ಚಾಮರಾಜನಗರ : ತಲೆಯಲ್ಲಿ ಮೂಡುತ್ತಿದೆ ಕೊಂಬು- ವೈದ್ಯಕೀಯ ಲೋಕಕ್ಕೆ ಸವಾಲ್
ಚಾಮರಾಜನಗರ : ವೈದ್ಯಕೀಯ ಹಾಗೂ ವಿಜ್ಞಾನ ಲೋಕಕ್ಕೆ ಸವಾಲಾಗಿದ್ದು, ಮಹಿಳೆಯ ತಲೆಯಲ್ಲಿ ಬರುತ್ತಿರುವ ಕೊಂಬಯಿದು ಕಂಡು ಬಂದದ್ದು ಚಾಮರಾಜನಗರ ಜಿಲ್ಲೆಯಲ್ಲಿ.
ಇದು ವಿಚಿತ್ರವಾದರೂ ನಂಬಲೇ ಬೇಕಾದ ಸಂಗತಿ, ತಲೆಯಲ್ಲಿ ಆಡಿಗೆ ಬರುವ ಹಾಗೆ ಕೊಂಬು ಬರುತ್ತಿರುವುದು ಗಮನಿಸಿದರೆ ಇದೊಂದು ವಿಸ್ಮಯವಾದರೂ ಸತ್ಯ ಸಂಗತಿ. ಇದು ಕಂಡು ಬಂದದ್ದು, ಗಡಿ ಚಾಮರಾಜನಗರ ಜಿಲ್ಲೆಯ ಪುಣಜನೂರು ಸಮೀಪದ ಹೊಸಪೋಡು ಕಾಲೋನಿಯಲ್ಲ್ಲಿ.
ಚಾಮರಾಜನಗರ ತಾಲ್ಲೂಕಿನ ಪುಣಜನೂರು ಗ್ರಾಮ ಪಂಚಾಯ್ತಿಗೆ ಸೇರಿದ ಹೊಸಪೋಡು ಕಾಲೋನಿಯಲ್ಲಿ ವಾಸ ಮಾಡುತ್ತಿರುವ ಸೋಲಿಗ ಮಾದಮ್ಮರವರ ತಲೆಯಲ್ಲಿ ಕಳೆದ ಐದಾರು ವರ್ಷಗಳಿಂದ ಕೊಂಬು ಬೆಳೆದು ತನಗೆ ತಾನಾಗಿ ಬಿದ್ದು, ಮತ್ತೆ ಕೊಂಬು ಬೆಳೆಯುವ ವಿಚಿತ್ರ ಘಟನೆ ನಿರಂತರವಾಗಿ ನಡೆಯುತ್ತಿದೆ.
ಮಾದಮ್ಮ ಮೂಲತಃ ಬೇಡಗುಳಿ ನಿವಾಸಿ, ಕಳೆದ ಹಲವಾರು ವರ್ಷಗಳಿಂದ ಬೇಡಗುಳಿಯಿಂದ ಹೊಸಪೋಡಿಗೆ ಬಂದು ಸಂಸಾರ ಸಾಗಿಸುತ್ತಿರುವ ಮಾದಮ್ಮಳಿಗೆ ತಲೆಯಲ್ಲಿ ಮೂಡಿದ ಕೊಂಬಿನದೇ ಚಿಂತೆ. ತಲೆಯಲ್ಲಿ ಕೊಂಬು ಇರುವ ತನಕ ವಿಪರೀತ ತಲೆ ನೋವು ಬಂದು ಜೀವನವೇ ಬೇಡ ಎನಿಸುವ ಸ್ಥಿತಿಗೆ ಬಂದಿದ್ದಾರೆ.
ಸೋಲಿಗ ಮಹಿಳೆ ಮಾದಮ್ಮಳ ತಲೆಯಲ್ಲಿ ಕೊಂಬು ಬೆಳೆಯುತ್ತಿರುವ ಸಂಗತಿಯನ್ನು ಸಂಚಾರಿ ವಕೀಲ ನಾಗೇಶ್ ಪ್ರಜಾ ಟಿವಿಗೆ ತಿಳಿಸಿದಾಗ, ಸ್ಥಳಕ್ಕೆ ಬೇಟಿ ಕೊಟ್ಟ ಪ್ರಜಾ ಟಿವಿ ಮಾದಮ್ಮಳ ತಲೆಯಲ್ಲಿ ಬೆಳೆದು ನಿಂತಿರುವ ಕೊಂಬು ಕಂಡು ಅಚ್ಚರಿಪಟ್ಟಿತ್ತು.
ತುಂಬು ಕುಟುಂಬದಲ್ಲಿರುವ ಮಾದಮ್ಮ ನಿತ್ಯವೂ ತಲೆಯಲ್ಲಿನ ಕೊಂಬಿನ ಚಿಂತೆಯಲ್ಲೇ ಸಮಯ ಕಳೆಯುತ್ತಿದ್ದಾರೆ. ಗಿರಿಜನ ಸೋಲಿಗ ಮಹಿಳೆಯ ತಲೆಯಲ್ಲಿನ ಕೊಂಬಿಗೆ ಮುಕ್ತಿ ದೊರಕಬೇಕಾಗಿದ್ದು, ಈ ಕೊಂಬು ತಲೆಯಲ್ಲಿ ಬೆಳೆಯುತ್ತಿರುವ ಹಿಂದಿನ ರಹಸ್ಯವೇನು, ಇದು ವೈದ್ಯಕೀಯ ಲೋಕಕ್ಕೆ ಸವಾಲಾಗಿದ್ದು, ಇಂದು ವೈಜ್ಞಾನಿಕವಾಗಿ ಬೆಳೆಯುತ್ತಿದ್ದರೂ ಸಹ ಮಾದಮ್ಮಳ ತಲೆಯಲ್ಲಿ ಬೆಳೆದು ನಿಂತಿರುವ ಕೊಂಬು ಇದಕ್ಕೆಲ್ಲಾ ಸವಲಾಗಿದೆ.
ಕಳೆದ ಐದಾರು ವರ್ಷಗಳಿಂದ ಆರೇಳು ತಿಂಗಳಿಗೊಮ್ಮೆ ಬೆಳೆಯುವ ಈ ಕೊಂಬಿನ ಹಿಂದಿನ ರಹಸ್ಯವೇನು ಎಂಬುದು ಮಾತ್ರ ನಿಗೂಡವಾಗಿದೆ.
ತಲೆಯಲ್ಲಿ ಮೂಡಿ ಬಂದಿರುವ ಕೊಂಬಿನಿಂದ ನರಕಯಾತನೆ ಅನುಭವಿಸುತ್ತಿರುವ ಸೋಲಿಗ ಮಹಿಳೆ ಮಾದಮ್ಮಳ ನೆರವಿಗೆ ಜಿಲ್ಲಾಡಳಿತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮುಂದಾಗಿ ವೈದ್ಯಕೀಯ ಲೋಕಕ್ಕೆ ಸವಾಲಾಗಿರುವ ಈ ಕೊಂಬಿನ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.
No comments:
Post a Comment