ಉದೋಗ ಸೃಷ್ಠಿಯಲ್ಲಿ ಕರ್ನಾಟಕ ಮುಂದು: ಆರ್. ದ್ರುವನಾರಾಯಣ
ಚಾಮರಾಜನಗರ, ಮಾ. 01- ಉದೋಗ ಸೃಷ್ಠಿಯಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದು ಲೋಕ ಸಭಾ ಸದಸ್ಯರಾದ ಆರ್. ದ್ರುವನಾರಾಯಣ ತಿಳಿಸಿದರು.
ನಗರದ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರದಲ್ಲಿ ಇಂದು ಆಯೋಜಿಸಲಾಗಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಉದ್ಯೋಗ ಕಲ್ಪಿಸುವ ಸಲುವಾಗಿ ವಿಶೇಷ ಕಾರ್ಯಕ್ರಮ ಅನುಷ್ಠಾನ ಮಾಡುತ್ತಿದೆ. ಇದುವರೆಗೆ 12.5 ಲಕ್ಷ ನಿರುದ್ಯೋಗಿ ಯುವ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಶ ನೀಡಿದೆ. ಈ ಮೂಲಕ ದೇಶದಲ್ಲೆ ಉದ್ಯೋಗ ಸೃಷ್ಠಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದರು.
ಇಂದು ಪದವಿ ಪಡೆದವರು ಸಾಕಷ್ಟು ಮಂದಿ ಇದ್ದಾರೆ. ಎಲ್ಲರಿಗೂ ಉದ್ಯೋಗ ಅವಕಾಶಗಳು ಲಭಿಸಬೇಕಾದರೆ ಯಾವುದಾದರೂ ಕೌಶಲ ಇರಲೇಬೇಕಿದೆ. ಇದಕ್ಕಾಗಿಯೇ ಎಲ್ಲಾ ಜಿಲ್ಲೆಗಳಲ್ಲೂ ಕೌಶಲ ತರೆಬೇತಿ ನೀಡುವ ಸಲುವಾಗಿ ಕೇಂದ್ರಗಳನ್ನು ತೆರೆಯಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲೂ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರ ಸ್ಥಾಪಿಸಲಾಯಿತು ಎಂದು ದ್ರುವನಾರಾಯಣ ತಿಳಿಸಿದರು.
ತಾಲ್ಲೂಕಿನ ಬದನಗುಪ್ಪೆ ಕೆಲ್ಲಂಬಳ್ಳಿಯಲ್ಲಿ 1600 ಎಕರೆ ಪ್ರದೇಶದಲ್ಲಿ ಕೈಗಾರಿಕೆ ಪ್ರದೇಶ ಅಭಿವೃದ್ಧಿಯಾಗುತ್ತಿದೆ. ಕೈಗಾರಿಕೆ ಘಟಕಗಳು ಸ್ಥಾಪನೆಯಾದರೆ ಜಿಲ್ಲೆಯ ಯುವ ನಿರುದ್ಯೋಗಿ ಅಭ್ಯರ್ಥಿಗಳಿಗೆ ಉದ್ಯೋಗಪಡೆಯಲು ಅವಕಾಶ ಲಭಿಸಲಿದೆ ಎಂದು ದ್ರುವನಾರಾಯಣ ಅಭಿಪ್ರಾಯಪಟ್ಟರು.
ಮೈಸೂರು ಅರಗು ಮತು ಬಣ್ಣದ ಕಾರ್ಖಾನೆ ಅಧ್ಯಕ್ಷರಾದ ಹೆಚ್.ಎ. ವೆಂಕಟೇಶ್ ಮಾತನಾಡಿ ಪ್ರಸ್ತುತ ಸಂದರ್ಭದಲ್ಲಿ ಕೌಶಲ್ಯಕ್ಕೆ ಹೆಚ್ಚು ಬೇಡಿಕೆ ಇದೆ. ಹೀಗಾಗಿ ಒಂದಿಲ್ಲೋಂದು ಕೌಶಲ ತರಬೇತಿ ಹೊಂದಿದರೆ ಉದ್ಯೋಗ ಅವಕಾಶಗಳನ್ನು ಪಡೆಯಲು ಸಾಧ್ಯವಾಗಲಿದೆ. ಯುವ ಸಮೂಹ ಈ ಬಗ್ಗೆ ಆಸಕ್ತರಾಗಬೇಕು ಎಂದು ಸಲಹೆ ಮಾಡಿದರು.
ನಗರ ಸಭೆ ಅಧ್ಯಕ್ಷರಾದ ಶೋಭಾ, ಎಪಿಎಂಸಿ ಅಧ್ಯಕ್ಷರಾದ ಬಿ.ಕೆ. ರವಿ ಕುಮಾರ್ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕೃಷಿ ಕಾಲೇಜು ಸ್ಥಾಪನೆ : ಲೋಕಸಭಾ ಸದಸ್ಯರು, ಕೃಷಿ ವಿವಿ ಕುಲಪತಿ, ಜಿಲ್ಲಾಧಿಕಾರಿಯವರಿಂದ ಸ್ಥಳ ಪರಿಶೀಲನೆ
ಚಾಮರಾಜನಗರ, ಮಾ. 01 - ಜಿಲ್ಲೆಗೆ ಈ ಸಾಲಿನ ಬಜೆಟ್‍ನಲ್ಲಿ ಕೃಷಿ ಕಾಲೇಜು ಸ್ಥಾಪನೆಗೆ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ಲೋಕಸಭಾ ಸದಸ್ಯರಾದ ಆರ್. ದ್ರುವನಾರಾಯಣ, ಕೃಷಿ ವಿವಿ ಕುಲಪತಿ ಡಾ. ನಟರಾಜು, ಜಿಲ್ಲಾಧಿಕಾರಿ ಬಿ. ರಾಮು ಸೇರಿದಂತೆ ಇತರೆ ಜನಪ್ರತಿನಿಧಿಗಳು, ಅಧಿಕಾರಿಗಳ ತಂಡ ಇಂದು ಕಾಲೇಜು ನಿರ್ಮಾಣಕ್ಕೆ ಗುರುತಿಸಲಾಗಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.ಯಡಪುರದ ವೈದ್ಯಕೀಯ ಕಾಲೇಜು ಬಳಿ ಪ್ರಾಥಮಿಕ ಹಂತದಲ್ಲಿ ಗುರುತಿಸಲಾಗಿರುವ ವಿಸ್ತಾರ ಸ್ಥಳಕ್ಕೆ ಭೇಟಿಕೊಟ್ಟು ಕಾಲೇಜು ಕ್ಯಾಂಪಸ್‍ಗೆ ಪೂರೈಸಬೇಕಿರುವ ಅವಶ್ಯಕತೆಗಳಿಗೆ ಇರುವ ಭೂಮಿ ಲಭ್ಯತೆಯನ್ನು ವೀಕ್ಷಿಸಿದರು.
ಕೃಷಿ ಅನುಸಂಧಾನ ಪರಿಷತ್ ಅನುಸಾರ ಕೃಷಿ ಕಾಲೇಜಿಗೆ ಬೇಕಿರುವ ಕ್ಷೇತ್ರ ಪ್ರಯೋಗ, ಆಟದ ಮೈದಾನ, ಕಾಲೇಜು ಕಟ್ಟಡ, ರಸ್ತೆ, ಗೋದಾಮುಗಳಿಗೆ ಬೇಕಿರುವ ಸ್ಥಳ ಅಗತ್ಯವಿರುವ ಪ್ರಮಾಣದಲ್ಲಿ ಇದೆಯೇ ಎಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಇದೇ ವೇಳೆ ಮಾತನಾಡಿದ ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರು, ಜಿಲ್ಲೆಗೆ ಮುಖ್ಯಮಂತ್ರಿಯವರು ಕೃಷಿ ಕಾಲೇಜನ್ನು ಸ್ಥಾಪಿಸಲು ಬಜೆಟ್‍ನಲ್ಲಿ ಘೋಷಿಸಿದ್ದಾರೆ. ಕಳೆದ ಮೂರು ವರ್ಷಗಳ ಪ್ರಯತ್ನದ ಫಲವಾಗಿ ಈ ಬಾರಿ ಕೃಷಿ ಕಾಲೇಜು ಜಿಲ್ಲೆಗೆ ದಕ್ಕಿದೆ. ಇದಕ್ಕಾಗಿ ಮುಖ್ಯಮಂತ್ರಿಯವರಿಗೆ ಜಿಲ್ಲಾ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಕೃಷಿ ಕಾಲೇಜು ನಿರ್ಮಾಣಕ್ಕೆ ಕೃಷಿ ಅನುಸಂಧಾನ ಪರಿಷತ್ ನಿಯಮಾವಳಿ ಪ್ರಕಾರ 75 ಎಕರೆ ಜಾಗ ಅಗತ್ಯವಿದೆ. ಪ್ರಸ್ತುತ ಯಡಪುರದಲ್ಲಿ ಜಿಲ್ಲಾಧಿಕಾರಿಯವರು ಪ್ರಾಥಮಿಕ ಹಂತದಲ್ಲಿ 50 ಎಕರೆ ಭೂಮಿಯನ್ನು ಗುರುತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೃಷಿ ವಿವಿ ಉಪ ಕುಲಪತಿ ಇತರೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿದ್ದೇವೆ. ಉಳಿದ 25 ಎಕರೆ ಭೂಮಿಯನ್ನು ಸಹ ಗುರುತಿಸುವುದಾಗಿ ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ ಎಂದರು.
ಕೃಷಿ ಕಾಲೇಜು ನಿರ್ಮಾಣಕ್ಕೆ 10 ಕೋಟಿ ರೂ ಅನುದಾನ ಮೀಸಲಿಡಲಾಗಿದೆ. ಉಳಿದ ಭೂಮಿಯು ಲಭ್ಯವಾದರೆ ಕಾಲೇಜು ನಿರ್ಮಾಣ ಪ್ರಕ್ರಿಯೆಗೆ ತ್ವರಿತವಾಗಿ ಕಾರ್ಯೋನ್ಮುಖರಾಗಲಿದ್ದೇವೆ. ಈ ಶೈಕ್ಷಣಿಕ ಸಾಲಿನಲ್ಲಿಯೇ ಹರದನಹಳ್ಳಿಯಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ತಾತ್ಕಾಲಿಕವಾಗಿ ಕಾಲೇಜು ಆರಂಭಿಸಲು ಚಿಂತನೆ ನಡೆಸಲಾಗಿದೆ. ಕೃಷಿ ವಿವಿ ಉಪ ಕುಲಪತಿ ಇತರೆ ಅಧಿಕಾರಿಗಳ ತಂಡ ಕೃಷಿ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ, ಕಾಲೇಜು ಆರಂಭಕ್ಕೆ ಅಗತ್ಯವಿರುವ ಸೌಕರ್ಯಗಳನ್ನು ಪರಿಶೀಲಿಸಿದೆ. ನಿರೀಕ್ಷೆಯಂತೆ ಎಲ್ಲಾ ಸೌಲಭ್ಯಗಳು ಲಭಿಸಿದರೆ, ಈ ಶೈಕ್ಷಣಿಕ ಸಾಲಿನಲ್ಲಿಯೇ ಕೃಷಿ ಕಾಲೇಜು ಆರಂಭಿಸಬಹುದಾಗಿದೆ ಎಂದು ಧ್ರುವನಾರಾಯಣ ತಿಳಿಸಿದರು.
ಕೃಷಿ ವಿವಿ ಉಪ ಕುಲಪತಿ ಡಾ|| ನಟರಾಜು ಮಾತನಾಡಿ, ಕೃಷಿ ಕಾಲೇಜು ಜಿಲ್ಲೆಗೆ ತರಲು ಲೋಕಸಭಾ ಸದಸ್ಯರಾದ ಧ್ರುವನಾರಾಯಣ ಅವರು ತುಂಬಾ ಶ್ರಮಿಸಿದ್ದಾರೆ. ಈ ವರ್ಷವೇ ಕಾಲೇಜನ್ನು ಕೃಷಿ ವಿಜ್ಞಾನ ಕೇಂದ್ರದಲ್ಲಿ ತಾತ್ಕಾಲಿಕವಾಗಿ ಆರಂಭಿಸಲು ಯಾವುದೇ ತೊಡಕುಗಳಿಲ್ಲ. ಇರುವ ಕಟ್ಟಡದಲ್ಲೇ 30 ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿ, ಕಾಲೇಜು ಆರಂಭಿಸಬಹುದು. ಮಂಡ್ಯ ಕೃಷಿ ಕಾಲೇಜು ಭೋದಕರನ್ನು ಸಹ ಬಳಸಿಕೊಳ್ಳಬಹುದು ಎಂದರು.
ಕೃಷಿ ವಿವಿ ಕುಲಸಚಿವರಾದ ಡಾ|| ಎ.ಬಿ. ಪಾಟೀಲ ಮಾತನಾಡಿ, ಕೃಷಿ ಅನುಸಂಧಾನ ಪರಿಷತ್ ಪ್ರಕಾರ 75 ಎಕರೆ ಭೂಮಿ ಕಾಲೇಜು ನಿರ್ಮಾಣಕ್ಕೆ ಬೇಕಿದೆ. ಇದರಲ್ಲಿ 50 ಎಕರೆ ಕೃಷಿ ಕ್ಷೇತ್ರದ ಪ್ರಯೋಗ, 8 ಎಕರೆ ಆಟದ ಮೈದಾನ, ಇನ್ನಿತರೆ 17 ಎಕರೆ ಪ್ರದೇಶದಲ್ಲಿ ಕಾಲೇಜು ಕಟ್ಟಡ, ಗೋದಾಮು, ರಸ್ತೆ, ಇನ್ನಿತರೆ ಸೌಲಭ್ಯಗಳನ್ನು ಒದಗಿಸಬೇಕಾಗುತ್ತದೆ. ಎಲ್ಲವೂ ಶೀಘ್ರವಾಗಿ ಲಭಿಸಿದ್ದಲ್ಲಿ, ಕಾಲೇಜು ಪ್ರಾರಂಭಕ್ಕೆ ಅನುಕೂಲವಾಗಲಿದೆ ಎಂದರು.
ತಾತ್ಕಾಲಿಕವಾಗಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಾಲೇಜು ಆರಂಭಿಸಲು ಅವಕಾಶವಿದ್ದು, 30 ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡಲು ಅವಕಾಶ ನೀಡಬಹುದು. ಶೇ. 40 ರಷ್ಟು ಸೀಟುಗಳು ರೈತರ ಮಕ್ಕಳಿಗೆ ನೀಡಲಾಗುತ್ತದೆ. ಸ್ವಂತ ಕಟ್ಟಡ ಆರಂಭವಾದಲ್ಲಿ ಹಾಸ್ಟೆಲ್ ಸಹ ನಿರ್ಮಾಣ ಮಾಡಲಾಗುತ್ತದೆ. ಹೆಚ್ಚು ವಿದ್ಯಾರ್ಥಿಗಳ ಪ್ರವೇಶಕ್ಕೂ ಅನುಕೂಲ ಕಲ್ಪಿಸಲಾಗುತ್ತದೆ ಎಂದರು.
ಜಿಲ್ಲಾಧಿಕಾರಿ ಬಿ.ರಾಮು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಕೆ.ಹರೀಶ್‍ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಧಮೇಂದ್ರ ಕುಮಾರ್ ಮೀನಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಹೆಚ್.ವಿ. ಚಂದ್ರು, ಜಿಲ್ಲಾ ಪಂಚಾಯತ್ ಕೃಷಿ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕೆರೆಹಳ್ಳಿ ನವೀನ್, ಎಪಿಎಂಸಿ ಅಧ್ಯಕ್ಷರಾದ ಬಿ.ಕೆ.ರವಿಕುಮಾರ್, ಕೃಷಿ ವಿವಿ ಸಂಶೋಧನಾ ನಿರ್ದೇಶಕರಾದ ದೇವರಾಜು, ಕೃಷಿ ವಿಜ್ಞಾನ ಕೇಂದ್ರದ ಸಂಯೋಜಕರಾದ ದೊರೆಸ್ವಾಮಿ, ಇತರರು ಹಾಜರಿದ್ದರು.
ಸ್ವಚ್ಚತೆ ಜಾಗೃತಿಗೆ ಕಾಳಜಿ ವಹಿಸಿ: ಜಿ.ಪಂ. ಸದಸ್ಯರಾದ ಸಿ.ಎನ್. ಬಾಲರಾಜು ಸಲಹೆ
ಚಾಮರಾಜನಗರ, ಮಾ. 01 - ಸ್ಛಚ್ಚತೆ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ವಿದ್ಯಾರ್ಥಿಗಳು ಸಹ ಪ್ರಮುಖ ಪಾತ್ರ ವಹಿಸಬೇಕೆಂದು ಜಿಲ್ಲಾ ಪಂಚಾಯತ್ ಸದಸ್ಯರಾದ ಸಿ.ಎನ್. ಬಾಲರಾಜು ಸಲಹೆ ಮಾಡಿದರು.
ತಾಲ್ಲೂಕಿನ ಕೆಲ್ಲಂಬಳ್ಳಿಯ ಸರ್ಕಾರಿ ಶಾಲೆ ಆವರಣದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎನ್.ಎಸ್.ಎಸ್ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯವೇ ಸಂಪತ್ತು. ಆರೋಗ್ಯವನ್ನು ಕಾಪಾಡಿಕೊಳ್ಳಲು ಸ್ಛಚ್ಚತೆ ಸಹ ಅಗತ್ಯ. ವಿದ್ಯಾರ್ಥಿಗಳು ನೈರ್ಮಲ್ಯದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು. ನಗರ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಕಾಳಜಿಗಾಗಿ ವಿದ್ಯಾರ್ಥಿಗಳ ಪಾತ್ರವು ಸಹ ಮುಖ್ಯವಾಗಿದೆ ಎಂದರು.
ಸರ್ಕಾರ ಸ್ಛಚ್ಚ ಭಾರತ್ ಮಿಷನ್ ಕಾರ್ಯಕ್ರಮದಡಿ ನೈರ್ಮಲ್ಯ ಯೋಜನೆಗೆ ವಿಶೇಷ ಒತ್ತು ನೀಡಿದೆ. ಪ್ರತಿಯೊಬ್ಬರೂ ಶೌಚಾಲಯ ನಿರ್ಮಾಣ ಮಾಡಿಕೊಳ್ಳಬೇಕೆಂಬ ಉದ್ದೇಶದಿಂದ ಪ್ರೋತ್ಸಾ ಧನ ನೀಡುತ್ತಿದೆ. ಸಾಮಾನ್ಯ ವರ್ಗದವರಿಗೆ 12ಸಾವಿರ ರೂ, ಪರಿಶಿಷ್ಠ ಜಾತಿ ವರ್ಗದವರಿಗೆ 15 ಸಾವಿರ ರೂ ಪ್ರೋತ್ಸಾಹ ಧನವನ್ನು ನೀಡುತ್ತಿದೆ. ಇದರ ಬಳಕೆ ಮಾಡಿಕೊಳ್ಳಬೇಕು ಎಂದು ಬಾಲರಾಜು ತಿಳಿಸಿದರು.
ಪರಿಸರವನ್ನು ಸ್ಛಚ್ಚವಾಗಿಟ್ಟುಕೊಳ್ಳುವ ಬಗ್ಗೆ ಪ್ರತಿಯೊಬ್ಬರೂ ಆಸಕ್ತಿ ವಹಿಸಬೇಕು. ಪರಿಸರ ಸಮತೋಲನ ಕಾಯ್ದುಕೊಳ್ಳಬೇಕು. ಪರಿಸರ ಮಾಲಿನ್ಯಕ್ಕೆ ಅವಕಾಶವಾಗಬಾರದು. ಗಿಡಮರಗಳ ಪೋಷಣೆ ಮಾಡಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪರಿಸರ ಜಾಗೃತಿಗೂ ಮುಂದಾಗಬೇಕಿದೆ ಎಂದು ಬಾಲರಾಜು ಅವರು ಸಲಹೆ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಯಮ್ಮ ಮಾದೇಗೌಡ, ಉಪಾಧ್ಯಕ್ಷರಾದ ರವಿ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಾಮಣ್ಣ, ಮುಖ್ಯ ಶಿಕ್ಷಕರಾದ ಮುದ್ದು ಮಾದೇಗೌಡ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಜಿಲ್ಲೆಯ ಅಂತಿಮ ಮತದಾರರ ಪಟ್ಟಿ ಪ್ರಕಟ: ಜಿಲ್ಲಾಧಿಕಾರಿ ಅವರಿಂದ ವಿವರ
ಚಾಮರಾಜನಗರ, ಮಾ. 01 - ಜಿಲ್ಲೆಯಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಚುರ ಪಡಿಸಲಾಗಿದ್ದು ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಬಿ. ರಾಮು ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮಾಹಿತಿ ನೀಡಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಬಿ. ರಾಮು ಅವರು ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯ ವಿವರಗಳ ಬಗ್ಗೆ ತಿಳಿಸಿದರು.
ದಿನಾಂಕ 1-1-2018 ಕ್ಕೆ ಅರ್ಹತಾ ದಿನಾಂಕ ನಿಗಧಿಪಡಿಸಿ ಮತದಾರರ ಪಟ್ಟಿಯನ್ನು ತಯಾರಿಸಿ ಫೆಬ್ರವರಿ 28 ರಂದು ಅಂತಿಮ ಮತದಾರರ ಪಟ್ಟಿಯನ್ನು ಜಿಲ್ಲೆಯ ಉಪವಿಭಾಗಾಧಿಕಾರಿಗಳ ಕಚೇರಿ, ಎಲ್ಲಾ ತಾಲ್ಲೂಕುಗಳ ತಹಶೀಲ್ದಾರ್, ಉಪ ತಹಶೀಲ್ದಾರ್‍ಗಳ ಕಚೇರಿ ಹಾಗೂ ಸಂಬಧಿಸಿದ ಮತಗಟ್ಟೆಗಳಲ್ಲಿ ಪ್ರಚುರ ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕರಡು ಮತದಾರರ ಪಟ್ಟಿಯಲ್ಲಿ ಹನೂರು ವಿಧಾನಸಭಾ ಕ್ಷೇತ್ರದಲ್ಲಿ 104150 ಪುರುಷ ಮತದಾರರು, 100082 ಮಹಿಳಾ ಮತದಾರರು ಹಾಗೂ 16 ಇತರೆ ಮತದಾರರು ಇದ್ದು ಒಟ್ಟು 204248 ಮತದಾರರಿದ್ದರು. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಕರಡು ಮತದಾರರ ಪಟ್ಟಿಯಲ್ಲಿ 103770 ಪುರುಷ ಮತದಾರರು, 104266 ಮಹಿಳಾ ಮತದಾರರು ಹಾಗೂ 13 ಇತರೆ ಮತದಾರರನ್ನು ಒಳಗೊಂಡು ಒಟ್ಟು 208049 ಮತದಾರರಿದ್ದರು.
ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕರಡು ಮತದಾರರ ಪಟ್ಟಿಯಲ್ಲಿ 100893 ಪುರುಷ ಮತದಾರರು, 102584 ಮಹಿಳಾ ಮತದಾರರು ಹಾಗೂ 16 ಇತರೆ ಮತದಾರರು ಇದ್ದು ಒಟ್ಟು 203493 ಮತದಾರರಿದ್ದರು. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲ್ಲಿ 100142 ಪುರುಷ ಮತದಾರರು, 100933 ಮಹಿಳಾ ಮತದಾರರು ಹಾಗೂ 17 ಇತರೆ ಮತದಾರರು ಇದ್ದು ಒಟ್ಟು 201092 ಮತದಾರರು ಇದ್ದರು. ಒಟ್ಟು ಜಿಲ್ಲೆಯಲ್ಲಿ 408955 ಪುರುಷ ಮತದಾರರು, 407865 ಮಹಿಳಾ ಮತದಾರರು ಹಾಗೂ ಇತರೆ 62 ಮತದಾರರು ಸೇರಿದಂತೆ ಒಟ್ಟಾರೆ 816882 ಮತದಾರರಿದ್ದರು.
ಮತದಾರರ ಪಟ್ಟಿಯಲ್ಲಿ ದಿನಾಂಕ 30.11.2017 ರಿಂದ 22.01.2018ರವರೆಗೆ ಮತದಾರರ ಸೇರ್ಪಡೆ ಹಾಗೂ ಪಟ್ಟಿಯಲ್ಲಿರುವ ಹೆಸರುಗಳನ್ನು ಕೈಬಿಡುವ ಕಾರ್ಯ ನೆರವೇರಿದ್ದು ಜಿಲ್ಲೆಯಲ್ಲಿ ಒಟ್ಟು 10127 ಪುರುಷ ಮತದಾರರು, 11874 ಮಹಿಳಾ ಮತದಾರರನ್ನು ಸೇರ್ಪಡೆಗೊಳಿಸುವ ಕಾರ್ಯ ನಡೆದಿದ್ದು ಒಟ್ಟು 22001 ಮತದಾರರನ್ನು ಸೇರ್ಪಡೆಗೊಳಿಸಿದೆ. ಪಟ್ಟಿಯಿಂದ ಒಟ್ಟು 9136 ಪುರುಷ, 8829 ಮಹಿಳಾ ಮತದಾರರನ್ನು ಕೈ ಬಿಟ್ಟಿದ್ದು ಒಟ್ಟು 17965 ಮತದಾರರು ಕೈಬಿಡಲಾಗಿದೆ.
ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ 2483 ಪುರುಷ ಮತದಾರರು, 2550 ಮಹಿಳಾ ಮತದಾರರು ಸೇರಿದಂತೆÀ ಒಟ್ಟು 5033 ಸೇರ್ಪಡೆಯಾಗಿದ್ದಾರೆ. 2341 ಪುರುಷ ಹಾಗೂ 2084 ಮಹಿಳಾ ಮತದಾರರು ಸೇರಿದಂತೆ 4425 ಮತದಾರರನ್ನು ಕೈಬಿಡಲಾಗಿದೆ.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ 2466 ಪುರುಷ ಮತದಾರರು, 3105 ಮಹಿಳಾ ಮತದಾರರು ಸೇರಿದಂತೆ ಒಟ್ಟು 5571 ಮತದಾರರು ಸೇರ್ಪಡೆಯಾಗಿದ್ದಾರೆ. 2213 ಪುರುಷರು ಹಾಗೂ 2318 ಮಹಿಳಾ ಮತದಾರರು ಸೇರಿದಂತೆ ಒಟ್ಟು 4531 ಮತದಾರರನ್ನು ಕೈ ಬಿಡಲಾಗಿದೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ 2677 ಪುರುಷ ಮತದಾರರು, 3156 ಮಹಿಳಾ ಮತದಾರರು ಸೇರಿದಂತೆ ಒಟ್ಟು 5833 ಮತದಾರರು ಸೇರ್ಪಡೆಯಾಗಿದ್ದಾರೆ. 2757 ಪುರುಷರು ಹಾಗೂ 2446 ಮಹಿಳಾ ಮತದಾರರು ಸೇರಿದಂತೆ ಒಟ್ಟು 5203 ಮತದಾರರನ್ನು ಕೈ ಬಿಡಲಾಗಿದೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ 2501 ಪುರುಷ ಮತದಾರರು, 3063 ಮಹಿಳಾ ಮತದಾರರು ಸೇರಿದಂತೆ ಒಟ್ಟು 5564 ಮತದಾರರು ಸೇರ್ಪಡೆಯಾಗಿದ್ದಾರೆ. 1825 ಪುರುಷರು ಹಾಗೂ 1981 ಮಹಿಳಾ ಮತದಾರರು ಸೇರಿದಂತೆ ಒಟ್ಟು 3806 ಮತದಾರರನ್ನು ಕೈ ಬಿಡಲಾಗಿದೆ.
ಪರಿಷ್ಕರಣೆ ಕಾರ್ಯ ಮುಕ್ತಾಯದ ನಂತರ ಹನೂರು ಕ್ಷೇತ್ರಕ್ಕೆ 611 ಮತದಾರರು ಸೇರ್ಪಡೆಯಾಗಿದ್ದು ಶೇಕಡಾವಾರು 0.30ರಷ್ಟು, ಕೊಳ್ಳೇಗಾಲ ಕ್ಷೇತ್ರದಲ್ಲಿ 1040 ಮತದಾರರನ್ನು ಸೇರ್ಪಡೆಯಾಗುವ ಮೂಲಕ ಶೇ. 0.50ರಷ್ಟು, ಚಾಮರಾಜನಗರ ಕ್ಷೇತ್ರದಲ್ಲಿ 633 ಮತದಾರರು ಸೇರ್ಪಡೆಯಾಗುವ ಮೂಲಕ ಶೇ. 0.31 ಹಾಗೂ ಗುಂಡ್ಲುಪೇಟೆ ಕ್ಷೇತ್ರದಲ್ಲಿ 1760 ಮತದಾರರು ಸೇರ್ಪಡೆಯಾಗುವ ಮೂಲಕ ಶೇ. 0.88ರಷ್ಟು ಹಿಂದಿನ ಮತದಾರರ ಪಟ್ಟಿಗಿಂತ ಸೇರ್ಪಡೆಯಾಗಿದ್ದಾರೆ. ಒಟ್ಟಾರೆ 4044 ಮತದಾರರು ಸೇರ್ಪಡೆಗೊಂಡಿದ್ದು ಶೇ.0.50ರಷ್ಟು ಹಿಂದಿನ ಮತದಾರರ ಪಟ್ಟಿಗೆ ಶೇಕಡಾವಾರು ಸೇರ್ಪಡೆಯಾದಂತಾಗಿದೆ.
ಅಂತಿಮವಾಗಿ ಮತದಾರರ ಪಟ್ಟಿಯಲ್ಲಿ ಹನೂರು ವಿಧಾನಸಭಾ ಕ್ಷೇತ್ರದಲ್ಲಿ 104292 ಪುರುಷ ಹಾಗೂ 100567 ಮಹಿಳಾ ಮತದಾರರು ಸೇರಿದಂತೆ ಒಟ್ಟು 204859 ಮತದಾರರಿದ್ದಾರೆ. ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ 104023 ಪುರುಷ, 105066 ಮಹಿಳಾ ಮತದಾರರಿದ್ದು ಒಟ್ಟು 209089 ಮತದಾರರಿದ್ದಾರೆ. ಚಾಮರಾಜನಗರ ಕ್ಷೇತ್ರದಲ್ಲಿ 100816 ಪುರುಷ ಮತದಾರರು, 103310 ಮಹಿಳಾ ಮತದಾರರನ್ನು ಒಳಗೊಂಡು ಒಟ್ಟಾರೆ 204126 ಮತದಾರರು ಇದ್ದಾರೆ. ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 100820 ಪುರುಷ ಹಾಗೂ 102032 ಮಹಿಳಾ ಮತದಾರರನ್ನು ಒಳಗೊಂಡಂತೆ ಒಟ್ಟು 202852 ಮತದಾರರು ಇದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಒಟ್ಟು 820926 ಮತದಾರರು ಇದ್ದು ಈ ಪೈಕಿ 409951 ಪುರುಷ ಮತದಾರರು ಮತ್ತು 410975 ಮಹಿಳಾ ಮತದಾರರು ಸೇರಿದ್ದಾರೆ.
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ಕೈಬಿಡುವುದು, ತಿದ್ದುಪಡಿ, ಸ್ಥಳಾಂತರಗಳಿಗೆ ಸಂಬಂಧಿಸಿದಂತೆ ನಿರಂತರವಾಗಿ ಅರ್ಜಿ ನಮೂನೆಗಳನ್ನು ಸ್ವೀಕರಿಸಲಾಗುತ್ತಿದೆ. ಅರ್ಹ ಮತದಾರರ ಹೆಸರು ಪಟ್ಟಿಯಲ್ಲಿ ಸೇರ್ಪಡೆಗೊಳ್ಳದಿದ್ದಲ್ಲಿ ನಮೂನೆ 6ರಲ್ಲಿ ಅರ್ಜಿಯನ್ನು ಆಯಾ ಮತಗಟ್ಟೆ ಅಧಿಕಾರಿಗೆ ತಾಲೂಕು ಕಚೇರಿ ಅಥವಾ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಸಲ್ಲಿಸಬಹುದಾಗಿದೆ.
ಸ್ವೀಕರಿಸಲಾದ ಅರ್ಜಿಗಳನ್ನು ಪರಿಶೀಲಿಸಿ ಅಂತಿಮಗೊಳಿಸಿ ಇಆರ್‍ಎಂಎಸ್ ತಂತ್ರಾಂಶದಲ್ಲಿ ಅಳವಡಿಸಿ ಪೂರಕ ಪಟ್ಟಿ ತಯಾರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ರಾಮು ತಿಳಿಸಿದ್ದಾರೆ.
ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಸೈಯದ್ ರಫಿ, ಪರಶಿವಮೂರ್ತಿ, ಬ್ಯಾಡಮೂಡ್ಲು ಬಸವಣ್ಣ, ಕಾಮರಾಜು ಮಹೇಶ್ ಗೌಡ, ಇನ್ನಿತರರು ಸಭೆಯಲ್ಲಿ ಹಾಜರಿದ್ದರು.
ಮಾ. 3ರಂದು ನಗರದಲ್ಲಿ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರಧಾನ ಸಮಾರಂಭ
ಚಾಮರಾಜನಗರ, ಮಾ. 01 - ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಪ್ರಸಕ್ತ ಸಾಲಿನ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಮಾರ್ಚ್ 3ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾಡಳಿತ ಭವನದ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ಏರ್ಪಡಿಸಿದೆ.ಜಿಲ್ಲಾಧಿಕಾರಿಗಳಾದ ಬಿ. ರಾಮು ಅವರು ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸುವರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‍ಕುಮಾರ್ ಕನಸು ನನಸು ಪುಸ್ತಕ ಬಿಡುಗಡೆ ಮಾಡುವರು. ಮೈಸೂರು ವಲಯ ಕಚೇರಿಯ ಹಿರಿಯ ಪರಿಸರ ಅಧಿಕಾರಿ ಎ. ಉದಯಕುಮÁರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಕೆ. ಮಹದೇವಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.
ತರಕಾರಿ ಬೀಜಗಳ ಕಿಟ್ ವಿತರಣೆಗೆ ಅರ್ಜಿ ಆಹ್ವಾನ
ಚಾಮರಾಜನಗರ, ಮಾ. 0- ತೋಟಗಾರಿಕೆ ಇಲಾಖೆ ವತಿಯಿಂದ ಕೃಷಿ ಭಾಗ್ಯ ಯೋಜನೆಯಡಿ ತರಕಾರಿ ಬೀಜಗಳ ಕಿಟ್ ವಿತರಣೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ.ಸಣ್ಣ, ಅತಿ ಸಣ್ಣ ರೈತರಿಗೆ ತರಕಾರಿ ಬೆಳೆಗಳ ಉತ್ಪಾದನೆ ವೆಚ್ಚ ಕಡಿಮೆ ಮಾಡಲು ಸುಧಾರಿತ ತರಕಾರಿ ತಳಿಗಳ ಪರಿಚಯ ಹಾಗೂ ಉತ್ತಮ ಗುಣಮಟ್ಟದ ತರಕಾರಿ ಬೀಜಗಳು ದೊರಕುವಂತೆ ಖಚಿತಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ನೀರಾವರಿ ಸೌಲಭ್ಯವಿರುವ ಜಮೀನು ಹೊಂದಿದ್ದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ, ಅತೀ ಸಣ್ಣ ಹಾಗೂ ರೈತ ಮಹಿಳೆಯರಿಗೆ 2000 ರೂ.ಗಳ ತರಕಾರಿ ಬೀಜಗಳ ಕಿಟ್ ವಿತರಣೆ ಮಾಡಲಾಗುವುದು.
ನಿಗದಿತ ಅರ್ಜಿ ನಮೂನೆಯನ್ನು ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಿಂದ ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ರೈತರ ಭಾವಚಿತ್ರ, ಪ್ರಸಕ್ತ ಸಾಲಿನ ಪಹಣಿ, ಆಧಾರ್, ಚುನಾವಣಾ ಕಾರ್ಡ್, ಸ್ವಯಂ ಘೋಷಣಾ ಪತ್ರ (ಇತರೆ ಉತ್ಪಾದನಾ ಕ್ರಮಗಳನ್ನು ಅನುಸರಿಸುವ ಕುರಿತು)ದ ಪ್ರತಿಗಳನ್ನು ಲಗತ್ತಿಸಿ ಮಾರ್ಚ್ 5ರೊಳಗೆ ಸಲ್ಲಿಸಬೇಕು.
ರೈತರು ತರಕಾರಿ ಬೀಜಗಳ ಕಿಟ್ ಸವಲತ್ತನ್ನು ಪಡೆದುಕೊಂಡು ಯೋಜನೆಯ ಸದುಪಯೋಗಪಡಿಸಿಕೊಳ್ಳುವಂತೆ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಳ್ಳೇಗಾಲ ನಗರಸಭೆ : ವಾಜಪೇಯಿ ನಗರ ವಸತಿ ಯೋಜನೆಯಡಿ ನಿವೇಶನ, ವಸತಿ ರಹಿತರಿಂದ ಅರ್ಜಿ ಆಹ್ವಾನಚಾಮರಾಜನಗರ, ಮಾ. 01- ಕೊಳ್ಳೇಗಾಲ ನಗರಸಭಾ ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿಗೆ ವಾಜಪೇಯಿ ನಗರ ವಸತಿ ಯೋಜನೆಯಡಿ ಪಟ್ಟಣದಲ್ಲಿ ವಾಸವಾಗಿರುವ ನಿವೇಶನ, ವಸತಿ ರಹಿತರ ಕುಟುಂಬಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪಟ್ಟಣದಲ್ಲಿ ಲಭ್ಯವಿರುವ 2 ಎಕರೆ 38 ಗುಂಟೆ ಜಮೀನಿನಲ್ಲಿ ಜಿ+2 ಮಾದರಿಯ ಲಂಬೀಯ ಕಟ್ಟಡ ನಿರ್ಮಿಸಲಾಗುತ್ತಿದ್ದು ನಿವೇಶನ, ವಸತಿ ರಹಿತ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಮತ್ತು ವಿಕಲಚೇತನ ಮಹಿಳಾ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲÁಗಿದೆ.
ಕೊಳ್ಳೇಗಾಲ ನಗರಸಭೆಯಿಂದ ಅರ್ಜಿಯನ್ನು ಮಾರ್ಚ್ 5ರೊಳಗೆ ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ಜಾತಿ, ಆದಾಯ ಪ್ರಮಾಣ ಪತ್ರ, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿ, ನಿವೇಶನ / ವಸತಿ ರಹಿತರ ಬಗ್ಗೆ 50 ರೂ. ಪ್ರಮಾಣ ಪತ್ರದ ದೃಢೀಕೃತ ದಾಖಲಾತಿಗಳನ್ನು ಲಗತ್ತಿಸಿ ಮಾರ್ಚ್ 9ರ ಒಳಗೆ ನಗರಸಭೆ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ನಗರಸಭೆಯ ಸಂಬಂಧಪಟ್ಟ ಶಾಖೆಯನ್ನು ಸಂಪರ್ಕಿಸುವಂತೆ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಜಿಲ್ಲೆಗೆ ಭ್ರಷ್ಟಾಚಾರ ನಿಗ್ರಹದಳ ಅಧಿಕಾರಿಗಳ ಭೇಟಿ : ನಾಗರಿಕರಿಂದ ದೂರು ಸ್ವೀಕಾರ
ಚಾಮರಾಜನಗರ, ಮಾ. 01 - ಜಿಲ್ಲೆಯ ತಾಲೂಕುಗಳಿಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮಾರ್ಚ್ 5 ರಿಂದ 27ರವರೆಗೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಭೇಟಿ ನೀಡಿ ಸಾರ್ವಜನಿಕರಿಂದ ದÀೂರುಗಳನ್ನು ಸ್ವೀಕರಿಸುವರು.ಮಾರ್ಚ್ 5ರಂದು ಗುಂಡ್ಲುಪೇಟೆ ತಾಲೂಕಿನ ಸಾರ್ವಜನಿಕರಿಂದ ಗುಂಡ್ಲುಪೇಟೆಯ ಸರ್ಕಾರಿ ಅತಿಥಿಗೃಹದಲ್ಲಿ, ಮಾರ್ಚ್ 13ರಂದು ಚಾಮರಾಜನಗರ ತಾಲೂಕಿಗೆ ಸಂಬಂಧಿಸಿದಂತೆ ನಗರದ ಎಸಿಬಿ ಪೊಲೀಸ್ ಠಾಣೆಯಲ್ಲಿ ದೂರುಗಳನ್ನು ಸ್ವೀಕರಿಸುವರು.
ಮಾರ್ಚ್ 19ರಂದು ಯಳಂದೂರು, 23ರಂದು ಕೊಳ್ಳೇಗಾಲ ಹಾಗೂ ಮಾರ್ಚ್ 27ರಂದು ಹನೂರಿನಲ್ಲಿ ದೂರುಗಳನ್ನು ಅಲ್ಲಿನ ಸರ್ಕಾರಿ ಅತಿಥಿಗೃಹದಲ್ಲಿ ಸ್ವೀಕರಿಸುವರು.
ಸರ್ಕಾರಿ ಕಚೇರಿಗಳಲ್ಲಿ ವಿಳಂಬ, ಲಂಚದ ಹಣಕ್ಕೆ ಒತ್ತಾಯ ಹಾಗೂ ಇನ್ನಿತರ ತೊಂದರೆ ನೀಡುತ್ತಿರುವ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಸಾರ್ವಜನಿಕರು ದೂರು ಸಲ್ಲಿಸಬಹುದಾಗಿದ್ದು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆ ಪ್ರಕಟಣೆ ತಿಳಿಸಿದೆ.
ಮಾ. 6ರಂದು ಆರ್.ಪಿ. ಘಾಟ್‍ನಲ್ಲಿ ಅಂಚೆ ಸಂತೆ
ಚಾಮರಾಜನಗರ, ಮಾ. 01:– ಅಂಚೆ ಇಲಾಖೆಯು ಕೊಳ್ಳೇಗಾಲ ತಾಲೂಕಿನ ಆರ್.ಪಿ. ಘಾಟ್‍ನಲ್ಲಿ ಮಾರ್ಚ್ 6ರಂದು ಅಂಚೆ ಸಂತೆ ಹಮ್ಮಿಕೊಂಡಿದೆ.ಈ ಅಂಚೆ ಸಂತೆಯಲ್ಲಿ ಅಂಚೆ ಕಚೇರಿ ಉಳಿತಾಯ ಖಾತೆ, ಆವರ್ತಕ ಖಾತೆ, ಸುಕನ್ಯಾ ಸಮೃದ್ಧಿ ಖಾತೆ, ಸಾರ್ವಜನಿಕ ಭವಿಷ್ಯ ನಿಧಿ ಖಾತೆ, ಪ್ರಧಾನಮಂತ್ರಿ ಜೀವನಜ್ಯೋತಿ ವಿಮಾ ಯೋಜನೆ, ಪ್ರಧಾನಮಂತ್ರಿ ಜೀವನ ಸುರಕ್ಷಾ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಗ್ರಾಮೀಣ ಅಂಚೆ ಜೀವ ವಿಮೆ, ಇತರೆ ಅಂಚೆ ಜೀವವಿಮೆ ಇನ್ನಿತರ ಅಂಚೆ ಯೋಜನೆಗಳನ್ನು ಸ್ವೀಕರಿಸಲಾಗುತ್ತದೆ.
ಆರ್.ಪಿ. ಘಾಟ್ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಅಂಚೆಸಂತೆಯ ಸದುಪಯೋಗ ಮಾಡಿಕೊಳ್ಳಬೇಕೆಂದು ಅಂಚೆ ಅಧೀಕ್ಷಕರಾರಾದ ಜಿ.ಸಿ. ಶ್ರೀನಿವಾಸ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಮಾ. 8ರಂದು ಮಾದಾಪುರದಲ್ಲಿ ಅಂಚೆ ಸಂತೆ
ಚಾಮರಾಜನಗರ, ಮಾ. 01 – ಅಂಚೆ ಇಲಾಖೆಯು ಚಾಮರಾಜನಗರ ತಾಲೂಕಿನ ಮಾದಾಪುರ ಗ್ರಾಮದಲ್ಲಿ ಮಾರ್ಚ್ 8ರಂದು ಅಂಚೆ ಸಂತೆ ನಡೆಸಲಿದೆ.ಈ ಅಂಚೆ ಸಂತೆಯಲ್ಲಿ ಅಂಚೆ ಕಚೇರಿ ಉಳಿತಾಯ ಖಾತೆ, ಆವರ್ತಕ ಖಾತೆ, ಸುಕನ್ಯಾ ಸಮೃದ್ಧಿ ಖಾತೆ, ಸಾರ್ವಜನಿಕ ಭವಿಷ್ಯ ನಿಧಿ ಖಾತೆ, ಪ್ರಧಾನಮಂತ್ರಿ ಜೀವನಜ್ಯೋತಿ ವಿಮಾ ಯೋಜನೆ, ಪ್ರಧಾನಮಂತ್ರಿ ಜೀವನ ಸುರಕ್ಷಾ ವಿಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಗ್ರಾಮೀಣ ಅಂಚೆ ಜೀವ ವಿಮೆ, ಇತರೆ ಅಂಚೆ ಜೀವವಿಮೆ ಇನ್ನಿತರ ಅಂಚೆ ಯೋಜನೆಗಳನ್ನು ಸ್ವೀಕರಿಸಲಾಗುತ್ತದೆ.
ಮಾದಾಪುರ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಅಂಚೆಸಂತೆಯ ಸದುಪಯೋಗ ಮಾಡಿಕೊಳ್ಳಬೇಕೆಂದು ಅಂಚೆ ಅಧೀಕ್ಷಕರಾರಾದ ಜಿ.ಸಿ. ಶ್ರೀನಿವಾಸ್ ಪ್ರಕಟಣೆಯಲ್ಲಿ ಕೋರಿದ್ದಾರೆ.
ಚಾ.ನಗರ ನಗರಸಭೆ : ಮಾ. 3ರಂದು ಆಯವ್ಯಯ ಸಭೆ
ಚಾಮರಾಜನಗರ, ಮಾ. 01 - ಚಾಮರಾಜನಗರ ನಗರಸಭೆಯ 2017-18ನೇ ಸಾಲಿನ ಪರಿಷ್ಕøತ ಹಾಗೂ 2018-19ನೇ ಸಾಲಿನ ಅಂದಾಜು ಆಯವ್ಯಯ ಸಭೆಯು ನಗರಸಭೆ ಅಧ್ಯಕ್ಷರಾದ ಶೋಭ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ 3ರಂದು ಬೆಳಿಗ್ಗೆ 11 ಗಂಟೆಗೆ ನಗರಸಭೆ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತರಬೇತಿ ನೀಡಲು ಸಂಸ್ಥೆಗಳಿಂದ ಅರ್ಜಿ ಆಹ್ವಾನ
ಚಾಮರಾಜನಗರ, ಮಾ. 01 - ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಗಳಿಗೆÀ ಜೆಇಇ, ನೀಟ್, ಗೇಟ್, ಜಿಆರ್‍ಇ ಮುಂತಾದ ರಾಷ್ಟ್ರಮಟ್ಟದ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಪೂರ್ವಭಾವಿ ತರಬೇತಿ ನೀಡಲಿದೆ.
ಜಿಲ್ಲೆಯಲ್ಲಿ ಕೋರ್ಸುಗಳಿಗೆ ತರಬೇತಿ ನೀಡುವ ಸಂಸ್ಥೆಗಳು ಮಾರ್ಚ್ 15ರೊಳಗೆ ತಮ್ಮ ಕಾರ್ಯಕ್ಷಮತೆಯ ಪೂರ್ಣ ವಿವರಗಳೊಂದಿಗೆ ಜಿಲ್ಲಾಡಳಿತ ಭವನದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಅರ್ಜಿ ಸಲ್ಲಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಪ್ರಕಟಣೆÀಯಲ್ಲಿ ತಿಳಿಸಿದ್ದಾರೆ.
ಮಾ. 11ರಂದು ಆದರ್ಶ ವಿದ್ಯಾಲಯದ ಪ್ರವೇಶ ಪರೀಕ್ಷೆ
ಚಾಮರಾಜನಗರ, ಮಾ. 01 - ಚಾಮರಾಜನಗರದ ಆದರ್ಶ ವಿದ್ಯಾಲಯದ 6ನೇ ತರಗತಿ ಪ್ರವೇಶಕ್ಕೆ ಮಾರ್ಚ್ 11ರಂದು ಪರೀಕ್ಷೆ ನಡೆಯಲಿದೆ.
ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನು ಶಾಲೆಯಿಂದ ಪಡೆದುಕೊಳ್ಳಬಹುದು ಹಾಗೂ ವೆಬ್ ಸೈಟ್ ತಿತಿತಿ.sಛಿhooಟeಜuಛಿಚಿಣioಟಿ.ಞಚಿಡಿ.ಟಿiಛಿ.iಟಿ ಅಥವಾ ತಿತಿತಿ.viಜಥಿಚಿvಚಿhiಟಿi.ಞಚಿಡಿಟಿಚಿಣಚಿಞಚಿ.gov.iಟಿ ನಿಂದಲೂ ಡೌನ್ ಲೋಡ್ ಮಾಡಿಕೊಂಡು ಮುಖ್ಯ ಶಿಕ್ಷಕರಿಂದ ಸಹಿ ಮಾಡಿಸಿಕೊಳ್ಳಬಹುದಾಗಿದೆ ಎಂದು ಆದರ್ಶ ವಿದ್ಯಾಲಯದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
No comments:
Post a Comment