ವಿಧಾನಸಭಾ ಚುನಾವಣೆ- 2018
ನೀತಿ ಸಂಹಿತೆ ಉಲ್ಲಂಘಿಸಿದರೆ ನಿರ್ದಾಕ್ಷ್ಯಿಣ್ಯ ಕ್ರಮ ಜರುಗಿಸಿ: ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ
ಚಾಮರಾಜನಗರ, ಮಾ. 31:- ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ನೀತಿ ಸಂಹಿತೆ ಈಗಾಗಲೇ ಜಾರಿಯಲ್ಲಿದ್ದು, ಚುನಾವಣೆ ಕೆಲಸಕ್ಕೆ ನಿಯೋಜಿತವಾಗಿರುವ ವಿವಿಧ ಅಧಿಕಾರಿಗಳನ್ನೊಳಗೊಂಡ ತಂಡಗಳು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಅವರು ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ವಿಡಿಯೋ ವೀವಿಂಗ್, ಫ್ಲೈಯಿಂಗ್ ಸ್ವ್ಯಾಡ್, ವೆಚ್ಚ ನಿರ್ವಹಣಾ ತಂಡ, ಸೆಕ್ಟರ್ ಅಧಿಕಾರಿ, ಪೊಲೀಸ್, ಅಬಕಾರಿ, ಚೆಕ್‍ಪೋಸ್ಟ್ ಸೇರಿದಂತೆ ವಿವಿಧ ಅಧಿಕಾರಿ ತಂಡಗಳಿಗೆ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಅವರು ಅವರು ಮಾತನಾಡಿದರು.ಪ್ರತಿ ಕರ್ತವ್ಯಕ್ಕೂ ನಿರ್ದಿಷ್ಟ ಮಾರ್ಗದರ್ಶನಗಳು ಇವೆ. ಮಾದರಿ ನೀತಿ ಸಂಹಿತೆ ಸಂಬಂಧ ಆಯೋಗ ವಿವರವಾಗಿ ಎಲ್ಲವನ್ನು ತಿಳಿಸಿದೆ. ಇದನ್ನು ಚೆನ್ನಾಗಿ ಮನನ ಮಾಡಿಕೊಳ್ಳಬೇಕು. ಜಿಲ್ಲೆಯ ಯಾವುದೇ ಭಾಗದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ್ದು ಗಮನಕ್ಕೆ ಬಂದರೆ ಕೂಡಲೇ ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಯಾವುದೇ ಭಾಗದಿಂದ ಮತ್ತೊಂದು ಸ್ಥಳಕ್ಕೆ ಸಾಗಣೆಯಾಗುವ ಹಣ, ವಸ್ತು, ಅಬಕಾರಿ ಸರಕುಗಳ ಬಗ್ಗೆ ವಿಶೇಷ ನಿಗಾ ಇಡಬೇಕು. ಅಕ್ರಮವಾಗಿ ದಾಸ್ತಾನು ಸಾಗÀಣೆ ಮಾಡುವುದು ಕಂಡುಬಂದಲ್ಲಿ ತಕ್ಷಣವೇ ದೂರು ದಾಖಲಿಸಿಕೊಂಡು ವಸ್ತುವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದರು.
ಪಾರದರ್ಶಕ, ಮುಕ್ತ, ನ್ಯಾಯಸಮ್ಮತ ಚುನಾವಣೆ ನಡೆಸಲು ಪ್ರತಿ ತಂಡವು ಹೊಣೆಗಾರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು. ನೀತಿ ಸಂಹಿತೆ ಜಾರಿಯಲ್ಲಿದ್ದು, ಚುನಾವಣಾ ಕೆಲಸವನ್ನು ಹಗುರವಾಗಿ ಪರಿಗಣಿಸಬಾರದು. ಆಯಾ ಕ್ಷೇತ್ರದಲ್ಲಿ ಅತ್ಯಂತ ಎಚ್ಚರಿಕೆ ಹಾಗೂ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು ಎಂದರು.
ಚುನಾವಣೆ ನಿಯೋಜಿತ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಯಾವುದೇ ಗೊಂದಲಗಳಿದ್ದರೂ ಸಂಬಂಧಪಟ್ಟ ಕ್ಷೇತ್ರ ಚುನಾವಣಾಧಿಕಾರಿ ಅಥವಾ ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದೂ ಪರಿಹರಿಸಿಕೊಳ್ಳಬೇಕು. ಲೋಪಗಳಿಗೆ ಅವಕಾಶ ಕೊಡಬಾರದು ಎಂದು ಜಿಲ್ಲಾಧಿಕಾರಿ ಕಾವೇರಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ಹರೀಶ್‍ಕುಮಾರ್ ಅವರು ಮಾತನಾಡಿ ಎಂತಹ ಸಣ್ಣ ಅಕ್ರಮಗಳು ಕಂಡುಬಂದರೂ ಸಹ ನಿರ್ಲಕ್ಷ್ಯ ವಹಿಸದೆ ಕೂಡಲೇ ತಡೆದು ಕ್ರಮ ಜರುಗಿಸಬೇಕು. ಚುನಾವಣಾ ಕೆಲಸವನ್ನು ಅತ್ಯಂತ ಜಾಗ್ರತೆಯಿಂದ ಮಾಡಬೇಕು. ವ್ಯಾಪಕವಾಗಿ ನಿಗದಿಪಡಿಸಿರುವ ಕರ್ತವ್ಯ ಕ್ಷೇತ್ರದಲ್ಲಿ ಸಂಚರಿಸಿ ನೀತಿ ಸಂಹಿತೆ ಪಾಲನೆಯಾಗುತ್ತಿದೆಯೆ ಎಂದು ಪರಿಶೀಲಿಸಬೇಕು. ಉಲ್ಲಂಘನೆ ಪ್ರಕರಣಗಳಿದ್ದಲ್ಲಿ ತುರ್ತಾಗಿ ಕ್ರಮ ಕೈಗೊಂಡು ಬಗ್ಗೆ ವರದಿ ಮಾಡಬೇಕು ಎಂದರು.
ಮಾದರಿ ನೀತಿ ಸಂಹಿತೆ ನೋಡೆಲ್ ಅಧಿಕಾರಿ ಹಾಗೂ ಜಂಟಿ ಕೃಷಿ ನಿರ್ದೇಶಕರಾದ ತಿರುಮಲೇಶ್ ಅವರು ಮಾತನಾಡಿ ಸದಾಚಾರ ಸಂಹಿತೆ ಕಟ್ಟುನಿಟ್ಟಾಗಿ ಪಾಲನೆಯಾಗಬೇಕು. ಮತಗಳಿಕೆಗಾಗಿ ಜಾತಿ, ಮತ, ಕೋಮುಭಾವನೆಗಳ ಅಧಾರದ ಮೇಲೆ ಮನವಿ ಮಾಡುವಂತಿಲ್ಲ. ದೇವಾಲಯ, ಮಸೀದಿ, ಚರ್ಚ್ ಹಾಗೂ ಇತರ ಪೂಜಾ ಸ್ಥಳಗಳನ್ನು ಚುನಾವಣಾ ಪ್ರಚಾರ ವೇದಿಕೆಗಳಾಗಿ ಬಳಸುವಂತಿಲ್ಲ. ಇಂತಹ ಉಲ್ಲಂಘನೆಗಳು ಕಂಡುಬಂದಲ್ಲಿ ಕ್ರಮ ಜರುಗಿಸಬೇಕು ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪ್ರಸನ್ನ ಅವರು ಮಾತನಾಡಿ ಯಾವುದೇ ಸಭೆ ಸಮಾರಂಭ, ಮೆರವಣಿಗೆ ಸೇರಿದಂತೆ ಎಲ್ಲದಕ್ಕೂ ಮೊದಲೆ ಅನುಮತಿ ಪಡೆಯಬೇಕು. ದ್ವನಿವರ್ಧಕಗಳ ಬಳಕೆಗೂ ಸಹ ಸಮಯ ಮಿತಿ ಇದೆ. ಈ ಎಲ್ಲವನ್ನು ತಿಳಿದು ಕರ್ತವ್ಯ ನಿರ್ವಹಿಸಬೇಕು. ಯಾವುದೇ ಸುಳ್ಳು ಅಥವಾ ದಾರಿ ತಪ್ಪಿಸುವ ದೂರುಗಳ ಬಗ್ಗೆಯೂ ಎಚ್ಚರ ವಹಿಸಿ ಅಂತಹವರ ವಿರುದ್ದ ಕ್ರಮ ವಹಿಸಬೇಕು ಎಂದರು.
ಅಬಕಾರಿ ಪ್ರಕರಣಗಳ ಸಂಬಂಧ ಅಬಕಾರಿ ಆಯುಕ್ತರಾದ ನಾಗೇಶ್, ಸರಕುಗಳ ಸಾಗಣೆ ಸಂಬಂಧ ವಾಣಿಜ್ಯ ತೆರಿಗೆ ಅಧಿಕಾರಿ ಉದಯ್ ಕುಮಾರ್, ವೆಚ್ಚ ನಿರ್ವಹಣೆ ಸಂಬಂಧ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಧಿಕಾರಿ ಬಸವರಾಜು ಸೇರಿದಂತೆ ವಿವಿಧ ತಂಡಗಳ ನೋಡೆಲ್ ಅಧಿಕಾರಿಗಳು ತರಬೇತಿ ನೀಡಿದರು.
ಉಪವಿಭಾಗಧಿಕಾರಿ ಫೌಜಿಯಾ ತರನಂ, ಚುನಾವಣಾ ತರಬೇತಿ ನೋಡೆಲ್ ಅಧಿಕಾರಿ ಯೋಗೇಶ್ ಹಾಗೂ ಇತರರು ತರಬೇತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿಧಾನಸಭಾ ಚುನಾವಣೆ- 2018
ಚುನಾವಣೆ ಸಭೆ, ಸಮಾರಂಭ ಇನ್ನಿತರ ಅನುಮತಿಗೆ ಏಕಗವಾಕ್ಷಿ ವ್ಯವಸ್ಥೆ: ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ
ಚಾಮರಾಜನಗರ, ಮಾ. 31 :- ಚುನಾವಣೆಗೆ ಸಂಬಂಧಿಸಿದÀಂತೆ ಅಭ್ಯರ್ಥಿಗಳು ಹಾಗೂ ಪಕ್ಷಗಳಿಗೆ ಅವಶ್ಯವಿರುವ ಚುನಾವಣಾ ಸಂಬಂಧ ಸಾರ್ವಜನಿಕ ಸಭೆ, ಸಮಾರಂಭ ನಡೆಸಲು ಅನುಮತಿ, ವಾಹನ ಇನ್ನಿತರ ಪರಿಕರಗಳ ಬಳಕೆಗೆ ಅನುಮತಿ ನೀಡಲು ಒಂದೇ ಸೂರಿನಡಿ ಏಕಗವಾಕ್ಷಿ ವ್ಯವಸ್ಥೆಯನ್ನು ಮಾಡಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ತಿಳಿಸಿದರು
.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಚುನಾವಣಾ ಪ್ರಚಾರ, ಸಾಮಗ್ರಿ ದರ ನಿಗದಿ ಹಾಗೂ ಮಾದರಿ ನೀತಿ ಸಂಹಿತೆ ಪಾಲನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ತಿಳಿಸುವ ಸಲುವಾಗಿ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚುನಾವಣಾ ಸಂದರ್ಭದಲ್ಲಿ ಸಭೆ, ಸಮಾರಂಭ, ದ್ವನಿವರ್ಧಕ, ಹೆಲಿಪ್ಯಾಡ್, ವಾಹನ ಬಳಕೆ ಇನ್ನಿತರ ಪ್ರಮುಖ ವಿಷಯಗಳಿಗೆ ಅನುಮತಿ ಪಡೆಯಲು ಏಕ ಗವಾಕ್ಷಿ ಪದ್ದತಿಯನ್ನು ಜಾರಿಗೆ ತರಲಾಗಿದೆ. ಇದರಿಂದ ಒಂದೇ ಸೂರಿನಡಿ ವಿಳಂಬಕ್ಕೆ ಅವಕಾಶವಾಗದಂತೆ ಅನುಮತಿ ನೀಡಲಾಗುತ್ತದೆ. ಇದಕ್ಕಾಗಿ ಅಧಿಕಾರಿಗಳ ನಿಯೋಜನೆ ಮಾಡಲಾಗಿದೆ ಎಂದರು.
ಚುನಾವಣಾ ಆಯೋಗ ಚುನಾವಣೆಗೆ ಅಭ್ಯರ್ಥಿಯು ಖರ್ಚು ಮಾಡುವ ವೆಚ್ಚ್ಚವನ್ನು 28 ಲಕ್ಷಕ್ಕೆ ಮಿತಿಗೊಳಿಸಿದೆ. ಪ್ರತಿ ಖರ್ಚನ್ನು ವೆಚ್ಚಕ್ಕೆ ತೆಗೆದುಕೊಳ್ಳಲಾಗುತ್ತದೆ. ಪಾರದರ್ಶಕವಾಗಿ ಎಲ್ಲವನ್ನು ದಾಖಲು ಮಾಡಲಾಗುತ್ತದೆ ಮಾದರಿ ನೀತಿ ಸಂಹಿತೆಯು ಚುನಾವಣೆ ಘೋಷಣೆ ಮಾಡಿದ ಸಮಯದಿಂದಲೇ ಜಾರಿಯಲ್ಲಿದೆ. ಯಾವುದೇ ಉಲ್ಲಂಘನೆಗೆ ಅವಕಾಶವಾಗದಿರಲು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದರು.
ನೀತಿ ಸಂಹಿತೆ ಪಾಲನೆಯನ್ನು ಕಟ್ಟುನಿಟ್ಟಾಗಿ ಎಲ್ಲರು ಮಾಡಬೇಕಿದೆ. ಮುಕ್ತ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಸಹಕಾರ ಅಗತ್ಯವಿದೆ ಎಂದರು. ಚುನಾವಣಾ ಪ್ರಚಾರಕ್ಕೆ ಬಳಸುವ ವಸ್ತುಗಳಿಗೆ ಮಾರುಕಟ್ಟೆ ದರ ನಿಗದಿ ಮಾಡಲಾಗಿದೆ. ಈ ಸಂಬಂಧ ಚರ್ಚಿಸಿ ನಿಂiÀiಮಾನುಸಾರ ದರ ನಿಗದಿ ಮಾಡಲಾಗುತ್ತದೆ. ವಾಹನ, ಶಾಮಿಯಾನ, ಇನ್ನಿತರ ಪ್ರಚಾರ ಸಾಮಗ್ರಿಗಳಿಗೆ ಇರುವ ವೆಚ್ಚವನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕಾವೇರಿ ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ. ಹರೀಶ್‍ಕುಮಾರ್ ಅವರು ಮಾತನಾಡಿ ಈ ಬಾರಿ ಎಲ್ಲ ಮತಗಟ್ಟೆಗಳಿಗೆ ಕುಡಿಯುವ ನೀರು, ಶೌಚಾಲಯ, ರ್ಯಾಂಪ್, ನೆರಳಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಚುನಾವಣಾ ಆಯೋಗವು ಸಹ ಮತಗಟ್ಟೆಗಳಲ್ಲಿ ಮೂಲ ಸೌಕರ್ಯ ಒದಗಿಸುವ ಬಗ್ಗೆ ಖಾತರಿ ಪಡಿಸುವಂತೆ ತಿಳಿಸಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಧರ್ಮೇಂದ್ರಕುಮಾರ್ ಮೀನಾ ಅವರು ಮಾತನಾಡಿ ನ್ಯಾಯಸಮ್ಮತ ಚುನಾವಣೆಗೆ ಎಲ್ಲಾ ಕ್ರಮ ವಹಿಸಲಾಗಿದೆ. ಚುನಾವಣಾ ಆಕ್ರಮಗಳ ಮೇಲೆ ಕಣ್ಣಿಟ್ಟು ತಡೆಯುವ ಸಲುವಾಗಿ ವಿವಿಧ ತಂಡಗಳನ್ನು ರಚಿಸಲಾಗಿದೆ. 19 ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗಿದೆ. ಚುನಾವಣೆ ಸಂಬಂಧ ರ್ಯಾಲಿ, ರೋಡ್ ಶೋ, ದ್ವನಿವರ್ಧಕ ಬಳಕೆಗೆ ನಿಯಮಾನುಸಾರ ಅನುಮತಿ ಪಡೆಯಬೇಕು. ಇಲ್ಲವಾದಲ್ಲಿ ಕ್ರಮ ಜರುಗಿಸಲಾಗುತ್ತದೆ ಎಂದರು.
ಕ್ಷೇತ್ರ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಫೌಜಿಯಾ ತರನಂ, ಸತೀಶ್, ಮರುಳೇಶ್, ನೋಡೆಲ್ ಅಧಿಕಾರಿಗಳಾದ ತಿರುಮಲೇಶ್, ಬಸವರಾಜು, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಮರಿಸ್ವಾಮಿ, ಸಯ್ಯದ್ ರಫೀ, ಪರಶಿವಮೂರ್ತಿ, ಸಿ.ಎಂ. ಕೃಷ್ಣಮೂರ್ತಿ, ಚಿನ್ನಸ್ವಾಮಿ, ನಾಗೇಶ್ ನಾಯ್ಕ, ಎಸ್. ರಾಮಚಂದ್ರ, ಸಯ್ಯದ್ ಇದ್ರೀಶ್, ಬ್ಯಾಡಮೂಡ್ಲು ಬಸವಣ್ಣ, ಡಿ.ಎನ್. ಉಷಾ, ನಹೀಮ್ ಉಲ್ಲಾ ಷರೀಫ್ ಇತರರು ವಿವಿಧ ಅಧಿಕಾರಿಗಳು ಹಾಜರಿದ್ದರು.
ಚಾ.ನಗರ ನಗರಸಭೆ : ನಗದು ರಹಿತ ಸ್ವೀಕೃತಿ ವ್ಯವಸ್ಥೆ ಜಾರಿ
ಚಾಮರಾಜನಗರ, ಮಾ. 31 - ಸಾರ್ವಜನಿಕ ಸ್ನೇಹಿ ಮತ್ತು ಪಾರದರ್ಶಕ ಇ-ಆಡಳಿತ ಜಾರಿ ಮಾಡುವ ನಿಟ್ಟಿನಲ್ಲಿ ಚಾಮರಾಜನಗರ ನಗರಸಭೆಯಲ್ಲಿ ಏಪ್ರಿಲ್ 2 ರಿಂದ ನಗದು ರಹಿತ ಸ್ವೀಕೃತಿ ಪದ್ಧತಿಯನ್ನು ಅಳವಡಿಸಿಕೊಳ್ಳಲು ಸ್ವೀಕೃತಿ ತಂತ್ರಾಂಶವನ್ನು ಜಾರಿಗೊಳಿಸಲು ಮುಂದಾಗಿದೆ.ಏಪ್ರಿಲ್ 2ರಿಂದ ಕೆ.ಎಂ.ಎಫ್. 14 ಕೈಬರಹ ರಸೀದಿ ಪುಸ್ತಕಗಳನ್ನು ನಗರಸಭೆ ಸಂಪೂರ್ಣವಾಗಿ ರದ್ದುಗೊಳಿಸಿದ್ದು ಸಾರ್ವಜನಿಕರು ನಗರಸಭೆಗೆ ಪಾವತಿಸುವ ಶುಲ್ಕ, ತೆರಿಗೆಗಳ ನಗದು, ಡಿಡಿ, ಚೆಕ್ಕುಗಳನ್ನು ನಗರಸಭೆ ಸಿಬ್ಬಂದಿಗೆ ನೀಡದಿರಲು ತಿಳಿಸಿದೆ.
ನಗರಸಭೆಯ ವೆಬ್ ಸೈಟ್ ತಿತಿತಿ.ಛಿhಚಿmಚಿಡಿಚಿರಿಚಿಟಿಚಿgಚಿಡಿಚಿಛಿiಣಥಿ.mಡಿಛಿ.gov.iಟಿ ನ ಮುಖಪುಟದಲ್ಲಿ ಸ್ವೀಕೃತಿ ತಂತ್ರಾಂಶವನ್ನು ಅಳವಡಿಸಲಾಗಿದ್ದು, ತಂತ್ರಾಂಶದ ಲಿಂಕ್ ಉಪಯೋಗಿಸಿ ಸಾರ್ವಜನಿಕರೇ ಖುದ್ದು ನಗರಸಭೆಗೆ ಪಾವತಿಸಬಹುದಾದ ತೆರಿಗೆ ಶುಲ್ಕಗಳ ಚಲನ್ ಜನರೇಟ್ ಮಾಡಿ ಬ್ಯಾಂಕ್ ಓವರ್ ದ ಕೌಂಟರ್ ಚಲನ್ ಮೂಲಕ ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ, ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಸೆಂಟರ್ ಬ್ಯಾಂಕ್ ಆಫ್ ಇಂಡಿಯಾದ ಯಾವುದೇ ಬ್ಯಾಂಕ್ ಶಾಖೆಗಳಲ್ಲಿ ಪಾವತಿಸಬಹುದು.
ಅಥವಾ ನಗರಸಭೆ ಆವರಣದಲ್ಲಿ ತೆರೆಯಲಾದ ಕೌಂಟರ್‍ನಲ್ಲಿ ತಮ್ಮ ಆಸ್ತಿಗೆ ಸಂಬಂಧಿಸಿದ ಆಸ್ತಿ ತೆರಿಗೆ, ನೀರಿನ ತೆರಿಗೆ, ಉದ್ದಿಮೆ ಪರವಾನಗಿ, ನಳ ಸಂಪರ್ಕ, ಯುಜಿಡಿ ಸಂಪರ್ಕ ಮತ್ತು ಇನ್ನಿತರ ಶುಲ್ಕಗಳ ಚಲನ್‍ಗಳನ್ನು ನಗರಸಭೆ ಸಿಬ್ಬಂದಿಯ ಸಹಾಯದಿಂದ ಮುದ್ರಿಸಿ ಚಲನ್ ಪಡೆದುಕೊಂಡು ಮೇಲಿನ ಬ್ಯಾಂಕ್ ಶಾಖೆಗಳಲ್ಲಿ ಜಮಾ ಮಾಡಬಹುದಾಗಿದೆ.
ಇ-ಪಾವತಿ, ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಲು ಇಚ್ಚಿಸುವ ಸಾರ್ವಜನಿಕರು ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಸೆಂಟರ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ದೇನಾ ಬ್ಯಾಂಕ್, ಹೆಚ್ ಡಿ ಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಐಡಿಬಿಐ ಬ್ಯಾಂಕ್ , ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್‍ಸೀಸ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಸಿಂಡಿಕೇಟ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ವಿಜಯಾ ಬ್ಯಾಂಕ್‍ನ ಯಾವುದೇ ಶಾಖೆಗಳಲ್ಲಿ ಪಾವತಿಸಬಹುದಾಗಿದೆ.
ಸಾರ್ವಜನಿಕರು ನಗರಸಭೆಗೆ ಪಾವತಿಸಬಹುದಾದ ಎಲ್ಲಾ ತೆರಿಗೆ ಮತ್ತು ಶುಲ್ಕಗಳನ್ನು ನೇರವಾಗಿ ಓವರ್ ದ ಕೌಂಟರ್ ಚಲನ್ ಮೂಲಕ ಅಥವಾ ಇ-ಪಾವತಿ, ನೆಟ್ ಬ್ಯಾಂಕಿಂಗ್ ಮೂಲಕ ನೇರವಾಗಿ ಮೇಲ್ಕಂಡ ಬ್ಯಾಂಕ್ ಶಾಖೆಗಳಲ್ಲಿ ಪಾವತಿಸಲು ಕೋರಿದೆ. 3ನೇ ವ್ಯಕ್ತಿಗೆ, ನಗರಸಭೆ ಸಿಬ್ಬಂದಿಗೆ ಹಣ, ಡಿಡಿ ಅಥವಾ ಚೆಕ್ ನೀಡಿ ಮೋಸ ಹೋದರೆ ಅವರ ನಷ್ಟಕ್ಕೆ ನಗರಸಭೆ ಹೊಣೆಯಲ್ಲ ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರÉ.
ಏಪ್ರಿಲ್ 2 ರಂದು ಪೊಲೀಸ್ ದ್ವಜ ದಿನಾಚರಣೆ
ಚಾಮರಾಜನಗರ, ಮಾ. 31 - ಚಾಮರಾಜನಗರ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಪೊಲೀಸ್ ದ್ವಜ ದಿನಾಚರಣೆಯನ್ನು ಏಪ್ರಿಲ್ 2 ರಂದು ಬೆಳಿಗ್ಗೆ 8.30 ಗಂಟೆಗೆ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಏರ್ಪಡಿಸಲಾಗಿದೆ.ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಜಿ. ಬಸವರಾಜ ಅವರು ಅಧ್ಯಕ್ಷತೆ ವಹಿಸಲಿದ್ದು, ನಿವೃತ್ತ ಆರ್.ಎಸ್.ಐ (ಡಿ.ಎ.ಆರ್, ಚಾಮರಾಜನಗರ) ಎಂ. ಪ್ರಭು ಮುಖ್ಯ ಅತಿಥಿಗಳಾಗಿ ಹಾಗೂ ವಿಶೇಷ ಆಹ್ವಾನಿತರಾಗಿ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಪಾಲ್ಗೊಳ್ಳುವರೆಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಧರ್ಮೆಂದರ್ ಕುಮಾರ್ ಮೀನಾ ಅವರು ತಿಳಿಸಿದ್ದಾರೆ.