Thursday, 1 March 2018

ಮೊದಲ ದಿನವೇ ನಿಯಮ ಗಾಳಿಗೆ ತೂರಿದ ಪರೀಕ್ಷಾ ಕೇಂದ್ರಗಳು, ಕಾಟಾಚಾರದ ನಿಷೇದಾಜ್ಞೆ.! (01-03-2018)

ಮೊದಲ ದಿನವೇ ನಿಯಮ ಗಾಳಿಗೆ ತೂರಿದ ಪರೀಕ್ಷಾ ಕೇಂದ್ರಗಳು, ಕಾಟಾಚಾರದ ನಿಷೇದಾಜ್ಞೆ.!   ............    #ವೀರಭದ್ರಸ್ವಾಮಿ ಎಸ್. ರಾಮನಸಮುದ್ರ

 ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
 ಚಾಮರಾಜನಗರ: ಪರೀಕ್ಷಾ ಕೇಂದ್ರ ಅಂದ್ರೆ ಸಾಕು ಸುತ್ತಮುತ್ತ ೨೦೦ ನಿಷೇದಾಜ್ಞೆ ಘೋಷಣೆ ಮಾಡೋ ಜಿಲ್ಲಾಡಳಿತ ಬೇಜವಬ್ದಾರಿತನ ತೋರಿದೆ ಎಂದರೆ ತಪ್ಪಾಗಲಾರದು
*ಚಾಮರಾಜನಗರ ಜೆಎಸ್ಎಸ್ ಕಾಲೇಜು ಪರೀಕ್ಷಾ ಕೇಂದ್ರಗಳಲ್ಲಿ ಒಂದಾಗಿದ್ದು ಇದರ ಸುತ್ತಮುತ್ತ ನಿಷೇದಾಜ್ಞೆ ಎಲ್ಲಾ ನಿಯಮಗಳನ್ನ ಗಾಳಿಗೆ ತೂರಿದ್ದಾರೆ.
 *ಪರೀಕ್ಷೆಗೆ ಸಂಬಂದಪಟ್ಟ ವಿದ್ಯಾರ್ಥಿಗಳು, ಸಿಬ್ಬಂದಿಗಳು ಬಿಟ್ಟು ಯಾರು ಅನದಿಕೃತವಾಗಿ ಪ್ರವೇಶಿಸಬಾರದು.ಎಲ್ಲಕ್ಕಿಂತ ಮಿಗಿಲಾಗಿ ಗೃಹರಕ್ಷಕ ಸಿಬ್ಬಂದಿಯಿಂದ ಹಿಡಿದು ಕೇಂದ್ರೆ ಮೇಲ್ವಿಚಾರಕರ ತನಕ "ಡಿಪಿಯುಐ" ಎಂಬ ನಾಮಾಂಕಿತದ ಟ್ಯಾಗ್ ದರಿಸಬೇಕೆಂಬ ಉಪನಿರ್ದೇಶಕರ  ಆದೇಶ ನಿಯಮವೂ ಇಲ್ಲಿ ಉಲ್ಲಂಘನೆಯಾಗಿದೆ ಎನ್ನಬಹುದು . ಅದೆಲ್ಲ ಸುಳ್ಳು ಎಂದು ಪರಿಒಗಣಿಸುವುದಾದರೆ ನಾವು ಹೇಳುವಂತೆ  ಸಾಕ್ಷಿ ಎಂದು  ಅಲ್ಲಿನ ಸಿಸಿ ಕ್ಯಾಮೆರಾಗಳಲ್ಲಿ ಚಿತ್ರೀಕರಣವೆ ಸಾಕ್ಷಿಯಾಗಿದೆ.
*ಜೆರಾಕ್ಸ್ ಅಂಗಡಿಗಳನ್ನ ಮುಚ್ಚುವಂತೆ ಆದೇಶಿಸಿದ್ದರೂ ಡೊಂಟ್ ಕೇರ್ ಎಂದೆ ಕಾರ್ಯನಿರ್ವಹಿಸುತ್ತಿದೆ.
 *ಟ್ಯಾಗ್ಡ್ ಕಾಲೇಜುಗಳಿಗೆ ಪ್ರೌಡಶಾಲಾ ವಿದ್ಯಾರ್ಥಿಗಳು ಸೇರಿದಂತೆ ಇತರರು ಬರದಂತೆ ಸೂಚಿಸಲಾಗಿದೆ ಎಂದು ಹಿಂದೆ ತಿಳಸಿದ್ದರು ಆದರೆ  ನಿಯಮವೂ ಪೂರ್ಣವಾಗಿ ಉಲ್ಲಂಘನೆಯಾಗಿದೆ.
 *ಒಟ್ಟಾರೆ ಐಡಿ ಟ್ಯಾಗ್ ರಹಿತ ಪ್ರವೇಶದಿಂದಲೆ ಹೊರಗಿನ ಎಲ್ಲಾ ದೋಷಗಳು ಕಂಡುಬರುತ್ತಿದ್ದು ಮಾದ್ಯಮದವರು ಪ್ರವೇಶ ಮಾಡಿದರೆ ಮತ್ತಷ್ಟು ಲೋಪ ಕಂಡುಬರಬಹುದೆಂದು ಪ್ರವೇಶ ನಿಷೇದ ಮಾಡಲಾಗಿದೆ.
*ಚಾಮರಾಜನಗರ. ಡಿ.ಡಿ.ಪಿ.ಯು.ಶ್ಯಾಲಿನಿ: ಅವರು ಹೇಳುವಂತೆ ಮಾದ್ಯಮದವರಿಗೆ ಪ್ರವೇಶ ನಿರ್ಬಂದಿಸಲಾಗಿದೆ ಯಾವುದೇ ಕಾರಣಕ್ಕೂ ಪ್ರವೇಶವಿಲ್ಲ ಎಂದಿದ್ದರು.  ಕರ್ತವ್ಯನಿರತ ಸಿಬ್ಬಂದಿಗಳು ಟ್ಯಾಗ್ ಹಾಕಲೆಬೇಕು ಎಂದವರ ಆದೇಶ ಹೊರಡಿಸಿದ್ದೇವೆ.ಎಂದರು ಆದರೆ ನಮ್ಮ ಚಿತ್ರದಲ್ಲಿ ಅದೆಲ್ಲ ವಿಫಲವಾಗಿದೆ ಎಂದೆ ಹೇಳಬಹುದು.
 ಅಷ್ಟೆ ಅಲ್ಲ ಟ್ಯಾಗ್ಡ್ ಕಾಲೇಜಿಗೆ ( ಹೈ ಸ್ಕೂಲ್, ಡಿಗ್ರಿ ವಿದ್ಯಾರ್ಥಿಗಳು ) ಕೇಂದ್ರದ ಒಳಗೆ ಬರುವಂತಿಲ್ಲವಾದರೂ ಈ ನಿಯಹಮವೂ ಉಲ್ಲಂಘನೆಯಾಗಿತ್ತು ಈ  ಸಂಬಂದ ಡಿಡಿಪಿಯು ಗಮನಕ್ಕೆ  ದೂರು ಬಂದ ಕೂಡಲೆ ಅದಿಕಾರಿ  ಕ್ರಮವಹಿಸುವಂತೆ ಸೂಚಿಸಿದ್ದು ಮಾತ್ರ  ಅದಿಕಾರ ದಕ್ಷತೆಗೆ ತೋರುತ್ತಿತ್ತು
x

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು