Thursday, 29 June 2017

ಶ್ರೀಚಾಮರಾಜೇಶ್ವರ ದೇವಸ್ಥಾನದ ಗೋಲಕಗಳ ಬೀಗವನ್ನು ಮುರಿದು ಅದರಲ್ಲಿದ್ದ ಹಣ ದೋಚಿದ್ದ ವ್ಯಕ್ತಿ ಬಂದನ

ಶ್ರೀಚಾಮರಾಜೇಶ್ವರ ದೇವಸ್ಥಾನದ ಗೋಲಕಗಳ ಬೀಗವನ್ನು ಮುರಿದು ಅದರಲ್ಲಿದ್ದ ಹಣ ದೋಚಿದ್ದ ವ್ಯಕ್ತಿ ಬಂದನ


ಚಾಮರಾಜನಗರ: ಚಾಮರಾಜನಗರ ಪಟ್ಟಣದಲ್ಲಿರುವ ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ 20-06-2017 ರಂದು ರಾತ್ರಿ 19-30 ಗಂಟೆ ಸಮಯದಲ್ಲಿ  ದೇವಸ್ಥಾನದ 02 ಗೋಲಕಗಳ ಬೀಗವನ್ನು ಮುರಿದು ಅದರಲ್ಲಿದ್ದ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದ  ಆರೋಪಿಯನ್ಮ್ನ ಪೋಲೀಸರು ಬಂದಿಸಿದ್ದಾರೆದೇವಾಲಯದಲ್ಲಿದ್ದ ನಡೆದ ಪ್ರಕರಣ ಸಂಬಂದ ಅರ್ಚಕರಾದ ಶ್ರೀ. ಸಿ.ಕೆ. ಸೂರ್ಯನಾರಾಯಣ ಅವಧಾನಿರವರು ಕೊಟ್ಟ ದೂರಿನ ಮೇರೆಗೆ ಚಾಮರಾಜನಗರ ಪಟ್ಟಣ ಪೊಲೀಸ್ ಠಾಣೆ, ಮೊ.ಸಂ. 115/2017, ಕಲಂ:  454, 380 ಐ.ಪಿ.ಸಿ ರೀತ್ಯಾ ಪ್ರಕರಣ ದಾಖಲಸಿ ಮುಂದಿನ ಕ್ರಮ ಕೈಗೋಂಡಿದ್ದರುಈ ದಿನ ದಿನಾಂಕ: 28/06/2017 ರಂದು ಮಾನ್ಯ ಎಸ್.ಪಿ. ಮತ್ತು ಎ.ಎಸ್.ಪಿ ಸಾಹೇಬರವರ ಮಾರ್ಗದರ್ಶನದಂತೆ ಹಾಗೂ ಮಾನ್ಯ ಡಿಎಸ್.ಪಿ ಸಾಹೇಬರವರ ನಿರ್ದೇಶನದಂತೆ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯ ಪಿ.ಎಸ್.ಐ. ರವರಾದ ಶ್ರೀ ಆನಂದೇಗೌಡರವರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ಪಟ್ಟಣ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಡಿ. ಶಾಂತರಾಜು, ನಾಗನಾಯಕ, ಕೃಷ್ಣಮೂರ್ತಿ, ಎಂ.ರಾಜು ರವರು ಪ್ರಕರಣದ ಆರೋಪಿಯಾದ ಕೋಟಂಬಳ್ಳಿ ಗ್ರಾಮದ ಲೇ ಪುಟ್ಟಮಾದೇಗೌಡ, ಅವರ ಮಗ ನಾಗೇಶ @ ದೇವರಾಜು ಬಂದಿಸಿದ್ದಾರೆಆರೋಪಿಯೂ ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ 02 ಗೋಲಕಗಳನ್ನು ಹೊಡೆದು ಒಟ್ಟು 25,953/- ರೂ.ಗಳನ್ನು ಕಳ್ಳತನ ಮಾಡಿ ಸ್ವಲ್ಪ ಚಿಲ್ಲರೆ ಹಣವನ್ನು ಮನೆಯಲ್ಲಿ ಇಟ್ಟುಕೊಂಡು ಉಳಿಕೆ ಹಣವನ್ನು ತಾನು ಈ ಹಿಂದೆ ಪಡೆದಿದ್ದ ಸಾಲಗಾರರಿಗೆ ಹಿಂತಿರುಗಿಸಿದ್ದು, ಸದರಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಆರೋಪಿ ನಾಗೇಶನು 1995 ನೇ ಸಾಲಿನಲ್ಲಿ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಕಳ್ಳತನ ಮಾಡಿದ್ದು, ಈತನ ಮೇಲೆ ಈ ಹಿಂದೆ ಮೊ.ನಂ. 99/1995 ಕಲಂ: 457, 380 ಐ.ಪಿ.ಸಿ ರೀತ್ಯಾ ಕೇಸು ದಾಖಲಾಗಿರುತ್ತದೆ. ಈತನು 2015 ನೇ ಸಾಲಿನಲ್ಲಿ ಚಂದಕವಾಡಿಯಲ್ಲಿರುವ ಶ್ರೀಕಂಠೇಶ್ವರಸ್ವಾಮಿಯ ದೇವಸ್ಥಾನದ ಗೋಲಕವನ್ನು ಸಹ ಕಳ್ಳತನ ಮಾಡಿದ್ದು, ಚಾಮರಾಜನಗರ ಪೂರ್ವ ಪೊಲೀಸ್ ಠಾಣೆ ಮೊ.ನಂ. 302/2017 ಕಲಂ: 457, 380 ಐ.ಪಿ.ಸಿ. 2016 ನೇ ಸಾಲಿನಲ್ಲಿ ಹೊಂಗÀನೂರಿನ ಶ್ರೀ ಆದಿಶಕ್ತಿ ಸ್ವರೂಪಿಣಿ ಕೆಂಡಗಣ್ಣ ಮಾರಮ್ಮನ ದೇವಸ್ಥಾನದಲ್ಲಿ ಗೋಲಕವನ್ನು ಸಹ ಕಳ್ಳತನ ಮಾಡಿದ್ದು, ಚಾಮರಾಜನಗರ ಪೂರ್ವ ಪೊಲೀಸ್ ಠಾಣೆ ಮೊ.ನಂ. 36/2016 ಕಲಂ: 454, 457, 380 ಐ.ಪಿ.ಸಿ. ರೀತ್ಯಾ ಕೇಸು ದಾಖಲಾಗಿರುತ್ತದೆ. ಸದರಿ ತಂಡದವರನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿರುತ್ತಾರೆ.



No comments:

Post a Comment

01-08-2023 ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ

ದಿಡೀರ್ ಕಾರ್ಯಚರಣೆಗಿಳಿದ ಜಿಲ್ಲಾದಿಕಾರಿ ವರದಿ:ರಾಮಸಮುದ್ರ ಎಸ್.ವೀರಭದ್ರಸ್ವಾಮಿ*   ಚಾಮರಾಜನಗರ. ಆ.01 ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪ ನಾಗ್ ಅವರು ಇಂದು ರಾತ್ರಿ ನಗರದ ಇ...

ಪ್ರಸಿದ್ದ ಅಂತರ್ ರಾಜ್ಯ ಮಟ್ಟದ ಬರಹಗಳು