ಎರಡು ತಿಂಗಳ ಒಳಗೆ ದೀನ್ ದಯಾಳ್ ಯೋಜನೆ ಕಾಮಗಾರಿ ಪೂರ್ಣಗೊಳಿಸಿ: ಲೋಕಸಭಾ ಸದಸ್ಯರಾದÀ ಆರ್. ದ್ರುವನಾರಾಯಣ ಸೂಚನೆ
ಚಾಮರಾಜನಗರ, ಮಾ. 17:- ದೀನ್ ದಯಾಳ್ ಗ್ರಾಮ ಜ್ಯೋತಿ ಯೋಜನೆಯಡಿ ಜಿಲ್ಲೆಯ ವಿದ್ಯುತ್‍ವಂಚಿತ ಗ್ರಾಮಗಳಿಗೆ ವಿದ್ಯುತ್ ಸಂಪರ್ಕಿಸುವ ಕಾಮಗಾರಿಯನ್ನು ಇನ್ನೆರಡು ತಿಂಗಳೊಳಗೆ ಪೂರ್ಣಗೊಳಿಸುವಂತೆ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು ತಾಕೀತು ಮಾಡಿದರು.ನಗರದ ಜಿಲ್ಲಾ ಪಂಚಾಯತ್ ಸಂಭಾಂಗಣದಲ್ಲಿಂದು ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿರುವ ಯಾವುದೇ ಗ್ರಾಮವು ವಿದ್ಯುತ್ ಸೌಲಭ್ಯದಿಂದ ವಂಚಿತವಾಗಬಾರದು. ಎಲ್ಲಾ ಗ್ರಾಮಗಳು ವಿದ್ಯುತ್‍ಸಂಪರ್ಕ ಹೊಂದಬೇಕು ಎಂಬ ಉದ್ದೇಶದಿಂದ ದೀನ್ ದಯಾಳ್ ಗ್ರಾಮ ಜ್ಯೋತಿ ಯೊಜನೆ ಜಾರಿಗೆ ತರಲಾಗಿದೆ. ಪ್ರಸ್ತುತ ಕಾಮಗಾರಿ ನಡೆಯುತ್ತಿರುವ ಹಾಡಿ ಹಾಗೂ ಗ್ರಾಮಗಳಲ್ಲಿ ಯೊಜನೆಯನ್ನು ಶೀಘ್ರವೇ ಪೂರ್ಣಗೊಳಬೇಕು ಎಂದರು.
ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಇರುವ ತೊಡಕುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪರಿಹರಿಸಬೇಕು. ಜಿಲ್ಲಾ ಪರಿಶಿಷ್ಠ ವರ್ಗಗಳ ಕಲ್ಯಾಣಾಧಿಕಾರಿಗಳು ಖುದ್ದು ಭೇಟಿ ನೀಡಿ ಯಾವ ಹಾಡಿಗೂ ಸಹ ವಿದ್ಯುತ್ ಸೌಲಭ್ಯದ ಕೊರತೆಯಾಗದಂತೆ ನೋಡಿಕೊಳ್ಳಬೇಕು. ದೀನ್ ದಯಾಳ್ ಯೋಜನೆಯಡಿ ವಿದ್ಯುತ್ ಇಲ್ಲದ ಗ್ರಾಮ ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಲಿಸುವ ಕಾಮಗಾರಿಯು ತಾವು ಮುಂದಿನ ಸಭೆ ನಡೆಸುವ ವೇಳೆಗೆ ಪೂರ್ಣಗೊಂಡಿರಬೇಕೆಂದು ದ್ರುವನಾರಾಯಣ ಅವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಕುಡಿಯುವ ನೀರಿನ ಯೋಜನೆಗಳ ಬಗ್ಗೆ ಪರಿಶೀಲಿಸಿದ ವೇಳೆ ಚಾಮರಾಜನಗರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಎಚ್.ವಿ. ಚಂದ್ರು ಅವರು ಹೊಂಗನೂರು ಕೋಟಂಬಳ್ಳಿಯಲ್ಲಿ ಇಂದಿಗೂ ಕುಡಿಯುವ ನೀರು ಸಮಸ್ಯೆ ಇದೆ. ಯೋಜನೆಯಡಿ ಸಮರ್ಪಕವಾಗಿ ನೀರು ಪೊರೈಸಲು ಸಾಧ್ಯವಾಗಿಲ್ಲ ಎಂದು ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ದ್ರುವನಾರಾಯಣ ಅವರು ಸಮಸ್ಯೆ ಇರುವ ಗ್ರಾಮಗಳಿಗೆ ನೀರಿನ ವ್ಯವಸ್ಥೆ ಮಾಡಲು ಪೂರಕ ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದರು. ಹನೂರು ಭಾಗದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಪ್ರಕ್ರಿಯೆಯನ್ನು ತ್ವರಿತವಾಗಿ ಮುಗಿಸಿ ಎಂದರು.
ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಬಹುತೇಕವಾಗಿ ದೂರುಗಳು ಕೇಳಿ ಬಂದಿವೆ. ಶುದ್ಧ ನೀರಿನ ಘಟಕ ಆರಂಭವಾದ ಮೇಲೆ ಅವನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಶುದ್ಧ ನೀರಿನ ಘಟಕ ಒಳ್ಳೆಯ ಯೋಜನೆ ಇಂದು ಸರಿಯಾಗಿ ನಡೆಯಲಿ ಎಂದರು.
ಶಾಸಕರಾದ ಎಸ್. ಜಯಣ್ಣ ಮಾತನಾಡಿ ಟಗರಪುರ ಸುತ್ತಮುತ್ತಲ ಪ್ರದೇಶದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಪದೇ ಪದೇ ಉಂಟಾಗುತ್ತಿದೆ. ಈ ಭಾಗಕ್ಕೆ ಶಾಶ್ವತ ಕುಡಿಯುವ ನೀರು ಯೋಜನೆ ಅನುಷ್ಠಾನವಾಗಬೇಕು. ಯೋಜನೆ ಸಂಬಂಧ ರೂಪುರೇಷೆಗಳನ್ನು ಸಿದ್ಧಪಡಿಸಿ ಒಪ್ಪಿಗೆ ಪಡೆಯಲು ಅಧಿಕಾರಿಗಳು ಅಗತ್ಯ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲೆಯ ವಿವಿಧ ಭಾಗಗಳಲ್ಲಿ ಪ್ರಗತಿಯಲ್ಲಿರುವ ಹೆದ್ದಾರಿ ಹಾಗೂ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿಯ ಪ್ರಗತಿ ಪರಿಶೀಲಿಸಿದ ದ್ರುವನಾರಾಯಣ ಅವರು ಏಪ್ರಿಲ್ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು. ಈಗಾಗಲೇ ಕೆಲಸ ಆರಂಭಗೊಂಡು ಸಾಕಷ್ಟು ಅವಧಿಯಾಗಿದೆ ಎಂದರು.
ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಮಾತನಾಡಿ ರಸ್ತೆ ಕಾಮಗಾರಿ ತ್ವರಿತವಾಗಿ ಪೂರ್ಣಗೊಳ್ಳಬೇಕು. ರಸ್ತೆ ಅಭಿವೃದ್ಧಿ ಕೆಲಸ ಮುಗಿಸಲು ಇರುವ ತೊಡಕುಗಳನ್ನು ಪರಿಹರಿಸಲಾಗುವುದು. ಯಾವುದೇ ಸಮಸ್ಯೆಗಳು ಇದ್ದರೂ ಕೊಡಲೇ ತಮ್ಮ ಗಮನಕ್ಕೆ ತಂದರೆ ಸಭೆ ನಡೆಸಿ ಅಗತ್ಯ ನಿವಾರಣೆಗೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.
ಬ್ಯಾಂಕುಗಳಲ್ಲಿ ವಿವಿಧ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಸಾಲ ಸೌಲಭ್ಯಗಳನ್ನು ನೀಡಲು ವಿಳಂಬ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹಾಗೂ ಕೊಳ್ಳೇಗಾಲದ ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ರಾಜು ಅವರು ಸಭೆಯ ಗಮನಕ್ಕೆ ತಂದರು.
ದ್ರುವನಾರಾಯಣ ಅವರು ಮಾತನಾಡಿ ಬ್ಯಾಂಕುಗಳಲ್ಲಿ ಫಲಾನುಭವಿಗಳಿಗೆ ಸಾಲ ಕೊಡಲು ಅಲೆದಾಡಿಸಲಾಗುತ್ತದೆ ಎಂಬ ದೂರುಗಳು ಸಾಕಷ್ಟು ಕೇಳಿಬರುತ್ತಿವೆ. ರೈತರೂ, ಜನ ಸಾಮಾನ್ಯರೊಂದಿಗೆ ಕೆಲ ಬ್ಯಾಂಕ್ ಅಧಿಕಾರಿಗಳು ಸರಿಯಾಗಿ ಸ್ವಂದಿಸುತ್ತಿಲ್ಲವೆಂಬುದು ನನ್ನ ಗಮನಕ್ಕೆ ಬಂದಿದೆ. ಲೀಡ್ ಬ್ಯಾಂಕ್ ಅಧಿಕಾರಿಗಳು ಈ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ನಾನೂ ಸಹಾ ಉನ್ನತಾ ಮಟ್ಟದಲ್ಲಿ ಈ ಬಗ್ಗೆ ದೂರು ನೀಡುವುದಾಗಿ ತಿಳಿಸಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕಾಧಿಕಾರಿ ಡಾ. ಹರೀಶ್ ಕುಮಾರ್ ಅವರು ಈಗಾಗಲೇ ಕೆಲ ಬ್ಯಾಂಕ್ ಅಧಿಕಾರಿಗಳ ವಿರುದ್ಧ ತಾವು ಸಹ ದೂರು ನೀಡಿ ನೀಡಿ ಕ್ರಮ ಕೈಗೊಳ್ಳಲು ಪತ್ರ ಬರೆದಿರುವುದೆಂದು ತಿಳಿಸಿದರು.
ವಿವಿಧ ಇಲಾಖೆಗಳ ಪ್ರಗತಿಯನ್ನು ವಿವರವಾಗಿ ಪರಿಶೀಲಿಸಲಾಯಿತು. ಜಿಲ್ಲಾ ಪಂಚಾಯತ್ ಪ್ರಭಾರ ಅಧ್ಯಕ್ಷರಾದ ಜೆ. ಯೋಗೇಶ್, ಯಳಂದೂರು ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ ನಂಜುಂಡಯ್ಯ, ಕೊಳ್ಳೇಗಾಲ ನಗರಸಭೆ ಅಧ್ಯಕ್ಷರಾದ ಶಾಂತರಾಜು, ವಿವಿಧ ಗ್ರಾಮಪಂಚಾಯಿತಿಗಳ ಅಧ್ಯಕ್ಷರು, ಉಸ್ತುವಾರಿ ಸಮಿತಿ ಸಭೆಯ ನಾಮನಿರ್ದೇಶಿತ ಸದಸ್ಯರು ಹಾಜರಿದ್ದರು.
ಬಿಳಿ ಕಬ್ಬು ಸಾಗಣೆಗೆ ಅನುಮತಿ
ಚಾಮರಾಜನಗರ, ಮಾ. 17 - ಜಿಲ್ಲೆಯ ರೈತರು ಬೆಳೆದ ಬಿಳಿ ಕಬ್ಬನ್ನು ಮಾತ್ರ ಜ್ಯೂಸ್, ಪಾನೀಯ ಹಾಗೂ ಇತರ ಉದ್ದೇಶಗಳಿಗೆ ಕೇರಳ ರಾಜ್ಯಕ್ಕೆ ಸಾಗಾಣಿಕೆ ಮಾಡುವುದಕ್ಕೆ ಸರ್ಕಾರ ಅನುಮತಿ ನೀಡಿ ಆದೇಶ ಹೊರಡಿಸಿದೆ ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ತಿಳಿಸಿದ್ದಾರೆ.ಕರ್ನಾಟಕ ಸರ್ಕಾರವು ಅಧಿಸೂಚನೆ ಸಂಖ್ಯೆ:ಸಿಐ:127/ಎಸ್‍ಜಿಎಫ್:2017 ದಿನಾಂಕ 13-11-2017 ಮತ್ತು 18-11-2017 ರಲ್ಲಿ 2017-18 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದಲ್ಲಿ ಬೆಳೆದಿರುವ ಕಬ್ಬನ್ನು ನೆರೆಯ ರಾಜ್ಯಗಳಿಗೆ ಸಾಗಾಣೆಯನ್ನು ನಿರ್ಬಂಧಿಸಿ ಅಧಿಸೂಚನೆ ಹೊರಡಿಸಿತ್ತು. ಮುಂದುವರಿದು ಆದೇಶ ಹೊರಡಿಸಿ ಚಾಮರಾನಗರ ಜಿಲ್ಲೆಯ ರೈತರು ಬೆಳೆದ ಬಿಳಿ ಕಬ್ಬನ್ನು ಮಾತ್ರ ಕೇರಳ ರಾಜ್ಯಕ್ಕೆ ಜ್ಯೂಸ್, ಪಾನೀಯ ಹಾಗೂ ಇತರ ಉದ್ದೇಶಗಳಿಗೆ ಸಾಗಾಣಿಕೆ ಮಾಡುವುದಕ್ಕೆ ಸರ್ಕಾರ ಅನುಮತಿ ನೀಡಿದೆÉ ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾ. 22 ರಂದು ಡಾ. ಬಿ.ಆರ್. ಅಂಬೇಡ್ಕರ್, ಡಾ. ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆ
ಚಾಮರಾಜನಗರ, ಮಾ. 17 - ಜಿಲ್ಲಾಡಳಿತದ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ್ ರಾಮ್ ಅವರ ಜನ್ಮದಿನ ಆಚರಣೆ ಸಮಾರಂಭ ಹಮ್ಮಿಕೊಳ್ಳುವ ಕುರಿತು ಚರ್ಚಿಸುವ ಸಲುವಾಗಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಮಾರ್ಚ್ 22ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.ಈ ಸಭೆಗೆ ಎಲ್ಲಾ ಸಂಘ ಸಂಸ್ಥೆಗಳ, ಸಮುದಾಯ ಮುಖಂಡರು ಪ್ರತಿನಿಧಿಗಳು, ನಾಗರಿಕರು ಹಾಜರಾಗಿ ಸಲಹೆ ನೀಡುವಂತೆ ಸಮಾಜಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಕೆ.ಎಚ್. ಸತೀಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಅನುಮೋದನೆ ಇರದ ನಿವೇಶನಗಳ ಹಕ್ಕು ದಾಖಲೆ, ವರ್ಗಾವಣೆ, ನಮೂನೆ-3 ಇಲ್ಲ
ಚಾಮರಾಜನಗರ, ಮಾ. 17 ( ಚಾಮರಾಜನಗರ ನಗರ ಸಭಾ ವ್ಯಾಪ್ತಿಯಲ್ಲಿ ಬರುವ ಸಕ್ಷಮ ಪ್ರಾಧಿಕಾರಗಳಿಂದ ವಿಳಾಸ (ಲೇಔಟ್ ನಕ್ಷೆ) ಅನುಮೋದೆ ಪಡೆಯದೆ ಇರುವ ನಿವೇಶನಗಳಿಗೆ ಖಾತೆಯನ್ನು ನೀಡಬಾರದೆಮದು ಪೈಋಆಡಳಿತ ನಿದೇಶನಾಲಯ ಸೂಚಿಸುವುದರಿಂದ ಸಕ್ಷಮ ಪ್ರಾಧಿಕಾರದ ವಿನ್ಯಾಸಕ್ಕೆ (ಲೇಔಟ್ ಪ್ಲಾನ್) ಅನುಮೋದನೆ ಪಡೆಯದೇ ಇರುವಂತಹ ನಿವೇಶನ/ ಕಟ್ಟಡ ಹಕ್ಕು ದಾಖಲಿಸುವುದು, ಹಕ್ಕು ವರ್ಗಾವಣೆ ಮಾಡುವುದು ಹಾಗೂ ನಮೂನೆ-3 ನೀಡುವುದನ್ನು ನಿಲ್ಲಿಸಲಾಗಿದೆ (ತಡೆಹಿಡಿಯಲಾಗಿದೆ). ಸಾರ್ವಜನಿಕರು ಸಹಕರಿಸುವಂತೆ ನಗರ ಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.ಉದ್ಯೋಗ ಆಧಾರಿತ ತರಬೇತಿಗೆ ಆಹ್ವಾನÉ
ಚಾಮರಾಜನಗರ, ಮಾ. 17 - ದೀನ್ ದಯಾಳ್ ಉಪಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಅಡಿಯಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾದ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ಆಧಾರಿತ ಸಂಬಂಧ ಟ್ರೇಡ್ ರಿಟೇಲ್ ಆ್ಯಂಡ್ ಸೇಲ್ಸ್ ಅಸೋಸಿಯೇಟ್ ಹುದ್ದೆಯ ಬಗ್ಗೆ ನಗರದ ಕೆ.ಹೆಚ್.ಬಿ. ಕಾಲೋನಿಯ ಮನೋನಿಧಿ ನರ್ಸಿಂಗ್ ಕಾಲೇಜಿನಲ್ಲಿ ಮೂರು ತಿಂಗಳ ಉಚಿತ ತರಬೇತಿ ನೀಡಲಾಗುತ್ತದೆ.ಶಿಬಿರಾರ್ಥಿಗಳಿಗೆ ಉಚಿತ ಸಮವಸ್ತ್ರ, ಕೋರ್ಸ್ ಆಧಾರಿತ ಪುಸ್ತಕಗಳು ಮತ್ತು ತರಬೇತಿ ಸಾಮಗ್ರಿಗಳನ್ನು ನೀಡಲಾಗುವುದು. ತರಬೇತಿ ಅವಧಿಯಲ್ಲಿ ಧನ ಸಹಾಯ ನೀಡಲಾಗುವುದು ಮೊದಲು ಬಂದ ಅಭ್ಯರ್ಥಿಗಳಿಗೆ ಆಧ್ಯತೆ ಮೇರೆಗೆ ತರಬೇತಿಯನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ. 9663025744 ಮತ್ತು 8296780016 ಸಂಪರ್ಕಿಸುವಂತೆ ಜಿಲ್ಲಾ ಪಂಚಾಯಿತಿಯ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಬಾಯಿ ಆರೋಗ್ಯ ದಿನ: ವಿವಿಧ ಸ್ವರ್ಧೆ
ಚಾಮರಾಜನಗರ, ಮಾ. 17 - ವಿಶ್ವ ಬಾಯಿ ಆರೋಗ್ಯ ದಿನದ ಅಂಗವಾಗಿ ಮಾರ್ಚ್ 19 ರಂದು ಚಾಮರಾಜನಗರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಬಾಯಿ ಆರೋಗ್ಯದ ಬಗ್ಗೆ ಭಾಷಣ ಹಾಗೂ ಕಾರ್ಟೂನ್ ಚಿತ್ರ ಬಿಡಿಸುವ ಬಗ್ಗೆ ಸ್ವರ್ಧೆಯನ್ನು ಆಯೋಜಿಸಲಾಗಿದೆ.ಮಾರ್ಚ್ 20ರಂದು ಶುಶ್ರೂಷಕ ವಿದ್ಯಾರ್ಥಿಗಳಿಂದ ಬಾಯಿ ಆರೋಗ್ಯದ ಜನರಿಗೆ ಅರಿವು ಮೂಡಿಸಲು ಬೆಳಿಗ್ಗೆ 10 ಗಂಟೆಗೆ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಜಾಥಾ ಹೊರಡಲಿದೆ.
ಮದ್ಯಾಹ್ನ 12 ಗಂಟೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಮಗುವಿನ ಬಾಯಿ ಆರೋಗ್ಯದ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಜಿಲ್ಲಾ ಆಸ್ಪತ್ರೆಯ ನೋಡಲ್ ಅಧಿಕಾರಿ ಡಾ. ಸತ್ಯಪ್ರಕಾಶ್ ದೊಂಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
No comments:
Post a Comment