ಸಂಯೋಜಕರು ಮತ್ತು ಕಾರ್ಯಕ್ರಮ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ
ಚಾಮರಾಜನಗರ, ಮಾ. 05 - ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಜಿಲ್ಲಾ ಮಟ್ಟದಲ್ಲಿ ಸಂಯೋಜಕರು ಮತ್ತು ಕಾರ್ಯಕ್ರಮ ಸಹಾಯಕರ ಹುದ್ದೆಗೆ ಹೊರಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸಲು ಅರ್ಜಿ ಆಹ್ವಾನಿಸಿದೆ.ಸಂಯೋಜಕರ ಒಂದು ಹುದ್ದೆಗೆ ಸಮಾಜ ವಿಜ್ಞಾನ, ಜೀವ ವಿಜ್ಞಾನ, ಪೌಷ್ಠಿಕ, ವೈದ್ಯಕೀಯ, ಆರೋಗ್ಯ ನಿರ್ವಹಣೆ, ಸಮಾಜ ಕಾರ್ಯ, ಗ್ರಾಮೀಣ ನಿರ್ವಹಣೆ ಇವುಗಳಲ್ಲಿ ಯಾವುದಾದರೊಂದÀು ಸ್ನಾತಕೋತ್ತರ ಪದವಿ ಪಡೆದಿರಬೇಕು. ಸರ್ಕಾರಿ, ಸ್ವಯಂಸೇವಾ ಸಂಸ್ಥೆಗಳಲ್ಲಿ ಕನಿಷ್ಠ ಒಂದು ವರ್ಷ ಕೆಲಸದ ಅನುಭವ ಹೊಂದಿರಬೇಕು. ಎಂಎಸ್ ಆಫೀಸ್ ಬಳಕೆ, ಸ್ಥಳೀಯ ಹಾಗೂ ಆಂಗ್ಲ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.
ಕಾರ್ಯಕ್ರಮ ಸಹಾಯಕರ ಒಂದು ಹುದ್ದೆಗೆ ಸಮಾಜ ವಿಜ್ಞಾನ, ಸಮಾಜ ಕಾರ್ಯ, ಗ್ರಾಮೀಣ ನಿರ್ವಹಣೆ, ಸಂಖ್ಯಾ ಶಾಸ್ತ್ರ ಇವುಗಳಲ್ಲಿ ಯಾವುದಾದರೊಂದÀು ಪದವಿ ಪಡೆದಿರಬೇಕು. ಸರ್ಕಾರಿ, ಸ್ವಯಂಸೇವಾ ಸಂಸ್ಥೆಗಳಲ್ಲಿ ಕನಿಷ್ಠ ಒಂದು ವರ್ಷ ಕೆಲಸದ ಅನುಭವ ಹೊಂದಿರಬೇಕು. ಡಾಟಾ ಎಂಟ್ರಿ, ಎಂಎಸ್ ಆಫೀಸ್ ಬಳಕೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.
ಈ ಹಿಂದೆ ಉತ್ತಮವಾಗಿ ಕಾರ್ಯ ನಿರ್ವಹಿಸಿರುವ ಬಗ್ಗೆ ದಾಖಲೆ ಹೊಂದಿರಬೇಕು. ಉತ್ತಮ ಪತ್ರ ವ್ಯವಹಾರ ನಿರ್ವಹಿಸಬಲ್ಲ, ಕನ್ನಡ ಮತ್ತು ಆಂಗ್ಲ ಭಾಷೆ ಬಲ್ಲವರು, ಗಣಕ ಯಂತ್ರದಲ್ಲಿ ಪರಿಣತಿ ಹೊಂದಿರುವ ಅಭ್ಯರ್ಥಿಗಳಿಗೆ ಅವಕಾಶ.
ಅಭÀ್ಯರ್ಥಿಗಳು ಸ್ವವಿವರವನ್ನು ಎಲ್ಲಾ ದಾಖಲೆಗಳೊಂದಿಗೆ ಮಾರ್ಚ್ 15ರೊಳಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿಗೆ ಸಲ್ಲಿಸುವಂತೆ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.
ಕೊಳ್ಳೇಗಾಲ : ಮಾ. 6ರಂದು ಉಚಿತ ಆರೋಗ್ಯ ವೈದ್ಯಕೀಯ ತಪಾಸಣಾ ಶಿಬಿರ
ಚಾಮರಾಜನಗರ, ಮಾ. 06 - ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮಾರ್ಚ್ 6ರಂದು ಬೆಳಿಗ್ಗೆ 10 ಗಂಟೆಗೆ ಕೊಳ್ಳೇಗಾಲ ತಾಲೂಕು ಸಾರ್ವಜನಿಕ ಆಸ್ಪತ್ರೆÀ ಆವರಣದಲ್ಲಿ ಆರೋಗ್ಯ ಇಲಾಖೆಯಲ್ಲಿ ದೊರೆಯುವ ಸೇವಾ ಸೌಲಭ್ಯಗಳು ಹಾಗೂ ಉಚಿತ ಆರೋಗ್ಯ ವೈದ್ಯಕೀಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.ಸಾಮಾಜಿಕ ಭದ್ರತೆ ಹಾಗೂ ಆರೋಗ್ಯ ಕರ್ನಾಟಕ, ಎಸ್ಸಿ, ಎಸ್ಪಿ, ಟಿಎಸ್ಪಿ ಯೋಜನೆಯಡಿ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಒದಗಿಸುವ ನಿಟ್ಟಿನಲ್ಲಿ ಶಿಬಿರ ಏರ್ಪಡಿಸಿದ್ದು ನುರಿತ ತಜ್ಞ ವೈದ್ಯರ ತಂಡದಿಂದ ದ್ವಿತೀಯ ಹಾಗೂ ತೃತೀಯ ಹಂತದ ಖಾಯಿಲೆಗಳಾದ ಹೃದ್ರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡ ಕಾಯಿಲೆ, ಸುಟ್ಟಗಾಯ, ನವಜಾತ ಶಿಶು, ಹೆಂಗಸರು ಮತ್ತು ಮಕ್ಕಳ ರೋಗ ಹಾಗೂ ಸಾಮಾನ್ಯ ಕಾಯಿಲೆಗಳಿಗೆ ಸಂಬಂಧಿಸಿದಂತೆ ವೈದ್ಯಕೀಯ ತಪಾಸಣೆ ನಡೆಸಲಾಗುವುದು.
ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಎಚ್. ಪ್ರಸಾದ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
No comments:
Post a Comment