Thursday, 29 March 2018

ಪರ್ಕಾವಣೆಯಿಂದ ಒಟ್ಟು ರೂ.1,19,71,039.00 ( ಒಂದು ಕೋಟಿ ಹತ್ತೊಂಭತ್ತು ಲಕ್ಷದ ಎಪ್ಪತ್ತೋಂದು ಸಾವಿರದ ಮೂವತ್ತೊಂಭತ್ತು ರೂಗಳು) 27-03-2018

27-03-2018ರಂದು ಬೆಳಿಗ್ಗೆ 7.00 ಗಂಟೆಗೆ ಶ್ರೀ ಮಲೈ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ  ಪ್ರಾಧಿಕಾರದ ಕಾರ್ಯದರ್ಶಿಗಳಾದ ಶ್ರೀಮತಿ ಎಂ.ಜೆ.ರೂಪಾ,ಕೆ.ಎ.ಎಸ್.(ಹಿರಿಯಶ್ರೇಣಿ)ರವರ ಅಧ್ಯಕ್ಷತೆಯಲ್ಲಿ ಹಾಗೂ  ಶ್ರೀ ಸಾಲೂರು ಬೃಹನ್ಮಠದ ಶ್ರೀ ಶ್ರೀ ಪಟ್ಟದ ಗುರುಸ್ವಾಮಿಗಳವರ ಉಪಸ್ಥಿತಿಯಲ್ಲಿ ಹುಂಡಿಗಳನ್ನು ತೆರೆಯಲಾಗಿದ್ದು, ಸದರಿ ಹುಂಡಿಗಳ  ಪರ್ಕಾವಣೆಯಲ್ಲಿ ಪ್ರಾಧಿಕಾರದ ಸದಸ್ಯರುಗಳಾದ ಶ್ರೀ ಜವರೇಗೌಡರು, ಉಪಸ್ಥಿತರಿದ್ದರು ಹಾಗೂ  ಪ್ರಾಧಿಕಾರದ  ಉಪ ಕಾರ್ಯದರ್ಶಿಗಳಾದ ಶ್ರೀ ಎಂ.ಬಸವರಾಜು  ರವರು,     ಲೆಕ್ಕಾಧೀಕ್ಷಕರಾದ ಮಹದೇವಸ್ವಾಮಿ,    ಕಛೇರಿಯ ಅಧೀಕ್ಷಕರಾದ ಶ್ರೀಬಿ.ಮದರಾಜು, ಆರೋಗ್ಯ ನಿರೀಕ್ಷಕರಾದ           
ಶ್ರೀಕಾಂತ್ ವಿಭೂತಿ ಹಾಗೂ ದೇವಸ್ಥಾನದ ಎಲ್ಲಾ ನೌಕರರುಗಳು, ಚಾಮರಾಜನಗರ        ಜಿಲ್ಲಾಧಿಕಾರಿಯವರ ಕಛೇರಿಯ  ಪ್ರಥಮ ದರ್ಜೆ ಸಹಾಯಕರಾದ ಶ್ರೀ ಮೋಹನ್ ಕುಮಾರ್ ಮತ್ತು ಮಹದೇಶ್ವರಬೆಟ್ಟ  ಆರಕ್ಷಕ  ಸಿಬ್ಬಂದಿ ವರ್ಗ, ಎಸ್.ಬಿ.ಎಂ. ವ್ಯವಸ್ಥಾಪಕರಾದ ಸೆಂದಿಲ್ ನಾಥನ್  & ಸಿಬ್ಬಂದಿ ವರ್ಗದವರು ಹಾಜರಿದ್ದರು.ಇವರೆಲ್ಲರ ಸಹಕಾರದಿಂದ ಹುಂಡಿ ಪರ್ಕಾವಣೆ ಮತ್ತು ಎಣಿಕೆಯ ಕಾರ್ಯ ಸುಗಮವಾಗಿ ಜರುಗಿತು ಸದರಿ ದಿವಸದಂದು ಹುಂಡಿ ಪರ್ಕಾವಣೆಯಿಂದ ಒಟ್ಟು ರೂ.1,19,71,039.00 (  ಒಂದು ಕೋಟಿ ಹತ್ತೊಂಭತ್ತು ಲಕ್ಷದ ಎಪ್ಪತ್ತೋಂದು ಸಾವಿರದ ಮೂವತ್ತೊಂಭತ್ತು ರೂಗಳು) ಬಂದಿರುತ್ತದೆ. ಇದಲ್ಲದೇ ಚಿನ್ನದ  ಪದಾರ್ಥಗಳು 0.35 (ಮೂವತ್ತೈದು ಗ್ರಾಂ) ಮತ್ತು ಬೆಳ್ಳಿ  ಪದಾರ್ಥಗಳು  0.780 (ಎಳುನೂರ ಎಂಭತ್ತು ಗ್ರಾಂ) ದೊರೆತಿರುತ್ತದೆ.
x

No comments:

Post a Comment

ಚಾಮರಾಜನಗರದಲ್ಲಿ ಉಪಲೋಕಾಯುಕ್ತರು ಇತ್ಯರ್ಥಪಡಿಸಿದ ದೂರುಗಳೆಷ್ಟು !?

  ಉಪಲೋಕಾಯುಕ್ತರಾದ ನ್ಯಾಯಮೂರ್ತಿಗಳಾದ ಕೆ.ಎನ್. ಫಣೀಂದ್ರ ಅವರಿಂದ ಲೋಕಾಯುಕ್ತದಲ್ಲಿ ಬಾಕಿ ಇರುವ ದೂರು ಅರ್ಜಿಗಳ ವಿಚಾರಣೆ : 45 ಅರ್ಜಿಗಳು ಇತ್ಯರ್ಥ         ಚಾಮರಾಜನಗ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು