ಇಂದಿರಾ ಕ್ಯಾಂಟೀನ್ ಗೆ ಪ್ರವೇಶಿಸಿದ ಕಾವೇರಿ! * ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಬಹು ನಿರೀಕ್ಷಿತ ಇಂದಿರಾ ಕ್ಯಾಂಟೀನ್ ಚಾಮರಾಜನಗರ ಪಟ್ಟಣದಲ್ಲಿ ಪ್ರಾರಂಭವಾಗಿದ್ದು ಇದರ ಗುಣಮಟ್ಟ ಹಾಗೂ ಪರಿಶೀಲನೆ ಯನ್ನ ಜಿಲ್ಲಾದಿಕಾರಿ ಬಿ.ಬಿ. ಕಾವೇರಿ ಮಾಡಿದರು.
*ಚಾಮರಾಜನಗರ ಜಿಲ್ಲಾಡಳಿತ ಮುಖ್ಯ ದ್ವಾರದ ಎಡಬಾಗದಲ್ಲಿರುವ ಪಶು ವೈದ್ಯಕೀಯ ಇಲಾಖೆ ಮುಂಬಾಗದಲ್ಲಿದ್ದ ಕ್ಯಾಂಟೀನ್ ಗೆ ಜಿಲ್ಲಾ ಉಸ್ತುವಾರಿ ಸಚಿವೆ ಗೀತಾ ಮಹದೇವಪ್ರಸಾದ್ ಚಾಲನೆ ನೀಡಿದ್ದರು.
*ಕೆಲವರು ಸರಿಯಾಗಿ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂದ ಹಿನ್ನಲೆಯಲ್ಲಿ. ದಿಡೀರನೆ ಇಂದು ಮದ್ಯಾಹ್ನ ಇಂದೀರಾ ಕ್ಯಾಂಟೀನ್ ಗೆ ಆಗಮಿಸಿ ಅಳತೆ ತೂಕ ಪ್ರಮಾಣ ಪರಿಶೀಲನೆ ನಡೆಸಿದರು. "ಯಾವುದೆ ಲೋಪವಾಗದಂತೆ ನಡೆಸಿಕೊಂಡು ಹೋಗಲು ಕಾವೇರಿಯವರು ಸೂಚಿಸಿದರು.
ಇಂದಿರಾ ಕ್ಯಾಂಟೀನ್, ಜಿಲ್ಲಾ ಆಸ್ಪತ್ರೆಗೆ ಶಾಸಕರ ಭೇಟಿ : ವ್ಯವಸ್ಥೆ ಪರಿಶೀಲನೆ
ಚಾಮರಾಜನಗರ, ಮಾ. 14 - ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು ನಗರದಲ್ಲಿ ಇತ್ತೀಚೆಗಷ್ಟೇ ಆರಂಭವಾಗಿರುವ ಇಂದಿರಾ ಕ್ಯಾಂಟೀನ್‍ಗೆ ಇಂದು ಭೇಟಿ ನೀಡಿ ಅಲ್ಲಿಯ ವ್ಯವಸ್ಥೆಗಳನ್ನು ಪರಿಶೀಲಿಸಿದರು.ಇಂದಿರಾ ಕ್ಯಾಂಟೀನ್‍ನಲ್ಲಿ ನಿರೀಕ್ಷಿತ ಸಂಖ್ಯೆಯ ಜನರಿಗೆ ಉಪಾಹಾರ ಊಟ ಒದಗಿಸಬೇಕೆಂಬ ಹಿನ್ನೆಲೆಯಲ್ಲಿ ಇಂದು ಶಾಸಕರು ಇಂದಿರಾ ಕ್ಯಾಂಟೀನ್‍ಗೆ ಮಧ್ಯಾಹ್ನದ ಊಟದ ಸಮಯದಲ್ಲಿ ಭೇಟಿ ಕೊಟ್ಟು ಖುದ್ದು ಪರಿಸ್ಥಿತಿಯನ್ನು ಪರಿಶೀಲಿಸಿದರು.
ಊಟ ಉಪಹಾರಕ್ಕೆ ಎಷ್ಟು ಜನರಿಗೆ ಟೋಕನ್ ನೀಡಲಾಗುತ್ತಿದೆ. ಅಹಾರದ ಗುಣಮಟ್ಟ, ಪ್ರಮಾಣ ಹೇಗಿದೆ ಎಂಬ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸರತಿ ಸಾಲಿನಲ್ಲಿ ನಿಂತು ಜನರು ಟೋಕನ್ ಪಡೆದು ಊಟ ಪಡೆಯುತ್ತಿರುವ ಬಗ್ಗೆಯೂ ಶಾಸಕರು ವೀಕ್ಷಿಸಿದರು.
ಉಪಾಹಾರ ಊಟಕ್ಕೆ ನಿಗದಿಮಾಡಿರುವ ಸಮಯದ ಆರಂಭದಲ್ಲೇ ಸೂಚಿಸಲಾಗಿರುವ ಸಂಖ್ಯೆ ಹಾಗೂ ಪ್ರಮಾಣದಲ್ಲಿ ಆಹಾರ ತಯಾರಿಕೆಗೆ ಅನುಗುಣವಾಗಿ ಟೋಕನ್‍ಗಳನ್ನು ನೀಡಲಾಗುತ್ತಿದೆ. ನಿರೀಕ್ಷೆಗೂ ಮೀರಿ ಜನರು ಬರುತ್ತಿರುವ ಹಿನ್ನೆಲೆಯಲ್ಲಿ ತ್ವರಿತಗತಿಯಲ್ಲಿ ಊಟ ಉಪಾಹಾರ ನೀಡಲಾಗುತ್ತಿದೆ. ಸೂಚಿಸಲಾಗಿರುವ ಸಂಖ್ಯೆಗೆ ಅನುಗುಣವಾಗಿಯೇ ಊಟ ಉಪಾಹಾರ ಸಿದ್ಧಪಡಿಸಿ ನೀಡಲಾಗುತ್ತಿದೆ ಎಂದು ಆಹಾರ ನಿರ್ವಹಣೆ ಪಡೆದಿರುವ ಸಂಸ್ಥೆಯ ಅಧಿಕಾರಿಗಳು ವಿವರಿಸಿದರು.
ಇದೇವೇಳೆ ಮಾಹಿತಿ ಪಡೆದ ಶಾಸಕರು ಇಂದಿರಾ ಕ್ಯಾಂಟೀನ್‍ಗೆ ಹೆಚ್ಚು ಜನರು ಬರುತ್ತಿರುವ ಹಿನ್ನೆಲೆಯಲ್ಲಿ ಬೇಡಿಕೆಗೆ ತಕ್ಕಂತೆ ಅಗತ್ಯ ವ್ಯವಸ್ಥೆ ಕೈಗೊಳ್ಳುವ ಇಂಗಿತ ವ್ಯಕ್ತಪಡಿಸಿದರು.
ಬಳಿಕ ಜಿಲ್ಲಾ ಆಸ್ಪತ್ರೆಗೆ ಭೇಟಿನೀಡಿ ಒಳಚರಂಡಿ ಸಮಸ್ಯೆಯಿಂದಾಗಿ ಆಸ್ಪತ್ರೆಯಲ್ಲಿ ಉಂಟಾಗಿರುವ ಅನಾನುಕೂಲವನ್ನು ಸರಿಪಡಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚಿಸಿದರು. ಆಸ್ಪತ್ರೆಯಲ್ಲಿ ಶುಚಿತ್ವ ಕಾಪಾಡಬೇಕಿದೆ, ಹೀಗಾಗಿ ಒಳಚರಂಡಿಯಿಂದ ಆಸ್ಪತ್ರೆಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.
ಬಳಿಕ ವಾಲ್ಮೀಕಿ ಭವನದ ಬಳಿ ಶುದ್ಧ ಕುಡಿಯುವ ನೀರು ಘಟಕ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿ ದುರಸ್ತಿ ಮಾಡಬೇಕಿರುವ ಘಟಕವನ್ನು ಪರಿಶೀಲಿಸಿದರು. ಕುಡಿಯುವ ನೀರು ಒದಗಿಸುವುದು ಮೊದಲ ಆದ್ಯತೆಯಾಗಿದೆ. ಹೀಗಾಗಿ ಕೂಡಲೇ ಶುದ್ಧ ಕುಡಿಯುವ ನೀರಿನ ಘಟಕವನ್ನು ಸರಿಪಡಿಸಿ ಜನರಿಗೆ ಅನುಕೂಲ ಕಲ್ಪಿಸುವಂತೆ ಶಾಸಕರು ಸೂಚಿಸಿದರು.
ನಗರಸಭೆ ಅಧ್ಯಕ್ಷರಾದ ಶೋಭ, ಉಪಾಧ್ಯಕ್ಷರಾದ ಆರ್.ಎಂ. ರಾಜಪ್ಪ, ನಗರಾಭಿವೃದ್ಧಿ ಕೋಶದ ನಿರ್ದೇಶಕರಾದ ಸುರೇಶ್, ನಗರಸಭೆ ಸಹಾಯಕ ಕಾಯಾಪಾಲಕ ಎಂಜಿನಿಯರ್ ಸತ್ಯಮೂರ್ತಿ, ರವಿಕುಮಾರ್, ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.
ವಿಧಾನಸಭಾ ಸಾರ್ವತ್ರಿಕ ಚುನಾವಣೆ 2018
ಸದಾಚಾರ ಸಂಹಿತೆ ಪಾಲನೆಗೆ ಅಧಿಕಾರಿಗಳ ತಂಡ ರಚನೆ
ಚಾಮರಾಜನಗರ, ಮಾ. 14:- ವಿಧಾನಸಭಾ ಸಾರ್ವತ್ರಿಕ ಚುನಾವಣೆ 2018ಕ್ಕೆ ಸಂಬಂಧಿಸಿದಂತೆ ಮಾದರಿ ನೀತಿಸಂಹಿತÉ ಜಾರಿಯಲ್ಲಿರುವ ಸಂದರ್ಭದಲ್ಲಿ ಚುನಾವಣಾ ಅಪರಾಧಗಳನ್ನು ತಡೆಯಲು ಹಾಗೂ ಈ ಸಂಬಂಧ ದೂರುಗಳ ಬಗ್ಗೆ ಕ್ರಮವಹಿಸಿ ಮಾದರಿ ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲು ವಿಧಾನಸಭಾ ಕ್ಷೇತ್ರವಾರು ತಂಡ ರಚಿಸಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಆದೇಶ ಹೊರಡಿಸಿದ್ದಾರೆ.ಹನೂರು ವಿಧಾನಸಭಾ ಕ್ಷೇತ್ರ:- ಎಂ.ಎನ್. ಮರುಳೇಶ್ ಚುನಾವಣಾಧಿಕಾರಿ, ಹನೂರು ವಿಧಾನಸಭಾ ಕ್ಷೇತ್ರ ಹಾಗೂ ಜಂಟಿನಿರ್ದೇಶಕರು, ಜಿಲ್ಲಾ ಕೇಗಾರಿಕಾ ಕೇಂದ್ರ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಚಾ,ನಗರ (ಮೊ.9945119833, ದೂ.08226-224915), ಅಧ್ಯಕ್ಷರು, ಕಾಮಾಕ್ಷಮ್ಮ (ಮೊ. 9986083441, ದೂ. 08224-252042) ಸಹಾಯಕ ಚುನಾವಣಾಧಿಕಾರಿ, ಹನೂರು ವಿಧಾನಸಭಾ ಕ್ಷೇತ್ರ ಹಾಗೂ ತಹಸೀಲ್ದಾರ್, ಕೊಳ್ಳೇಗಾಲ ತಾಲೂಕು - ಉಪಾಧ್ಯಕ್ಷರು, ಅನಿಲ್ (ಮೊ. 9448994881), ಸಹಾಯಕ ಕಾರ್ಯಪಾಲಕ ಅಭಿಯಂತರರು, ಚೆಸ್ಕಾಂ, ಹನೂರು - ನೋಡಲ್ ಅಧಿಕಾರಿಯನ್ನಾಗಿ ಹಾಗೂ ಸದಸ್ಯರನ್ನಾಗಿ ಎಸ್. ಲಿಂಗರಾಜು (ಮೊ. 9449598636, ದೂ. 08224-253230), ಕಾರ್ಯಪಾಲಕ ಅಭಿಯಂತರರು, ಚೆಸ್ಕಾಂ, ಕೊಳ್ಳೇಗಾಲ, ಟಿ.ಆರ್. ಸ್ವಾಮಿ (ಮೊ. 9480695108, ದೂ. 08224-268076) ಕ್ಷೇತ್ರ ಶಿಕ್ಷಣಾಧಿಕಾರಿಗಳು, ಹನೂರು, ಗುರುಸ್ವಾಮಿ (ಮೊ. 9986635754, ದೂ. 08224-253141) ಅವರನ್ನು ನೇಮಕ ಮಾಡಲಾಗಿದೆ.
ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ:- ಬಿ. ಫೌಜಿಯಾ ತರನುಂ (ಮೊ. 9739148248, ದೂ.08224-253615), ಚುನಾವಣಾಧಿಕಾರಿ, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ಹಾಗೂ ಉಪವಿಭಾಗಾಧಿಕಾರಿ, ಕೊಳ್ಳೇಗಾಲ ಇವರು ಅಧ್ಯಕ್ಷರಾಗಿ, ಚಂದ್ರಮೌಳಿ, ಸಹಾಯಕ ಚುನಾವಣಾಧಿಕಾರಿ, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ಹಾಗೂ ತಹಸೀಲ್ದಾರ್, ಯಳಂದೂರು ತಾಲೂಕು (ಮೊ. 9448625194, ದೂ. 08226-240029) ಇವರು ಉಪಾಧ್ಯಕ್ಷರಾಗಿ, ಡಿ.ಕೆ. ಲಿಂಗರಾಜು (ಮೊ. 9480573121, ದೂ. 08224-252016), ಪೌರಾಯುಕ್ತರು, ನಗರಸಭೆ, ಕೊಳ್ಳೇಗಾಲ ನೋಡಲ್ ಅಧಿಕಾರಿಯಾಗಿ ನೇಮಕವಾಗಿದ್ದಾರೆ.
ಕುಮಾರ್ (ಮೊ.9448338331, ದೂ. 08224-272128/272129), ಸಹಾಯಕ ಕಾರ್ಯಪಾಲಕ ಅಭಿಯಂತರರು, ಲೋಕೋಪಯೋಗಿ ಇಲಾಖೆ, ಮಲೈಮಹದೇಶ್ವರ ಬೆಟ್ಟ, ಬಿ. ಮಹದೇವ (ಮೊ. 9480843093, ದೂ. 08226-240309), ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ಯಳಂದೂರು ಹಾಗೂ ತಿರುಮಲಾಚಾರಿ (ಮೊ. 9480695110, ದೂ. 08226-240173), ಕ್ಷೇತ್ರ ಶಿಕ್ಷಣಾಧಿಕಾರಿ, ಯಳಂದೂರು ಇವರುಗಳು ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರ:- ಆರ್. ರಾಚಪ್ಪ (ಮೊ. 9739875876, ದೂ. 08226-224660), ಚುನಾವಣಾಧಿಕಾರಿ, ಚಾಮರಾಜನಗರ ವಿಧಾನಸಭಾ ಕ್ಷೇತ್ರ ಹಾಗೂ ಉಪನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಚಾಮರಾಜನಗರ ಇವರು ಅಧ್ಯಕ್ಷರಾಗಿ, ಕೆ. ಪುರಂಧರ್ (ಮೊ. 9742444578, ದೂ. 08226-222046), ಸಹಾಯಕ ಚುನಾವಣಾಧಿಕಾರಿ, ಚಾಮರಾಜನಗರ ವಿಧಾನಸಭಾ ಕ್ಷೇತ್ರ ಹಾಗೂ ತಹಸೀಲ್ದಾರ್, ಚಾ.ನಗರ ತಾಲೂಕು ಇವರು ಉಪಾಧ್ಯಕ್ಷರಾಗಿ, ಶಶಿಧರ್ (ಮೊ.9449598685, ದೂ. 08226-222189), ಕಾರ್ಯಪಾಲಕ ಅಭಿಯಂತರರು, ಚೆಸ್ಕಾಂ, ಚಾ.ನಗರ ಇವರು ನೋಡಲ್ ಅಧಿಕಾರಿಯಾಗಿ ನೇಮಕವಾಗಿದ್ದಾರೆ. ಟಿ.ಎಸ್. ಸತ್ಯಮೂರ್ತಿ (ಮೊ. 9449856613, ದೂ. 08226-222691), ಸಹಾಯಕ ಕಾರ್ಯಪಾಲಕ ಅಭಿಯಂತರರು, ನಗರಸಭೆ, ಚಾ.ನಗರ, ಲಿಂಗಣ್ಣ (ಮೊ. 9880659870, ದೂ. 08226-222069), ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ, ಚಾ.ನಗರ ಹಾಗೂ ಎ.ಜಿ. ಶ್ರೀನಿವಾಸ್ (ಮೊ. 9448413218), ಸಹಾಯಕ ನಿರ್ದೇಶಕರು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಚಾನಗರ ಇವರು ಸದಸ್ಯರಾಗಿ ನೇಮಕವಾಗಿದ್ದಾರೆ.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ:- ಕೆ.ಎಚ್. ಸತೀಶ್ (ಮೊ. 9480843026, ದೂ. 08226-222855), ಚುನಾವಣಾಧಿಕಾರಿ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ಹಾಗೂ ಉಪನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಚಾ.ನಗರ ಇವರು ಅಧ್ಯಕ್ಷರಾಗಿ, ಕೆ. ಸಿದ್ದು (ಮೊ. 9448642666, ದೂ. 08229-222225), ಸಹಾಯಕ ಚುನಾವಣಾಧಿಕಾರಿ, ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರ ಹಾಗೂ ತಹಸೀಲ್ದಾರ್, ಗುಂಡ್ಲುಪೇಟೆ ತಾಲೂಕು ಇವರು ಉಪಾಧ್ಯಕ್ಷರಾಗಿ, ಶೋಭ (ಮೊ. 9740444030), ಸಹಾಯಕ ಕಾರ್ಯಪಾಲಕ ಅಭಿಯಂತರರು, ಕೆ.ಆರ್.ಐ.ಡಿ.ಎಲï., ಗುಂಡ್ಲುಪೇಟೆ ಇವರು ನೋಡಲ್ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಆರ್. ಕೃಷ್ಣಮೂರ್ತಿ (ಮೊ. 9480858105, 9448789456 ದೂ. 08229-222233), ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯಿತಿ, ಗುಂಡ್ಲುಪೇಟೆ, ಸೋಮಶೇಖರ್ (ಮೊ. 9480695107, ದೂ. 08229-222213), ಕ್ಷೇತ್ರ ಶಿಕ್ಷಣಾಧಿಕಾರಿ, ಗುಂಡ್ಲುಪೇಟೆ ಹಾಗೂ ಎ. ರಮೇಶ್ (ಮೊ. 9449822073. ದೂ. 08229-222226), ಮುಖ್ಯಾಧಿಕಾರಿ, ಪುರಸಭೆ, ಗುಂಡ್ಲುಪೇಟೆ ಇವರುಗಳು ಸದಸ್ಯರಾಗಿ ನೇಮಕವಾಗಿದ್ದಾರೆ.
ನೇಮಕಗೊಂಡಿರುವ ಅಧಿಕಾರಿಗಳು ಅವರಿಗೆ ಸೂಚಿಸಿರುವ ವ್ಯಾಪ್ತಿಯಲ್ಲಿ ಚುನಾವಣಾ ಅಪರಾಧಗಳಿಗೆ ಸಂಬಂಧಿಸಿದಂತೆ ದೂರುಗಳು ಕಂಡುಬಂದಲ್ಲಿ ತ್ವರಿತವಾಗಿ ಕ್ರಮ ಕೈಗೊಂಡು ನಿಯಮಗಳನ್ವಯ ಪ್ರಕರಣ ದಾಖಲಿಸಬೇಕು. ಚುನಾವಣಾ ಅಪರಾಧ ಹಾಗೂ ಅಕ್ರಮಗಳು ನಡೆಯದಂತೆ ಹಾಗೂ ಚುನಾವಣಾ ಆಯೋಗದ ನಿರ್ದೇಶನದಂತೆ ಮಾದರಿ ನೀತಿಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಲು ಎಲ್ಲಾ ರೀತಿಯ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಸೂಚಿಸಿದ್ದಾರೆ.
ಮಾ. 17ರಂದು ಜಿಲ್ಲಾ ಅಭಿವೃದ್ಧಿ ಸಮನ್ವಯ ಸಮಿತಿ ಸಭೆ
ಚಾಮರಾಜನಗರ, ಮಾ. 14:- ಜಿಲ್ಲಾ ಮಟ್ಟದ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ಪರಿಶೀಲನಾ ಸಭೆಯು ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ 17ರಂದು ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.
ಮಾ. 18, 19ರಂದು ವಾಯುದಳಕ್ಕೆ ನೇಮಕಾತಿ ರ್ಯಾಲಿ
ಚಾಮರಾಜನಗರ, ಮಾ. 14 - ಭಾರತೀಯ ವಾಯುದಳದಲ್ಲಿ ವೈ ಹುದ್ದೆಗಳ ನೇಮಕಾತಿಗಾಗಿ ಚಿತ್ರದುರ್ಗದ ವೀರವನಿತೆ ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣದಲ್ಲಿ ಮಾರ್ಚ್ 18 ಹಾಗೂ 19ರಂದು ನೇಮಕಾತಿ ರ್ಯಾಲಿ ಏರ್ಪಡಿಸಲಾಗಿದೆ.ಅಭ್ಯರ್ಥಿಗಳು ಪಿಯುಸಿ ಅಥವ ತತ್ಸಮಾನ ಪರೀಕ್ಷೆಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ವಿಷಯದಲ್ಲಿ ಕನಿಷ್ಠ 50ರಷ್ಟು ಅಂಕಗಳೊಂದಿಗೆ (ಒಟ್ಟಾರೆ) ಹಾಗೂ ಇಂಗ್ಲೀಷ್ ವಿಷಯದಲ್ಲಿ ಶೇ.50ರಷ್ಟು ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು. 13.1.1988 ರಿಂದ 2.1.2002ರ ನಡುವೆ ಜನಿಸಿದವರಾಗಿರಬೇಕು. ನೋಂದಣಿ ದಿನಾಂಕಕ್ಕೆ ಗರಿಷ್ಟ ವಯೋಮಿತಿ 21 ವರ್ಷಗಳು.
ರ್ಯಾಲಿಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಸೂಚಿಸಿರುವ ಅಗತ್ಯ ದಾಖಲಾತಿಗಳೊಂದಿಗೆ ಮಾರ್ಚ್ 18ರಂದು ಬೆಳಿಗ್ಗೆ 6 ರಿಂದ 10 ಗಂಟೆಯೊಳಗೆ ವರದಿ ಮಾಡಿಕೊಳ್ಳಬೇಕು. ಸಂಪೂರ್ಣ ವಿವರಗಳಿಗೆ ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಅಥವಾ 7, ಏರ್‍ಮನ್ ಸೆಲೆಕ್ಷನ್ ಸೆಂಟರ್, ನಂ.1, ಕಬ್ಬನ್ ರಸ್ತೆ, ಬೆಂಗಳೂರು-560001 ದೂರವಾಣಿ ಸಂ. 080-25592199 ವೆಬ್ ಸೈಟ್ ತಿತಿತಿ.ಚಿiಡಿmeಟಿseಟeಛಿಣioಟಿ.ಛಿಜಚಿಛಿ.iಟಿ ನೋಡುವಂತೆ ಪ್ರಕಟಣೆ ತಿಳಿಸಿದೆ.
ಮಾ. 15ರಂದು ಡಾ.ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದಲ್ಲಿ ಗಣಿತ ವಿಷಯ ಕುರಿತು ಕಾರ್ಯಾಗಾರ
ಚಾಮರಾಜನಗರ, ಮಾ. 14 :- ಡಾ. ಬಿ.ಆರ್. ಅಂಬೇಡ್ಕರ್ ಸ್ನಾತಕೋತ್ತರ ಕೇಂದ್ರದ ಗಣಿತಶಾಸ್ತ್ರ ವಿಭಾಗದ ವತಿಯಿಂದ ಮಾರ್ಚ್ 15ರಂದು ಬೆಳಿಗ್ಗೆ 10 ಗಂಟೆಗೆ ಕೇಂದ್ರದ ಸೆಮಿನಾರ್ ಹಾಲ್‍ನಲ್ಲಿ ಗಣಿತಶಾಸ್ತ್ರದ ಕುರಿತು ಒಂದು ದಿನದ ಕಾರ್ಯಾಗಾರ ಏರ್ಪಡಿಸಲಾಗಿದೆ.
ಸ್ನಾತಕೋತ್ತರ ಕೇಂದ್ರದ ಸಂದರ್ಶಕ ಪ್ರಾಧ್ಯಾಪಕರಾದ ಡಾ.ಎಚ್.ಎನ್. ರಾಮಸ್ವಾಮಿ ಕಾರ್ಯಾಗಾರ ಉದ್ಘಾಟಿಸುವರು. ಮೈಸೂರು ಮಾನಸ ಗಂಗೋತ್ರಿಯ ಗಣಿತ ಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಚಂದ್ರಶೇಖರ್ ಅಡಿಗ, ಡಾ. ಆರ್. ರಂಗರಾಜನ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳುವರು. ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಡಾ. ಶಿವಬಸವಯ್ಯ ಅಧ್ಯಕ್ಷತೆ ವಹಿಸುವರೆಂದು ಪ್ರಕಟಣೆ ತಿಳಿಸಿದೆ.
No comments:
Post a Comment