ಕಳ್ಳತನ ವಿಫಲ ಯತ್ನ: ಸ್ಥಳಕ್ಕೆ ಡಿವೈಸ್ಪಿ ಗಂಗಾದರಸ್ವಾಮಿ ಬೇಟಿ ಪರಿಶೀಲನೆ
ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ
ಚಾಮರಾಜನಗರ: ಕಳ್ಳರು ಮನೆಗೆ ನುಗ್ಗಿ ವಿಫಲ ಯತ್ನ ನಡೆಸಿರುವ ಘಟನೆ ಚಾಮರಾಜನಗರ ಶಂಕರಪುರದ ರಾಘವೇಂದ್ರ ದೇವಾಸ್ಥಾನದ ಬಳಿ ನಡೆದಿದೆ.ಚಾಮರಾಜನಗರ ಶಂಕರಪುರದ ರಾಘವೇಂದ್ರ ದೇವಾಸ್ಥಾನದ ಎದರು ಮನೆ ನಿವಾಸಿಯಾಗಿರುವ ಸುರೇಶ್ ಎಂಬುವವರ ಮನೆಗೆ ನುಗ್ಗಿದ ಕಳ್ಳರು ಬಾಗಿಲು ಹೊಡೆದು ಕೆಲವು ಬೀರುಗಳನ್ನು ತೆರೆದು ನೋಡಿದ್ದರೂ ಕಳ್ಳರಿಗೆ ಯಾವುದೇ ಚಿನ್ನಾಭರಣ, ಹಣ ಸಿಗಲಿಲ್ಲ ಎಂದು ತಿಳಿದುಬಂದಿದೆ.
ಮಾಲೀಕ ಸುರೇಶ್ ತಮ್ಮ ಅಣ್ಣನ ಮಗನ ಮದುವೆಗೆ ಕೊಯಮ್ಮತೂರಿಗೆ ಹೋಗಿದ್ದು ರಾತ್ರಿ ಇಲ್ಲದೇ ವೇಳೆ ಇದನ್ನೇ ಹೊಂಚು ಹಾಕಿ ಕಳ್ಳರು ನುಗ್ಗಿದ್ದಾರೆ ಆದರೆ ಅವರಿಗೆ ಯಾವುದೇ ಪದಾರ್ಥ ಸಿಗಲಿಲ್ಲ. ಮನೆಯಲ್ಲಿದ್ದ ಮೂರು ಚಿನ್ನದ ಬಳೆ, ಎರಡು ಉಂಗುರ ಹಾಗೂ 20 ಸಾವಿರ ಹಣವನ್ನು ಮದುವೆಗೆ ಹೋಗುವ ಮುನ್ನ ಬೇರೆಡೆ ಇಟ್ಟಿದ್ದರಿಂದ ಇದು ಸುರಕ್ಷಿತವಾಗಿದೆ ಎಂಧು ಅವರ ಸಂಬಂದಿಕರು ಖಚಿತಪಡಿಸಿದ್ದಾರೆ
ಈಗಾಗಲೇ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಬೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಸ್ಥಳಕ್ಕೆ ಡಿವೈಸ್ಪಿ ಗಂಗಾದರಸ್ವಾಮಿ ಅವರು ಬೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆಯುತ್ತಿದ್ದಾರೆ. ಪಟ್ಟಣ ಠಾಣಾ ಇನ್ಸ್‍ಪೆಕ್ಟರ್ ಮಹದೇವಯ್ಯ, ಸಿಬ್ಬಂದಿಗಳಾದ ಮೂರ್ತಿ, ವೀರಭದ್ರಪ್ಪ, ಮಂಜು ಪ್ರಭುಸ್ವಾಮಿ ಅವರು ಅಪರಾದಿಗಳ ಸೋಧ ಕಾರ್ಯಕ್ಕೆ ಮುಂದಾಗಿದ್ದಾರೆ.
ಬ್ರಮರಾಂಬ ಹಾಗೂ ಶಂಕರಪುರ ಬಡಾವಣೆಯಲ್ಲಿ ತಿಂಗಳಲ್ಲಿ ಇದು ಎರಡನೇ ಕಳ್ಳತನ ಪ್ರಕರಣ ಎಂದರೆ ತಪ್ಪಾಗಲಾರದು. ಪೋಲೀಸ್ ಬೀಟ್ ನಡೆಸುತ್ತಿದ್ದರೂ ಸಾರ್ವಜನಿಕರ ಅರಿವಿನ ಕೊರತೆಯಿಂದ ಇಂತಹ ಅವಘಡಗಳು ನಡೆಯುತ್ತಿದೆ
No comments:
Post a Comment