ಮತದಾರರ ಜಾಗೃತಿ ಚಟುವಟಿಕೆಗಳನ್ನು ವ್ಯಾಪಕವಾಗಿ ಹಮ್ಮಿಕೊಳ್ಳಿ: ಜಿ.ಪಂ. ಸಿಇಓ ಡಾ.ಕೆ. ಹರೀಶ್ ಕುಮಾರ್
ಚಾಮರಾಜನಗರ, ಮಾ. 20 - ಮತದಾರರ ಜಾಗೃತಿಗಾಗಿ ಜಿಲ್ಲೆಯಲ್ಲಿ ವಿಭಿನ್ನ ಹಾಗೂ ವ್ಯಾಪಕವಾಗಿ ಕಾರ್ಯಚಟುವಟಿಕೆಗಳನ್ನು ತೀವ್ರಗೊಳಿಸುವಂತೆ ಜಿಲ್ಲಾ ಮತದಾರರ ಜಾಗೃತಿ ಅಭಿಯಾನ (ಸ್ವೀಪ್) ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಅಧಿಕಾರಿಗಳಾದ ಡಾ. ಕೆ. ಹರೀಶ್ ಕುಮಾರ್ ಅವರು ಇಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಸ್ವೀಪ್ ಕಾರ್ಯಚಟುವಟಿಕೆಗಳ ಸಂಬಂಧ ಕರೆಯಲಾಗಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ ಎಲ್ಲಾ ತಾಲ್ಲೂಕು, ಗ್ರಾಮಪಂಚಾಯತ್, ನಗರ, ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ ಮತದಾರರ ಜಾಗೃತಿ ಅಭಿಯಾನ ಚಟುವಟಿಕೆಗಳನ್ನು ವ್ಯಾಪಕವಾಗಿ ನಡೆಸಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಮತದಾನ ಕೇಂದ್ರಗಳು, ಮತದಾನ ಪಕ್ರಿಯೆಗೆ ಸಂಬಂಧಿಸಿದಂತೆ ಮತದಾರರಿಗೆ ಅವಶ್ಯವಿರುವ ಮಾಹಿತಿಯನ್ನು ಸಹ ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ತಲುಪಿಸಬೇಕು ಎಂದರು.
ಪ್ರಜಾಪ್ರಭುತ್ವದ ಯಶಸ್ವಿಗೆ ಪ್ರತಿಯೊಬ್ಬರ ಪಾಲ್ಗೊಳ್ಳುವಿಕೆ ಅವಶ್ಯವಾಗಿರುತ್ತದೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಸಹ ಮಹತ್ವದ ಕೆಲಸವಾಗಿದೆ. ಈ ನಿಟ್ಟಿನಲ್ಲಿ ಸ್ವೀಪ್ ಸಮಿತಿಯ ಹೊಣೆಗಾರಿಕೆ ಅತ್ಯಂತ ಮುಖ್ಯವಾಗಿದೆ. ಜನರಿಗೆ ಮತದಾನದ ಪ್ರಾಮುಖ್ಯತೆ ತಿಳಿಸುವ ಕಾರ್ಯವು ಸಹ ಮತದಾರರ ಜಾಗೃತಿ ಅಭಿಯಾನದ ಮುಖ್ಯ ಚಟುವಟಿಕೆಗಳಲ್ಲಿ ಒಂದಾಗಿದೆ ಎಂದು ಹರೀಶ್ ಕುಮಾರ್ ಅವರು ತಿಳಿಸಿದರು.
ಪ್ರತಿ ತಾಲ್ಲೂಕು, ಗ್ರಾಮಪಂಚಾಯಿತಿ ಮಟ್ಟದಲ್ಲಿ ಇರುವ ಸ್ವೀಪ್ ಸಮಿತಿ ಆಯಾ ಭಾಗದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಚುರುಕುಗೊಳಿಸಬೇಕು. ಸ್ಥಳೀಯವಾಗಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು. ಹಾಡಿ, ಅರಣ್ಯ ಅಂಚಿನ ಪ್ರದೇಶಗಳಲ್ಲೂ ವ್ಯಾಪಕವಾಗಿ ಜನರಿಗೆ ಮತದಾನ ಕುರಿತ ಮಹತ್ವವನ್ನು ತಿಳಿಸಿಕೊಡುವ ಚಟುವಟಿಕೆಗಳನ್ನು ನಡೆಸಬೇಕು ಎಂದು ಹರೀಶ್ ಕುಮಾರ್ ಅವರು ತಿಳಿಸಿದರು.
ಕಾರ್ಯಕ್ರಮ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಿಕೆ ಸಂಬಂಧ ಅಧಿಕಾರಿಗಳೊಂದಿಗೆ ವಿವರವಾಗಿ ಚರ್ಚಿಸಲಾಯಿತು.
ಜಿಲ್ಲಾಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಸತೀಶ್, ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್, ಕೈಗಾರಿಕೆ ಇಲಾಖೆಯ ಉಪನಿರ್ದೇಶಕರಾದ ಮರುಳೇಶ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಕೆ.ಎಚ್. ಪ್ರಸಾದ್, ಇತರೆ ಜಿಲ್ಲಾ ತಾಲ್ಲೂಕು, ನಗರ ಪಟ್ಟಣ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ವಿಧಾನಸಭಾ ಚುನಾವಣೆ : ಅಬಕಾರಿ ಅಕ್ರಮಗಳ ತಡೆಗೆ ವಿಚಕ್ಷಣಾ ದಳ
ಚಾಮರಾಜನಗರ, ಮಾ. 20 - ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯು ಜಿಲ್ಲಾ ಹಾಗೂ ಉಪವಿಭಾಗಗಳಲ್ಲಿ ವಿಚಕ್ಷಣಾ ದಳ (ಫ್ಲೈಯಿಂಗ್ ಸ್ಕ್ವಾಡ್) ರಚಿಸಲಾಗಿದೆ. ಜಿಲ್ಲೆಯ ವ್ಯಾಪ್ತಿಯಲ್ಲಿ ಅಬಕಾರಿ ಅಕ್ರಮಗಳ ಕುರಿತು ರಚಿಸಲಾಗಿರುವ ತಂಡಗಳಿಗೆ ಮಾಹಿತಿ ನೀಡಬಹುದಾಗಿದೆ ಎಂದು ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಚಿಸಲಾಗಿರುವ ತಂಡಗಳ ವಿವರ-ಅಬಕಾರಿ ಉಪ ಆಯುಕ್ತರ ನೇರ ನಿಯಂತ್ರಣದಲ್ಲಿ ರಚಿತವಾದ ವಿಚಕ್ಷಣಾ ದಳ (ಮೊ. 9449597179) – ಎಂ.ಬಿ. ಉಮಾಶಂಕರ್, ಅಬಕಾರಿ ನಿರೀಕ್ಷಕರು (ಮೊ. 8073510698), ವಾಣಿ ಎಂ, ಅಬಕಾರಿ ಉಪನಿರೀಕ್ಷಕರು (ಮೊ. 9741725921), ಸಿದ್ದರಾಜು ಬಿ, ಅಬಕಾರಿ ರಕ್ಷಕರು (ಮೊ. 8747062987), ಸಂತೋಷ್ ಕುಮಾರ್, ವಾಹನ ಚಾಲಕರು (ಮೊ. 9844599789)
ಉಪವಿಭಾಗಮಟ್ಟದಲ್ಲಿ ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ ರಚಿತವಾಗಿರುವ ವಿಚಕ್ಷಣಾ ದಳ- (ಮೊ. 9449597186) – ಎಂ.ಡಿ. ಮೋಹನ್ ಕುಮಾರ್, ಅಬಕಾರಿ ನಿರೀಕ್ಷಕರು (ಮೊ. 94495597187), ರವಿಕುಮಾರ್, ಅಬಕಾರಿ ರಕ್ಷಕರು (ಮೊ. 9538751100), ಕೃಷ್ಣಮೂರ್ತಿ, ಅಬಕಾರಿ ರಕ್ಷಕರು (ಮೊ. 9916629875), ವೀರತ್ತಪ್ಪ, ವಾಹನ ಚಾಲಕರು (ಮೊ. 9449193555)
ವಿಧಾನಸಭಾ ಚುನಾವಣೆ : ಅಬಕಾರಿ ಅಕ್ರಮಗಳ ಕುರಿತು ಮಾಹಿತಿ ನೀಡಲು ಕಂಟ್ರೋಲ್ ರೂಂ
ಚಾಮರಾಜನಗರ, ಮಾ. 20 - ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ಮದ್ಯ ಮಾರಾಟ, ತಯಾರಿಕೆ, ದಾಸ್ತಾನು, ಸಾಗಾಣಿಕೆ ಇನ್ನಿತರ ಮಾಹಿತಿಯನ್ನು ಅಬಕಾರಿ ಇಲಾಖೆಗೆ ನೀಡಲು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ದಿನದ 24 ಗಂಟೆಗಳ ಕಾಲವೂ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂಗಳನ್ನು ತೆರೆಯಲಾಗಿದೆ. ಕಂಟ್ರೋಲ್ ರೂಂ ತೆರೆಯಲಾಗಿರುವ ಸ್ಥಳ, ದೂರವಾಣಿ ಸಂಖ್ಯೆ, ಮೇಲುಸ್ತುವಾರಿ ಅಧಿಕಾರಿಗಳ ವಿವರ ಮೊಬೈಲ್ ಸಂಖ್ಯೆ ವಿವರಗಳು ಈ ಕೆಳಕಂಡಂತಿವೆ. ನಾಗರಿಕರು ಕಂಟ್ರೋಲ್ ರೂಂ ದೂರವಾಣಿ ಸಂಖ್ಯೆ ಅಥವಾ ಅಧಿಕಾರಿಗಳ ಮೊಬೈಲ್ ಸಂಖ್ಯೆಗೆ ಮಾಹಿತಿ ನೀಡಬಹುದಾಗಿದೆ.ಅಬಕಾರಿ ಉಪಆಯುಕ್ತರ ಕಚೇರಿ ಚಾಮರಾಜನಗರ ಜಿಲ್ಲೆ ಚಾಮರಾಜನಗರ ಕಟ್ರೋಲ್ ರೂಂ ದೂರವಾಣಿ ಸಂಖ್ಯೆ 08226-224776, ಎ.ಎಲ್. ನಾಗೇಶ್ ಅಬಕಾರಿ ಉಪಆಯುಕ್ತರು ಮೊ.9449597179, ಎಂ.ಬಿ. ಉಮಾಶಂಕರ್ ಅಬಕಾರಿ ಉಪಅಧೀಕ್ಷರು ಮೊ. 8073510698, ಅಬಕಾರಿ ಉಪಅಧೀಕ್ಷರ ಕಚೇರಿ ಚಾಮರಾಜನಗರ ಉಪವಿಭಾಗ ದೂರವಾಣಿ ಸಂಖ್ಯೆ 08226-224892, ಗಂಗಾಧರ್ ಮುದೇಣ್ಣನವರ್, ಅಬಕಾರಿ ಉಪಅಧೀಕ್ಷಕರು ಮೊ.9449597186, ಎಂ.ಡಿ. ಮೋಹನ್ ಕುಮಾರ್, ಅಬಕಾರಿ ನಿರೀಕ್ಷಕರು ಮೊ.9449597187 ಅಬಕಾರಿ ನಿರೀಕ್ಷರ ಕಚೇರಿ ಚಾಮರಾಜನಗರ ವಲಯ (ಚಾಮರಾಜನಗರ ಮತ್ತು ಯಳಂದೂರು ತಾಲ್ಲೂಕು ಸೇರಿ) ದೂರವಾಣಿ ಸಂಖ್ಯೆ 08226-223821, ಚಲುವರಾಜು, ಅಬಕಾರಿ ನಿರೀಕ್ಷಕರು ಮೊ.9482408373, ಅಬಕಾರಿ ನಿರೀಕ್ಷಕರ ಕಚೇರಿ ಕೊಳ್ಳೇಗಾಲ ವಲಯ ಕೊಳ್ಳೇಗಾಲ ದೂರವಾಣಿ ಸಂಖ್ಯೆ 08224-252433, ಮೀನಾ, ಅಬಕಾರಿ ನಿರೀಕ್ಷಕರು, ಮೊ.9980546885 ಅಬಕಾರಿ ನಿರೀಕ್ಷಕರ ಕಚೇರಿ ಗುಂಡ್ಲುಪೇಟೆ ವಲಯ, ಗುಂಡ್ಲುಪೇಟೆ ದೂರವಾಣಿ ಸಂಖ್ಯೆ 08223-223289, ಸುನಂದ, ಅಬಕಾರಿ ನಿರೀಕ್ಷರು ಮೊ.8123352572
ನವೋದಯ ವಿದ್ಯಾಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
ಚಾಮರಾಜನಗರ, ಮಾ. 20 ಹೊಂಡರಬಾಳುವಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ 9ನೇ ತರಗತಿಗೆ ಖಾಲಿ ಇರುವ ಸೀಟುಗಳನ್ನು ಭರ್ತಿ ಮಾಡಲು ಅರ್ಹ ವಿದ್ಯಾರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಪ್ರಸಕ್ತ 8ನೇ ತರಗತಿಯಲ್ಲಿದ್ದು ಹಾಗೂ ದಿನಾಂಕ 1.5.2002 ಮತ್ತು 30.4.2006ರ ನಡುವೆ ಜನಿಸಿದ ವಿದ್ಯಾರ್ಥಿಗಳು ಅಗತ್ಯ ದಾಖಲಾತಿಯೊಂದಿಗೆ ಇಲಾಖಾ ವೆಬ್‍ಸೈಟ್ ತಿತಿತಿ.ಟಿvshq.oಡಿg ಮೂಲಕ ಏಪ್ರಿಲ್ 5ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ತೊಂದರೆಯಾದಲ್ಲಿ ನವೋದಯ ಶಾಲೆಯಲ್ಲಿ ಸಲ್ಲಿಸಬಹುದು.
ಹೆಚ್ಚಿನ ವಿವಗಳಿಗೆ ಶಾಲಾ ವೆಬ್ ಸೈಟ್ ತಿತಿತಿ.ರಿಟಿvಛಿhಚಿmಚಿಡಿಚಿರಿಚಿಟಿಚಿgಚಿಡಿ.ಛಿom ಸಂಪರ್ಕಿಸಬೇಕು. ಅಲ್ಲದೆ ಮೊಬೈಲ್ ಸಂಖ್ಯೆ 9448552463, 9449090970 ಸಂಪರ್ಕಿಸಿ ಪಡೆಯಬಹುದು ಎಂದು ನವೋದಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.
ಮಾ. 26ರಂದು ಜಿ.ಪಂ. ಸಾಮಾನ್ಯ ಸಭೆ
ಚಾಮರಾಜನಗರ, ಮಾ. 20 – ಜಿಲ್ಲಾ ಪಂಚಾಯತ್ ಪ್ರಭಾರ ಅಧ್ಯಕ್ಷರಾದ ಜೆ. ಯೋಗೇಶ್ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ 26ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯನ್ನು ಕರೆಯಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಮಾ. 22ರಂದು ವಿದ್ಯುತ್ ವ್ಯತ್ಯಯ
ಚಾಮರಾಜನಗರ, ಮಾ. 20 - ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮವು ಮಾರ್ಚ್ 22ರಂದು ಅಟ್ಟುಗುಳಿಪುರ ಕೇಂದ್ರದÀಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯವನ್ನು ನಡೆಸಲಿದೆ.ಈ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಿದ್ದಯ್ಯನಪುರ, ಹೊಂಗಲವಾಡಿ, ಕೋಳಿಪಾಳ್ಯ, ದೊಡ್ಡಮೋಳೆ ಎನ್‍ಜೆವೈ, ಬಂದೀಗೌಡನಹಳ್ಳಿ ಹಾಗೂ ಅಟ್ಟುಗುಳಿಪುರ ವ್ಯಾಪ್ತಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಸಾರ್ವಜನಿಕರು ನಿಗಮದೊಂದಿಗೆ ಸಹಕರಿಸುವಂತೆ ಸೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾ. 22ರಂದು ಡಾ. ಬಿ.ಆರ್. ಅಂಬೇಡ್ಕರ್, ಡಾ. ಬಾಬು ಜಗಜೀವನ್ ರಾಮ್ ಜಯಂತಿ ಆಚರಣೆ ಕುರಿತು ಪೂರ್ವಭಾವಿ ಸಭೆ
ಚಾಮರಾಜನಗರ, ಮಾ. 20:- ಜಿಲ್ಲಾಡಳಿತದ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನ್ ರಾಮ್ ಅವರ ಜನ್ಮದಿನ ಆಚರಣೆ ಸಮಾರಂಭ ಹಮ್ಮಿಕೊಳ್ಳುವ ಕುರಿತು ಚರ್ಚಿಸುವ ಸಲುವಾಗಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಮಾರ್ಚ್ 22ರಂದು ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.
ಈ ಸಭೆಗೆ ಎಲ್ಲಾ ಸಂಘ ಸಂಸ್ಥೆಗಳ, ಸಮುದಾಯ ಮುಖಂಡರು, ಪದಾಧಿಕಾರಿಗಳು, ಪ್ರತಿನಿಧಿಗಳು, ನಾಗರಿಕರು ಹಾಜರಾಗಿ ಸಲಹೆ ನೀಡುವಂತೆ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಕೆ.ಎಚ್. ಸತೀಶ್ ಪ್ರಕಟಣೆಯಲ್ಲಿ ಕೋರಿದ್ದಾರೆ.
No comments:
Post a Comment