Thursday, 8 March 2018

ಮಹಿಳಾ ಸಬಲೀಕರಣ ಹೋರಾಟದ ಫಲ : ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ. ಬಸವರಾಜು ಅಭಿಮತ (08-03-2018)

ಮಹಿಳಾ ಸಬಲೀಕರಣ ಹೋರಾಟದ ಫಲ : ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ  ಜಿ. ಬಸವರಾಜು ಅಭಿಮತ

ಚಾಮರಾಜನಗರ, ಮಾ. 08 - ಹೋರಾಟದ ಫಲವಾಗಿ ಮಹಿಳೆಯರು ಇಂದು ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸಬಲರಾಗಿದ್ದಾರೆ ಎಂದು ಪ್ರಧಾ£ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಜಿ. ಬಸವರಾಜು ಅವರು ಅಭಿಪ್ರಾಯಪಟ್ಟರು.
     ನಗರದ ಜಿಲ್ಲಾ ನ್ಯಾಯಾಲಯಗಳ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ವಕೀಲರ ಸಂಘದ ಸಹಯೋಗದೊಂದಿಗೆ ಇಂದು ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
     ಸಂವಿಧಾನ ಎಲ್ಲರಿಗೂ ಸಮಾನವಾದ ಹಕ್ಕುಗಳು ಹಾಗೂ ಸ್ವಾತಂತ್ರ್ಯ ನೀಡಿದೆ. ಮಹಿಳೆಯರು ಹೋರಾಟದಿಂದ  ರಾಜಕೀಯ, ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ನೆಲೆ ಕಾಣುವಲ್ಲಿ ಸಫ¯ರಾಗಿದ್ದಾರೆ ಎಂದು ಅವರು ತಿಳಿಸಿದರು.
    ಕಾನೂನಿನ ಮೂಲಕ ಜೀವನಾಂಶದ ಹಕ್ಕು, ಕೌಟುಂಬಿಕ ಹಿಂಸೆ ನಿಷೇಧ, ಸಮಾನ ಕೆಲಸಕ್ಕೆ ಸಮಾನ ವೇತನದ ಹಕ್ಕುಗಳನ್ನು ಮಹಿಳೆಯರು ಪಡೆದು ಕೊಂಡಿದ್ದಾರೆ. ಸ್ವಂತ ಶಕ್ತಿ ಸಾಮಥ್ರ್ಯ, ಪರಿಶ್ರಮ, ಸಾಧನೆಯಿಂದ ಮಹಿಳೆಯರು ಎಲ್ಲ ರಂಗಗಳಲ್ಲಿಯೂ ಅವಕಾಶ ಪಡೆದಿದ್ದು ಉನ್ನತ ಹುದ್ದೆಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ನ್ಯಾಯಾಧೀಶರು ತಿಳಿಸಿದರು.
    ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್.ಪಿ. ನಂದೀಶ್ ಅವರು ಮಾತನಾಡಿ ಹೆಣ್ಣು ತಾಯಿ, ಮಗಳು, ಸಹೋದರಿ, ಪತ್ನಿ, ಸೇರಿದಂತೆ ಕುಟುಂಬದಲ್ಲಿ ನಾನಾ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಬಲ್ಲರು. ಗೃಹ ಕೃತ್ಯದಿಂದ ಹಿಡಿದು ಉನ್ನತ ಸ್ಥಾನದ ಕೆಲಸಗಳನ್ನು ನಿರ್ವಹಿಸುವ ಮೂಲಕ ತಮ್ಮದೇ ಆದ ವಿಶಿಷ್ಠ ಛಾಪು ಮೂಡಿಸಿದ್ದಾರೆ. ಮಹಿಳೆ ಪ್ರಕೃತಿಯ ಹೆಮ್ಮೆಯ ಸೃಷ್ಠಿ ಎನ್ನಿಸಿಕೊಂಡಿದ್ದಾಳೆ ಎಂದು ತಿಳಿಸಿದರು.
ಹೆಣ್ಣು ಮಕ್ಕಳ ಮೇಲಿನ ಹಿಂಸೆ, ಅತ್ಯಚಾರದಂತಹ ಘಟನೆಗಳು ಅಕ್ಷಮ್ಯ ಅಪರಾಧ. ಮಹಿಳೆ ಹಿರಿಯ ಸ್ಥಾನದಲ್ಲಿ ನಿಂತು ಮಗುವನ್ನು ಉತ್ತಮ ನಾಗರೀಕರನ್ನಾಗಿ ರೂಪಿಸುವ ಸಾಮಥ್ರ್ಯ ಹೊಂದಿದ್ದಾರೆ ಎಂದು ಆರ್.ಪಿ. ನಂದೀಶ್ ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ  ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಲ್.ಜೆ. ಭವಾನಿ ಅವರು ಮಹಿಳೆ ಪುರಷರಷ್ಟೇ ಸಮಾನಳು. ಶಕ್ತಿ ಸಾಮಥ್ರ್ಯ, ನಾಯಕತ್ವ, ವಿಚಾರ ಬದ್ಧತೆಯಿಂದ ಮಹಿಳೆಯರು ಮತ್ತಷ್ಟು ಉತ್ತಮ ಬದುಕನ್ನು ರೂಪಿಸಿಕೊಳ್ಳಲು ಮುಂದಾಗಲಿ ಎಂದು ಹಾರೈಸಿದರು.
   ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿ. ದೀಪಾ ಅವರು ಮಾತನಾಡಿ ಮಹಿಳೆ ಪ್ರತಿ ದಿನವೂ ಒಂದಲ್ಲ ಒಂದು ರೀತಿಯಲ್ಲಿ ತನ್ನ ಹಕ್ಕಿಗಾಗಿ ಹೋರಾಡುತ್ತಿದ್ದಾಳೆ ದೈವಿಸ್ವರೂಪದ ಮಹಿಳೆಯರನ್ನು ಗೌರವಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
   ಸಾರ್ವಜನಿಕ ಅಭಿಯೋಜಕರಾದ ಲೋಲಾಕ್ಷಿ ಅವರು ಮಾತನಾಡಿ ಮಹಿಳೆಗೆ ಸಮಾನ ವೇತನ, ಶಿಕ್ಷಣ ನೀಡುವ ಮೂಲಕ ಪುರುಷ ಪ್ರಧಾನ ಸಮಾಜದ ಪರಿಸ್ಥಿತಿ ಬದಲಾಯಿಸಿ ಸಮಾನತೆಯ ಹಾದಿಯಲ್ಲಿ ನಡೆಯಬೇಕಾಗಿದೆ ಎಂದು ಅವರು ಆಶಿಸಿದರು.
     ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಸಂದೇಶ್ ವಿ. ಭಂಡಾರಿ ಅವರು ಮಾತನಾಡಿ ಭಾರತದ ಸಂಸ್ಕøತಿ ಶ್ರೀಮಂತವಾಗಿದೆ. ಮಹಿಳೆಯರ ಸಾಧನೆ, ಪರಿಶ್ರಮ ಗುರುತಿಸುವಂತಾಗಬೇಕು. ಈ ಹಿನ್ನೆಲೆಯಲ್ಲಿ ಮಹಿಳಾ ದಿನಾಚರಣೆಯಲ್ಲಿ ಗೌರವಿಸುವಂತಾಗಬೇಕು ಎಂದರು.
     ವಕೀಲರಾದ ವಿದ್ಯಾಲತಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಉಮ್ಮತ್ತೂರು ಇಂದುಶೇಖರ್  ಮಾತನಾಡಿದರು.   
ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಡಿ.ಕೆ. ಮಧುಸೂದನ್, ಜಿಲ್ಲಾ ಸರ್ಕಾರಿ ವಕೀಲರಾದ ಎಚ್.ಎನ್. ಲೋಕೇಶ್, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಆರ್. ಅರುಣ್ ಕುಮಾರ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಆರ್‍ಟಿಇ ಪ್ರವೇಶ ಪ್ರಕ್ರಿಯೆ : ಮಾ. 21ರವರೆಗೆ ಆನ್ ಲೈನ್‍ನಲ್ಲಿ ಅರ್ಜಿ ಸಲ್ಲಿಕೆ

ಚಾಮರಾಜನಗರ, ಮಾ. 08 :- ಶಿಕ್ಷಣ ಹಕ್ಕು ಕಾಯಿದೆಯಡಿ 2018-19ನೇ ಸಾಲಿನಲ್ಲಿ ಆರ್‍ಟಿಐ ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದಂತೆ ದಾಖಲಾತಿಗೆ ಇಲಾಖಾ ವೆಬ್ ಸೈಟ್‍ನಲ್ಲಿ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಪ್ರವೇಶ ಬಯಸುವ ಅರ್ಹ ಮಕ್ಕಳು ವಾಸಸ್ಥಳದ ವ್ಯಾಪ್ತಿಯಲ್ಲಿ ಬರುವ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಿಗೆ ಪ್ರವೇಶ ಪಡೆಯಲು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.
ಪೋಷಕರು ಮಗು ಹಾಗೂ ಮಗುವಿನ ತಂದೆ, ತಾಯಿ ಆಧಾರ್ ಸಂಖ್ಯೆ, ಜಾತಿ, ಆದಾಯ ದೃಢೀಕರಣ ಪತ್ರಗಳೊಂದಿಗೆ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಮಾರ್ಚ್ 21ರೊಳಗೆ  ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಆರ್‍ಟಿಐ ಅಡಿ ಎಲ್‍ಕೆಜಿಗೆ 3 ವರ್ಷ 10 ತಿಂಗಳಿನಿಂದ 4 ವರ್ಷ 10 ತಿಂಗಳೊಳಗಿನ ಮಕ್ಕಳು, 1ನೇ ತರಗತಿಗೆ 5 ವರ್ಷ 10 ತಿಂಗಳಿನಿಂದ 6 ವರ್ಷ 10 ತಿಂಗಳೊಳಗಿನ ಮಕ್ಕಳು ಅರ್ಹರು. ನೆರೆಹೊರೆಯ, ಕೊಳಚೆ ಪ್ರದೇಶಗಳು,  ಬುಡಕಟ್ಟು ಜನಾಂಗ ಹಾಗೂ ಅನುಸೂಚಿತ ಪಂಗಡಗಳ ಜನರು ಹೆಚ್ಚಾಗಿ ವಾಸಿಸುತ್ತಿರುವ ಪ್ರದೇಶಗಳಲ್ಲಿನ ಜನರು ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದೆ.
ಹೆಚ್ಚಿನ ಮÁಹಿತಿಗೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿಯನ್ನು ಸಂಪರ್ಕಿಸುವಂತೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾ. 13ರಂದು ತಾ.ಪಂ. ಕೆಡಿಪಿ ಸಭೆ

ಚಾಮರಾಜನಗರ, ಮಾ. 08 :- ಚಾಮರಾಜನಗರ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಹೆಚ್.ವಿ. ಚಂದ್ರು ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ 13ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕೆಡಿಪಿ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾ. 11ರ ಪಲ್ಸ್ ಪೋಲಿಯೋ : ಚಾ.ನಗರ ಪಟ್ಟಣದಲ್ಲಿ ತೆರೆಯಲಾಗಿರುವ ಬೂತುಗಳ ವಿವರ

ಚಾಮರಾಜನಗರ, ಮಾ. 08 :- ಚಾಮರಾಜನಗರ ಪಟ್ಟಣದಲ್ಲಿ ಮಾರ್ಚ್ 8ರಂದು ನಡೆಯಲಿರುವ ಎರಡನೇ ಸುತ್ತಿನ ಪಲ್ಸ್ ಪೋಲಿಯೋ ಕಾರ್ಯಕ್ರಮ ಪ್ರಯುಕ್ತ ಪೋಲಿಯೋ ಹನಿ ನೀಡುವ ಸಲುವಾಗಿ ನಗರ ಪ್ರದೇಶದಲ್ಲಿ ತೆರೆದಿರುವ ಬೂತುಗಳ ವಿವರ ಇಂತಿದೆ.
ಚನ್ನಿಪುರಮೋಳೆ, ಚನ್ನಿಪುರ ಮೋಳೆ ಸೈಟು, ರೋಟರಿ ಶಾಲೆ, ಪಿಡಬ್ಲ್ಯೂಡಿ ಕಾಲೋನಿ, ಎ.ಜೆ. ಕಾಲೋನಿ, ಕರಿನಂಜನಪುರ, ಅಂಬೇಡ್ಕರ್ ಬೀದಿ, ಕೆ.ಪಿ. ಮೊಹಲ್ಲಾ 1 ಮತ್ತು 2, ದೇವಾಂಗ ಬೀದಿ, ಪ್ರಜ್ವಲ್ ಮಹಿಳಾ ಸಂಘ, ಗಾಡಿಖಾನೆ ಮೊಹಲ್ಲಾ, ಅಹಮದ್ ನಗರ 1 ಮತ್ತು 2, ಬೀಡಿ ಕಾಲೋನಿ, ಬೀಡಿ ಕಾಲೋನಿ (ಉರ್ದು ಶಾಲೆ), ಗಾಳೀಪುರ 1 ಮತ್ತು 2, ವರದರಾಜಪುರ, ರಹಮತ್ ನಗರ, ಸೋಮವಾರಪೇಟೆ, ಕೆಳಗಡೆ ನಾಯಕರ ಬೀದಿ, ಕೆ.ಎನ್. ಮೊಹಲ್ಲಾ, ಜಾಮಿಯಾ ಮಸೀದಿ, ಕುರುಬರ ಬೀದಿ, ಮೇಗಲನಾಯ್ಕರ ಬೀದಿ, ರೈಲ್ವೆ ಬಡಾವಣೆ, ಭುಜಂಗೇಶ್ವರ ಬಡಾವಣೆ, ಮಂಟೆಸ್ವಾಮಿ ದೇವಸ್ಥಾನ, ಉಪ್ಪಾರ ಬೀದಿ, ಗಣಪತಿ ದೇವಸ್ಥಾನ, ಶಂಕರಪುರ, ಮಹದೇಶ್ವರ ಕಾಲೋನಿ, ರಾಮಸಮುದ್ರ ಕುರುಬರ ಬೀದಿ, ರಾಮಸಮುದ್ರ ನಾಯಕರ ಬೀದಿ, ರಾಮಸಮುದ್ರ ದೊಡ್ಡ ಹರಿಜನರ ಬೀದಿ, ರಾಮಸಮುದ್ರ ಉರ್ದು ಶಾಲೆ, ರಾಮಸಮುದ್ರ ಚಿಕ್ಕ ಹರಿಜನ ಬೀದಿ, ರಾಮಸಮುದ್ರ ಎ ಜೆ ಬೀದಿ, ಜಿಲ್ಲಾ ಆಸ್ಪತ್ರೆ, ರೈಲ್ವೆ ನಿಲ್ದಾಣ, ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ಚಾಮರಾಜೇಶ್ವರ ದೇವಸ್ಥಾನ ಹಾಗೂ ಸಂತೆಮರಹಳ್ಳಿ ವೃತ್ತಗಳಲ್ಲಿ ಪೋಲಿಯೋ ಹನಿ ನೀಡಲಾಗುತ್ತದೆ ಎಂದು ತಾಲೂಕು ಆರೋಗ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರÉ.


No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು