ಗುಂಡ್ಲುಪೇಟೆ ವಿಧಾನ ಸಭೆ ಉಪಚುನಾವಣೆ
ನೀತಿ ಸಂಹಿತೆ ಉಲ್ಲಂಘನೆ : ಮದ್ಯ, ತರಕಾರಿ ಬಾತ್ ವಶ
ಚಾಮರಾಜನಗರ, ಮಾ. 19 :- ಗುಂಡ್ಲುಪೇಟೆ ವಿಧಾನ ಸಭೆ ಉಪಚುನಾವಣಿ ಹಿನ್ನಲೆಯಲ್ಲಿ ಅಬಕಾರಿ ಹಾಗೂ ಸೆಕ್ಟರ್ ಅಧಿಕಾರಿಗಳು ಶನಿವಾರ ವಿವಿಧೆಡೆ ದಾಳಿ ನಡೆಸಿದ್ದು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ದಾಖಲು ಮಾಡಿಕೊಂಡಿದ್ದಾರೆ.
ಅಕ್ರಮವಾಗಿ ಸಂಗ್ರಹಿಸಲಾಗಿದ ಮದ್ಯ ಹಾಗೂ ಕಾರ್ಯಕರ್ತರಿಗೆ ಹಂಚಲು ಸಿದ್ದಪಡಿಸಿದ್ದ ತರಕಾರಿ ಬಾತ್ ವಶಪಡಿಸಿಕೊಂಡಿದ್ದಾರೆ.
ಕಗ್ಗಳ ಗ್ರಾಮದಲ್ಲಿ ದೊಡ್ಡನಾಯಕ ಎಂಬುವರಿಂದ 1.440 ಲೀಟರ್ ಹಾಗೂ ರಾಚನಾಯಕ ಎಂಬುವರಿಂದ 1.800 ಲೀಟರ್ ಮದ್ಯ, ತೊಂಡವಾಡಿ ಗ್ರಾಮದಲ್ಲಿ ರಾಜು ಎಂಬುವರಿಂದ 1.080 ಲೀಟರ್ ಮದ್ಯ, ಬೇಗೂರು ಗ್ರಾಮದಲ್ಲಿ ಸಂತೋಷ್À ಎಂಬುವರಿಂದ 1.080 ಲೀಟರ್ ಮದ್ಯವನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ದ ಎಫ್.ಐ.ಆರ್ ದಾಖಲಿಸಲಾಗಿದೆ.
ಕಬ್ಬಹಳ್ಳಿ ಗ್ರಾಮದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್vರ ಸಭೆಗೆ ತಯಾರು ಮಾಡಿದ್ದ ತರಕಾರಿ ಬಾತ್‍ನ್ನು ವೇದಿಕೆ ಹಿಂಬಾಗದಲ್ಲಿದ್ದ ಕೆ.ಎಂ.ಸುಬ್ಬಣ ಅವರ ಮನೆಯಲ್ಲಿ ವಶಪಡಿಸಿಕೊಳ್ಳಲಾಗಿದೆ. ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿಗಳಾದ ನಳಿನ್ ಅತುಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
_______________________________________________________________________
ಗಿರಿರಂಗನಾಥ ಸ್ವಾಮಿ ದೇವಾಲಯ ಎರಡು ವರ್ಷ ಬಂದ್ ಹಿನ್ನಲೆಯಲ್ಲಿ, ದೇವಾಲಯದ ಹತ್ತಿರದಲ್ಲೇ ಪ್ರತಿಷ್ಠಾಪನೆಗೊಂಡ ಬಿಳಿಗಿರಿರಂಗನಾಥಸ್ವಾಮಿ ಹಾಗೂ ಆಲಮೇಲಮ್ಮನವರ ಪ್ರತಿರೂಪದ ಮರದ ವಿಗ್ರಹಗಳು
.
ಯಳಂದೂರು ಮಾ 18 ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ಅಲಮೇಲು ಅಮ್ಮನವರ ದೇವಾಲಯ ಜೀರ್ಣೊದ್ದಾರ ಅಂಗವಾಗಿ ಬಿಳಿಗಿರಿರಂಗನಾಥರಸ್ವಾಮಿ ದೇವಾಲಯದ ದೇವಸ್ಥಾನ ಭಕ್ತರಿಗೆ ಎರಡು ವರ್ಷಗಳ ಕಾಲ ಬಂದ್ ಆಗಿರುವ ಹಿನ್ನಲೆಯಲ್ಲಿ ಬಿಳಿಗಿರಿರಂಗನಾಥಸ್ವಾಮಿ ಹಾಗೂ ಆತನ ಪತ್ನಿ ಅಲಮೇಲು ಅಮ್ಮನವರ ಪ್ರತಿಮೆಯನ್ನು ದೇವಾಲಯದ ಬಳಿಯಲ್ಲಿರುವ ಕಾಶಿ ಮಂಟಪದಲ್ಲಿ ಪ್ರತಿಷ್ಟಾಪಿಸಿ ವಿಶೇಷ ಪೂಜೆ ಸಲ್ಲಿಸಿ ಬಿಳಿಗಿರಿರಂಗನಾಥನ ಭಕ್ತರಿಗೆ ಬಿಳಿಗಿರಿರಂಗನಾಥಸ್ವಾಮಿ ಹಾಗೂ ಆತನ ಪತ್ನಿ ಅಲಮೇಲು ಅಮ್ಮನವರ ಮರದಿಂದ ತಯಾರಿಸಿದ ಪ್ರತಿರೂಪದ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ.
ಪ್ರಾಣ ಪ್ರತಿಷ್ಟೆ ಡಾ. ಭಾಷ್ಯಂಸ್ವಾಮೀಜಿಯವರು ಹಾಗೂ ಸ್ಥಳೀಯ ಆಗಮಿಕರು ಎಸ್.ನಾಗರಾಜಭಟ್ಟ, ವಿದ್ವಾನ್ ಪಿ. ಸತ್ಯನಾರಾಯಣರವರ ಪ್ರಧಾನಾಚಾರ್ಯತ್ವದಲ್ಲಿ, ಧಾರ್ಮಿಕ ದತ್ತಿ ಇಲಾಖೆಯ ವೈಖಾನಸಾಗಮ ಪಂಡಿತ ಡಾ.ಎಸ್.ರಾಜಗೋಪಾಲ್ ಪ್ರೋಫೆಸರ್ ಡಾ.ಎಸ್ ಶ್ರೀನಿಧಿ, ಅರ್ಚಕರು ರವಿಕುಮಾರ್ ಸಹಯೋಗದಲ್ಲಿ ರಾತ್ರಿ ಪೂರ್ತಿ ಹೋಮ ಹವನ ಯಜ್ಞ ಯಾಗಾದಿಗಳೊಂದಿಗೆ ಶ್ರೀ ಬಿಳಿಗಿರಿರಂಗನಾಥಸ್ವಾಮಿ ಶ್ರೀದೇವಿ, ಭೂದೇವಿ, ಕುಂಭಕ್ಕೆ ಪ್ರಾಣ ಪ್ರತಿಷ್ಟೆ ಮಾಡಿ ದೇವರ ಪ್ರತಿಮೆಗಳಿಗೆ ತುಂಬಲಾಯಿತು. ನಂತರ ಅಲಮೇಲು ಅಮ್ಮನವರ ಪ್ರತಿಮೆಗೆ ಪ್ರಾಣಪ್ರತಿಷ್ಟೆ ಶಕ್ತಿಯನ್ನು ವಿಗ್ರಹಕ್ಕೆ ತುಂಬಿ ಮೂಲ ದೇವರಂತೆಯೇ ವಿವಿಧ ಪುಷ್ಪಾಲಂಕಾರಗಹಳಿಂದ ಶಿಂಗರಿಸಿ ಮಹಾ ಮಂಗಳಾರತಿ ಸಲ್ಲಿಸಿದ ನಂತರ ಭಕ್ತರು ದರುಶನ ಪಡೆಯಲು ಅನುವು ಮಾಡಿಕೊಡಲಾಯಿತು. ಆದ್ದರಿಂದ ಇನ್ಮುಂದೆ ರಂಗಪ್ಪನ ಭಕ್ತರು ಎಂದಿನಂತೆ ಪ್ರತಿರೂಪದ ಬಿಳಿಗಿರಿರಂಗನಾಥಸ್ವಾಮಿ ಹಾಗೂ ಅಲಮೇಲು ಅಮ್ಮನವರ ದೇವರ ದರ್ಶನÀ ಪಡೆಯಬಹುದಾಗಿದೆ. ಪ್ರತಿರೂಪದ ದೇವರ ದರ್ಶನ ನೋಡಲು ಸಹಜವಾಗಿ ಭಕ್ತರ ಸಂಖ್ಯೆ ಇಳಿಮುಖವಾಗಿತ್ತು. ನಂತರ ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಯಿತು.
No comments:
Post a Comment