ಡಾ. ಬಿ.ಆರ್.ಅಂಬೇಡ್ಕರ್, ಬಾಬು ಜಗಜೀವನ್‍ರಾಮ್ ಭವನಗಳ ಕಾಮಗಾರಿ ಪ್ರಗತಿ :ಗೀತ ಮಹದೇವ ಪ್ರಸಾದ್
ಚಾಮರಾಜನಗರ, ಮಾ. 11 - ಜಿಲ್ಲೆಯಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಬಾಬು ಜಗಜೀವನರಾಂ ಭವನಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಸಕ್ಕರೆ, ಸಣ್ಣ ಕೈಗಾರಿಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಸಿ. ಮೋಹನಕುಮಾರಿ(ಗೀತ ಮಹದೇವ ಪ್ರಸಾದ್) ತಿಳಿಸಿದರು.ಯಳಂದೂರು ಪಟ್ಟಣದಲ್ಲಿ ಇಂದು ನೂತನವಾಗಿ ನಿರ್ಮಾಣಗೊಂಡಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನ ಉದ್ಘಾಟನೆ ಹಾಗೂ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಮುದಾಯ ಭವನಗಳಿಗೆ ರೂ.11.87 ಕೋಟಿ ಹಣ ಬಿಡುಗಡೆಯಾಗಿದೆ. ರಾಜ್ಯ ಸರ್ಕಾರ ಬುಡಕಟ್ಟು ಹಾಗೂ ಅನುಸೂಚಿತ ಜಾತಿಗಳ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಈ ಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದೆ ಎಂದರು.
ಲೋಕಸಭಾ ಸದ್ಯಸ್ಯರಾದ ಆರ್. ಧ್ರುವನಾರಾಯಣ ಮಾತನಾಡಿ, ರಾಜ್ಯ ಸರ್ಕಾರ ಚಾಮರಾಜನಗರ ಜಿಲ್ಲೆಯ ಸಮಗ್ರ ಅಭಿವೃಧ್ದಿಗೆ ವಿಶೇಷ ಒತ್ತು ನೀಡಿದೆ. ವಿವಿಧ ಕಾಮಗಾರಿಗಳ ಅಭಿವೃದ್ಧಿಗೆ ರೂ. 3000 ಕೋಟಿ ಹಣವನ್ನು ನೀಡಿದೆ. ಅನೇಕ ವರ್ಷಗಳಿಂದ ಪಟ್ಟಣದಲ್ಲಿ ನೆನೆಗುದಿಗೆ ಬಿದ್ದಿದ್ದ ಸಮುದಾಯ ಭನವವನ್ನು ರೂ. 1.50 ಕೋಟಿ ವೆಚ್ಚದಲ್ಲಿ ಸುಂದರವಾಗಿ ನಿರ್ಮಾಣ ಮಾಡಲಾಗಿದೆ. ಇಂತಹ ಭವನಗಳನ್ನು ಒಳ್ಳೆ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಬೇಕು ಎಂದರು.
ಅಂಬೇಡ್ಕರ್ ಹೆಸರಿನಲ್ಲಿರುವ ಭವನಗಳು ಶಕ್ತಿ ಕೇಂದ್ರಗಳಾಗಿ ಮಾರ್ಪಡಾಗಬೇಕು ಪಟ್ಟಣದ ದಿವಾನ್‍ಪೂರ್ಣಯ್ಯ ವಸ್ತುಸಂಗ್ರಹಾಲಯ, ಬಳೇಮಂಟಪದ ದೇಗುಲಗಳ ಅಭಿವೃದ್ಧಿಗೆ ಚುನಾಯಿತ ಜನಪ್ರತಿನಿಧಿಗಳು, ಇಲಾಖೆಯ ಅಧಿಕಾರಿಗಳು ಸಹಕರಿಸಬೇಕು ಈ ಪಟ್ಟಣವನ್ನು ಜಿಲ್ಲೆಯಲ್ಲೇ ಮಾದರಿಯಾಗಿಸಬೇಕೆಂದು ಧ್ರುವ ನಾರಾಯಣ ಸಲಹೆ ನೀಡಿದರು.
ಶಾಸಕ ಎಸ್. ಜಯಣ್ಣ ಮಾತನಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಗ್ರಾಮಗಳ ನಾಲ್ಕು ಜೋಡಿ ವಧು ವರರು ಸರಳ ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಇದೇ ವೇಳೆ ಜಿಲ್ಲೆಯಿಂದ ವರ್ಗಾವಣೆಗೊಂಡಿರುವ ಜಿಲ್ಲಾಧಿಕಾರಿ ಬಿ. ರಾಮು ರವರಿಗೆ ಜನಪ್ರತಿನಿಧಿಗಳ ಪರ ಸನ್ಮಾನಿಸಲಾಯಿತು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಜೆ. ಯೋಗೇಶ್, ಸದಸ್ಯರಾದ ಉಮಾವತಿಸಿದ್ದರಾಜು, ಬಿ.ಕೆ. ಬೊಮ್ಮಯ್ಯ, ನಾಗರಾಜು. ತಾಪಂ ಅಧ್ಯಕ್ಷ ನಂಜುಂಡಯ್ಯ, ಉಪಾಧ್ಯಕ್ಷೆ ಪದ್ಮಾವತಿಮಹಾದೇವನಾಯಕ, ಪಪಂ ಅಧ್ಯಕ್ಷ ನಿಂಗರಾಜು ಉಪಾಧ್ಯಕ್ಷ ಭೀಮಪ್ಪ ಸದಸ್ಯ ಜೆ. ಶ್ರೀನಿವಾಸ್ ಮಾಜಿ ಶಾಸಕ ಎಸ್. ಬಾಲರಾಜು, ಸೇವಾ ಸಮಿತಿ ಅಧ್ಯಕ್ಷ ಡಿ. ರೇವಣ್ಣ, ಕಿನಕಹಳ್ಳಿ ರಾಚಯ್ಯ, ಡಿ.ಎನ್. ನಟರಾಜು ಸಮಾಜ ಕಲ್ಯಾಣಧಿಕಾರಿ ಮಹಾದೇವ, ನಿರ್ಮಿತಿ ಕೇಂದ್ರದ ರಾಚಪ್ಪ, ನಂದೀಶ್, ರವಿ ತಾಪಂ ಹಾಗೂ ಪಪಂ ಸದಸ್ಯರು ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
No comments:
Post a Comment