Wednesday, 21 March 2018

ಮಹಿಳಾ ಕಾರ್ಮಿಕರಿಗೆ ಮತದಾನದ ಜಾಗೃತಿ ಮೂಡಿಸಿದ ಸ್ವೀಪ್ ಸಮಿತಿ ,ಎಸ್ ಎಸ್ ಎಲ್ ಸಿ ಪರೀಕ್ಷೆ : ಖಾಸಗಿ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರ (21-03-2018)


ಮಹಿಳಾ ಕಾರ್ಮಿಕರಿಗೆ ಮತದಾನದ ಜಾಗೃತಿ ಮೂಡಿಸಿದ ಸ್ವೀಪ್ ಸಮಿತಿ 

ಚಾಮರಾಜನಗರ, ಮಾ. 21- ನಗರದ ಹೊರವಲಯದ ಉತ್ತುವಳ್ಳಿಯಲ್ಲಿರುವ ಬಹುದೊಡ್ಡ ಖಾಸಗಿ ಸಿದ್ದ ಉಡುಪು ತಯಾರಿಕಾ ಘಟಕದ ಮಹಿಳಾ ಕಾರ್ಮಿಕರಿಗೆ ಮತದಾನದ ಮಹತ್ವದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವು ಇಂದು ಸ್ವೀಪ್ ಸಮಿತಿ ವತಿಯಿಂದ ನಡೆಯಿತು.
ಸುಮಾರು 800ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರಿಗೆ ಮತದಾನದ ಮಹತ್ವ, ಪ್ರತಿಯೊಬ್ಬರೂ ಸಕ್ರಿಯವಾಗಿ ಪಾಲ್ಗೊಳ್ಳುವ ಸಂಬಂಧ ಕೈಗಾರಿಕಾ ಇಲಾಖೆಯ ಜಂಟಿನಿರ್ದೇಶಕರಾದ ಮರುಳೇಶ್, ಜವಳಿ ಇಲಾಖೆ ಅಧಿಕಾರಿ ಒಡೆಯರ್, ಇತರೆ ಅಧಿಕಾರಿಗಳು ತಿಳಿವಳಿಕೆ ಮೂಡಿಸಿದರು.
ಮಹಿಳಾ ಕಾರ್ಮಿಕರು ಮತದಾನದಂತಹ ಮಹತ್ವ ಸಂದರ್ಭದಲ್ಲಿ ಪಾಲ್ಗೊಂಡು ನೈತಿಕವಾಗಿ ಮತದಾನ ಮಾಡುವ ಕುರಿತು ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಇದೇವೇಳೆ ಮಾತನಾಡಿದ ಕೈಗಾರಿಕಾ ಇಲಾಖೆ ಜಂಟಿನಿರ್ದೇಶಕರಾದ ಮರುಳೇಶ್ ಅವರು ಜನತಂತ್ರ ಯಶಸ್ವಿಯಾಗಬೇಕಾದರೆ ಎಲ್ಲರೂ ಭಾಗವಹಿಸಲೇಬೇಕು. ನಮ್ಮ ಮತ ನಮ್ಮ ಹಕ್ಕು ಆಗಿದೆ. ಮತದಾನದ ಹಕ್ಕನ್ನು ಚಲÁಯಿಸಲು ಪ್ರತಿಯೊಬ್ಬರೂ ಮುಂದೆಬರಬೇಕು ಎಂದು ಸಲಹೆ ಮಾಡಿದರು.
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಇನ್ನೂ ಅವಕಾಶವಿದೆ. ಕೈಬಿಟ್ಟು ಹೋಗಿದ್ದಲ್ಲಿ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳಬೇಕು. ಯಾರೊಬ್ಬರೂ ಸಹ ಮತದಾನ ಹಕ್ಕಿನಿಂದ ವಂಚಿತರಾಗಬಾರದು. ಮತದಾನ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಬೇಕು ಎಂದು ಮರುಳೇಶ್ ಸಲಹೆ ಮಾಡಿದರು.
ಎಲ್ಲರೂ ಪಾಲ್ಗೊಳ್ಳಬೇಕೆಂಬುದು ಚುನಾವಣಾ ಆಯೋಗದ ಆಶಯವಾಗಿದೆ. ಮತದಾನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅವಶ್ಯವಿರುವ ತಿಳಿವಳಿಕೆ ನೀಡುವ ಕಾರ್ಯಕ್ರಮಗಳು ಸ್ವೀಪ್ ಸಮಿತಿಯಿಂದ ಹಮ್ಮಿಕೊಳ್ಳಲಾಗುತ್ತದೆ. ಗೊಂದಲಗಳಿದ್ದಲ್ಲಿ ಪರಿಹರಿಸಲಾಗುತ್ತದೆ. ಎಲ್ಲರೂ ನಿರ್ಭೀತಿಯಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮರುಳೇಶ್ ಅವರು ತಿಳಿಸಿದರು.
ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪನಿರ್ದೇಶಕರಾದ ಮಹಮದ್ ನಯೀಂ, ಕೈಗಾರಿಕೆ ಇಲಾಖೆಯ ಉಪನಿರ್ದೇಶಕರಾದ ವೆಂಕಟೇಶ್, ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಎಸ್ ಎಸ್ ಎಲ್ ಸಿ ಪರೀಕ್ಷೆ : ಖಾಸಗಿ ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರ

ಚಾಮರಾಜನಗರ, ಮಾ. 21 ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ಮಾರ್ಚ್ 23 ರಿಂದ ಏಪ್ರಿಲ್ 6ರವರೆಗೆ ಜಿಲ್ಲೆಯಲ್ಲಿ ಒಟ್ಟು 44 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.
ಖಾಸಗಿ ಅಭ್ಯರ್ಥಿಗಳಿಗೆ ಜಿಲ್ಲಾ ಮಟ್ಟದ ಒಂದು ಪರೀಕ್ಷಾ ಕೇಂದ್ರವಾದ ಸೇವಾ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಚೆನ್ನಿಪುರದಮೋಳೆ ರಸ್ತೆ, ಚಾಮರಾಜನಗರ ಟೌನ್‍ನಲ್ಲಿ ನಡೆಯಲಿದೆ.
ಖಾಸಗಿ ಅಭ್ಯರ್ಥಿಗಳ ಪ್ರವೇಶ ಪತ್ರದಲ್ಲಿ ಪರೀಕ್ಷ ಕೇಂದ್ರವು ಸೇವಾ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಕೋರ್ಟ್ ರಸ್ತೆ, ಚಾಮರಾಜನಗರ ಟೌನ್ ಎಂದು ತಪ್ಪಾಗಿ ನಮೂದಾಗಿರುತ್ತದೆ. ಅಭ್ಯರ್ಥಿಗಳು ಇದನ್ನು ಗಮನಿಸಿ ಸೇವಾ ಭಾರತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಚೆನ್ನಿಪುರದಮೋಳೆ ರಸ್ತೆ, ಚಾಮರಾಜನಗರ ಟೌನ್ ಇಲ್ಲಿ ಪರೀಕ್ಷ ಕೇಂದ್ರ ಎಂದು ತಿಳಿದುಕೊಳ್ಳವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಳಂದೂರು : ಮಾ. 26ರಂದು ತಾಲೂಕುಮಟ್ಟದ ಕ್ರೀಡಾಕೂಟ
ಚಾಮರಾಜನಗರ, ಮಾ. 21 - ನೆಹರು ಯುವ ಕೇಂದ್ರವು ಯಳಂದೂರು ತಾಲೂಕಿನ ಅಂಬಳೆ ಗ್ರಾಮದ ಶ್ರೀ ಅಂಬಾ ಸಾಂಸ್ಕøತಿಕ ಕಲಾ ಕ್ರೀಡಾ ಸಂಘ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಯುವಜನ  ಸಂಘದ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 26ರಂದು ಬೆಳಿಗ್ಗೆ 10 ಗಂಟೆಗೆ ಯಳಂದೂರಿನ ಅಂಬಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆಟದ ಮೈದಾನದಲ್ಲಿ ಯಳಂದೂರು ತಾಲೂಕು ಮಟ್ಟದ ಕ್ರೀಡಾಕೂಟವನ್ನು ಏರ್ಪಡಿಸಿದೆ.
ಯುವತಿಯರಿಗೆ ಸಂಗೀತ ಕುರ್ಚಿ, ಗುಂಡು ಎಸೆತ, ಲೆಮನ್ ಅಂಡ್ ಸ್ಪೂನ್, ಗೋಣಿ ಚೀಲ ಓಟ ಸ್ಪರ್ಧೆ ಹಾಗೂ ಯುವಕರಿಗೆ ಕಬಡ್ಡಿ, ಗುಂಡು ಎಸೆತ, 100 ಮೀ. ಓಟ ಹಾಗೂ ಗೋಣಿ ಚೀಲದ ಓಟ ಸ್ಪರ್ಧೆಗಳಿವೆ.
ಪ್ರವೇಶ ಉಚಿತವಾಗಿದ್ದು ಅಂದು ಬೆಳಿಗ್ಗೆ ಸ್ಥಳದಲ್ಲಿಯೇ ಹೆಸರು ನೊಂದಾಯಿಸಿಕೊಳ್ಳಬೇಕು. ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ಆರ್. ರೇವಣ್ಣ (8880540543), ರಾಜಣ್ಣ (9845130567), ರಾಜೇಶ್ (9916624034), ಪ್ರಭಾವತಿ (8095140475), ಗೋವಿಂದರಾಜ್ (7760731874) ಹಾಗೂ ನೆಹರು ಯುವಕೇಂದ್ರ ದೂರವಾಣಿ 08226-222120 ಸಂಪರ್ಕಿಸುವಂತೆ ಜಿಲ್ಲಾ ಯುವ ಸಮನ್ವಯಾಧಿಕಾರಿ ಎಸ್. ಸಿದ್ಧರಾಮಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಮಾ. 22ರಂದು ಡಾ. ಬಿ.ಆರ್. ಅಂಬೇಡ್ಕರ್, ಡಾ. ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆ

ಚಾಮರಾಜನಗರ, ಮಾ. 21- ಜಿಲ್ಲಾಡಳಿತದ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ್ ರಾಮ್ ಅವರ ಜನ್ಮದಿನ ಆಚರಣೆ ಸಮಾರಂಭ ಹಮ್ಮಿಕೊಳ್ಳುವ ಕುರಿತು ಚರ್ಚಿಸುವ ಸಲುವಾಗಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಮಾರ್ಚ್ 22ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿ  ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.
ಈ ಸಭೆಗೆ ಎಲ್ಲಾ ಸಂಘ ಸಂಸ್ಥೆಗಳ, ಸಮುದಾಯ ಮುಖಂಡರು, ಪದಾಧಿಕಾರಿಗಳು, ಪ್ರತಿನಿಧಿಗಳು, ನಾಗರಿಕರು ಹಾಜರಾಗಿ ಸಲಹೆ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಕೆ.ಎಚ್. ಸತೀಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.

ಕೌಶಲ್ಯ ತರಬೇತಿ ಹೊಂದಲು ಜಿ.ಪಂ. ಸದಸ್ಯರಾದ ಬಾಲರಾಜು ಸಲಹೆ

ಚಾಮರಾಜನಗರ, ಮಾ. 21 - ಪ್ರಸ್ತುತ ಸಂದರ್ಭದಲ್ಲಿ ಕೌಶಲ್ಯ ಆಧಾರಿತ ಉದ್ಯೋಗಕ್ಕೆ ಹೆಚ್ಚು ಅವಕಾಶಗಳಿದ್ದು ಪ್ರತಿಯೊಬ್ಬರು ಓಂದಿಲ್ಲೊಂದು ಕೌಶಲ್ಯ ತರಬೇತಿ ಪಡೆಯಲು ಮುಂದಾಗಬೇಕು ಎಂದು ಮಾದಾಪುರ ಕ್ರೇತ್ರದ ಜಿಲ್ಲಾ ಪಂಚಾಯತ್ ಸದಸ್ಯರಾದ ಸಿ.ಎನ್. ಬಾಲರಾಜು ಸಲಹೆ ಮಾಡಿದರು.
      ನಗರದ ಖಾದಿ ಮತ್ತು ಗ್ರಾಮೊದ್ಯೋಗ ಇಲಾಖೆಯ ಕಚೇರಿಯಲ್ಲಿ ಇಲಾಖೆ ವತಿಯಿಂದ ಕೌಶಲ್ಯ ತರಬೇತಿ ಹೊಂದಿದ ಅಭ್ಯರ್ಥಿಗಳಿಗೆ ಉದ್ಯೋಗಕ್ಕೆ ಅವಶ್ಯಕವಾದ ಸಲಕರಣೆಗಳನ್ನು ವಿತರಿಸಿ ಅವರು ಮಾತನಾಡಿದರು.
ಉದ್ಯೋಗ ಪಡೆಯಬೇಕಾದರೆ ಇಂದಿನ ದಿನಗಳಲ್ಲಿ ಕೌಶಲ್ಯ ಅತಿ ಮುಖ್ಯವಾಗಿದೆ. ಕೌಶಲ್ಯ ಇದ್ದರೆ ನಿರುದ್ಯೋಗ ಸಮಸ್ಯೆ ಎದುರಾಗುವುದಿಲ್ಲ. ಕೌಶಲ್ಯ ಆಧಾರಿತ ಉದ್ಯೋಗಕ್ಕೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಏನಾದರೊಂದು ಕೌಶಲ್ಯ ಹೊಂದಲೇಬೇಕಾದ ಅನಿವಾರ್ಯತೆ ಇದೆ ಎಂದು ಬಾಲರಾಜು ಅವರು ಅಭಿಪ್ರಾಯಪಟ್ಟರು.
ಅಸಂಘಟಿತ ಕ್ಷೇತ್ರದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕಾರ್ಮಿಕರು ಉದ್ಯೋಗ ಪಡೆಯುತ್ತಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಹೆಚ್ಚು ಬೇಡಿಕೆ ಇರುವ ಕೌಶಲ್ಯ ಉದ್ದೋಗಗಳು ಇವೆ. ಇದಕ್ಕೆ ಪೂರಕವಗಿ ಕೌಶಲ್ಯ ತರಬೇತಿ ಪಡೆದುಕೊಳ್ಳಲು ಸಹ ಅವಕಾಶಗಳು ಇವೆ ಎಂದು ಬಾಲರಾಜು ಎಂದರು.
ಖಾದಿ ಮತ್ತು ಗ್ರಾಮೊದ್ಯೋಗ ಇಲಾಖೆ ವತಿಯಿಂದ ಹೊಲಿಗೆ ತರಬೇತಿ ಪಡೆದಿರುವ ಮಹಿಳೆಯರಿಗೆ ಹೊಲಿಗೆ ಯಂತ್ರ, ಮರಗೆಲಸ ಮಾಡುವ ಪುರುಷ ಅಭ್ಯರ್ಥಿಗಳಿಗೆ ಅಗತ್ಯ ಸಲಕರಣೆಗಳನ್ನು ಸಹ ವಿತರಿಸಲಾಗಿದೆ. ಈ ರೀತಿ ಸ್ವಂತ ಉದೋಗಕ್ಕೆ ಬೇಕಾದ ಸಲಕರನೆಗಳನ್ನು ನೀಡುವ ಮೂಲಕ ಉತ್ತೇಜನ ನೀಡಲಾಗುತ್ತದೆ. ಇದರ ಪ್ರಯೋಜ ಪಡೆದು ಆರ್ಥಿಕವಾಗಿ ಮುಂದೆ ಬರಬೇಕು ಎಂದು ಬಾಲರಾಜು ಅವರು ತಿಳಿಸಿದರು.
 ಮಂಗಲದ ಶ್ರೀನಿವಾಸ್, ಖಾದಿ ಮತ್ತು ಗ್ರಾಮೋದ್ಯೋಗ ವಿಭಾಗದ ಅಧಿಕಾರಿಗಳು ಸಿಬ್ಬಂದಿ ಹಾಜರಿದ್ದರು.

ಮಾ.22ರಂದು ಉಸ್ತುವಾರಿ ಸಚಿವರ ಜಿಲ್ಲಾ ಪ್ರವಾಸ

ಚಾಮರಾಜನಗರ, ಮಾ. 21- ಸಣ್ಣ ಕೈಗಾರಿಕೆ, ಸಕ್ಕರೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ(ಗೀತಮಹದೇವಪ್ರಸಾದ್) ಅವರು ಮಾರ್ಚ್ 22ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಬೆಳಿಗ್ಗೆ 10 ಗಂಟೆಗೆ ಆಗಮಿಸಿ ಗುಂಡ್ಲುಪೇಟೆ ತಾಲ್ಲೂಕಿನ ಬರಗಿ, ಕುಂದಕೆರೆ, ಗುಂಡ್ಲುಪೇಟೆಯಲ್ಲಿ ಲೋಕೊಪಯೊಗಿ ಇಲಾಖೆವತಿಯಿಂದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೊಜೆ ನೆರವೇರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಕುಂದಕೆರೆಯಲ್ಲಿ ಆಸ್ಪತ್ರೆ, ಜಗಜೀವನ್‍ರಾಮ್ ಸಮುದಾಯಭವನ ಉದ್ಘಾಟಿಸುವರು. ನವಿಲಗಂದಿ, ಮದ್ದೂರು ಕಾಲೋನಿಗಳಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ನಿರ್ಮಿಸಲಾಗಿರುವ ಮನೆಗಳ ಗುದ್ದಲಿಪೂಜೆ ಹಾಗೂ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಸಂಜೆ 5ಗಂಟೆಗೆ ಮೈಸೂರಿಗೆ ತೆರಳುವರೆಂದು ಸಚಿವರ ವಿಶೇಷಾಧಿಕಾರಿ ತಿಳಿಸಿದ್ದಾರೆ















No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು