Tuesday, 13 March 2018

ಆನ್ ಲೈನ್ ಮೂಲಕ ಜಾತಿ, ಆದಾಯ, ವಾಸಸ್ಥಳ ಪ್ರಮಾಣ ಪತ್ರ ()13-03-2018)


ಆನ್ ಲೈನ್ ಮೂಲಕ ಜಾತಿ, ಆದಾಯ, ವಾಸಸ್ಥಳ ಪ್ರಮಾಣ ಪತ್ರ

ಚಾಮರಾಜನಗರ, ಮಾ. 13 - ಕಂದಾಯ ಇಲಾಖೆಯು ಪ್ರಥಮ ಬಾರಿಗೆ ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಜಾತಿ, ಆದಾಯ ಮತ್ತು ವಾಸಸ್ಥಳ ದೃಢೀಕರಣ ಪತ್ರಗಳನ್ನು ಆನ್ ಲೈನ್ ಮೂಲಕ ಸ್ಥಳದಲ್ಲೇ ಪ್ರಮಾಣ ಪತ್ರ ಪಡೆಯುವ ವ್ಯವಸ್ಥೆಯನ್ನು ಜಾರಿಗೊಳಿಸಿದೆ.
ಸಾರ್ವಜನಿಕರಿಗೆ ಉತ್ತಮ ರೀತಿಯಲ್ಲಿ ಸೇವೆಯನ್ನು ಒದಗಿಸುವ ಸಲುವಾಗಿ ಗ್ರಾಮೀಣ ಮಟ್ಟದಲ್ಲಿ ಕುಟುಂಬಗಳ ಹಾಗೂ ವೈಯುಕ್ತಿಕ ವಿಷಯಗಳಾದ ಜಾತಿ, ಆದಾಯ ಹಾಗೂ ವಾಸಸ್ಥಳದ ಬಗ್ಗೆ ಮಾಹಿತಿಯನ್ನು ಪಡೆಯಲು ಗ್ರಾಮಲೆಕ್ಕಿಗರು ಮನೆಮನೆಗೂ ತೆರಳಿ ಸರ್ವೆ ಮಾಡಿ ಓವರ್ ದ ಕೌಂಟರ್ (ಓಟಿಸಿ) ಎಂಬ ವಿನೂತನ ಸೇವೆಯನ್ನು ಕಂದಾಯ ಇಲಾಖೆಯು ಕಾರ್ಯಗತಗೊಳಿಸಿದೆ.
ಈ ಸೇವೆಯಿಂದ ಸಾರ್ವಜನಿಕರು ನಾಡಕಚೇರಿ, ತಾಲೂಕು ಕಚೇರಿಗೆ ತೆರಳಿ ಅರ್ಜಿ ಸಲ್ಲಿಸುವುದಾಗಲಿ ಅಥವಾ ದಾಖಲಾತಿ ಸಲ್ಲಿಸುವ ಅಗತ್ಯವಿರುವುದಿಲ್ಲ.
ನಿಗದಿತ ಶುಲ್ಕ ಪಾವತಿಸಿ ನಾಡ ಕಚೇರಿ, ತಾಲೂಕು ಕಚೇರಿ, ಗ್ರಾಮ ಪಂಚಾಯಿತಿ ಕಚೇರಿ ಅಥವಾ ಆನ್ ಲೈನ್ ಮುಖಾಂತರ ಜಾತಿ, ಆದಾಯ, ವಾಸಸ್ಥಳ ಪ್ರಮಾಣ ಪತ್ರಗಳನ್ನು ಸ್ಥಳದಲ್ಲೇ ಪಡೆಯಬಹುದಾಗಿದೆ.
ಆನ್ ಲೈನ್ ಮೂಲಕ ಪ್ರಮಾಣ ಪತ್ರ ಪಡೆಯಲು ವೆಬ್ ಸೈಟ್ ತಿತಿತಿ.ಟಿಚಿಜಚಿಞಚಿಛಿheಡಿi.ಞಚಿಡಿಟಿಚಿಣಚಿಞಚಿ.gov.iಟಿ  ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.

ಮಾ. 15ರಂದು ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾ ಸಾಂಸ್ಕøತಿಕ ಕಾರ್ಯಕ್ರಮ

ಚಾಮರಾಜನಗರ, ಮಾ. 13  ನೆಹರು ಯುವ ಕೇಂದ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಧ್ವನಿ, ಶ್ರೀಗಂಧ, ಸುಗಂಧ, ಚಂದನ, ನಂದನ ಮಹಿಳಾ ಅಭಿವೃದ್ಧಿ ಸಂಘಗಳು ಹಾಗೂ ಜಿಲ್ಲೆಯ ಯುವಕ ಯುವತಿ ಮಹಿಳಾ ಮಂಡಳಿಗಳ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 15ರಂದು ಬೆಳಿಗ್ಗೆ 10 ಗಂಟೆಗೆ ನಗರದ ಡಿ. ದೇವರಾಜ ಅರಸು ಭವನದಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಜಿಲ್ಲಾ ಸಾಂಸ್ಕøತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ. ಗಾಯತ್ರಿ ಕಾರ್ಯಕ್ರಮ ಉದ್ಘಾಟಿಸುವರು. ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಂ.ಎಸ್. ಗೀತಾ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ. ಶಿವಬಸವಯ್ಯ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಕೆ. ಶ್ರೀನಿವಾಸನ್, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಎಂ.ಆರ್. ಸುಮತಿ, ಬೆನಮನಹಳ್ಳಿ ಅಂಬಿಕಾ ಮಹಿಳಾ ಮಂಡಳಿಯ ಅಧ್ಯಕ್ಷರಾದ ಬಿ.ಕೆ. ಸಾವಿತ್ರಮ್ಮ, ಶ್ರೀರಂಗಪಟ್ಟಣದ ರಂಗನಾಯಕಿ ಸ್ತ್ರೀ ಸಮಾಜದ ಅಧ್ಯಕ್ಷರಾದ ಆಶಾಲತ ಪುಟ್ಟೇಗೌಡ ಹಾಗೂ ಬೆನಮನಹಳ್ಳಿ ಅಂಬಿಕಾ ಮಹಿಳಾ ಮಂಡಳಿಯ ಮಂಗಳಾ ಅಪ್ಪಾಜಿಗೌಡ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

ಮಾ. 17ರಂದು ತಾಲೂಕುಮಟ್ಟದ ಕ್ರೀಡಾಕೂಟ 

ಚಾಮರಾಜನಗರ, ಮಾ. 13 :- ನೆಹರು ಯುವ ಕೇಂದ್ರವು ಸಿದ್ಧಾರ್ಥ ಪ್ರಥಮದರ್ಜೆ ಕಾಲೇಜು, ಕೆಂಪನಪುರದ ಶ್ರೀ ಮಹರ್ಷಿ ವಾಲ್ಮೀಕಿ ಯುವಕರ ಸಂಘ, ನಗರದ ಸಂಯುಕ್ತ ಯುವಜನ ಸಂಘದ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 17ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಸಿದ್ಧಾರ್ಥ ಪ್ರಥಮದರ್ಜೆ ಕಾಲೇಜು ಮೈದಾನದಲ್ಲಿ ಚಾಮರಾಜನಗರ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಏರ್ಪಡಿಸಿದೆ.
ಯುವತಿಯರಿಗೆ ಹಾಗೂ ಯುವಕರಿಗೆ ಕಬಡ್ಡಿ, ಗುಂಡು ಎಸೆತ, 100 ಮೀ. ಓಟ ಹಾಗೂ ಗೋಣಿ ಚೀಲದ ಓಟ ಸ್ಪರ್ಧೆಗಳಿವೆ.
ಪ್ರವೇಶ ಉಚಿತವಾಗಿದ್ದು ಅಂದು ಬೆಳಿಗ್ಗೆ ಸ್ಥಳದಲ್ಲಿಯೇ ಹೆಸರು ನೊಂದಾಯಿಸಿಕೊಳ್ಳಬೇಕು. ವಿಜೇತರಿಗೆ ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ನಾಗೇಶ್ (996427822), ಮಣಿಕಂಠ (9164899852), ಚೇತನ್ (8970809103), ಪ್ರಭಾವತಿ (8095140475), ರೂಪ (8123465131), ದಾಕ್ಷಾಯಿಣಿ (7975794410), ರಾಜೇಶ ಎಂ (8660640330), ಗೋವಿಂದರಾಜ್ (7760731874) ಹಾಗೂ ನೆಹರು ಯುವಕೇಂದ್ರ ದೂರವಾಣಿ 08226-222120 ಸಂಪರ್ಕಿಸುವಂತೆ ಜಿಲ್ಲಾ ಯುವ ಸಮನ್ವಯಾಧಿಕಾರಿ ಎಸ್. ಸಿದ್ಧರಾಮಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













1 comment:

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು