Saturday, 3 March 2018

ಪರಿಸರ ರಕ್ಷಣೆಯ ಜವಬ್ದಾರಿ ಹೊರಲು ಸಿದ್ದರಾಗಿ: ಜಿಲ್ಲಾಧಿಕಾರಿ ಬಿ. ರಾಮು .ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರಧಾನ ಸಮಾರಂಭ ಚಾಮರಾಜನಗರ....#VSS (03-03-2018)

ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರಧಾನ ಸಮಾರಂಭ ಚಾಮರಾಜನಗರ....#VSS

ಪರಿಸರ ರಕ್ಷಣೆಯ ಜವಬ್ದಾರಿ ಹೊರಲು ಸಿದ್ದರಾಗಿ: ಜಿಲ್ಲಾಧಿಕಾರಿ ಬಿ. ರಾಮು


ಚಾಮರಾಜನಗರ, ಮಾ. 02 -  ಮುಂದಿನ ಪೀಳಿಗೆಗೂ ಆರೋಗ್ಯಕರ ಪರಿಸರವನ್ನು ಕಲ್ಪಿಸುವ ಉದ್ದೇಶದಿಂದ ಪ್ರತಿಯೊಬ್ಬರು ಪರಿಸರ ಸಂರಕ್ಷಣೆಯ ಜವಬ್ದಾರಿ ಹೊರಲು ಸಿದ್ದರಾಗಬೇಕು ಎಂದು ಜಿಲ್ಲಾಧಿಕಾರಿ      ಬಿ. ರಾಮು ತಿಳಿಸಿದರು.
ನಗರದ ಜೆ.ಹೆಚ್ ಪಟೇಲ್ ಸಭಾಂಗಣದಲ್ಲಿ ಇಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ 2017-18ನೇ ಸಾಲಿನ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವ ಅರಿವಿನ ಕೊರತೆ ಅಥವಾ ಸ್ವಾರ್ಥ ಕಾರಣದಿಂದ ಪರಿಸರವನ್ನು  ವಿನಾಶದ ಅಂಚಿಗೆ ದೂಡುತ್ತಿದ್ದಾನೆ. ಮುಂದಿನ ಪೀಳಿಗೆಯು ಆರೋಗ್ಯವಂತ ಪರಿಸರದ ಅನುಕೂಲ ಪಡೆಯಬೇಕಿದೆ, ಮಾನಸಿಕ ಹಾಗೂ ದೈಹಿಕವಾಗಿ ಮನುಷ್ಯ ಬಲವಾಗಲು ಪರಿಸರವನ್ನು ರಕ್ಷಿಸುವ ಹೊಣೆಗಾರಿಕೆ ಪ್ರಸ್ತುತ ಸಂದರ್ಭದಲ್ಲಿ ಎಲ್ಲರೂ ನಿರ್ವಹಿಸಬೇಕಿದೆ ಎಂದು ರಾಮು ಅವರು ತಿಳಿಸಿದರು.
ಕೈಗಾರೀಕರಣ, ನಗರೀಕರಣದಿಂದಾಗಿ ಪರಿಸರಕ್ಕೆ ದಕ್ಕೆಯಾಗುತ್ತಿದೆ.  ಇದು ಹೀಗೆಯೆ ಮುಂದುವರೆದರೆ ಉತ್ತಮ ಭವಿಷ್ಯ ಕಾಣಲು ಸಾಧ್ಯವಾಗುವುದಿಲ್ಲ.  ಈಗಿನಿಂದಲೆ ಪರಿಸರ ಜಾಗೃತಿ ಮೂಡಿಸಬೇಕಿದೆ.  ಇಲ್ಲವಾದಲ್ಲಿ ಅಪಾಯವನ್ನು ಎದುರಿಸಲು ಸಿದ್ಧರಾಗಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಅಭಿಪ್ರಾಯ ಪಟ್ಟರು.


ಪರಿಸರ ಜಾಗೃತಿ ಸಂಬಂಧ ಹೊರತಂದಿರುವ ಕನಸು-ನನಸು ಕಿರುಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದ   ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಅವರು ಪರಿಸರ ಸಂರಕ್ಷಣೆಗೆ ಜಾಗೃತಿ ಮೂಡಿಸುವ ಕೆಲಸ ಹೆಚ್ಚು ನಡೆಯಬೇಕಿದೆ.  ಅಪಾಯಕಾರಿ ವಸ್ತುಗಳಿಂದ ಅನೇಕ ಜಲಮೂಲಗಳು ಕಲುಷಿತವಾಗುತ್ತಿವೆ.  ಈ ಬಗ್ಗೆ ಎಚ್ಚರವಾಗಬೇಕಿದೆ ಎಂದರು
ಪರಿಸರದ ಸಂರಕ್ಷಣೆಗೆ ಅರಿವು ಮೂಡಿಸಲು ಮಾಲಿನ್ಯ ನಿಯಂತ್ರಣ ಮಂಡಳಿ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಂಡಿರುವುದು ಅನುಕೂಲವಾಗಿದೆ.  ವಿಶೇಷವಾಗಿ ಶಾಲಾ ಮಕ್ಕಳಲ್ಲಿ  ಗಿಡ, ಮರ ಪೋಷಣೆಗೆ  ಉತ್ತೇಜಿಸುವ ಸಲುವಾಗಿ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಕಾರ್ಯಕ್ರಮ ನಡೆಸುತ್ತಿರುವುದು ಸಹ ಉತ್ತಮವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿ ಎಂ.ಜಿ ರಘುರಾಮ್ ಅವರು ಪರಿಸರ ಮಿತ್ರ ಶಾಲಾ ಪ್ರಶಸ್ತಿಗೆ ಜಿಲ್ಲೆಯ 30 ಶಾಲೆಗಳನ್ನು ಮೊದಲ ಹಂತದಲ್ಲಿ ತೆಗೆದುಕೊಂಡು ಅಂತಿಮವಾಗಿ ಪ್ರಶಸ್ತಿಗೆ 21 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಪರಿಸರ ಮಿತ್ರ ಶಾಲೆ ಪ್ರಶಸ್ತಿಗೆ ಪಾತ್ರವಾದ ಹನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ  30 ಸಾವಿರ ನಗದು ಮತ್ತು ಪ್ರಶಸ್ತಿಫಲಕ ನೀಡಿ ಗೌರವಿಸಲಾಯಿತು. ಜಿಲ್ಲೆಯ 10 ಶಾಲೆಗಳಿಗೆ  ಹಸಿರು ಶಾಲೆ, ಜಿಲ್ಲೆಯ 10 ಶಾಲೆಗಳಿಗೆ ಹಳದಿ ಶಾಲೆಗಳಿಗೆ ನಗದು ಹಾಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು.
 ಮೈಸೂರು ವಲಯ ಹಿರಿಯ ಪರಿಸರ ಅಧಿಕಾರಿ ಎ. ಉದಯಕುಮÁರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಕೆ. ಮಹದೇವಪ್ಪ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
________________________________________________________________________

       ಜಿಲ್ಲಾಡಳಿತದ ಮುಂದೆ ನಮ್ಮಮತ ನಮ್ಮಹಕ್ಕು   .#VSS. 9480030980

ಮತದಾರರ ಜಾಗೃತಿಗೆ ವಿಶೇಷ ಚಾಲನೆ.........#9480030980


ಚಾಮರಾಜನಗರ, ಮಾ. 03 - ಮತದಾನದ ಮಹತ್ವವನ್ನು ಅರಿತು ಪ್ರತಿಯೊಬ್ಬರು ಸಕ್ರಿಂiÀiವಾಗಿ ಪಾಲ್ಗೊಳ್ಳುವ ಮೂಲಕ ಪ್ರಜಾಪ್ರಭುತ್ವ ಯಶಸ್ವಿಗೆ ಮುಂದಾಗಬೇಕೆಂಬ ಮಹತ್ತರ ಆಶಯದೊಂದಿಗೆ ಹಮ್ಮಿಕೊಂಡಿರುವ ಮತದಾರರ ಜಾಗೃತಿ ಅಭಿಯಾನಕ್ಕೆ (ಸ್ವಿಪ್) ಇಂದು ಬೃಹತ್ ಬಲೂನು ಹಾರಿಬಿಡುವ ಮೂಲಕ ವಿಶೇಷವಾಗಿ ಚಾಲನೆ ನೀಡಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದ ಮುಖ್ಯದ್ವಾರದ ಬಳಿ ಕರ್ನಾಟಕ ವಿಧಾನ ಸಭಾ ಚುನಾವಣೆ 2018ರ ಸಂಬಂಧ ಚುನಾವಣಾ ಆಯೋಗದ ಆಶಯದಂತೆ ಒಳಗೊಳ್ಳುವ, ಸುಗಮ ಮತ್ತು ನೈತಿಕತೆ ಚುನಾವಣೆ ಎಂಬ ಧ್ಯೇಯ ಸಂದೇಶ ಹೊತ್ತ ಬೃಹತ್ ಬಲೂನನ್ನು ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಹರೀಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ಅವರು ಹಾರಿಬಿಟ್ಟರು.
ಅರ್ಹ ಮತದಾರರೆಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂಬ ದಿಸೆಯಲ್ಲಿ ಅರಿವು ಮೂಡಿಸುವ ಸಲುವಾಗಿ  ರೂಪಿಸಲಾಗಿರುವ ಬೃಹತ್ ಬಲೂನಿನಲ್ಲಿ ನಮ್ಮ ಮತ ನಮ್ಮ ಹಕ್ಕು ಎಂಬಂತಹ ಅಮೂಲ್ಯ ಧೇಯ ವಾಕ್ಯಗಳನ್ನು ಸಹ ಬರೆಯಲಾಗಿದೆ.
ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಬಿ.ರಾಮು ಅವರು ಮತದಾನ ಮಾಡುವುದು ಪ್ರತಿಯೊಬ್ಬರ ಅಮೂಲ್ಯ ಹಕ್ಕು. ಚುನಾವಣಾ ಆಯೋಗವು ಎಲ್ಲರನ್ನು ಒಳಗೊಂಡು, ಸುಗಮವಾಗಿ ಹಾಗೂ ನೈತಿಕವಾಗಿ ಮತದಾನ ಮಾಡಬೇಕೆಂಬ ಆಶಯವನ್ನು ವ್ಯಕ್ತಪಡಿಸಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಜನರು ಮುಕ್ತವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತಗಬೇಕು ಎಂದರು.



ಮತದಾನ ಮಾಡುವಲ್ಲಿ ಯಾರು ದೂರ ಉಳಿಯಬಾರದು. ವಿಶೇಷ ಚೇತನರು, ಮಹಿಳೆಯರು,ಯುವ ಜನಾಂಗ ಸೇರಿದಂತೆ ಅರ್ಹ ಮತದಾರರೆಲ್ಲರೂ ಸ್ವಯಂ ಪ್ರೇರಣೆಯಿಂದ ಉತ್ಸಾಹದಿಂದ ಪಾಲ್ಗೊಳ್ಳಬೇಕು. ಇದರ ಜಾಗೃತಿಗಾಗಿ ಮತದಾರರ ಜಾಗೃತಿ ಅಭಿಯಾನ ಚಟುವಟಿಕೆಗಳನ್ನು ವ್ಯಾಪಕವಾಗಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ. ಶೇ 100 ರಷ್ಟು ಮತದಾನವಾಗಲು ಜಿಲ್ಲೆಯ ಜನತೆ ಸಹಕರಿಸಬೆಕು ಎಂದು ಜಿಲ್ಲಾಧಿಕಾರಿ ಬಿ.ರಾಮು ಮನವಿಮಾಡಿದರು.
ಸ್ವೀಪ್ ಜಿಲ್ಲಾ ಮುಖ್ಯಸ್ಥರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ ಹರೀಶ್ ಕುಮಾರ್ ಅವರು ಮಾತನಾಡಿ ಪ್ರತಿಯೊಬ್ಬರು  ಮತದಾನದಂತಹ ಅಮೂಲ್ಯ ಸಂದರ್ಭದಲ್ಲಿ ಭಾಗಿಯಾದರೆ ಜನತಂತ್ರ ಯಶಸ್ವಿಯಾಗಲಿದೆ. ಇದಕ್ಕಾಗಿಯೇ ಚುನಾವಣಾ ಆಯೋಗವು ಮತದಾರರ ಜಾಗೃತಿ ಅಭಿಯಾನಕ್ಕೆ ವಿಶೇಷವಾಗಿ ಕಾಳಜಿ ವಹಿಸಿದೆ ನೈತಿಕ ಮತದಾನದ ಮಹತ್ವವನ್ನು ಎಲ್ಲರೂ ಅರಿಯಬೇಕಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಜಾಗೃತಿಗೊಳಿಸಲು ವಿಶೇಷ ಅಭಿಯಾನ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದರು. 
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ಮಾತನಾಡಿ ಮತದಾನ ಮಾಡುವುದು ಪ್ರತಿಯೊಬ್ಬರ ಹಕ್ಕು. ಅತಿ ಅಮೂಲ್ಯವಾಗಿರುವ ಈ ಹಕ್ಕನ್ನು ವಿವೇಚನೆಯಿಂದ ಚಲಾಯಿಸಬೇಕಿದೆ. ನಿರ್ಭಿತಿ ಹಾಗೂ ಮುಕ್ತವಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಜನರು ಭಾಗವಹಿಸಬೇಕು. ಮತದಾನದ ಪ್ರಮಾಣ ಪೂರ್ಣ ಪ್ರಮಾಣದಲ್ಲಿ ನಡೆಯಬೇಕು. ಜನರು ಮತದಾನದ ಮಹತ್ವವನ್ನು ಅರಿಯಬೇಕು ಎಂದರು. 
ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎಂ ಗಾಯತಿ. ಉಪವಿಭಾಗಧಿಕಾರಿ ಪೌಜಿಯಾ ತರನ್ನಮ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎನ್ ಮುನಿರಾಜಪ್ಪ ವಿವಿಧ ಇಲಾಖೇಗಳ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
-------------------------------------------------------------

ಜಿ.ಪಂ. ಕೃಷಿ ಕೈಗಾರಿಕಾ ಸ್ಥಾಯಿ ಸಮಿತಿಯಿಂದ ನೇಕಾರ ಮನೆಗಳಿಗೆ ಭೇಟಿ

ಚಾಮರಾಜನಗರ, ಮಾ. 03:-  ಚಾಮರಾಜನಗರ ಜಿಲ್ಲಾ ಪಂಚಾಯತ್‍ನ ಕೃಷಿ ಕೈಗಾರಿಕಾ ಸ್ಥಾಯಿ ಸಮಿತಿಯು ಅಧ್ಯಕ್ಷರಾದ ಕೆ. ನವೀನ್ ಅವರ ನೇತೃತ್ವದಲ್ಲಿ ಜಿಲ್ಲೆಯ ನೇಕಾರ ಮನೆಗಳಿಗೆ ಭೇಟಿ ನೀಡಿ ಮಗ್ಗಗಳ ಪರಿಶೀಲನೆ ಮಾಡಿದರು. ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ 2017-18ನೇ ಸಾಲಿಗೆ ಜಿಲ್ಲಾ ವಲಯ ಯೋಜನೆಯಡಿ ಮಂಜೂರಾದ ಮಗ್ಗಗಳ ಮತ್ತು ಇತರೆ ಸವಲತ್ತುಗಳ ಪರಿಶೀಲನೆಗೆ ಸ್ಥಾಯಿ ಸಮಿತಿ ಸದಸ್ಯರು ಹಾಗೂ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡ ಚಾಮರಾಜನಗರ ತಾಲ್ಲೂಕಿನ ದೊಡ್ಡಮೂಡಹಳ್ಳಿ, ಅಂಕನಶೆಟ್ಟಿಪುರ ಮತ್ತು ಕೊಳ್ಳೇಗಾಲ ತಾಲ್ಲೂಕಿನ ಕೊಳ್ಳೇಗಾಲ ಹಾಗೂ ಹನೂರು ಭಾಗದ ನೇಕಾರ ಸಹಕಾರ ಸಂಘಗಳ ವ್ಯಾಪ್ತಿಯಲ್ಲಿರುವ ನೇಕಾರ ಮನೆಗಳಿಗೆ ಭೇಟಿ ನೀಡಿ ಮಗ್ಗಗಳ ಪರಿಶೀಲನೆ ಮಾಡಿದರು.ಸ್ಥಾಯಿ ಸಮಿತಿ ಸದಸ್ಯರು ಹಾಗೂ ಇಲಾಖೆಯ ಅಧಿಕಾರಿಗಳು ನೇಕಾರರೊಂದಿಗೆ ಸಂವಾದ ನಡೆಸಿ ನೇಕಾರರ ಸಮಸ್ಯೆಗಳನ್ನು ಆಲಿಸಿದರು. 
ಕೃಷಿ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆ. ನವೀನ್ ಅವರು ಮಾತನಾಡಿ ನೇಕಾರ ಸಹಕಾರ ಸಂಘಗಳ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ನೇಕಾರರ ಅರ್ಥಿಕ ಮಟ್ಟವನ್ನು ಸುಧಾರಿಸಲು ಮಗ್ಗಗಳಿಗೆ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಲು ಸೂಚಿಸಿದರು. ಪ್ರಸಕ್ತ ಅರ್ಥಿಕ ಸಾಲಿನಲ್ಲಿ ಜಿಲ್ಲಾ ವಲಯ ಯೋಜನೆಯಡಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಮುಖಾಂತರ ಅದ್ಯತೆ ಮೇರೆಗೆ ಸವಲತ್ತುಗಳನ್ನು ಒದಗಿಸುವಂತೆ ಎಂದು ನವೀನ್ ಅವರು ತಿಳಿಸಿದರು.ಕೃಷಿ ಕೈಗಾರಿಕಾ ಸ್ಥಾಯಿ ಸಮಿತಿ ಸದಸ್ಯರಾದ ಯೋಗೀಶ್, ಸದಾಶಿವಮೂರ್ತಿ, ಶಶಿಕಲಾ, ಅಶ್ವಿನಿ, ಶೀಲಾ,  ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ಉಪ ನಿರ್ದೇಶಕರಾದ ರಾಜೇಂದ್ರ ಪ್ರಸಾದ್, ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರಾದ  ಸೈಯದ್ ನಯೀಮ್ ಅಹಮದ್ ಹಾಗೂ ಜವಳಿ ಪ್ರವರ್ಧನಾಧಿಕಾರಿ ಬಿ.ಎಂ ಒಡೆಯರ್ ಭೇಟಿಯ ಸಂದರ್ಭದಲ್ಲಿ ಇದ್ದರು.

        ಮಾರ್ಚ 5 ರಂದು ಮುಖ್ಯಮಂತ್ರಿಯವರ ಜಿಲ್ಲಾ ಪ್ರವಾಸ

ಚಾಮರಾಜನಗರ, ಮಾ. 03 - ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ ಅವರು ಮಾರ್ಚ್ 5ರಂದು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಅಂದು ಮದ್ಯಾಹ್ನ 12 ಗಂಟೆಗೆ ಗುಂಡ್ಲುಪೇಟೆ ತಾಲ್ಲೂಕಿನ ಹಾಲಹಳ್ಳಿಗೆ ಆಗಮಿಸಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿವಂಗತ ಎಚ್.ಎಸ್ ಮಹದೇವ ಪ್ರಸಾದ್ ಸಂಸ್ಮರಣಾರ್ಥ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. 
ಮದ್ಯಾಹ್ನ 1.30 ಗಂಟೆಗೆ ಮೈಸೂರು ತಾಲ್ಲೂಕಿನ ಜಯಪುರಕ್ಕೆ ತೆರಳುವರೆಂದು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿಗಳು ತಿಳಿಸಿದ್ದಾರೆ. 

ಮಾರ್ಚ್ 6ರಂದು ಮಹಿಳೆಯರಿಗೆ ಪೌಷ್ಠಿಕ ಆಹಾರ ತಯಾರಿಕೆ ಸ್ಪರ್ಧೆ, ಮಾರ್ಚ್ 7ರಂದು ಕ್ರೀಡಾಕೂಟ


ಚಾಮರಾಜನಗರ, ಮಾ. 03 -  ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳೆಯರಿಗಾಗಿ ಪೌಷ್ಠಿಕ ಆಹಾರ ತಯಾರಿ ಸ್ಪರ್ಧೆಯನ್ನು  ಮಾರ್ಚ್ 6ರಂದು ಬೆಳಗ್ಗೆ 11 ಗಂಟೆಗೆ ನಗರದ ರಾಜ್ಯ ಸರ್ಕಾರಿ ನೌಕರರ ಸಂಘದ ಕಟ್ಟಡದಲ್ಲಿ ಹಾಗೂ ಜಿಲ್ಲಾ ಮಟ್ಟದ ಕ್ರೀಡಾಕೂಟವನ್ನು  ಮಾರ್ಚ್ 7ರಂದು ಬೆಳಗ್ಗೆ 11 ಗಂಟೆಗೆ ಡಾ. ಬಿ.ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ. 
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ.  
ಸ್ಪರ್ಧೆಗಳಿಗೆ ಸ್ತ್ರೀ ಶಕ್ತಿ ಗುಂಪಿನ ಸದಸ್ಯರು, ಸರ್ಕಾರಿ ಮಹಿಳಾ ನೌಕರರು ಹಾಗೂ ಆಸಕ್ತ ಎಲ್ಲಾ ಮಹಿಳೆಯರು ಪಾಲ್ಗೊಳ್ಳಬಹುದಾಗಿದೆ.  ಭಾಗವಹಿಸುವವರು ನಗರದ ಜಿಲ್ಲಾಡಳಿತ ಭವನದಲ್ಲಿರುವ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ (ದೂರವಾಣಿ ಸಂಖ್ಯೆ:08226-222445 ಮತ್ತು 224720) ಹೆಸರು ನೊಂದಾಯಿಸಿಕೊಳ್ಳುವಂತೆ ಮಹಿಳೆಯ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಬಿ.ಬಸವರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು