Saturday, 25 March 2017

25-03-2017 ಗುಂಡ್ಲುಪೇಟೆ ಉಪಚುನಾವಣೆ ,ಮುಕ್ತ ಪಾರದರ್ಶಕ ಚುನಾವಣೆಗಾಗಿ ಕಟ್ಟುನಿಟ್ಟಿನ ಕ್ರಮ : ಜಿಲ್ಲಾಧಿಕಾರಿ ಬಿ. ರಾಮು ,ಚುನಾವಣಾ ಕರ್ತವ್ಯ ಅಧಿಕಾರಿ ನೌಕರರ ವೈದ್ಯಕೀಯ ಚಿಕಿತ್ಸೆಗೆ ವೈದ್ಯರ ನೇಮಕ,,ವೆಚ್ಚ ವೀಕ್ಷಕರಿಗೆ ಅಹವಾಲು ಸಲ್ಲಿಸಲು ಅವಕಾಶ

                           



ಮೂಲಭೂತ ಕರ್ತವ್ಯ ಪಾಲನೆ ಮಹತ್ತರ ಜವಾಬ್ದಾರಿ: ಜಿಲ್ಲಾ ನ್ಯಾಯಾಧೀಶರ ಅಭಿಮತ
ಚಾಮರಾಜನಗರ, ಮಾ. 25 :- ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ಮೂಲಭೂತ ಕರ್ತವ್ಯ ಪಾಲನೆ ಮಾಡುವಲ್ಲಿ ಮುಂದಾಗಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್. ಮಳವಳ್ಳಿ ತಿಳಿಸಿದರು. 
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮೂಲಭೂತ ಕರ್ತವ್ಯಗಳ ಕುರಿತು ವಿಚಾರ ಸಂಕಿರಣ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 
ಸಂವಿಧಾನದ ಮೂಲ ಆಶಯಗಳನ್ನು ಈಡೇರಿಸಬೇಕಿದೆ.  ರಾಷ್ಟ್ರಧÀ್ವಜ, ರಾಷ್ಟ್ರಗೀತೆಯನ್ನು ಗೌರವಿಸಬೇಕಾದದ್ದು ಮೂಲಭೂತ ಕರ್ತವ್ಯವಾಗಿದೆ.  ದೇಶಪ್ರೇಮ ಬೆಳಸಿಕೊಂಡರೆ ಕರ್ತವ್ಯಗಳ ಪಾಲನೆಯು ಆಗಲಿದೆ. ಸಹೋದರತೆ ಭಾವನೆಯನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕಿದೆ ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು. 
ಸಾರ್ವಜನಿಕ ಆಸ್ತಿಯನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ, ಕೆರೆ, ಅರಣ್ಯ,ವನ್ಯಜೀವಿಗಳನ್ನು ಪೋಷಿಸಿ ಕಾಪಾಡುವುದು ಸಹ ಮೂಲಭೂತ ಕರ್ತವ್ಯಗಳಲ್ಲಿ ಒಂದಾಗಿದೆ.  ಯಾವುದೇ ಅಮೂಲ್ಯ ಸಂಪತ್ತನ್ನು ನಾಶ ಮಾಡಬಾರದು.  ಕೆಡಕು ಉಂಟು ಮಾಡಬಾರದು ಎಂದು ನ್ಯಾಯಾಧೀಶರು ಸಲಹೆ ಮಾಡಿದರು. 
ವಿಶೇಷ ಉಪನ್ಯಾಸ ನೀಡಿದ ಪ್ರೊ|| ಪಿ. ದೇವರಾಜು ಅವರು  ಮಾತನಾಡಿ ದೇಶದ ಏಕತೆ ಹಾಗೂ ಸಮಗ್ರತೆಗೆ ಆದ್ಯತೆ ನೀಡಬೇಕಿದೆ.  ಮೂಲಭೂತ ಕರ್ತವ್ಯಗಳನ್ನು ಪಾಲಿಸಲು ನಿಷ್ಠೆ ತೋರಬೇಕು.  ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪರಂಪರೆ, ಶ್ರಮವನ್ನು ಅರ್ಥಮಾಡಿಕೊಳ್ಳಬೇಕು.  ದೇಶದ ಸ್ವಾತಂತ್ರ್ಯ ಹೋರಾಟಗಾರರು, ಸಂಗ್ರಾಮ ಸೇರಿದಂತೆ ಎಲ್ಲಾ ಅಂಶಗಳನ್ನು ಗೌರವಿಸಬೇಕು ಎಂದರು.  
ಸಂವಿಧಾನದ ಮಹತ್ತರ ಆಶಯಗಳನ್ನು ಸಾಕಾರಗೊಳಿಸಬೇಕಿದೆ.  ಭವಿಷ್ಯ ಉಜ್ವಲವಾಗಲು ಪ್ರಬುದ್ಧ ರಾಷ್ಟ್ರ ನಿರ್ಮಾಣ ಮಾಡಲು ಪ್ರತಿಯೊಬ್ಬರು ಕಳಕಳಿಯಿಂದ  ಮುಂದಾಗಬೇಕಿದೆ ಎಂದರು. 
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಆರ್. ವಿರೂಪಾಕ್ಷ ಮಾತನಾಡಿ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳ ನಡುವೆ ಸಂಬಂಧ ಇದೆ. ಹಕ್ಕುಗಳ ಜೊತೆ ಕರ್ತವ್ಯವು ಸಾಗಬೇಕಿದೆ. ಇತರರಿಗೆ ತೊಂದರೆ ನೀಡುವುದು ಸಲ್ಲದು.  ದಿನನಿತ್ಯದ ಜೀವನದಲ್ಲಿ ಮೂಲಭೂತ ಕರ್ತವ್ಯಗಳನ್ನು ಪಾಲಿಸುವುದು ಪ್ರಮುಖ ಜವಾಬ್ದಾರಿ ಎಂದು ಅರಿಯಬೇಕು ಎಂದರು. 
********************************************

                                    ಗುಂಡ್ಲುಪೇಟೆ ಉಪಚುನಾವಣೆ 

ಮುಕ್ತ ಪಾರದರ್ಶಕ ಚುನಾವಣೆಗಾಗಿ ಕಟ್ಟುನಿಟ್ಟಿನ ಕ್ರಮ : ಜಿಲ್ಲಾಧಿಕಾರಿ ಬಿ. ರಾಮು
                              ರಾಮಸಮುದ್ರ ಎಸ್.ವೀರಭದ್ರಸ್ವಾಮಿ 


ಚಾಮರಾಜನಗರ, ಮಾ. 25 ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಕ್ರಿಯೆಯನ್ನು ಮುಕ್ತ ಹಾಗೂ ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ, ಬಿ. ರಾಮು ತಿಳಿಸಿದರು.
  ಗುಂಡ್ಲುಪೇಟೆ ತಾಲ್ಲೂಕು ಕಚೇರಿಯಲ್ಲಿ ಇಂದು  ಚುನಾವಣಾ ಹಿನ್ನಲೆಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಜಿಲ್ಲಾಧಿಕಾರಿಯವರು  ಈ ವಿಷಯ ತಿಳಿಸಿದರು
ಚುನಾವಣಾ  ನೀತಿ ಸಂಹಿತೆ ಪಾಲನೆಗೆ ನಿಗಾವಹಿಸಲು ಸೆಕ್ಟರ್ ಅಧಿಕಾರಿಗಳಾಗಿ 19 ತಂಡ ಒಳಗೊಂಡ 38 ಅಧಿಕಾರಿಗಳು, 6 ಪ್ಲೈಯಿಂಗ್ ಸ್ಕ್ವಾಡ್‍ಗೆ 24 ಅಧಿಕಾರಿಗಳು, ವೀಡಿಯೋ ಸರ್ವೇಯಲೆನ್ಸ್ 6 ತಂಡಕ್ಕೆ 6 ಅಧಿಕಾರಿಗಳು, ಒಂದು  ವೀಡಿಯೋ ವೀವಿಂಗ್ ತಂಡ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.  11 ಚೆಕ್ ಪೋಸ್ಟ್‍ಗಳನ್ನು ತೆರೆಯಲಾಗಿದ್ದು, 101 ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು.
ಮತದಾರರಿಗೆ ಆಮಿಷ ಒಡ್ಡುವ ಪ್ರಕರಣಗಳು, ದಾಖಲೆ ಇಲ್ಲದೆ ಸಾಗಿಸುವ ಹಣ, ಉಡುಗೊರೆ ವಸ್ತುಗಳು ಇನ್ನಿತರೆ ಸಾಮಗ್ರಿಗಳ ಮೇಲೆ ನಿಗಾ ಇಡಲಾಗಿದೆ.  ಚೆಕ್ ಪೋಸ್ಟ್‍ಗಳಲ್ಲಿ ತಪಾಸಣೆ ಮಾಡುವ ವೇಳೆ ವೀಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ  ಈಗಾಗಲೇ 10 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಅಬಕಾರಿ ನಿಯಮ ಉಲ್ಲಂಘಿಸಿದ 54 ಪ್ರಕರಣಗಳು ದಾಖಲು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮತ, ಜಾತಿ ಆಧಾರದ ಮೇಲೆ ಮತಯಾಚನೆ ಮಾಡುವಂತಿಲ್ಲ.  ಚುನಾವಣಾ ಪ್ರಚಾರ, ಸಮಾರಂಭ ಮಾಡುವ ವೇಳೆ ಅಧಿಕಾರಿಗಳು ಗಮನಿಸಲಿದ್ದಾರೆ.  ಸಭೆ, ಸಮಾರಂಭಗಳಿಗೆ ಅನುಮತಿ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಮಾಡುವುದು ಕಂಡು ಬಂದರೆ ಕೂಡಲೇ ಪ್ರಕರಣ ದಾಖಲಿಸುತ್ತಿದ್ದಾರೆ ಎಂದರು.
ವಾಹನಗಳ ತಪಾಸಣೆಯನ್ನು ವ್ಯಾಪಕವಾಗಿ ಮಾಡಲಾಗುತ್ತಿದೆ. ದ್ವಿಚಕ್ರವಾಹನ, ಕೆ.ಎಸ್.ಆರ್.ಟಿ.ಸಿ. ಸೇರಿದಂತೆ ಎಲ್ಲಾ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಅಬಕಾರಿ ಅಧಿಕಾರಿಗಳು ಎಲ್ಲೆಡೆ ತಪಾಸಣೆಯನ್ನು ಚುರುಕುಗೊಳಿಸಿದ್ದಾರೆ.  ನಿಯಮ ಮೀರಿ ಅತೀ ಕಡಿಮೆ ಪ್ರಮಾಣದಲ್ಲಿ  ಮದ್ಯ ಸಂಗ್ರಹ ಮಾಡುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ.  ಹೀಗಾಗಿ ಮದ್ಯ ಮಾರಾಟ ವಹಿವಾಟು ಸಹ ಈ ಹಿಂದಿಗಿಂತ ಕಡಿಮೆ ಯಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಚುನಾವಣೆಯಲ್ಲಿ ಅಭ್ಯರ್ಥಿಗಳು ಮಾಡುವ  ವೆಚ್ಚದ ಬಗ್ಗೆ ಮಾಹಿತಿ ನೀಡಬೇಕಾಗಿದೆ.  ಚುನಾವಣಾ ಸಂಬಂಧ ಪ್ರಚಾರ, ಸಭೆ, ಸಮಾರಂಭಗಳು, ವಾಹನಗಳು ಇನ್ನಿತರ  ಅವಶ್ಯ ಸಾಮಗ್ರಿಗಳಿಗೆ ನಿರ್ಧಿಷ್ಟ ದರದಂತೆ ಲೆಕ್ಕ ನೀಡಬೇಕಿದೆ.  ಆ ಪ್ರಕಾರವೇ ಪರಿಗಣನೆಗೆ ತೆಗೆದು ಕೊಳ್ಳಲಾಗುತ್ತಿದೆ. ಪ್ರತಿ ಖರ್ಚುನ್ನು ಚುನಾವಣಾ ವೆಚ್ಚ ತಂಡ ಪರಿಶೀಲಿಸಿ ಅಭ್ಯರ್ಥಿಗಳ ಲೆಕ್ಕಕ್ಕೆ ತೆಗೆದುಕೊಳ್ಳಲಿದೆ ಎಂದರು.
ಚುನಾವಣಾ ಪ್ರಕ್ರಿಯೆ ಮೇಲೆ ನಿಗಾವಹಿಸಲು ಚುನಾವಣಾ ಆಯೋಗವು ವೀಕ್ಷಕರನ್ನು ನೇಮಕಮಾಡಿದ್ದು, ಈಗಾಗಲೇ ವೀಕ್ಷಕರು ಕಾರ್ಯಾರಂಭ ಮಾಡಿದ್ದಾರೆ.  ಸಾಮಾನ್ಯ ವೀಕ್ಷಕರಾಗಿ  ಇಂದ್ರ ವಿಕ್ರಮ್ ಸಿಂಗ್ ಅವರು ಇದ್ದು, ಅವರ ಮೊಬೈಲ್ ಸಂಖ್ಯೆ 8277027322 ಆಗಿದೆ.  ಚುನಾವಣಾ ವೆಚ್ಚ ವೀಕ್ಷಕರಾಗಿ ಕೆ. ಸುಭೇಂದ್ರ  ಅವರು ಇದ್ದು,  ಅವರ ಮೊಬೈಲ್ ಸಂಖ್ಯೆ: 9405512345 ಆಗಿದೆ.  ಪೊಲೀಸ್ ಚುನಾವಣಾ ವೀಕ್ಷಕರಾಗಿ ಜಾಕೋಬ್ ಜಾಬ್ ಅವರು ಇದ್ದು ಅವರ ಮೊಬೈಲ್ ಸಂಖ್ಯೆ: 09497996949 ಆಗಿದೆ. ವೀಕ್ಷಕರ ಸ್ಥಿರ ದೂರವಾಣಿ ಸಂಖ್ಯೆಯು 08226-223830 ಮತ್ತು 223840 ಆಗಿರುತ್ತದೆ. ಸಾರ್ವಜನಿಕರು ಚುನಾವಣಾ ಸಂಬಂಧ ದೂರುಗಳು, ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದರು.
    ವಿಧಾನ ಸಭಾ ಕ್ಷೇತ್ರದಲ್ಲಿ 21.03.2017 ಕ್ಕೆ ಅನ್ವಯಿಸುವಂತೆ 1,00,144 ಪುರುಷ ಮತದಾರರು, 1,00,701 ಮಹಿಳಾ ಮತದಾರರು, ಇತರೆ 17 ಮತದಾರರು ಸೇರಿದಂತೆ ಒಟ್ಟು 2,00,862 ಮತದಾರರು ಇದ್ದಾರೆ,  ಒಟ್ಟು 250 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.  ಈ ಪೈಕಿ 33 ಸೂಕ್ಷ್ಮ, 39 ಅತಿ ಸೂಕ್ಷ್ಮ, 17 ರಿಮೋಟ್ ಏರಿಯಾ ಮತಗಟ್ಟೆಗಳು ಹಾಗೂ 161 ಸಾಧಾರಣಾ ಮತಗಟ್ಟೆಗಳಾಗಿ ವಿಂಗಡಿಸಲಾಗಿದೆ. ಚುನಾವಣೆಗೆ ಅಗತ್ಯವಿರುವ 351 ಬ್ಯಾಲೆಟ್ ಯೂನಿಟ್ ಹಾಗೂ 288 ಕಂಟ್ರೋಲ್ ಯುನಿಟ್‍ಗಳನ್ನು ಗುಂಡ್ಲುಪೇಟೆ ತಾಲ್ಲೂಕು ತಹಶೀಲ್ದಾರ್ ಸುಪರ್ದಿಗೆ ನೀಡಲಾಗಿದ್ದು ಅವುಗಳನ್ನು ಪೊಲೀಸ್ ಬಂದೋಬಸ್ತ್‍ನೊಡನೆ ಸುರಕ್ಷಿತವಾಗಿ ಇಡಲಾಗಿದೆ.
ಚುನಾವಣಾ ಆಯೋಗವು ಹೊಸದಾಗಿ ಅನುಷ್ಟಾನಗೊಳಿಸಿರುವ ವಿ.ವಿ.ಪಿ.ಎ.ಟಿ.(ವೋಟರ್ಸ್ ವೆರಿಪೈಯಬಲ್ ಪೇಪರ್ ಆಡಿಟ್ ಟ್ರಯಲ್) ಗಳನ್ನು ಉಪ ಚುನಾವಣೆಗೆ ಉಪಯೋಗಿಸಲಾಗುತ್ತಿದೆ. ಇದರಿಂದ ಮತದಾರರು ಅವರು ಯಾವ ಅಭ್ಯರ್ಥಿಗೆ ಮತ ಚಲಾಯಿಸಿದ್ದಾರೆ ಎಂಬುದು ಮತದಾರರಿಗೆ ಖಾತರಿಯಾಗುತ್ತದೆ.   ವಿ.ವಿ.ಪಿ.ಎ.ಟಿ. ರಾಜ್ಯದಲ್ಲೇ ಮೊದಲು  ಉಪ ಚುನಾವಣೆಗೆ ಬಳಕೆಯಾಗುತ್ತಿದೆ ಎಂದರು.
ಗುಂಡ್ಲುಪೇಟೆ ಪಟ್ಟಣದ ಸೆಂಟ್ ಜಾನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಸ್ಟರಿಂಗ್, ಡೀಮಸ್ಟರಿಂಗ್  ಮತ್ತು ಮತ ಎಣಿಕೆ ಕಾರ್ಯವನ್ನು ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ರಾಮು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕುಲದೀಪ್ ಕುಮಾರ್ ಆರ್. ಜೈನ್  ಅವರು ಮಾತನಾಡಿ ಚುನಾವಣೆಗೆ ಸಾಕಷ್ಟು ಪೊಲೀಸ್‍ರನ್ನು ನಿಯೋಜಿಸಲಾಗಿದೆ. ಮುಕ್ತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಅಗತ್ಯ ವಿರುವ ಎಲ್ಲಾ ಕ್ರಮಗಳನ್ನು ಪೊಲೀಸ್ ಇಲಾಖೆಯಿಂದಲೂ ತೆಗೆದುಕೊಳ್ಳಲಾಗಿದೆ ಎಂದರು.
 ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದ ಚುನಾವಣಾಧಿಕಾರಿ ನಲಿನ್ ಅತುಲ್, ಸಾಮಾನ್ಯ ವೀಕ್ಷಕರಾದ  ಇಂದ್ರ ವಿಕ್ರಮ್ ಸಿಂಗ್,  ಚುನಾವಣಾ ವೆಚ್ಚ ವೀಕ್ಷಕರಾದ ಕೆ. ಸುಭೇಂದ್ರ, ಪೊಲೀಸ್ ಚುನಾವಣಾ ವೀಕ್ಷಕರಾದ ಜಾಕೋಬ್ ಜಾಬ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ|| ಕೆ. ಹರೀಶ್ ಕುಮಾರ್, ಅಬಕಾರಿ ಉಪಾಯುಕ್ತ ನಾಗೇಶ್ ಸುದ್ದಿಗೋಷ್ಟಿಯಲ್ಲಿ ಹಾಜರಿದ್ದರು.

ಗುಂಡ್ಲುಪೇಟೆ ಉಪಚುನಾವಣೆ
ಚುನಾವಣಾ ಕರ್ತವ್ಯ ಅಧಿಕಾರಿ ನೌಕರರ ವೈದ್ಯಕೀಯ ಚಿಕಿತ್ಸೆಗೆ ವೈದ್ಯರ ನೇಮಕ

ಚಾಮರಾಜನಗರ, ಮಾ. 25-ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂಬಂಧಿಸಿದಂತೆ ನೇಮಕವಾಗಿರುವ ಅಧಿಕಾರಿ ನೌಕರ ತಂಡಕ್ಕೆ ಆರೋಗ್ಯ ಸಮಸ್ಯೆ ಉಂಟಾದಾಗ ತ್ವರಿತವಾಗಿ ಚಿಕಿತ್ಸೆ ನೀಡುವ ಸಲುವಾಗಿ ವೈದ್ಯಕೀಯ ತಂಡವನ್ನು ನಿಯೋಜಿಸಲಾಗಿದೆ.
ಆರ್.ಬಿ. ಎಸ್.ಕೆ.ಯ ಡಾ|| ಟಿ. ರವಿ (ಮೊ:9986403389) ಡಾ|| ಅನಿಲ್ ಕುಮಾರ್ (ಮೊ:9448165229 ಮತ್ತು 7996827737),ಹಂಗಳ, ಪಿ.ಹೆಚ್.ಸಿ.  ವೈದ್ಯಕೀಯ ಅಧಿಕಾರಿ ಡಾ|| ಸಂದೀಪ್ ಕುಮಾರ್(ಮೊ:8277509671) ಆರ್.ಬಿ.ಎಸ್.ಕೆ.ಯ ವೈದ್ಯಕೀಯ ಸಿಬ್ಬಂದಿ ಪೂರ್ಣಿಮಾ(ಮೊ:9164403745), ನಂಜುಂಡಸ್ವಾಮಿ (ಮೊ:9845417157) ರವರನ್ನು ನೇಮಿಸಲಾಗಿದೆ ಎಂದು  ಜಿಲ್ಲಾ ಚುನಾವಣಾಧಿಕಾರಿ ಬಿ. ರಾಮುರವರು ತಿಳಿಸಿದ್ದಾರೆ.
ಸೆಕ್ಟರ್ ಅಧಿಕಾರಿ ನೇಮಕ
ಚಾಮರಾಜನಗರ, ಮಾ. 25ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ಹೆಚ್ಚುವರಿ ಮತಗಟ್ಟೆ ಸಂಖ್ಯೆ 199 ರಿಂದ 205 ಮತ್ತು 210 ರಿಂದ 219ವರೆಗಿನ ವ್ಯಾಪ್ತಿಗೆ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಸೆಕ್ಟರ್ ಅಧಿಕಾರಿಯಾಗಿ  ಸಹಾಯಕ ಕೃಷಿ ನಿರ್ದೇಶಕರಾದ ಕೆ.ಎಸ್. ಮೋಹನ್ ದಾಸ್ (ಮೊ:8277930762) ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಎಲ್. ರಘು( ಮೊ: 9480858124) ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ


ಗುಂಡ್ಲುಪೇಟೆ ಉಪಚುನಾವಣೆ

ವೆಚ್ಚ ವೀಕ್ಷಕರಿಗೆ ಅಹವಾಲು ಸಲ್ಲಿಸಲು ಅವಕಾಶ
ಚಾಮರಾಜನಗರ, ಮಾ. 25- ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂಬಂಧಿಸಿದಂತೆ ಚುನಾವಣಾ ವೆಚ್ಚ ವೀಕ್ಷಕರಾಗಿ ಕೆ. ಸುಬೇಂದ್ರ ಅವರು ನೇಮಕವಾಗಿದ್ದು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಚುನಾವಣಾ ವೆಚ್ಚ ವೀಕ್ಷಕರ ಮೊಬೈಲ್ ಸಂಖ್ಯೆಯು 9405512345 ಆಗಿರುತ್ತದೆ. ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಲು ಚುನಾವಣಾ ವೀಕ್ಷಕರನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.


No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು