Friday, 31 March 2017

31-03-2017 ಏ. 1ರಂದು ಪಲ್ಸ್ ಪೋಲಿಯೋ ಜಾಥಾ ಏ. 2ರಂದು ಪಲ್ಸ್ ಪೋಲಿಯೊ : ಒಟ್ಟು 80629 ಮಕ್ಕಳಿಗೆ ಲಸಿಕೆ ನೀಡುವ ಗುರಿ ,

             


  ಏ. 1ರಂದು ಪಲ್ಸ್ ಪೋಲಿಯೋ ಜಾಥಾ

ಚಾಮರಾಜನಗರ, ಮಾ. 30 :- ಪಲ್ಸ್ ಪೋಲಿಯೋ ಹನಿ ನೀಡುವ ಕಾರ್ಯಕ್ರಮದ ಮಹತ್ವವನ್ನು ತಿಳಿಸಿಕೊಡುವ ಸಲುವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಏಪ್ರಿಲ್ 1ರಂದು ಜಾಗೃತಿ ಜಾಥಾ ಹಮ್ಮಿಕೊಂಡಿದೆ.
ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಏಪ್ರಿಲ್ 1ರಂದು ಬೆಳಿಗ್ಗೆ 10 ಗಂಟೆಗೆ ಜಾಥಾಗೆ ಚಾಲನೆ ನೀಡಲಾಗುತ್ತದೆ. ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಿ ಜಿಲ್ಲಾಡಳಿತ ಭವನದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪ್ರಸಾದ್  ತಿಳಿಸಿದ್ದಾರೆ.

ಏ. 2ರಂದು ಪಲ್ಸ್ ಪೋಲಿಯೊ : ಒಟ್ಟು 80629 ಮಕ್ಕಳಿಗೆ ಲಸಿಕೆ ನೀಡುವ ಗುರಿ 

                      ವರದಿ: ರಾಮಸಮುದ್ರ  ಎಸ್.ವೀರಭದ್ರಸ್ವಾಮಿ


ಚಾಮರಾಜನಗರ, ಮಾ. ಚಿಕ್ಕ ವಯಸ್ಸಿನ ಮಕ್ಕಳಲ್ಲಿ ಶಾಶ್ವತ ಅಂಗವಿಕಲತೆಗೆ ಕಾರಣವಾಗುವ ಪೋಲಿಯೊ ರೋಗ ಮುಕ್ತಗೊಳಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಪಲ್ಸ್ ಪೋಲಿಯೊ ಅಭಿಯಾನಕ್ಕೆ ಜಿಲ್ಲೆಯಲ್ಲಿ ವ್ಯಾಪಕ ಸಿದ್ದತೆ ಕೈಗೊಳ್ಳಲಾಗಿದೆ.
ಆಗ ತಾನೇ ಹುಟ್ಟಿದ ಮಗುವಿನಿಂದ 5 ವರ್ಷದ ವರೆಗಿನ ಮಕ್ಕಳಿಗೆ ಪೋಲಿಯೊ ಹನಿ ನೀಡಲಾಗುತ್ತದೆ. 
ಜಿಲ್ಲೆಯಲ್ಲಿ ಏಪ್ರಿಲ್ 2ರಂದು ಮೊದಲ ಸುತ್ತಿನ  ಪಲ್ಸ್ ಪೋಲಿಯೊ ಕಾರ್ಯಕ್ರಮ ನಡೆಯಲಿದ್ದು ಏಪ್ರಿಲ್ 30ರಂದು 2ನೇ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯಲ್ಲಿ ಅಂದಾಜು ಒಟ್ಟು 80629 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.
ಚಾಮರಾಜನಗರ ತಾಲ್ಲೂಕಿನಲ್ಲಿ 26648, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 17629, ಕೊಳ್ಳೇಗಾಲ ತಾಲ್ಲೂಕಿನಲ್ಲಿ 30293 ಹಾಗೂ ಯಳಂದೂರು ತಾಲ್ಲೂಕಿನಲ್ಲಿ 6059 ಮಕ್ಕಳಿಗೆ ಲಸಿಕೆ ಹಾಕಲಾಗುತ್ತಿದೆ.
ಜಿಲ್ಲೆಯಲ್ಲಿ ಒಟ್ಟು 621 ಬೂತ್‍ಗಳನ್ನು ಲಸಿಕೆ ನೀಡಲು ತೆರೆಯಲಾಗುತ್ತಿದೆ. ನಗರ ಪ್ರದೇಶಗಳಲ್ಲಿ 92 ಗ್ರಾಮೀಣ ಪ್ರದೇಶಗಳಲ್ಲಿ 529 ಬೂತ್‍ಗಳು ಕಾರ್ಯನಿರ್ವಹಿಸಲಿವೆ. ಈ ಪೈಕಿ ಚಾಮರಾಜನಗರ ತಾಲ್ಲೂಕಿನಲ್ಲಿ 193, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ 158, ಕೊಳ್ಳೇಗಾಲ ತಾಲ್ಲೂಕಿನಲ್ಲಿ 223 ಹಾಗೂ ಯಳಂದೂರು ತಾಲ್ಲೂಕಿನಲ್ಲಿ 47 ಲಸಿಕಾ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ಪಲ್ಸ್ ಪೋಲಿಯೋ ಬೂತ್‍ಗಳಲ್ಲಿ ಮಕ್ಕಳಿಗೆ ಲಸಿಕೆಯನ್ನು ಹಾಕಲಾಗುತ್ತದೆ.
ಲಸಿಕಾ ಕಾರ್ಯಕ್ರಮದ ಮೇಲುಸ್ತುವಾರಿಗೆ 130 ಮೇಲ್ವಿಚಾರಕರು ಹಾಗೂ 2484 ಲಸಿಕಾ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. 18 ಟ್ರಾನ್ಸಿಟ್ 10 ಮೊಬೈಲ್ ತಂಡಗಳು ಕಾರ್ಯ ನಿರ್ವಹಿಸಲಿವೆ.
ಏಪ್ರಿಲ್ 2ರಂದು ಹಾಗೂ 30ರಂದು ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ತೆರೆಯಲಾಗುವ ಲಸಿಕಾ ಕೇಂದ್ರಗಳಲ್ಲಿ ಪೋಲಿಯೊ ಹನಿ ನೀಡಲಾಗುತ್ತದೆ. ಗ್ರಾಮಾಂತರ ಪ್ರದೇಶದಲ್ಲಿ 2ನೇ ಹಾಗೂ 3ನೇ ದಿನ ಮನೆ ಮನೆಗೆ ಭೇಟಿ ನೀಡಿ ಲಸಿಕೆ ನೀಡಲಾಗುತ್ತದೆ. ಪಟ್ಟಣ ಪ್ರದೇಶದಲ್ಲಿ 4 ದಿನವೂ ಸಹ ಮನೆ ಮನೆಗೆ ಭೇಟಿ ನೀಡಿ ಲಸಿಕೆ ನೀಡಲಾಗುತ್ತದೆ.
ಪಟ್ಟಣ ಪ್ರದೇಶದಲ್ಲಿ ಒಟ್ಟು 35942 ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 196413 ಮನೆಗಳು ಸೇರಿದಂತೆ ಒಟ್ಟು 232355 ಮನೆಗಳಿಗೆ ಭೇಟಿ ನೀಡಿ ಲಸಿಕೆ ನೀಡುವ ಗುರಿಯನ್ನು ಹೊಂದಲಾಗಿದೆ.
ಜಿಲ್ಲಾ ವ್ಯಾಪ್ತಿಯ ನರ್ಸಿಂಗ್ ಶಾಲೆಗಳು, ಸ್ವಯಂ ಸೇವಾ ಸಂಸ್ಥೆಗಳು ಅಭಿಯಾನಕ್ಕೆ ಸಹಕಾರ ನೀಡಿವೆ.
ಅಂಗವೈಕಲ್ಯತೆ ತಪ್ಪಿಸುವ ಸಲುವಾಗಿ ಪಲ್ಸ್ ಪೋಲಿಯೊ ಆಂದೋಲನವನ್ನು 1995ರಿಂದಲೂ ರಾಷ್ಟ್ರೀಯ ಕಾರ್ಯಕ್ರಮವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಜಿಲ್ಲೆಯಲ್ಲೂ ಪಲ್ಸ್ ಪೋಲಿಯೋ ಲಸಿಕೆ ಆಂದೋಲನವನ್ನು ಯಶಸ್ವಿಗೊಳಿಸಲು ಜಿಲ್ಲಾ ಜನತೆಯ ಸಹಕಾರ ಅವಶ್ಯವಾಗಿದೆ. ಪೋಷಕರು ಈ ಹಿಂದೆ ಎಷ್ಟೇ ಬಾರಿ ಪಲ್ಸ್ ಪೋಲಿಯೋ ಲಸಿಕೆ ಕೊಡಿಸಿದ್ದರೂ ಸಹ ಏಪ್ರಿಲ್ 2 ಮತ್ತು 30ರಂದು ತಪ್ಪದೇ ಆಗ ತಾನೇ ಹುಟ್ಟಿದ ಮಗುವಿನಿಂದ 5 ವರ್ಷದವರೆಗಿನ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ಹಾಕಿಸಬೇಕು. ಈ ಮಹತ್ವದ ಕಾರ್ಯಕ್ರಮಕ್ಕೆ ಎಲ್ಲ ಪೋಷಕರು, ಸಮುದಾಯ ಮುಖಂಡರು, ಸ್ವಯಂ ಸೇವಾ ಸಂಸ್ಥೆಯ ಪದಾಧಿಕಾರಿಗಳು ಸೇರಿದÀಂತೆ ಸರ್ವರೂ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಬಿ. ರಾಮು ಅವರು ಮನವಿ ಮಾಡಿದ್ದಾರೆ.


30-03-2017 ಚಾಮರಾಜನಗರ ಚಾ.ನಗರಸಭೆ : ಏಪ್ರಿಲ್ ಒಳಗೆ ಆಸ್ತಿ ತೆರಿಗೆ ಪಾವತಿ ಮಾಡಿದವರಿಗೆ ಶೇ. 5ರಷ್ಟು ರಿಯಾಯಿತಿ


ಒಂದು ಕೋಟಿ ಹತ್ತು ಲಕ್ಷದ ಮೂರು ಸಾವಿರದ ನಾಲ್ಕು ನೂರ ಎಂಭತ್ತೇಳು  ರೂಪಾಯಿ ಒಡೆಯ ಈ ಮಾದಪ್ಪ.!

ಚಾಮರಾಜನಗರ ಜಿಲ್ಲೆ: ಕೊಳ್ಳೇಗಾಲ ತಾಲ್ಲೂಕು, ಮಹದೇಶ್ವರಬೆಟ್ಟ:- ದಿನಾಂಕ:30-03-2017ರ ಗುರುವಾರದಂದು ಬೆಳಿಗ್ಗೆ 7.00 ಗಂಟೆಗೆ ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ಹಾಗೂ ಚಾಮರಾಜನಗರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾದ ಶ್ರೀಮತಿ ಕೆ.ಎಂ.ಗಾಯತ್ರಿ, ಕೆ.ಎ.ಎಸ್.(ಹಿರಿಯ ಶ್ರೇಣಿ) ರವರ ಅಧ್ಯಕ್ಷತೆಯಲ್ಲಿ ಹಾಗೂ ಶ್ರೀ ಸಾಲೂರು ಬೃಹನ್ಮಠದ ಶ್ರೀ ಶ್ರೀ ಪಟ್ಟದ ಗುರುಸ್ವಾಮಿಗಳವರ ಉಪಸ್ಥಿತಿಯಲ್ಲಿ ಹುಂಡಿಗಳನ್ನು ತೆರೆಯಲಾಗಿದ್ದು, ಸದರಿ ಹುಂಡಿಗಳ  ಪರ್ಕಾವಣೆಯಲ್ಲಿ ಶ್ರೀ ಮ.ಮ. ಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ  ಪ್ರಭಾರ  ಉಪ ಕಾರ್ಯದರ್ಶಿಗಳಾದ ಶ್ರೀ ಎಂ.ಬಸವರಾಜು  ರವರು, ಸಹಾಯಕ ಅಭಿಯಂತರರಾದ ಶ್ರೀ ಆರ್.ಎಸ್.ಮನುವಾಚಾರ್ಯ, ಲೆಕ್ಕಾಧೀಕ್ಷಕರಾದ ಮಹದೇವಸ್ವಾಮಿ,  ಕಛೇರಿಯ ಅಧೀಕ್ಷಕರಾದ  ಶ್ರೀ ಬಿ.ಮಾದರಾಜು ಹಾಗೂ ದೇವಸ್ಥಾನದ ಎಲ್ಲಾ ನೌಕರರುಗಳು, ಚಾಮರಾಜನಗರ ಜಿಲ್ಲಾಧಿಕಾರಿಯವರ ಕಛೇರಿಯ  ಪ್ರಥಮ ದರ್ಜೆ ಸಹಾಯಕರಾದ ಶ್ರೀ ಮೋಹನ್ ಕುಮಾರ್ ಮತ್ತು ಶ್ರೀಮತಿ ಸ್ನೇಹ, ಆರಕ್ಷಕ ಉಪಾಧೀಕ್ಷಕರು, ಕೊಳ್ಳೇಗಾಲ ಉಪ ವಿಭಾಗ, ಮಹದೇಶ್ವರಬೆಟ್ಟ ಆರಕ್ಷಕ  ಸಿಬ್ಬಂದಿ ವರ್ಗ, ಎಸ್.ಬಿ.ಎಂ. ವ್ಯವಸ್ಥಾಪಕರಾದ ಸೆಂದಿಲ್ ನಾಥನ್  & ಸಿಬ್ಬಂದಿ ವರ್ಗದವರು ಹಾಜರಿದ್ದರು. ಇವರೆಲ್ಲರ ಸಹಕಾರದಿಂದ ಹುಂಡಿ ಪರ್ಕಾವಣೆ ಮತ್ತು ಎಣಿಕೆಯ ಕಾರ್ಯ ಸುಗಮವಾಗಿ ಜರುಗಿತು(ಒಂದು ತಿಂಗಳಿಗೆ) ಸದರಿ ದಿವಸದಂದು ಹುಂಡಿ ಪರ್ಕಾವಣೆಯಿಂದ ಒಟ್ಟು ರೂ.  1,10,03,487/- ( ಒಂದು ಕೋಟಿ ಹತ್ತು ಲಕ್ಷದ ಮೂರು ಸಾವಿರದ ನಾಲ್ಕು ನೂರ ಎಂಭತ್ತೇಳು ಮಾತ್ರ) ಬಂದಿರುತ್ತದೆ. ಇದಲ್ಲದೇ ಚಿನ್ನದ  ಪದಾರ್ಥಗಳು 0. 051 ( ಐವತ್ತೊಂದು ಗ್ರಾಂ) ಮತ್ತು ಬೆಳ್ಳಿ  ಪದಾರ್ಥಗಳು 0.900( ಒಂಭತ್ತುನೂರು   ಗ್ರಾಂ) ದೊರೆತಿರುತ್ತದೆ. 

ಚಾ.ನಗರಸಭೆ : ಏಪ್ರಿಲ್ ಒಳಗೆ ಆಸ್ತಿ ತೆರಿಗೆ ಪಾವತಿ ಮಾಡಿದವರಿಗೆ ಶೇ. 5ರಷ್ಟು ರಿಯಾಯಿತಿ

ಚಾಮರಾಜನಗರ, ಮಾ. 30 :- ಚಾಮರಾಜನಗರ ನಗರಸಭಾ ವ್ಯಾಪ್ತಿಗೆ ಒಳಪಡುವ ಕಟ್ಟಡ, ನಿವೇಶನಗಳ ಮಾಲೀಕರು ತಮಗೆ ಸಂಬಂಧಿಸಿದ ಆಸ್ತಿಗಳಿಗೆ ಪ್ರಸಕ್ತ 2017-18ನೇ ಸಾಲಿನ ಆಸ್ತಿ ತೆರಿಗೆಯನ್ನು ಏಪ್ರಿಲ್ 30ರೊಳಗೆ ಪಾವತಿಸಿದರೆ ಶೇ.5ರಷ್ಟು ರಿಯಾಯಿತಿ ನೀಡಲಾಗುತ್ತದೆ.
ಮೇ ಮತ್ತು ಜೂನ್ ತಿಂಗಳಿನಲ್ಲಿ ಆಸ್ತಿ ತೆರಿಗೆ ಪಾವತಿಸಿದರೆ ಯಾವುದೇ ದಂಡವಿರುವುದಿಲ್ಲ. ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆದಾರರು ಹಿಂದಿನ ವರ್ಷಗಳ ಕಂದಾಯಗಳಿಗೆ ದಂಡ ಸಮೇತ ಕಡ್ಡಾಯವಾಗಿ ಆಸ್ತಿ ತೆರಿಗೆಯನ್ನು ಪಾವತಿಸಿ, ಸ್ವಯಂ ಘೋಷಿತ ಆಸ್ತಿ ತೆರಿಗೆಯ ಘೋಷಣೆಯನ್ನು ಮಾಡಿಕೊಳ್ಳಬೇಕು. ನೀರಿನ ಕಂದಾಯ ಬಾಕಿ ಉಳಿಸಿಕೊಂಡಿರುವವರು ಕಡ್ಡಾಯವಾಗಿ ಪಾವತಿಸಬೇಕು. ತಪ್ಪಿದಲ್ಲಿ ಕರ್ನಾಟಕ ಪುರಸಭೆಗಳ ಅಧಿನಿಯಮ 1964 ನಿಯಮ 115ರ ರೀತ್ಯ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಆಸ್ತಿಯ ಮಾಲೀಕರು ಯಾವುದೇ ಕಾನೂನು ಕ್ರಮಕ್ಕೆ ಅವಕಾಶ ಕೊಡದೇ ಸ್ವಯಂಪ್ರೇರಿತರಾಗಿ ಕಂದಾಯವನ್ನು ಪಾವತಿಸಿ ನಗರದ ಅಭಿವೃದ್ಧಿಗೆ ಸಹಕರಿಸಬೇಕೆಂದು ನಗರಸಭೆ ಪೌರಾಯುಕ್ತರಾದ ರಾಜಣ್ಣ ತಿಳಿಸಿದ್ದಾರೆ.

                 ಏ. 1ರಂದು ಪಲ್ಸ್ ಪೋಲಿಯೋ ಜಾಥಾ

ಚಾಮರಾಜನಗರ, ಮಾ. 30 :- ಪಲ್ಸ್ ಪೋಲಿಯೋ ಹನಿ ನೀಡುವ ಕಾರ್ಯಕ್ರಮದ ಮಹತ್ವವನ್ನು ತಿಳಿಸಿಕೊಡುವ ಸಲುವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಏಪ್ರಿಲ್ 1ರಂದು ಜಾಗೃತಿ ಜಾಥಾ ಹಮ್ಮಿಕೊಂಡಿದೆ.
ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಏಪ್ರಿಲ್ 1ರಂದು ಬೆಳಿಗ್ಗೆ 10 ಗಂಟೆಗೆ ಜಾಥಾಗೆ ಚಾಲನೆ ನೀಡಲಾಗುತ್ತದೆ. ಬಳಿಕ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಸಂಚರಿಸಿ ಜಿಲ್ಲಾಡಳಿತ ಭವನದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪ್ರಸಾದ್  ತಿಳಿಸಿದ್ದಾರೆ.

ಪಿಯು ಕಾಲೇಜುಗಳಿಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ

ಚಾಮರಾಜನಗರ, ಮಾ. 30 :- 2017-18ನೇ ಶೈಕ್ಷಣಿಕ ಸಾಲಿನಿಂದ ಹೊಸ ವಿಷಯ, ಸಂಯೋಜನೆ ವಿಭಾಗಗಳನ್ನು ಪ್ರಾರಂಭಿಸಲು ಇಚ್ಚಿಸುವ ಖಾಸಗಿ ಪದವಿಪೂರ್ವ ಕಾಲೇಜಿನವರು ಪದವಿಪೂರ್ವ ಶಿಕ್ಷÀಣ ಇಲಾಖೆಯು ನಿಗದಿಪಡಿಸಿರುವ 18 ಪುಟಗಳ ಚೆಕ್‍ಲಿಸ್ಟ್‍ನಲ್ಲಿ ಮಾಹಿತಿಗಳನ್ನು ಭರ್ತಿ ಮಾಡಿ ಸದರಿ ಮಾಹಿತಿಗೆ ಪೂರಕವಾದ ದೃಢೀಕೃತ ದಾಖಲೆಗಳೊಂದಿಗೆ ಪ್ರಸ್ತಾವನೆಯನ್ನು ಏಪ್ರಿಲ್ 20ರೊಳಗೆ ಸಲ್ಲಿಸುವಂತೆ ತಿಳಿಸಲಾಗಿದೆ.
ಚೆಕ್‍ಲಿಸ್ಟ್‍ನ್ನು ಇಲಾಖಾ ವೆಬ್‍ಸೈಟ್‍ನಲ್ಲಿ ಅಥವಾ ನಗರದ ಜಿಲ್ಲಾಡಳಿತ ಭವನದಲ್ಲಿರುವ ಪದವಿಪೂರ್ವ ಶಿಕ್ಷÀಣ ಇಲಾಖೆಯ ಕಚೇರಿಯಲ್ಲಿ ಪಡೆಯಬಹುದಾಗಿರುತ್ತದೆ ಎಂದು ಪದವಿಪೂರ್ವ ಶಿಕ್ಷÀಣ ಇಲಾಖೆ ಉಪನಿರ್ದೇಶಕರಾದ ರೆಜಿನಾ ಮೆಲಾಕಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಲ್ಸ್ ಪೋಲಿಯೋ : ಚಾಮರಾಜನಗರ ತಾಲೂಕು ಮಟ್ಟದ ಕಾರ್ಯಕ್ರಮಕ್ಕೆ ಸಿದ್ಧತಾ ಸಭೆ

ಚಾಮರಾಜನಗರ, ಮಾ. 30:- ತಾಲೂಕು ಮಟ್ಟದ ಪಲ್ಸ್ ಪೋಲಿಯೋ ಸಮನ್ವಯ ಸಮಿತಿ ಸಭೆಯು (ತಾಲೂಕು ಟಾಸ್ಕ್ ಪೋರ್ಸ್ ಕಮಿಟಿ ಮೀಟಿಂಗ್) ನಗರದ ತಾಲೂಕು ಕಚೇರಿಯಲ್ಲಿ ತಹಸೀಲ್ದಾರ್ ಪುರಂಧರ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ತಾಲೂಕು ಆರೋಗ್ಯಾಧಿಕಾರಿ ಶ್ರೀನಿವಾಸ ಅವರು ಮಾತನಾಡಿ ಏಪ್ರಿಲ್ 2ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪಲ್ಸ್ ಪೋಲಿಯೋ ಬೂತ್ ಚಟುವಟಿಕೆಗಳನ್ನು ತಾಲೂಕಿನಾದ್ಯಂತ ಹಮ್ಮಿಕೊಳ್ಳಲÁಗಿದೆ. ಈ ಕಾರ್ಯಕ್ರಮಕ್ಕಾಗಿ ತಾಲೂಕಿನಲ್ಲಿ ತಾಲೂಕು ತಹಸೀಲ್ದಾರ್ ಅವರ ನೈತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಚಾಮರಾಜನಗರ ತಾಲೂಕಿನ  ಆಗ ತಾನೆ ಹುಟ್ಟಿದ ಮಗುವಿನಿಂದ 5 ವರ್ಷದವರೆಗಿನ 26648 ಮಕ್ಕಳಿಗೆ ಲಸಿಕೆ ಹಾಕುವ ಅಂದಾಜು ಮಾಡಲಾಗಿದೆ. ಈ ಕಾಂiÀರ್iಕ್ರಮಕ್ಕಾಗಿ ಚಾಮರಾಜನಗರ ತಾಲೂಕಿನಲ್ಲಿ 193 ಬೂತ್‍ಗಳನ್ನು ಹಾಗೂ ಪಟ್ಟಣ ಪ್ರದೇಶದಲ್ಲಿ 45 ಬೂತುಗಳನ್ನು, 148 ಬೂತ್‍ಗಳು ಗ್ರಾಮಾಂತರ ಪ್ರದೇಶದಲ್ಲಿ ಬರುತ್ತದೆ. ಈ ಕಾರ್ಯಕ್ರಮದ ಮೇಲ್ವಿಚಾರಣೆಗಾಗಿ 41 ಮೇಲ್ವಿಚಾರಕರನ್ನು ಹಾಗೂ 806 ಲಸಿಕಾ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಒಟ್ಟು 7 ಟ್ರಾನ್ಸಿಟ್ ಬೂತ್‍ಗಳನ್ನು ಮತ್ತು 2 ಸಂಚಾರಿ ಬೂತ್‍ಗಳನ್ನು ಅಳವಡಿಸಲಾಗಿದೆ. ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ 66331 ಮನೆಗಳ ಭೇಟಿ ಮಾಡಬೇಕಾಗಿದ್ದು ಒಟ್ಟು ಮನೆಗಳ ಸಂಖ್ಯೆ 79082 ಆಗಿರುತ್ತದೆ ಎಂದು ಮಾಹಿತಿ ನೀಡಿದರು.
ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯವರು ಮಾನವ ಸಂಪನ್ಮೂಲ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಲಸಿಕೆ ನೀಡಲು ಅವಕಾಶ ಒದಗಿಸಿಕೊಡಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆಯವರು ಕಾರ್ಯಕ್ರಮದ ದಿನ ಭಾನುವಾರವಾದ್ದರಿಂದ ಅವಶ್ಯವಿರುವ ಕಡೆ ಶಾಲೆಗಳಲ್ಲಿ ಬೂತ್‍ಗಳನ್ನು ತೆರೆಯಲು ಅವಕಾಶ ಕಲ್ಪಿಸಿಕೊಡಬೇಕೆಂದು ಹಾಗೂ ಕಾರ್ಯಕ್ರಮದ ಹಿಂದಿನ ದಿನ ಶಾಲಾ ಪ್ರಾರ್ಥನಾ ಸಮಯದಲ್ಲಿ ಶಿಕ್ಷಕರು ಮಾಹಿತಿ ನೀಡುವಂತೆ ತಿಳಿಸಲು ಹಾಗೂ ಜÁಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕೆಂದು ಕೋರಿದರು. ಅದಕ್ಕೆ ಶಿಕ್ಷಣ ಇಲಾಖೆ ಅಧಿಕಾರಿಗಳಿ ಸಹಕರಿಸುವುದಾಗಿ ತಿಳಿಸಿದರು.
ಈ ಕಾರ್ಯಕ್ರಮಕ್ಕೆ 41 ವಾಹನಗಳ ಅಗತ್ಯವಿದ್ದು ಇತರೆ ಇಲಾಖೆಗಳಿಂದ ವಾಹನಗಳನ್ನು ಒದಗಿಸಿಕೊಡುವ ಬಗ್ಗೆ ವ್ಯವಸ್ಥೆ ಮಾಡಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ತಿಳಿಸಿದರು.
ಪಲ್ಸ್ ಪೋಲಿಯೋ ಕಾರ್ಯಕ್ರಮ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದ್ದು ಕಾಡಂಚಿನ ಗ್ರಾಮಗಳು ಹಾಗೂ ದುರ್ಗಮ ಪ್ರದೇಶಗಳಲ್ಲಿ ವಾಹನಗಳ ಓಡಾಟಕ್ಕೆ ಅನುಮತಿಯನ್ನು ನೀಡಲು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಯಿತು.
ತಾಲೂಕು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸ್ವಯಂ ಸೇವಾ ಸಂಸ್ಥೆಗಳವರು ಪಲ್ಸ್ ಪೊಲೀಯೋ ಕಾರ್ಯಕ್ರಮಕ್ಕೆ ಪೂರ್ಣ ಸಹಕಾರವನ್ನು ನೀಡುವಂತೆ ಮನವಿ ಮಾಡಿದರು.
ತಹಸೀಲ್ದಾರ್ ಪುರಂಧರ ಅವರು ಮಾತನಾಡಿ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಹಕರಿಸುವಂತೆ ಕೋರಿದರು.
ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ, ತಾಲೂಕು ಆರೋಗ್ಯಾಧಿಕಾರಿ, ಚೆಸ್ಕಾಂ ಸಹಾಯಕ ಕಾರ್ಯಪಾಲಕ ಅಭಿಯಂತರರು, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, ಪಟ್ಟಣ ಮತ್ತು ಗ್ರಾಮಾಂತರ ಆರಕ್ಷಕ ವೃತ್ತ ನಿರೀಕ್ಷಕರು, ತಾಲೂಕು ಆಯುಷ್ ಅಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹಾಗೂ ಮನೋನಿಧಿ ನರ್ಸಿಂಗ್ ಶಾಲೆ ಪ್ರಾಂಶುಪಾಲರು ಹಾಜರಿದ್ದರು.

29-03-2017 ಚಾಮರಾಜನಗರ ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆ: ಹಣದ ಆಮಿಷ ದೂರು: ಪ್ರಥಮ ವರದಿ ದಾಖಲು

ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆ:
ಹಣದ ಆಮಿಷ ದೂರು:  ಪ್ರಥಮ ವರದಿ ದಾಖಲು


ಚಾಮರಾಜನಗರ ಮಾರ್ಚ್  29 : ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಸಚಿವರು
ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ವ್ಯಕ್ತಿಯೊಬ್ಬರಿಗೆ ಹಣದ ಆಮಿಷ ಒಡ್ಡಿದ್ದಾರೆ ಹಾಗೂ ಇವರ ಕಾರು ಚಾಲಕ ಸಹ ವ್ಯಕ್ತಿಯೊಬ್ಬರಿಗೆ ಹಣ ನೀಡಿದ್ದಾರೆ ಎಂಬ  ಆರೋಪದ ದೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಥಮ ವರದಿ ದಾಖಲಿಸಿಕೊಳ್ಳಲಾಗಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ಸಚಿವರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ. ಖಾದರ್ ಅವರು ಮಾರ್ಚ್ 27 ರಂದು ಗುಂಡ್ಲುಪೇಟೆ ಪಟ್ಟಣದ ಕಾಂಗ್ರೇಸ್ ಕಚೇರಿ ಬಳಿ ಮತಯಾಚನೆ ಸಮಯದಲ್ಲಿ ವ್ಯಕ್ತಿಯೊಬ್ಬರಿಗೆ ಹಣದ ಆಮಿಷ ಒಡ್ಡಿದ್ದಾರೆ ಹಾಗೂ ಇವರ ಕಾರು ಚಾಲಕರು ಸಹ ವ್ಯಕ್ತಿಯೊಬ್ಬರಿಗೆ ಹಣ ನೀಡುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗಿರುತ್ತದೆ ಎಂದು  ಗುಂಡ್ಲುಪೇಟೆ ಟೌನ್ ನಿವಾಸಿ ಎಲ್. ಸುರೇಶ್ ದೂರು ಅರ್ಜಿ ಸಲ್ಲಿಸಿದ್ದರು.  ಮತದಾರರಿಗೆ ಹಣದ ಆಮಿಷ ನೀಡಿ ಪ್ರಚೋದಿಸಿರುವುದರಿಂದ ಆರೋಪವು ಅಸಂಜ್ಞೆಯ ಅಪರಾಧವಾದ್ದರಿಂದ ಠಾಣಾ ಕ.ಜಿ.ಎಸ್.ಸಿ. ನಂಬರ್ 128/17 ರಂತೆ ಪ್ರಕರಣ ನೊಂದಾಯಿಸಿಕೊಂಡು ಪ್ರಥಮ ವರ್ತಮಾನ ವರದಿ ದಾಖಲಿಸಿ ತನಿಖೆ ನಡೆಸಲು ಘನ ನ್ಯಾಯಾಲಯದಿಂದ ಅನುಮತಿ ಪಡೆದು ಮಾರ್ಚ 28 ರಂದು ಬೆಳಿಗ್ಗೆ 11.30 ಗಂಟೆ ಸಮಯದಲ್ಲಿ ಠಾಣಾ ಮೊ.ನಂ. 145/17 ಕಲಂ 171 (ಬಿ)(ಸಿ)(ಇ) ಮತ್ತು (ಎಫ್) ಐ.ಪಿ.ಸಿ. ಅಡಿ ಪ್ರಥಮ ವರದಿ ದಾಖಲಿಸಿಕೊಳ್ಳಲಾಗಿರುತ್ತದೆ ಎಂದು ಉಪ ವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿ ನಲಿನ್ ಅತುಲ್  ತಿಳಿಸಿದ್ದಾರೆ.
     ವಿಧಾನ ಸಭಾ ಉಪ ಚುನಾವಣಾ ಹಿನ್ನಲೆಯಲ್ಲಿ ವಿವಿಧೆಡೆ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಮದ್ಯವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
      ಗುಂಡ್ಲುಪೇಟೆ ತಾಲ್ಲೂಕು ಕಗ್ಗಳ ಗ್ರಾಮದ ಸಿದ್ದರಾಜು ಎಂಬುವರಿಂದ 1.080 ಮಿಲಿ ಲೀಟರ್, ಹುಲ್ಲೆಪುರ ಗ್ರಾಮದ ವೆಂಕಟಶೆಟ್ಟಿ ಎಂಬುವರಿಂದ 0.810 ಮಿಲಿ ಲೀಟರ್, ಚಾಮರಾಜನಗರ ತಾಲ್ಲೂಕು ನಂಜದೇವನಪುರ  ಗ್ರಾಮದ ಮಾದನಾಯ್ಕ ಎಂಬುವರಿಂದ 0.810 ಮಿಲಿ ಲೀಟರ್ ಉಡಿಗಾಲ ಗ್ರಾಮದ ಮಲ್ಲೇಶ್ ಎಂಬುವರಿಂದ  0.720 ಮಿಲಿ ಲೀಟರ್, ಕೊಳ್ಳೇಗಾಲ ತಾಲ್ಲೂಕು ಸಿಂಗನಲ್ಲೂರು ಗ್ರಾಮದ ಕೆಂಚಶೆಟ್ಟಿ ಎಂಬುವರಿಂದ 0.900 ಮಿಲಿ ಲೀಟರ್ ಮದ್ಯ ವಶಪಡಿಸಿಕೊಂಡು ದೂರು ದಾಖಲಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿ ನಲಿನ್ ಅತುಲ್   ತಿಳಿಸಿದ್ದಾರೆ.
ಮಹದೇಶ್ವರ ದೇವಸ್ಥಾನ ಹುಂಡಿಯಲ್ಲಿ  1,10,03,487 ರೂ. ಸಂಗ್ರಹ

ಚಾಮರಾಜನಗರ ಮಾರ್ಚ್  29 : ಕೊಳ್ಳೇಗಾಲ ತಾಲ್ಲೂಕಿನ ಪ್ರಸಿದ್ದ ಯಾತ್ರಾ ಕ್ಷೇತ್ರ ಮಹದೇಶ್ವರ ಬೆಟ್ಟದಲ್ಲಿ ಇಂದು ದೇವಾಲಯದ ಹುಂಡಿ ಪರ್ಕಾವಣೆಯ ಕಾರ್ಯವು ಜರುಗಿದ್ದು, ಒಟ್ಟು 1,10,03,487 ರೂ.  ( ಒಂದು ಕೋಟಿ ಹತ್ತು ಲಕ್ಷದ ಮೂರು ಸಾವಿರದ ನಾಲ್ಕು ನೂರ ಎಂಬತ್ತೇಳು ) ಸಂಗ್ರಹವಾಗಿದೆ.
ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯಿತ್ರಿ, ಸಾಲೂರು ಬೃಹನ್ಮಠದ ಪಟ್ಟದ ಗುರುಸ್ವಾಮಿ ಅವರ ಸಮ್ಮುಖದಲ್ಲಿ ಇಂದು ಬೆಳಿಗ್ಗೆ ಹುಂಡಿಗಳನ್ನು ತೆರೆಯಲಾಯಿತು.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ವ್ಯವಸ್ಥಾಪಕರಾದ ಸೆಂದಿಲ್‍ನಾಥನ್ ಹಾಗೂ ಸಿಬ್ಬಂದಿ ಸಹಯೋಗದೊಂದಿಗೆ ಹುಂಡಿ ಎಣಿಕೆ ಕಾರ್ಯ ನಡೆಯಿತು.  ಹುಂಡಿಯಲ್ಲಿ ನಗದು ಹಣ ಮಾತ್ರವಲ್ಲದೆ 51 ಗ್ರಾಂ  ಚಿನ್ನ ಮತ್ತು 900 ಗ್ರಾಂ ಬೆಳ್ಳಿ ಪದಾರ್ಥಗಳು ಸಹ ಸಂಗ್ರಹವಾಗಿವೆ.
ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಪ್ರಭಾರ ಉಪ ಕಾರ್ಯದರ್ಶಿ ಎಂ. ಬಸವರಾಜು, ಸಹಾಯಕ ಅಭಿಯಂತರ ಆರ್.ಎಸ್. ಮನುವಾಚಾರ್ಯ, ಲೆಕ್ಕಾಧೀಕ್ಷಕ ಮಹದೇವಸ್ವಾಮಿ, ಇತರರು ಹುಂಡಿ ಪರ್ಕಾವಣೆ ವೇಳೆ ಹಾಜರಿದ್ದರು
ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆ
ಅಕ್ರಮ ಮದ್ಯ ವಶ
ಚಾಮರಾಜನಗರ, ಮಾ. 30:- ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಅಬಕಾರಿ ಅಧಿಕಾರಿಗಳು ದಾಳಿ ಮುಂದುವರಿಸಿದ್ದು ಗುಂಡ್ಲುಪೇಟೆ ತಾಲೂಕು ಅಣ್ಣೂರುಕೇರಿಯ ಮಹೇಶ ಎಂಬುವರಿಂದ 0.900 ಮಿಲಿ ಲೀಟರ್ ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆಂದು ಉಪವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿ ನಲಿನ್ ಅತುಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Wednesday, 29 March 2017

ಯೂ.ಟಿ.ಖಾದರ್ ಮೇಲೆ ಎಫ್ .ಐ.ಆರ್. ಹಣ ನೀಡಿ ಆಮೀಷ ಆರೋಪ

ಸಚಿವ ಯೂ.ಟಿ.ಖಾದರ್ ಮೇಲೆ ಎಫ್ .ಐ.ಆರ್, ಹಣ ನೀಡಿ ಆಮೀಷ ಆರೋಪ: 

             ವರದಿ; ರಾಮಸಮುದ್ರ  ಎಸ್.ವೀರಭದ್ರಸ್ವಾಮಿ




ಚಾಮರಾಜನಗರ : ವ್ಯಕ್ತಿಯೊಬ್ಬರಿಗೆ . ಹಣ ನೀಡಿ ಆಮೀಷ ಒಡ್ಡಿದ  ಆರೋಪ ಮೇರೆಗೆ ಜಿಲ್ಲಾ ಉಸ್ತುವಾರಿ ಹಾಗೂ ಆಹಾರ ಖಾತೆ ಸಚಿವ ಯೂ.ಟಿ.ಖಾದರ್ ಮೇಲೆ  ಚುನಾವಣಾದಿಕಾರಿಗಳು  ಎಫ್ .ಐ.ಆರ್. ದಾಖಲು ಮಾಡಿದ್ದಾರೆ.
ಇದೇ 27 ರಂದು ಗುಂಡ್ಲುಪೇಟೆಯಲ್ಲಿ ಮತಯಾಚನೆ ಸಂದರ್ಭ ವ್ಯಕ್ತಿಯೊಬ್ಬರಿಗೆ . ಹಣ ನೀಡಿ ಆಮೀಷ ಒಡ್ಡಿರುವುದು ಹಾಗೂ ಚಾಲಕ ಹಣ ನೀಡುತ್ತಿರುವುದು ಮಾದ್ಯಮಗಳಲ್ಲಿ ಪ್ರಸಾರವಾಧ ಹಿನ್ನಲೆಯಲ್ಲಿ ಕೆ.ಜಿ.ಎಸ್.ಸಿ128/17 ರಂತೆ ನೋಂದಣಿ ಮಾಡಿಕೊಂಡು ಘನ ನ್ಯಾಯಾಲಯದ  ಅನುಮತಿ ಮೇರೆಗೆ ಠಾ.ನಂ.145/17 ಕಲಂ171(ಬಿ)(ಸಿ)(ಇ)(ಎಫ್) ಅಡಿಪ್ರಥಮ ವರದಿ ದಾಖಲಸಿರಲಾಗುತ್ತದೆ. ಈ ಸಂಬಂದ ನಿವಾಸಿ ಸುರೇಶ್ ಎಂಬುವವರು ದೂರು ಅರ್ಜಿ ಸಲ್ಲಿಸಿದ್ದರು.
*********************************************************************

Tuesday, 28 March 2017

ಶ್ರೀ ವಾಣಿಜ್ಯ ವಿದ್ಯಾ ಸಂಸ್ಥೆಗೆ ಟೈಪಿಂಗ್ ಪರೀಕ್ಷೆಯಲ್ಲಿ 14 ಡಿಸ್ಟಿಂಕ್ಷನ್

ಶ್ರೀ ವಾಣಿಜ್ಯ ವಿದ್ಯಾ ಸಂಸ್ಥೆಗೆ ಟೈಪಿಂಗ್ ಪರೀಕ್ಷೆಯಲ್ಲಿ 14 ಡಿಸ್ಟಿಂಕ್ಷನ್ ಪಡೆದಿದೆ.

NEWS COLLECTED BY.SRINIVAS, & VEERABHADRA SWAMY
ಚಾಮರಾಜನಗರ: ಮಾರ್ಚ:28: ಜನವರಿ 2017ರಲ್ಲಿ ನಡೆದ ಟೈಪಿಂಗ್ ಮತ್ತು ಶಾರ್ಟಹ್ಯಾಂಡ್ ಪರೀಕ್ಷೆಯಲ್ಲಿ ಶ್ರೀ ವಾಣಿಜ್ಯ ವಿದ್ಯಾ ಸಂಸ್ಥೆಯ  ವಿದ್ಯಾರ್ಥಿಗಳು ಉತ್ತಮಮಟ್ಟದಲ್ಲಿ ತೇರ್ಗೆಡೆ ಹೊಂದಿದ್ದಾರೆ. ಸುಮಾರು 15 ವರ್ಷಗಳಿಂದ ಶ್ರೀ ವಾಣಿಜ್ಯ ವಿದ್ಯಾ ಸಂಸ್ಥೆಯಲ್ಲಿ ಟೈಪಿಂಗ್ ಹಾಗೂ ಶಾರ್ಟಹ್ಯಾಂಡ್ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಉತ್ತಮಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಈ ಬಾರಿಯೂ ಟೈಪಿಂಗ್ ಹಾಗೂ ಶಾರ್ಟಹ್ಯಾಂಟ್ ಪರೀಕ್ಷೆಯಲ್ಲಿ ಚಾಮರಾಜನಗರ ಜಿಲ್ಲೆಗೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ ಎಂದು ಶ್ರೀ ವಾಣಿಜ್ಯ ವಿದ್ಯಾ ಸಂಸ್ಥೆಯ ಪ್ರಾಚಾರ್ಯರಾದ ಆರ್.ವಿ,ಮಹದೇವಪ್ಪರವರು ತಿಳಿಸಿದ್ದಾರೆ.  ಇದೇ ಸಂಧರ್ಭದಲ್ಲಿ ಸಂಸ್ಥೆಯ ವತಿಯಿಂದ ಎಲ್ಲಾ ವಿದ್ಯಾರ್ಥಿಗಳನ್ನು ಆಭಿನಂದಿಸಿ ಗೌರವಿಸಲಾಯಿತು.
       ಶ್ರೀ ವಾಣಿಜ್ಯ ವಿದ್ಯಾ ಸಂಸ್ಥೆಯ ಟೈಪಿಂಗ್ ಹಾಗೂ ಶಾಟಹ್ಯಾಂಡ್ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಚಾಮರಾಜನಗರದ ಸಂಘ ಸಂಸ್ಥೆಗಳು ಹಾಗೂ ಪೋಷಕ ವೃಂದ, ಹಿರಿಯ ವಿದ್ಯಾರ್ಥಿಗಳು  ಅಭಿನಂದಿಸಿದ್ದಾರೆ.
      ಟೈಪಿಂಗ್ ಪರೀಕ್ಷೆಯಲ್ಲಿ 14 ವಿದ್ಯಾರ್ಥಿಗಳು ಅತೀ ಹೆಚ್ಚು ಅಂಪಡೆದಿದ್ದಾರೆ. ಚಾಮರಾಜನಗರದ ಯಮುನ  ಕನ್ನಡ.172 ಇಂಗ್ಲೀಷ್ . 185, ಯೋಗೀಶ್ವರಿ ಸಿದ್ದಯ್ಯನಪುರ ಇಂಗ್ಲೀಷ್.182, ಶಾರದ ಡಿ. ಆಲೂರು ಇಂಗ್ಲೀಷ್.179, ಮಹೇಶ.ಆರ್. ನಾಗವಳ್ಳಿ, ಇಂಗ್ಲೀಷ್.188, ಶೃತಿ ಸಿಜಿ ಚಾವiರಾಜನಗರ, ಇಂಗ್ಲೀಷ್.182,ಮಮತ ಎಎಸ್. ಅಮಚವಾಡಿ. ಕನ್ನಡ.173, ಪ್ರೀತಿ  ಎಂ. ರಾಮಸಮುದ್ರ. ಕನ್ನಡ.181, ಇಂಗ್ಲೀಷ್.183, ಮೇಘವರ್ಧನ ನಾಗವಳ್ಳಿ.173, ಉಷ ಮೂಡಲಪುರ, ಕನ್ನಡ.178 ಮತು ್ತಇಂಗ್ಲೀಷ್.172, ರಶ್ಮಿ ಎಸ್ ಕಾಗಲವಾಡಿ ಕನ್ನಡ.177/ಇಂಗ್ಲೀಷ್.172 ಈ ವಿದ್ಯಾರ್ಥಿಗಳು ಅತೀ ಹೆಚ್ಚು ಅಂಕ ಪಡೆದು ಶ್ರೀ ವಾಣಿಜ್ಯ ವಿದ್ಯಾ ಸಂಸ್ಥೆಗೆ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಬಿಳಿಗಿರಿರಂಗನಬೆಟ್ಟ ಬಾರದ ಮಳೆ: ಪ್ರಾಣಿಗಳ ಪರದಾಟ (28-03-2017)

     ಬಿಳಿಗಿರಿರಂಗನಬೆಟ್ಟ ಬಾರದ ಮಳೆ: ಪ್ರಾಣಿಗಳ ಪರದಾಟ

ಯಳಂದೂರು ಮಾ 28 : ತಾಲ್ಲೂಕಿನ ಪ್ರಸಿದ್ಧ ಹುಲಿರಕ್ಷಿತ ಅರಣ್ಯ ಪ್ರದೇಶವಾಗಿರುವ ಬಿಳಿಗಿರಿರಂಗನಬೆಟ್ಟದಲ್ಲಿ ಈ ವರ್ಷ ಇನ್ನೂ ವರುಣನ ಸಿಂಚನವಾಗದ ಕಾರಣ ಕೆರೆಕಟ್ಟೆಗಳು ಒಣಗಿದ್ದು ಕಾಡು ಪ್ರಾಣಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ಯಳಂದೂರು, ಚಾಮರಾಜನಗರ, ಹನೂರು, ಕೊಳ್ಳೇಗಾಲ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಬಿಆರ್‍ಟಿ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳಿಗೆ ನೀರುಣಿಸುವ ಪ್ರಮುಖವಾದ ಕೃಷ್ಣಯ್ಯನಕಟ್ಟೆ, ಬೆಲ್ಲವತ್ತ ಹಾಗೂ ಗುಂಡಾಲ್ ಜಲಾಶಯ ಸೇರಿದಂತೆ 63 ಸಣ್ಣ ಕೆರೆಕಟ್ಟೆಗಳು ಇವೆ. ಆದರೆ ಈ ಬಾರಿ ಪೂರ್ವ ಮುಂಗಾರು ಮಳೆ ಬೆಟ್ಟಕ್ಕೆ ಬಿದ್ದೇ ಇಲ್ಲ. ಕಳೆದ ಬಾರಿಯೂ ವಾಡಿಕೆಗಿಂತ ಕಡಿಮೆ ಮಳೆಯಾಗಿರುವುದರಿಂದ ನೀರಿನ ಪ್ರಮಾಣ ಕಡಿಮೆಯಾಗಿದೆ. ಈಗ ಕೇವಲ 13 ಕೆರೆಗಳಲ್ಲಿ ಮಾತ್ರ ಅಲ್ಪಸ್ವಲ್ಪ ನೀರಿದೆ. ಅದೂ ಕೂಡ ಕೆಸರುಮಯವಾಗಿದೆ. ವಾರದ ಹಿಂದೆ ಕೃಷ್ಣಯ್ಯನ ಕಟ್ಟೆಯಲ್ಲಿ ನೀರು ಕುಡಿಯಲು ಬಂದು ಹೆಣ್ಣಾನೆಯೊಂದು ಕೆಸರಿನಲ್ಲಿ ಸಿಲುಕಿ ಒದ್ದಾಡಿ ಕಾಡು ಸೇರಿರುವ ಘಟನೆಯೂ ನಡೆದಿದೆ.
ಇತ್ತ ಸುತ್ತಮುತ್ತಲ ಜಮೀನುಗಳಿಗೆ ಪ್ರಾಣಿಗಳು ಮೇವು ಹಾಗೂ ನೀರನ್ನರಸಿ ಬರುತ್ತಿರುವ ಘಟನೆಗಳೂ ಅಧಿಕವಾಗುತ್ತಿದೆ. ಇದರಿಂದ ಗಂಗವಾಡಿ, ಯರಗಂಬಳ್ಳಿ, ಗುಂಬಳ್ಳಿ, ವಡಗೆರೆ ಸೇರಿದಂತೆ ಅನೇಕ ಗ್ರಾಮದ ರೈತರು ಸಂಕಟಪಡುವ ಸ್ಥಿತಿ ಇದೆ. ಕೃಷ್ಣಯ್ಯನ ಕಟ್ಟೆ ಬಳಿ ಇರುವ ಕರಿಕಲ್ಲಿನ ಕ್ವಾರಿಯ ಬಳಿ ಚಿರತೆಯೊಂದು ತನ್ನ 2 ಮರಿಗಳೊಂದಿಗೆ ಕಳೆದ 20 ದಿನಗಳಿಂದ ಅಡ್ಡಾಡುತ್ತಿದೆ. ಅಕ್ಕಪಕ್ಕದ ನಾಯಿ, ಕುರಿಗಳ ಮೇಲೂ ಧಾಳಿ ಮಾಡಿದೆ ಈ ಬಗ್ಗೆ ಅರಣ್ಯ ಇಲಾಖೆಗೆ ದೂರು ನೀಡಿದ್ದರೂ ಇನ್ನೂ ಕ್ರಮ ಕೈಗೊಂಡಿಲ್ಲ ಎಂಬುದು ಇಲ್ಲಿನ ಪುಟ್ಟಯ್ಯ, ಕೃಷ್ಣಪ್ಪ ಸೇರಿದಂತೆ ಹಲವರ ದೂರು.
ಬೆಟ್ಟದ ಕೆಲ ಕಟ್ಟೆಗಳಿಗೆ ಈಚೆಗೆ ಕೆಲವು ಯುವ ತಂಡದ ಸದಸ್ಯರು ಟ್ಯಾಂಕರ್ ಮೂಲಕ ನೀರನ್ನು ತಂದು ಹಾಕಿದ್ದರೂ ಅದೂ ಕೂಡ ಬತ್ತಿಹೋಗಿದೆ. ಇರುವ ಅಲ್ಪಸ್ವಲ್ಪ ನೀರನ್ನು ಅರಸಿ ಬರುವ ಕಾಡುಪ್ರಾಣಿಗಳು ನೀರು ಸಿಗದಿದ್ದಾಗ ಜಮೀನುಗಳಿಗೆ ಬರುತ್ತಿವೆ. ಈ ವರ್ಷ ಬೆಟ್ಟಕ್ಕೆ ಮಳೆರಾಯನ ಆಗಮನ ಇನ್ನೂ ಆಗಿಲ್ಲ. ಈ ನಿರೀಕ್ಷೆಯಲ್ಲೇ ಅರಣ್ಯ ಇಲಾಖೆ ಇದೆ. ವರುಣ ಇನ್ನಾದರೂ ಕೃಪೆ ತೋರುವನೇ ಕಾದು ನೋಡಬೇಕಿದೆ.

28-03-2017 ದಾಖಲೆ ಇಲ್ಲದೆ ಸಾಗಿಸುತ್ತಿದ್ದ ನಗದು ವಶ: ವಿವಿಧಡೆ ಅಕ್ರಮ ಮದ್ಯ ವಶ (ಚಾಮರಾಜನಗರ ಸುದ್ದಿ, ಅಕ್ರಮ ಹಣ,ಮದ್ಯ ವಶ)



ಎಸ್.ಎಸ್.ಎಲ್.ಸಿ. ಪರೀಕ್ಷಾ ಕೇಂದ್ರ: ಸ್ಪಷ್ಟನೆ


ಚಾಮರಾಜನಗರ ಮಾರ್ಚ್  28 : ಇದೇ ತಿಂಗಳ ಮಾರ್ಚ್ 30 ರಿಂದ  ಏಪ್ರಿಲ್ 12 ವರೆಗೆ ನಡೆಯಲಿರುವ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಸಂಬಂಧಿಸಿದಂತೆ ಖಾಸಗಿ ಅಭ್ಯರ್ಥಿಗಳಿಗೆ ಜಿಲ್ಲೆಯ  ಒಂದು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಯಲಿದ್ದು,  ವಿದ್ಯಾರ್ಥಿಗಳ ಪ್ರವೇಶ ಪತ್ರದಲ್ಲಿ ಸೇವಾ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕೋರ್ಟ್ ರಸ್ತೆ, ಚಾಮರಾಜನಗರ ಟೌನ್ ಎಂದು ತಪ್ಪಾಗಿ ನಮೂದಾಗಿದೆ.  ಖಾಸಗಿ ಅಭ್ಯರ್ಥಿಗಳು ಇದನ್ನು ಸೇವಾ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಚೆನ್ನಿಪುರದಮೋಳೆ ರಸ್ತೆ, ಚಾಮರಾಜನಗರ ಟೌನ್ ಎಂದು ತಿಳಿದುಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಂಜುಳ ಅವರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ. 

ಎಸ್.ಎಸ್.ಎಲ್.ಸಿ. ಪರೀಕ್ಷೆ: ನಿಷೇಧಾಜ್ಞೆ


ಚಾಮರಾಜನಗರ ಮಾರ್ಚ್  28 : ಜಿಲ್ಲೆಯ ವಿವಿಧೆಡೆ ಮಾರ್ಚ್ 30 ರಿಂದ ಏಪ್ರಿಲ್ 12ರ ವರಗೆ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಯಲಿರುವ ಹಿನ್ನಲೆಯಲ್ಲಿ  ಪರೀಕ್ಷಾ ಅಕ್ರಮಗಳಿಗೆ ಅವಕಾಶ ವಾಗದಿರಲು ಮತ್ತು ಶಾಂತಿ ಸುವ್ಯವಸ್ಥೆಯಿಂದ ಪರೀಕ್ಷಾ ಪ್ರಕ್ರಿಯೆ ನಡೆಸುವ ಉದ್ದೇಶದಿಂದ ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ವಿಧಿಸಿ ಜಿಲ್ಲಾಧಿಕಾರಿ ಬಿ. ರಾಮು ರವರು ಆದೇಶ ಹೊರಡಿಸಿದ್ದಾರೆ. 


ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ನಿಷೇದಾಜ್ಞೆ ವಿಧಿಸಲಾಗಿದೆ. ಅಲ್ಲದೆ ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿಗಳನ್ನು ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮುಚ್ಚುವಂತೆಯೂ ಜಿಲ್ಲಾಧಿಕಾರಿಯವರು ಆದೇಶದಲ್ಲಿ ತಿಳಿಸಿದ್ದಾರೆ. 

ನಿಷೇಧಾಜ್ಞೆ ಆದೇಶವು ಪರೀಕ್ಷಾ ಕೆಲಸಕ್ಕೆ ನಿಯೋಜಿತರಾದ ಸಿಬ್ಬಂದಿ ಹಾಗೂ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಅನ್ವಯ ವಾಗುವುದಿಲ್ಲವೆಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ. 



ವಾರ್ತಾ ವಿಶೇಷ 


ಎಸ್.ಎಸ್.ಎಲ್.ಸಿ. ಪರೀಕ್ಷೆ: ಸರ್ವ ಸಿದ್ಧತೆ



ಎಸ್.ಎಸ್.ಎಲ್.ಸಿ. ಪರೀಕ್ಷೆಯು  ಮಾರ್ಚ್ 30 ರಿಂದ  ಏಪ್ರಿಲ್ 12 ರವರೆಗೆ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರದಲ್ಲಿ ನಡೆಯಲಿದ್ದು ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಲಾಗಿದೆ. 

ಜಿಲ್ಲೆಯಲ್ಲಿ  ಒಟ್ಟು 12595 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಈ ಪೈಕಿ 6538 ಬಾಲಕರು 6057 ಬಾಲಕಿಯರು ಸೇರಿದ್ದಾರೆ.  ಸರ್ಕಾರಿ ಪ್ರೌಢಶಾಲೆಗಳ 6704, ವಿದ್ಯಾರ್ಥಿಗಳು, ಅನುದಾನಿತ ಶಾಲೆಗಳ 3673 ವಿದ್ಯಾರ್ಥಿಗಳು, ಅನುದಾನರಹಿತ ಶಾಲೆಗಳ 2218 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. 

ಜಿಲ್ಲೆಯಲ್ಲಿ ಒಟ್ಟು 43 ಪರೀಕ್ಷಾ ಕೇಂದ್ರವು ಇರಲಿದೆ. ಪರೀಕ್ಷಾ ಎಲ್ಲಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರನ್ನು ನೇಮಕ ಮಾಡಲಾಗಿದೆ. 

ಪರೀಕ್ಷಾ ಕಾರ್ಯವು ಸುಸೂತ್ರವಾಗಿ ನಡೆಯಲು ಎಲ್ಲಾ ಬಗೆಯ ವ್ಯವಸ್ಥೆ ಕೈಗೊಳ್ಳಲಾಗಿದೆ. ಪರೀಕ್ಷಾ ಅಕ್ರಮ ತಡೆಯಲು ಜಿಲ್ಲಾ ಮಟ್ಟದ ಜಾಗೃತ ವಿಚಕ್ಷಣ ದಳ ನೇಮಿಸಲಾಗಿದೆ.  ತಾಲ್ಲೂಕು ಮಟ್ಟದಲ್ಲಿಯೂ ಸಹ ಜಾಗೃತ ವಿಚಕ್ಷಣ ದÀಳ ಪರೀಕ್ಷಾ ಕಾರ್ಯದ ಬಗ್ಗೆ ನಿಗಾ ವಹಿಸಲಿದೆ. ಅಲ್ಲದೆ ಪ್ರತಿ ಪರೀಕ್ಷಾ ಕೇಂದ್ರಕ್ಕೂ ಸ್ಥಾನಿಕಾ ವಿಚಕ್ಷಣ ದಳಗಳನ್ನು ನಿಯೋಜಿಸಲಾಗುತ್ತಿದೆ. 

ಪರೀಕ್ಷಾ ಅಕ್ರಮಗಳಿಗೆ ಅವಕಾಶವಾಗದಂತೆ ಹಾಗೂ  ಪರೀಕ್ಷಾ ಕಾರ್ಯವು ಶಾಂತಿ ಮತ್ತು ಸುವ್ಯವಸ್ಥೆಯಿಂದ ನಡೆಯಲೆಂಬ ಉದ್ದೇಶದಿಂದ 43 ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ವಿದಿಸಿ ಜಿಲ್ಲಾಧಿಕಾರಿಯವರಾದ ಬಿ. ರಾಮು ಅವರು ಆದೇಶ ಹೊರಡಿಸಿದ್ದಾರೆ. ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ನಿಷೇದಾಜ್ಞೆ ವಿಧಿಸಲಾಗಿದೆ. ಅಲ್ಲದೆ ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರಗಳ 200 ಮೀಟರ್ ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿಗಳನ್ನು ಬೆಳಿಗ್ಗೆ 7 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮುಚ್ಚುವಂತೆಯೂ ಜಿಲ್ಲಾಧಿಕಾರಿಯವರು  ಆದೇಶಿಸಿದ್ದಾರೆ. 

ನಿಷೇದಾಜ್ಞೆ ಆದೇಶವು ಪರೀಕ್ಷಾ ಕೆಲಸಕ್ಕೆ ನಿಯೋಜಿತರಾದ ಸಿಬ್ಬಂದಿ ಹಾಗೂ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಅನ್ವಯ ವಾಗುವುದಿಲ್ಲವೆಂದು ಸ್ಪಷ್ಟಪಡಿಸಲಾಗಿದೆ. 

ಒಟ್ಟಾರೆ ಎಸ್.ಎಸ್.ಎಲ್.ಸಿ. ಪರೀಕ್ಷೆಯು ಯಾವುದೇ ಗೊಂದಲವಿಲ್ಲದೆ ನಡೆಯಲು ಅಗತ್ಯವಿರುವ ಎಲ್ಲಾ ಪ್ರಕ್ರಿಯೆ ನಡೆಸಲಾಗಿದೆ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಹಾಜರಿರಬೇಕು.  ತಡವಾಗಿ ಬರುವ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಅವಕಾಶ ಇರುವುದಿಲ್ಲವೆಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಮಂಜುಳ ಅವರು ತಿಳಿಸಿದ್ದಾರೆ. 




ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆ: 

ದಾಖಲೆ ಇಲ್ಲದೆ ಸಾಗಿಸುತ್ತಿದ್ದ ನಗದು ವಶ: ವಿವಿಧಡೆ ಅಕ್ರಮ ಮದ್ಯ ವಶ

ಚಾಮರಾಜನಗರ ಮಾರ್ಚ್  28 : ಯಾವುದೇ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ 60940 ರೂ ನಗದನ್ನು ಮಾರ್ಚ್ 27 ರಂದು ತೆರಕಣಾಂಬಿ ಚೆಕ್ ಪೋಸ್ಟ್ ಬಳಿ ವಶಪಡಿಸಿಕೊಳ್ಳಲಾಗಿದೆ.
ಚಾಮರಾಜನಗರ ತಾಲ್ಲೂಕು ಕಿಲಗೆರೆ ಗ್ರಾಮದ ಮಾಯನಾಯಕನಪುರದ ಫಾರಂ ಹೌಸ್‍ನ ಗುಣಶೇಖರ್  ಅವರ ಪಿಯಟ್ ಯುನೊ ಗೋಲ್ಡ್ ಕಾರ್‍ನ್ನು ಚೆಕ್ ಪೋಸ್ಟ್ ಬಳಿ ತಪಾಸಣೆ ಮಾಡಿದಾಗ  ದಾಖಲೆ ಇಲ್ಲದೆ 60940 ರೂ ನಗದು  ಪತ್ತೆಯಾಗಿದೆ.   ಈ ಹಿನ್ನಲೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
     ಮಾರ್ಚ್ 26 ರಂದು ಸಂಜೆ 6-45ರ ವೇಳೆ ಬಿ.ಜೆ.ಪಿ. ಮುಖಂಡರಾದ ಶ್ರೀರಾಮುಲು ಅವರು ಕೆಲಸೂರು ಗ್ರಾಮದಲ್ಲಿ ಚುನಾವಣೆ ಪ್ರಚಾರ ಮಾಡುವಾಗ ಆಪೆ ಆಟೋ ಒಂದರಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಐಸ್ ಕ್ರೀಮ್ ವಿತರಿಸಲಾಗುತ್ತಿತ್ತು. ಈ ಬಗ್ಗೆ ಸೆಕ್ಟರ್ ಅಧಿಕಾರಿಯವರು ಆಟೋ ಚಾಲಕನನ್ನು ವಿಚಾರಿಸಿದಾಗ ಚಾಲಕನು ಯಾವುದೇ ಉತ್ತರ ನೀಡದೆ ಪರಾರಿಯಾಗಿದ್ದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ದೂರು ದಾಖಲು ಮಾಡಲಾಗಿದೆ.
ಚುನಾವಣೆ ಹಿನ್ನಲೆಯಲ್ಲಿ  ಅಬಕಾರಿ ಅಧಿಕಾರಿಗಳು ವಿವಿಧೆಡೆ ಪರಿಶೀಲಿಸಿದ ವೇಳೆ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಗುಂಡ್ಲುಪೇಟೆ ಪಟ್ಟಣದ ಪ್ರಕಾಶ್ ರವರಿಂದ 1.800 ಮಿಲಿ ಲೀಟರ್, ಗುಂಡ್ಲುಪೇಟೆ ಪಟ್ಟಣದ ಮಹದೇವ ಅವರಿಂದ 0.540 ಮಿಲಿ ಲೀಟರ್, ಚಾಮರಾಜನಗರ ತಾಲ್ಲೂಕು ಮಲಿಯೂರು ಗ್ರಾಮದ ನಾಗನಾಯ್ಕ ಎಂಬುವರಿಂದ 0.630 ಮಿಲಿ ಲೀಟರ್, ಮಹೇಶ್ ಅವರಿಂದ 0.990 ಮಿಲಿ ಲೀಟರ್, ಕೊಳ್ಳೇಗಾಲ ತಾಲ್ಲೂಕು ಸಿದ್ದಯ್ಯನಪುರ ಗ್ರಾಮದ ಶೇಖರ್ ಎಂಬುವರಿಂದ 0.900 ಮಿಲಿ ಲೀಟರ್, ಮಹದೇವ ಎಂಬುವರಿಂದ 0.900 ಮಿಲಿ ಲೀಟರ್ ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಕೊಳ್ಳೇಗಾಲ ಉಪ ವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿ ನಲಿನ್ ಅತುಲ್ ತಿಳಿಸಿದ್ದಾರೆ.

ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆ:
ಚುನಾವಣಾ ವಿಶೇಷ ವೀಕ್ಷಕರಾಗಿ ಡಾ. ಕರುಣಾರಾಜು  ನೇಮಕ


ಚಾಮರಾಜನಗರ ಮಾರ್ಚ್  28 : ಗುಂಡ್ಲುಪೇಟೆ-ನಂಜನಗೂಡು ವಿಧಾನ ಸಭಾ ಕ್ಷೇತ್ರ ಉಪ ಚುನಾವಣೆ ಹಿನ್ನಲೆಯಲ್ಲಿ ಚುನಾವಣಾ ಆಯೋಗದಿಂದ ಚುನಾವಣಾ ವಿಶೇಷ ವೀಕ್ಷಕರಾಗಿ ಡಾ. ಕರುಣಾರಾಜು ಅವರನ್ನು ನೇಮಿಸಲಾಗಿದೆ.
ವಿಶೇಷ ವೀಕ್ಷಕರಾದ  ಡಾ. ಕರುಣಾರಾಜು ಅವರ ಮೊಬೈಲ್ ಸಂಖ್ಯೆ 9448167515 ಆಗಿರುತ್ತದೆ. ಚುನಾವಣಾ ಸಂಬಂಧ ದೂರು, ಅಹವಾಲುಗಳಿದ್ದಲ್ಲಿ ಸಂಪರ್ಕಿಸಬಹುದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಏಪ್ರಿಲ್ 9 ರಂದು ವೇತನ ಸಹಿತ ರಜೆ ನೀಡಲು ಆದೇಶ

ಚಾಮರಾಜನಗರ ಮಾರ್ಚ್  28 : ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ಮತದಾರರಾಗಿರುವ ಎಲ್ಲಾ ಕೈಗಾರಿಕೆಗಳು,ವ್ಯವಹಾರ ಸಂಸ್ಥೆಗಳು, ಔದ್ಯಮಿಕ ಸಂಸ್ಥೆಗಳು ಇನ್ನಿತರೆ ಎಸ್ಟಾಬ್ಲಿಸಮೆಂಟ್‍ಗಳಲ್ಲಿ ಖಾಯಂ ಅಥವಾ ದಿನಗೂಲಿ ಮೇಲೆ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ನೌಕರರಿಗೆ ಏಪ್ರಿಲ್ 9 ರಂದು ಮತದಾನ ಮಾಡಲು ಅನುಕೂಲವಾಗುವಂತೆ ಅವಕಾಶ ಕಲ್ಪಿಸುವ ಸಲುವಾಗಿ ವೇತನ ಸಹಿತ ರಜೆ ಮಂಜೂರು ಮಾಡಲು ಜಿಲ್ಲಾಧಿಕಾರಿ ಬಿ. ರಾಮು ರವರು ಆದೇಶಿಸಿದ್ದಾರೆ.
ವೇತನ ಸಹಿತ ರಜೆ ನೀಡಲು ಹೊರಡಿಸಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಇಲ್ಲವಾದಲ್ಲಿ ಪ್ರಜಾಪ್ರತಿನಿಧಿ  ಕಾಯ್ದೆ 1951 ರನ್ವಯ ಕಲಂ 135 ಬಿ(3)ರ ಅಡಿ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಬಿ. ರಾಮು ರವರು ತಿಳಿಸಿದ್ದಾರೆ.  

ಏಪ್ರಿಲ್ 9 ರಂದು ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿ ಸಂತೆ,ಜಾತ್ರೆ ನಿಷೇಧ

ಚಾಮರಾಜನಗರ ಮಾರ್ಚ್  28 - ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರ ಉಪ ಚುನಾವಣೆಯ ಮತದಾನವು ಏಪ್ರಿಲ್ 9 ರಂದು ನಡೆಯಲಿರುವ ಹಿನ್ನಲೆಯಲ್ಲಿ ಅಂದು ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯೊಳಗೆ ಬರುವ ಎಲ್ಲಾ ಪ್ರದೇಶಗಳಲ್ಲಿ ಸಂತೆ ಹಾಗೂ ಎಲ್ಲಾ ತರಹದ ಜಾತ್ರೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಬಿ. ರಾಮು ಅವರು ಆದೇಶಿಸಿದ್ದಾರೆ.
    ಮತದಾನದ ಹಿನ್ನಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಹಾಗೂ ನಾಗರಿಕರು ಮತ ಹಾಕಲು ಅನುಕೂಲ ಮಾಡಿಕೊಡುವ ಹಿತದೃಷ್ಟಿಯಿಂದ ಎಪ್ರಿಲ್ 9 ರಂದು ಬೆಳಿಗ್ಗೆ 5 ರಿಂದ ಸಂಜೆ 6 ಗಂಟೆಯವರೆಗೆ ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಎಲ್ಲಾ ಪ್ರದೇಶಗಳಲ್ಲಿ ಸಂತೆ ಮತ್ತು ಎಲ್ಲಾ ಬಗೆಯ ಜಾತ್ರೆಗಳನ್ನು ನಡೆಸುವುದನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಬಿ. ರಾಮು ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಸೆಕ್ಟರ್ ಅಧಿಕಾರಿ ಬದಲು
ಚಾಮರಾಜನಗರ ಮಾರ್ಚ್  28 : ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ 16ನೇ ತಂಡದ ಸೆಕ್ಟರ್ ಅಧಿಕಾರಿ ಅವರನ್ನು ಬದಲಿಸಲಾಗಿದೆ.  
16ನೇ ತಂಡದ ಸೆಕ್ಟರ್ ಅಧಿಕಾರಿಯಾಗಿ ಚಾಮರಾಜನಗರ ಸಣ್ಣನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ನಿಜಲಿಂಗಸ್ವಾಮಿ ಅವರನ್ನು ನೇಮಿಸಲಾಗಿತ್ತು.  ಇವರ ಬದಲು ಇದೇ ಇಲಾಖೆಯ ಸಹಾಯಕ ಇಂಜಿನಿಯರ್ ಜಿ.ಎಸ್. ಸುರೇಶ್ ಅವರನ್ನು ಸೆಕ್ಟರ್ ಅಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ

Monday, 27 March 2017

27-03-2017 ಚಾಮರಾಜನಗರದಲ್ಲಿ ಇಂದು(28) ನಾಳೆ(29) ನಿಷೇಧಾಜ್ಞೆ ಜಾರಿ


                  ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆ
ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆ : ಮಾ.28, 29ರಂದು ನಿಷೇಧಾಜ್ಞೆ ಜಾರಿ

                   ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ, ಮಾ. 27  :- ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಮಾರ್ಚ್ 28ರ ಬೆಳಿಗ್ಗೆ 6 ಗಂಟೆಯಿಂದ ಮಾರ್ಚ್ 29ರ ಸಂಜೆ 6 ಗಂಟೆವರೆಗೆ ಸಿಆರ್‍ಪಿಸಿ ಕಲಂ 144ರಂತೆ ನಿಷೇಧಾಜ್ಞೆ ಜಾರಿಗೊಳಿಸಿ ಕೊಳ್ಳೇಗಾಲ ಉಪವಿಭಾಗ ದಂಡಾಧಿಕಾರಿ ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ನಲಿನ್ ಅತುಲ್ ಅವರು ಆದೇಶ ಹೊರಡಿಸಿದ್ದಾರೆ.
ಮಾರ್ಚ್ 28ರಂದು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಗ್ರಾಮಗಳಲ್ಲಿ ಕಾಂಗ್ರೆಸ್ ಹಾಗೂ ಬಿ.ಜೆ.ಪಿ. ಪಕ್ಷದ ರಾಜ್ಯ ಹಾಗೂ ಸ್ಥಳೀಯ ಮುಖಂಡರುಗಳು ಚುನಾವಣಾ ಪ್ರಚಾರ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು, ಕೆಲವು ಕಡೆ ಒಂದೇ ಗ್ರಾಮದಲ್ಲಿ ಎರಡೂ ಪಕ್ಷದವರು ಪ್ರಚಾರ ಸಭೆಗಳನ್ನು ನಡೆಸಲು ಉದ್ದೇಶಿಸಿದ್ದು ಈ ಸಂದರ್ಭದಲ್ಲಿ ಗಲಾಟೆ ಘರ್ಷಣೆ ಸಂಭವಿಸಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟಾಗುವ ಸಂಭವವಿದ್ದು, ಸಾರ್ವನಿಕರ ಆಸ್ತಿಪಾಸ್ತಿಗೆ ನಷ್ಟವುಂಟಾಗುವ ಸಾಧ್ಯತೆ ಇರುತ್ತದೆ.
ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಗ್ಗಳದಹುಂಡಿ ಗ್ರಾಮದಲ್ಲಿ ನಾಗೇಶ ಎಂಬುವವರು  ಮೃತಪಟ್ಟಿದ್ದು ಈ ಸಂದರ್ಭವನ್ನು ಎರಡೂ ರಾಜಕೀಯ ಪಕ್ಷಗಳು ರಾಜಕೀಯವಾಗಿ ಬಳಸಿಕೊಂಡು ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿ ಪ್ರಕ್ಷುಬ್ದ ಪರಿಸ್ಥಿತಿ ನಿರ್ಮಾಣ ಮಾಡುವ ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗವುಂಟು ಮಾಡುವ ಸಾಧ್ಯತೆ ಇದ್ದು, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕರ್ತವ್ಯವನ್ನು ನಿರ್ವಹಿಸಲು ಅಡಚಣೆ ಉಂಟು ಮಾಡುವ ಸಾಧ್ಯತೆ ಇರುತ್ತದೆ ಎಂದು ಪೊಲೀಸ್ ಉಪಾಧೀಕ್ಷಕರು ವರದಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಸ್ತುಸ್ಥಿತಿಯನ್ನು ಅವಲೋಕಿಸಲಾಗಿ ಕಾನೂನು ಸುವ್ಯವಸ್ಥೆ ಹಾಗೂ ಕರ್ತವ್ಯಕ್ಕೆ ಅಡ್ಡಿಯಾಗುವುದನ್ನು, ಶಾಂತಿ ಭಂಗ ಉಂಟಾಗಬಾರದೆಂಬ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮುಂಜಾಗರೂಕತಾ ಕ್ರಮವಾಗಿ ನಿಷೇಧಾಜ್ಞೆ ಆದೇಶ ಜಾರಿಗೊಳಿಸಿರುವುದಾಗಿ ನಲಿನ್ ಅತುಲ್‍ರವರು ತಿಳಿಸಿದ್ದಾರೆ.

 ನಿಷೇಧಾಜ್ಞೆ ಅವಧಿಯಲ್ಲಿ ಐದು ಜನರಿಗಿಂತ ಹೆಚ್ಚು ಮಂದಿ ಒಂದೇ ಕಡೆ ಗುಂಪುಗೂಡುವಂತಿಲ್ಲ. ಬ್ಯಾಂಕ್‍ಗಳಲ್ಲಿನ ಭದ್ರತಾ ಸಿಬ್ಬಂದಿ ಹೊರತುಪಡಿಸಿ ಯಾವುದೇ ವ್ಯಕ್ತಿ ಮಾರಕಾಸ್ತ್ರ ಅಥವಾ ಆಯುಧಗಳನ್ನು ಹಿಡಿದುಕೊಂಡು ತಿರುಗಾಡುವುದನ್ನು ನಿಷೇಧಿಸಿದೆ. ಪೂರ್ವಾನುಮತಿ ಪಡೆಯದೇ ಧ್ವನಿ ವರ್ಧಕ ಬಳಸುವಂತಿಲ್ಲ, ಯಾವುದೇ ಮೆರವಣಿಗೆ, ಸಭೆ ಸಮಾರಂಭ ನಡೆಸುವಂತಿಲ್ಲ. ಸಾರ್ವಜನಿಕರ ಶಾಂತಿ ಸುವ್ಯವಸ್ಥೆಗೆ ಭಂಗ ತರುವಂತಹÀ ಯಾವುದೇ ಚಟುವಟಿಕೆಯನ್ನು ನಡೆಸುವಂತಿಲ್ಲ. ನಿಷೇಧಾಜ್ಞೆ ಆದೇಶವು ಚುನಾವಣೆಯಲ್ಲಿ ನಿರತರಾಗಿರುವ ಅಧಿಕಾರಿ, ಸಿಬ್ಬಂದಿಯವರಿಗೆ ಮತ್ತು ಸರ್ಕಾರಿ ಅಧಿಕಾರಿ, ನೌಕರರಿಗೆ, ಸರ್ಕಾರಿ ಕೆಲಸಕ್ಕೆ ನಿಯೋಜಿಸಲಾಗಿರುವ ವ್ಯಕ್ತಿಗೆ ಅನ್ವಯವಾಗುವುದಿಲ್ಲ. ಅಲ್ಲದೆ ಮೃತ ವ್ಯಕ್ತಿಯ ಅಂತಿಮ ಯಾತ್ರೆಯಲ್ಲಿ ಪಾಲ್ಗೊಳ್ಳುವವರಿಗೆ ಅನ್ವಯಿಸುವುದಿಲ್ಲ.
ನಿಷೇಧಾಜ್ಞೆ ಆದೇಶದ ಅನುಸಾರ ವಿಧಿಸಿರುವ ನಿಬಂಧನೆಗಳನ್ನು ಉಲ್ಲಂಘಿಸಿದವರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಕೊಳ್ಳೇಗಾಲ ಉಪವಿಭಾಗ ದಂಡಾಧಿಕಾರಿ ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ಚುನಾವಣಾಧಿಕಾರಿ ನಲಿನ್ ಅತುಲ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.


                    ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆ:
ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿದ ಹಿನ್ನಲೆ: ಮೊಕದ್ದಮೆ ದಾಖಲು 

ಚಾಮರಾಜನಗರ ಮಾರ್ಚ 27 : ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಪರವಾಗಿ ಮತಯಾಚಿಸುವ ವೇಳೆ ಮೆರವಣಿಗೆ ಮಾಡುವ ಮೂಲಕ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಪಡಿಸಿದರೆಂಬ ಕಾರಣಕ್ಕೆ ಮೊಕದ್ದÀಮೆ ದಾಖಲಾಗಿದೆ.

       ಯು.ಟಿ.ಖಾದರ್, ಪುಟ್ಟರಂಗಶೆಟ್ಟಿ, ಕಬ್ಬಹಳ್ಳಿ ಮಹೇಶ್ ಹಾಗೂ ಇತರೆ 150 ಜನ ಕಾರ್ಯಕರ್ತರು ಮಾರ್ಚ್ 25 ರಂದು  ಮನೆ ಮನೆಗೆ ತೆರಳಿ ಮತಯಾಚಿಸಲು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಬಿ. ಕುಮಾರಸ್ವಾಮಿ ರವರು ಅನುಮತಿ ಪಡೆದುಕೊಂಡಿದ್ದರು.  ಆದರೆ ಅನುಮತಿ ಉಲ್ಲಂಘಿಸಿ ವಾದÀ್ಯ, ಬ್ಯಾಂಡ್‍ಸೆಟ್ ಉಪಯೋಗಿಸಿ ಪಟಾಕಿ ಸಿಡಿಸಿ ಮೆರವಣಿಗೆ ಮಾಡುವ ಮೂಲಕ ಸಾರ್ವಜನಿಕರನ್ನು ತಡೆದು ಸಂಚಾರಕ್ಕೆ  ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಗುಂಡ್ಲುಪೇಟೆ ಟೌನ್ ಪೊಲೀಸ್ ಠಾಣೆಯಲ್ಲಿ ಬಿ. ಕುಮಾರಸ್ವಾಮಿ ಅವರ  ಮೊಕದ್ದಮೆ ದಾಖಲಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿ ನಲಿನ್ ಅತುಲ್ ರವರು ತಿಳಿಸಿದ್ದಾರೆ.



Sunday, 26 March 2017

26-03-2017 ಗುಂಡ್ಲುಪೇಟೆ ಉಪಚುನಾವಣೆ ಅಕ್ರಮ ಮದ್ಯ ವಶ

ಗುಂಡ್ಲುಪೇಟೆ ಉಪಚುನಾವಣೆ
                                 ಅಕ್ರಮ ಮದ್ಯ ವಶ

ಚಾಮರಾಜನಗರ, ಮಾ. 25:- ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನಲೆಯಲ್ಲಿ ಅಬಕಾರಿ ಅಧಿಕಾರಿಗಳು ವಿವಿಧÀಡೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಲಾದ ಮದ್ಯವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಗುಂಡ್ಲುಪೇಟೆ ತಾಲ್ಲೂಕು ಚಿಕ್ಕತುಪ್ಪೂರು ಗ್ರಾಮದ ನಿಂಗರಾಜು ಎಂಬುವರಿಂದ 0.720 ಮಿಲಿ ಲೀಟರ್, ಸೋಮ ಎಂಬುವರಿಂದ 0.900 ಮಿಲಿ ಲೀಟರ್, ಚಾಮರಾಜನಗರ ತಾಲ್ಲೂಕು ಮಲಿಯೂರು ಗ್ರಾಮದ ಬಸವಶೆಟ್ಟಿ ಅವರಿಂದ 0.900 ಮಿಲಿ ಲೀಟರ್,  ಹರವೆ ಗ್ರಾಮದ ಶೈಲಶೆಟ್ಟಿ ಎಂಬುವರಿಂದ 1.170 ಮಿಲಿ ಲೀಟರ್, ಕೊಳ್ಳೇಗಾಲ ತಾಲ್ಲೂಕು ಕುರುಬನಕಟ್ಟೆ ಗ್ರಾಮದ ದೇವರಾಜು ಎಂಬುವರಿಂದ 0.810 ಮಿಲಿ ಲೀಟರ್, ಅರೆಪಾಳ್ಯ ಗ್ರಾಮದ ಗೋವಿಂದ ಎಂಬುವರಿಂದ 0.900 ಮಿಲಿ ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಉಪ ವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿ ನಲಿನ್ ಅತುಲ್  ತಿಳಿಸಿದ್ದಾರೆ.
                                                        ವಿದ್ಯುತ್ ವ್ಯತ್ಯಯ

ಚಾಮರಾಜನಗರ, ಮಾ. 25 :- ಚಾಮರಾಜನಗರ ತಾಲ್ಲೂಕಿನ ಪಣ್ಯದಹುಂಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮಾರ್ಚ 27 ರಂದು ತ್ರೈಮಾಸಿಕ ನಿರ್ವಹಣಾ ಕಾರ್ಯ ನಡೆಯಲಿದೆ.  ಹೀಗಾಗಿ ಪಣ್ಯದಹುಂಡಿ ವ್ಯಾಪ್ತಿಯ ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Saturday, 25 March 2017

22-03-2016 ( ಕಳೆದ ವರ್ಷ ಪ್ರಕಟಿಸಿದ ವಿಶೇಷ ಸುದ್ದಿ)




ಚಾಮರಾಜನಗರ : ತಲೆಯಲ್ಲಿ ಮೂಡುತ್ತಿದೆ ಕೊಂಬು- ವೈದ್ಯಕೀಯ ಲೋಕಕ್ಕೆ ಸವಾಲ್

ಚಾಮರಾಜನಗರ : ವೈದ್ಯಕೀಯ ಹಾಗೂ ವಿಜ್ಞಾನ ಲೋಕಕ್ಕೆ ಸವಾಲಾಗಿದ್ದು, ಮಹಿಳೆಯ ತಲೆಯಲ್ಲಿ ಬರುತ್ತಿರುವ ಕೊಂಬಯಿದು ಕಂಡು ಬಂದದ್ದು ಚಾಮರಾಜನಗರ ಜಿಲ್ಲೆಯಲ್ಲಿ.
ಇದು ವಿಚಿತ್ರವಾದರೂ ನಂಬಲೇ ಬೇಕಾದ ಸಂಗತಿ, ತಲೆಯಲ್ಲಿ ಆಡಿಗೆ ಬರುವ ಹಾಗೆ ಕೊಂಬು ಬರುತ್ತಿರುವುದು ಗಮನಿಸಿದರೆ ಇದೊಂದು ವಿಸ್ಮಯವಾದರೂ ಸತ್ಯ ಸಂಗತಿ. ಇದು ಕಂಡು ಬಂದದ್ದು, ಗಡಿ ಚಾಮರಾಜನಗರ ಜಿಲ್ಲೆಯ ಪುಣಜನೂರು ಸಮೀಪದ ಹೊಸಪೋಡು ಕಾಲೋನಿಯಲ್ಲ್ಲಿ.
ಚಾಮರಾಜನಗರ ತಾಲ್ಲೂಕಿನ ಪುಣಜನೂರು ಗ್ರಾಮ ಪಂಚಾಯ್ತಿಗೆ ಸೇರಿದ ಹೊಸಪೋಡು ಕಾಲೋನಿಯಲ್ಲಿ ವಾಸ ಮಾಡುತ್ತಿರುವ ಸೋಲಿಗ ಮಾದಮ್ಮರವರ ತಲೆಯಲ್ಲಿ ಕಳೆದ ಐದಾರು ವರ್ಷಗಳಿಂದ ಕೊಂಬು ಬೆಳೆದು ತನಗೆ ತಾನಾಗಿ ಬಿದ್ದು, ಮತ್ತೆ ಕೊಂಬು ಬೆಳೆಯುವ ವಿಚಿತ್ರ ಘಟನೆ ನಿರಂತರವಾಗಿ ನಡೆಯುತ್ತಿದೆ.
ಮಾದಮ್ಮ ಮೂಲತಃ ಬೇಡಗುಳಿ ನಿವಾಸಿ, ಕಳೆದ ಹಲವಾರು ವರ್ಷಗಳಿಂದ ಬೇಡಗುಳಿಯಿಂದ ಹೊಸಪೋಡಿಗೆ ಬಂದು ಸಂಸಾರ ಸಾಗಿಸುತ್ತಿರುವ ಮಾದಮ್ಮಳಿಗೆ ತಲೆಯಲ್ಲಿ ಮೂಡಿದ ಕೊಂಬಿನದೇ ಚಿಂತೆ. ತಲೆಯಲ್ಲಿ ಕೊಂಬು ಇರುವ ತನಕ ವಿಪರೀತ ತಲೆ ನೋವು ಬಂದು ಜೀವನವೇ ಬೇಡ ಎನಿಸುವ ಸ್ಥಿತಿಗೆ ಬಂದಿದ್ದಾರೆ.
ಸೋಲಿಗ ಮಹಿಳೆ ಮಾದಮ್ಮಳ ತಲೆಯಲ್ಲಿ ಕೊಂಬು ಬೆಳೆಯುತ್ತಿರುವ ಸಂಗತಿಯನ್ನು ಸಂಚಾರಿ ವಕೀಲ ನಾಗೇಶ್ ಪ್ರಜಾ ಟಿವಿಗೆ ತಿಳಿಸಿದಾಗ, ಸ್ಥಳಕ್ಕೆ ಬೇಟಿ ಕೊಟ್ಟ ಪ್ರಜಾ ಟಿವಿ ಮಾದಮ್ಮಳ ತಲೆಯಲ್ಲಿ ಬೆಳೆದು ನಿಂತಿರುವ ಕೊಂಬು ಕಂಡು ಅಚ್ಚರಿಪಟ್ಟಿತ್ತು.
ತುಂಬು ಕುಟುಂಬದಲ್ಲಿರುವ ಮಾದಮ್ಮ ನಿತ್ಯವೂ ತಲೆಯಲ್ಲಿನ ಕೊಂಬಿನ ಚಿಂತೆಯಲ್ಲೇ ಸಮಯ ಕಳೆಯುತ್ತಿದ್ದಾರೆ. ಗಿರಿಜನ ಸೋಲಿಗ ಮಹಿಳೆಯ ತಲೆಯಲ್ಲಿನ ಕೊಂಬಿಗೆ ಮುಕ್ತಿ ದೊರಕಬೇಕಾಗಿದ್ದು, ಈ ಕೊಂಬು ತಲೆಯಲ್ಲಿ ಬೆಳೆಯುತ್ತಿರುವ ಹಿಂದಿನ ರಹಸ್ಯವೇನು, ಇದು ವೈದ್ಯಕೀಯ ಲೋಕಕ್ಕೆ ಸವಾಲಾಗಿದ್ದು, ಇಂದು ವೈಜ್ಞಾನಿಕವಾಗಿ ಬೆಳೆಯುತ್ತಿದ್ದರೂ ಸಹ ಮಾದಮ್ಮಳ ತಲೆಯಲ್ಲಿ ಬೆಳೆದು ನಿಂತಿರುವ ಕೊಂಬು ಇದಕ್ಕೆಲ್ಲಾ ಸವಲಾಗಿದೆ.
ಕಳೆದ ಐದಾರು ವರ್ಷಗಳಿಂದ ಆರೇಳು ತಿಂಗಳಿಗೊಮ್ಮೆ ಬೆಳೆಯುವ ಈ ಕೊಂಬಿನ ಹಿಂದಿನ ರಹಸ್ಯವೇನು ಎಂಬುದು ಮಾತ್ರ ನಿಗೂಡವಾಗಿದೆ.
ತಲೆಯಲ್ಲಿ ಮೂಡಿ ಬಂದಿರುವ ಕೊಂಬಿನಿಂದ ನರಕಯಾತನೆ ಅನುಭವಿಸುತ್ತಿರುವ ಸೋಲಿಗ ಮಹಿಳೆ ಮಾದಮ್ಮಳ ನೆರವಿಗೆ ಜಿಲ್ಲಾಡಳಿತ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮುಂದಾಗಿ ವೈದ್ಯಕೀಯ ಲೋಕಕ್ಕೆ ಸವಾಲಾಗಿರುವ ಈ ಕೊಂಬಿನ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ.


25-03-2017 ಗುಂಡ್ಲುಪೇಟೆ ಉಪಚುನಾವಣೆ ,ಮುಕ್ತ ಪಾರದರ್ಶಕ ಚುನಾವಣೆಗಾಗಿ ಕಟ್ಟುನಿಟ್ಟಿನ ಕ್ರಮ : ಜಿಲ್ಲಾಧಿಕಾರಿ ಬಿ. ರಾಮು ,ಚುನಾವಣಾ ಕರ್ತವ್ಯ ಅಧಿಕಾರಿ ನೌಕರರ ವೈದ್ಯಕೀಯ ಚಿಕಿತ್ಸೆಗೆ ವೈದ್ಯರ ನೇಮಕ,,ವೆಚ್ಚ ವೀಕ್ಷಕರಿಗೆ ಅಹವಾಲು ಸಲ್ಲಿಸಲು ಅವಕಾಶ

                           



ಮೂಲಭೂತ ಕರ್ತವ್ಯ ಪಾಲನೆ ಮಹತ್ತರ ಜವಾಬ್ದಾರಿ: ಜಿಲ್ಲಾ ನ್ಯಾಯಾಧೀಶರ ಅಭಿಮತ
ಚಾಮರಾಜನಗರ, ಮಾ. 25 :- ಪ್ರತಿಯೊಬ್ಬರು ಸ್ವಯಂ ಪ್ರೇರಿತರಾಗಿ ಮೂಲಭೂತ ಕರ್ತವ್ಯ ಪಾಲನೆ ಮಾಡುವಲ್ಲಿ ಮುಂದಾಗಬೇಕೆಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್. ಮಳವಳ್ಳಿ ತಿಳಿಸಿದರು. 
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮೂಲಭೂತ ಕರ್ತವ್ಯಗಳ ಕುರಿತು ವಿಚಾರ ಸಂಕಿರಣ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 
ಸಂವಿಧಾನದ ಮೂಲ ಆಶಯಗಳನ್ನು ಈಡೇರಿಸಬೇಕಿದೆ.  ರಾಷ್ಟ್ರಧÀ್ವಜ, ರಾಷ್ಟ್ರಗೀತೆಯನ್ನು ಗೌರವಿಸಬೇಕಾದದ್ದು ಮೂಲಭೂತ ಕರ್ತವ್ಯವಾಗಿದೆ.  ದೇಶಪ್ರೇಮ ಬೆಳಸಿಕೊಂಡರೆ ಕರ್ತವ್ಯಗಳ ಪಾಲನೆಯು ಆಗಲಿದೆ. ಸಹೋದರತೆ ಭಾವನೆಯನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕಿದೆ ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು. 
ಸಾರ್ವಜನಿಕ ಆಸ್ತಿಯನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ, ಕೆರೆ, ಅರಣ್ಯ,ವನ್ಯಜೀವಿಗಳನ್ನು ಪೋಷಿಸಿ ಕಾಪಾಡುವುದು ಸಹ ಮೂಲಭೂತ ಕರ್ತವ್ಯಗಳಲ್ಲಿ ಒಂದಾಗಿದೆ.  ಯಾವುದೇ ಅಮೂಲ್ಯ ಸಂಪತ್ತನ್ನು ನಾಶ ಮಾಡಬಾರದು.  ಕೆಡಕು ಉಂಟು ಮಾಡಬಾರದು ಎಂದು ನ್ಯಾಯಾಧೀಶರು ಸಲಹೆ ಮಾಡಿದರು. 
ವಿಶೇಷ ಉಪನ್ಯಾಸ ನೀಡಿದ ಪ್ರೊ|| ಪಿ. ದೇವರಾಜು ಅವರು  ಮಾತನಾಡಿ ದೇಶದ ಏಕತೆ ಹಾಗೂ ಸಮಗ್ರತೆಗೆ ಆದ್ಯತೆ ನೀಡಬೇಕಿದೆ.  ಮೂಲಭೂತ ಕರ್ತವ್ಯಗಳನ್ನು ಪಾಲಿಸಲು ನಿಷ್ಠೆ ತೋರಬೇಕು.  ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಪರಂಪರೆ, ಶ್ರಮವನ್ನು ಅರ್ಥಮಾಡಿಕೊಳ್ಳಬೇಕು.  ದೇಶದ ಸ್ವಾತಂತ್ರ್ಯ ಹೋರಾಟಗಾರರು, ಸಂಗ್ರಾಮ ಸೇರಿದಂತೆ ಎಲ್ಲಾ ಅಂಶಗಳನ್ನು ಗೌರವಿಸಬೇಕು ಎಂದರು.  
ಸಂವಿಧಾನದ ಮಹತ್ತರ ಆಶಯಗಳನ್ನು ಸಾಕಾರಗೊಳಿಸಬೇಕಿದೆ.  ಭವಿಷ್ಯ ಉಜ್ವಲವಾಗಲು ಪ್ರಬುದ್ಧ ರಾಷ್ಟ್ರ ನಿರ್ಮಾಣ ಮಾಡಲು ಪ್ರತಿಯೊಬ್ಬರು ಕಳಕಳಿಯಿಂದ  ಮುಂದಾಗಬೇಕಿದೆ ಎಂದರು. 
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಆರ್. ವಿರೂಪಾಕ್ಷ ಮಾತನಾಡಿ ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳ ನಡುವೆ ಸಂಬಂಧ ಇದೆ. ಹಕ್ಕುಗಳ ಜೊತೆ ಕರ್ತವ್ಯವು ಸಾಗಬೇಕಿದೆ. ಇತರರಿಗೆ ತೊಂದರೆ ನೀಡುವುದು ಸಲ್ಲದು.  ದಿನನಿತ್ಯದ ಜೀವನದಲ್ಲಿ ಮೂಲಭೂತ ಕರ್ತವ್ಯಗಳನ್ನು ಪಾಲಿಸುವುದು ಪ್ರಮುಖ ಜವಾಬ್ದಾರಿ ಎಂದು ಅರಿಯಬೇಕು ಎಂದರು. 
********************************************

                                    ಗುಂಡ್ಲುಪೇಟೆ ಉಪಚುನಾವಣೆ 

ಮುಕ್ತ ಪಾರದರ್ಶಕ ಚುನಾವಣೆಗಾಗಿ ಕಟ್ಟುನಿಟ್ಟಿನ ಕ್ರಮ : ಜಿಲ್ಲಾಧಿಕಾರಿ ಬಿ. ರಾಮು
                              ರಾಮಸಮುದ್ರ ಎಸ್.ವೀರಭದ್ರಸ್ವಾಮಿ 


ಚಾಮರಾಜನಗರ, ಮಾ. 25 ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಕ್ರಿಯೆಯನ್ನು ಮುಕ್ತ ಹಾಗೂ ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ, ಬಿ. ರಾಮು ತಿಳಿಸಿದರು.
  ಗುಂಡ್ಲುಪೇಟೆ ತಾಲ್ಲೂಕು ಕಚೇರಿಯಲ್ಲಿ ಇಂದು  ಚುನಾವಣಾ ಹಿನ್ನಲೆಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಟಿಯಲ್ಲಿ ಜಿಲ್ಲಾಧಿಕಾರಿಯವರು  ಈ ವಿಷಯ ತಿಳಿಸಿದರು
ಚುನಾವಣಾ  ನೀತಿ ಸಂಹಿತೆ ಪಾಲನೆಗೆ ನಿಗಾವಹಿಸಲು ಸೆಕ್ಟರ್ ಅಧಿಕಾರಿಗಳಾಗಿ 19 ತಂಡ ಒಳಗೊಂಡ 38 ಅಧಿಕಾರಿಗಳು, 6 ಪ್ಲೈಯಿಂಗ್ ಸ್ಕ್ವಾಡ್‍ಗೆ 24 ಅಧಿಕಾರಿಗಳು, ವೀಡಿಯೋ ಸರ್ವೇಯಲೆನ್ಸ್ 6 ತಂಡಕ್ಕೆ 6 ಅಧಿಕಾರಿಗಳು, ಒಂದು  ವೀಡಿಯೋ ವೀವಿಂಗ್ ತಂಡ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.  11 ಚೆಕ್ ಪೋಸ್ಟ್‍ಗಳನ್ನು ತೆರೆಯಲಾಗಿದ್ದು, 101 ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು.
ಮತದಾರರಿಗೆ ಆಮಿಷ ಒಡ್ಡುವ ಪ್ರಕರಣಗಳು, ದಾಖಲೆ ಇಲ್ಲದೆ ಸಾಗಿಸುವ ಹಣ, ಉಡುಗೊರೆ ವಸ್ತುಗಳು ಇನ್ನಿತರೆ ಸಾಮಗ್ರಿಗಳ ಮೇಲೆ ನಿಗಾ ಇಡಲಾಗಿದೆ.  ಚೆಕ್ ಪೋಸ್ಟ್‍ಗಳಲ್ಲಿ ತಪಾಸಣೆ ಮಾಡುವ ವೇಳೆ ವೀಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ  ಈಗಾಗಲೇ 10 ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ದಾಖಲಾಗಿವೆ. ಅಬಕಾರಿ ನಿಯಮ ಉಲ್ಲಂಘಿಸಿದ 54 ಪ್ರಕರಣಗಳು ದಾಖಲು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮತ, ಜಾತಿ ಆಧಾರದ ಮೇಲೆ ಮತಯಾಚನೆ ಮಾಡುವಂತಿಲ್ಲ.  ಚುನಾವಣಾ ಪ್ರಚಾರ, ಸಮಾರಂಭ ಮಾಡುವ ವೇಳೆ ಅಧಿಕಾರಿಗಳು ಗಮನಿಸಲಿದ್ದಾರೆ.  ಸಭೆ, ಸಮಾರಂಭಗಳಿಗೆ ಅನುಮತಿ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಮಾಡುವುದು ಕಂಡು ಬಂದರೆ ಕೂಡಲೇ ಪ್ರಕರಣ ದಾಖಲಿಸುತ್ತಿದ್ದಾರೆ ಎಂದರು.
ವಾಹನಗಳ ತಪಾಸಣೆಯನ್ನು ವ್ಯಾಪಕವಾಗಿ ಮಾಡಲಾಗುತ್ತಿದೆ. ದ್ವಿಚಕ್ರವಾಹನ, ಕೆ.ಎಸ್.ಆರ್.ಟಿ.ಸಿ. ಸೇರಿದಂತೆ ಎಲ್ಲಾ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಅಬಕಾರಿ ಅಧಿಕಾರಿಗಳು ಎಲ್ಲೆಡೆ ತಪಾಸಣೆಯನ್ನು ಚುರುಕುಗೊಳಿಸಿದ್ದಾರೆ.  ನಿಯಮ ಮೀರಿ ಅತೀ ಕಡಿಮೆ ಪ್ರಮಾಣದಲ್ಲಿ  ಮದ್ಯ ಸಂಗ್ರಹ ಮಾಡುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ.  ಹೀಗಾಗಿ ಮದ್ಯ ಮಾರಾಟ ವಹಿವಾಟು ಸಹ ಈ ಹಿಂದಿಗಿಂತ ಕಡಿಮೆ ಯಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಚುನಾವಣೆಯಲ್ಲಿ ಅಭ್ಯರ್ಥಿಗಳು ಮಾಡುವ  ವೆಚ್ಚದ ಬಗ್ಗೆ ಮಾಹಿತಿ ನೀಡಬೇಕಾಗಿದೆ.  ಚುನಾವಣಾ ಸಂಬಂಧ ಪ್ರಚಾರ, ಸಭೆ, ಸಮಾರಂಭಗಳು, ವಾಹನಗಳು ಇನ್ನಿತರ  ಅವಶ್ಯ ಸಾಮಗ್ರಿಗಳಿಗೆ ನಿರ್ಧಿಷ್ಟ ದರದಂತೆ ಲೆಕ್ಕ ನೀಡಬೇಕಿದೆ.  ಆ ಪ್ರಕಾರವೇ ಪರಿಗಣನೆಗೆ ತೆಗೆದು ಕೊಳ್ಳಲಾಗುತ್ತಿದೆ. ಪ್ರತಿ ಖರ್ಚುನ್ನು ಚುನಾವಣಾ ವೆಚ್ಚ ತಂಡ ಪರಿಶೀಲಿಸಿ ಅಭ್ಯರ್ಥಿಗಳ ಲೆಕ್ಕಕ್ಕೆ ತೆಗೆದುಕೊಳ್ಳಲಿದೆ ಎಂದರು.
ಚುನಾವಣಾ ಪ್ರಕ್ರಿಯೆ ಮೇಲೆ ನಿಗಾವಹಿಸಲು ಚುನಾವಣಾ ಆಯೋಗವು ವೀಕ್ಷಕರನ್ನು ನೇಮಕಮಾಡಿದ್ದು, ಈಗಾಗಲೇ ವೀಕ್ಷಕರು ಕಾರ್ಯಾರಂಭ ಮಾಡಿದ್ದಾರೆ.  ಸಾಮಾನ್ಯ ವೀಕ್ಷಕರಾಗಿ  ಇಂದ್ರ ವಿಕ್ರಮ್ ಸಿಂಗ್ ಅವರು ಇದ್ದು, ಅವರ ಮೊಬೈಲ್ ಸಂಖ್ಯೆ 8277027322 ಆಗಿದೆ.  ಚುನಾವಣಾ ವೆಚ್ಚ ವೀಕ್ಷಕರಾಗಿ ಕೆ. ಸುಭೇಂದ್ರ  ಅವರು ಇದ್ದು,  ಅವರ ಮೊಬೈಲ್ ಸಂಖ್ಯೆ: 9405512345 ಆಗಿದೆ.  ಪೊಲೀಸ್ ಚುನಾವಣಾ ವೀಕ್ಷಕರಾಗಿ ಜಾಕೋಬ್ ಜಾಬ್ ಅವರು ಇದ್ದು ಅವರ ಮೊಬೈಲ್ ಸಂಖ್ಯೆ: 09497996949 ಆಗಿದೆ. ವೀಕ್ಷಕರ ಸ್ಥಿರ ದೂರವಾಣಿ ಸಂಖ್ಯೆಯು 08226-223830 ಮತ್ತು 223840 ಆಗಿರುತ್ತದೆ. ಸಾರ್ವಜನಿಕರು ಚುನಾವಣಾ ಸಂಬಂಧ ದೂರುಗಳು, ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದರು.
    ವಿಧಾನ ಸಭಾ ಕ್ಷೇತ್ರದಲ್ಲಿ 21.03.2017 ಕ್ಕೆ ಅನ್ವಯಿಸುವಂತೆ 1,00,144 ಪುರುಷ ಮತದಾರರು, 1,00,701 ಮಹಿಳಾ ಮತದಾರರು, ಇತರೆ 17 ಮತದಾರರು ಸೇರಿದಂತೆ ಒಟ್ಟು 2,00,862 ಮತದಾರರು ಇದ್ದಾರೆ,  ಒಟ್ಟು 250 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.  ಈ ಪೈಕಿ 33 ಸೂಕ್ಷ್ಮ, 39 ಅತಿ ಸೂಕ್ಷ್ಮ, 17 ರಿಮೋಟ್ ಏರಿಯಾ ಮತಗಟ್ಟೆಗಳು ಹಾಗೂ 161 ಸಾಧಾರಣಾ ಮತಗಟ್ಟೆಗಳಾಗಿ ವಿಂಗಡಿಸಲಾಗಿದೆ. ಚುನಾವಣೆಗೆ ಅಗತ್ಯವಿರುವ 351 ಬ್ಯಾಲೆಟ್ ಯೂನಿಟ್ ಹಾಗೂ 288 ಕಂಟ್ರೋಲ್ ಯುನಿಟ್‍ಗಳನ್ನು ಗುಂಡ್ಲುಪೇಟೆ ತಾಲ್ಲೂಕು ತಹಶೀಲ್ದಾರ್ ಸುಪರ್ದಿಗೆ ನೀಡಲಾಗಿದ್ದು ಅವುಗಳನ್ನು ಪೊಲೀಸ್ ಬಂದೋಬಸ್ತ್‍ನೊಡನೆ ಸುರಕ್ಷಿತವಾಗಿ ಇಡಲಾಗಿದೆ.
ಚುನಾವಣಾ ಆಯೋಗವು ಹೊಸದಾಗಿ ಅನುಷ್ಟಾನಗೊಳಿಸಿರುವ ವಿ.ವಿ.ಪಿ.ಎ.ಟಿ.(ವೋಟರ್ಸ್ ವೆರಿಪೈಯಬಲ್ ಪೇಪರ್ ಆಡಿಟ್ ಟ್ರಯಲ್) ಗಳನ್ನು ಉಪ ಚುನಾವಣೆಗೆ ಉಪಯೋಗಿಸಲಾಗುತ್ತಿದೆ. ಇದರಿಂದ ಮತದಾರರು ಅವರು ಯಾವ ಅಭ್ಯರ್ಥಿಗೆ ಮತ ಚಲಾಯಿಸಿದ್ದಾರೆ ಎಂಬುದು ಮತದಾರರಿಗೆ ಖಾತರಿಯಾಗುತ್ತದೆ.   ವಿ.ವಿ.ಪಿ.ಎ.ಟಿ. ರಾಜ್ಯದಲ್ಲೇ ಮೊದಲು  ಉಪ ಚುನಾವಣೆಗೆ ಬಳಕೆಯಾಗುತ್ತಿದೆ ಎಂದರು.
ಗುಂಡ್ಲುಪೇಟೆ ಪಟ್ಟಣದ ಸೆಂಟ್ ಜಾನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಸ್ಟರಿಂಗ್, ಡೀಮಸ್ಟರಿಂಗ್  ಮತ್ತು ಮತ ಎಣಿಕೆ ಕಾರ್ಯವನ್ನು ನಡೆಸಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಬಿ.ರಾಮು ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕುಲದೀಪ್ ಕುಮಾರ್ ಆರ್. ಜೈನ್  ಅವರು ಮಾತನಾಡಿ ಚುನಾವಣೆಗೆ ಸಾಕಷ್ಟು ಪೊಲೀಸ್‍ರನ್ನು ನಿಯೋಜಿಸಲಾಗಿದೆ. ಮುಕ್ತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಅಗತ್ಯ ವಿರುವ ಎಲ್ಲಾ ಕ್ರಮಗಳನ್ನು ಪೊಲೀಸ್ ಇಲಾಖೆಯಿಂದಲೂ ತೆಗೆದುಕೊಳ್ಳಲಾಗಿದೆ ಎಂದರು.
 ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದ ಚುನಾವಣಾಧಿಕಾರಿ ನಲಿನ್ ಅತುಲ್, ಸಾಮಾನ್ಯ ವೀಕ್ಷಕರಾದ  ಇಂದ್ರ ವಿಕ್ರಮ್ ಸಿಂಗ್,  ಚುನಾವಣಾ ವೆಚ್ಚ ವೀಕ್ಷಕರಾದ ಕೆ. ಸುಭೇಂದ್ರ, ಪೊಲೀಸ್ ಚುನಾವಣಾ ವೀಕ್ಷಕರಾದ ಜಾಕೋಬ್ ಜಾಬ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ|| ಕೆ. ಹರೀಶ್ ಕುಮಾರ್, ಅಬಕಾರಿ ಉಪಾಯುಕ್ತ ನಾಗೇಶ್ ಸುದ್ದಿಗೋಷ್ಟಿಯಲ್ಲಿ ಹಾಜರಿದ್ದರು.

ಗುಂಡ್ಲುಪೇಟೆ ಉಪಚುನಾವಣೆ
ಚುನಾವಣಾ ಕರ್ತವ್ಯ ಅಧಿಕಾರಿ ನೌಕರರ ವೈದ್ಯಕೀಯ ಚಿಕಿತ್ಸೆಗೆ ವೈದ್ಯರ ನೇಮಕ

ಚಾಮರಾಜನಗರ, ಮಾ. 25-ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂಬಂಧಿಸಿದಂತೆ ನೇಮಕವಾಗಿರುವ ಅಧಿಕಾರಿ ನೌಕರ ತಂಡಕ್ಕೆ ಆರೋಗ್ಯ ಸಮಸ್ಯೆ ಉಂಟಾದಾಗ ತ್ವರಿತವಾಗಿ ಚಿಕಿತ್ಸೆ ನೀಡುವ ಸಲುವಾಗಿ ವೈದ್ಯಕೀಯ ತಂಡವನ್ನು ನಿಯೋಜಿಸಲಾಗಿದೆ.
ಆರ್.ಬಿ. ಎಸ್.ಕೆ.ಯ ಡಾ|| ಟಿ. ರವಿ (ಮೊ:9986403389) ಡಾ|| ಅನಿಲ್ ಕುಮಾರ್ (ಮೊ:9448165229 ಮತ್ತು 7996827737),ಹಂಗಳ, ಪಿ.ಹೆಚ್.ಸಿ.  ವೈದ್ಯಕೀಯ ಅಧಿಕಾರಿ ಡಾ|| ಸಂದೀಪ್ ಕುಮಾರ್(ಮೊ:8277509671) ಆರ್.ಬಿ.ಎಸ್.ಕೆ.ಯ ವೈದ್ಯಕೀಯ ಸಿಬ್ಬಂದಿ ಪೂರ್ಣಿಮಾ(ಮೊ:9164403745), ನಂಜುಂಡಸ್ವಾಮಿ (ಮೊ:9845417157) ರವರನ್ನು ನೇಮಿಸಲಾಗಿದೆ ಎಂದು  ಜಿಲ್ಲಾ ಚುನಾವಣಾಧಿಕಾರಿ ಬಿ. ರಾಮುರವರು ತಿಳಿಸಿದ್ದಾರೆ.
ಸೆಕ್ಟರ್ ಅಧಿಕಾರಿ ನೇಮಕ
ಚಾಮರಾಜನಗರ, ಮಾ. 25ಗುಂಡ್ಲುಪೇಟೆ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ಹೆಚ್ಚುವರಿ ಮತಗಟ್ಟೆ ಸಂಖ್ಯೆ 199 ರಿಂದ 205 ಮತ್ತು 210 ರಿಂದ 219ವರೆಗಿನ ವ್ಯಾಪ್ತಿಗೆ ಸೆಕ್ಟರ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ಸೆಕ್ಟರ್ ಅಧಿಕಾರಿಯಾಗಿ  ಸಹಾಯಕ ಕೃಷಿ ನಿರ್ದೇಶಕರಾದ ಕೆ.ಎಸ್. ಮೋಹನ್ ದಾಸ್ (ಮೊ:8277930762) ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಎಲ್. ರಘು( ಮೊ: 9480858124) ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ


ಗುಂಡ್ಲುಪೇಟೆ ಉಪಚುನಾವಣೆ

ವೆಚ್ಚ ವೀಕ್ಷಕರಿಗೆ ಅಹವಾಲು ಸಲ್ಲಿಸಲು ಅವಕಾಶ
ಚಾಮರಾಜನಗರ, ಮಾ. 25- ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂಬಂಧಿಸಿದಂತೆ ಚುನಾವಣಾ ವೆಚ್ಚ ವೀಕ್ಷಕರಾಗಿ ಕೆ. ಸುಬೇಂದ್ರ ಅವರು ನೇಮಕವಾಗಿದ್ದು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಚುನಾವಣಾ ವೆಚ್ಚ ವೀಕ್ಷಕರ ಮೊಬೈಲ್ ಸಂಖ್ಯೆಯು 9405512345 ಆಗಿರುತ್ತದೆ. ಚುನಾವಣಾ ವಿಷಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಲು ಚುನಾವಣಾ ವೀಕ್ಷಕರನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.


Friday, 24 March 2017

24-03-2017 ಅಪ್ತಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗೆ ಸಜೆ.ಗುಂಡ್ಲುಪೇಟೆ ಉಪ ಚುನಾವಣೆ : ದಾಖಲಾತಿ ಇಲ್ಲದ ನಗದು ವಶ,,ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆ : ಅಂತಿಮ ಕಣದಲ್ಲಿ 7 ಅಭ್ಯರ್ಥಿಗಳು


                               ಅಪ್ತಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗೆ ಸಜೆ
ಚಾಮರಾಜನಗರ, ಮಾ. 24:- ಅಪ್ತಾಪ್ತ ಬಾಲಕಿಯನ್ನು ಪ್ರೀತಿಸುವುದಾಗಿ ಹಾಗೂ ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 4 ವರ್ಷ 6 ತಿಂಗಳು ಸಜೆ ಹಾಗೂ 4 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಕೊಳ್ಳೇಗಾಲ ತಾಲೂಕು ಸತ್ತೇಗಾಲ ಜಾಗೇರಿ ಕರಾಚಿಕಟ್ಟೆ ಗ್ರಾಮದ ಪ್ರವೀಣ್ ಶಿಕ್ಷೆಗೆ ಗುರಿಯಾದ ವ್ಯಕ್ತಿ. ಈತ 2015ರ ಮೇ 15 ಹಾಗೂ 20ರಂದು ಬಾಲಕಿಯ ತಂದೆ ವ್ಯವಸಾಯ ಮಾಡಿಕೊಂಡಿರುವ ಜಮೀನಿನ ಮನೆಯಲ್ಲಿ ಟಿವಿ ನೋಡುವ ನೆಪ ಮಾಡಿಕೊಂಡು ಒಬ್ಬಳೇ ಇದ್ದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುತ್ತೇನೆಂದು ಹಾಗೂ ವಿವಾಹವಾಗುವುದಾಗಿ ನಂಬಿಸಿ ಪುಸಲಾಯಿಸಿ ಬಲವಂತವಾಗಿ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ರುಜುವಾತಾದ ಹಿನ್ನೆಲೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಲಕ್ಷ್ಮಣ್ ಎಫ್ ಮಳವಳ್ಳಿ ಅವರು ಅಪರಾಧಿಗೆ ಭಾರತೀಯ ದಂಡ ಸಂಹಿತೆ ಕಲಂ 354 (ಎ) 420 ಐಪಿಸಿ ಹಾಗೂ ಪೋಕ್ಸೋ ಕಾಯಿದೆಯಡಿ 4 ವರ್ಷ 6 ತಿಂಗಳು ಸಜೆ 4 ಸಾವಿರ ರೂ. ದಂಡ ವಿಧಿಸಿ ಮಾರ್ಚ್ 23ರಂದು ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ (ಪೋಕ್ಸೋ) ಎಸ್. ನಾಗರಾಜು ಕಾಮಗೆರೆ ವಾದ ಮಂಡಿಸಿದ್ದರು.
ಮಾ. 25ರಂದು ಪೊಲೀಸ್ ದೂರು ಪ್ರಾಧಿಕಾರ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ 
ಚಾಮರಾಜನಗರ, ಮಾ. 24 - ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಮತ್ತು ಪಟ್ಟಣ ಪೊಲೀಸ್ ಠಾಣೆ ಸಂಯುಕ್ತ ಆಶ್ರಯದಲ್ಲಿ ಪೊಲೀಸ್ ದೂರು ಪ್ರಾಧಿಕಾರ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಮಾರ್ಚ್ 25ರಂದು ಬೆಳಿಗ್ಗೆ 10 ಗಂಟೆಗೆ ನಗರದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಏರ್ಪಡಿಸಲಾಗಿದೆ.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಪಿ. ನಂದೀಶ್ ಕಾರ್ಯಕ್ರಮ ಉದ್ಘಾಟಿಸುವರು. ಪಟ್ಟಣ ಪೊಲೀಸ್ ಠಾಣೆ ನಿರೀಕ್ಷಕರಾದ ಮಹದೇವಯ್ಯ ಅಧ್ಯಕ್ಷತೆ ವಹಿಸುವರು. ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ಶಿವಪ್ರಸನ್ನ, ಸಾಧನಾ ಸಂಸ್ಥೆ ಅಧ್ಯಕ್ಷರಾದ ಟಿ.ಜೆ. ಸುರೇಶ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.
ವಕೀಲರಾದ ಡಿ.ಎಂ. ಶ್ರೀಕಂಠಮೂರ್ತಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದÉ.

ಮಾ. 25ರಂದು ಹರವೆ ಭಾಗದಲ್ಲಿ ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಮಾ. 24  ಚಾಮುಂಡೇಶ್ವರಿ ವಿದ್ಯುತ್ ಪ್ರಸರಣ ನಿಗಮವು ತಾಲೂಕಿನ ಹರವೆ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಮಾರ್ಚ್ 25ರಂದು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಹರವೆ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸಾರ್ವಜನಿಕರು ವಿದ್ಯುತ್ ಸರಬರಾಜು ನಿಗಮದೊಂದಿಗೆ ಸಹಕರಿಸುವಂತೆÉ ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

                         ಹುಡುಗಿಯ ಪತ್ತೆಗೆ ಮನವಿ

ಚಾಮರಾಜನಗರ, ಮಾ. 24 ಕೊಳ್ಳೇಗಾಲ ತಾಲೂಕು ಮಲ್ಲಹಳ್ಳಿಮಾಳ ಗ್ರಾಮದ ಚಿಕ್ಕರಂಗಯ್ಯ ಅವರು ಮಗಳಾದ ಅಶ್ವಿನಿ ಎಂಬಾಕೆ ಕಾಣೆಯಾಗಿರುವ ಕುರಿತು ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಅಶ್ವಿನಿ ಮಾರ್ಚ್ 11ರಂದು ಕೊಳ್ಳೇಗಾಲ ಬ್ಯಾಂಕಿನಿಂದ ಹಣ ತರುವುದಾಗಿ ಹೇಳಿ ಹೋದವಳು ಇದುವರೆವಿಗೂ ಮನೆಗೆ ವಾಪಸ್ಸು ಬಂದಿರುವುದಿಲ್ಲ ಎಂದು ದೂರು ನೀಡಿರುತ್ತಾರೆ.
17 ವರ್ಷದ ಅಶ್ವಿನಿ ಎಣ್ಣೆಗೆಂಪು ಮೈ ಬಣ್ಣ, ಕೋಲುಮುಖ, ಸುಮಾರು 4.6 ಅಡಿ ಎತ್ತರವಿದ್ದು ಕನ್ನಡ ಭಾಷೆ ಮಾತನಾಡುತ್ತಾಳೆ. ಕನ್ನಡ ಮತ್ತು ಇಂಗ್ಲೀಷ್ ಓದು ಬರಹ ಬಲ್ಲವಳಾಗಿದ್ದಾಳೆ. ಬಲಗೈನ ತೋಳಿನ ಬಳಿ ಸುಮಾರು ಎರಡು ಇಂಚು ಉದ್ದದ ಹಳೇ ಗಾಯದ ಗುರುತಿದೆ.
ಈಕೆಯ ಸುಳಿವು ಸಿಕ್ಕಲ್ಲಿ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆ ದೂ.ಸಂ. 08224-252051, ಮೊಬೈಲ್ 9480804655 ಗೆ ಅಥವಾ ಚಾಮರಾಜನಗರ ಜಿಲ್ಲಾ ನಿಯಂತ್ರಣ ಕೊಠಡಿ ದೂ.ಸಂ. 08226-222398ಗೆ ಮಾಹಿತಿ ನೀಡುವಂತೆ ಕೊಳ್ಳೇಗಾಲ ಗ್ರಾಮಾಂತರ ಠಾಣೆಯ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಪ್ರಕಟಣೆಯಲ್ಲಿ ಕೋರಿದ್ದಾರೆ.


                                                  ಕ್ಷಯರೋಗಕ್ಕೆ ಚಿಕಿತ್ಸೆ ಸೌಲಭ್ಯ 
ಚಾಮರಾಜನಗರ, ಮಾ. 24 -ಕ್ಷಯರೋಗ ದಿನವನ್ನು ವಿಶ್ವದೆಲ್ಲೆಡೆ ಮಾರ್ಚ್ 24 ರಂದು ಆಚರಿಸಲಾಗಿದ್ದು ಈ ಹಿನ್ನೆಲೆಯಲ್ಲಿ ಜಿಲ್ಲೆಂiÀiಲ್ಲಿ ಕ್ಷಯರೋಗ ಪ್ರಕರಣಗಳ ಕುರಿತು ಒಂದು ಅವಲೋಕನ ನಡೆಸಲಾಗಿದೆ.
ಚಾಮರಾಜನಗರ ಜಿಲೆÉ್ಲಯಲ್ಲಿ 2016ರ ಸಾಲಿನಲ್ಲಿ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ 11504 ಕ್ಷಯರೋಗ ಲಕ್ಷಣ ಇರುವವರನ್ನು ಕಫ ಪರೀಕ್ಷೆಗೆ ಒಳಪಡಿಸಲಾಗಿದೆ. ಅದರಲ್ಲಿ ಒಟ್ಟು 1170 ಕ್ಷಯರೋಗಿಗಳು ಪತ್ತೆಯಾಗಿದ್ದು 545 ಕಫದಲ್ಲಿ ಟಿಬಿ ಕ್ರಿಮಿಗಳಿರುವ ರೋಗಿಗಳು ಕಂಡು ಬಂದಿರುತ್ತಾರೆ. ಇವರಲ್ಲಿ 593 ರೋಗಿಗಳು ಗುಣಮುಖರಾಗಿರುತ್ತಾರೆ ಮತ್ತು 66 ರೋಗಿಗಳು ಮೃತಪಟ್ಟಿರುತ್ತಾರೆ.
1054 ಕ್ಷಯರೋಗಿಗಳಿಗೆ ಹೆಚ್ ಐ ವಿ ಪರೀಕ್ಷೆ ಮಾಡಿಸಿದ್ದು ಅದರಲ್ಲಿ 78 ಹೆಚ್ ಐ ವಿ ಪ್ರಕರಣಗಳು ಕಂಡುಬಂದಿದು ಇವರೆಲ್ಲರನ್ನೂ ಚಿಕಿತ್ಸೆಗೆ ಒಳಪಡಿಸಲಾಗಿದೆ.
2016ರ ಸಾಲಿನಲ್ಲಿ ಹೆಚ್‍ಐವಿ ಇರುವ 10005 ರೋಗಿಗಳಿಗೆ ಟಿಬಿ ಪರೀಕ್ಷೆಗೆ ಒಳಪಡಿಸಿದ್ದು ಅದರಲ್ಲಿ 68 ಟಿಬಿ ಹೆಚ್‍ಐವಿ ಪ್ರಕರಣಗಳು ಕಂಡುಬಂದಿದ್ದು ಇವರಲ್ಲಿ 50 ಟಿಬಿ ಹೆಚ್‍ಐವಿ ರೋಗಿಗಳು ಚಿಕಿತ್ಸೆಗೊಳಗಾದವರು. 34 ಗುಣ ಹೊಂದಿದವರು ಹಾಗೂ 12 ಮೃತಪಟ್ಟಿರುತ್ತಾರೆ.
ಪರಿಷ್ಕøತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿ 2016 ರಿಂದ ಎಂಡಿಆರ್ ಮತ್ತು ಎಕ್ಸ್‍ಡಿಆರ್ ಕ್ಷಯರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದು ಜಿಲ್ಲೆಯ 2016ನೇ ಸಾಲಿನಲ್ಲಿ 475 ಎಂಡಿಆರ್ ಲಕ್ಷಣ ಇರುವವರನ್ನು ಪರೀಕ್ಷೆಗೆ ಒಳಪಡಿಸಿದ್ದು ಅದರಲ್ಲಿ 10 ಎಂಡಿಆರ್ ಹಾಗೂ 02 ಎಕ್ಸ್‍ಡಿಆರ್ ಕ್ಷಯರೋಗಿಗಳು ಪತ್ತೆಯಾಗಿರುತ್ತಾರೆ. ಅದರಲ್ಲಿ 9 ಎಂಡಿಆರ್ 2 ಎಕ್ಸ್‍ಡಿಆರ್ ಕ್ಷಯರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮದಡಿ ಖಾಸಗಿ ವೈದ್ಯರು, ಖಾಸಗಿ ಆಸ್ಪತ್ರೆಗಳು ಮತ್ತು ಖಾಸಗಿ ಪ್ರಯೋಗ ಶಾಲೆಗಳು ಕ್ಷಯರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆದೇಶದನ್ವಯ ನಿಕ್ಷಯ್‍ನಲ್ಲಿ ನೋಂದಣಿ ಮಾಡಿಸಿ ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರಗಳಿಗೆ ವರದಿ ಸಲ್ಲಿಸಲು ಮನವಿ ಸಲ್ಲಿಸಲಾಗಿದೆ.
ಇಲ್ಲಿಯವರೆಗೆ 124 ಖಾಸಗಿ ಆಸ್ಪತ್ರೆಗಳು ನೊಂದಣಿಯಾಗಿದ್ದು ಇವುಗಳಲ್ಲಿ 119 ವೈದ್ಯರು ನಿಕ್ಷಯ್‍ನಲ್ಲಿ ನೋಂದಣಿಯಾಗಿದ್ದು ಇಲ್ಲಿಯವರೆಗೆ 25 ಕ್ಷಯರೋಗಿಗಳನ್ನು ನೊಂದಾಯಿಸಿದ್ದಾರೆ.
ಎರಡು ವಾರಕ್ಕಿಂತÀ ಹೆಚ್ಚು ಕೆಮ್ಮು, ಸಂಜೆ ವೇಳೆ ಜ್ವರ, ಎದೆನೋವು, ತೂಕ ಕಡಿಮೆಯಾಗುವುದು, ಹಸಿವು ಆಗದಿರುವುದು, ಕೆಲವೊಮ್ಮ ಕಫದಲ್ಲಿ ರಕ್ತ ಬೀಳುವುದು ಈ ರೋಗದ ಲಕ್ಷಣಗಳಾಗಿವೆ. ಈ ಲಕ್ಷಣಗಳು ಯಾವುದೇ ವ್ಯಕ್ತಿಯಲ್ಲಿ ಕಂಡುಬಂದರೆ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಎರಡು ಬಾರಿ ಕಫ ಪರೀಕ್ಷೆ ಮಾಡಿಸುವುದು ಮತ್ತು ಮಕ್ಕಳಲ್ಲಿ ಹೆಚ್‍ಐವಿ ಸೋಂಕಿತರಲ್ಲಿ ಮಧುಮೇಹ ರೋಗವಿರುವವರಲ್ಲಿ ಶ್ವಾಸಕೋಶೇತರ ಕ್ಷಯ ಇರುವವರಿಗೆ ಬೇಗ ಕ್ಷಯರೋಗ ಪತ್ತೆ ಹಚ್ಚಲು  ಸಿಬಿ - ನಾಟ್  ಪರೀಕ್ಷೆಗೆ ಒಳಪಡಿಸಲಾಗುವುದು.
ಎಲ್ಲರೂ ಒಗ್ಗೂಡಿ ಕ್ಷಯರೋಗವನ್ನು ನಿರ್ಮೂಲನೆಗೊಳಿಸೋಣ ಎಂಬುದು ಈ ಬಾರಿಯ ವಿಶ್ವ ಕ್ಷಯ ದಿನಾಚರಣೆಯ ಘೋಷಣೆಯಾಗಿದೆ. ಈ ನಿಟ್ಟಿನಲ್ಲಿ ಸರ್ವರ ಸಹಕಾರ ಅವಶ್ಯವಿದೆ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಅವರು ಮನವಿ ಮಾಡಿದ್ದಾರೆ.

ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆ : ಅಂತಿಮ ಕಣದಲ್ಲಿ 7 ಅಭ್ಯರ್ಥಿಗಳು


ಚಾಮರಾಜನಗರ, ಮಾ. - ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ನಾಮಪತ್ರಗಳ ವಾಪಸ್ಸು ಪಡೆಯುವ ಅವಧಿ ಮುಕ್ತಾಯವಾಗಿದ್ದು, ಒಟ್ಟು 9 ಅಭ್ಯರ್ಥಿಗಳ ಪೈಕಿ ಇಬ್ಬರು ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂದಕ್ಕೆ ಪಡೆದಿದ್ದಾರೆ.  ಹೀಗಾಗಿ ಅಂತಿಮವಾಗಿ ಚುನಾವಣಾ ಕಣದಲ್ಲಿ 7 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ.

ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿದ್ದ ಪಿ.ಎಸ್.ಯಡೂರಪ್ಪ ಹಾಗೂ ಬಿ.ಸಿ. ಶೇಖರರಾಜು ತಮ್ಮ ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆದಿದ್ದಾರೆ.

ಅಂತಿಮವಾಗಿ ಉಳಿದಿರುವ ಅಭ್ಯರ್ಥಿಗಳ ವಿವರ : ಸಿ.ಎಸ್.ನಿರಂಜನಕುಮಾರ್-ಭಾರತೀಯ ಜನತಾ ಪಾರ್ಟಿ, (ಚಿಹ್ನೆ- ಕಮಲ) ಎಂ.ಸಿ. ಮೋಹನ್ ಕುಮಾರಿ @ ಗೀತಾ – ಇಂಡಿಯನ್ ನ್ಯಾಷನಲ್ ಕಾಂಗ್ರೇಸ್, (ಚಿಹ್ನೆ- ಕೈ), ಶಿವರಾಜು.ಎಂ-ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಎ) (ಚಿಹ್ನೆ -ಹೊಲಿಗೆ ಯಂತ್ರ), ಎಂ.ಹೊನ್ನೂರಯ್ಯ -ಭಾರತೀಯ ಡಾ|| ಬಿ.ಆರ್. ಅಂಬೇಡ್ಕರ್ ಜನತಾ ಪಕ್ಷ (ಚಿಹ್ನೆ- ಆಟೋ-ರಿಕ್ಷಾ), ಮಹದೇವಪ್ರಸಾದ್.ಬಿ - ಪಕ್ಷೇತರ (ಚಿಹ್ನೆ- ಹವಾ ನಿಯಂತ್ರಕ), ಎಂ. ಶಿವರಾಮು- ಪಕ್ಷೇತರ (ಚಿಹ್ನೆ – ತೆಂಗಿನಕಾಯಿ), ಕೆ. ಸೋಮಶೇಖರ್- ಪಕ್ಷೇತರ (ಚಿಹ್ನೆ- ಬಳೆಗಳು),  

ಏ 2 ರಂದು ಪಲ್ಸ್ ಪೋಲಿಯೊ : ಪೂರ್ವಸಿದ್ಧತೆ ಕೈಗೊಳ್ಳಲು ಡಿಸಿ ಸೂಚನೆ

ಚಾಮರಾಜನಗರ, ಮಾ. - ಜಿಲ್ಲೆಯಲ್ಲಿ ಮೊದಲ ಸುತ್ತಿನ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಏಪ್ರಿಲ್ 2 ರಂದು ಹಾಗೂ ಎರಡನೇ ಸುತ್ತಿನ ಪಲ್ಸ್ ಪೋಲಿಯೊ ಕಾರ್ಯಕ್ರಮವನ್ನು ಏಪ್ರಿಲ್ 30 ರಂದು  ವ್ಯಾಪಕವಾಗಿ ಹಮ್ಮಿಕೊಳ್ಳಲಾಗುತ್ತಿದ್ದು,  ಇದಕ್ಕಾಗಿ ಪೂರ್ವಸಿದ್ದತಾ ಕ್ರಮಗಳನ್ನು ಕೈಗೊಳ್ಳುವಂತೆ  ಜಿಲ್ಲಾಧಿಕಾರಿ ಬಿ.ರಾಮು ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪಲ್ಸ್ ಪೋಲಿಯೋ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಆಗ ತಾನೆ ಹುಟ್ಟಿದ ಮಗುವಿನಿಂದ ಹಿಡಿದು 5 ವರ್ಷದವರೆಗಿನ ಎಲ್ಲಾ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ನಾಲ್ಕು ತಾಲೂಕುಗಳಲ್ಲಿಯೂ ಪಲ್ಸ್ ಪೋಲಿಯೋ ಹನಿ ನೀಡುವ ಕೇಂದ್ರಗಳನ್ನು ತೆರೆಯಬೇಕು. ಶಾಲೆ ಅಂಗನವಾಡಿಗಳಲ್ಲಿ ಪಲ್ಸ್ ಪೋಲಿಯೋ ಬೂತುಗಳನ್ನು ತೆರೆಯಲು ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಎಲ್ಲಾ ಕ್ರಮ ತೆಗೆದುಕೊಳ್ಳಬೇಕು ಎಂದು  ಜಿಲ್ಲಾಧಿಕಾರಿ ತಿಳಿಸಿದರು.
ಪಲ್ಸ್ ಪೋಲಿಯೋ ಹನಿ ಶೇಖರಣೆಗೆ ನಿರಂತರ ವಿದ್ಯುತ್ ಸರಬರಾಜು ಅವಶ್ಯಕವಿದೆ. ಈ ಹಿನ್ನೆಲೆಯಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ಪ್ರಾರಂಭವಾಗುವ 3 ದಿನಗಳ ಮೊದಲು ಹಾಗೂ ನಂತರದ 4 ದಿನಗಳ ವರೆಗೆ  ನಿರಂತರವಾಗಿ ಪಟ್ಟಣ  ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ 24 ಗಂಟೆಗಳ ಅವಧಿಯು ವಿದ್ಯುತ್ ಸರಬರಾಜು ಮಾಡಬೇಕು. ಯಾವುದೇ ವಿದ್ಯುತ್ ಅಡಚಣೆಗೆ ಅವಕಾಶವಾಗದ ಹಾಗೆ ಚೆಸ್ಕಾಂ ಅಧಿಕಾರಿಗಳು  ನೋಡಿಕೊಳ್ಳಬೇಕೆಂದರು.
ಜಿಲ್ಲೆಯಾದ್ಯಂತ ವ್ಯಾಪಕವಾಗಿ ಪಲ್ಸ್ ಪೋಲಿಯೊ ಕಾರ್ಯಕ್ರಮ ನಡೆಯಬೇಕಿರುವ ಹಿನ್ನೆಲೆಯಲ್ಲಿ ಅಗತ್ಯವಿರುವ ವಷ್ಟು ವಾಹನಗಳನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಆರೋಗ್ಯ ಇಲಾಖೆಗೆ ನಿಯೋಜಿಸಬೇಕು. ಇಲಾಖೆಗಳ ವಾಹನಗಳು  ಸುಸ್ಥಿತಿಯಲ್ಲಿ ಇರುವ ಬಗ್ಗೆ ದೃಢೀಕರಿಸಿ ವರದಿ ಸಲ್ಲಿಸಬೇಕು. ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ವಾಹನದ ಕೊರತೆ ಎದುರಾಗದಂತೆ ಸಿದ್ದತೆ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಕಾಡಂಚಿನ ಗ್ರಾಮಗಳು ಹಾಗೂ ದುರ್ಗಮ ಅರಣ್ಯ ಪ್ರದೇಶಗಳು ಹೆಚ್ಚು ಪ್ರಮಾಣದಲ್ಲಿವೆ.  ಹೀಗಾಗಿ ಈ ಭಾಗದ ಜನತೆಗೂ ಪಲ್ಸ್ ಪೋಲಿಯೋ  ಲಸಿಕೆ ನೀಡುವ ಕಾರ್ಯಕ್ರಮ ತಲುಪಬೇಕು. ಅರಣ್ಯ ಇಲಾಖೆಯ ಅಧಿಕಾರಿಗಳು  ಅರಣ್ಯ ವಾಪ್ತಿಯಲ್ಲಿ ಪಲ್ಸ್ ಪೋಲಿಯೋ ವಾಹನಗಳ ಓಡಾಟಕ್ಕೆ ಅನುಮತಿ ನೀಡಬೇಕು ಎಂದರು.
ಸರ್ಕಾರಿ, ಖಾಸಗಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಇತರೆ ಜನನಿಬಿಡ ಸಾರ್ವಜನಿಕ ಸ್ಥಳಗಳಲ್ಲೂ ಬೂತ್ ಗಳನ್ನು ತೆರೆಯಬೇಕು. ಮುಖ್ಯ ವಾಹನ ನಿಲುಗಡೆ ಸ್ಥಳಗಳಲ್ಲಿಯೂ ಪೋಲಿಯೋ ಹನಿ ಹಾಕಿಸಲು ಪೊಲೀಸರು ಕಾರ್ಯಪ್ರವೃತ್ತರಾಗಬೇಕು. ಸಂಚಾರಿ ವಾಹನಗಳ ಮೂಲಕವೂ ಲಸಿಕೆ ನೀಡಲು ಆರೋಗ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳಬೇಕೆಂದು ಅವರು ತಿಳಿಸಿದರು.
ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಆಯಾ ಸ್ಥಳೀಯ ಸಂಸ್ಥೆಗಳು ಕಾರ್ಯಕ್ರಮಕ್ಕೆ ಸಂಪೂರ್ಣವಾಗಿ ತೊಡಗಿಕೊಳ್ಳಬೇಕು. ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ನಿಯೋಜಿತರಾಗುವ ಸಿಬ್ಬಂದಿ ಅಧಿಕಾರಿಗಳಿಗೆ ಅವಶ್ಯವಿರುವ ಎಲ್ಲ ಬಗೆಯ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪಲ್ಸ್ ಪೋಲಿಯೋ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಸ್ವಯಂ ಸೇವಾ ಸಂಸ್ಥೆಗಳು, ನರ್ಸಿಂಗ್ ಶಾಲೆಗಳ ವಿದ್ಯಾರ್ಥಿ ಸಿಬ್ಬಂದಿ ಸಹಕಾರ ಅಗತ್ಯವಿದೆ. ವಿವಿಧ ಇಲಾಖೆಗಳು ಕೂಡ ತೊಡಗಿ ಕೊಂಡು ಪಲ್ಸ್ ಪೋಲಿಯೋ ರಾಷ್ಟ್ರೀಯ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಯಶ್ವಸಿ ಗೊಳಿಸಲು ಕಾರ್ಯೋನ್ಮುಖರಾಗ ಬೇಕೆಂದು ಜಿಲ್ಲಾಧಿಕಾರಿ ರಾಮು ಅವರು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್.ಪ್ರಸಾದ್, ತಹಶೀಲ್ದಾರ್ ಕೆ.ಪುರಂದರ, ಜಿಲ್ಲಾ ಲಸಿಕಾಧಿಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ, ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ರಘುರಾಂ, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಆರೋಗ್ಯ ಅಧಿಕಾರಿಗಳು, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಮುಖಂಡರು ಸಭೆಯಲ್ಲಿ ಹಾಜರಿದ್ದರು.
---------------------------------------------------------------------------------------------------------------------------------

ಗುಂಡ್ಲುಪೇಟೆ ಉಪ ಚುನಾವಣೆ : ದಾಖಲಾತಿ ಇಲ್ಲದ ನಗದು ವಶ


ಚಾಮರಾಜನಗರ, ಮಾ. :- ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ತಪಾಸಣಾ ಕಾರ್ಯ ಚುರುಕುಗೊಳಿಸಿರುವ ಅಧಿಕಾರಿಗಳು  ದಾಖಲಾತಿ  ಇಲ್ಲದೆ ಹೊಂದಿದ್ದ ಹಣವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.  ಅಬಕಾರಿ ಅಧಿಕಾರಿಗಳು ಕೆಲವಡೆ ದಾಳಿ ನಡೆಸಿ ಮದ್ಯ ವಶಕ್ಕೆ ಪಡೆದುಕೊಂಡಿದ್ದಾರೆ.
ತೆರಕಣಾಂಬಿ ಚೆಕ್ ಪೋಸ್ಟ್ ಬಳಿ ಮಾರ್ಚ 23 ರಂದು ಕಾರಿನಲ್ಲಿ ದಾಖಲೆ ಇಲ್ಲದೆ  ಸಾಗಿಸುತ್ತಿದ್ದ ರೂ. 75 ಸಾವಿರ ರೂ ನಗದನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಲಾಗಿದೆ.
ಅಬಕಾರಿ ಅಧಿಕಾರಿಗಳು ಹಂಗಳದಲ್ಲಿ ಎಂ. ನಂದೀಶ್ ಎಂಬುವರಿಗೆ ಸೇರಿದ ಬಾರ್ ಅಂಡ್ ರೆಸ್ಟೋರೆಂಟ್‍ನಲ್ಲಿ ತಪಾಸಣೆ ನಡೆಸಿದ ವೇಳೆ ಮದ್ಯವನ್ನು ಪಾರ್ಸಲ್‍ಗೆ ನೀಡುತ್ತಿರುವುದು ಊಟ ತಿಂಡಿ ಪಡೆಯದ ಗ್ರಾಹಕರಿಗೆ ಮದ್ಯ ಪೂರೈಸುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ. ನಗದು ರಶೀದಿ ನೀಡದಿರುವುದು ಬಿಲ್ಲು ಪುಸ್ತಕ ಹಾಜರು ಪಡಿಸದೆ ಇರುವುದು.  ಮಹಿಳೆಯರು ಪುರುಷರಿಗೆ ಶೌಚಾಲಯ ವ್ಯವಸ್ಥೆ ಇಲ್ಲದಿರುವುದು ಕಂಡು ಬಂದಿದೆ.  ಈ ಹಿನ್ನಲೆಯಲ್ಲಿ ಅಬಕಾರಿ ನಿಯಮ ಉಲ್ಲಂಘನೆ ಮಾಡಲಾಗಿದ್ದು ದಂಡನಾರ್ಹ ಅಪರಾಧವಾಗಿರುವುದು ಕಂಡುಬಂದಿದೆ.
ಯಳಂದೂರು ತಾಲ್ಲೂಕು ಅಗರ ಗ್ರಾಮದ ಮನೋಜ್ ಅವರಿಂದ 0.090 ಮಿ. ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ದಾಖಲು ಮಾಡಲಾಗಿದೆ ಎಂದು ಚುನಾವಣಾಧಿಕಾರಿ ನಲಿನ್ ಅತುಲ್ ತಿಳಿಸಿದ್ದಾರೆ.

***************************



23-03-2017 ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆ : ಮತಯಾಚನೆ ವೇಳೆಯಲ್ಲಿ ಅನುಮತಿಗಿಂತ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ ಹಿನ್ನಲೆ: ಪ್ರಕರಣ ದಾಖಲು


ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆ : ಮತಯಾಚನೆ ವೇಳೆಯಲ್ಲಿ ಅನುಮತಿಗಿಂತ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ ಹಿನ್ನಲೆ: ಪ್ರಕರಣ ದಾಖಲು

ಚಾಮರಾಜನಗರ, ಮಾ. 23 - ಗುಂಡ್ಲುಪೇಟೆ ವಿಧಾನಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ  ಇಂದು ಸಹ ನೀತಿ ಸಂಹಿತೆ ಉಲ್ಲಂಘನೆ ಸಂಬಂಧ  ಪ್ರಕರಣ ದಾಖಲಾಗಿದೆ. ಹಲವೆಡೆ ಅಬಕಾರಿ ಅಧಿಕಾರಿಗಳು ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.

ಬುಧವಾರ (ಮಾರ್ಚ 22 ರಂದು) ಬಿ.ಜೆ.ಪಿ. ಪಕ್ಷದ ಉಮೇದುವಾರರಾದ ಸಿ.ಎಸ್. ನಿರಂಜನಕುಮಾರ್ ರವರ ಪರವಾಗಿ ಬಿ.ಜೆ.ಪಿ. ರಾಜ್ಯಾಧ್ಯಕ್ಷರಾದ ಬಿ.ಎಸ್. ಯಡಿಯೂರಪ್ಪ ಮತ್ತು  100 ರಿಂದ 150 ಕಾರ್ಯಕರ್ತರೊಡನೆ ಮತಯಾಚಿಸಲು ಗುಂಡ್ಲುಪೇಟೆ ಜಾಕೀರ್ ಹುಸೇನ್ ಬಡಾವಣೆಯಿಂದ ಮಹದೇವಪ್ರಸಾದ್ ನಗರದವರೆಗೆ  ತೆರಳಲು ಚಾಮರಾಜನಗರ ತಾಲ್ಲೂಕು ಯುವ ಮೋರ್ಚಾ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ್‍ಮೂರ್ತಿ ರವರು ಅನುಮತಿ ಪಡೆದಿದ್ದರು. ಆದರೆ ಅನುಮತಿ ಪಡೆದಿರುವ ಸಂಖ್ಯೆಗಿಂತ ಹೆಚ್ಚು ಅಂದರೆ 600 ರಿಂದ 700 ವರೆಗೆ ಕಾರ್ಯಕರ್ತರು ಭಾಗವಹಿಸಿದ್ದಾರೆ.  ಕಾಲ್ನಡಿಗೆಯಲ್ಲಿ ತೆರಳಿ ಮತಯಾಚಿಸುವುದಾಗಿ ಅನುಮತಿ ಪಡೆದು ವಾಹನಕ್ಕೆ ಧ್ವನಿವರ್ಧಕ ಅಳವಡಿಸಿಕೊಂಡು ಮತಯಾಚಿಸಿರುವುದು ಕಂಡು ಬಂದಿದೆ.  ಈ ನಡೆಯಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿರುವುದು ಕಂಡು ಬರುತ್ತದೆ.  ಈ ಹಿನ್ನಲೆಯಲ್ಲಿ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಚುನಾವಣಾಧಿಕಾರಿ ನಲಿನ್ ಅತುಲ್ ತಿಳಿಸಿದ್ದಾರೆ.

 ಜಿಲ್ಲೆಯ ವಿವಿಧಡೆ ಅಕ್ರಮವಾಗಿ ಮದ್ಯ ಸಂಗ್ರಹಿಸಲಾದ  ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಕದ್ದಮೆಗಳು ದಾಖಲಾಗಿವೆ  ಕೊಳ್ಳೇಗಾಲ ತಾಲ್ಲೂಕು ಸಿದ್ದಯ್ಯನಪುರ ಗ್ರಾಮದ ಮಹದೇವು ಅವರಿಂದ 0.630 ಮೀ. ಲೀಟರ್, ಚಾಮರಾಜನಗರ ತಾಲ್ಲೂಕು ಹರವೆ ಹೋಬಳಿಯ ಮಲಿಯೂರು ಗ್ರಾಮದ ಬಸವಶೆಟ್ಟಿ ಅವರಿಂದ 0.360 ಮೀ. ಲೀಟರ್,  ಹರವೆ ಗ್ರಾಮದ ಸಿದ್ದನಾಯ್ಕ ಮತ್ತು  ಮಹದೇವಪ್ರಸಾದ್ ರವರಿಂದ 0.090 ಮೀ. ಲೀಟರ್  ಉಡಿಗಾಲ ಗ್ರಾಮದ ಮಲ್ಲೇಶ್ ರವರಿಂದ 0.630 ಮೀ. ಲೀಟರ್ ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಚುನಾವಣಾಧಿಕಾರಿ ನಲಿನ್ ಅತುಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

                                ಪತ್ರಿಕಾ ಪ್ರಕಟಣೆ.

        ಚಾಮರಾಜನಗರ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಈಗಾಗಲೇ ಹೊಸದಾಗಿ ಟೆಕ್ನಿಕಲ್ ಸೆಲ್ ಮತ್ತು ಸೈಬರ್ ಕ್ರೈಂ ವಿಭಾಗವನ್ನು ತೆರೆಯಲಾಗಿದ್ದು, ಈ ವಿಭಾಗಕ್ಕೆ ಒಬ್ಬರು ಪೊಲೀಸ್ ಇನ್ಸ್‍ಪೆಕ್ಟರ್, ಒಬ್ಬರು ಹೆಡ್ ಕಾನ್ಸ್‍ಟೇಬಲ್ ಮತ್ತು ಒಬ್ಬರು ಪೊಲೀಸ್ ಕಾನ್ಸ್‍ಟೇಬಲ್ ರವರುಗಳನ್ನು ನಿಯೋಜಿಸಲಾಗಿರುತ್ತದೆ. ಈ ವಿಭಾಗದಲ್ಲಿ ಸಾಮಾಜಿಕ ಜಾಲತಾಣಗಳಾದ ಫೇಸ್‍ಬುಕ್, ಟ್ವಿಟರ್ ಮತ್ತು ವಾಟ್ಸಪ್ ಖಾತೆಗಳನ್ನು “ಚಾಮರಾಜನಗರ ಜಿಲ್ಲಾ ಪೊಲೀಸ್” ಹೆಸರಿನಲ್ಲಿ ತೆರೆಯಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಬರಹ, ಫೋಟೊ ಮತ್ತು ವಿಡಿಯೋಗಳನ್ನು ಪ್ರಕಟಿಸುವವರ ಮೇಲೆ ನಿಗಾ ಇರಿಸಲಾಗಿದ್ದು, ಆಕ್ಷೇಪಾರ್ಹ ಪ್ರಕಟಣೆ ಕಂಡುಬಂದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು. ಆದ್ದರಿಂದ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಕೆಯಿಂದ ಪೋಸ್ಟ್/ಶೇರ್ ಮಾಡಲು ಕೋರಿದೆ. ಅಲ್ಲದೆ ಸಾರ್ವಜನಿಕರು ತಮ್ಮ ದೂರು, ಸಲಹೆಗಳು ಮತ್ತು ಮಾಹಿತಿಗಳನ್ನು ಈ ಸಾಮಾಜಿಕ ಜಾಲತಾಣದ ಮೂಲಕ ಸಲ್ಲಿಸಿಕೊಳ್ಳಬಹುದಾಗಿರುತ್ತದೆ.
 ಚಾಮರಾಜನಗರ ಜಿಲ್ಲಾ ಪೊಲೀಸ್ ಇಲಾಖೆಯ ಸಾಮಾಜಿಕ ಜಾಲತಾಣ ಖಾತೆಗಳ ವಿವರ
ಓo Soಛಿiಚಿಟ ಒeಜiಚಿ Useಡಿ Iಆ
1 Websiಣe ಅhಚಿmಡಿಚಿರಿಟಿಚಿgಚಿಡಿ.ಟಿiಛಿ.iಟಿ/sಠಿoಜಿಜಿiಛಿe/ಛಿhಚಿmಚಿಡಿಚಿರಿಚಿಟಿಚಿgಚಿಡಿಚಿ.hಣmಟ
2 ಇ-ಒಚಿiಟ sಠಿಛಿhಟಿ@ಞsಠಿ.gov.iಟಿ
3 ಈಚಿಛಿebooಞ ಅhಚಿmಚಿಡಿಚಿರಿಚಿಟಿಚಿgಚಿಡಿಆisಣಡಿiಛಿಣPoಟiಛಿe
4 ಖಿತಿiಣಣeಡಿ @SPಅಊಂಒಂಖಂಎಓಂಉಂಖ
5 Whಚಿಣsಚಿಠಿಠಿ 9480804600

ಮೇಲ್ಕಂಡ ಮಾಹಿತಿಗಳನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಲು ಕೋರಿದೆ.
                                                          ಸಹಿ/-
ಸಾರ್ವಜನಿಕ ಸಂಪರ್ಕ ಅಧಿಕಾರಿಗಳ
ಪೊಲೀಸ್ ಅಧೀಕ್ಷಕರವರ ಕಛೇರಿ,
ಚಾಮರಾಜನಗರ ಜಿಲ್ಲೆ.



Wednesday, 22 March 2017

22-03-2017 ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆ : ಎಲ್ಲ ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ

ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆ : ಎಲ್ಲ ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧ


ಚಾಮರಾಜನಗರ, ಮಾ. 22 - ಗುಂಡ್ಲುಪೇಟೆ ವಿಧಾನಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ನಾಮಪತ್ರಗಳ ಪರಿಶೀಲನೆ ಕಾರ್ಯ ಇಂದು ನಡೆದಿದ್ದು ಎಲ್ಲ 9 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿದೆ.
ಗುಂಡ್ಲುಪೇಟೆ ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿ ನಲಿನ್ ಅತುಲ್ ಅವರು ಇಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಸಿದರು.
ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ನಿಯೋಜಿತರಾಗಿರುವ ವೀಕ್ಷಕರಾದ ಇಂದ್ರ ವಿಕ್ರಂಸಿಂಗ್, ಪೊಲೀಸ್ ವೀಕ್ಷಕರಾದ ಜಾಕೋಬ್ ಜಾಬ್, ಸಹಾಯಕ ಚುನಾವಣಾಧಿಕಾರಿ ಕೆ. ಸಿದ್ದು, ಕೆಲ ಅಭ್ಯರ್ಥಿಗಳು ಹಾಗೂ ಅಭ್ಯರ್ಥಿ ಪರ ಪ್ರತಿನಿಧಿಗಳ ಸಮ್ಮುಖದಲ್ಲಿ ನಾಮಪತ್ರಗಳ ಪರಿಶೀಲನಾ ಕಾರ್ಯ ಜರುಗಿತು.
ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಸಿ.ಎಸ್.ನಿರಂಜನ್ ಕುಮಾರ್, ಭಾರತೀಯ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಎಂ.ಸಿ. ಮೋಹನಕುಮಾರಿ ಅಲಿಯಾಸ್ ಗೀತಾ, ಭಾರತೀಯ ಡಾ.ಬಿ.ಆರ್.ಅಂಬೇಡ್ಕರ್ ಜನತಾಪಕ್ಷದ ಅಭ್ಯರ್ಥಿ ಎಂ. ಹೊನ್ನೂರಯ್ಯ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ[ಎ] ಪಕ್ಷದ ಅಭ್ಯರ್ಥಿ ಎಂ.ಶಿವರಾಜು, ಪಕ್ಷೇತರ ಅಭ್ಯರ್ಥಿಗಳಾದ ಕೆ.ಸೋಮಶೇಖರ, ಬಿ.ಸಿ.ಶೇಖರರಾಜು, ಬಿ.ಮಹದೇವಪ್ರಸಾದ್, ಪಿ.ಎಸ್.ಯಡೂರಪ್ಪ, ಎಂ.ಶಿವರಾಮು ಅವರು ಸಲ್ಲಿಸಿದ್ದ ಎಲ್ಲಾ ನಾಮಪತ್ರಗಳು ಕ್ರಮಬದ್ದವಾಗಿವೆ ಎಂದು ಚುನಾವಣಾಧಿಕಾರಿ ನಲಿನ್ ಅತುಲ್ ಅವರು ತಿಳಿಸಿದ್ದಾರೆ.

ಗುಂಡ್ಲುಪೇಟೆ ಉಪಚುನಾವಣೆ : ಬ್ಯಾಂಕ್ ವ್ಯವಹಾರಗಳ ಮೇಲೆ ನಿಗಾ ಇಡಲು ನೋಡಲ್ ಅಧಿಕಾರಿ ನೇಮಕ
ಚಾಮರಾಜನಗರ, ಮಾ. 22 :- ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಅಕ್ರಮಗಳನ್ನು ತಡೆಯುವ ಸಲುವಾಗಿ ಹಣದ ವಹಿವಾಟಿನ ಮೇಲೆ ನಿಗಾ ವಹಿಸಲು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಸಿದ್ಧರಾಜು ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ. ರಾಮು ಅವರು ಆದೇಶ ಹೊರಡಿಸಿದ್ದಾರೆ.
ಜಿಲ್ಲೆಯ ಎಲ್ಲಾ ಬ್ಯಾಂಕುಗಳಲ್ಲಿ ನಡೆಯುವ 50 ಸಾವಿರಕ್ಕಿಂತ ಹೆಚ್ಚಿನ ವಹಿವಾಟಿನ ಬಗ್ಗೆ ನೋಡಲ್ ಅಧಿಕಾರಿ ನಿಗಾ ವಹಿಸಿ ವರದಿಯನ್ನು ಚುನಾವಣಾ ಅಧಿಕಾರಿಗಳಿಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ನೀಡುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ. ರಾಮು ಅವರು ತಿಳಿಸಿದ್ದಾರೆ.


ಮಾ. 24ರಂದು ಮೈಸೂರಿನಲ್ಲಿ ಫಲಸಿರಿ ಕಾರ್ಯಕ್ರಮ
ಚಾಮರಾಜನಗರ, ಮಾ. 22 - ಮೈಸೂರಿನ ತೋಟಗಾರಿಕೆ ಮಹಾವಿದ್ಯಾಲಯ, ಚಾಮರಾಜನಗರದ ತೋಟಗಾರಿಕೆ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಹಾಗೂ ಮೈಸೂರು ಆಕಾಶವಾಣಿ ಇವರ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 24ರಂದು ಮಧ್ಯಾಹ್ನ 3 ಗಂಟೆಗೆ ಮೈಸೂರಿನ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಫಲ ಸಿರಿ ಬಾನುಲಿ ತೋಟಗಾರಿಕೆ ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಮತ್ತು ತೋಟಗಾರಿಕೆ ಕುರಿತ ತಾಂತ್ರಿಕ ಗೋಷ್ಠಿ ನಡೆಯಲಿದೆ.
ಬಾಗಲಕೋಟೆಯ ತೋಟಗಾರಿಕೆ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕರಾದ ಡಾ. ವೈ ಕೆ ಕೋಟಿಕಲ್ ಉದ್ಘಾಟಿಸುವರು.  ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಕೆ.ಎಂ. ಇಂದಿರೇಶ್ ಅಧ್ಯಕ್ಷತೆ ವಹಿಸುವರು. ಲಾಲ್ ಬಾಗ್‍ನ ತೋಟಗಾರಿಕೆ ಅಪರ ನಿರ್ದೇಶಕರಾದ ಡಾ. ಪ್ರಕಾಶ್ ಎಂ. ಸೊಬರದ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು.
ಆಕಾಶವಾಣಿ ಸಹಾಯಕ ನಿರ್ದೇಶಕರಾದ ಹೆಚ್. ಶ್ರೀನಿವಾಸ, ನಗರದ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕರಾದ ಡಾ. ದೊರೆಸ್ವಾಮಿ, ತೋಟಗಾರಿಕೆ ಉಪನಿರ್ದೇಶಕರಾದ ಎಚ್.ಎಂ. ನಾಗರಾಜು, ಆಕಾಶವಾಣಿ ಕೃಷಿ ಕಾರ್ಯಕ್ರಮ ನಿರ್ವಾಹಕರಾದ ಎನ್. ಕೇಶವಮೂರ್ತಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಕಾರ್ಯಕ್ರಮದ ಅಂಗವಾಗಿ ಫಲಸಿರಿ ಕಾರ್ಯಕ್ರಮದ ಮುಕ್ತ ಪರೀಕ್ಷೆ, ತಾಂತ್ರಿಕ ಅಧಿವೇಶನÀ ಜರುಗಲಿದೆ. ಬದಲಾಗುತ್ತಿರುವ ಹವಾಮಾನದಲ್ಲಿ ಖುಷ್ಕಿ ತೋಟಗಾರಿಕೆಯ ಪ್ರಸ್ತುತತೆ ಎಂಬ ವಿಷಯ ಕುರಿತು ಡಾ. ಎಸ್.ವಿ. ಹಿತ್ತಲಮನಿ ಹಾಗೂ ಪರಿಸರ ಸ್ನೇಹಿ ಕೃಷಿ ಕುರಿತು ಡಾ. ರಾಮಕೃಷ್ಣಪ್ಪ ಮಾತನಾಡುವರು ಎಂದು ಪ್ರಕಟಣೆ ತಿಳಿಸಿದÉ.


ಗುಂಡ್ಲುಪೇಟೆ ಉಪ ಚುನಾವಣೆ:  ಕಲ್ಲು ತೂರಾಟ ಪ್ರಕರಣ – ಕಾಂಗ್ರೇಸ್, ಬಿ.ಜೆ.ಪಿ. ಕಾರ್ಯಕರ್ತರಿಂದ ದೂರು ದಾಖಲು 


ಚಾಮರಾಜನಗರ, ಮಾ. 22:-   ಗುಂಡ್ಲುಪೇಟೆ ವಿಧಾನ ಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಕೆ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆಸಲಾಗಿದೆ ಎಂದು ಬಿ.ಜೆ.ಪಿ. ಹಾಗೂ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರಿಬ್ಬರು ದೂರು ನೀಡಿದ್ದು ಮೊಕದ್ದಮ್ಮೆ ದಾಖಲು ಮಾಡಿಕೊಳ್ಳಲಾಗಿದೆ.
ಗುಂಡ್ಲುಪೇಟೆ ಪಟ್ಟಣದ ಖಾಸಗಿ ವಾಹನ ಚಾಲಕ ಮಧು ಎಂಬುವರು ಭಾರತೀಯ ಜನತಾ ಪಾರ್ಟಿಯ ಉಮೇದುದಾರರಾದ ನಿರಂಜನಕುಮಾರ್ ಅವರು ನಾಮಪತ್ರ ಸಲ್ಲಿಸಲು ತಾಲ್ಲೂಕು ಕಚೇರಿಗೆ ಬಂದಾಗ  ಕಾಂಗ್ರೇಸ್ ಪಕ್ಷದವರು ನನ್ನ ಹಾಗೂ ಪಕ್ಷದ ಕಾರ್ಯಕರ್ತರ ಮೇಲೆ ಕಲ್ಲು ತೂರಿದರು ಎಂದು ದೂರು ನೀಡಿದ್ದು, ಮೊಕದ್ದಮ್ಮೆ ದಾಖಲಿಸಲಾಗಿದೆ.
ಗುಂಡ್ಲುಪೇಟೆ ತಾಲ್ಲೂಕು ಕಸಬಾ ಹೋಬಳಿಯ ನೇನೆಕಟ್ಟೆ ಗ್ರಾಮದ ಪ್ರದೀಪ್ ಕುಮಾರ್ ಎಂಬುವರು ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಉಮೇದುದಾರರಾದ ಎಂ.ಸಿ. ಮೋಹನಕುಮಾರಿ ಅವರು ನಾಮಪತ್ರ ಸಲ್ಲಿಸಲು ತಾಲ್ಲೂಕು ಕಚೇರಿಗೆ ಬಂದಾಗ ಭಾರತೀಯ ಜನತಾ ಪಾರ್ಟಿ ಯವರು ನನ್ನ  ಮತ್ತು ಪಕ್ಷದ ಕಾರ್ಯಕರ್ತರ ಮೇಲೆ ಕಲ್ಲು ತೂರಿದರು ಎಂದು ದೂರು ನೀಡಿದ್ದು, ಮೊಕದ್ದಮ್ಮೆ ದಾಖಲಿಸಲಾಗಿದೆ.
ಅಬಕಾರಿ ಅಧಿಕಾರಿಗಳು ವಿವಿದೆಡೆ ದಾಳಿ ಕಾರ್ಯವನ್ನು ಮುಂದುವರೆಸಿದ್ದು ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.
ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮಲಾಪುರ ಗ್ರಾಮದ ಲಕ್ಷ್ಮಿ ವೆಂಕಟೇಶ್ವರ ವೈನ್ ಶಾಪ್‍ನ ಕೃಷ್ಣಮೂರ್ತಿ ರವರಿಂದ 0.060 ಲೀಟರ್, ಚಾಮರಾಜನಗರ ತಾಲ್ಲೂಕಿನ ಕಿರಗಸೂರು ಗ್ರಾಮದ ಸುಬ್ಬಣ್ಣ  ಅವರಿಂದ 0.630 ಲೀಟರ್, ಕೊಳ್ಳೇಗಾಲ ತಾಲ್ಲೂಕಿನ ಕರಿಯನಪುರ ಗ್ರಾಮದ ಬಿ. ರಾಚಯ್ಯ ರವರಿಂದ 0.900 ಲೀಟರ್,  ಆರ್. ಬಸವರಾಜು ಅವರಿಂದ 0.720 ಲೀಟರ್ ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲು ಮಾಡಿದ್ದಾರೆ.
ಚಾಮರಾಜನಗರ ಪಟ್ಟಣದ ರಾಮಸಮುದ್ರದ ನಾಗರಾಜು ರವರು ನಿಷೇಧಿಸಿದ ಸ್ಥಳದಲ್ಲಿ ಮದ್ಯ ವ್ಯಾಪಾರ ನಡೆಸುತ್ತಿರುವ ಹಿನ್ನಲೆಯಲ್ಲಿ  ಈ ಸಂಬಂಧ ಪ್ರಕರಣ ದಾಖಲಿಸಲಾಗಿದೆ ಎಂದು ಚುನಾವಣಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ನಲಿನ್ ಅತುಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೆ.ಒ.ಎಸ್. ಪರೀಕ್ಷೆ: ನಿಷೇದಾಜ್ಞೆ ಜಾರಿ


ಚಾಮರಾಜನಗರ, ಮಾ. 22 -   ಕರ್ನಾಟಕ ಪ್ರೌಢÀಶಿಕ್ಷಣ ಪರೀಕ್ಷಾ ಮಂಡಳಿಯು ಮಾರ್ಚ 30 ರಿಂದ ಏಪ್ರೀಲ್ 10 ವರೆಗೆ ನಗರದಲ್ಲಿ ಕರ್ನಾಟಕ ಮುಕ್ತ ಶಾಲೆ- ಕೆಒಎಸ್ ಪರೀಕ್ಷೆಗಳನ್ನು  ನಡೆಸಲಿರುವ  ಹಿನ್ನಲೆಯಲ್ಲಿ ಪರೀಕ್ಷಾ ಕೇಂದ್ರಗಳ 200 ಮೀಟರ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ವಿಧಿಸಿ ಜಿಲ್ಲಾಧಿಕಾರಿಗಳು ಬಿ. ರಾಮು ರವರು ಆದೇಶ ಹೊರಡಿಸಿದ್ದಾರೆ.

ನಗರದ ಡಯಟ್ ಹಿಂಭಾಗದಲ್ಲಿರುವ ಆದರ್ಶ ವಿದ್ಯಾಲಯ, ಕಸ್ತೂರಿಬಾ ಬಾಲಕೀಯರ ವಸತಿ ವಿದ್ಯಾರ್ಥಿ ನಿಲಯ ಕಟ್ಟಡದಲ್ಲಿ ಪರೀಕ್ಷೆಗಳು ನಡೆಯಲಿವೆ ಪರೀಕ್ಷಾ ಕಾರ್ಯವು ಶಾಂತಿ ಹಾಗೂ ಸುವ್ಯವಸ್ಥೆಯಿಂದ ನಡೆಯಲೆಂಬ ಉದ್ದೇಶದಿಂದ ಪರೀಕ್ಷಾ ಕೇಂದ್ರ 200 ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ಪರೀಕ್ಷಾ ದಿನಗಳಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯ ವರೆಗೆ ನಿಷೇದಾಜ್ಞೆ ವಿಧಿಸಲಾಗಿದೆ. ಅಲ್ಲದೆ ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರದ 200 ಮೀಟರ್ ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿಗಳನ್ನು ಮಧ್ಯಾಹ್ನ 1 ರಿಂದ ಸಂಜೆ 5-30 ಗಂಟೆಯವರೆಗೆ ಮುಚ್ಚುವಂತೆ ಆದೇಶಿಸಲಾಗಿದೆ.

ನಿಷೇದಾಜ್ಞೆ ಆದೇಶವು ಪರೀಕ್ಷಾ ಕೆಲಸಕ್ಕೆ ನಿಯೋಜಿತರಾದ ಸಿಬ್ಬಂದಿ ಹಾಗೂ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಅನ್ವಯವಾಗುವುದಿಲ್ಲ ವೆಂದು ಜಿಲ್ಲಾಧಿಕಾರಿ ಬಿ. ರಾಮು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಕೊಳ್ಳೇಗಾಲ - ಹಾಸನೂರು ಘಾಟ್ ರಸ್ತೆ ಕಾಮಗಾರಿ ಹಿನ್ನಲೆ: ಬದಲಿ ಮಾರ್ಗಗಳಲ್ಲಿ ವಾಹನ ಸಂಚಾರಕ್ಕೆ ಆದೇಶ 


ಚಾಮರಾಜನಗರ, ಮಾ. 22:- ಕೊಳ್ಳೇಗಾಲ-ಹಾಸನೂರು ಘಾಟ್ ರಸ್ತೆಯ ಆಯ್ದ ಭಾಗಗಳಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವ ಹಿನ್ನಲೆಯಲ್ಲಿ ಮಧುವನಹಳ್ಳಿ ಗ್ರಾಮ ಪರಿಮಿತಿಯಲ್ಲಿ ಮಾರ್ಚ 22 ರಿಂದ ಮೇ 05 ವರೆಗೆ ಭಾರಿ, ಲಘು ವಾಹನಗಳು ಸೇರಿದಂತೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಬದಲಿ ಮಾರ್ಗಗಳಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಬಿ. ರಾಮು ರವರು ಆದೇಶ ಹೊರಿಡಿಸಿದ್ದಾರೆ.

ನಿರ್ಗಮಿಸುವ ವಾಹನಗಳು ಕೊಳ್ಳೇಗಾಲದಿಂದ ಸಿದ್ದಯ್ಯನಪುರ ಅಥವಾ ಲಿಂಗಣಾಪುರ, ಹೊಂಡರಬಾಳು ಮಾರ್ಗ ಮಧುವನಹಳ್ಳಿ ಮುಖ್ಯ ರಸ್ತೆಗೆ ಆಗಮಿಸಿ ನಂತರ ಹನೂರು- ಮಲೆ ಮಹದೇಶ್ವರ ಬೆಟ್ಟ, ಒಡೆಯರಪಾಳ್ಯ, ಬೈಲೂರು ಕಡೆಗೆ ಸಂಚರಿಸಬೇಕಿದೆ.  
ಮಲೆ ಮಹದೇಶ್ವರ ಬೆಟ್ಟ, ಹನೂರು, ತೆಳ್ಳನೂರು, ಕೊತ್ತನೂರು ಹಾಗೂ ಬೈಲೂರು, ಒಡೆಯರಪಾಳ್ಯ, ಲೊಕ್ಕನಹಳ್ಳಿ ಕಡೆಯಿಂದ ಸಂಚರಿಸುವ ವಾಹನಗಳು ದೊಡ್ಡಿಂದುವಾಡಿಯ ಜಿ.ವಿ. ಗೌಡ ವೃತ್ತದಿಂದ ಮತ್ತಿಪುರ ಕ್ರಾಸ್, ಪಾಳ್ಯ- ನರೀಪುರದ ಮುಖಾಂತರ ಕೊಳ್ಳೇಗಾಲದ ಕಡೆಗೆ ಸಂಚರಿಸಬಹುದಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.  


Tuesday, 21 March 2017

ಗುಂಡ್ಲುಪೇಟೆ ಬೈ ಎಲೆಕ್ಷನ್, ಮಾರಾಮಾರಿ, ಎರಡು ಪಕ್ಷಗಳ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲು (21-03-2017)


ಗುಂಡ್ಲುಪೇಟೆ ವಿಧಾನ ಸಭೆ ಉಪಚುನಾವಣೆ 

ನಾಮಪತ್ರ ಸಲ್ಲಿಕೆ ವೇಳೆ ಅನುಮತಿಗಿಂತ ಹೆಚ್ಚು ಜನ ಸೇರಿಸಿದ ಹಿನ್ನೆಲೆ : ಬಿ.ಜೆ.ಪಿ, ಕಾಂಗ್ರೇಸ್ ಸ್ಥಳೀಯ ಮುಖಂಡರ ವಿರುದ್ದ ಮೊಕದ್ದಮೆ ದಾಖಲು

ಚಾಮರಾಜನಗರ,ಮಾ. 21 :- ಗುಂಡ್ಲುಪೇಟೆ ವಿಧಾನ ಸಭೆ ಉಪ ಚುನಾವಣೆಗೆ ಸಂಬಂಧಿಸಿದಂತೆ,  ಅಬಕಾರಿ ಅಧಿಕಾರಿಗಳು ಇಂದು ಸಹ ವಿವಿಧೆಡೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. 

ಗುಂಡ್ಲುಪೇಟೆ ಪಟ್ಟಣದಲ್ಲಿ ಸೋಮವಾರ ನಾಮಪತ್ರ ಸಲ್ಲಿಕೆ ಮೆರವಣಿಗೆ ವೇಳೆ ಭಾರತೀಯ ಜನತಾ ಪಕ್ಷ ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷವು ಅನುಮತಿ ಪಡೆದದ್ದಕ್ಕಿಂತ ಹೆಚ್ಚು ಜನರನ್ನು ಸೇರಿಸಿದ ಹಿನ್ನೆಲೆಯಲ್ಲಿ ಈ ಎರಡು ಪಕ್ಷಗಳ ಸ್ಥಳೀಯ ಮುಖಂಡÀರ ವಿರುದ್ದ ಟೌನ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. 

ಗುಂಡ್ಲುಪೇಟೆ ತಾಲ್ಲೂಕಿನ ಕಸಬಾ ಹೋಬಳಿಯ ಭೀಮನಬೀಡು ಗ್ರಾಮದಲ್ಲಿ ಗೋಪಮ್ಮ ಅವರಿಂದ 1.620 ಲೀ., ಕೊಳ್ಳೇಗಾಲ ಪಟ್ಟಣದ ಪ್ರಸನ್ನ ಅವರಿಂದ 0.540 ಲೀ., ಚಾಮರಾಜನಗರ ತಾಲ್ಲೂಕು ಹೊಂಗನೂರು ಗ್ರಾಮದ ಶ್ರೀನಿವಾಸ ಅವರಿಂದ 0.450 ಲೀ., ಪ್ರಕಾಶ್ ಎಂಬುವವರಿಂದ 0.540 ಲೀ., ಮದ್ಯ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ. 

ಮದ್ಯ ಚಿಲ್ಲರೆ ಮಾರಾಟಗಾರರಾದ ಕೊಳ್ಳೇಗಾಲದ ಮುಡಿಗುಂಡ ಗ್ರಾಮದ ಎಂ.ಬಸವರಾಜೇಗೌಡ ಮತ್ತು ಪಿ.ರೇಣುಕಾ ಅವರು ಮದ್ಯ ಮಾರಾಟದ ಲೆಕ್ಕವನ್ನು ಸರಿಯಾಗಿ ನಿರ್ವಹಿಸದೇ ಹಿನ್ನೆಲೆಯಲ್ಲಿ ಇವರಿಬ್ಬರ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ. 

ಸೋಮವಾರ ನಾಮಪತ್ರ ಸಲ್ಲಿಕೆ ವೇಳೆ ಸೆಕ್ಟರ್ ಅಧಿಕಾರಿಗಳಿಂದ 2000 ಜನರ ಮೆರವಣಿಗೆಗೆ ಅನುಮತಿ ಪಡೆದು 3000 ಜನರನ್ನು ಸೇರಿಸಿದ ಆರೋಪದ ಮೇಲೆ ಭಾರತೀಯ ಜನತಾ ಪಕ್ಷದ ಜಿಲ್ಲಾ ಯು ಮೋರ್ಚಾದ ರಾಜಶೇಖರಮೂರ್ತಿ ಹಾಗೂ 1500 ಜನರ ಮೆರವಣಿಗೆಗೆ ಅನುಮತಿ ಪಡೆದು 2000 ಜನರನ್ನು ಸೇರಿಸಿದ ಆರೋಪದ ಮೇಲೆ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಪಕ್ಷದ ಕುಮಾರಸ್ವಾಮಿ ಅವರ ವಿರುದ್ದ ಟೌನ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲು ಮಾಡಲಾಗಿದೆ ಎಂದು ಉಪ ವಿಭಾಗಾಧಿಕಾರಿ ಹಾಗೂ ಚುನಾವಣಾ ಅಧಿಕಾರಿ ನಲಿನ್ ಅತುಲ್ ಅವರು ತಿಳಿಸಿದ್ದಾರೆ. 


ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆ : 7 ಅಭ್ಯರ್ಥಿಗಳಿಂದ 8 ನಾಮಪತ್ರಗಳ ಸಲ್ಲಿಕೆ

ಚಾಮರಾಜನಗರ, ಮಾ. 21 - ಗುಂಡ್ಲುಪೇಟೆ ವಿಧಾನಸಭಾ ಉಪ ಚುನಾವಣೆಗೆ ಸಂಬಂಧಿಸಿದಂತೆ ಉಮೇದುವಾರಿಕೆ ಸಲ್ಲಿಸಲು ಕೊನೆಯ ದಿನವಾದ ಇಂದು 7 ಅಭ್ಯರ್ಥಿಗಳಿಂದ 8 ನಾಮಪತ್ರಗಳು ಸಲ್ಲಿಕೆಯಾಗಿವೆ.

ಭಾರತೀಯ ಜನತಾ ಪಕ್ಷದಿಂದ ಸಿ.ಎಸ್.ನಿರಂಜನ್ ಕುಮಾರ್, ಭಾರತೀಯ ಡಾ.ಬಿ.ಆರ್.ಅಂಬೇಡ್ಕರ್ ಜನತಾಪಕ್ಷದಿಂದ ಎಂ.ಹೊನ್ನೂರಯ್ಯ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ[ಎ] ಪಕ್ಷದಿಂದ ಎಂ.ಶಿವರಾಜು, ಪಕ್ಷೇತರ ಅಭ್ಯರ್ಥಿಗಳಾಗಿ ಕೆ.ಸೋಮಶೇಖರ, ಬಿ.ಸಿ.ಶೇಖರರಾಜು, ಬಿ.ಮಹದೇವಪ್ರಸಾದ್ ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ. ಮತ್ತೋರ್ವ ಪಕ್ಷೇತರ ಅಭ್ಯರ್ಥಿಯಾಗಿ ಪಿ.ಎಸ್.ಯಡೂರಪ್ಪ ಎರಡು ನಾಮಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಚುನಾವಣಾಧಿಕಾರಿ ನಲಿನ್ ಅತುಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆ : ವೀಕ್ಷಕರ ನೇಮಕ

ಚಾಮರಾಜನಗರ, ಮಾ. 21 - ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ವೀಕ್ಷಕರಾಗಿ ಇಂದ್ರ ವಿಕ್ರಂಸಿಂಗ್ ಅವರು ನೇಮಕವಾಗಿದ್ದಾರೆ. ಅವರ ಮೊಬೈಲ್ ಸಂಖ್ಯೆಯು 8277027322 ಆಗಿದೆ. ಸ್ಥಿರ ದೂರವಾಣಿ ಸಂಖ್ಯೆಯು 08226-223840 ಆಗಿರುತ್ತದೆ. ಚುನಾವಣೆ ಸಂಬಂಧ ಅಹವಾಲು ದೂರುಗಳಿದ್ದಲ್ಲಿ ವೀಕ್ಷಕರ ದೂರವಾಣಿ ಸಂಖ್ಯೆ ಸಂಪರ್ಕಿಸಿ ಮಾಹಿತಿ ನೀಡಬಹುದಾಗಿದೆ.

ವೆಚ್ಚ ವೀಕ್ಷಕರಾಗಿ ಕೆ. ಶುಭೇಂದ್ರ ಅವರು ನೇಮಕವಾಗಿದ್ದಾರೆ. ಪೊಲೀಸ್ ವೀಕ್ಷಕರಾಗಿ ಜಾಕೋಬ್ ಜಾಬ್ ಅವರು ನೇಮಕವಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದÉ.


ಮಾ. 22ರಂದು ವಿಶ್ವ ಜಲ ಸಂರಕ್ಷಣಾ ದಿನಾಚರಣೆ, ಕಾನೂನು ಅರಿವು ನೆರವು ಕಾರ್ಯಕ್ರಮ 

ಚಾಮರಾಜನಗರ, ಮಾ. 21 - ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಮತ್ತು ನಗರದ ಸಾಧನಾ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜಲ ಸಂರಕ್ಷಣಾ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಮಾರ್ಚ್ 22ರಂದು ಮಧ್ಯಾಹ್ನ 3 ಗಂಟೆಗೆ ತಾಲೂಕಿನ ಹರದನಹಳ್ಳಿ ಗ್ರಾಮದ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಏರ್ಪಡಿಸಲಾಗಿದೆ.

ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷರಾದ ಶಿವಪ್ರಸನ್ನ ಕಾರ್ಯಕ್ರಮ ಉದ್ಘಾಟಿಸುವರು. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಸುರೇಶ್ ಟಿ.ಜಿ. ಅಧ್ಯಕ್ಷತೆ ವಹಿಸುವರು. ವಕೀಲರಾದ ಪುಟ್ಟಸ್ವಾಮಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದÉ.


ಮಾ. 23ರಂದು ವಿವಿದೆಡೆ ವಿದ್ಯುತ್ ವ್ಯತ್ಯಯ

ಚಾಮರಾಜನಗರ, ಮಾ. 21 - ಚಾಮುಂಡೇಶ್ವರಿ ವಿದ್ಯುತ್ ಪ್ರಸರಣ ನಿಗಮವು ತಾಲೂಕಿನ ಅಟ್ಟುಗೂಳಿಪುರ ಹಾಗೂ ಹೊನ್ನಹಳ್ಳಿ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಮಾರ್ಚ್ 23ರಂದು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಸಿದ್ದಯ್ಯನಪುರ, ಹೊಂಗಲವಾಡಿ, ಕೋಳಿಪಾಳ್ಯ, ಎನ್‍ಜೆವೈ, ಬಂಧಿಗೌಡನಹಳ್ಳಿ ಹಾಗೂ ಅಟ್ಟುಗೂಳಿಪುರ ವ್ಯಾಪ್ತಿಯ ಪ್ರದೇಶಗಳಿಗೆ ಹಾಗೂ ಹೊನ್ನಹಳ್ಳಿ ವಿದ್ಯುತ್ ವಿತರಣಾ ವ್ಯಾಪ್ತಿಯ ಅರಕಲವಾಡಿ, ಯುರಗನಹಳ್ಳಿ, ಸುವರ್ಣನಗರ, ಫ್ಯಾಕ್ಟರಿ, ಡೊಳ್ಳಿಪುರ, ಪುಣಜನೂರು, ಬಿಸಲವಾಡಿ, ಅಮಚವಾಡಿ, ಎನ್‍ಜೆವೈ ಮಾದಲವಾಡಿ ಹಾಗೂ ಎನ್‍ಜೆವೈ ಚನ್ನಪ್ಪನಪುರ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಸಾರ್ವಜನಿಕರು ವಿದ್ಯುತ್ ಸರಬರಾಜು ನಿಗಮದೊಂದಿಗೆ ಸಹಕರಿಸುವಂತೆÉ ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಮಾ. 23ರಂದು ನಗರದಲ್ಲಿ ಉದ್ಯೋಗ ಮೇಳ :  ನೇರ ಸಂದರ್ಶನ

ಚಾಮರಾಜನಗರ, ಮಾ. 21 - ನಂಜನಗೂಡಿನ ಖಾಸಗಿ ಕಂಪನಿ ರ್ಯಾಕ್ ಮೈಂಡ್ಸ್ ಟೆಕ್ನಾಲಜಿ ಲಿಮಿಟೆಡ್ ಅವರಿಂದ ಆಹಾರ ಸಂಸ್ಕರಣಾ ಘಟಕದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಐಟಿಐ ವಿದ್ಯಾರ್ಹತೆ ಹೊಂದಿರುವ ಮಹಿಳಾ ನಿರುದ್ಯೋಗಿ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಳ್ಳುವ ಸಲುವಾಗಿ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ  ಮಾರ್ಚ್ 23ರಂದು ಬೆಳಿಗ್ಗೆ 10 ಗಂಟೆಗೆ ಉದ್ಯೋಗ ಮೇಳ ಆಯೋಜಿಸಲಾಗಿದೆ. 

ಎಸ್‍ಎಸ್‍ಎಲ್‍ಸಿ ಮತ್ತು ಐಟಿಐ ವ್ಯಾಸಂಗ ಮಾಡಿರುವ 18 ರಿಂದ 24ರ ವಯೋಮಿತಿಯುಳ್ಳ ಮಹಿಳಾ ಅಭ್ಯರ್ಥಿಗಳು ಭಾಗವಹಿಸಬಹುದು. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಸ್ವವಿವರದೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ಊಟ, ವಾಹನ ಸೌಲಭ್ಯ ಒದಗಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ಅಧಿಕಾರಿ ದೂ.ಸಂ. 08226-224430 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ಮಾ. 30ರಂದು ಮಹದೇಶ್ವರ ಬೆಟ್ಟದಲ್ಲಿ ಗೋಲಕ ಹಣ ಎಣಿಕೆ

ಚಾಮರಾಜನಗರ, ಮಾ. 21 - ಕೊಳ್ಳೇಗಾಲ ತಾಲೂಕಿನ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ಇಡಲಾಗಿರುವ ಗೋಲಕಗಳ ಹಣ ಎಣಿಕೆ ಕಾರ್ಯವು ಮಾರ್ಚ್ 30ರಂದು ಬೆಳಿಗ್ಗೆ ನಡೆಯಲಿದೆ.

ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸಿಬ್ಬಂದಿ ಸಹಕಾರದೊಂದಿಗೆ ಬಸ್ ನಿಲ್ದಾಣದಲ್ಲಿರುವ ವಾಣಿಜ್ಯ ಸಂಕೀರ್ಣ ಕಟ್ಟಡದ ಮೊದಲ ಮಹಡಿಯ ವಿಶ್ರಾಂತಿ ಗೃಹದಲ್ಲಿ ಹಣ ಎಣಿಕೆ ಕಾರ್ಯ ನಡೆಸಲಾಗುತ್ತದೆ ಎಂದು ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ  ತಿಳಿಸಿದ್ದಾರೆ.

ವಾಟ್ಸಾಪ್ ಗೆ ಬಂದ ಚಾಮರಾಜನಗರ ಎಸ್ಪಿ ಕುಲದೀಪ್ ಕುಮಾರ್ ಆರ್ ಜೈನ್, ನಿಮ್ಮೊಂದಿಗೆ ನಾವು ಎನ್ನಲು ಬಂದಿದ್ದಾರೆ... ..ಇಂತಿ ಎಸ್.ವೀರಭದ್ರಸ್ವಾಮಿ

ಹೆಡ್ ಲೈನ್ ನೋಡಿ ಭಯಪಡಬೇಡಿ, ಅವರು ವಾಟ್ಸಾಫ್ ಬಳಕೆ ಮಾಡುತ್ತಿದ್ದರು ಆದರೆ ಕಚೇರಿ ಸಂಖ್ಯೆ  ಜನ ಸಾಮಾನ್ಯರ  ದೂರುಗಳಿಗಾಗಿಯೇ ವಾಟ್ಸಾಫ್  ಬಂದಿರಲಿಲ್ಲ ಅಷ್ಟೇ..! ಓದಿದ ನಂತರ ಶೇರ್ ಮಾಡಿ ,ಅದು ಇಷ್ಟ ಆದರೆ...    ಇಂತಿ ದಲಿತ್ ಶೈವ್. ರಾಮಸಮುದ್ರ ಎಸ್,ವೀರಭದ್ರಸ್ವಾಮಿ 
*********************************************************************



ಬಹುಶಃ ಈ ದಿನ 20-3-2017 ಚಾಮರಾಜನಗರದ ಜನತೆಗೆ ಒಂದು ಸಂತಸ ವಿಚಾರ ಎಂದರೆ ತಪ್ಪಾಗಲಾರದು . ಕಾರಣವಿಷ್ಟೇ ಜಿಲ್ಲೆಯ ಜನತೆ ಬಹುತೇಕರು ತಮ್ಮ ತಮ್ಮ ದೂರುಗಳನ್ನು ನನ್ನನ್ನು ಸೇರಿದಂತೆ ಮಾನ್ಯ ಎಸ್ಪಿ ಅವರಾದ ಕುಲದೀಪ್ ಕುಮಾರ್ ಆರ್ ಜೈನ್ ಅವರ ಅದಿಕೃತ ಸಂಖ್ಯೆ 9480804601 ಗೆ ಕಳುಹಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳುತ್ತಿದ್ದರು
ಬಹುತೇಕರು ತಮ್ಮ ದೂರುಗಳು ಪರಿಹಾರವಾಗುತ್ತದೆಯೇ.? ನಮ್ಮ ಹೆಸರು ಬಹಿರಂಗ ಪಡಿಸಿದರೆ ಮುಂದೆ ತೊಂದರೆ ಆದರೆ ಏನು ಎಂಬ ಸಮಸ್ಯೆಗೆ ಈಗಿನ  ಎಸ್ಪಿ ಕುಲದೀಪ್ ಕುಮಾರ್ ಆರ್ ಜೈನ್ ತೆರೆ ಎಳೆದಿದ್ದಾರೆ.
ಚಾಮರಾಜನಗರಕ್ಕೆ ಮೊದಲು ಬಂದಾಗಿನಿಂದ ತಮ್ಮದೇ ಸಂಖ್ಯೆ ಕೊಟ್ಟು (9480804601) ನಿಮ್ಮೊಂದಿಗೆ ನಾವಿದ್ದೇವೆ ಎನ್ನುತ್ತಿದ್ದ ಅವರು ಈಗ ಜನಸಾಮಾನ್ಯನ ಕೈಗೂ ತಲುಪಿ ನೀವು ನಮ್ಮೊಂದಿಗೆ ಇರಿ ಎಂದು ಹೇಳಲು ಹೊರಟಿದ್ದಾರೆ.
ಮೊದಲು ಅದಿಕಾರಿಗಳೆಲ್ಲರೂ ಕಡ್ಡಾಯವಾಗಿ ವಾಟ್ಸ್ ಆಫ್ ಅಲ್ಲಿ ಇರಲೇಬೇಕೆಂದು ಕಟ್ಟುನಿಟ್ಟಿನ ಆಧೇಶ ಜಾರಿ ಮಾಢುವ ಮೂಲಕ ಶಿಸ್ತಿನ ಇಲಾಖೆಗೆ ಹೆಸರು ತರುವಂತೆ ಶಿಸ್ತಾಗಿ ಬರುವಂತೆ ಪೆರಡ್ ಅಲ್ಲಿ ಮೆಮೋ ಕೊಟ್ಟಿದ್ದೆ ತಡ ಮುಂದಿನ ವಾರ ಎಲ್ಲರೂ ಶಿಸ್ತಿನ ಸಿಪಾಯೊಗಳಾಗಿ ಪೆರೆಡ್ ಅಲ್ಲಿ ನಿಂತಿದ್ದರು. ಇದು ಆಡಳಿತದಲ್ಲಿ ಮೊದಲು ತಂದ ಸುದಾರಣೆಯಾದರೂ ಕೆಲವು ನೀತಿ ನಿಯಮಗಳನ್ನು ಕಟ್ಟು ನಿಟ್ಟಾಗಿ ಜಾರಿ ತಂದಿದ್ದರು. ಸಾಕ್ಷಿಯಿಲ್ಲದೇ ಯಾವುದನ್ನು ನಂಬದ ಇವರು, ತಪ್ಪು ಮಾಡಿದ ಅದಿಕಾರಿಗಳನ್ನು  ವಜಾ, ಅಮಾನತು ಮಾಡುವ ಮೂಲಕ ಎಚ್ಚರಿಕೆ ನೀಡಿ  ಮನೆಗೆ ಕಳುಹಿಸಿದ್ದರು. ಇದರಲ್ಲಿ ಕೆಲವರಿಗೆ  ಮಾಡಿದ ತಪ್ಪನ್ನು ಒಪ್ಪಿಕೊಳ್ಳಲಾಗದೇ ಅವರ ವಿರುದ್ದವೇ ಪಿತೂರಿ ಮಾಡಲಾರಂಬಿಸಿದರು. ಒಬ್ಬಂಟಿಯಾಗಿಯೇ ಆಡಳಿತ ನಡೆಸಿ ಸುದಾರಣೆ ತಂದಿರುವ ಇವರು ಕೆಲವು ಜನಸಾಮಾನ್ಯರಿಗೂ ನೇರವಾಗಿ ದೂರು ನೀಡಲಾಗದಿದ್ದರೂ ವಾಟ್ಸ್ ಆಫ್ ಮೂಲಕ ದೂರು ಸಲ್ಲಿಸಿ ನ್ಯಾಯ ಪಡೆಯಲೇಂದೆ ಈ ಯೋಜನೆ ಮಾಡಿದ್ದಾರೆ ಎಂದರೆ ತಪ್ಪಾಗಲಾರದು.
ದೂರುಗಳ ಪ್ರಾದಿಕಾರ ಮಾಡಿ ಎಡು ವರ್ಷಗಳೇ ಕಳೆದಿದೆ ಆದರೆ ದೂರುಗಳು ಮಾತ್ರ ಬಂದೇ ಇಲ್ಲ. ಆದರೆ ಎಗ್ಗಿಲ್ಲದೇ  ದೂರುಗಳು ಮಾತ್ರ ಮೊಬೈಲ್ ಗೆ ಬಂದಿದೆ ಎಂದರೆ ತಪ್ಪಾಗಲಾರದು.
ಪೇಸ್ ಬುಕ್ ಅಲ್ಲಿ ಖಾತೆ ತೆರೆಯುವ ಮೂಲಕ ಕೇವಲ ಮೂರೆ ದಿನದಲ್ಲಿ 5000,  ಸಾವಿರಾರು ಹಿಂಬಾಲಕ (ಫಾಲೊಹರ್ಸ್) ಸ್ನೇಹಿತರನ್ನು ಪಡೆಯುವ ಮೂಲಕ ಹೊಸ ಕ್ರಾಂತಿ ರಚಿಸಿದ್ದರು. ಈಗ ವಾಟ್ಸ್ ಆಫ್ ಅತ್ತ ಹೆಜ್ಜೆ ಇಟ್ಟಿದ್ದಾರೆ. ಅವರು ನಿಮ್ಮೊಂದಿಗೆ ನಾವು ಎನ್ನುವ ಅವರಿಗೆ ಅವರೊಂದಿಗೆ ನಾವು ಎನ್ನುವ ಸಹಕಾರ ನಿಡೋಣ...
....................ಇಂತಿ ದಲಿತ್ ಶೈವ್. ರಾಮಸಮುದ್ರ ಎಸ್,ವೀರಭದ್ರಸ್ವಾಮಿ 
                    (9480030980)

ಚಾಮರಾಜನಗರ ಜಿಲ್ಲಾ ಪೊಲಿಸ್ ಇಲಾಖೆ ಪೇಸ್ ಬುಕ್ ಖಾತೆಯಲ್ಲಿನ ಟೈಮ್ ಲೈನ್ ಕೆಳಕಂಡಂತಿದೆ.....
"..Whats app ಗೆ ಸ್ವಾಗತ.."
ಇಂದಿನಿಂದ ಚಾಮರಾಜನಗರ ಜಿಲ್ಲಾ ಪೊಲಿಸ್ ಇಲಾಖೆಯ ' Whats app ' ಖಾತೆಯನ್ನು ತೆರೆಯಲಾಗಿದೆ. ವಾಟ್ಸಪ್ ನಂಬರ್: 9480804600. ಜಿಲ್ಲೆಯ ನಾಗರೀಕರು ಈ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಲು ಕೋರಿದೆ. ಹಾಗೂ ಅನಗತ್ಯ ಫೋಟೋ-ವಿಡಿಯೋಗಳನ್ನು ಶೇರ್ ಮಾಡಬಾರದಾಗಿ ಕೋರಿಕೆ. ನಾಗರೀಕರು ತಮ್ಮ ಸಲಹೆ-ಸೂಚನೆಗಳು, ದೂರು- ದುಮ್ಮಾನಗಳನ್ನ ಹೇಳಿಕೊಳ್ಳಬಹುದು. ತಮ್ಮ ನೋವು ನಲಿವಿಗೆ ಶೀಘ್ರವಾಗಿ ಸ್ಪಂದಿಸುವ ದಿಸೆಯಲ್ಲಿ ಚಾಮರಾಜನಗರ ಜಿಲ್ಲಾ ಪೊಲೀಸ್ ಶ್ರಮಿಸುತ್ತದೆ. ಭರವಸೆ ಇಡಿ. ನಾವೆಂದೂ ನಿಮ್ಮ ಜೊತೆ ಇರುತ್ತೇವೆ. ವಂದನೆಗಳು..

ಗುಂಡ್ಲುಪೇಟೆ ಉಪ ಚುನಾವಣೆ: ವಿದ್ಯುನ್ಮಾನ ಮಾಧ್ಯಮ ಜಾಹಿರಾತು ಅನುಮೋದನೆ ಕಡ್ಡಾಯ : ಜಿಲ್ಲಾಧಿಕಾರಿ


ಗುಂಡ್ಲುಪೇಟೆ ಉಪ ಚುನಾವಣೆ:
ವಿದ್ಯುನ್ಮಾನ ಮಾಧ್ಯಮ ಜಾಹಿರಾತು ಅನುಮೋದನೆ ಕಡ್ಡಾಯ : ಜಿಲ್ಲಾಧಿಕಾರಿ

ಚಾಮರಾಜನಗರ, ಮಾ. 20:- ಗುಂಡ್ಲುಪೇಟೆ ಉಪ ಚುನಾವಣೆಗೆ ಸಂಬಂಧಿಸಿದಂತೆ ದೃಶ್ಯ, ಹಾಗೂ ಶ್ರವಣ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಚುನಾವಣಾ ಜಾಹಿರಾತುಗಳನ್ನು ಪ್ರಸಾರ ಮಾಡುವ ಮುನ್ನ ಕಡ್ಡಾಯವಾಗಿ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ಮೇಲ್ವಿಚಾರಣೆ ಸಮಿತಿಯಿಂದ ಅನುಮೋದನೆ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಬಿ. ರಾಮು ಅವರು ತಿಳಿಸಿದ್ದಾರೆ.
ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲಾ ಮಟ್ಟದಲ್ಲಿ ಸಮಿತಿ ರಚಿಸಲಾಗಿದ್ದು, ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹಿರಾತುಗಳು, ಸುದ್ಧಿ ರೂಪದ (ಪೇಯ್ಡ್ ನ್ಯೂಸ್) ಜಾಹಿರಾತುಗಳ ಬಗ್ಗೆ ಸಮಿತಿ ನಿಗಾ ವಹಿಸಿ ಚುನಾವಣಾಧಿಕಾರಿಗಳಿಗೆ ಹಾಗೂ ವೆಚ್ಚ ವೀಕ್ಷಕರಿಗೆ ದಿನವಹಿ ವರದಿಯನ್ನು ಸಮಿತಿ ನೀಡಲಿದೆ.
ದೂರದರ್ಶನ, ರೇಡಿಯೋ, ಕೇಬಲ್ ಟೆಲಿವಿಷನ್ ಮುಂತಾದ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜಾಹಿರಾತುಗಳನ್ನು ಪ್ರಸಾರ ಮಾಡುವ ಮುನ್ನ ಜಿಲ್ಲಾ ಸಮಿತಿಯಿಂದ ಕಡ್ಡಾಯವಾಗಿ ಅನುಮೋದನೆ ಪಡೆದುಕೊಳ್ಳಬೇಕು. ಸಮಿತಿಯು ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವಾರ್ತಾ ಭವನದಲ್ಲಿ ಕಾರ್ಯ ನಿರ್ವಹಿಸಲಿದ್ದು, ನಿಗದಿತ ನಮೂನೆಗಳನ್ನು ಪಡೆದು ಕೊಂಡು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಒಂದು ವೇಳೆ ಅನುಮೋದನೆ ಪಡೆಯದೇ ಜಾಹಿರಾತು ಪ್ರಸಾರಣವಾದಲ್ಲಿ ಮಾಧ್ಯಮ ನಿಗಾ ಸಮಿತಿಯು ಈ ಬಗ್ಗೆ ಗಮನಹರಿಸುವುದು ಹಾಗೂ ಅಗತ್ಯ ಕ್ರಮಕ್ಕಾಗಿ ಚುನಾವಣಾಧಿಕಾರಿಗಳಿಗೆ ಕಳುಹಿಸುವುದು.
ಪತ್ರಿಕೆಗಳಲ್ಲಿ ಪ್ರಕಟವಾಗುವ ಜಾಹಿರಾತುಗಳಿಗೆ ಅನುಮೋದನೆ ಅಗತ್ಯವಿರುವುದಿಲ್ಲ. ಆದರೆ ಪ್ರಕಟವಾಗುವ ಎಲ್ಲ ಜಾಹಿರಾತುಗಳನ್ನು ಸಮಿತಿಯು ಗಮನಿಸಿ ಅಭ್ಯರ್ಥಿಗಳ ವೆಚ್ಚದ ಲೆಕ್ಕಕ್ಕೆ ತೋರಿಸಲು ವೆಚ್ಚ ವೀಕ್ಷಕರಿಗೆ ಹಾಗೂ ಚುನಾವಣಾ ಅಧಿಕಾರಿಗಳಿಗೆ ನಿಗದಿತ ನಮೂನೆಯಲ್ಲಿ ಮಾಹಿತಿ ನೀಡಲಿದೆ.
ಅಭ್ಯರ್ಥಿಯ ಗಮನಕ್ಕೆ ತಾರದೆ ಬೇರೆಯವರು ಅಭ್ಯರ್ಥಿಯ ಹೆಸರಿನಲ್ಲಿ ಜಾಹಿರಾತು ಮುದ್ರಿಸುವಂತಿಲ್ಲ ಅಥವಾ ಪ್ರಸರಣ ಮಾಡುವಂತಿಲ್ಲ. ಇಂಥಹುವುದು ಕಂಡುಬಂದಲ್ಲಿ ಈ ರೀತಿ ಪ್ರಕಟಿಸಿದವರ ವಿರುದ್ಧವೂ ಕ್ರಮ ವಹಿಸಲಾಗುತ್ತದೆ.
ಪತ್ರಿಕೆಗಳಲ್ಲಿ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿ ರೂಪದ ಜಾಹಿರಾತುಗಳ ಬಗ್ಗೆಯೂ ಸಮಿತಿ ಗಮನಹರಿಸಲಿದೆ. ಕಾಸಿಗಾಗಿ ಸುದ್ದಿ ಎಂದು ಪರಿಗಣಿಸಲಾಗುವ ಈ ಪ್ರಕರಣಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಾಹಿರಾತು ದರ ಅನ್ವಯಿಸಿ ಅಭ್ಯರ್ಥಿಗಳ ಲೆಕ್ಕಕ್ಕೆ ಸೇರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಬಿ. ರಾಮು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುಂಡ್ಲುಪೇಟೆ ವಿಧಾನ ಸಭೆ ಉಪಚುನಾವಣೆ
ನೀತಿ ಸಂಹಿತೆ ಉಲ್ಲಂಘನೆ : ಮದ್ಯ ವಶ, ಭಾವಚಿತ್ರ ತೆರವು


ಚಾಮರಾಜನಗರ,ಮಾ. 20:- ಗುಂಡ್ಲುಪೇಟೆ ವಿಧಾನ ಸಭೆ ಉಪ ಚುನಾವಣೆಗೆ ಸಂಬಂಧಿಸಿದಂತೆ,  ಅಬಕಾರಿ ಅಧಿಕಾರಿಗಳು ಇಂದು ಸಹ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ದಾಖಲು ಮಾಡಿಕೊಂಡಿದ್ದಾರೆ.
ಅಕ್ರಮವಾಗಿ ಸಂಗ್ರಹಿಸಲಾಗಿದ್ದ ಮದ್ಯ ವಶ ಹಾಗೂ ಗ್ರಾಮದ ಚಾವಡಿ ಒಂದರಲ್ಲಿ ಮಾಜಿ ಸಚಿವರೊಬ್ಬರ ಭಾವಚಿತ್ರವನ್ನು ತೆರವುಗೊಳಿಸಿದ ಪ್ರಕರಣವು ನಡೆದಿದೆ.
ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಗ್ರಾಮದಲ್ಲಿ ಮಹದೇವ ಎಂಬುವವರಿಂದ 0.720 ಲೀ., ಸ್ವಾಮಿ ಎಂಬುವವರಿಂದ 0.720 ಲೀ., ಯಳಂದೂರು ತಾಲ್ಲೂಕಿನ ಕೊಮಾರನಪುರ ಗ್ರಾಮದಲ್ಲಿ ವಾಸು ಎಂಬುವವರಿಂದ 1.080 ಲೀ. ಮದ್ಯ, ಯಳಂದೂರು ಪಟ್ಟಣದಲ್ಲಿ ರಂಗಸ್ವಾಮಿ ಎಂಬುವವರಿಂದ 0.900 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ದ ಎಫ್.ಐ.ಆರ್ ದಾಖಲಾಗಿದೆ.
ಗುಂಡ್ಲುಪೇಟೆ ತಾಲ್ಲೂಕಿನ ಕೋಡಹಳ್ಳಿ ಗ್ರಾಮದ ಚಾವಡಿಯಲ್ಲಿ ಸಚಿವರಾಗಿದ್ದ ದಿವಂಗತ ಹೆಚ್.ಎಸ್.ಮಹದೇವಪ್ರಸಾದ್ ಅವರ ಭಾವಚಿತ್ರವನ್ನು ಹಾಕಲಾಗಿದೆ ಎಂದು ಗ್ರಾಮ ಪಂಚಾಯತ್ ಸದಸ್ಯರಾದ ಬಸವಶೆಟ್ಟಿ ಮತ್ತು ರಂಗಶೆಟ್ಟಿ ಎಂಬುವವರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಸೆಕ್ಟರ್ ಅಧಿಕಾರಿಯವರು ಗ್ರಾಮಕ್ಕೆ ತೆರಳಿ ಗ್ರಾಮಸ್ಥರ ಸಹಕಾರದೊಂದಿಗೆ ಸಚಿವರ ಭಾವಚಿತ್ರವನ್ನು ತೆರವುಗೊಳಿಸಿದ್ದಾರೆ ಎಂದು ಉಪ ವಿಭಾಗಾಧಿಕಾರಿ ಹಾಗೂ ಚುನಾವಣಾಧಿಕಾರಿ ನಲಿನ್ ಅತುಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗುಂಡ್ಲುಪೇಟೆ ವಿಧಾನ ಸಭೆ ಉಪಚುನಾವಣೆ
ಮೂವರು ಅಭ್ಯರ್ಥಿಗಳಿಂದ ಐದು ನಾಮಪತ್ರ ಸಲ್ಲಿಕೆ



ಚಾಮರಾಜನಗರ,ಮಾ. 20 :- ಗುಂಡ್ಲುಪೇಟೆ ವಿಧಾನ ಸಭೆ ಉಪ ಚುನಾವಣೆಗೆ ಸಂಬಂಧಿಸಿದಂತೆ,  ಇಂದು ಮೂವರು ಅಭ್ಯರ್ಥಿಗಳಿಂದ ಒಟ್ಟು 5 ನಾಮಪತ್ರ ಸಲ್ಲಿಕೆಯಾಗಿದೆ.
ಭಾರತೀಯ ಜನತಾ ಪಕ್ಷದಿಂದ ಅಭ್ಯರ್ಥಿಯಾಗಿ ಸಿ.ಎಸ್.ನಿರಂಜನ್ ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ. ಭಾರತೀಯ ಕಾಂಗ್ರೇಸ್ ಪಕ್ಷದಿಂದ ಅಭ್ಯರ್ಥಿಯಾಗಿ ಎಂ.ಸಿ.ಮೋಹನಕುಮಾರಿ ಅಲಿಯಾಸ್ ಗೀತಾ ಅವರು 3 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಎಂ.ಶಿವರಾಮು ನಾಮಪತ್ರ ಸಲ್ಲಿಸಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.

ಮಾ. 23ರಂದು ನಗರದಲ್ಲಿ ಉದ್ಯೋಗ ಮೇಳ : ನರ್ಸಿಂಗ್ ಹುದ್ದೆಗಳಿಗೆ ನೇರ ಸಂದರ್ಶನ

ಚಾಮರಾಜನಗರ, ಮಾ. 20 - ಬೆಂಗಳೂರಿನ ಖಾಸಗಿ ಆಸ್ಪತ್ರೆ ಅಪೋಲೋ ಹೋಂಕೇರ್ ಅವರಿಂದ ವಿವಿಧ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುವ ಸಲುವಾಗಿ ನಗರದ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ  ಮಾರ್ಚ್ 23ರಂದು ಉದ್ಯೋಗ ಮೇಳ ಆಯೋಜಿಸಲಾಗಿದೆ.
ಎಎನ್‍ಎಂ, ಜಿಎನ್‍ಎಂ ಮತ್ತು ಬಿಎಸ್ಸಿ ನರ್ಸಿಂಗ್ ವ್ಯಾಸಂಗ ಮಾಡಿರುವ 18 ರಿಂದ 35ರ ವಯೋಮಿತಿಯುಳ್ಳ ಅಭ್ಯರ್ಥಿಗಳು ಭಾಗವಹಿಸಬಹುದು. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಸ್ವವಿವರದೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ವಸತಿ ಸೌಲಭ್ಯ ಸಹ ಒದಗಿಸಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ಅಧಿಕಾರಿ ದೂ.ಸಂ. 08226-224430 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




ಅಪರಿಚಿತ ಶವ ಪತ್ತೆ : ಸುಳಿವು ನೀಡಲು ಮನವಿ
ಚಾಮರಾಜನಗರ, ಮಾ. 20:- ಮಲೆಮಹದೇಶ್ವರ ಬೆಟ್ಟದಲ್ಲಿ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದು ಈ ಸಂಬಂಧ ಮಾಹಿತಿ ನೀಡಲು ಮಲೆಮಹದೇಶ್ವರ ಬೆಟ್ಟದ ಪೊಲೀಸ್ ಆರಕ್ಷಕ ನಿರೀಕ್ಷಕರು ಮನವಿ ಮಾಡಿದ್ದಾರೆ.
ಸುಮಾರು 60 ರಿಂದ 65ರ ವಯಸ್ಸಿನ ಅಪರಿಚಿತ ಪುರುಷ ಶವ ಮಲೆಮಹದೇಶ್ವರಸ್ವಾಮಿ ಕ್ಷೇತ್ರದಲ್ಲಿರುವ ಮುಡಿ ಟಿಕೆಟ್ ಕೊಡುವ ಕೊಠಡಿ ಪಕ್ಕದ ಅಂಗಡಿ ಮಳಿಗೆ ಡಾರ್ಮಿಟರಿಯಲ್ಲಿ ಪತ್ತೆಯಾಗಿದೆ. 7 ಸೆಂ.ಮೀ. ಉದ್ದವಿದ್ದು ಕಪ್ಪು ಬಿಳಿ ಮಿಶ್ರಿತ ತಲೆಕೂದಲು, ಗೋದಿ ಮೈಬಣ್ಣ, ಕೋಲು ಮುಖ, ತೆಳ್ಳನೆಯ ಶರೀರವಿದ್ದು ಮೃತನ ಬಲಕೈಯಲ್ಲಿ ಒಂದು ಸಣ್ಣ ಬಿಳಿ ಮಚ್ಚೆ ಇರುತ್ತದೆ. ಬಿಳಿ ಬಣ್ಣದ ಅರ್ಧ ತೋಳಿನ ಶರ್ಟ್ ಧರಿಸಲಾಗಿದೆ. ಸದರಿ ಚಹರೆಯುಳ್ಳವರ ಬಗ್ಗೆ ವಾರಸುದಾರರು, ಸಂಬಂಧಿಕರು ಅಥವಾ ಮಾಹಿತಿ ಹೊಂದಿದ್ದರೆ ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆ ದೂ.ಸಂ. 08226-272141, ಮೊಬೈಲ್ 9480804658 ಅಥವ ಕಂಟ್ರೋಲ್ ರೂಂ 08226-222398ಗೆ ತಿಳಿಸುವಂತೆ ಪೊಲೀಸ್ ಆರಕ್ಷಕ ನಿರೀಕ್ಷಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಸಬ್ ಇನ್ಸ್‍ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳಿ ಅರ್ಜಿ ಶುಲ್ಕ ವಾಪಸ್

ಚಾಮರಾಜನಗರ, ಮಾ. 20:- ಪೊಲೀಸ್ ಇಲಾಖೆಯಲ್ಲಿ 2015ನೇ ಸಾಲಿನಲ್ಲಿ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದ್ದು 2016ರಲ್ಲಿ ನೇಮಕಾತಿ ಅಧಿಸೂಚನೆಯನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಹಿಂತಿರುಗಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಒಟ್ಟು 1480 ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಹಿಂತಿರುಗಿಸಲು ಸೂಚಿಸಲಾಗಿದೆ. ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳು ನಗರದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಸೂಕ್ತ ದಾಖಲಾತಿಗಳ ನಕಲು ಪ್ರತಿಗಳನ್ನು ಹಾಜರುಪಡಿಸಿ ಅರ್ಜಿ ಶುಲ್ಕ ಪಡೆದುಕೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ ಕುಮಾರ್ ಆರ್ ಜೈನ್ ತಿಳಿಸಿದ್ದಾರೆ.


Monday, 20 March 2017

20-03-2017 ಬೈ ಎಲೆಕ್ಸನ್ ಐವರಿಂದ ನಾಮಪತ್ರ ಸಲ್ಲಿಕೆ


ಗಿರಿರಂಗನಾಥ ಸ್ವಾಮಿ ದೇವಾಲಯ ಎರಡು ವರ್ಷ ಬಂದ್ ಹಿನ್ನಲೆಯಲ್ಲಿ, ದೇವಾಲಯದ ಹತ್ತಿರದಲ್ಲೇ ಪ್ರತಿಷ್ಠಾಪನೆಗೊಂಡ ಬಿಳಿಗಿರಿರಂಗನಾಥಸ್ವಾಮಿ


ಗುಂಡ್ಲುಪೇಟೆ ವಿಧಾನ ಸಭೆ ಉಪಚುನಾವಣೆ
ನೀತಿ ಸಂಹಿತೆ ಉಲ್ಲಂಘನೆ : ಮದ್ಯ, ತರಕಾರಿ ಬಾತ್ ವಶ

ಚಾಮರಾಜನಗರ, ಮಾ. 19 :- ಗುಂಡ್ಲುಪೇಟೆ ವಿಧಾನ ಸಭೆ ಉಪಚುನಾವಣಿ ಹಿನ್ನಲೆಯಲ್ಲಿ ಅಬಕಾರಿ ಹಾಗೂ ಸೆಕ್ಟರ್ ಅಧಿಕಾರಿಗಳು ಶನಿವಾರ ವಿವಿಧೆಡೆ ದಾಳಿ ನಡೆಸಿದ್ದು  ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ದಾಖಲು ಮಾಡಿಕೊಂಡಿದ್ದಾರೆ.
ಅಕ್ರಮವಾಗಿ ಸಂಗ್ರಹಿಸಲಾಗಿದ ಮದ್ಯ ಹಾಗೂ ಕಾರ್ಯಕರ್ತರಿಗೆ ಹಂಚಲು ಸಿದ್ದಪಡಿಸಿದ್ದ ತರಕಾರಿ ಬಾತ್ ವಶಪಡಿಸಿಕೊಂಡಿದ್ದಾರೆ.
 ಕಗ್ಗಳ ಗ್ರಾಮದಲ್ಲಿ ದೊಡ್ಡನಾಯಕ ಎಂಬುವರಿಂದ 1.440 ಲೀಟರ್ ಹಾಗೂ ರಾಚನಾಯಕ ಎಂಬುವರಿಂದ 1.800 ಲೀಟರ್ ಮದ್ಯ, ತೊಂಡವಾಡಿ ಗ್ರಾಮದಲ್ಲಿ ರಾಜು ಎಂಬುವರಿಂದ 1.080 ಲೀಟರ್ ಮದ್ಯ, ಬೇಗೂರು ಗ್ರಾಮದಲ್ಲಿ ಸಂತೋಷ್À ಎಂಬುವರಿಂದ 1.080 ಲೀಟರ್ ಮದ್ಯವನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ದ ಎಫ್.ಐ.ಆರ್ ದಾಖಲಿಸಲಾಗಿದೆ.
ಕಬ್ಬಹಳ್ಳಿ  ಗ್ರಾಮದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್vರ ಸಭೆಗೆ ತಯಾರು ಮಾಡಿದ್ದ ತರಕಾರಿ ಬಾತ್‍ನ್ನು ವೇದಿಕೆ ಹಿಂಬಾಗದಲ್ಲಿದ್ದ ಕೆ.ಎಂ.ಸುಬ್ಬಣ ಅವರ ಮನೆಯಲ್ಲಿ ವಶಪಡಿಸಿಕೊಳ್ಳಲಾಗಿದೆ. ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿಗಳಾದ ನಳಿನ್ ಅತುಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
_______________________________________________________________________

ಗಿರಿರಂಗನಾಥ ಸ್ವಾಮಿ ದೇವಾಲಯ ಎರಡು ವರ್ಷ ಬಂದ್ ಹಿನ್ನಲೆಯಲ್ಲಿ, ದೇವಾಲಯದ ಹತ್ತಿರದಲ್ಲೇ ಪ್ರತಿಷ್ಠಾಪನೆಗೊಂಡ ಬಿಳಿಗಿರಿರಂಗನಾಥಸ್ವಾಮಿ ಹಾಗೂ ಆಲಮೇಲಮ್ಮನವರ ಪ್ರತಿರೂಪದ ಮರದ ವಿಗ್ರಹಗಳು
.
ಯಳಂದೂರು ಮಾ 18 ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಬಿಳಿಗಿರಿರಂಗನಬೆಟ್ಟದ ಬಿಳಿಗಿರಿರಂಗನಾಥಸ್ವಾಮಿ ಅಲಮೇಲು ಅಮ್ಮನವರ ದೇವಾಲಯ ಜೀರ್ಣೊದ್ದಾರ ಅಂಗವಾಗಿ ಬಿಳಿಗಿರಿರಂಗನಾಥರಸ್ವಾಮಿ ದೇವಾಲಯದ ದೇವಸ್ಥಾನ ಭಕ್ತರಿಗೆ ಎರಡು ವರ್ಷಗಳ ಕಾಲ ಬಂದ್ ಆಗಿರುವ ಹಿನ್ನಲೆಯಲ್ಲಿ ಬಿಳಿಗಿರಿರಂಗನಾಥಸ್ವಾಮಿ ಹಾಗೂ ಆತನ ಪತ್ನಿ ಅಲಮೇಲು ಅಮ್ಮನವರ ಪ್ರತಿಮೆಯನ್ನು ದೇವಾಲಯದ ಬಳಿಯಲ್ಲಿರುವ ಕಾಶಿ ಮಂಟಪದಲ್ಲಿ ಪ್ರತಿಷ್ಟಾಪಿಸಿ ವಿಶೇಷ ಪೂಜೆ ಸಲ್ಲಿಸಿ ಬಿಳಿಗಿರಿರಂಗನಾಥನ ಭಕ್ತರಿಗೆ ಬಿಳಿಗಿರಿರಂಗನಾಥಸ್ವಾಮಿ ಹಾಗೂ ಆತನ ಪತ್ನಿ ಅಲಮೇಲು ಅಮ್ಮನವರ ಮರದಿಂದ ತಯಾರಿಸಿದ ಪ್ರತಿರೂಪದ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ.
ಪ್ರಾಣ ಪ್ರತಿಷ್ಟೆ ಡಾ. ಭಾಷ್ಯಂಸ್ವಾಮೀಜಿಯವರು ಹಾಗೂ ಸ್ಥಳೀಯ ಆಗಮಿಕರು ಎಸ್.ನಾಗರಾಜಭಟ್ಟ, ವಿದ್ವಾನ್ ಪಿ. ಸತ್ಯನಾರಾಯಣರವರ ಪ್ರಧಾನಾಚಾರ್ಯತ್ವದಲ್ಲಿ, ಧಾರ್ಮಿಕ ದತ್ತಿ ಇಲಾಖೆಯ ವೈಖಾನಸಾಗಮ ಪಂಡಿತ ಡಾ.ಎಸ್.ರಾಜಗೋಪಾಲ್ ಪ್ರೋಫೆಸರ್ ಡಾ.ಎಸ್ ಶ್ರೀನಿಧಿ, ಅರ್ಚಕರು ರವಿಕುಮಾರ್ ಸಹಯೋಗದಲ್ಲಿ ರಾತ್ರಿ ಪೂರ್ತಿ ಹೋಮ ಹವನ ಯಜ್ಞ ಯಾಗಾದಿಗಳೊಂದಿಗೆ ಶ್ರೀ ಬಿಳಿಗಿರಿರಂಗನಾಥಸ್ವಾಮಿ ಶ್ರೀದೇವಿ, ಭೂದೇವಿ, ಕುಂಭಕ್ಕೆ ಪ್ರಾಣ ಪ್ರತಿಷ್ಟೆ ಮಾಡಿ ದೇವರ ಪ್ರತಿಮೆಗಳಿಗೆ ತುಂಬಲಾಯಿತು. ನಂತರ ಅಲಮೇಲು ಅಮ್ಮನವರ ಪ್ರತಿಮೆಗೆ ಪ್ರಾಣಪ್ರತಿಷ್ಟೆ ಶಕ್ತಿಯನ್ನು ವಿಗ್ರಹಕ್ಕೆ ತುಂಬಿ ಮೂಲ ದೇವರಂತೆಯೇ ವಿವಿಧ ಪುಷ್ಪಾಲಂಕಾರಗಹಳಿಂದ ಶಿಂಗರಿಸಿ ಮಹಾ ಮಂಗಳಾರತಿ ಸಲ್ಲಿಸಿದ ನಂತರ ಭಕ್ತರು ದರುಶನ ಪಡೆಯಲು ಅನುವು ಮಾಡಿಕೊಡಲಾಯಿತು. ಆದ್ದರಿಂದ ಇನ್ಮುಂದೆ ರಂಗಪ್ಪನ ಭಕ್ತರು ಎಂದಿನಂತೆ ಪ್ರತಿರೂಪದ ಬಿಳಿಗಿರಿರಂಗನಾಥಸ್ವಾಮಿ ಹಾಗೂ ಅಲಮೇಲು ಅಮ್ಮನವರ ದೇವರ ದರ್ಶನÀ ಪಡೆಯಬಹುದಾಗಿದೆ. ಪ್ರತಿರೂಪದ ದೇವರ ದರ್ಶನ ನೋಡಲು ಸಹಜವಾಗಿ ಭಕ್ತರ ಸಂಖ್ಯೆ ಇಳಿಮುಖವಾಗಿತ್ತು. ನಂತರ ನೆರೆದಿದ್ದ ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಯಿತು.

Sunday, 19 March 2017

ಚುನಾವಣೆ ರಂಗು ಎಣ್ಣೆ ವಶ. 19-03-2017 ಚಾಮರಾಜನಗರ ಸುದ್ದಿ

ನೀತಿ ಸಂಹಿತೆ ಉಲ್ಲಂಘನೆ : ಮದ್ಯ, ತರಕಾರಿ ಬಾತ್ ವಶ

ಚಾಮರಾಜನಗರ, ಮಾ. 19 (ಎಸ್.ವೀರಭದ್ರಸ್ವಾಮಿ):- ಗುಂಡ್ಲುಪೇಟೆ ವಿಧಾನ ಸಭೆ ಉಪಚುನಾವಣಿ ಹಿನ್ನಲೆಯಲ್ಲಿ ಅಬಕಾರಿ ಹಾಗೂ ಸೆಕ್ಟರ್ ಅಧಿಕಾರಿಗಳು ಶನಿವಾರ ವಿವಿಧೆಡೆ ದಾಳಿ ನಡೆಸಿದ್ದು  ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ದಾಖಲು ಮಾಡಿಕೊಂಡಿದ್ದಾರೆ.
ಅಕ್ರಮವಾಗಿ ಸಂಗ್ರಹಿಸಲಾಗಿದ ಮದ್ಯ ಹಾಗೂ ಕಾರ್ಯಕರ್ತರಿಗೆ ಹಂಚಲು ಸಿದ್ದಪಡಿಸಿದ್ದ ತರಕಾರಿ ಬಾತ್ ವಶಪಡಿಸಿಕೊಂಡಿದ್ದಾರೆ.
 ಕಗ್ಗಳ ಗ್ರಾಮದಲ್ಲಿ ದೊಡ್ಡನಾಯಕ ಎಂಬುವರಿಂದ 1.440 ಲೀಟರ್ ಹಾಗೂ ರಾಚನಾಯಕ ಎಂಬುವರಿಂದ 1.800 ಲೀಟರ್ ಮದ್ಯ, ತೊಂಡವಾಡಿ ಗ್ರಾಮದಲ್ಲಿ ರಾಜು ಎಂಬುವರಿಂದ 1.080 ಲೀಟರ್ ಮದ್ಯ, ಬೇಗೂರು ಗ್ರಾಮದಲ್ಲಿ ಸಂತೋಷ್À ಎಂಬುವರಿಂದ 1.080 ಲೀಟರ್ ಮದ್ಯವನ್ನು ವಶಪಡಿಸಿಕೊಂಡು ಆರೋಪಿಗಳ ವಿರುದ್ದ ಎಫ್.ಐ.ಆರ್ ದಾಖಲಿಸಲಾಗಿದೆ.
ಕಬ್ಬಹಳ್ಳಿ  ಗ್ರಾಮದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್vರ ಸಭೆಗೆ ತಯಾರು ಮಾಡಿದ್ದ ತರಕಾರಿ ಬಾತ್‍ನ್ನು ವೇದಿಕೆ ಹಿಂಬಾಗದಲ್ಲಿದ್ದ ಕೆ.ಎಂ.ಸುಬ್ಬಣ ಅವರ ಮನೆಯಲ್ಲಿ ವಶಪಡಿಸಿಕೊಳ್ಳಲಾಗಿದೆ. ತೆರಕಣಾಂಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿಗಳಾದ ನಳಿನ್ ಅತುಲ್  ತಿಳಿಸಿದ್ದಾರೆ.

Saturday, 18 March 2017

18-03-2017 ನೀತಿಸಂಹಿತೆ ಪಾಲನೆ ಪರಿಶೀಲನೆ : ಸಮರ್ಪಕ ಕರ್ತವ್ಯ ನಿರ್ವಹಣೆಗೆ ಚುನಾವಣಾಧಿಕಾರಿ ಸೂಚನೆ,ಗುಂಡ್ಲುಪೇಟೆ ಉಪಚುನಾವಣೆ : ಐದನೇ ದಿನವೂ ನಾಮಪತ್ರ ಸಲ್ಲಿಕೆ ಇಲ್ಲ, ರಾಸುಗಳಿಗೆ ಸೋಂಕು ಹಿನ್ನಲೆ: ಮಂಗಲ ಗೋಶಾಲೆ ತಾತ್ಕಲಿಕ ಸ್ಥಗಿತ



ನೀತಿಸಂಹಿತೆ ಪಾಲನೆ ಪರಿಶೀಲನೆ : ಸಮರ್ಪಕ ಕರ್ತವ್ಯ ನಿರ್ವಹಣೆಗೆ ಚುನಾವಣಾಧಿಕಾರಿ ಸೂಚನೆ
ಚಾಮರಾಜನಗರ, ಮಾ. 18 - ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆಗೆ ಸಂಬಂಧಪಟ್ಟಂತೆ ನಿಯೋಜನೆಗೊಂಡಿರುವ ಅಧಿಕಾರಿಗಳು ನೀತಿಸಂಹಿತೆ ಕಟ್ಟನಿಟ್ಟಾಗಿ ಪಾಲನೆ ಮಾಡುವ ನಿಟ್ಟಿನಲ್ಲಿ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುವಂತೆ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ನಳಿನ್ ಅತುಲ್ ಸೂಚನೆ ನೀಡಿದರು.
ಗುಂಡ್ಲುಪೇಟೆಯ ತಾಲೂಕು ಕಚೇರಿಯಲ್ಲಿ ಇಂದು ಚುನಾವಣೆ ಕರ್ತವ್ಯಕ್ಕೆ ನಿಯೋಜಿತರಾಗಿರುವ ಸೆಕ್ಟರ್ ಅಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್, ವೀಡಿಯೋ ಕಣ್ಗಾವಲು ಸೇರಿದಂತೆ ವಿವಿಧ ಅಧಿಕಾರಿಗಳೊಂದಿಗೆ ಸಮಾಲೋಚನೆ ಸಭೆ ನಡೆಸಿದರು.
ಈಗಾಗಲೇ ಚುನಾವಣಾ ಪ್ರಕ್ರಿಯೆ ನಡೆಯುತ್ತಿದ್ದು ಎಲ್ಲೆಡೆ ನಿಗಾ ವಹಿಸಬೇಕು. ವಾಹನ ತಪಾಸಣೆ ಸೇರಿದಂತೆ ಎಲ್ಲ ಪ್ರದೇಶಗಳಲ್ಲಿ ವ್ಯಾಪಕವಾಗಿ ಪರಿಶೀಲಿಸಿ ಚುನಾವಣಾ ಅಕ್ರಮಕ್ಕೆ ಅವಕಾಶವಾಗದಂತೆ ಎಚ್ಚರಿಕೆ ವಹಿಸಬೇಕು. ನಿಯೋಜಿತವಾಗಿರುವ ಅಧಿಕಾರಿಗಳು ಅವರಿಗೆ ವಹಿಸಿರುವ ಕರ್ತವ್ಯವನ್ನು ಗಂಭೀರವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.
ಚುನಾವಣಾ ಸಂಬಂಧ ಸಭೆ ಸಮಾರಂಭಗಳಿಗೆ ಅನುಮತಿ ಪಡೆಯಲಾಗಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಬೇಕು. ನೀತಿಸಂಹಿತೆ ಉಲ್ಲಂಘನೆ ಅಂಶಗಳು ಇವೆಯೇ ಎಂಬ ಬಗ್ಗೆ ಕೂಲಂಕುಷವಾಗಿ ವೀಕ್ಷಿಸಬೇಕು. ಉಲ್ಲಂಘನೆಯಾಗಿದೆ ಎಂಬ ಬಗ್ಗೆ ಕಂಡುಬಂದಲ್ಲಿ ವರದಿ ಸಲ್ಲಿಸಿ ಪ್ರಕರಣ ದಾಖಲು ಮಾಡಬೇಕು ಎಂದರು.
ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳು ವ್ಯಾಪಕವಾಗಿ ಪರಿಶೀಲಿಸಬೇಕು. ಆಮಿಷ ಒಡ್ಡುವ ಪ್ರಕರಣಗಳು ನಡೆಯುತ್ತಿವೆಯೇ ಎಂಬ ಬಗ್ಗೆ ಖುದ್ದು ವೀಕ್ಷಿಸಬೇಕು. ಅಸಹಜ, ಚುನಾವಣಾ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಬಂದಲ್ಲಿ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಚುನಾವಣೆ ಹಿನ್ನೆಲೆಯಲ್ಲಿ ತೆರೆಯಲಾಗಿರುವ ಚೆಕ್ ಪೋಸ್ಟ್‍ಗಳಲ್ಲಿ ಕಟ್ಟುನಿಟ್ಟಾಗಿ ತಪಾಸಣೆ ಕಾರ್ಯ ನಡೆಯಬೇಕು. ಎಲ್ಲಾ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಯಾವುದೇ ದೂರು ಲೋಪಕ್ಕೆ ಆಸ್ಪದವಾಗದಂತೆ ಕೆಲಸ ಮಾಡಬೇಕು ಎಂದು ಚುನಾವಣಾ ಅಧಿಕಾರಿ ನಳಿನ್ ಅತುಲ್ ನಿರ್ದೇಶನ ನೀಡಿದರು.
ಸಹಾಯಕ ಚುನಾವಣಾಧಿಕಾರಿ ಸಿದ್ದು, ವಿವಿಧ ಇಲಾಖೆ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಗುಂಡ್ಲುಪೇಟೆ ಉಪಚುನಾವಣೆ : ಐದನೇ ದಿನವೂ ನಾಮಪತ್ರ ಸಲ್ಲಿಕೆ ಇಲ್ಲ
ಚಾಮರಾಜನಗರ, ಮಾ. 18:- ಗುಂಡ್ಲುಪೇಟೆ ವಿಧಾನಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ನಾಮಪತ್ರ ಸಲ್ಲಿಸಲು ಐದನೇ ದಿನವಾದ ಇಂದು ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಮಾ. 19ರಂದು ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಮಾ. 18 :- ಚಾಮುಂಡೇಶ್ವರಿ ವಿದ್ಯುತ್ ಪ್ರಸರಣ ನಿಗಮವು ದೊಡ್ಡರಾಯಪೇಟೆ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ಮಾರ್ಚ್ 19ರಂದು ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 7.30 ರಿಂದ ಸಂಜೆ 4 ಗಂಟೆಯವರೆಗೆ ದೊಡ್ಡರಾಯಪೇಟೆ ವ್ಯಾಪ್ತಿಯ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಸಾರ್ವಜನಿಕರು ವಿದ್ಯುತ್ ಸರಬರಾಜು ನಿಗಮದೊಂದಿಗೆ ಸಹಕರಿಸುವಂತೆÉ ಚೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಎಸ್ ಎಸ್ ಎಲ್ ಸಿ ಪರೀಕ್ಷಾ ಕೇಂದ್ರ : ಸ್ಪಷ್ಟನೆ
ಚಾಮರಾಜನಗರ, ಮಾ. 18 :- ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಸಂಬಂಧಿಸಿದಂತೆ ಖಾಸಗಿ ಅಭ್ಯರ್ಥಿಗಳು ಹಾಗೂ ವಿದ್ಯಾರ್ಥಿಗಳ ನಗರದ ಒಂದು ಪರೀಕ್ಷಾ ಕೇಂದ್ರವಾದ ಸೇವಾ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕೋರ್ಟ್ ರಸ್ತೆ, ಚಾಮರಾಜನಗರ ಟೌನ್ ಎಂದು ನಮೂದಾಗಿರುವುದನ್ನು ಸೇವಾ ಭಾರತಿ, ಆಂಗ್ಲ ಮಾಧ್ಯಮ ಪ್ರೌಢಶಾಲೆ, ಚೆನ್ನಿಪುರದಮೋಳೆ ರಸ್ತೆ, ಚಾಮರಾಜನಗರ ಟೌನ್ ಎಂದು ತಿಳಿದುಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮಂಜುಳ ಅವರು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಬೇಸಿಗೆ ಹಿನ್ನೆಲೆ : ಶುಚಿತ್ವ ಕಾಪಾಡಲು ಹೋಟೆಲ್, ಅಂಗಡಿ ಉದ್ದಿಮೆಗಳಿಗೆ ಸೂಚನೆ
ಚಾಮರಾಜನಗರ, ಮಾ. 18- ಬೇಸಿಗೆ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಚಾಮರಾಜನಗರ ನಗರಸಭಾ ವ್ಯಾಪ್ತಿಯ ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್, ಫಾಸ್ಟ್ ಫುಡ್, ಬೇಕರಿ, ಮಾಂಸ, ಹಣ್ಣು, ಸಿಹಿತಿಂಡಿ, ಇನ್ನಿತರ ವಸ್ತುಗಳನ್ನು ಮಾರಾಟ ಮಾಡುವವರು ನೈರ್ಮಲ್ಯ ಕಾಪಾಡುವಂತೆ ನಗರಸಭೆ ಸೂಚಿಸಿದೆ.
ಪಟ್ಟಣದಲ್ಲಿ ತಾಪಮಾನ ಅಧಿಕವಾಗಿದ್ದು ಶುಚಿತ್ವಕ್ಕೆ ಮಹತ್ವ ನೀಡಬೇಕು. ಹೋಟೆಲ್, ಇನ್ನಿತರ ಅಂಗಡಿ ಉದ್ದಿಮೆ, ಬೀದಿಬದಿಯಲ್ಲಿ ವ್ಯಾಪಾರ ಮಾರಾಟ ಮಾಡುವವರು ಕ್ರಿಮಿಕೀಟಗಳು ಕೂರದ ಹಾಗೆ ಜಾಗರೂಕತೆ ವಹಿಸಬೇಕು. ಗ್ರಾಹಕರಿಗೆ ಬಿಸಿನೀರು ಪೂರೈಸಬೇಕು. ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕು. ತ್ಯಾಜ್ಯ ವಸ್ತುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಬೇಕು ಎಂದು ಸೂಚಿಸಲಾಗಿದೆ.
ಪಟ್ಟಣದಲ್ಲಿ ಪ್ಲಾಸ್ಟಿಕ್ ಮಾರಾಟ ಹಾಗೂ ಬಳಕೆಯನ್ನು ನಿಷೇಧಿಸಲಾಗಿದೆ. ಸಾಕುಪ್ರಾಣಿಗಳನ್ನು ಮಾಲೀಕರು ಸಾರ್ವಜನಿಕ ರಸ್ತೆಗೆ ಬಿಡದೆ ತಮ್ಮ ಮನೆಯ ಆವರಣದಲ್ಲಿ ಪೋಷಣೆ ಮಾಡಬೇಕು. ಸಾರ್ವಜನಿಕ ರಸ್ತೆಗೆ ಸಾಕುಪ್ರಾಣಿಗಳನ್ನು ಬಿಟ್ಟು ತೊಂದರೆ ನೀಡಿದಲ್ಲಿ ಪ್ರಾಣಿಗಳನ್ನು ಸೆರೆ ಹಿಡಿದು ಪಿಂಜರಾಪೋಲ್‍ಗೆ ಸಾಗಿಸಲಾಗುವುದು ಎಂದು ತಿಳಿಸಲಾಗಿದೆ.
ಒಟ್ಟಾರೆ ನಗರದ ನೈರ್ಮಲ್ಯ ಕಾಪಾಡಲು ಜನತೆ ಸಹಕರಿಸಬೇಕು ಎಂದು ನಗರಸಭೆ ಪ್ರಕಟಣೆಯಲ್ಲಿ ಮನವಿ ಮಾಡಿದೆ.


ರಾಸುಗಳಿಗೆ ಸೋಂಕು ಹಿನ್ನಲೆ: ಮಂಗಲ ಗೋಶಾಲೆ ತಾತ್ಕಲಿಕ ಸ್ಥಗಿತ
ಚಾಮರಾಜನಗರ, ಮಾ. 18 - ರಾಸುಗಳಲ್ಲಿ ಸೋಂಕು ರೋಗದ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ತಾಲ್ಲೂಕಿನ ಮಂಗಲ ಗ್ರಾಮದಲ್ಲಿ ತೆರೆಯಲಾಗಿದ್ದ ಗೋಶಾಲೆಯನ್ನು ಮಾರ್ಚ್ 18 ರಿಂದ ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಲಾಗಿದೆ ಎಂದು ತಹಶೀಲ್ದಾರ್ ಕೆ. ಪುರಂದರ ತಿಳಿಸಿದ್ದಾರೆ.
ಮಂಗಲ ಗೋಶಾಲೆಯಲ್ಲಿ ಮೊದಲಿಗೆ 3 ರಾಸುಗಳಿಗೆ ಸೊಂಕು ಕಾಣಿಸಿಕೊಂಡಿದ್ದು ಇದುವರೆಗೆ ಒಟ್ಟು 20 ರಾಸುಗಳಿಗೆ ರೋಗಲಕ್ಷಣ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ತಾವು ಮತ್ತು ಪಶುಪಾಲನಾ ಇಲಾಖೆಯ ಉಪನಿರ್ದೇಶಕರ ನೇತೃತ್ವದ ತಜ್ಞ ಪಶುವೈದ್ಯರ ತಂಡ ಪರಿಶೀಲನೆ ನಡೆಸಿದ್ದು ರೋಗಪೀಡಿತ ರಾಸುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.
ಮುಂಜಾಗ್ರತ ಕ್ರಮವಾಗಿ ರೋಗ ಹರಡುವುದನ್ನು ತಪ್ಪಿಸಲು ಮಾಚ್ 18 ರಿಂದ ಮಂಗಲ ಗೋಶಾಲೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ರೋಗ ಹತೋಟಿಗೆ ಬಂದ ನಂತರ ಗೋಶಾಲೆಯನ್ನು ಪುನಾರಾರಂಭಿಸಲಾಗುವುದು. ಜಾನುವಾರು ಪೋಷಣೆ ಮಾಡುತ್ತಿರುವ ಜನತೆ ಸಹಕರಿಸಬೇಕೆಂದು ತಹಶೀಲ್ದಾರ್ ಕೆ. ಪುರಂದರ ಅವರು ಕೋರಿದ್ದಾರೆ.

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು