Tuesday, 6 March 2018

ಖಾರದಪುಡಿಯಲ್ಲಿ ಭತ್ತದ ಹೊಟ್ಟೋ ಹೊಟ್ಟು.! ಅದಿಕಾರಿಗಳೆ ತಪಾಸಣೆ ಮಾಡದಿದ್ದರೆ ಶಾಲಾ ಮಕ್ಕಳು ಬಲಿಯಾಗಬಹುದು ಜೋಪನ......!. ,ಜಿಲ್ಲಾಧಿಕಾರಿ ಅವರಿಂದ ಜನಸ್ಪಂದನ: ಕುಂದು ಕೊರತೆ ಆಲಿಕೆ (06-03-2018)

ಖಾರದಪುಡಿಯಲ್ಲಿ ಭತ್ತದ ಹೊಟ್ಟೋ ಹೊಟ್ಟು.! ಅದಿಕಾರಿಗಳೆ ತಪಾಸಣೆ ಮಾಡದಿದ್ದರೆ ಶಾಲಾ ಮಕ್ಕಳು ಬಲಿಯಾಗಬಹುದು ಜೋಪನ......!.  

*ಶೇರ್ ಮಾಡೋ ಮನಸ್ಸಿದ್ದರೆ ಶೇರ್ ಮಾಢಿ, ಮಕ್ಕಳ ಭವಿಷ್ಯ ಕಾಪಾಡಿ*

                              ವರದಿ: ರಾಮಸಮುದ್ರ  ಎಸ್.ವೀರಭದ್ರಸ್ವಾಮಿ

ಖಾರದಪುಡಿಯಲ್ಲಿ ಭತ್ತದ ಹೊಟ್ಟು ಸೇರಿಸಿ ಮಾರಾಟ ಮಾಡುತ್ತಿದ್ದ   ಅಂಗಡಿಯೋರ್ವನಿಗೆ .. ಶಿಕ್ಷಕಿಯೋರ್ವರು ತರಾಟೆ ತೆಗೆದುಕೊಂಡ ಘಟನೆ ಚಾಮರಾಜನಗರದಲ್ಲಿ ನಡೆದಿದೆ.. ಮಾದ್ಯಮಗಳು  ಇಂತಹ ಸುದ್ದಿ ಗೊತ್ತಿದ್ದರೂ  ಹಾಕೋಕೆ ಮೀನಾ ಮೇಷ ಎಣಿಸ್ತಾರೆ  ಎಂಬುದ  ಅರಿತು ಸುಮ್ಮನಾಗಿದ್ದಾರೆ. ಯಾವ ಮಾದ್ಯಮಕ್ಕೆ ಕರೆ ಮಾಢಿದರೋ ಗೊತ್ತಿಲ್ಲ .. ಆದರೆ ನೇರವಾಗಿ ನಾವು  ಸಾಮಾಜಿಕ ಜಾಲತಾಣದಲ್ಲಿ ಹಾಕ್ತೇವೆ.‌ ಆದರೆ (ನೆನಪಿರಲಿ ಸಾಮಾಜಿಕ ಕಳಕಳಿಯಷ್ಟೇ. ಪದಾರ್ಥ ಮುಂದುವರೆದು ಮಾರಾಟವಾದರೆ ಬಿಲ್ ಸಮೇತ ಗ್ರಾಹಕ ನ್ಯಾಯಾಲಯಕ್ಕೆ ದೂರು ದಾಖಲಸಿ) ಆದರೆ ಅಂಗಡಿ ಹೆಸರು ಹಾಕೊಲ್ಲ. ಕಾರಣ ನಮ್ಮ ಬಳಿ ಅಂಗಡಿಯವರಿಂದ ಪದಾರ್ಥ ಪಡೆದುದ್ದಕ್ಕೆ ಬಿಲ್ ಇಲ್ಲ. ಉಳಿದ ಮಾಧ್ಯಮದವರು  ಹಾಕೊ ಮನಸ್ಸು, ತಾಕತ್ತು ನಿಮಗಿದ್ದರೆ ಹಾಕಿ.. ಶಿಕ್ಷಕಿ ಹೆಸರು , ಶಾಲೆ ಹೆಸರು ನಾವು ಕೊಡ್ತೇವೆ.. 

ಮಲಗಿರುವ ಆಹಾರ ಇಲಾಖಾ ನಿರ್ದೇಶಕರೇ, ನಿದ್ದೆಯಿಂದ ಎದ್ದೇಳಿ.....

ಚಾಮರಾಜನಗರದ ಅಂಗಡಿ ಮಳಿಗೆಯೊಂದರಲ್ಲಿ  ಮಹಿಳೆಯೊರ್ವರು ಖಾರದಪುಡಿ ಖರೀದಿ ಮಾಡಿದ್ದಾರೆ. ಆದರೆ ಅದರಲ್ಲಿ ಭತ್ತದ ಹೊಟ್ಟು ಶೇ ೧೦೦ ಗ್ರಾಂ ನಷ್ಟು ಇರುವುದನ್ನ ಕಂಡು ಅಂಗಡಿ ಮಾಲೀಕನಿಗೆ ಬೈಯ್ದಿದ್ದಾರೆ . ಏಕೆ ಏತಕ್ಕಾಗಿ ಬೈಯುತ್ತಿದ್ದಾರೆ ಎಂದು ಗಮನಿಸಲಾಗಿ ಆ ಮಹಿಳೆ  ಶಾಲೆಯೊಂದರ ಶಿಕ್ಷಕಿ ಎಂಬುದು ವಿಶೇಷವಾಗಿತ್ತು .ಇಷ್ಟಕ್ಕೂ. ಆ ಶಿಕ್ಷಕಿ ಏನು ಆ ಖಾರದಪುಡಿಯನ್ನ ಮನೆಗೆ ತೆಗೆದುಕೊಂಡು ಹೋಗುವಂತಹದ್ದಲ್ಲ.. ಶಾಲೆಯ ಬಿಸಿಯೂಟದ ಸಾಂಬಾರಿಗೆ...  ಬಹುತೇಕರು ಶಿಕ್ಷಕ ವರ್ಗ   ಆ ಅಂಗಡಿಯಲ್ಲಿ ಕಾರದಪುಡಿ  ಖರೀದಿ ಮಾಡುವ ಅಂಗಡಿ ಮಳಗೆಯಂತೆ.. ಈ ತರಹ ನಾವು ಹೇಳುವಾಗ ಬಹುತೇಕ   ಶಿಕ್ಷಕರು ಶಿಕ್ಷಕಿಯರ ವರ್ಗಕ್ಕೆ  ನಾವು ಹೇಳುವ ಮಾತು ಬಹುತೇಕ ಗೊತ್ತಾಗುತ್ತದೆ  ಎಂದು ಭಾವಿಸಿರುತ್ತೇನೆ.

 ಶಿಕ್ಷಕಿಯ ಕೈಯಲ್ಲಿದ್ದ ಬಾಕ್ಸ್ ತೆಗೆದು ನಾವು ನೋಡಿ ಅದರ ಪೊಟೊ ತೆಗೆದುಕೊಂಡೆವು. ನಂತರ ಗೊತ್ತಾಯ್ತು ಮತ್ತೊಂದು ಸತ್ಯ..  

ಈಗ ಮತ್ತೊಂದು ಸತ್ಯ ಹೇಳ್ತೀವಿ ಕೇಳಿ... ಬಹುತೇಕ ಶಿಕ್ಷಕ ವರ್ಗದವರು ಬಿಸಿಯೂಟದ ಸಂಬಾರಿಗೆ ಬಳಸೋದು ಈ ಕಳಪೆ ಗುಣಮಟ್ಟದ ಕಾರದಪುಡಿ. ಹೀಗಿರಬೇಕಾದರೆ ಮಕ್ಕಳ ಸ್ಥಿತಿ‌ ಏನಾಗಬೇಡ.  ಶಿಕ್ಷಕಿ ಬೈಯ್ದುಕೊಂಡು ಹೋದರು. ಹಾಗಂತ ನಾವು ಸುಮ್ಮನಾದರೆ ಕಷ್ಟ ಮತ್ತಷ್ಟು ಮಕ್ಕಳ ಆರೋಗ್ಯ ಏರುಪೇರಾಗಬಹುದು ಆವಾಗ ಶಿಕ್ಷಣ ಇಲಾಖೆ ತಲೆ ತಗ್ಗಿಸಬೇಕಾಗುತ್ತದೆ ನಮ್ಮ ಮಕ್ಕಳಲ್ಲದಿದ್ದರೂ ಅಲ್ಲಿ ಓದುವುದು ಬಡವರ ಮಕ್ಕಳು ಎಂಬ ವಿಚಾರ  ಅರಿತು ನಮ್ಮ ಹೋರಾಟ ಪ್ರಾರಂಬಿಸಿದ್ದೇವೆ. ಕೂಡಲೇ... ಆಹಾರ ಅಧಿಕಾರಿಗಳು, ತಪಾಷಣೆ ಮಾಡಿ ಅಂಗಡಿ ಜಪ್ತಿ ಮಾಡಿ ಇಲ್ಲವಾದರೆ ಜನ ನಿಮ್ನ ಜಪ್ತಿ ಮಾಡೋ ಕಾಲ ದೂರವಿಲ್ಲ ನೆನಪಿರಲಿ... (ಬಿಲ್ ಪಡೆಯದ ಕಾರಣ ನಾವು ಅಂಗಡಿ ಹೆಸರು ಹಾಕಿಲ್ಲ ನೆನಪಿರಲಿ... ಈ ಸುದ್ದಿ ನೋಡಿದಾಗಲೇ ಬಹುತೇಕರಿಗೆ ಗೊತ್ತಾಗುತ್ತದೆ. ಆ ಅಂಗಡಿ ಯಾವುದು ಎಂದು..!  

ಸುದ್ದಿ ಹಾಕುವ ಮಾದ್ಯಮದವರಿದ್ದರೆ . ಸಂಪರ್ಕಿಸಿ..( 9480030980)  

*******************************************************************************

ಜಿಲ್ಲಾಧಿಕಾರಿ ಅವರಿಂದ ಜನಸ್ಪಂದನ: ಕುಂದು ಕೊರತೆ ಆಲಿಕೆ  

ಚಾಮರಾಜನಗರ, ಮಾ. 06 - ಜಿಲ್ಲಾಡಳಿತವು ಜಿಲ್ಲೆಯ ನಾಗರಿಕರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಸಲುವಾಗಿ ವಾರದ ಪ್ರತಿ ಮಂಗಳವಾರದಂದು ನಡೆಸುವ ಜನಸ್ಪಂದನ ಕಾರ್ಯಕ್ರಮ ಆರಂಭವಾಗಿದೆ.
ಜಿಲ್ಲಾಧಿಕಾರಿಯವರು  ಪ್ರತಿ ಮಂಗಳವಾರದಂದು ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರ ಕುಂದು ಕೊರತೆ ಆಲಿಸಿ ಅಹವಾಲು  ಸ್ವೀಕರಿಸುವರು.
ಈ ಕಾರ್ಯಕ್ರಮದಡಿ ಜಿಲ್ಲೆಯ ನಾಗರಿಕರು ಇಂದು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಖುದ್ದು ಜಿಲ್ಲಾಧಿಕಾರಿ ಬಿ. ರಾಮು ಅವರನ್ನೇ ಭೇಟಿ ಮಾಡಿ  ತಮ್ಮ ಅಹವಾಲು, ಸಮಸ್ಯೆಗಳನ್ನು ಬಿಚ್ಚಿಟ್ಟರು.
ಪ್ರತಿಯೊಬ್ಬರ ಮನವಿಯನ್ನು ಆಲಿಸಿದ ಜಿಲ್ಲಾಧಿಕಾರಿ ಬಿ. ರಾಮು ಅವರು ವಿವರವಾಗಿ ಎಲ್ಲದರ  ಬಗ್ಗೆ ಮನವಿದಾರರಿಂದ ಮಾಹಿತಿ ಪಡೆದುಕೊಂಡರು. ಮನವಿದಾರರು ಸಲ್ಲಿಸಿದ ಮನವಿ ಪತ್ರವನ್ನು ಕೂಲಂಕಶವಾಗಿ ಪರಿಶೀಲಿಸಿದರು.
ಸಮಸ್ಯೆ, ಕುಂದು ಕೊರತೆ ವಿಚಾರಿಸಿ ಸಂಬಂಧಪಟ್ಟ  ಅಧಿಕಾರಿ ವರ್ಗದವರಿಗೆ ಸಮಸ್ಯೆ ಪರಿಹರಿಸಲು ಸ್ಥಳದಲ್ಲಿಯೇ ಲಿಖಿತವಾಗಿ ಸೂಚಿಸಿದರು.
ಮಾ. 7 ರಿಂದ 9ರವರೆಗೆ ಪಟ್ಟಣದಲ್ಲಿ ನೀರು ಸರಬರಾಜು ವ್ಯತ್ಯಯ
ಚಾಮರಾಜನಗರ, ಮಾ. 06 - ಚಾಮರಾಜನಗರ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಟಿ. ನರಸೀಪುರ ಕೆಳಮಟ್ಟದ ನೇರೆತ್ತುವ ಯಂತ್ರಾಗಾರದಿಂದ ಮಂಗಲ ಶುದ್ಧೀಕರಣ ಘಟಕದವರೆಗೆ 500 ಎಂಎಂ ಡಯಾ ಎಂಎಸ್ ಪೈಪ್‍ನಲ್ಲಿ ಹಲವು ಕಡೆ ನೀರು ಸೋರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪೈಪ್ ಲೈನ್ ದುರಸ್ತಿ ಕಾಮಗಾರಿ ಕೈಗೊಳ್ಳಬೇಕಿದೆ. ಅಲ್ಲದೇ ಟಿ.ನರಸಿಪುರದಲ್ಲಿ ವಿದ್ಯುತ್ ವ್ಯತ್ಯಯವಿರುವ ಕಾರಣ ಮಾರ್ಚ್ 7 ರಿಂದ 9ರವರೆಗೆ ಚಾಮರಾಜನಗರ ಪಟ್ಟಣಕ್ಕೆ ಕಬಿನಿ ಕುಡಿಯುವ ನೀರು ಸರಬರಾಜು ಇರುವುದಿಲ್ಲ. ನಾಗರಿಕರು ಸಮೀಪವಿರುವ ಕೈಪಂಪು, ಕೊಳವೆ ಬಾವಿ, ಕಿರು ನೀರು ಸರಬರಾಜು ಯೋಜನೆಗಳಿಂದ ನೀರು ಪಡೆದುಕೊಂಡು ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.


ಮಾ. 12ರಿಂದ ಜಿಲ್ಲಾ ಕ್ರೀಡಾ ವಸತಿಶಾಲೆ ಪ್ರವೇಶಕ್ಕೆ ಆಯ್ಕೆ ಪ್ರಕ್ರಿಯೆ

ಚಾಮರಾಜನಗರ, ಮಾ. 06 - ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2018-19ನೇ ಸಾಲಿಗೆ ಜಿಲ್ಲಾ ಕ್ರೀಡಾ ವಸತಿ ಶಾಲೆ ಪ್ರವೇಶಕ್ಕಾಗಿ ಮಾರ್ಚ್ 12 ರಿಂದ 17ರವರೆಗೆ ತಾಲೂಕು ಕೇಂದ್ರಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಸಲಿದೆ.
ಕಿರಿಯರ ವಿಭಾಗದಲ್ಲಿ ಪ್ರವೇಶಾತಿಗಾಗಿ ಪ್ರಸಕ್ತ ಸಾಲಿನಲ್ಲಿ 4ನೇ ತರಗತಿ ವ್ಯಾಸಂಗ ಮಾಡುತ್ತಿದ್ದು 2018-19ನೇ ಸಾಲಿಗೆ 5ನೇ ತರಗತಿಗೆ ಪ್ರವೇಶ ಪಡೆಯಲಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಮಾರ್ಚ್ 12ರಂದು ಯಳಂದೂರಿನ ಸರ್ಕಾರಿ ಪದವಿಪೂರ್ವ ಕಾಲೇಜು, 13ರಂದು ಕೊಳ್ಳೇಗಾಲದ ಮಹದೇಶ್ವರ ಕಾಲೇಜು ಮೈದಾನ ಹಾಗೂ ತಾಲೂಕು ಕ್ರೀಡಾಂಗಣ, 14ರಂದು ಗುಂಡ್ಲುಪೇಟೆಯ ಡಿ. ದೇವರಾಜ ಅರಸು ಕ್ರೀಡಾಂಗಣ, 15ರಂದು ಚಾಮರಾಜನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಆಯಾ ದಿನಾಂಕಗಳಂದು ಬೆಳಿಗ್ಗೆ 10 ಗಂಟೆಗೆ ತಾಲೂಕುವಾರು ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ.
ಮಾರ್ಚ್ 17ರಂದು ಬೆಳಿಗ್ಗೆ 10 ಗಂಟೆಗೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ವಿದ್ಯಾರ್ಥಿಗಳು ದಿನಾಂಕ 1.6.2018ಕ್ಕೆ ಅನ್ವಯವಾಗುವಂತೆ 11 ವರ್ಷ ಮೀರಿರಬಾರದು. ಫುಟ್ ಬಾಲ್ ಆಟಗಾರರು 140 ಸೆಂ.ಮೀ. ಹಾಗೂ ವಾಲಿಬಾಲ್ ಆಟಗಾರರು 145 ಸೆಂ.ಮೀ. (ಬಾಲಕರಿಗೆ) ಎತ್ತರವಿರಬೇಕು. ಬಾಲಕಿಯರಾಗಿದ್ದಲ್ಲಿ 140 ಸೆಂ.ಮೀ.  ಎತ್ತರವಿರಬೇಕು.
ವಿವರಗಳಿಗೆ ಬಿ.ಕೆ. ಗೋಪಾಲ್ (ಮೊ.9945615695), ಪಿ. ಮಹದೇವಯ್ಯ (ಮೊ.7760841489) ಅಥವಾ ನಗರದ ಜಿಲ್ಲಾಡಳಿತ ಭವನದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ದೂರವಾಣಿ ಸಂಖ್ಯೆ 08226-224932 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ನಿರುದ್ಯೋಗಿಗಳಿಗೆ ಉದ್ಯೋಗಾಧಾರಿತ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ

ಚಾಮರಾಜನಗರ, ಮಾ. 06  ಜಿಲ್ಲಾ ಪಂಚಾಯತ್ ವತಿಯಿಂದ ದೀನ್‍ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗಾಧಾರಿತ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನಿರುದ್ಯೋಗಿ ಯುವಕ ಯುವತಿಯರಿಗೆ ಉಚಿತ ತರಬೇತಿ ಜತೆ ಉದ್ಯೋಗ ದೊರಕಿಸಿಕೊಳ್ಳಲು ಸಹಾಯ ಹಾಗೂ ತರಬೇತಿ ಅವಧಿಯಲ್ಲಿ 9000 ರೂ.ಗಳ. ಧನಸಹಾಯ ನೀಡಲಾಗುವುದು.
ವಯೋಮಿತಿ 18 ರಿಂದ 35 ವರ್ಷದವರಾಗಿದ್ದು ಪಿಯುಸಿ ಉತ್ತೀರ್ಣರಾಗಿರಬೇಕು.
ಎಸ್ಸಿ, ಎಸ್ಟಿ, ಮಹಿಳೆಯರು ಮತ್ತು ಅಲ್ಪಸಂಖ್ಯಾತ ವರ್ಗದವರಿಗೆ ಹೆಚ್ಚಿನ ಆದ್ಯತೆ ಇದ್ದು ಬಿಪಿಎಲ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕು.
ಹೆಚ್ಚಿನ ಮಾಹಿತಿಗೆ ಯಳಂದೂರು ತಾಲೂಕಿನ ಗುಂಬಳ್ಳಿಯ ಪಿಯು ಕಾಲೇಜು ಎದುರಿನ ಕರುಣ ಟ್ರಸ್ಟ್ ಕ್ಯಾಂಪಸ್ (ಮೊಬೈಲ್ 8296780016, 9663025744) ಸಂಪರ್ಕಿಸುವಂತೆ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು