ್ಟ ಇಲ್ಲವೆಂದು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಪ್ರಶ್ನಿಸಬೇಕು. ಗ್ರಾಹಕರ ಶೋಷಣೆಯನ್ನು ತಪ್ಪಿಸಲು ಪ್ರಶ್ನಿಸುವ ಮನೋಭಾವ ರೂಢಿಸಿಕೊಂಡರೆ ಯಾವುದೇ ಮೋಸ ಅನ್ಯಾಯಕ್ಕೆ ಒಳಗಾಗುವ ಪ್ರಕರಣಗಳು ಸಹಜವಾಗಿ ಇಳಿಮುಖವಾಗಲಿದೆ ಎಂದು ಅಭಿಪ್ತಾಯಪಟ್ಟರು. ಮಹಿಳಾ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ಮಾದಮ್ಮ ಅಧ್ಯಕ್ಷತೆ ವಹಿಸಿದ್ದರು. ಶ್ರೀಗಂಧ ಮಹಿಳಾ ಅಭಿವೃದ್ಧಿ ಸಂಘದ ಸಲಹೆಗಾರರಾದ ಶಿವರಾಜಮ್ಮ, ಸುಶೀಲ, ಗ್ರಾಸ್ ವಿತರಕ ಸಂಸ್ಥೆಯ ಪ್ರತಿನಿಧಿಗಳಾದ ಮಹೇಶ್, ಮಹೇಶ್ವರಿ, ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜು ಪ್ರಾಂಶುಪಾಲರಾದ ಎಂ.ಆರ್. ಸುಮತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ////////////////////////////////////////////////////////////////////////////////////////////////////////// ಮಾ. 10ರಿಂದ ಜಿಲ್ಲಾ ಕ್ರೀಡಾ ವಸತಿಶಾಲೆ ಪ್ರವೇಶಕ್ಕೆ ಆಯ್ಕೆ ಪ್ರಕ್ರಿಯೆ ಚಾಮರಾಜನಗರ, ಮಾ. 02 :- ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2017-18ನೇ ಸಾಲಿಗೆ ಜಿಲ್ಲಾ ಕ್ರೀಡಾ ವಸತಿ ಶಾಲೆ ಪ್ರವೇಶಕ್ಕಾಗಿ ಮಾರ್ಚ್ 10 ರಿಂದ 17ರವರೆಗೆ ತಾಲೂಕು ಕೇಂದ್ರಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಿದೆ. ಕಿರಿಯರ ವಿಭಾಗದಲ್ಲಿ ಪ್ರವೇಶಾತಿಗಾಗಿ ಪ್ರಸಕ್ತ ಸಾಲಿನಲ್ಲಿ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದು 2017-18ನೇ ಸಾಲಿಗೆ 5ನೇ ತರಗತಿಗೆ ಪ್ರವೇಶ ಪಡೆಯಲಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮಾರ್ಚ್ 10ರಂದು ಕೊಳ್ಳೇಗಾಲದ ಶ್ರೀ ಮಹದೇಶ್ವರ ಕಾಲೇಜು, 13ರಂದು ಯಳಂದೂರಿನ ಸರ್ಕಾರಿ ಪದವಿಪೂರ್ವ ಕಾಲೇಜು, 14ರಂದು ಗುಂಡ್ಲುಪೇಟೆಯ ಡಿ. ದೇವರಾಜ ಅರಸು ಕ್ರೀಡಾಂಗಣ, 15ರಂದು ಚಾಮರಾಜನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯಾ ದಿನಾಂಕಗಳಂದು ಬೆಳಿಗ್ಗೆ 9.30 ಗಂಟೆಗೆ ತಾಲೂಕುವಾರು ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಮಾರ್ಚ್ 17ರಂದು ಬೆಳಿಗ್ಗೆ 9.30 ಗಂಟೆಗೆ ಜಿಲ್ಲಾಮಟ್ಟದ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ವಾಲಿಬಾಲ್, ಫುಟ್ಬಾಲ್ ಕ್ರೀಡೆಗಳಿಗೆ ಸಂಬಂಧಿಸಿದಂತೆ ನಿರತರಾಗಿರುವ ವಿದ್ಯಾರ್ಥಿಗಳು ದಿನಾಂಕ 1.6.2017ಕ್ಕೆ ಅನ್ವಯವಾಗುವಂತೆ 12 ವರ್ಷಕ್ಕೊಳಪಟ್ಟಿರಬೇಕು. 140 ಸೆಂ.ಮೀ. ಎತ್ತರವಿರಬೇಕು. ವಿವರಗಳಿಗೆ ಮಹದೇವಯ್ಯ (ಮೊ.7760841489), ಕೆ.ಸಿ. ಶಿವಣ್ಣ (ಮೊ.9482110914), ಬಿ.ಕೆ. ಗೋಪಾಲ್ (ಮೊ.9945615695) ಅಥವಾ ನಗರದ ಜಿಲ್ಲಾಡಳಿತ ಭವನದಲ್ಲಿರುವ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ದೂರವಾಣಿ ಸಂಖ್ಯೆ 08226-224932 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ. ///////////////////////////////////////////////////////////////////////////////////////////// ಅನಿಲ ಪಡಿತರ ಚೀಟಿದಾರರಿಗೂ ಸೀಮೆಎಣ್ಣೆ ಚಾಮರಾಜನಗರ, ಮಾ. 02 - ಪ್ರಸಕ್ತ ಸಾಲಿನ ಮಾಹೆಯಿಂದ ಗ್ರಾಮಾಂತರ ಪ್ರದೇಶಗಳಲ್ಲಿ ಅನಿಲ ಪಡಿತರ ಚೀಟಿದಾರರಿಗೂ ಪ್ರತೀ ಮಾಹೆಗೆ ಒಂದು ಲೀಟರ್‍ನಂತೆ ಸಹಾಯಧನಯುಕ್ತ ಸೀಮೆಎಣ್ಣೆ ವಿತರಣೆಯಾಗಲಿದೆ. ಗ್ರಾಮಾಂತರ ಪ್ರದೇಶದಲ್ಲಿ ಗ್ಯಾಸ್ ಸಂಪರ್ಕ ಹೊಂದಿರುವ ಅನಿಲ ಪಡಿತರ ಚೀಟಿದಾರರು ಸೀಮೆಎಣ್ಣೆ ಪಡೆಯುವ ಬಗ್ಗೆ ಗ್ರಾಮಪಂಚಾಯಿತಿಯಲ್ಲಿ ಆಹಾರ ಇಲಾಖೆಯ ತಂತ್ರಾಂಶದ ಮೂಲಕ ತಮ್ಮ ಒಪ್ಪಿಗೆ ನೀಡಬೇಕಿದೆ. ಒಪ್ಪಿಗೆ ನೀಡದೇ ಇದ್ದ ಕಾರ್ಡುಗಳಿಗೆ ಸೀಮೆಎಣ್ಣೆ ಹಂಚಿಕೆ ಮಾಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗೆ ಸಂಬಂಧಪಟ್ಟ ಸ್ಥಳೀಯ ತಾಲೂಕು ಕಚೇರಿಯ ಆಹಾರ ನಿರೀಕ್ಷಕರನ್ನು ಭೇಟಿ ಮಾಡುವಂತೆ ಜಿಲ್ಲಾಧಿಕಾರಿ ಬಿ. ರಾಮು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ತಾಲೂಕುಗಳಿಗೆ ಭ್ರಷ್ಟಾಚಾರ ನಿಗ್ರಹದಳ ಅಧಿಕಾರಿಗಳ ಭೇಟಿ : ನಾಗರಿಕರಿಂದ ದೂರು ಸ್ವೀಕಾರ ಚಾಮರಾಜನಗರ, ಮಾ. 02 - ಜಿಲ್ಲೆಯ ತಾಲೂಕು ಕೇಂದ್ರ ಹಾಗೂ ಪಟ್ಟಣ ಪ್ರದೇಶಗಳಿಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮಾರ್ಚ್ 6 ರಿಂದ 31ರವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಭೇಟಿ ನೀಡಿ ಸಾರ್ವಜನಿಕರಿಂದ ದÀೂರುಗಳನ್ನು ಸ್ವೀಕರಿಸುವರು. ಮಾರ್ಚ್ 6ರಂದು ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ಅತಿಥಿಗೃಹದಲ್ಲಿ, ಮಾರ್ಚ್ 14ರಂದು ಚಾಮರಾಜನಗರ ಪಟ್ಟಣದ ಎಸಿಬಿ ಪೊಲೀಸ್ ಠಾಣೆಯಲ್ಲಿ ದೂರುಗಳನ್ನು ಸ್ವೀಕರಿಸುವರು. ಮಾರ್ಚ್ 22ರಂದು ಯಳಂದೂರು, 27ರಂದು ಕೊಳ್ಳೇಗಾಲ ಹಾಗೂ ಮಾರ್ಚ್ 31ರಂದು ಹನೂರಿನಲ್ಲಿರುವ ಸರ್ಕಾರಿ ಅತಿಥಿಗೃಹದಲ್ಲಿ ದೂರುಗಳನ್ನು ಸ್ವೀಕರಿಸುವರು. ಸರ್ಕಾರಿ ಕಚೇರಿಗಳಲ್ಲಿ ವಿಳಂಬ, ಲಂಚದ ಹಣಕ್ಕೆ ಒತ್ತಾಯ ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸಾರ್ವಜನಿಕರು ದೂರು ಸಲ್ಲಿಸಬಹುದಾಗಿದ್ದು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಉಪಾಧೀಕ್ಷಕರು ತಿಳಿಸಿದ್ದಾರೆ. ///////////////////////////////////////////////////////////////////////////////////////////// ವಿಶ್ವ ಮಹಿಳಾ ದಿನಾಚರಣೆ: ಸ್ವಚ್ಛ ಶಕ್ತಿ ಕಾರ್ಯಕ್ರಮ ಚಾಮರಾಜನಗರ ಮಾ 2 - ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕೇಂದ್ರ ಸರ್ಕಾರದ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯ ವತಿಯಿಂದ ಗುಜರಾತಿನ ಗಾಂಧಿ ನಗರದಲ್ಲಿ ಮಾ.8 ರಂದು ಸ್ವಚ್ಛ ಶಕ್ತಿ-2017 ಮಹಿಳಾ ಸಮಾವೇಶವನ್ನು ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತಿ ವತಿಯಿಂದ ಸ್ವಚ್ಛ ಶಕ್ತಿ ಕಾರ್ಯಕ್ರಮವನ್ನು ಒಂದು ವಾರ ಹಮ್ಮಿಕೊಳ್ಳಲಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ಒಂದು ವಾರಗಳ ಕಾಲ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನೀರು ಮತ್ತು ನೈರ್ಮಲ್ಯ ಬಗ್ಗೆ ಸ್ತ್ರೀ ಶಕ್ತಿ ಸಂಘಗಳ ಪ್ರತಿನಿಧಿಗಳಿಗೆ ಜಾಗೃತಿ ಮೂಡಿಸುವುದು. ಮಹಿಳೆ ಮತ್ತು ಸ್ವಚ್ಛತೆ ಕುರಿತು ಸಾಕ್ಷ್ಯ ಚಿತ್ರ ಪ್ರದರ್ಶನ. ನೀರಿನ ಟ್ಯಾಂಕ್, ತೊಂಬೆಗಳನ್ನು ಸ್ವಚ್ಛಗೊಳಿಸುವುದು. ನೀರಿನ ಸೋರಿಕೆಯನ್ನು ತಡೆಗಟ್ಟುವುದು. ವೈಯಕ್ತಿಕ, ಕುಟುಂಬ ಹಾಗೂ ಗ್ರಾಮದ ಸ್ವಚ್ಛತೆ ಕುರಿತು ಮಹಿಳಾ ಸಂಘದ ಪ್ರತಿನಿಧಿಗಳಿಗೆ ಅರಿವು ಮೂಡಿಸುವುದು. ಮಹಿಳೆಯರು ಮತ್ತು ಮಕ್ಕಳಿಗೆ ಕ್ರೀಡಾಕೂಟ ಆಯೋಜನೆ. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವುದು. ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ ಮಾಡುವಲ್ಲಿ ಮಹಿಳೆಯರ ಪಾತ್ರ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾ.8ರವರಗೆ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಿಳಾ ಜನಪ್ರತಿನಿಧಿಗಳು, ಮಹಿಳಾ ಸ್ವ-ಸಹಾಯ ಸಂಘಗಳು, ಸ್ಥಳೀಯ ಮಹಿಳಾ ಮುಖಂಡರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ, ಗ್ರಾಮ ಪಂಚಾಯಿತಿಯ ಸಿಬ್ಬಂದಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್ ಕುಮಾರ್ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ. /////////////////////////////////////////////////////////////////////////////////////////////////////// ಮಹಿಳಾ ಪತ್ರಕರ್ತರ ಸಮಸ್ಯೆ ಸವಾಲು ಹಾಗೂ ಅವಕಾಶಗಳು ಕುರಿತ ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಕೋರಿರುವ ಬಗ್ಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಕರ್ನಾಟಕ ರಾಜ್ಯ ಮಹಿಳಾ ವಿಶ್ಯವಿÀವಿದ್ಯಾಲಯ ಹಾಗೂ ವಿಜಯಪುರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಮಾರ್ಚ್ 6 ಮತ್ತು 7ರಂದು ಮಹಿಳಾ ಪತ್ರಕರ್ತರ ಸಮಸ್ಯೆ ಸವಾಲು ಮತ್ತು ಅವಕಾಶಗಳು ಎಂಬ ವಿಚಾರ ಸಂಕಿರಣವನ್ನು ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಸಭಾಭವನದಲ್ಲಿ ನಡೆಸಲಾಗುತ್ತಿದೆ. ವಿಚಾರಸಂಕಿರಣಕ್ಕೆ ಆಗಮಿಸುವ ಮಹಿಳಾ ಪತ್ರಕರ್ತರಿಗೆ ಊಟ, ವಸತಿ, ಪ್ರಯಾಣ ವೆಚ್ಚವನ್ನು ನೀಡಲಾಗುತ್ತದೆ. ಭಾಗವಹಿಸಲು ಇಚ್ಚಿಸುವ ಮಹಿಳಾ ಪತ್ರಕರ್ತರು ತಮ್ಮ ಹೆಸರು, ದೂರವಾಣಿ ಸಂಖ್ಯೆಯನ್ನು ಮಾಧ್ಯಮ ಅಕಾಡೆಮಿಗೆ ಪತ್ರದ ಮೂಲಕ ಅಥವಾ ಇಮೇಲ್ ಞಚಿಡಿಟಿಚಿಣಚಿಞಚಿmeಜiಚಿಚಿಛಿಚಿಜemಥಿ@g.miಚಿಟ.ಛಿomಗೆ ಕಳುಹಿಸುವಂತೆ ಅಕಾಡೆಮಿಯ ಅಧ್ಯಕ್ಷರಾದ ಸಿದ್ಧರಾಜು ಅವರು ಕೋರಿರುತ್ತಾರೆ. ಈ ವಿಷಯವನ್ನು ತಮ್ಮ ತಾಲೂಕು ಮಟ್ಟದ ಪ್ರತಿನಿಧಿಗಳಿಗೂ ತಿಳಿಸುವಂತೆ ಕೋರಲಾಗಿದೆ. //////////////////////////////////////////////////////////////////////////////////////////////////////////////////////////

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು